ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ
ಏಕೆ ಪ್ರಾಮುಖ್ಯ: ಬೋಧನಾ ಸಾಧನಗಳಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕ ಒಂದು ಪ್ರಾಮುಖ್ಯ ಸಾಧನ. ಇದರಿಂದ ಅಧ್ಯಯನ ಮಾಡಬೇಕಾದರೆ ಮೊದಲು ನಾವದನ್ನು ಜನರಿಗೆ ಕೊಡಬೇಕು. ಆದ್ದರಿಂದ ಈ ಪುಸ್ತಕವನ್ನು ಕೊಡುವುದರಲ್ಲಿ ನಾವು ನಿಪುಣರಾಗಲು ತುಂಬ ಪ್ರಯತ್ನ ಹಾಕಬೇಕು. (ಜ್ಞಾನೋ. 22:29) ಈ ಪುಸ್ತಕವನ್ನು ಕೊಡಲು ಅನೇಕ ವಿಧಾನಗಳಿವೆ. ಪ್ರಚಾರಕರು ತಮ್ಮ ಕ್ಷೇತ್ರಕ್ಕೆ ಸೂಕ್ತವಾದ ವಿಧಾನವನ್ನು ಉಪಯೋಗಿಸಬಹುದು. ಸಾಮಾನ್ಯವಾಗಿ ನಾವು ಸಿಹಿಸುದ್ದಿ ಕಿರುಹೊತ್ತಗೆಯಿಂದ ಅಧ್ಯಯನ ಆರಂಭಿಸಿ ನಂತರ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಮಾಡುತ್ತೇವೆ. ಆದರೆ, ಮನೆಯವನು ವಿಶೇಷ ಆಸಕ್ತಿ ತೋರಿಸಿದರೆ ನಾವು ನೇರವಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದಲೇ ಅಧ್ಯಯನ ಆರಂಭಿಸಬಹುದು.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟಿಸ್ ಮಾಡಿ.
ಸಾರಲು ಹೋದಾಗ ಯಾವ ನಿರೂಪಣೆಯನ್ನು ಉಪಯೋಗಿಸಲಿದ್ದೀರಿ ಎಂದು ನಿಮ್ಮ ಜೊತೆಯಲ್ಲಿರುವ ಸಹೋದರ/ಸಹೋದರಿಗೆ ತಿಳಿಸಿ. (ಜ್ಞಾನೋ. 27:17) ನೀವು ತಯಾರಿಸಿದ ನಿರೂಪಣೆ ಪರಿಣಾಮಕಾರಿ ಆಗಿಲ್ಲದಿದ್ದರೆ ಬದಲಾವಣೆ ಮಾಡಿಕೊಳ್ಳಿ.