ನವೆಂಬರ್ 16ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 16ರ ವಾರ
ಗೀತೆ 49 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 81 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 26-29 (8 ನಿ.)
ನಂ. 1: 1 ಪೂರ್ವಕಾಲವೃತ್ತಾಂತ 29:20-30 (3 ನಿಮಿಷದೊಳಗೆ)
ನಂ. 2: “ಲೋಕದ ಅಂತ್ಯದ” ಅರ್ಥ—ಬೈಬಲ್ ವಿಷಯಗಳು 3 ಎ (5 ನಿ.)
ನಂ. 3: ಎಲಿಸಬೇತ್—ವಿಷಯ: ದೇವಭಯ ಇರಲಿ, ಒಳ್ಳೇದನ್ನೇ ಮಾಡಿ—ಲೂಕ 1:5-7, 11-13, 24, 39-43 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.”—1 ಕೊರಿಂ. 3:6
10 ನಿ: ಆಸಕ್ತಿ ತೋರಿಸಿದವರಿಗೆ ‘ನೀರು ಹೊಯ್ಯುತ್ತಾ ಇರಿ.’ (1 ಕೊರಿಂ. 3:6-8) ಒಬ್ಬ ರೆಗ್ಯೂಲರ್ ಪಯನೀಯರ್ ಮತ್ತು ಪ್ರಚಾರಕನನ್ನು ಸಂದರ್ಶಿಸಿ ಮುಂದಿನ ಪ್ರಶ್ನೆಗಳನ್ನು ಕೇಳಿ. ಪುನರ್ಭೇಟಿಗಳನ್ನು ಮಾಡಲು ಯಾವ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಾರೆ? ಅದಕ್ಕಾಗಿ ಹೇಗೆ ತಯಾರಿ ಮಾಡುತ್ತಾರೆ? ಪುನರ್ಭೇಟಿ ಮಾಡುವಾಗ ಮನೆಯವರು ಸಿಗದಿದ್ದರೆ ಅವರೇನು ಮಾಡುತ್ತಾರೆ? ಇದರಿಂದ ಯಾವ ಒಳ್ಳೆ ಅನುಭವಗಳು ಸಿಕ್ಕಿವೆ?
20 ನಿ: “ಆಡಿಯೋ ರೆಕಾರ್ಡಿಂಗ್ಗಳನ್ನು ಸದುಪಯೋಗಿಸಿಕೊಳ್ಳಿ.” ಪ್ರಶ್ನೋತ್ತರ. ಪ್ರಚಾರಕರು jw.orgಯಿಂದ ಆಡಿಯೋ ರೆಕಾರ್ಡಿಂಗ್ಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂದು ವಿವರಿಸಿ. ಯಾವುದಾದರೊಂದು ಆಡಿಯೋ ರೆಕಾರ್ಡಿಂಗನ್ನು ಹಾಕಿ ಕೇಳಿಸಿ.
ಗೀತೆ 91 ಮತ್ತು ಪ್ರಾರ್ಥನೆ