ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 25-26
ಮಂಜೂಷ - ದೇವದರ್ಶನ ಗುಡಾರದ ಪ್ರಾಮುಖ್ಯ ಪೆಟ್ಟಿಗೆ
ಮಂಜೂಷವು ದೇವದರ್ಶನ ಗುಡಾರದ ಅತೀ ಪ್ರಾಮುಖ್ಯ ಪೆಟ್ಟಿಗೆ ಆಗಿತ್ತು. ಮಂಜೂಷದ ಮೇಲಿರುವ ಎರಡು ಕೆರೂಬಿಯರ ಆಕಾರಗಳ ಮಧ್ಯೆ ಇದ್ದ ಮೋಡವು ಯೆಹೋವ ದೇವರ ಸಾನಿಧ್ಯವನ್ನು ಸೂಚಿಸುತ್ತಿತ್ತು. ವರ್ಷಕ್ಕೊಮ್ಮೆ ದೋಷಪರಿಹಾರಕ ದಿನದಂದು ಮಹಾಯಾಜಕ ಅತೀ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದನು. ಅಲ್ಲಿ ಅವನು ಇಸ್ರಾಯೇಲ್ಯರ ಪಾಪ ಕ್ಷಮಾಪಣೆಗಾಗಿ ಹೋರಿ ಮತ್ತು ಕುರಿಯ ರಕ್ತವನ್ನು ಚಿಮುಕಿಸುತ್ತಿದ್ದನು. (ಯಾಜ 16:14, 15) ಇದು ಮಹಾಯಾಜಕ ಯೇಸು ಸ್ವರ್ಗದಲ್ಲಿ ಯೆಹೋವನ ಮುಂದೆ ಹೋಗಿ ತನ್ನ ವಿಮೋಚನಾ ಮೌಲ್ಯ ಅರ್ಪಿಸೋದನ್ನು ಸೂಚಿಸುತ್ತಿತ್ತು.—ಇಬ್ರಿ 9:24-26.
ಕೆಳಗೆ ವಚನ ಮತ್ತು ವಿಮೋಚನಾ ಮೌಲ್ಯದಿಂದ ಸಿಗೋ ಆಶೀರ್ವಾದ ಕೊಡಲಾಗಿದೆ. ಯಾವ ವಚನದಲ್ಲಿ ಯಾವ ಆಶೀರ್ವಾದದ ಬಗ್ಗೆ ಇದೆ ಅಂತ ಕಂಡುಹಿಡಿಯಿರಿ:
ವಚನ
ಆಶೀರ್ವಾದ
ಶಾಶ್ವತ ಜೀವನದ ನಿರೀಕ್ಷೆ
ಪಾಪಗಳಿಗೆ ಕ್ಷಮಾಪಣೆ
ಶುದ್ಧ ಮನಸ್ಸಾಕ್ಷಿ
ಈ ಆಶೀರ್ವಾದಗಳನ್ನ ಪಡೀಬೇಕಂದ್ರೆ ನಾವೇನು ಮಾಡಬೇಕು?