ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2015 ಆಗಸ್ಟ್ 31ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
ಯೆಹೋವನಲ್ಲಿ ನಂಬಿಕೆಯನ್ನು ಬಲಪಡಿಸುವಂಥ ಯಾವ ವಿಷಯಗಳನ್ನು ಸೊಲೊಮೋನನ ಪ್ರಾರ್ಥನೆಯಲ್ಲಿ ಗಮನಿಸಬಹುದು? ಈ ವಿಷಯಗಳ ಬಗ್ಗೆ ಧ್ಯಾನಿಸುವುದರಿಂದ ನಮಗೆ ಯಾವ ಪ್ರಯೋಜನಗಳಿವೆ? (1 ಅರ. 8:22-24, 28) [ಜುಲೈ 6, ಕಾವಲಿನಬರುಜು 05 7/1 ಪು. 30 ಪ್ಯಾ. 3]
‘ಪೂರ್ಣ ಮನಸ್ಸಿನಿಂದ’ ದೇವರ ಸೇವೆ ಮಾಡಿದ ದಾವೀದನ ಉದಾಹರಣೆ ನಮಗೆ ಹೇಗೆ ಉತ್ತೇಜನ ನೀಡುತ್ತದೆ? (1 ಅರ. 9:4) [ಜುಲೈ 13, ಕಾವಲಿನಬರುಜು 12 11/15 ಪು. 7 ಪ್ಯಾ. 18, 19]
ಯೆಹೋವನು ಎಲೀಯನನ್ನು ಚಾರೆಪ್ತಾ ಊರಿನ ವಿಧವೆಯ ಮನೆಗೆ ಕಳುಹಿಸಿದ ವೃತ್ತಾಂತದಿಂದ ನಾವೇನನ್ನು ಕಲಿಯಬಹುದು? (1 ಅರ. 17:8-14) [ಜುಲೈ 27, ಕಾವಲಿನಬರುಜು 14 2/15 ಪು. 14]
1 ಅರಸುಗಳು 17:10-16ರಲ್ಲಿರುವ ವೃತ್ತಾಂತವನ್ನು ಧ್ಯಾನಿಸುವುದರಿಂದ ಯೆಹೋವನ ಮೇಲೆ ಪೂರ್ಣ ಭರವಸೆ ಇಡಬೇಕೆಂಬ ನಮ್ಮ ತೀರ್ಮಾನ ಹೇಗೆ ಬಲಗೊಳ್ಳುತ್ತದೆ? [ಜುಲೈ 27, ಕಾವಲಿನಬರುಜು 14 2/15 ಪು. 13-15]
ಹತಾಶೆಯ ಸಂದರ್ಭದಲ್ಲಿ ಎಲೀಯನು ಇಟ್ಟ ಮಾದರಿಯಿಂದ ನಮಗೆ ಯಾವ ಪ್ರಯೋಜನವಿದೆ? (1 ಅರ. 19:4) [ಆಗ. 3, ಅನುಕರಿಸಿ ಪು. 117-118 ಪ್ಯಾ. 10-12; ಕಾವಲಿನಬರುಜು 14 3/15 ಪು. 15 ಪ್ಯಾ. 15-16]
ಎಲೀಯನು ಹತಾಶೆಗೊಂಡಾಗ ಯೆಹೋವನು ಅವನೊಂದಿಗೆ ಹೇಗೆ ನಡಕೊಂಡನು? ಪ್ರೀತಿ ತೋರಿಸುವ ನಮ್ಮ ದೇವರನ್ನು ನಾವು ಹೇಗೆ ಅನುಕರಿಸಬಹುದು? (1 ಅರ. 19:7, 8) [ಆಗ. 3, ಕಾವಲಿನಬರುಜು 14 6/15 ಪು. 27 ಪ್ಯಾ. 15-16]
ಯಾವ ತಪ್ಪಾದ ದೃಷ್ಟಿಕೋನ ರಾಜನಾದ ಅಹಾಬನಿಗಿತ್ತು? ಇಂದಿನ ಕ್ರೈಸ್ತರು ಅಂಥ ತಪ್ಪನ್ನು ಮಾಡದಂತೆ ಹೇಗೆ ಜಾಗ್ರತೆವಹಿಸಬಹುದು? [ಆಗ. 10, “ದೇವರ ಪ್ರೀತಿ” ಪು. 188-189 ಚೌಕ]
ಎಲೀಷನು ಎಲೀಯನ ಹತ್ತಿರ ಕೇಳಿಕೊಂಡ ವಿಷಯದಿಂದ ನಾವೇನನ್ನು ಕಲಿಯಬಲ್ಲೆವು? ದೇವರ ಸೇವೆಯಲ್ಲಿ ಹೊಸ ನೇಮಕ ದೊರೆತಾಗ ಈ ವಿಷಯ ನಮಗೆ ಹೇಗೆ ಸಹಾಯ ಮಾಡುತ್ತದೆ? (2 ಅರ. 2:9, 10) [ಆಗ. 17, ಕಾವಲಿನಬರುಜು 03 11/1 ಪು. 31 ಪ್ಯಾ. 5-6]
2 ಅರಸುಗಳು 5:1-3ರಲ್ಲಿ ತಿಳಿಸಲಾಗಿರುವ ಇಸ್ರಾಯೇಲ್ಯ ಹುಡುಗಿ ತೋರಿಸಿದ ನಂಬಿಕೆ ಮತ್ತು ಧೈರ್ಯವನ್ನು ಚಿಕ್ಕ ಮಕ್ಕಳು ಹೇಗೆ ಅನುಕರಿಸಬಹುದು? [ಆಗ. 24, ಕಾವಲಿನಬರುಜು 12 2/15 ಪು. 12-13 ಪ್ಯಾ. 11]
ಈ ಅಂತ್ಯ ಕಾಲದಲ್ಲಿ ಯೆಹೋವನ ಎಲ್ಲಾ ಸೇವಕರು ಯೇಹುವಿನಲ್ಲಿದ್ದ ಯಾವ ಗುಣಗಳನ್ನು ತೋರಿಸಬೇಕು? (2 ಅರ. 10:16) [ಆಗ. 31, ಕಾವಲಿನಬರುಜು 11 11/15 ಪು. 5 ಪ್ಯಾ. 4]