ನಮ್ಮ ಕ್ರೈಸ್ತ ಜೀವನ
ಯೆಹೋವನ ವಾಗ್ದಾನಗಳ ಮೇಲೆ ನಿಮಗೆ ಎಷ್ಟು ನಂಬಿಕೆ ಇದೆ?
ಯೆಹೋವನ ವಾಗ್ದಾನಗಳಲ್ಲಿ ಒಂದು ಕೂಡ ವ್ಯರ್ಥ ಆಗಲಿಲ್ಲ ಎಂದು ಯೆಹೋಶುವ ಮತ್ತು ಸೊಲೊಮೋನ ಇಬ್ಬರೂ ಹೇಳಿದರು. (ಯೆಹೋ 23:14; 1ಅರ 8:56) ಇವರಿಬ್ಬರ ಮಾತುಗಳು ನಮ್ಮ ನಂಬಿಕೆಗೆ ಬಲವಾದ ಆಧಾರವನ್ನು ಕೊಡುತ್ತವೆ. ಈ ಆಧಾರದ ಮೇಲೆ ನಾವು ನಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳಬಹುದು.—2ಕೊರಿಂ 13:1; ತೀತ 1:2.
ಯೆಹೋವನು ತಾನು ಕೊಟ್ಟ ಮಾತನ್ನು ಯೆಹೋಶುವನ ದಿನಗಳಲ್ಲಿ ಹೇಗೆ ನೆರವೇರಿಸಿದನು? ‘ಎಲ್ಲ ಮಾತು ತಪ್ಪದೇ ನೆರವೇರಿದೆ’ ಎಂಬ ವಿಡಿಯೋವನ್ನು ನಿಮ್ಮ ಕುಟುಂಬದೊಂದಿಗೆ ನೋಡಿ. ಆಮೇಲೆ ಈ ಪ್ರಶ್ನೆಗಳನ್ನು ಚರ್ಚಿಸಿ: (1) ರಾಹಾಬಳ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು? (ಇಬ್ರಿ 11:31; ಯಾಕೋ 2:24-26) (2) ದೇವರ ಮಾತನ್ನು ಬೇಕುಬೇಕೆಂದು ಪಾಲಿಸದೆ ಹೋದರೆ ಏನಾಗುತ್ತೆ ಅಂತ ಆಕಾನನ ಉದಾಹರಣೆ ತೋರಿಸುತ್ತೆ? (3) ಗಿಬ್ಯೋನ್ಯರು ಶೂರ ಸೈನಿಕರಾಗಿದ್ದರೂ ಯೆಹೋಶುವನಿಂದ ಸತ್ಯವನ್ನು ಮುಚ್ಚಿಟ್ಟು ಇಸ್ರಾಯೇಲ್ಯರೊಂದಿಗೆ ಏಕೆ ಸಮಾಧಾನ ಮಾಡಿಕೊಂಡರು? (4) ಅಮೋರಿಯದ ಐದು ರಾಜರು ಇಸ್ರಾಯೇಲಿಗೆ ಬೆದರಿಕೆ ಹಾಕಿದಾಗ ಯೆಹೋವನ ಮಾತು ಹೇಗೆ ನೆರವೇರಿತು? (ಯೆಹೋ 10:5-14) (5) ದೇವರ ರಾಜ್ಯಕ್ಕೆ ನೀವು ಮೊದಲ ಸ್ಥಾನ ಕೊಟ್ಟಾಗ ಯೆಹೋವನು ನಿಮ್ಮನ್ನು ಹೇಗೆಲ್ಲಾ ಕಾಪಾಡಿದನು?—ಮತ್ತಾ 6:33.
ಯೆಹೋವನು ಈ ಹಿಂದೆ ಮಾಡಿರುವ, ಈಗ ಮಾಡುತ್ತಿರುವ ಮತ್ತು ಮುಂದೆ ಮಾಡಲಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವಾಗ ಆತನ ವಾಗ್ದಾನಗಳ ಮೇಲೆ ನಮ್ಮ ನಂಬಿಕೆ ಬಲವಾಗುತ್ತದೆ.—ರೋಮ 8:31, 32.
ನಿಮಗೂ ಯೆಹೋಶುವನಷ್ಟು ನಂಬಿಕೆ ಇದೆಯಾ?