ಜನವರಿ 12ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 12ರ ವಾರ
ಗೀತೆ 42 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 29 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 21-24 (8 ನಿ.)
ನಂ. 1: ಯೆಹೋಶುವ 24:14-21 (3 ನಿಮಿಷದೊಳಗೆ)
ನಂ. 2: ಆಹಾಜ ರಾಜ—ವಿಷಯ: ದೇವರಿಗೆ ವಿಗ್ರಹಾರಾಧನೆ ಇಷ್ಟವಾಗಲ್ಲ—2ಅರ 16:2-6, 10-16, 20; 2ಪೂರ್ವ 28:5-15, 17-19 (5 ನಿ.)
ನಂ. 3: ಸೃಷ್ಟಿಕರ್ತನಾದ ಯೆಹೋವನಿಗೆ ತುಂಬ ಶಕ್ತಿಯಿದೆ—ಕಿರುಪರಿಚಯ ಪುಟ 2 ಪ್ಯಾರ 4–ಪುಟ 3 ಪ್ಯಾರ 1 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ದೀನಮನಸ್ಸಿನಿಂದ ಕರ್ತನ ಸೇವೆ ಮಾಡಿ.’—ಅಪೊಸ್ತಲರ ಕಾರ್ಯಗಳು 20:19.
10 ನಿ: ದೀನಮನಸ್ಸಿನಿಂದ ಕರ್ತನ ಸೇವೆ ಮಾಡಿ. ಚರ್ಚೆ. ಅಪೊಸ್ತಲರ ಕಾರ್ಯಗಳು 20:19ನ್ನು ಓದಿ. ನಂತರ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ: (1) ‘ಸೇವೆ ಮಾಡು’ ಎಂಬ ಪದದ ಅರ್ಥವೇನು? (2) ಕರ್ತನ ಸೇವೆ ಮಾಡುವ ಕೆಲವು ವಿಧಾನಗಳು ಯಾವುವು? (3) ದೀನಮನಸ್ಸು ಎಂದರೇನು? (4) ಸೇವೆಯನ್ನು ಪೂರ್ಣಗೊಳಿಸಲು ದೀನಮನಸ್ಸು ಹೇಗೆ ಸಹಾಯ ಮಾಡುತ್ತದೆ?
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕೋಪಗೊಂಡ ಮನೆಯವನೊಂದಿಗೆ ಸಮಾಧಾನದಿಂದಿರಿ.” ಚರ್ಚೆ. ಲೇಖನವನ್ನು ಚರ್ಚಿಸಿದ ನಂತರ, ಎರಡು ಭಾಗಗಳ ಒಂದು ಪ್ರಾತ್ಯಕ್ಷಿಕೆಯಿರಲಿ. ಪ್ರಾತ್ಯಕ್ಷಿಕೆ ಚುಟುಕಾಗಿಯೂ, ನೈಜವಾಗಿಯೂ ಇರಬೇಕು. ಮೊದಲ ಭಾಗದಲ್ಲಿ, ಪ್ರಚಾರಕನು ಕೋಪಗೊಂಡ ಮನೆಯವನೊಂದಿಗೆ ಸಮಾಧಾನದಿಂದ ಮಾತಾಡದ ರೀತಿಯಲ್ಲಿರಲಿ. ಎರಡನೆಯದರಲ್ಲಿ ಪ್ರಚಾರಕನು ಜಾಣ್ಮೆಯಿಂದ, ಸಮಾಧಾನದಿಂದ ಮಾತಾಡುವಂತಿರಲಿ. “ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ” ಎಂಬ ಭಾಗದಲ್ಲಿರುವ ಸಲಹೆಗಳನ್ನು ಅನ್ವಯಿಸಲು ಸಭಿಕರೆಲ್ಲರಿಗೆ ಪ್ರೋತ್ಸಾಹಿಸಿ.
ಗೀತೆ 76 ಮತ್ತು ಪ್ರಾರ್ಥನೆ