ತಡಮಾಡದೆ ಸೇವೆಗೆ ಹೋಗಿ
ಕ್ಷೇತ್ರ ಸೇವೆಯ ಕೂಟಕ್ಕೆ ನಾವು ಒಟ್ಟಾಗಿ ಸೇರಿದಾಗ, ‘ನಮ್ಮ ಸಹೋದರರ ಜೊತೆ ಸ್ವಲ್ಪ ಹೊತ್ತು ಮಾತಾಡಿ ಸೇವೆಗೆ ಹೋಗೋಣ’ ಅಂತ ಅಂದುಕೊಳ್ಳುವುದು ಸಹಜವೇ. ಆದರೆ ಆ ಕೂಟ ಮುಗಿದ ತಕ್ಷಣವೇ ನಾವು ಸೇವೆಗೆ ಹೊರಡುವುದು ತುಂಬ ಪ್ರಾಮುಖ್ಯ. ಏಕೆಂದರೆ, ಸುವಾರ್ತೆ ಸಾರುವ ಕೆಲಸವು ಅತಿ ತುರ್ತಿನದ್ದಾಗಿದೆ. (2 ತಿಮೊ. 4:2) ಬರೀ ಮಾತಾಡುವುದರಲ್ಲೇ ಸಮಯ ಕಳೆದರೆ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಹೇಗೂ ಸೇವೆಗೆ ಹೋದಾಗ, ನಮ್ಮ ಜೊತೆ ಪ್ರಚಾರಕರೊಂದಿಗೆ ಮಾತಾಡಲು, ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡಲು ಅವಕಾಶ ಸಿಗುತ್ತದೆ. ಸ್ವಲ್ಪವೂ ತಡಮಾಡದೆ ಸೇವೆಗೆ ಹೋಗುವುದಾದರೆ ನಾವು ಆಲಸಿಗಳಲ್ಲ, ಯೆಹೋವನಿಗಾಗಿ ಮತ್ತು ಆತನ ಮಗನಿಗಾಗಿ ನಿಷ್ಠೆಯಿಂದ ದುಡಿಯುತ್ತಿದ್ದೇವೆ ಎಂದು ತೋರಿಸಿಕೊಡುತ್ತೇವೆ.—ರೋಮ. 12:11.