ಆಗಸ್ಟ್ 10ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 10ರ ವಾರ
ಗೀತೆ 69 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 63 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 21-22 (8 ನಿ.)
ನಂ. 1: 1 ಅರಸುಗಳು 22:13-23 (3 ನಿಮಿಷದೊಳಗೆ)
ನಂ. 2: ದೇವರ ಸ್ನೇಹಿತರಾಗಲು ನೀವೇನು ಮಾಡಬೇಕು?—ಕಿರುಪರಿಚಯ ಪು. 28 ಪ್ಯಾ. 1-4 (5 ನಿ.)
ನಂ. 3: ದೆಲೀಲ—ವಿಷಯ: ದುಡ್ಡಿನಾಸೆ ದಾರಿತಪ್ಪಿಸುತ್ತದೆ—ನ್ಯಾಯ 16:1-21 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು”—ಯೆಹೋ. 24:15.
10 ನಿ: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” ತಿಂಗಳ ಮುಖ್ಯ ವಿಷಯದ ಮೇಲಾಧರಿತವಾದ ಭಾಷಣ. ಧರ್ಮೋಪದೇಶಕಾಂಡ 6:6, 7; ಯೆಹೋಶುವ 24:15 ಮತ್ತು ಜ್ಞಾನೋಕ್ತಿ 22:6ನ್ನು ಓದಿ, ಅನ್ವಯಿಸಿ. ಆಧ್ಯಾತ್ಮಿಕ ವಿಷಯಗಳಲ್ಲಿ ಗಂಡ ಅಥವಾ ತಂದೆ ಮುಂದಾಳತ್ವ ವಹಿಸಬೇಕು ಎಂದು ಒತ್ತಿ ಹೇಳಿ. ಕುಟುಂಬಗಳಿಗೆ ಸಹಾಯಮಾಡಲು ನಮ್ಮ ಸಂಸ್ಥೆ ಒದಗಿಸಿರುವ ಸಾಧನಗಳ ಬಗ್ಗೆ ತಿಳಿಸಿ. ಈ ತಿಂಗಳ ಸೇವಾ ಕೂಟದ ಕೆಲವು ಭಾಗಗಳನ್ನು ಪರಿಚಯಿಸಿ ಮತ್ತು ಅವು ಈ ತಿಂಗಳ ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಸ ಪ್ರಚಾರಕರಿಗೆ ತರಬೇತಿ ಕೊಡಿ.” ಚರ್ಚೆ. ಮಕ್ಕಳು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಈ ಲೇಖನದಲ್ಲಿರುವ ಮೂಲತತ್ವಗಳನ್ನು ಹೆತ್ತವರು ಹೇಗೆ ಅನ್ವಯಿಸಿಕೊಳ್ಳಬಹುದು ಎಂದು ಸಭಿಕರನ್ನು ಕೇಳಿ. ಒಬ್ಬ ತಂದೆ ತನ್ನ ಮಗ ಅಥವಾ ಮಗಳೊಂದಿಗೆ ನಿರೂಪಣೆಯನ್ನು ತಯಾರಿಸುತ್ತಿರುವ ಒಂದು ಪ್ರಾತ್ಯಕ್ಷಿಕೆ ಇರಲಿ.
ಗೀತೆ 93 ಮತ್ತು ಪ್ರಾರ್ಥನೆ