ಜೂನ್ 22-28
ವಿಮೋಚನಕಾಂಡ 1-3
ಗೀತೆ 23 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಾನು ಏನಾಗಬೇಕೆಂದು ಅಂದುಕೊಳ್ಳುತ್ತೇನೋ ಅದೇ ಆಗುವೆನು”: (10 ನಿ.)
[ವಿಮೋಚನಕಾಂಡ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ವಿಮೋ 3:13—ಯೆಹೋವನ ಹೆಸರಿನ ಅರ್ಥದ ಬಗ್ಗೆ ಮತ್ತು ಆತನ ವ್ಯಕ್ತಿತ್ವದ ಬಗ್ಗೆ ಮೋಶೆಗೆ ತಿಳಿಯುವ ಆಸೆ ಇತ್ತು (ಕಾವಲಿನಬುರುಜು13 3/15 ಪುಟ 25 ಪ್ಯಾರ 4)
ವಿಮೋ 3:14—ಯೆಹೋವನು ತಾನು ನೆನಸಿದ್ದನ್ನು ಮಾಡಲು ಏನೆಲ್ಲಾ ಆಗಬೇಕೋ ಅದೆಲ್ಲಾ ಆಗುತ್ತಾನೆ (ಬೈಬಲಿನ ಅಧ್ಯಯನ ಕೈಪಿಡಿ ಪುಟ 5 ಪ್ಯಾರ 2-3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 2:10—ಫರೋಹನ ಮಗಳು ಮೋಶೆನಾ ದತ್ತು ತೆಗೆದುಕೊಂಡಿರುವ ಸಾಧ್ಯತೆ ಇದೆ ಅಂತ ಯಾಕೆ ಹೇಳಬಹುದು? (ಎಚ್ಚರ!04-E 4/8 ಪುಟ 6 ಪ್ಯಾರ 5)
ವಿಮೋ 3:1—ಇತ್ರೋನ ಯಾವ ರೀತಿಯ ಯಾಜಕನಾಗಿದ್ದನು? (ಕಾವಲಿನಬುರುಜು04 3/15 ಪುಟ 24 ಪ್ಯಾರ 4)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 2:11-25 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 16)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರಿಗೆ ಆಸಕ್ತಿ ಇರೋ ವಿಷಯದ ಬಗ್ಗೆ ಇತ್ತೀಚಿನ ಒಂದು ಪತ್ರಿಕೆ ನೀಡಿ. (ಪ್ರಗತಿ ಪಾಠ 12)
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು02 6/15 ಪುಟ 11 ಪ್ಯಾರ 1-4—ಮುಖ್ಯ ವಿಷಯ: ಈಜಿಪ್ಟಿನ ಸರ್ವೈಶ್ವರ್ಯಕ್ಕಿಂತಲೂ ಶ್ರೇಷ್ಠವಾದದ್ದು. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಯೆಹೋವನ ಹೆಸರು: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಸಾಧ್ಯವಾದರೆ ಕೆಲವು ಮಕ್ಕಳನ್ನು ಮುಂಚಿತವಾಗಿ ಆಯ್ಕೆಮಾಡಿ ಈ ಪ್ರಶ್ನೆಗಳನ್ನು ವೇದಿಕೆಗೆ ಕರೆದು ಕೇಳಿ: ಯೆಹೋವನ ಹೆಸರಿನ ಅರ್ಥ ಏನು? ಯೆಹೋವನು ಏನೆಲ್ಲಾ ಸೃಷ್ಟಿಮಾಡಿದನು? ಯೆಹೋವನು ನಿಮಗೆ ಹೇಗೆ ಸಹಾಯ ಮಾಡುತ್ತಾನೆ?
ಸ್ಕ್ಯಾಂಡಿನೇವಿಯಾದಲ್ಲಿ ಯೆಹೋವನ ಹೆಸರು: (9 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಇಸವಿ 1500 ರ ಮುಂಚೆ ಯಾಕೆ ಕೆಲವು ಜನರಿಗೆ ಮಾತ್ರ ಯೆಹೋವನ ಹೆಸರಿನ ಬಗ್ಗೆ ಗೊತ್ತಿತ್ತು? ಸ್ಕ್ಯಾಂಡಿನೇವಿಯಾದಲ್ಲಿ ಯೆಹೋವನ ಹೆಸರನ್ನ ಯಾವುದರಲ್ಲೆಲ್ಲಾ ಉಪಯೋಗಿಸಲು ಶುರುಮಾಡಿದರು? ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲ್ ಅಂದ್ರೆ ನಿಮಗೆ ಯಾಕೆ ಇಷ್ಟ?
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 57, 58
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 62 ಮತ್ತು ಪ್ರಾರ್ಥನೆ