ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr17 ಅಕ್ಟೋಬರ್‌ ಪು. 1-2
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2017
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 2-8
  • ಅಕ್ಟೋಬರ್‌ 16-22
  • ಅಕ್ಟೋಬರ್‌ 23-29
  • ಅಕ್ಟೋಬರ್‌ 30–ನವೆಂಬರ್‌ 5
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2017
mwbr17 ಅಕ್ಟೋಬರ್‌ ಪು. 1-2

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಅಕ್ಟೋಬರ್‌ 2-8

ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 7-9

“ಮೆಸ್ಸೀಯನ ಬರೋಣದ ಬಗ್ಗೆ ಮುಂತಿಳಿಸಿದ ದಾನಿಯೇಲನ ಪ್ರವಾದನೆ”

it-2 902 ¶2

ಎಪ್ಪತ್ತು ವಾರಗಳು

ಅಧರ್ಮ ಮತ್ತು ಪಾಪಗಳ ಕೊನೆ. ಯೇಸು ಮರಣದ ಮೂಲಕ ಛೇದಿಸಲ್ಪಟ್ಟು, ಪುನರುತ್ಥಾನವಾಗಿ ಸ್ವರ್ಗದಲ್ಲಿ ಕಾಣಿಸಿಕೊಳ್ಳುವ ಮೂಲಕ ‘ಅಧರ್ಮ ಕೊನೆಯಾಯಿತು, ಪಾಪ ತೀರಿತು ಮತ್ತು ಅಪರಾಧ ನಿವಾರಣೆಯಾಯಿತು.’ (ದಾನಿ 9:24) ಧರ್ಮಶಾಸ್ತ್ರದ ಒಡಂಬಡಿಕೆಯು ಯೆಹೂದ್ಯರು ಪಾಪಿಗಳು ಎನ್ನುವುದನ್ನು ಬಯಲುಪಡಿಸಿ, ಅವರನ್ನು ಶಿಕ್ಷೆಗೊಳಪಡಿಸಿತು ಮತ್ತು ಒಡಂಬಡಿಕೆ ಮುರಿದ ಶಾಪ ಅವರ ಮೇಲೆ ಬಂತು. ಧರ್ಮಶಾಸ್ತ್ರವು ಪಾಪವನ್ನು ಬಯಲಿಗೆಳೆದದ್ದರಿಂದ ಅಥವಾ ರುಜುಪಡಿಸಿದ್ದರಿಂದ ಪಾಪವು ಹೆಚ್ಚಾಗಿ ಕಂಡುಬಂತು. ಎಲ್ಲಿ ಪಾಪವು “ಹೆಚ್ಚಾಯಿತೋ ಅಲ್ಲಿ” ದೇವರ ಕರುಣೆ ಮತ್ತು ಅನುಗ್ರಹವು ಮೆಸ್ಸೀಯನ ಮೂಲಕ ಇನ್ನಷ್ಟು ಹೆಚ್ಚಾಯಿತು. (ರೋಮ 5:20) ಮೆಸ್ಸೀಯನ ಯಜ್ಞದ ಮೂಲಕ ಪಶ್ಚಾತ್ತಾಪಪಟ್ಟ ಪಾಪಿಗಳ ಅಧರ್ಮ ಮತ್ತು ಪಾಪಗಳನ್ನು ತೆಗೆದುಹಾಕಲು ಸಾಧ್ಯ ಮತ್ತು ಅದಕ್ಕಾಗುವ ಶಿಕ್ಷೆಯನ್ನು ಹಿಂತೆಗೆಯಬಹುದು.

it-2 900 ¶7

ಎಪ್ಪತ್ತು ವಾರಗಳು

‘ಅರವತ್ತೊಂಬತ್ತು ವಾರಗಳ ನಂತರ’ ಮೆಸ್ಸೀಯನ ಬರೋಣ. ತದನಂತರ “ಅರುವತ್ತೆರಡು ವಾರ” ಇರುವುದು (ದಾನಿ 9:25) ಈ ವಾರಗಳು ಎಪ್ಪತ್ತು ವಾರಗಳ ಭಾಗವಾಗಿದ್ದು, “ಏಳು ವಾರಗಳು” ಕಳೆದ ನಂತರ ಆರಂಭವಾಗಲಿದ್ದವು. ಆದ್ದರಿಂದ ಯೆರೂಸಲೇಮು ಪುನಃ ಕಟ್ಟಲ್ಪಡಲಿ ಎಂಬ “ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವುದರೊಳಗೆ” 7 ಮತ್ತು 62 “ವಾರಗಳು” ಅಥವಾ ಒಟ್ಟು 69 ವಾರಗಳು ಕಳೆಯಲಿದ್ದವು. ಅಂದರೆ ಕ್ರಿ.ಪೂ. 455​ರಿಂದ ಕ್ರಿ.ಶ. 29​ರವರೆಗೆ 483 ವರ್ಷಗಳು. ಮೇಲೆ ತಿಳಿಸಿದಂತೆ, ಕ್ರಿ.ಶ. 29​ರ ಶರತ್ಕಾಲದಲ್ಲಿ ಯೇಸು ನೀರಿನಲ್ಲಿ ದೀಕ್ಷಾಸ್ನಾನ ಪಡೆದನು. ಆಗಲೇ ಅವನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟನು ಮತ್ತು ‘ಅಭಿಷಿಕ್ತ ಪ್ರಭುವಾಗಿ’ ಸೇವೆ ಮಾಡಲು ಆರಂಭಿಸಿದನು.—ಲೂಕ 3:1, 2, 21, 22.

it-2 901 ¶2

ಎಪ್ಪತ್ತು ವಾರಗಳು

ಅರ್ಧ ವಾರವಾದಾಗ “ಛೇದಿಸಲ್ಪಡುವನು.” ಗಬ್ರಿಯೇಲನು ದಾನಿಯೇಲನಿಗೆ ಮುಂದುವರಿಸಿ ಹೇಳಿದ್ದು: “ಅರುವತ್ತೆರಡು ವಾರಗಳಾದ ಮೇಲೆ ಅಭಿಷಿಕ್ತನೊಬ್ಬನು ಛೇದಿಸಲ್ಪಡುವನು; ಅವನಿಗೆ ಏನೂ ಇರದು.” (ದಾನಿ 9:26) ‘ಏಳು ಮತ್ತು ಅರವತ್ತೆರಡು ವಾರಗಳು’ ಮುಗಿದ ನಂತರ, ಅಂದರೆ ಮೂರುವರೆ ವರ್ಷಗಳ ನಂತರ ಆ ಅಭಿಷಿಕ್ತನು ಯಾತನಾಕಂಬದ ಮೇಲೆ ಸಾಯುವ ಮೂಲಕ ಛೇದಿಸಲ್ಪಟ್ಟನು. ಹೀಗೆ ಅವನು ಎಲ್ಲವನ್ನೂ ಮಾನವ ಕುಲಕ್ಕಾಗಿ ವಿಮೋಚನಾಮೌಲ್ಯವಾಗಿ ಕೊಟ್ಟನು. (ಯೆಶಾ 53:8) ಅವನು ಈ ಅರ್ಧ ‘ವಾರ’ವನ್ನು ಸಾರುವ ಕೆಲಸದಲ್ಲಿ ಕಳೆದನೆಂದು ಆಧಾರಗಳು ಸೂಚಿಸುತ್ತವೆ. ಒಮ್ಮೆ, ಬಹುಶಃ ಕ್ರಿ.ಶ. 32​ರಲ್ಲಿ ಯೆಹೂದಿ ಜನಾಂಗವನ್ನು ‘ಮೂರು ವರ್ಷ’ ಫಲಕೊಡದಿದ್ದ ಅಂಜೂರದ ಮರಕ್ಕೆ ಹೋಲಿಸಿ ಮಾತಾಡಿದನು. (ಹೋಲಿಸಿ ಮತ್ತಾ 17:15-20; 21:18, 19, 43) ತೋಟಗಾರನು ತೋಟದ ಯಜಮಾನನಿಗೆ, “ಯಜಮಾನನೇ, ಈ ವರ್ಷವೂ ಇದನ್ನು ಬಿಡು; ನಾನು ಇದರ ಸುತ್ತ ಅಗೆದು ಗೊಬ್ಬರಹಾಕುತ್ತೇನೆ. ಆಗ ಭವಿಷ್ಯತ್ತಿನಲ್ಲಿ ಅದು ಹಣ್ಣುಕೊಟ್ಟರೆ ಒಳ್ಳೇದು, ಇಲ್ಲವಾದರೆ ನೀನು ಅದನ್ನು ಕಡಿದುಹಾಕು” ಎಂದು ಹೇಳುತ್ತಾನೆ. (ಲೂಕ 13:6-9) ಕಿವಿಗೊಡದಿದ್ದ ಜನಾಂಗಕ್ಕೆ ತಾನು ಸುವಾರ್ತೆ ಸಾರುತ್ತಿದ್ದ ಸಮಯಾವಧಿಗೆ ಸೂಚಿಸಿ ಇದನ್ನು ಹೇಳಿದ್ದಿರಬಹುದು. ಇದನ್ನು ಹೇಳುವಾಗ ಅವನು ಮೂರು ವರ್ಷ ಸುವಾರ್ತೆ ಸಾರಿ ನಾಲ್ಕನೇ ವರ್ಷಕ್ಕೆ ಕಾಲಿಡಲಿದ್ದನು.

it-2 901 ¶5

ಎಪ್ಪತ್ತು ವಾರಗಳು

“ಅರ್ಧ ವಾರ” ಅಂದರೆ ಏಳು ವರ್ಷಗಳ ಮಧ್ಯ ಭಾಗಕ್ಕೆ ಬಂದು ನಿಲ್ಲುತ್ತದೆ ಅಥವಾ ವರ್ಷಗಳಿರುವ ಒಂದು ‘ವಾರದ’ ಮೂರುವರೆ ವರ್ಷ ಮುಗಿದ ನಂತರ ಆಗಿದೆ. ಕ್ರಿ.ಶ. 29​ರ ಶರತ್ಕಾಲದಲ್ಲಿ ಯೇಸು ದೀಕ್ಷಾಸ್ನಾನ ಪಡೆದು ಕ್ರಿಸ್ತನಾಗಲು ಅಭಿಷೇಕಿಸಲ್ಪಟ್ಟಾಗ 70​ನೇ “ವಾರ” ಆರಂಭವಾಯಿತು. ಆ ವಾರದ ಅರ್ಧ ವಾರ (ಮೂರುವರೆ ವರ್ಷ) ಕ್ರಿ.ಶ. 33​ರ ವಸಂತಕಾಲದವರೆಗೆ ಅಥವಾ ಪಸ್ಕಹಬ್ಬದ ಸಮಯದವರೆಗೆ (ನೈಸಾನ್‌ 14) ಮುಂದುವರಿಯುತ್ತದೆ. ಗ್ರೆಗೋರಿಯನ್‌ ಕ್ಯಾಲೆಂಡರ್‌ನ ಪ್ರಕಾರ ಈ ದಿನ ಕ್ರಿ.ಶ. 33​ರ ಏಪ್ರಿಲ್‌ 1​ನೇ ತಾರೀಖು ಆಗಿರಬೇಕು. (ಕರ್ತನ ಸಂಧ್ಯಾ ಭೋಜನ ನೋಡಿ [ಇದನ್ನು ಆರಂಭಿಸಿದ ಸಮಯ].) ಯೇಸು ‘ದೇವರ ಚಿತ್ತವನ್ನು ಮಾಡಲು ಬಂದನು’ ಅಂದರೆ ‘ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು [ಧರ್ಮಶಾಸ್ತ್ರದ ಪ್ರಕಾರ ಕೊಡುತ್ತಿದ್ದ ಯಜ್ಞಗಳು ಮತ್ತು ಕಾಣಿಕೆಗಳು] ತೆಗೆದುಹಾಕಲು’ ಬಂದನೆಂದು ಅಪೊಸ್ತಲ ಪೌಲನು ಹೇಳಿದ್ದಾನೆ. ತನ್ನ ಸ್ವಂತ ದೇಹವನ್ನೇ ಯಜ್ಞವಾಗಿ ಅರ್ಪಿಸುವ ಮೂಲಕ ಇದನ್ನು ಮಾಡಿದನು.—ಇಬ್ರಿ 10:1-10.

ಅಕ್ಟೋಬರ್‌ 16-22

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

g05 9/8 12 ¶2

ಇಡೀ ಭೂಮಿಯಲ್ಲಿ ಶಾಂತಿ-ಸಮಾಧಾನ ಇರುವಾಗ

ವಾಸ್ತವವಾಗಿ, ನಾವು ಭೂಮಿಯಲ್ಲಿ ಹೊಸ ರೀತಿಯ ಶಾಂತಿ ಸಮಾಧಾನದ ಜೀವನವನ್ನು ಆನಂದಿಸುತ್ತೇವೆ. ಭೂಮಿಯನ್ನು ಉತ್ತಮವಾಗಿ ಹೇಗೆಲ್ಲ ನೋಡಿಕೊಳ್ಳಬೇಕೆಂದು ದೇವರು ತನ್ನ ನಿಷ್ಠಾವಂತ ಸೇವಕರಿಗೆ ಕಲಿಸುತ್ತಾನೆ. ಆತನು ಎಲ್ಲಾ ಪರಭಕ್ಷಕ ಪ್ರಾಣಿಗಳಿಗೆ “ನಿಬಂಧನೆಮಾಡಿ” ಅವು ಶಾಂತಿಯುತವಾಗಿ ಮಾನವರಿಗೆ ಅಧೀನವಾಗಿ ಇರುವಂತೆ ಮಾಡುತ್ತಾನೆ.—ಹೋಶೇಯ 2:18; ಆದಿಕಾಂಡ 1:26-28; ಯೆಶಾಯ 11:6-8.

ಅಕ್ಟೋಬರ್‌ 23-29

ಬೈಬಲಿನಲ್ಲಿರುವ ರತ್ನಗಳು | ಹೋಶೇಯ 8-14

“ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ”

w07 4/1 20 ¶2

ದೇವರು ಮೆಚ್ಚುವ ಯಜ್ಞಗಳನ್ನು ಅರ್ಪಿಸಿ

ಇದಲ್ಲದೆ, ನಾವು ಯೆಹೋವನಿಗೆ ಸಲ್ಲಿಸುವ ಸ್ತುತಿಯು ಆತನಿಗೆ ಅರ್ಪಿಸುವ ಯಜ್ಞವಾಗಿ ಪರಿಗಣಿಸಲ್ಪಡುತ್ತದೆ ಎಂದು ಬೈಬಲ್‌ ಸೂಚಿಸುತ್ತದೆ. ಪ್ರವಾದಿ ಹೋಶೆಯನು, “ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು” ಎಂದು ಹೇಳುವ ಮೂಲಕ ದೇವರು ನಮ್ಮ ತುಟಿಗಳ ಸ್ತೋತ್ರಯಜ್ಞವನ್ನು ಅತ್ಯುತ್ತಮ ಯಜ್ಞವಾಗಿ ಪರಿಗಣಿಸುತ್ತಾನೆ ಎಂದು ತೋರಿಸಿಕೊಟ್ಟನು. (ಹೋಶೇಯ 14:2) ಅಪೊಸ್ತಲ ಪೌಲನು ಹೀಬ್ರು ಕ್ರೈಸ್ತರಿಗೆ, “ದೇವರಿಗೆ ಯಾವಾಗಲೂ, ಆತನ ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು ಅರ್ಪಿಸೋಣ” ಎಂದು ಉತ್ತೇಜಿಸಿದನು. (ಇಬ್ರಿಯ 13:15) ಇಂದು, ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಾ, ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದಾರೆ. (ಮತ್ತಾಯ 24:14; 28:19, 20) ಅವರು ಇಡೀ ಭೂಮಿಯಲ್ಲಿ ಹಗಲು-ರಾತ್ರಿ ದೇವರಿಗೆ ಸ್ತೋತ್ರಯಜ್ಞಗಳನ್ನು ಅರ್ಪಿಸುತ್ತಿದ್ದಾರೆ.—ಪ್ರಕಟನೆ 7:15.

jd 87 ¶11

ಯೆಹೋವನ ಉನ್ನತ ಮಟ್ಟಗಳಿಗನುಸಾರ ಆತನನ್ನು ಸೇವಿಸಿ

11 ಹೋಶೇಯ 14:9 ನೀತಿಯ ಮಾರ್ಗದಲ್ಲಿ ನಡೆಯುವುದರ ಅಥವಾ ದೇವರು ಬಯಸುವ ಪ್ರಕಾರ ಜೀವಿಸುವುದರ ಪ್ರಯೋಜನ ಮತ್ತು ಆಶೀರ್ವಾದಗಳ ಕಡೆಗೆ ನಮ್ಮ ಗಮನವನ್ನು ತಿರುಗಿಸುತ್ತದೆ. ಸೃಷ್ಟಿಕರ್ತನಾಗಿರುವುದರಿಂದ ಆತನಿಗೆ ನಮ್ಮ ಬಗ್ಗೆ ಎಲ್ಲವೂ ಗೊತ್ತು. ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳು ನಮ್ಮ ಒಳಿತಿಗಾಗಿಯೇ ಇವೆ. ಉದಾಹರಣೆಗೆ, ನಮ್ಮ ಮತ್ತು ದೇವರ ಸಂಬಂಧ ಒಂದು ವಾಹನ ಮತ್ತು ಅದರ ತಯಾರಕನ ಸಂಬಂಧದಂತಿದೆ. ವಾಹನವನ್ನು ತಯಾರಿಸಿದವನಿಗೆ ಅದರ ರಚನೆ ಮತ್ತು ಜೋಡಣೆಗಳ ಬಗ್ಗೆ ಗೊತ್ತಿರುತ್ತದೆ. ಎಷ್ಟು ಸಮಯಕ್ಕೊಮ್ಮೆ ಅದರ ಆಯ್ಲನ್ನು ಬದಲಾಯಿಸಬೇಕೆಂದು ಅವನಿಗೆ ಗೊತ್ತಿರುತ್ತದೆ. ನೀವು, ಕಾರು ಚೆನ್ನಾಗಿ ಓಡುತ್ತಿದೆ ಎಂದು ಈ ವಿಷಯವನ್ನು ಅಲಕ್ಷಿಸಿದರೆ ಏನಾಗುತ್ತದೆ? ಬೇಗನೆ ಅದರ ಎಂಜಿನ್‌ ಹಾಳಾಗುತ್ತದೆ. ನಾವು ಸಹ ವಾಹನದಂತಿದ್ದೇವೆ. ನಮ್ಮ ತಯಾರಕನು ಅಥವಾ ಸೃಷ್ಟಿಕರ್ತನು ನಮಗೆ ನಿಯಮಗಳನ್ನು ಕೊಟ್ಟಿದ್ದಾನೆ. ಅದರ ಪ್ರಕಾರ ನಡೆದರೆ ನಮಗೇ ಪ್ರಯೋಜನ. (ಯೆಶಾಯ 48:17, 18) ಇದನ್ನು ಒಪ್ಪಿಕೊಳ್ಳುವುದು ಆತನ ನಿಯಮಗಳನ್ನು ಅನುಸರಿಸುತ್ತಾ ಆತನ ಮಟ್ಟಗಳಿಗನುಸಾರ ಜೀವಿಸಲು ಸಹಾಯ ಮಾಡುತ್ತದೆ.—ಕೀರ್ತನೆ 112:1.

ಅಕ್ಟೋಬರ್‌ 30–ನವೆಂಬರ್‌ 5

ಬೈಬಲಿನಲ್ಲಿರುವ ರತ್ನಗಳು | ಯೋವೇಲ 1-3

“ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು”

jd 167 ¶4

“ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ”

4 ಮತ್ತೊಂದು ದೃಷ್ಟಿಕೋನದಿಂದ ವಿಷಯವನ್ನು ನೋಡಿ. ಎಲ್ಲಾ ರೀತಿಯ ಜನರು ಪ್ರವಾದಿಸುವ ಸಮಯದ ಬಗ್ಗೆ ಯೆಹೋವ ದೇವರು ಪ್ರವಾದಿಯಾದ ಯೋವೇಲನಿಗೆ ತಿಳಿಸಿದನು. ಆತನು ಹೇಳಿದ್ದು: “ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು.” (ಯೋವೇಲ 2:28-32) ಕ್ರಿ.ಶ. 33​ರ ಪಂಚಾಶತ್ತಮ ದಿನದಂದು, ಯೆರೂಸಲೇಮಿನ ಮೇಲಂತಸ್ತಿನ ಕೋಣೆಯೊಂದರಲ್ಲಿ ಕೂಡಿ ಬಂದವರ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟು, ಅವರು “ದೇವರ ಮಹೋನ್ನತ ಕಾರ್ಯಗಳ” ಬಗ್ಗೆ ಸಾರಿದಾಗ ಅಪೊಸ್ತಲ ಪೇತ್ರನು ಈ ಮಾತನ್ನು ಅನ್ವಯಿಸಿದನು. (ಅಪೊಸ್ತಲ ಕಾರ್ಯಗಳು 1:12-14; 2:1-4, 11, 14-21) ಈಗ ನಮ್ಮ ಸಮಯವನ್ನು ಪರಿಗಣಿಸಿರಿ, ಯೋವೇಲನ ಭವಿಷ್ಯವಾಣಿಯು ಪ್ರಮುಖವಾಗಿ 20​ನೇ ಶತಮಾನದ ಆರಂಭದಿಂದ ನೆರವೇರುತ್ತಿದೆ. ಅಭಿಷಿಕ್ತ ಕ್ರೈಸ್ತರಲ್ಲಿ ಗಂಡಸರು-ಹೆಂಗಸರು, ಯೌವನಸ್ಥರು-ಹಿರಿಯರು ಎಲ್ಲರೂ ‘ಪ್ರವಾದಿಸಲು,’ ಅಂದರೆ, “ದೇವರ ಮಹೋನ್ನತ ಕಾರ್ಯಗಳ” ಬಗ್ಗೆ ಮಾತಾಡಲು ಆರಂಭಿಸಿದ್ದಾರೆ. ಜೊತೆಗೆ ಈಗಾಗಲೇ ಸ್ವರ್ಗದಲ್ಲಿ ಸ್ಥಾಪಿತವಾದ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ