ಸೆಪ್ಟೆಂಬರ್ 7ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 7ರ ವಾರ
ಗೀತೆ 64 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 69 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 12-15 (8 ನಿ.)
ನಂ. 1: 2 ಅರಸುಗಳು 13:12-19 (3 ನಿಮಿಷದೊಳಗೆ)
ನಂ. 2: ದೊರ್ಕ—ವಿಷಯ: ನಿಜ ಕ್ರೈಸ್ತರು ಒಳ್ಳೇ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ—ಅಕಾ 9:32-42 (5 ನಿ.)
ನಂ. 3: ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಏನೇನು ಮಾಹಿತಿಯಿದೆ? —ಕಿರುಪರಿಚಯ ಪುಟ 31 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು”—ಯೆಹೋ. 24:15.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಸಬರಿಗೆ ತರಬೇತಿ ಕೊಡಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಹೇಳಿ. ಸಭಿಕರಿಗೆ ಸಿಕ್ಕಿದ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
10 ನಿ: ಕುಟುಂಬವಾಗಿ ಸಭಾ ಕೂಟಗಳಿಗೆ ಹಾಜರಾಗುವುದನ್ನು ರೂಢಿ ಮಾಡಿಕೊಂಡಿದ್ದೀರಾ? ಭಾಷಣ. ಇಬ್ರಿಯ 10:24, 25ರ ಆಧರಿತ. ಮಕ್ಕಳಿರುವ ಒಂದು ಕುಟುಂಬದ ಸಂದರ್ಶನ ಇರಲಿ. ಕುಟುಂಬದ ತಲೆಯಾಗಿರುವ ಸಹೋದರನು ಕೂಟಗಳಿಗೆ ಪ್ರಥಮ ಸ್ಥಾನ ಕೊಡಲು ಏನೇನು ಮಾಡುತ್ತಾನೆ? ಕುಟುಂಬವಾಗಿ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಕುಟುಂಬದ ಪ್ರತಿಯೊಬ್ಬ ಸದಸ್ಯರು ಏನು ಮಾಡುತ್ತಾರೆ? ಅವರು ಉತ್ತರಗಳನ್ನು ಯಾವಾಗ ತಯಾರಿಸುತ್ತಾರೆ? ಕೂಟಗಳಿಗೆ ಹಾಜರಾಗಲು ಅವರು ಯಾವ ತ್ಯಾಗವನ್ನು ಮಾಡುತ್ತಾರೆ? ಕೊನೆಯಲ್ಲಿ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಮತ್ತು ಅದರಲ್ಲಿ ಭಾಗವಹಿಸುವಂತೆ ಎಲ್ಲರನ್ನೂ ಉತ್ತೇಜಿಸಿ.
10 ನಿ: ನಿಮ್ಮ ಸಂಬಂಧಿಕರಿಗೆ ಬೈಬಲ್ ಸತ್ಯವನ್ನು ತಿಳಿಸುತ್ತೀರೋ? (ಅಪೊಸ್ತಲರ ಕಾರ್ಯಗಳು 10:24, 33, 48) ಚರ್ಚೆ. ಕಾವಲಿನಬುರುಜು, ಮಾರ್ಚ್ 15, 2012, ಪುಟ 13-14, ಪ್ಯಾರ 19-22 ಮತ್ತು ನಮ್ಮ ರಾಜ್ಯ ಸೇವೆ, ಡಿಸೆಂಬರ್ 2004, ಪುಟ 8ರ ಆಧರಿತ. ತಾವು ಕಲಿತ ಪಾಠಗಳ ಬಗ್ಗೆ ತಿಳಿಸುವಂತೆ ಸಭಿಕರಿಗೆ ಹೇಳಿ.
ಗೀತೆ 118 ಮತ್ತು ಪ್ರಾರ್ಥನೆ