ಸೆಪ್ಟೆಂಬರ್ 22ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 22ರ ವಾರ
ಗೀತೆ 135 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು ಕಥೆ 7 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 30-32 (10 ನಿ.)
ನಂ. 1: ಅರಣ್ಯಕಾಂಡ 32:16-30 (4 ನಿಮಿಷದೊಳಗೆ)
ನಂ. 2: ನರಕ ಅನ್ನೋದು ಬೆಂಕಿ ಯಾತನೆಯ ಒಂದು ಅಕ್ಷರಾರ್ಥ ಸ್ಥಳವಲ್ಲ—ಬೈಬಲ್ ವಿಷಯಗಳು 14 ಎ (5 ನಿ.)
ನಂ. 3: ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ—ಬೈಬಲ್ ಕಥೆಗಳು, ಕಥೆ 28 (5 ನಿ.)
❑ ಸೇವಾ ಕೂಟ:
15 ನಿ: ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವವರನ್ನು ಗೌರವಿಸಿರಿ. (1 ಥೆಸ. 5:12, 13) ಈ ಕೆಳಗಿನ ಪ್ರಶ್ನೆಗಳ ಮೇಲೆ ಆಧರಿತ ಚರ್ಚೆ. (1) ಸಭೆಯಲ್ಲಿ ಹಿರಿಯರು ಹೇಗೆ ಪ್ರಯಾಸಪಟ್ಟು ಕೆಲಸ ಮಾಡುತ್ತಾರೆ? (2) ಹಿರಿಯರಿಗೆ ನಾವು ಹೆಚ್ಚಿನ ಪರಿಗಣನೆ ತೋರಿಸುವುದು ಹೇಗೆ? (3) ಮುಂದಾಳತ್ವ ವಹಿಸುವವರಿಗೆ ಪ್ರೋತ್ಸಾಹ ಯಾಕೆ ಬೇಕು? (4) ಹಿರಿಯರಿಗೆ ಮತ್ತು ಅವರ ಕುಟುಂಬದವರಿಗೆ ನಾವು ಹೇಗೆ ಪ್ರೋತ್ಸಾಹ ಕೊಡಬಲ್ಲೆವು? (5) ಮುಂದಾಳತ್ವ ವಹಿಸುವವರಿಗೆ ನಾವು ವಿಧೇಯರಾಗಿರುವುದರಿಂದ ಅವರಿಗೆ ಮತ್ತು ಇಡೀ ಸಭೆಗೆ ಯಾವ ಪ್ರಯೋಜನಗಳಿವೆ?
15 ನಿ: “ಸಾರುವ ಕೆಲಸದಲ್ಲಿ jw.orgಯನ್ನು ಉಪಯೋಗಿಸಿ.” ಚರ್ಚೆ. ಪ್ಯಾರ 2ರಲ್ಲಿ ತಿಳಿಸಲಾಗಿರುವ ರೀತಿಯಲ್ಲೇ ಒಂದು ಪ್ರಾತ್ಯಕ್ಷಿಕೆ ಇರಲಿ. ನಂತರ, ಮೊಬೈಲ್ ಫೋನ್, ಐಪ್ಯಾಡ್ ಅಥವಾ ಟ್ಯಾಬ್ಗಳಲ್ಲಿ ವಿಡಿಯೋಗಳನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳುವುದರಿಂದ ಯಾವ ಪ್ರಯೋಜನಗಳಿವೆ? ನಾವೇ ಹೆಚ್ಚು ಮಾತಾಡುವ ಬದಲು ಮನೆಯವನ ಅನುಮತಿ ಕೇಳದೆ ನೇರವಾಗಿ ವಿಡಿಯೋ ತೋರಿಸುವುದು ಉತ್ತಮ ಯಾಕೆ? ಈ ವಿಡಿಯೋವನ್ನು ಸೇವೆಯಲ್ಲಿ ಉಪಯೋಗಿಸಿದ್ದರಿಂದ ನಿಮಗೆ ಯಾವ ಅನುಭವಗಳು ಸಿಕ್ಕಿವೆ? ಎಂದು ಸಭಿಕರನ್ನು ಕೇಳಿ. ಕೊನೆಯಲ್ಲಿ, ನಮ್ಮ ವೆಬ್ಸೈಟನ್ನು ಸೇವೆಯಲ್ಲಿ ಉಪಯೋಗಿಸಲು jw.orgಯಲ್ಲಿರುವ ವೈಶಿಷ್ಟ್ಯಗಳನ್ನು ಚೆನ್ನಾಗಿ ತಿಳಿದುಕೊಳ್ಳುವಂತೆ ಸಭಿಕರನ್ನು ಪ್ರೋತ್ಸಾಹಿಸಿ.
ಗೀತೆ 84 ಮತ್ತು ಪ್ರಾರ್ಥನೆ