ನಮ್ಮ ಕ್ರೈಸ್ತ ಜೀವನ
ನೀವೇಕೆ ಶುದ್ಧಾರಾಧನೆಯನ್ನು ಅಮೂಲ್ಯವೆಂದು ಎಣಿಸುತ್ತೀರಿ?
ಯೆಹೆಜ್ಕೇಲನ ದೇವಾಲಯದ ದರ್ಶನವು ಸೆರೆ ಒಯ್ಯಲಾಗಿದ್ದ ಯೆಹೂದ್ಯರಿಗೆ ಉತ್ತೇಜನ ನೀಡಿತು. ಯಾಕೆಂದರೆ ಶುದ್ಧಾರಾಧನೆಯು ಪುನಃಸ್ಥಾಪನೆ ಆಗುತ್ತದೆಂಬ ಭರವಸೆಯನ್ನು ಇದು ಕೊಟ್ಟಿತು. ಈ ಕಡೇ ದಿವಸಗಳಲ್ಲಿ ಶುದ್ಧಾರಾಧನೆಯು ಎಲ್ಲಾ ‘ಬೆಟ್ಟಗಳಿಗಿಂತ ಉನ್ನತವಾಗಿ ಬೆಳೆದು ನೆಲೆಗೊಂಡಿದೆ’ ಮತ್ತು ಅದರೆಡೆಗೆ ಪ್ರವಾಹಗಳಂತೆ ಬಂದವರಲ್ಲಿ ನಾವೂ ಒಬ್ಬರಾಗಿದ್ದೇವೆ. (ಯೆಶಾ 2:2) ಯೆಹೋವನನ್ನು ತಿಳಿಯುವ, ಆತನ ಸೇವೆಮಾಡುವ ಮತ್ತು ಆರಾಧಿಸುವ ಸುಯೋಗದ ಬಗ್ಗೆ ನೀವು ಪ್ರತಿದಿನ ಧ್ಯಾನಿಸುತ್ತೀರಾ?
ಶುದ್ಧಾರಾಧನೆಯಿಂದ ಸಿಗುವ ಆಶೀರ್ವಾದಗಳು:
ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕೊಡುವ, ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಮೌಲ್ಯಗಳನ್ನು ತಿಳಿಸುವ ಮತ್ತು ನಿಶ್ಚಿತ ನಿರೀಕ್ಷೆ ಕೊಡುವ ಹೇರಳವಾದ ಆಧ್ಯಾತ್ಮಿಕ ಆಹಾರ ಪಡೆಯುತ್ತೇವೆ.—ಯೆಶಾ 48:17, 18; 65:13; ರೋಮ 15:4
ನಮ್ಮನ್ನು ಪ್ರೀತಿಸುವ ಲೋಕವ್ಯಾಪಕ ಸಹೋದರ ಬಳಗ ಸಿಗುತ್ತದೆ.—ಕೀರ್ತ 133:1; ಯೋಹಾ 13:35
ತೃಪ್ತಿ ಕೊಡುವ ಕೆಲಸ ಮಾಡುತ್ತಾ, ದೇವರ ಜೊತೆಕೆಲಸದವರಾಗಿರುವ ಸುಯೋಗ ಇರುತ್ತದೆ.—ಅಕಾ 20:35; 1ಕೊರಿಂ 3:9
ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಬಲ ಕೊಡುವ “ದೇವಶಾಂತಿ” ಸಿಗುತ್ತದೆ.—ಫಿಲಿ 4:6, 7
ಶುದ್ಧ ಮನಸ್ಸಾಕ್ಷಿ ಇರುತ್ತದೆ.—2ತಿಮೊ 1:3
‘ಯೆಹೋವನೊಂದಿಗೆ ಆಪ್ತ ಮಿತ್ರತ್ವ’ ಪಡೆಯುತ್ತೇವೆ.—ಕೀರ್ತ 25:14
ನಾನು ಶುದ್ಧಾರಾಧನೆಯನ್ನು ಅಮೂಲ್ಯವಾಗಿ ಎಣಿಸುತ್ತೇನೆಂದು ಯಾವೆಲ್ಲಾ ವಿಧಗಳಲ್ಲಿ ತೋರಿಸಬಹುದು?