ಮೇ 8-14
ಯೆರೆಮೀಯ 35-38
ಗೀತೆ 33 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಎಬೆದ್ಮೆಲೆಕ—ಧೈರ್ಯ ಮತ್ತು ದಯೆಗೆ ಉತ್ತಮ ಮಾದರಿ”: (10 ನಿ.)
ಯೆರೆ 38:4-6—ಚಿದ್ಕೀಯನಿಗೆ ಮನುಷ್ಯರ ಭಯ ಇತ್ತು ಮತ್ತು ಯೆರೆಮೀಯನನ್ನು ವೈರಿಗಳು ಸಾಯಿಸಲು ಕೆಸರಿನ ಬಾವಿಗೆ ಹಾಕುವಂತೆ ಚಿದ್ಕೀಯ ಅನುಮತಿಸಿದನು (it-2-E 1228 ¶3)
ಯೆರೆ 38:7-10—ಯೆರೆಮೀಯನಿಗೆ ಸಹಾಯ ಮಾಡಲು ಎಬೆದ್ಮೆಲೆಕ ದೃಢ ನಿರ್ಧಾರ ಮಾಡಿದ್ದನು ಮತ್ತು ಧೈರ್ಯವಾಗಿ ಕ್ರಿಯೆಗೈದನು (w12-E 5/1 31 ¶2-3)
ಯೆರೆ 38:11-13—ಎಬೆದ್ಮೆಲೆಕ ದಯೆ ತೋರಿಸಿದನು (w12-E 5/1 31 ¶4)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 35:19—ರೇಕಾಬ್ಯರನ್ನು ಏಕೆ ಆಶೀರ್ವದಿಸಲಾಯಿತು? (it-2-E 759)
ಯೆರೆ 37:21—ಯೆಹೋವನು ಯೆರೆಮೀಯನಿಗೆ ಹೇಗೆ ಕಾಳಜಿ ತೋರಿಸಿದನು ಮತ್ತು ನಾವು ಕಷ್ಟಗಳನ್ನು ಅನುಭವಿಸುವಾಗ ಇದು ನಮಗೆ ಹೇಗೆ ಪ್ರೋತ್ಸಾಹ ನೀಡುತ್ತದೆ? (ಕಾವಲಿನಬುರುಜು 98 1/15 ಪು. 18, ಪ್ಯಾ. 16-17; ಕಾವಲಿನಬುರುಜು 95 8/1 ಪು. 5, ಪ್ಯಾ. 5-6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 36:27-37:2
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-32—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-32—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 26
ನಮ್ಮ ಕ್ರೈಸ್ತ ಜೀವನ
“ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ”: (15 ನಿ.) ಪ್ರಶ್ನೋತ್ತರ. ಹಿರಿಯನೊಬ್ಬನು ನಿರ್ವಹಿಸತಕ್ಕದ್ದು. ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ ಎಂಬ ವಿಡಿಯೋವನ್ನು ಹಾಕಿ. ನಂತರ ಲೇಖನದಲ್ಲಿ ಕೊಡಲಾದ ಪ್ರಶ್ನೆಗಳನ್ನು ಪರಿಗಣಿಸಿ. ಆಮೇಲೆ, ಚುಟುಕಾಗಿ ಸಭೆಯ ನಿರ್ವಹಣಾ ಸಮಿತಿಯ ಪ್ರತಿನಿಧಿಯ ಸಂದರ್ಶನ ಮಾಡಿ. (ನಿಮ್ಮ ಸಭೆಯಲ್ಲಿ ಪ್ರತಿನಿಧಿ ಇಲ್ಲದಿರುವಲ್ಲಿ ಹಿರಿಯರ ಮಂಡಲಿಯ ಸಂಯೋಜಕನ ಸಂದರ್ಶನ ಮಾಡಿ. ನಿಮ್ಮ ರಾಜ್ಯ ಸಭಾಗೃಹವನ್ನು ನಿಮ್ಮ ಸಭೆ ಮಾತ್ರ ಉಪಯೋಗಿಸುತ್ತಿರುವಲ್ಲಿ, ಶುಚಿತ್ವ ಮತ್ತು ದುರಸ್ತಿಯನ್ನು ನೋಡಿಕೊಳ್ಳುವ ಸಹೋದರನ ಸಂದರ್ಶನ ಮಾಡಿ.) ರಾಜ್ಯ ಸಭಾಗೃಹ ಸುಸ್ಥಿತಿಯಲ್ಲಿಡಲು ಇತ್ತೀಚೆಗೆ ಏನೆಲ್ಲಾ ಮಾಡಲಾಯಿತು ಮತ್ತು ಮುಂದೆ ಏನೆಲ್ಲಾ ಮಾಡುವ ಯೋಜನೆ ಇದೆ? ಯಾರಿಗಾದರೂ ಈ ಕೆಲಸ ಗೊತ್ತಿರುವಲ್ಲಿ ಅಥವಾ ಸಹಾಯ ಮಾಡಲು ಬಯಸುವಲ್ಲಿ ಅವರೇನು ಮಾಡಬೇಕು? ನಮ್ಮ ಪರಿಸ್ಥಿತಿ ಹೇಗೇ ಇದ್ದರೂ ಸಭೆಯಲ್ಲಿರುವ ಎಲ್ಲರೂ ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ಸಹಾಯ ಮಾಡಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ” ಅಧ್ಯಾ. 2, ಪ್ಯಾ. 1-11
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 83 ಮತ್ತು ಪ್ರಾರ್ಥನೆ