ಸಾರುವ ಕೆಲಸದಲ್ಲಿ jw.orgಯನ್ನು ಉಪಯೋಗಿಸಿ
“ಭೂಮಿಯ ಕಟ್ಟಕಡೆಯ ವರೆಗೂ” ಸುವಾರ್ತೆಯನ್ನು ಸಾರಲು ನಮ್ಮ ವೆಬ್ಸೈಟ್ ಒಂದು ಅತ್ಯುತ್ತಮ ಸಾಧನ. (ಅ. ಕಾ. 1:8) ಆದರೆ jw.org ವೆಬ್ಸೈಟ್ಗೆ ಹೋಗುವುದು ಹೇಗೆಂದು ಮನೆಯವರಲ್ಲಿ ಅನೇಕರಿಗೆ ಗೊತ್ತಿರುವುದಿಲ್ಲ. ಪ್ರಚಾರಕನು ಅದನ್ನು ಹೇಳಿಕೊಟ್ಟಾಗಲೇ ಅವರಿಗೆ ತಿಳಿದುಬರುತ್ತದೆ.
ಒಬ್ಬ ಸಂಚರಣ ಮೇಲ್ವಿಚಾರಕರು ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋವನ್ನು ತಮ್ಮ ಮೊಬೈಲ್ ಫೋನ್ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡು ಅವಕಾಶ ಸಿಕ್ಕಾಗೆಲ್ಲಾ ಅದನ್ನು ಜನರಿಗೆ ತೋರಿಸುತ್ತಾರೆ. ಮನೆ-ಮನೆ ಸೇವೆಗೆ ಹೋದಾಗ ಅವರು ಹೀಗೆ ಹೇಳುತ್ತಾರೆ: “ನಾನು ಜನರನ್ನು ಭೇಟಿಯಾಗಿ ಮೂರು ಮುಖ್ಯ ಪ್ರಶ್ನೆಗಳಿಗೆ ಈ ವಿಡಿಯೋವಿನಿಂದ ಉತ್ತರ ತಿಳಿಸುತ್ತಿದ್ದೇನೆ. ಇದರಲ್ಲಿ ‘ನಮಗ್ಯಾಕಿಷ್ಟು ಸಮಸ್ಯೆಗಳಿವೆ? ದೇವರು ಇದನ್ನು ಹೇಗೆ ಸರಿಮಾಡುತ್ತಾನೆ? ಅಲ್ಲಿಯವರೆಗೆ ನಾವು ನಿಭಾಯಿಸಿಕೊಂಡು ಹೋಗುವುದು ಹೇಗೆ?’ ಎಂಬ ಪ್ರಶ್ನೆಗಳಿಗೆ ಉತ್ತರವಿದೆ.” ಇಷ್ಟನ್ನು ಹೇಳಿ ಸಹೋದರರು ಆ ವಿಡಿಯೋವನ್ನು ತೋರಿಸುತ್ತಾರೆ. ತದನಂತರ ಮನೆಯವನ ಪ್ರತಿಕ್ರಿಯೆಯನ್ನು ಗಮನಿಸುತ್ತಾರೆ. ಆ ವಿಡಿಯೋ ಎಷ್ಟು ಚೆನ್ನಾಗಿದೆ ಅಂದರೆ ಜನರು ಕಣ್ಣು ಮಿಟುಕಿಸದೆ ಮೊದಲಿನಿಂದ ಕೊನೆಯವರೆಗೆ ನೋಡುತ್ತಾರೆ. ವಿಡಿಯೋ ತೋರಿಸಿದ ನಂತರ ಆ ಸಹೋದರರು, “ಈಗಷ್ಟೇ ನೀವು ಕೇಳಿದ್ರಲ್ಲ, ಆನ್ಲೈನ್ನಲ್ಲಿ ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಳ್ಳಬಹುದು ಅಂತ; ನಾನೇ ಇಲ್ಲಿರುವುದರಿಂದ ಆ ಅಧ್ಯಯನ ಹೇಗೆ ಮಾಡುತ್ತಾರೆಂದು ನಿಮಗೆ ಒಂದು ಸಲ ತೋರಿಸ್ತೇನೆ” ಎಂದು ಹೇಳುತ್ತಾರೆ. ಇದಕ್ಕೆ ಮನೆಯವನು ಒಪ್ಪುವುದಾದರೆ, ಸಹೋದರರು ಸಿಹಿಸುದ್ದಿ ಕಿರುಹೊತ್ತಗೆಯಿಂದ ಅಧ್ಯಯನವನ್ನು ಮಾಡಿ ತೋರಿಸುತ್ತಾರೆ. ಒಂದುವೇಳೆ ಮನೆಯವನಿಗೆ ಸಮಯ ಇಲ್ಲದಿದ್ದರೆ ಅದನ್ನು ಮುಂದಿನ ಭೇಟಿಯಲ್ಲಿ ತೋರಿಸುತ್ತೇನೆಂದು ಹೇಳುತ್ತಾ ಪುನರ್ಭೇಟಿಗೆ ತಳಪಾಯ ಹಾಕುತ್ತಾರೆ. ವಿರಾಮ ಸಮಯದಲ್ಲಿ ಕಾಫಿ ಕುಡಿಯಲು ಹೋದಾಗ ಆ ಸಹೋದರರು ತನ್ನ ಪಕ್ಕದಲ್ಲಿ ಕುಳಿತವರೊಂದಿಗೆ ಹಾಗೆಯೇ ಮಾತಾಡುತ್ತಾ ನಂತರ ಮೇಲೆ ತಿಳಿಸಲಾದ ವಿಧಾನವನ್ನು ಉಪಯೋಗಿಸುತ್ತಾ ಸುವಾರ್ತೆ ಸಾರುತ್ತಾರೆ. ನೀವು ಸಹ ಸಾರುವ ಕೆಲಸದಲ್ಲಿ jw.org ವೆಬ್ಸೈಟನ್ನು ಉಪಯೋಗಿಸುತ್ತಿದ್ದೀರಾ?