ಬೈಬಲಿನಲ್ಲಿರುವ ರತ್ನಗಳು | ಯೆಶಾಯ 24–28
ಯೆಹೋವನು ತನ್ನ ಜನರ ಕಾಳಜಿವಹಿಸುತ್ತಾನೆ
ಅತಿಥಿಗಳನ್ನು ಉದಾರವಾಗಿ ಸತ್ಕರಿಸುವ ಮನೆಯವನಂತೆ, ಯೆಹೋವನು ನಮಗೆ ಆಧ್ಯಾತ್ಮಿಕ ಆಹಾರವನ್ನು ಸಮೃದ್ಧವಾಗಿ ಒದಗಿಸುತ್ತಿದ್ದಾನೆ.
‘ಸೇನಾಧೀಶ್ವರನಾದ ಯೆಹೋವನು ಸಕಲಜನಾಂಗಗಳಿಗೆ ಔತಣವನ್ನು ಅಣಿಮಾಡುವನು’
ಬೈಬಲ್ ಸಮಯದಲ್ಲಿ, ಜನರು ಜೊತೆಯಾಗಿ ಉಟ ಮಾಡುವುದು ಸಮಾಧಾನದ ಸಂಬಂಧ ಮತ್ತು ಸ್ನೇಹವನ್ನು ಸೂಚಿಸುತ್ತಿತ್ತು
“ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣ”
ಸಾರವತ್ತಾದ ಮೃಷ್ಟಾನ್ನ ಮತ್ತು ಶೋಧಿಸಿದ ದ್ರಾಕ್ಷಾರಸವು ಯೆಹೋವನು ನಮಗೆ ಕೊಡುತ್ತಿರುವ ಅತ್ಯುತ್ತಮ ಆಧ್ಯಾತ್ಮಿಕ ಆಹಾರವನ್ನು ಸೂಚಿಸುತ್ತದೆ