ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಆಗಸ್ಟ್‌ ಪು. 1-3
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಆಗಸ್ಟ್‌ 6-12
  • ಆಗಸ್ಟ್‌ 13-19
  • ಆಗಸ್ಟ್‌ 20-26
  • ಆಗಸ್ಟ್‌ 27- ಸೆಪ್ಟೆಂಬರ್‌ 2
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಆಗಸ್ಟ್‌ ಪು. 1-3

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಆಗಸ್ಟ್‌ 6-12

ಬೈಬಲಿನಲ್ಲಿರುವ ರತ್ನಗಳು | ಲೂಕ 17–18

“ಕೃತಜ್ಞತೆ ತೋರಿಸಿ”

ಲೂಕ 17:12, 14​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹತ್ತು ಮಂದಿ ಕುಷ್ಠರೋಗಿಗಳು: ಬೈಬಲಿನ ಕಾಲದಲ್ಲಿ, ಕುಷ್ಠರೋಗಿಗಳು ಒಂದೆಡೆ ಒಟ್ಟಾಗಿ ಸೇರುತ್ತಿದ್ದರು ಅಥವಾ ಗುಂಪಾಗಿ ಜೀವಿಸುತ್ತಿದ್ದರು. ಇದರಿಂದಾಗಿ ಒಬ್ಬರಿಗೊಬ್ಬರು ಸಹಾಯಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು. (2ಅರ 7:3-5) ಕುಷ್ಠರೋಗಿಗಳು ಪ್ರತ್ಯೇಕವಾಗಿ ವಾಸವಾಗಿರಬೇಕೆಂದು ದೇವರ ನಿಯಮವು ವಿಧಿಸಿತ್ತು. ಕುಷ್ಠರೋಗಿಗೆ ಜನರು ಎದುರಾದರೆ ಅವನು “ಅಶುದ್ಧನು, ಅಶುದ್ಧನು!” ಎಂದು ಕೂಗಿಕೊಳ್ಳುವ ಮೂಲಕ ಅವರನ್ನು ಎಚ್ಚರಿಸಲೂ ಬೇಕಿತ್ತು. (ಯಾಜ 13:45, 46) ಧರ್ಮಶಾಸ್ತ್ರವು ವಿಧಿಸಿದ್ದ ಮೇರೆಗೆ, ಕುಷ್ಠರೋಗಿಗಳು ಯೇಸುವಿನೊಂದಿಗೆ ಮಾತಾಡುವಾಗ ದೂರ ನಿಂತುಕೊಳ್ಳುತ್ತಿದ್ದರು.—ಮತ್ತಾ 8:2ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು ಗ್ಲಾಸರಿ, “ಲೆಪ್ರಸಿ; ಲೆಪರ್‌” ನೋಡಿ.

ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ: ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದನು. ಹಾಗಾಗಿ ಆಗ ಜಾರಿಯಲ್ಲಿದ್ದ ಆರೋನನ ಯಾಜಕತ್ವವನ್ನು ಅಂಗೀಕರಿಸಿದ್ದನು ಮತ್ತು ತಾನು ವಾಸಿಮಾಡಿದ ಕುಷ್ಠರೋಗಿಗಳನ್ನು ಯಾಜಕನ ಬಳಿಗೆ ಕಳುಹಿಸುತ್ತಿದ್ದನು. (ಮತ್ತಾ 8:4; ಮಾರ್ಕ 1:44) ಮೋಶೆಯ ನಿಯಮಕ್ಕನುಸಾರ ಕುಷ್ಠರೋಗಿ ನಿಜವಾಗಿ ವಾಸಿಯಾಗಿದ್ದಾನೆ ಎಂಬುದನ್ನು ಒಬ್ಬ ಯಾಜಕನು ದೃಢಪಡಿಸಬೇಕಿತ್ತು. ಕುಷ್ಠರೋಗಿ ವಾಸಿಯಾದ ಬಳಿಕ ದೇವಾಲಯಕ್ಕೆ ಹೋಗಿ ಅಲ್ಲಿ ಎರಡು ಶುದ್ಧ ಸಜೀವ ಪಕ್ಷಿಗಳನ್ನು, ದೇವದಾರು ಕಟ್ಟಿಗೆಯನ್ನು, ರಕ್ತವರ್ಣದ ದಾರವನ್ನು ಮತ್ತು ಹಿಸ್ಸೋಪ್‌ ಗಿಡವನ್ನು ಅರ್ಪಣೆ ಅಥವಾ ಕಾಣಿಕೆಯಾಗಿ ಕೊಡುತ್ತಿದ್ದನು.—ಯಾಜ 14:2-32.

ಲೂಕ 17:10​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕೆಲಸಕ್ಕೆ ಬಾರದ ಆಳುಗಳು: ಅಕ್ಷರಶಃ “ನಿರುಪಯೋಗಿ; ಅನರ್ಹರು.” ತನ್ನ ಶಿಷ್ಯರು ಅಥವಾ ಆಳುಗಳು ತಮ್ಮನ್ನು ನಿರುಪಯೋಗಿಗಳು, ಅನರ್ಹರು ಎಂದು ಪರಿಗಣಿಸಬೇಕೆಂದು ಯೇಸುವಿನ ಈ ದೃಷ್ಟಾಂತದ ಅರ್ಥವಲ್ಲ. ಪೂರ್ವಾಪರಕ್ಕೆ ಅನುಸಾರವಾಗಿ, ‘ಕೆಲಸಕ್ಕೆ ಬಾರದವರು’ ಎಂಬುದರ ಅರ್ಥ ಆ ಆಳುಗಳು ತಮ್ಮನ್ನು ವಿಶೇಷ ಸುತ್ತಿ ಮಾನಗಳಿಗೆ ಅರ್ಹರು ಎಂದು ವೀಕ್ಷಿಸಿಕೊಳ್ಳದೆ ವಿನಯಶೀಲರಾಗಿರಬೇಕು. ಕೆಲವು ವಿದ್ವಾಂಸರು ‘ಕೆಲಸಕ್ಕೆ ಬಾರದ’ ಎಂಬುದನ್ನು “ನಾವು ಬರೇ ಆಳುಗಳು ವಿಶೇಷ ಗಮನಕ್ಕೆ ಅರ್ಹರಲ್ಲ” ಎಂಬರ್ಥ ಕೊಡುವ ಉತ್ಪ್ರೇಕ್ಷಾಲಂಕಾರವಾಗಿ ಪರಿಗಣಿಸುತ್ತಾರೆ.

ಲೂಕ 18:8​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಈ ನಂಬಿಕೆಯನ್ನು: ಅಥವಾ “ಇಂಥ ನಂಬಿಕೆಯನ್ನು” ಅಕ್ಷರಶಃ “ನಂಬಿಕೆಯನ್ನು.” ಯೇಸು ಇಲ್ಲಿ ಹೇಳುವುದು ಸರ್ವಸಾಮಾನ್ಯವಾದ ನಂಬಿಕೆ ಬಗ್ಗೆ ಅಲ್ಲ. ಹಾಗೆಂದು “ನಂಬಿಕೆ” ಪದದ ಮುಂದಿರುವ ಗ್ರೀಕ್‌ ನಿರ್ದೇಶಕ ಗುಣವಾಚಿಯು ಸೂಚಿಸುತ್ತದೆ. ಇದು ಒಂದು ನಿರ್ದಿಷ್ಟ ರೀತಿಯ ನಂಬಿಕೆ. ಯೇಸುವಿನ ದೃಷ್ಟಾಂತದಲ್ಲಿ ಆ ವಿಧವೆಯು ತೋರಿಸಿದಂಥ ನಂಬಿಕೆ. (ಲೂಕ 18:1-8) ಇದು, ಪ್ರಾರ್ಥನೆಗಿರುವ ಬಲದಲ್ಲಿ ನಂಬಿಕೆ ಮತ್ತು ತಾನಾದುಕೊಂಡವರಿಗೆ ದೇವರು ನ್ಯಾಯವನ್ನು ದೊರಕಿಸಿ ಕೊಡುವನೆಂಬ ನಂಬಿಕೆಯಾಗಿದೆ. ನಂಬಿಕೆಯ ಕುರಿತ ಆ ಪ್ರಶ್ನೆಯನ್ನು ಯೇಸು ಉತ್ತರಿಸದೇ ಬಿಟ್ಟಿರುವಂತಿದೆ­ ಏಕೆಂದರೆ ಆ ಮೂಲಕ ಶಿಷ್ಯರು ತಮ್ಮ ಸ್ವಂತ ನಂಬಿಕೆಯ ಗುಣಮಟ್ಟದ ಬಗ್ಗೆ ಯೋಚಿಸುವಂತೆ ಅವನು ಬಯಸಿದನು. ಪ್ರಾರ್ಥನೆ ಮತ್ತು ನಂಬಿಕೆಯ ಕುರಿತ ಆ ಸಾಮ್ಯವು ಯೋಗ್ಯವಾಗಿತ್ತು ಏಕೆಂದರೆ ಯೇಸು ತನ್ನ ಶಿಷ್ಯರು ಎದುರಿಸಲಿದ್ದ ಪರೀಕ್ಷೆಗಳ ಬಗ್ಗೆ ಆಗ ತಾನೇ ವಿವರಿಸುತ್ತಿದ್ದನು.—ಲೂಕ 17:22-37.

ಆಗಸ್ಟ್‌ 13-19

ಬೈಬಲಿನಲ್ಲಿರುವ ರತ್ನಗಳು | ಲೂಕ 19-20

“ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು”­

jy 232 ¶7

ಹತ್ತು ಮೈನಾಗಳ ದೃಷ್ಟಾಂತ

ಹೆಚ್ಚು ಮಂದಿಯನ್ನು ಶಿಷ್ಯರನ್ನಾಗಿ ಮಾಡಲು ತಮ್ಮ ಸ್ವತ್ತನ್ನು ಪೂರ್ಣವಾಗಿ ಉಪಯೋಗಿಸಿದ ಆ ಆಳುಗಳಂತೆ ತಾವಿದ್ದೇವೆಂದು ಶಿಷ್ಯರು ಗ್ರಹಿಸಿಕೊಳ್ಳುವುದಾದರೆ ಯೇಸು ಅವರನ್ನು ಮೆಚ್ಚುತ್ತಾನೆಂಬ ಖಾತ್ರಿ ಅವರಿಗಿರಬಲ್ಲದು. ಅವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಕೊಡುತ್ತಾನೆ ಎಂದು ಭರವಸೆಯಿಡಸಾಧ್ಯವಿದೆ. ಯೇಸುವಿನ ಶಿಷ್ಯರಲ್ಲಿ ಎಲ್ಲರಿಗೂ ಜೀವನದಲ್ಲಿ ಒಂದೇ ರೀತಿಯ ಪರಿಸ್ಥಿತಿ, ಅವಕಾಶ ಮತ್ತು ಸಾಮರ್ಥ್ಯಗಳು ಇರಲಿಲ್ಲ. ಹಾಗಿದ್ದರೂ “ರಾಜ್ಯಾಧಿಕಾರವನ್ನು” ಪಡೆಯಲಿರುವ ಯೇಸು, ಅವರು ಶಿಷ್ಯರನ್ನು ಮಾಡುವುದರಲ್ಲಿ ಹಾಕಿರುವ ನಿಷ್ಠೆಯ ಪ್ರಯತ್ನಗಳನ್ನು ಅಂಗೀಕರಿಸಿ ಆಶೀರ್ವದಿಸುವನು.—ಮತ್ತಾಯ 28:19, 20.

jy 233 ¶1

ಹತ್ತು ಮೈನಾಗಳ ದೃಷ್ಟಾಂತ

ಈ ಆಳು ತನ್ನ ಯಜಮಾನನ ರಾಜ್ಯ ಸಂಪತ್ತನ್ನು ಹೆಚ್ಚಿಸಲಿಕ್ಕಾಗಿ ಕೆಲಸ ಮಾಡಲು ತಪ್ಪಿದ್ದರಿಂದ ನಷ್ಟ ಹೊಂದಿದನು. ದೇವರ ರಾಜ್ಯದಲ್ಲಿ ಯೇಸು ಆಳುವುದನ್ನು ಆ ಅಪೊಸ್ತಲರು ಮುನ್ನೋಡುತ್ತಿದ್ದರು. ಆದುದರಿಂದ ಈ ಕೊನೆಯ ಆಳಿನ ಬಗ್ಗೆ ಆತನು ಏನು ಹೇಳಿದನೊ ಅದರಿಂದ ಒಂದು ವಿಷಯವನ್ನು ಅವರು ಪ್ರಾಯಶಃ ಗ್ರಹಿಸಿಕೊಂಡರು. ಏನಂದರೆ ತಾವು ಶ್ರದ್ಧೆಯಿಂದ ಕೆಲಸ ಮಾಡದಿದ್ದರೆ ದೇವರ ರಾಜ್ಯದಲ್ಲಿ ತಮಗೆ ಸ್ಥಳ ಸಿಗಲಾರದು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 19:43​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಚೂಪಾದ ಕಂಬಗಳ ಕೋಟೆ: ಅಥವಾ “ಪಾಲಿಸಾಡ್‌.” ಇದರ ಗ್ರೀಕ್‌ ಪದರೂಪ ಖಾರೆಕ್ಸ್‌. ಇದು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ ಮಾತ್ರ ಕಂಡು ಬರುತ್ತದೆ. ಒಂದು ಸ್ಥಳಕ್ಕೆ “ಬೇಲಿಹಾಕಲು ಬಳಸುವ ಚೂಪಾದ ಕೋಲು, ಗೂಟ ಅಥವಾ ಕಂಬ” ಎಂಬರ್ಥವನ್ನು ಇದಕ್ಕೆ ಕೊಡಲಾಗಿದೆ. “ಚೂಪಾದ ಕಂಬಗಳು” ಅಥವಾ “ಪಾಲಿಸಾಡ್‌ಗಳನ್ನು ಜೋಡಿಸಿಡುವ ಮಿಲಿಟರಿ ಜಾಗ” ಎಂಬರ್ಥವೂ ಇದಕ್ಕಿದೆ. ಯೇಸುವಿನ ಈ ಮಾತುಗಳು ಕ್ರಿ.ಶ 70ರಲ್ಲಿ ಸತ್ಯವಾಗಿ ನೆರವೇರಿದವು. ಆಗ ಟೈಟಸ್‌ನ ಕೈಕೆಳಗೆ ರೋಮನ್‌ ಸೈನ್ಯವು ಬಂದು ಯೆರೂಸಲೇಮಿನ ಸುತ್ತಲೂ ಮುತ್ತಿಗೆಯ ಕೋಟೆ ಅಥವಾ ಪಾಲಿಸಾಡನ್ನು ಹಾಕಿತು. ಟೈಟಸನಿಗೆ ಮೂರು ಉದ್ದೇಶಗಳು ಇತ್ತು. ಯೆಹೂದ್ಯರನ್ನು ಪಲಾಯನ ಮಾಡದಂತೆ ತಡೆಯುವುದು, ಶರಣಾಗತರಾಗುವಂತೆ ಪುಸಲಾಯಿಸುವುದು ಮತ್ತು ನಿವಾಸಿಗಳನ್ನು ಉಪವಾಸ ಬೀಳಿಸಿ ಮಣಿಸುವುದೇ. ಯೆರೂಸಲೇಮಿನ ಸುತ್ತಲೂ ಈ ರಕ್ಷಣಾರ್ಥಕ ಕೋಟೆಯನ್ನು ರಚಿಸಲಿಕ್ಕಾಗಿ ಮರದ ಸಾಮಗ್ರಿಗಳು ಬೇಕಿದ್ದವು. ಅದಕ್ಕಾಗಿ ರೋಮನ್‌ ಸೈನ್ಯಗಳು ಹಳ್ಳಿಗಾಡಿನ ಮರಗಳನ್ನೆಲ್ಲ ಕಡಿದು ಬರಿದು ಮಾಡಿದ್ದರು.

ಲೂಕ 20:38​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವರೆಲ್ಲರೂ ಆತನಿಗೆ ಜೀವಿಸುವವರೇ: ಅಥವಾ “ಅವರೆಲ್ಲರೂ ಆತನ ದೃಷ್ಟಿಯಲ್ಲಿ ಜೀವಿಸುವವರೇ ಆಗಿದ್ದಾರೆ.” ದೇವರಿಂದ ದೂರ ತೊಲಗಿರುವ ಜನರು ಜೀವಿಸಿದ್ದರೂ ದೇವರ ದೃಷ್ಟಿಯಲ್ಲಿ ಅವರು ಸತ್ತವರೆಂದು ಬೈಬಲು ಹೇಳುತ್ತದೆ. (ಎಫೆ 2:1; 1ತಿಮೊ 5:6) ಅದೇ ರೀತಿಯಲ್ಲಿ, ದೇವರ ಮೆಚ್ಚಿಗೆಗೆ ಪಾತ್ರರಾದ ಆತನ ಸೇವಕರು ಸತ್ತರೂ ಕೂಡ ಆತನ ದೃಷ್ಟಿಯಲ್ಲಿ ಇನ್ನೂ ಜೀವಿಸುವವರಾಗಿದ್ದಾರೆ. ಯಾಕೆಂದರೆ ಅವರನ್ನು ಪುನರುತ್ಥಾನ ಮಾಡುವ ಆತನ ಉದ್ದೇಶವು ಖಂಡಿತ ನೆರವೇರಲಿದೆ.—ರೋಮ 4:16, 17.

ಆಗಸ್ಟ್‌ 20-26

ಬೈಬಲಿನಲ್ಲಿರುವ ರತ್ನಗಳು | ಲೂಕ 21-22

“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”

kr 226 ¶9

ದೇವರ ರಾಜ್ಯವು ತನ್ನ ಶತ್ರುಗಳನ್ನು ತೆಗೆದುಹಾಕುವುದು

9 ಆಕಾಶದಲ್ಲಿ ಸೂಚನೆಗಳು. ಯೇಸು ಮುಂತಿಳಿಸಿದ್ದು: “ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು.” ಬೆಳಕಿಗಾಗಿ ಧಾರ್ಮಿಕ ಮುಖಂಡರ ಕಡೆಗೆ ನಾವು ನೋಡ ಸಾಧ್ಯವಿಲ್ಲ ಯಾಕೆಂದರೆ ಅವರು ಅಂಥ ಯಾವುದೇ ರೀತಿಯ ಬೆಳಕನ್ನು ಕೊಡಲಾರರು. ಆಕಾಶದಲ್ಲಿ ಅಲೌಕಿಕ ಸೂಚನೆಗಳು ಸಹ ತೋರಿಬರುವುವೆಂದು ಯೇಸು ಸೂಚಿಸುತ್ತಿದ್ದನೊ? ಹಾಗಿದ್ದಿರಲೂಬಹುದು. (ಯೆಶಾ 13:9-11; ಯೋವೇ 2:1, 30, 31) ಜನರು ಆಕಾಶದಲ್ಲಿ ಕಾಣುವ ಆ ಸೂಚನೆಗಳಿಗೆ ಹೇಗೆ ಪ್ರತಿಕ್ರಿಯಿಸುವರು? ಜನರು “ಸಂಕಟಪಡುವರು” ಯಾಕೆಂದರೆ ಅವರಿಗೆ ಪಾರಾಗುವ ‘ದಿಕ್ಕುತೋಚುವುದಿಲ್ಲ.’ (ಲೂಕ 21:25; ಚೆಫ 1:17) ಹೌದು, ದೇವರ ರಾಜ್ಯದ ಶತ್ರುಗಳು-ಭೂರಾಜರಿಂದ ಹಿಡಿದು ದಾಸರ ವರೆಗೆ ಎಲ್ಲರೂ “ಭೂಮಿಗೆ ಬರುತ್ತಿರುವ ಸಂಗತಿಗಳ ನಿಮಿತ್ತ ಭಯದಿಂದ ಮತ್ತು ನಿರೀಕ್ಷಣೆಯಿಂದ ಮೂರ್ಛೆಹೋದಂತಾಗುವರು” ಮತ್ತು ತಮ್ಮನ್ನು ಮರೆ ಮಾಡಿಕೊಳ್ಳಲಿಕ್ಕಾಗಿ ಅತ್ತಿತ್ತ ಓಡುವರು. ಆದರೆ ನಮ್ಮ ಅರಸನ ಕ್ರೋಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವ ಸುರಕ್ಷಿತ ಸ್ಥಳವು ಅವರಿಗೆ ಸಿಕ್ಕುವದೇ ಇಲ್ಲ.—ಲೂಕ 21:26; 23:30; ಪ್ರಕ 6:15-17.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 21:33​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಆಕಾಶವೂ ಭೂಮಿಯೂ ಅಳಿದುಹೋಗುವವು: ಬೇರೆ ವಚನಗಳಲ್ಲಿ ಭೂಮ್ಯಾಕಾಶಗಳು ಶಾಶ್ವತವಾಗಿ ನಿಲ್ಲುವುವು ಎಂಬದಾಗಿ ಹೇಳಲಾಗಿದೆ. (ಆದಿ 9:16; ಕೀರ್ತ 104:5; ಪ್ರಸಂ 1:4) ಹಾಗಾಗಿ ಇಲ್ಲಿ ಯೇಸುವಿನ ಮಾತುಗಳನ್ನು ಉತ್ಪ್ರೇಕ್ಷಾಲಂಕಾರವಾಗಿ ಅರ್ಥ ಮಾಡಸಾಧ್ಯವಿದೆ. ಹೇಗಂದರೆ­ ಒಂದುವೇಳೆ ಅಸಾಧ್ಯವಾದ ವಿಷಯಗಳು ಸಂಭವಿಸಿ ಭೂಮ್ಯಾಕಾಶಗಳು ನಾಶವಾಗಿ ಹೋದರೂ ಕೂಡ ಯೇಸುವಿನ ಮಾತುಗಳು ಖಂಡಿತ ನೆರವೇರುವವು. (ಮತ್ತಾ 5:18 ಹೋಲಿಸಿ.) ಇಲ್ಲಿ ತಿಳಿಸಿರುವ ಭೂಮ್ಯಾಕಾಶಗಳು ಸಾಂಕೇತಿಕವಾಗಿ ಸಹ ಸೂಚಿಸಬಹುದು. ಯಾಕಂದರೆ ಪ್ರಕ 21:1ರಲ್ಲಿ ಅವನ್ನು “ಮೊದಲಿದ್ದ ಆಕಾಶ ಮತ್ತು ಮೊದಲಿದ್ದ ಭೂಮಿ” ಎಂದು ಕರೆಯಲಾಗಿದೆ.

ನನ್ನ ಮಾತುಗಳು ಎಂದೂ ಅಳಿದು ಹೋಗುವುದೇ ಇಲ್ಲ: ಅಥವಾ “ನನ್ನ ಮಾತುಗಳು ಖಂಡಿತವಾಗಿಯೂ ಅಳಿದುಹೋಗುವುದಿಲ್ಲ.” ಇಲ್ಲಿ ಕ್ರಿಯಾಪದದೊಂದಿಗೆ ಎರಡು ಗ್ರೀಕ್‌ ನಿಷೇಧಾತ್ಮಕ ಪದಗಳನ್ನು ಬಳಸಿರುವುದು ಒಂದು ವಿಷಯವನ್ನು ಖಡಾಖಂಡಿತವಾಗಿ ತಳ್ಳಿಹಾಕುವುದನ್ನು ಸೂಚಿಸುತ್ತದೆ. ಅಂದರೆ ಯೇಸುವಿನ ಮಾತುಗಳ ಶಾಶ್ವತತೆಯನ್ನು ಅತಿ ಸ್ಪಷ್ಟವಾಗಿ ಒತ್ತಿಹೇಳುತ್ತದೆ.

ಆಗಸ್ಟ್‌ 27- ಸೆಪ್ಟೆಂಬರ್‌ 2

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 23:31​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಮರವು ಹಸಿಯಾಗಿರುವಾಗಲೇ . . . ಒಣಗಿದ ಮೇಲೆ: ಇಲ್ಲಿ ಯೇಸು ಯೆಹೂದಿ ಜನಾಂಗಕ್ಕೆ ಸೂಚಿಸುತ್ತಿದ್ದನೆಂದು ವ್ಯಕ್ತ. ಅದು ಒಣಗಿ ಹೋಗಿ ಸಾಯುವ ಸ್ಥಿತಿಯಲ್ಲಿದ್ದರೂ ಇನ್ನೂ ಸ್ವಲ್ಪ ಹಸಿತನ, ತೇವಾಂಶ ಅದರಲ್ಲಿತ್ತು. ಯಾಕಂದರೆ ಯೇಸು ಅಲ್ಲಿದ್ದನು ಮತ್ತು ಅವನಲ್ಲಿ ನಂಬಿಕೆಯಿಟ್ಟಿದ್ದ ಹಲವಾರು­ ಯೆಹೂದ್ಯರು ಅಲ್ಲಿದ್ದರು. ಆದರೂ ಯೇಸು ಬೇಗನೆ ಕೊಲ್ಲಲ್ಪಡಲಿದ್ದನು. ನಂಬಿಗಸ್ತ ಯೆಹೂದ್ಯರು ಪವಿತ್ರಾತ್ಮದಿಂದ ಅಭಿಷೇಕ ಹೊಂದಿ ಆಧ್ಯಾತ್ಮಿಕ ಇಸ್ರಾಯೇಲಿನ ಭಾಗವಾಗಲಿದ್ದರು. (ರೋಮ 2:28, 29; ಗಲಾ 6:16) ಆ ಸಮಯದಲ್ಲಿ, ಇಸ್ರಾಯೇಲಿನ ಆ ಅಕ್ಷರಾರ್ಥಕ ಜನಾಂಗವು ಆಧ್ಯಾತ್ಮಿಕವಾಗಿ ಸತ್ತುಹೋಗಿ ಆ ಒಣಗಿಹೋದ ಮರದಂತಿರುವುದು.—ಮತ್ತಾ 21:43.

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಹಿಮ್ಮಡಿಯ ಮೂಳೆಯಲ್ಲಿ ಮೊಳೆ

ಈ ಚಿತ್ರವು ಕಬ್ಬಿಣದ ಮೊಳೆ ತೂರಿಕೊಂಡಿರುವ ಮಾನವ ಹಿಮ್ಮಡಿ ಮೂಳೆಯ ನಕಲು ಆಗಿದೆ. ನಿಜವಾದ ಮೂಳೆಯು 1968ರಲ್ಲಿ, ಉತ್ತರ ಯೆರೂಸಲೇಮಿನಲ್ಲಿ ಭೂಅಗೆತ ಮಾಡುವಾಗ ಸಿಕ್ಕಿತು. ಇದು ರೋಮನ್ನರ ಸಮಯದ್ದಾಗಿತ್ತು. ಆ ಮೂಳೆಯಲ್ಲಿದ್ದ ಮೊಳೆಯ ಉದ್ದ 11.5 ಸೆಂ.ಮೀ (4.5 ಇಂಚು). ಮರಣಶಿಕ್ಷೆ ವಿಧಿಸಲಾದ ವ್ಯಕ್ತಿಯನ್ನು ಮರದ ಕಂಬಕ್ಕೆ ಜಡಿಯಲಿಕ್ಕಾಗಿ ಬಹುಶಃ ಮೊಳೆಗಳನ್ನು ಉಪಯೋಗಿಸಲಾಗುತ್ತಿತ್ತು ಎನ್ನಲು ಇದು ಪುರಾತತ್ವಶಾಸ್ತ್ರ ಕೊಡುವ ಆಧಾರ ಆಗಿದೆ. ರೋಮನ್‌ ಸೈನಿಕರು ಯೇಸುವನ್ನು ಕಂಬಕ್ಕೆ ಜಡಿಯಲು ಇಂಥದ್ದೇ ಮೊಳೆಗಳನ್ನು ಬಳಸಿರಬೇಕು. ಈ ಮೂಳೆಯು ಒಂದು ಕಲ್ಲಿನ ಪೆಟ್ಟಿಗೆಯಲ್ಲಿ ಸಿಕ್ಕಿತು. ಮೃತ ವ್ಯಕ್ತಿಯ ದೇಹ ಕೊಳೆತುಹೋಗಿ ಬರೀ ಮೂಳೆ ಉಳಿದಾಗ ಅದನ್ನು ಈ ಕಲ್ಲಿನ ಪೆಟ್ಟಿಗೆಯಲ್ಲಿ ಹಾಕಲಾಗಿತ್ತು. ಮರದ ಕಂಬಕ್ಕೆ ಜಡಿದು ಮರಣಶಕ್ಷೆ ಅನುಭವಿಸಿದ ವ್ಯಕ್ತಿಯನ್ನು ಸಮಾಧಿ ಮಾಡುವ ಅವಕಾಶವಿತ್ತು ಎಂದು ಇದರಿಂದ ಗೊತ್ತಾಗುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ