ಜನವರಿ 26ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 26ರ ವಾರ
ಗೀತೆ 104 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 32 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 5–7 (8 ನಿ.)
ನಂ. 1: ನ್ಯಾಯಸ್ಥಾಪಕರು 7:12-25 (3 ನಿಮಿಷದೊಳಗೆ)
ನಂ. 2: ಅಮ್ನೋನ—ವಿಷಯ: ಕಾಮದಿಂದ ಕೂಡಿದ ಪ್ರೀತಿ ವಿನಾಶಕಾರಿ—2ಸಮು 13:1-29 (5 ನಿ.)
ನಂ. 3: ಯೆಹೋವನ ಬಗ್ಗೆ ತಿಳಿದುಕೊಳ್ಳಲು ಯಾವೆಲ್ಲ ವಿಧಗಳಿವೆ?—ಕಿರುಪರಿಚಯ ಪುಟ 5 ಪ್ಯಾರ 1-4 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ದೀನಮನಸ್ಸಿನಿಂದ ಕರ್ತನ ಸೇವೆ ಮಾಡಿ.’—ಅಪೊಸ್ತಲರ ಕಾರ್ಯಗಳು 20:19.
15 ನಿ: ಜನವರಿ ಮತ್ತು ಫೆಬ್ರವರಿ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ಸಿಹಿ ಸುದ್ದಿ ಕಿರುಹೊತ್ತಗೆಯನ್ನು ನೀಡುವಾಗ ಸಿಕ್ಕಿದ ಉತ್ತಮ ಅನುಭವಗಳನ್ನು ತಿಳಿಸುವಂತೆ ಸಭಿಕರಿಗೆ ಹೇಳಿ. ಈ ಕಿರುಹೊತ್ತಗೆಯನ್ನು ಹೇಗೆ ನೀಡಬಹುದೆಂದು ತೋರಿಸುವ ಒಂದು ಪ್ರಾತ್ಯಕ್ಷಿಕೆ ಇರಲಿ. ನಂತರ, “ತಡಮಾಡದೆ ಸೇವೆಗೆ ಹೋಗಿ” ಎಂಬ ಲೇಖನವನ್ನು ಚರ್ಚಿಸಿ.
15 ನಿ: ಕರ್ತನ ಸೇವೆ ಮಾಡುತ್ತಿರುವ ಹಿರಿಯರು—ಕಾವಲಿನಬುರುಜು ಅಧ್ಯಯನ ನಿರ್ವಾಹಕ. ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾ ಕಾವಲಿನಬುರುಜು ಅಧ್ಯಯನ ನಡೆಸುವ ಹಿರಿಯನ ಸಂದರ್ಶನ ಮಾಡಿ: ನಿಮ್ಮ ಈ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ? ಕಾವಲಿನಬುರುಜು ಅಧ್ಯಯನಕ್ಕೆ ನೀವು ಹೇಗೆ ತಯಾರಿ ಮಾಡುತ್ತೀರಿ? ಉತ್ತರ ಹೇಳಲು ಕೈ ಎತ್ತುವ ಪ್ರತಿಯೊಬ್ಬರಿಗೂ ಅವಕಾಶ ಕೊಡಲು ಸಾಧ್ಯವಾಗುವುದಿಲ್ಲ ಯಾಕೆ? ಈ ಕಾವಲಿನಬುರುಜು ಅಧ್ಯಯನ ಸಂತೋಷಕರವಾಗಿಯೂ ಪ್ರಯೋಜನಕರವಾಗಿಯೂ ಆಗಿರಲು ಕಾವಲಿನಬುರುಜು ಓದುವವನು, ಉತ್ತರ ಹೇಳುವವರು ಮತ್ತು ಮೈಕ್ ಸಾಗಿಸುವ ಸಹೋದರರು ಹೇಗೆ ಸಹಾಯ ಮಾಡಬಲ್ಲರು?
ಗೀತೆ 135 ಮತ್ತು ಪ್ರಾರ್ಥನೆ