ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 51-52
ಯೆಹೋವನ ಪ್ರತಿಯೊಂದು ಮಾತು ತಪ್ಪದೇ ನೆರವೇರುತ್ತದೆ
ಮುಂದೆ ನಡೆಯಲಿರುವ ಘಟನೆಗಳ ಬಗ್ಗೆ ಯೆಹೋವನು ಸ್ಪಷ್ಟವಾಗಿ ತಿಳಿಸಿದನು
ಪರ್ಷಿಯನ್ ಸೈನ್ಯದ ಬಿಲ್ಲುಗಾರ
“ಬಾಣಗಳನ್ನು ಮಸೆಯಿರಿ”
ಮೇದ್ಯರು ಮತ್ತು ಪರ್ಷಿಯನ್ನರು ನಿಪುಣ ಬಿಲ್ಲುಗಾರರಾಗಿದ್ದರು. ಬಿಲ್ಲು ಅವರ ಮುಖ್ಯ ಆಯುಧವಾಗಿತ್ತು. ಆಳವಾಗಿ ತೂರಿಹೋಗುವಂತೆ ಅವರು ತಮ್ಮ ಬಾಣಗಳನ್ನು ಸಿದ್ಧಪಡಿಸುತ್ತಿದ್ದರು
‘ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆಯುವರು’
ನೆಬೊನೈಡಸ್ ವೃತ್ತಾಂತ ಹೇಳುವುದು: “ಕೊರೇಷನ ಸೈನ್ಯ ಬಾಬೆಲನ್ನು ಯುದ್ಧ ಮಾಡದೇ ಪ್ರವೇಶಿಸಿತು.” ಅಂದರೆ ಯಾವುದೇ ಯುದ್ಧ ಮಾಡದೇ ಯೆರೆಮೀಯನು ಹೇಳಿದಂತೆ ಈ ಪ್ರವಾದನೆ ನೆರವೇರಿತು
ನೆಬೊನೈಡಸ್ ವೃತ್ತಾಂತ
‘ಬಾಬೆಲು ಹಾಳುದಿಬ್ಬವಾಗಿ ಸದಾ ಹಾಳಾಗಿಯೇ ಇರುವುದು’
ಕ್ರಿ.ಪೂ. 539ರಿಂದ ಬಾಬೆಲಿನ ವೈಭವ ಕಣ್ಮರೆಯಾಗಲು ಪ್ರಾರಂಭವಾಯಿತು. ಅಲೆಗ್ಸಾಂಡರನು ಬಾಬೆಲನ್ನು ರಾಜಧಾನಿಯಾಗಿ ಮಾಡಿಕೊಳ್ಳಬೇಕೆಂದಿದ್ದನು. ಆದರೆ ಅವನು ಇದ್ದಕ್ಕಿದ್ದಂತೆ ಸತ್ತನು. ಕ್ರಿಸ್ತ ಶಕದ ಆರಂಭದಲ್ಲಿ ಯೆಹೂದ್ಯರ ಒಂದು ಗುಂಪು ಇನ್ನೂ ಬಾಬೆಲಿನಲ್ಲೇ ಇತ್ತು. ಆದ್ದರಿಂದ ಅವರನ್ನು ಭೇಟಿ ಮಾಡಲು ಅಪೊಸ್ತಲ ಪೇತ್ರನಿಗೆ ನಿರ್ದೇಶಿಸಲಾಯಿತು. ಆದರೆ ಕ್ರಿ.ಶ. 4 ನೇ ಶತಮಾನದಲ್ಲಿ ಆ ಪಟ್ಟಣ ಪೂರ್ತಿ ನಾಶವಾಯಿತು. ಕಾಲ ಕಳೆದಂತೆ ಅದು ನಿರ್ನಾಮವಾಯಿತು.