ಜನರನ್ನು ಕೂಟಕ್ಕೆ ಆಮಂತ್ರಿಸುತ್ತಿದ್ದಾರೆ
ಮಾದರಿ ನಿರೂಪಣೆಗಳು
ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36 ಕರಪತ್ರ)
ಪ್ರಶ್ನೆ: ನಮ್ಮ ಸುತ್ತಮುತ್ತಲೂ ನೋಡಿದ್ರೆ ಪರಿಸ್ಥಿತಿ ತುಂಬ ಕೆಟ್ಟುಹೋಗಿದೆ. ಆದ್ರೆ ಇಂಥ ಪರಿಸ್ಥಿತಿ ಬರುತ್ತೆ ಅಂತ ಪವಿತ್ರಗ್ರಂಥದಲ್ಲಿ ಮೊದಲೇ ಹೇಳಲಾಗಿತ್ತು. ನಿಮಗಿದು ಗೊತ್ತಾ?
ವಚನ: ಮತ್ತಾ. 24:7
ಕರಪತ್ರ ಕೊಡುವಾಗ ಹೀಗೆ ಹೇಳಿ: ಈಗಿನ ಈ ಕೆಟ್ಟ ಪರಿಸ್ಥಿತಿ ಸರಿಹೋಗಿ ಒಳ್ಳೇ ಜೀವನ ಹೇಗೆ ಸಿಗುತ್ತೆ ಅಂತ ಈ ಕರಪತ್ರ ಹೇಳುತ್ತೆ.
ಸತ್ಯ: ಒಬ್ಬ ವ್ಯಕ್ತಿ ಸತ್ತಾಗ ಅವನ ಜೀವನ ಅಲ್ಲಿಗೇ ಮುಗಿಯುತ್ತೆ. ಆದ್ದರಿಂದ ನಾವು ಸತ್ತ ನಂತರದ ಜೀವನದ ಬಗ್ಗೆ ಭಯಪಡಬೇಕಾಗಿಲ್ಲ. ಯೇಸು, ಸತ್ತ ಸ್ಥಿತಿಯನ್ನು ನಿದ್ರೆಗೆ ಹೋಲಿಸಿದನು. ಲಾಜರ ಸತ್ತಾಗ ಅವನನ್ನು ಎಬ್ಬಿಸಿದಂತೆಯೇ ಯೇಸು, ತೀರಿಕೊಂಡಿರುವ ನಮ್ಮ ಪ್ರಿಯರನ್ನು ಎಬ್ಬಿಸುತ್ತಾನೆ. ಅವರು ಪುನಃ ಭೂಮಿಯ ಮೇಲೆ ಸಂತೋಷದಿಂದ ಜೀವಿಸುತ್ತಾರೆ.—ಯೋಬ 14:14.
ಸಭಾ ಕೂಟದ ಆಮಂತ್ರಣ ಪತ್ರ (inv)
ಆಮಂತ್ರಣ ಪತ್ರ ಕೊಡುವಾಗ ಹೀಗೆ ಹೇಳಿ: [ಮನೆಯವರಿಗೆ ಬೈಬಲ್ ವಿಷಯದಲ್ಲಿ ಆಸಕ್ತಿ ಇದೆಯಾ ಎಂದು ತಿಳಿದುಕೊಂಡ ನಂತರ ನೀವು ಹೀಗೆ ಹೇಳಬಹುದು:] ನಮ್ಮ ರಾಜ್ಯ ಸಭಾಗೃಹದಲ್ಲಿ ಒಂದು ಬೈಬಲಾಧಾರಿತ ಭಾಷಣ ಇರುತ್ತೆ. ಅದಕ್ಕೆ ನೀವು ಬರಬೇಕಂತ ನಮ್ಮ ಇಷ್ಟ. [ಆಮಂತ್ರಣ ಪತ್ರ ಕೊಟ್ಟು, ವಾರಾಂತ್ಯದ ಕೂಟಗಳ ಸಮಯ ಮತ್ತು ಸ್ಥಳವನ್ನು ತೋರಿಸಿ, ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ತಿಳಿಸಿ.]
ಪ್ರಶ್ನೆ: ನೀವು ಯಾವಾಗಾದ್ರೂ ರಾಜ್ಯ ಸಭಾಗೃಹಕ್ಕೆ ಹೋಗಿದ್ದೀರಾ? [ಪರಿಸ್ಥಿತಿ ಅನುಮತಿಸಿದರೆ, ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸಿ.]
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.