ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 42-45
ಶುದ್ಧಾರಾಧನೆ ಪುನಃಸ್ಥಾಪಿಸಲ್ಪಟ್ಟಿತು!
ಯೆಹೆಜ್ಕೇಲನ ದೇವಾಲಯದ ದರ್ಶನವು ಸೆರೆ ಒಯ್ಯಲಾಗಿದ್ದವರಲ್ಲಿ ಉಳಿದ ನಂಬಿಗಸ್ತ ಯೆಹೂದ್ಯರಿಗೆ ಶುದ್ಧಾರಾಧನೆ ಪುನಃಸ್ಥಾಪಿಸಲ್ಪಡುತ್ತದೆ ಎಂಬ ಭರವಸೆ ನೀಡಿತು. ಜೊತೆಗೆ, ಯೆಹೋವನ ಶುದ್ಧಾರಾಧನೆಯ ಉನ್ನತ ಮಟ್ಟಗಳನ್ನು ಅವರಿಗೆ ನೆನಪಿಸಿತು.
ಯಾಜಕರು ಜನರಿಗೆ ಯೆಹೋವನ ಮಟ್ಟಗಳನ್ನು ಕಲಿಸುತ್ತಾರೆ
ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಶುದ್ಧ ಮತ್ತು ಅಶುದ್ಧದ ಮಧ್ಯ ಇರುವ ವ್ಯತ್ಯಾಸವನ್ನು ನಮಗೆ ಹೇಗೆ ಕಲಿಸಿದ್ದಾರೆ ಎಂದು ಕೆಲವು ಉದಾಹರಣೆಗಳನ್ನು ಕೊಡಿ. (kr-E110-117)
ಜನರು ಮುಂದಾಳತ್ವ ವಹಿಸುವವರಿಗೆ ಬೆಂಬಲ ಕೊಡುತ್ತಾರೆ
ನಮ್ಮ ಸಭೆಯಲ್ಲಿರುವ ಹಿರಿಯರಿಗೆ ನಾವು ಹೇಗೆ ಬೆಂಬಲ ಕೊಡಬಹುದು?