‘ಸತ್ಕ್ರಿಯೆ ಮಾಡುವುದರಲ್ಲಿ’ ನಾವೇಕೆ ಹುರುಪುಳ್ಳವರಾಗಿರಬೇಕು?
ಒಳ್ಳೆಯ ಕೆಲಸ ಮಾಡಲು ನಿಮಗೆ ಹುರುಪು ಇದೆಯಾ? ದೇವರ ರಾಜ್ಯದ ಪ್ರಚಾರಕರಾಗಿರುವ ನಮಗೆಲ್ಲರಿಗೂ ಖಂಡಿತವಾಗಿಯೂ ಹುರುಪಿರಲೇಬೇಕು. ಯಾಕೆ? ಅದಕ್ಕೆ ಉತ್ತರ ತೀತ 2:11-14ರಲ್ಲಿದೆ. ಅದನ್ನು ಈಗ ಪರಿಗಣಿಸೋಣ.
ವಚನ 11: “ದೇವರ ಅಪಾತ್ರ ದಯೆ” ಅಂದರೇನು? ಇದರಿಂದ ನಾವು ಹೇಗೆ ವೈಯಕ್ತಿಕವಾಗಿ ಪ್ರಯೋಜನ ಪಡೆದುಕೊಂಡಿದ್ದೇವೆ?—ರೋಮ. 3:23, 24.
ವಚನ 12: ದೇವರ ಅಪಾತ್ರ ದಯೆಯು ನಾವು ಹೇಗೆ ಇರಬೇಕೆಂದು ಉಪದೇಶಿಸಿದೆ?
ವಚನ 13 ಮತ್ತು 14: ಈಗ ನಮ್ಮನ್ನು ಶುದ್ಧೀಕರಿಸಿರುವುದರಿಂದ ಯಾವ ನಿರೀಕ್ಷೆಗಳು ನಮಗಾಗಿ ಕಾದಿವೆ? ಈ ಲೋಕದ ಭಕ್ತಿಹೀನ ನಡತೆಯಿಂದ ನಮ್ಮನ್ನು ಬಿಡಿಸಿ, ಶುದ್ಧೀಕರಿಸಿದ್ದು ಯಾವ ಉದ್ದೇಶಕ್ಕಾಗಿ?
ಈ ಎಲ್ಲ ವಚನಗಳು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಹುರುಪುಳ್ಳವರಾಗಿರಲು ನಿಮ್ಮನ್ನು ಹೇಗೆ ಪ್ರಚೋದಿಸುತ್ತವೆ?