ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 2
  • ಮಕ್ಕಳು ಬಾಗಿಲು ತೆರೆದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಕ್ಕಳು ಬಾಗಿಲು ತೆರೆದಾಗ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಇವತ್ತು ಜನ ಯಾಕೆ ಕುಟುಂಬಕ್ಕೆ ಗೌರವ ಕೊಡ್ತಿಲ್ಲ?
    ಎಚ್ಚರ!—2024
  • ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 2

ನಮ್ಮ ಕ್ರೈಸ್ತ ಜೀವನ

ಮಕ್ಕಳು ಬಾಗಿಲನ್ನು ತೆರೆದಾಗ

ಒಬ್ಬ ಹೆಂಗಸಿಗೆ ಮತ್ತವಳ ಮಗಳಿಗೆ ಸಾರುತ್ತಿರುವ ಸಹೋದರಿಯರು

ಸೇವೆಯಲ್ಲಿ ಚಿಕ್ಕ ಮಕ್ಕಳು ಬಾಗಿಲನ್ನು ತೆರೆದರೆ, ಅವರ ಹೆತ್ತವರ ಹತ್ತಿರ ಮಾತಾಡಬಹುದಾ ಅಂತ ಕೇಳಬೇಕು. ಆಗ ಅವರ ಕುಟುಂಬದ ತಲೆಗೆ ಗೌರವ ಕೊಟ್ಟಂತಾಗುತ್ತದೆ. (ಜ್ಞಾನೋ 6:20) ಒಂದುವೇಳೆ ಚಿಕ್ಕ ಮಕ್ಕಳು ‘ಒಳಗೆ ಬನ್ನಿ’ ಎಂದು ಹೇಳಿದರೆ ಒಳಗೆ ಹೋಗಬಾರದು. ಅವರ ಹೆತ್ತವರು ಮನೆಯಲ್ಲಿಲ್ಲದಿದ್ದರೆ ಬೇರೊಂದು ಸಮಯದಲ್ಲಿ ಹೋಗಬೇಕು.

ಮಕ್ಕಳು 14⁠ರಿಂದ 19ವಯಸ್ಸಿನವರಾಗಿದ್ದರೆ, ಆಗ ಸಹ ಅವರ ಹೆತ್ತವರನ್ನು ಕರೆಯುವಂತೆ ಹೇಳುವುದು ಉತ್ತಮ. ಹೆತ್ತವರು ಇಲ್ಲದಿದ್ದರೆ, ‘ನೀವು ಯಾವುದನ್ನು ಓದಬಹುದೆಂದು ನೀವೇ ನಿರ್ಣಯ ಮಾಡಲು ನಿಮ್ಮ ಅಪ್ಪ-ಅಮ್ಮ ಅನುಮತಿಸುತ್ತಾರಾ?’ ಎಂದು ಕೇಳಬೇಕು. ಅನುಮತಿಸುತ್ತಾರಾದರೆ, ನಾವು ಅವರಿಗೆ ಸಾಹಿತ್ಯವನ್ನು ಕೊಡಬಹುದು ಅಥವಾ jw.org ವೆಬ್‌ಸೈಟನ್ನು ತೋರಿಸಬಹುದು.

ಆಸಕ್ತಿ ತೋರಿಸಿದ ಯುವ ಪ್ರಾಯದ ಮಕ್ಕಳಿಗೆ ಪುನರ್ಭೇಟಿ ಮಾಡುವಾಗ, ಅವರ ಹೆತ್ತವರನ್ನು ಭೇಟಿಯಾಗಲು ಬಯಸುತ್ತೇವೆಂದು ಎಂದು ಹೇಳಬೇಕು. ಹೀಗೆ ಮಾಡುವುದರಿಂದ ನಾವು ಯಾಕೆ ಬಂದಿದ್ದೇವೆ ಎಂದು ಅವರಿಗೆ ವಿವರಿಸಲು ಅವಕಾಶ ಸಿಗುತ್ತದೆ. ಮಾತ್ರವಲ್ಲ, ಕುಟುಂಬಗಳಿಗಾಗಿ ಬೈಬಲ್‌ ಕೊಡುವ ಸಲಹೆ ಎಷ್ಟು ಭರವಸಾರ್ಹ ಎಂದು ತೋರಿಸಲು ಸಾಧ್ಯವಾಗುತ್ತದೆ. (ಕೀರ್ತ 119:86, 138) ನಾವು ಹೆತ್ತವರಿಗೆ ಗೌರವ ಮತ್ತು ಪರಿಗಣನೆ ತೋರಿಸುವಾಗ ಅವರಿಗದು ಉತ್ತಮ ಸಾಕ್ಷಿಯಾಗಿರುತ್ತದೆ ಮತ್ತು ಸುವಾರ್ತೆಯನ್ನು ಕುಟುಂಬದವರಿಗೆ ತಿಳಿಸಲು ಅವರು ಅನುಮತಿ ನೀಡಬಹುದು.—1ಪೇತ್ರ 2:12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ