ನಮ್ಮ ಕ್ರೈಸ್ತ ಜೀವನ
ಸನ್ನಿವೇಶಗಳು ಬದಲಾದಾಗ ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ
ಬದಲಾವಣೆಗಳು ಸಾಮಾನ್ಯ, ಬಂದೇ ಬರುತ್ತವೆ. ಕಡೇ ದಿನಗಳಲ್ಲಂತೂ ಇದು ನೂರಕ್ಕೆ ನೂರರಷ್ಟು ಸತ್ಯ. (1ಕೊರಿಂ 7:31) ಇವು ನಿರೀಕ್ಷಿತ ಇಲ್ಲವೆ ಅನಿರೀಕ್ಷಿತವಾಗಿರಬಹುದು; ಒಳ್ಳೆಯದು ಅಥವಾ ಕೆಟ್ಟದ್ದಾಗಿರಲೂಬಹುದು. ಅದೇನೇ ಆದರೂ, ಬದಲಾವಣೆಗಳಾದಾಗ ನಾವು ಮಾಡುವ ಆರಾಧನೆಗೆ ಅಡ್ಡಿಯಾಗಬಹುದು ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧ ಬಲಹೀನವಾಗಬಹುದು. ಬದಲಾವಣೆಗಳಾದಾಗಲೂ ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಲು ನಮಗೆ ಯಾವುದು ಸಹಾಯ ಮಾಡುತ್ತದೆ? ಸ್ಥಳಾಂತರಿಸಿದಾಗಲೂ ಆಧ್ಯಾತ್ಮಿಕವಾಗಿ ಸ್ಥಿರವಾಗಿರಿ ಎಂಬ ವಿಡಿಯೋ ನೋಡಿ. ನಂತರ, ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
ಈ ವಿಡಿಯೋದಲ್ಲಿರುವ ತಂದೆಗೆ ಒಬ್ಬ ಸಹೋದರನು ಯಾವ ಸಲಹೆ ಕೊಟ್ಟನು?
ಮತ್ತಾಯ 7:25 ರಲ್ಲಿರುವ ತತ್ವ ಈ ಕುಟುಂಬದ ಸನ್ನಿವೇಶಕ್ಕೆ ಹೇಗೆ ಅನ್ವಯಿಸುತ್ತದೆ?
ಈ ಕುಟುಂಬವು ಸ್ಥಳಾಂತರಿಸಲು ಮುಂಚಿತವಾಗಿ ಹೇಗೆ ಯೋಜನೆ ಮಾಡಿತು? ಇದರಿಂದ ಅವರಿಗೇನು ಪ್ರಯೋಜನವಾಯಿತು?
ಸಭೆ ಮತ್ತು ಟೆರಿಟೊರಿ ಬದಲಾವಣೆಯಾದರೂ ಅದಕ್ಕೆ ಹೊಂದಿಕೊಳ್ಳಲು ಈ ಕುಟುಂಬಕ್ಕೆ ಯಾವುದು ಸಹಾಯಮಾಡಿತು?
ನನ್ನ ಜೀವನದಲ್ಲಿ ಇತ್ತೀಚೆಗೆ ಆದ ದೊಡ್ಡ ಬದಲಾವಣೆಗಳು:
ಈ ವಿಡಿಯೋದಲ್ಲಿರುವ ತತ್ವಗಳನ್ನು ನಾನು ನನ್ನ ಸನ್ನಿವೇಶಕ್ಕೆ ಹೇಗೆ ಅನ್ವಯಿಸಬಹುದು?