ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
© 2023 Watch Tower Bible and Tract Society of Pennsylvania
ಮೇ 1-7
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 17-19
“ಯೆಹೋವ ಬೇರೆಯವ್ರನ್ನ ನೋಡೋ ತರಾನೇ ನೀವೂ ನೋಡಿ”
ಕಾವಲಿನಬುರುಜು17.03 ಪುಟ 24 ಪ್ಯಾರ 7
ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ
7 ಆಸನ ಮಗನಾದ ಯೆಹೋಷಾಫಾಟನ ಮಾದರಿಯ ಬಗ್ಗೆ ಈಗ ಚರ್ಚಿಸೋಣ. ಅವನಲ್ಲಿ ಹಲವಾರು ಒಳ್ಳೇ ಗುಣಗಳಿದ್ದವು. ಅವನು ಯೆಹೋವನ ಮೇಲೆ ಭರವಸೆ ಇಟ್ಟು ಒಳ್ಳೇ ಕೆಲಸಗಳನ್ನು ಮಾಡಿದ್ದನು. ಹಾಗಾಗಿ ಯೆಹೋವನು ಅವನನ್ನು ಮೆಚ್ಚಿದನು. ಆದರೆ ಅವನು ಕೆಲವು ಕೆಟ್ಟ ನಿರ್ಧಾರಗಳನ್ನು ಮಾಡಿದನು. ಉದಾಹರಣೆಗೆ, ದುಷ್ಟ ರಾಜನಾದ ಅಹಾಬನ ಮಗಳನ್ನು ಸೊಸೆಯಾಗಿ ಮಾಡಿಕೊಂಡನು. ಮುಂದೆ, ಅರಾಮ್ಯರ ವಿರುದ್ಧದ ಯುದ್ಧದಲ್ಲಿ ಅಹಾಬನ ಜೊತೆ ಸೇರಿದನು. ಹೀಗೆ ಮಾಡಬೇಡ ಅಂತ ಪ್ರವಾದಿ ಮೀಕಾಯೆಹು ಎಚ್ಚರಿಸಿದರೂ ಕೇಳಲಿಲ್ಲ. ಆ ಯುದ್ಧದಲ್ಲಿ ಅರಾಮ್ಯರು ಯೆಹೋಷಾಫಾಟನ ಮೇಲೆ ದಾಳಿಮಾಡಿದಾಗ ಅವನು ಕೂದಲೆಳೆಯಷ್ಟರಲ್ಲಿ ಬಚಾವಾಗಿ ಯೆರೂಸಲೇಮಿಗೆ ಹಿಂದಿರುಗಿದನು. (2 ಪೂರ್ವ. 18:1-32) ಅವನು ಮಾಡಿದ್ದನ್ನು ಪ್ರಶ್ನಿಸುತ್ತಾ ಪ್ರವಾದಿ ಯೇಹೂ “ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ”? ಎಂದು ಕೇಳಿದನು.—2 ಪೂರ್ವಕಾಲವೃತ್ತಾಂತ 19:1-3 ಓದಿ.
ಕಾವಲಿನಬುರುಜು15 8/15 ಪುಟ 11-12 ಪ್ಯಾರ 8-9
ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ಧ್ಯಾನಿಸಿ
8 ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ನಮ್ಮ ಲೋಪದೋಷಗಳನ್ನು ಮಾತ್ರವಲ್ಲ ಒಳ್ಳೇ ವಿಷಯಗಳನ್ನೂ ನೋಡುತ್ತಾನೆಂದು ನಮಗೆ ತಿಳಿದಿರಬೇಕೆನ್ನುವುದು ಆತನ ಆಸೆ. (2 ಪೂರ್ವ. 16:9) ಯೆಹೂದದ ರಾಜನಾದ ಯೆಹೋಷಾಫಾಟನ ವಿಷಯದಲ್ಲಿ ಇದನ್ನೇ ಮಾಡಿದನು. ಒಮ್ಮೆ ಯೆಹೋಷಾಫಾಟನು ಇಸ್ರಾಯೇಲಿನ ರಾಜನಾದ ಆಹಾಬನ ಜೊತೆ ಸೇರಿ, ರಾಮೋತ್ಗಿಲ್ಯಾದಿನಲ್ಲಿ ಅರಾಮ್ಯರ ವಿರುದ್ಧ ಯುದ್ಧಮಾಡುವ ತಪ್ಪು ತೀರ್ಮಾನ ಮಾಡಿದನು. 400 ಮಂದಿ ಸುಳ್ಳು ಪ್ರವಾದಿಗಳು ದುಷ್ಟನಾದ ಆಹಾಬನಿಗೆ ಅವನು ಯುದ್ಧದಲ್ಲಿ ಗೆಲ್ಲುವನೆಂದು ಹೇಳಿದರು. ಆದರೆ ಯೆಹೋಷಾಫಾಟ ಮತ್ತು ಆಹಾಬ ಯುದ್ಧಕ್ಕೆ ಹೋದರೆ ಅವರಿಗೆ ಸೋಲು ಖಂಡಿತ ಎಂದು ಯೆಹೋವನ ಸತ್ಯ ಪ್ರವಾದಿಯಾದ ಮೀಕಾಯೆಹು ಹೇಳಿದ್ದನು. ಹಾಗೆಯೇ ಆಯಿತು. ಆಹಾಬ ಯುದ್ಧದಲ್ಲಿ ಸತ್ತುಹೋದನು. ಯೆಹೋಷಾಫಾಟನು ಕೂದಲೆಳೆಯಷ್ಟರಲ್ಲಿ ಪಾರಾದನು. ಯೆಹೋವನು ಯುದ್ಧದ ನಂತರ ಯೆಹೂವನ್ನು ಕಳುಹಿಸಿ ಯೆಹೋಷಾಫಾಟನು ಮಾಡಿದ ತಪ್ಪಿಗೆ ಬುದ್ಧಿವಾದ ಹೇಳಿದನು. ಅದೇ ಸಮಯದಲ್ಲಿ “ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ” (ಪವಿತ್ರ ಗ್ರಂಥ ಭಾಷಾಂತರ) ಎಂದು ಯೆಹೂವಿನ ಮೂಲಕ ಹೇಳಿದನು.—2 ಪೂರ್ವ. 18:4, 5, 18-22, 33, 34; 19:1-3.
9 ಯೆಹೋಷಾಫಾಟನು ಕೆಲವು ವರ್ಷಗಳ ಹಿಂದೆ ಸರದಾರರಿಗೆ, ಲೇವಿಯರಿಗೆ, ಯಾಜಕರಿಗೆ ಯೆಹೂದದ ಎಲ್ಲ ಪಟ್ಟಣಗಳಿಗೆ ಹೋಗಿ ಯೆಹೋವನ ಧರ್ಮಶಾಸ್ತ್ರವನ್ನು ಕಲಿಸಲು ಹೇಳಿದ್ದನು. ಅವರು ಈ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದ್ದರೆಂದರೆ ಬೇರೆ ಜನಾಂಗಗಳವರಿಗೂ ಯೆಹೋವನ ಬಗ್ಗೆ ತಿಳಿದುಬಂತು. (2 ಪೂರ್ವ. 17:3-10) ಹಾಗಾಗಿ ಯೆಹೋಷಾಫಾಟನು ಒಂದು ತಪ್ಪು ತೀರ್ಮಾನ ಮಾಡಿದ್ದರೂ ಈ ಹಿಂದೆ ತನ್ನ ಜೀವನದಲ್ಲಿ ಮಾಡಿದ್ದ ಒಳ್ಳೇ ಕೆಲಸಗಳನ್ನು ಯೆಹೋವನು ಮರೆತಿರಲಿಲ್ಲ. ಇದು ನಮಗೆ ತುಂಬ ನೆಮ್ಮದಿ ಕೊಡುತ್ತದೆ. ಯಾಕೆಂದರೆ ನಾವೂ ಒಮ್ಮೊಮ್ಮೆ ತಪ್ಪುಗಳನ್ನು ಮಾಡುತ್ತೇವೆ. ಹಾಗಿದ್ದರೂ ಯೆಹೋವನ ಸೇವೆಯಲ್ಲಿ ನಮ್ಮಿಂದ ಏನು ಆಗುತ್ತದೊ ಅದೆಲ್ಲವನ್ನು ಮಾಡುತ್ತಾ ಇದ್ದರೆ ಆತನು ನಮ್ಮನ್ನು ಪ್ರೀತಿಸುತ್ತಾ ಇರುವನು. ನಾವು ಮಾಡಿರುವ ಒಳ್ಳೇ ವಿಷಯಗಳನ್ನು ಆತನೆಂದೂ ಮರೆಯುವುದಿಲ್ಲ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.03 ಪುಟ 20 ಪ್ಯಾರ 10-11
ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
10 ಯೆಹೋಷಾಫಾಟ ತನ್ನ “ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ” ಇದ್ದನು. (2 ಪೂರ್ವ. 20:31, 32) ಹೇಗೆ? ತನ್ನ ತಂದೆಯಂತೆ ಇವನೂ ಜನರಿಗೆ ಯೆಹೋವನನ್ನೇ ಆರಾಧಿಸುವಂತೆ ಪ್ರೋತ್ಸಾಹಿಸಿದನು. ಯೆಹೂದದ ಪಟ್ಟಣಗಳ ಜನರಿಗೆ “ಯೆಹೋವಧರ್ಮಶಾಸ್ತ್ರವನ್ನು” ಬೋಧಿಸುವ ಏರ್ಪಾಡು ಮಾಡಿದನು. (2 ಪೂರ್ವ. 17:7-10) ಅಷ್ಟೇ ಅಲ್ಲ, ಅವನು ಉತ್ತರದ ಇಸ್ರಾಯೇಲ್ ರಾಜ್ಯದಲ್ಲಿ ಎಫ್ರಾಯೀಮ್ ಪರ್ವತದ ಜನರನ್ನು ‘ಯೆಹೋವನ ಕಡೆಗೆ ತಿರುಗಿಸಲು’ ಅಲ್ಲಿಗೂ ಹೋದನು. (2 ಪೂರ್ವ. 19:4) ಯೆಹೋಷಾಫಾಟನು “ಪೂರ್ಣ ಹೃದಯದಿಂದ ಯೆಹೋವನನ್ನು ಹುಡುಕಿದ” ರಾಜನಾಗಿದ್ದನು.—2 ಪೂರ್ವ. 22:9, ಪವಿತ್ರ ಗ್ರಂಥ ಭಾಷಾಂತರ.
11 ಲೋಕದಲ್ಲೆಡೆ ಇರುವ ಜನರು ತನ್ನ ಬಗ್ಗೆ ಕಲಿಯಬೇಕು ಎನ್ನುವುದು ಯೆಹೋವನ ಆಸೆ. ಆತನ ಬಗ್ಗೆ ಕಲಿಸುವ ಈ ಕೆಲಸದಲ್ಲಿ ನಾವು ಭಾಗಿಯಾಗಬಹುದು. ಈ ಕೆಲಸದಲ್ಲಿ ನೀವು ಪ್ರತಿ ತಿಂಗಳು ಪಾಲ್ಗೊಳ್ಳಬೇಕು ಎಂಬ ಗುರಿ ಇಟ್ಟಿದ್ದೀರಾ? ಜನರು ಯೆಹೋವನನ್ನು ಆರಾಧಿಸುವಂತಾಗಲು ಅವರಿಗೆ ಆತನ ಬಗ್ಗೆ ಕಲಿಸಲು ಬಯಸುತ್ತೀರಾ? ಬೈಬಲ್ ಅಧ್ಯಯನ ಆರಂಭಿಸುವ ನಿಮ್ಮ ಗುರಿಯ ಬಗ್ಗೆ ಪ್ರಾರ್ಥಿಸುತ್ತೀರಾ? ನೀವು ಪ್ರಯತ್ನಪಟ್ಟರೆ ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ. ಆರಾಮ ಮಾಡಲು ನೀವು ಬದಿಗಿಟ್ಟ ಸಮಯವನ್ನು ಜನರಿಗೆ ಬೈಬಲಿನ ಬಗ್ಗೆ ಕಲಿಸಲಿಕ್ಕಾಗಿ ಬಳಸಲು ಸಿದ್ಧರಿದ್ದೀರಾ? ಜನರು ಪುನಃ ಯೆಹೋವನ ಸೇವೆಮಾಡಲು ಯೆಹೋಷಾಫಾಟನು ಸಹಾಯ ಮಾಡಿದಂತೆ ನಾವು ಕೂಡ ನಿಷ್ಕ್ರಿಯ ವ್ಯಕ್ತಿಗಳಿಗೆ ಸಹಾಯ ಮಾಡಬಹುದು. ಬಹಿಷ್ಕಾರ ಆಗಿರುವ ವ್ಯಕ್ತಿಗಳು ತಮ್ಮ ಸಭೆಯ ಸೇವಾಕ್ಷೇತ್ರದಲ್ಲಿ ಇದ್ದರೆ ಅವರನ್ನು ಹಿರಿಯರು ಭೇಟಿಯಾಗಿ, ಅವರು ಹಿಂದೆ ಮಾಡುತ್ತಿದ್ದ ಪಾಪವನ್ನು ಬಿಟ್ಟುಬಿಟ್ಟಿದ್ದರೆ ಸಹಾಯ ಮಾಡಬಹುದು.
ಮೇ 8-14
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 20-21
“ಯೆಹೋವನ ಮೇಲೆ ನಂಬಿಕೆ ಇಡಿ”
ಕಾವಲಿನಬುರುಜು14 12/15 ಪುಟ 23 ಪ್ಯಾರ 8
ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!
8 ರಾಜ ಯೆಹೋಷಾಫಾಟನ ದಿನದಲ್ಲಿ ದೇವಜನರನ್ನು ಒಂದು ಬಲಶಾಲಿ ಶತ್ರು ಎದುರುಹಾಕಿಕೊಂಡಿತು. ಈ ಶತ್ರು ಸುತ್ತಲಿನ ಕ್ಷೇತ್ರಗಳಿಂದ ಬಂದ “ಮಹಾಸಮೂಹ” ಅಥವಾ ಒಂದು ದೊಡ್ಡ ಗುಂಪಾಗಿತ್ತು. (2 ಪೂರ್ವ. 20:1, 2) ಆದರೆ ಇವರನ್ನು ದೇವರ ಸೇವಕರು ತಮ್ಮ ಸ್ವಂತ ಶಕ್ತಿಯಿಂದ ಸೋಲಿಸಲು ಪ್ರಯತ್ನಿಸಲಿಲ್ಲ. ಬದಲಿಗೆ ಯೆಹೋವನ ಸಹಾಯ ಕೋರಿದರು. (2 ಪೂರ್ವಕಾಲವೃತ್ತಾಂತ 20:3, 4 ಓದಿ.) ಒಬ್ಬೊಬ್ಬರೂ ತಮಗೆ ಮನಸ್ಸು ಬಂದಂತೆ, ತಮಗೆ ಸರಿಯನಿಸಿದ ವಿಧದಲ್ಲಿ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಿಲ್ಲ. ಬೈಬಲ್ ದಾಖಲೆ ಹೀಗನ್ನುತ್ತದೆ: “ಎಲ್ಲಾ ಯೆಹೂದ್ಯರೂ ಅವರ ಹೆಂಡತಿಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು.” (2 ಪೂರ್ವ. 20:13) ಆಬಾಲವೃದ್ಧರೆನ್ನದೆ ಎಲ್ಲರೂ ಜೊತೆಯಾಗಿ ಯೆಹೋವನ ನಿರ್ದೇಶನವನ್ನು ನಂಬಿಕೆಯಿಂದ ಪಾಲಿಸಿದರು. ಯೆಹೋವನು ಅವರನ್ನು ಶತ್ರುಗಳಿಂದ ರಕ್ಷಿಸಿದನು. (2 ಪೂರ್ವ. 20:20-27) ದೇವರ ಜನರಾಗಿ ನಮಗೆ ಬರುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ವಿಷಯದಲ್ಲಿ ಇದೊಂದು ಉತ್ತಮ ಮಾದರಿಯಲ್ಲವೇ?
ಕಾವಲಿನಬುರುಜು21.11 ಪುಟ 15 ಪ್ಯಾರ 7
ನವದಂಪತಿಗಳೇ, ನಿಮ್ಮ ಗುರಿ ಏನು?
7 ಪ್ರವಾದಿ ಯಹಜೀಯೇಲನ ಮೂಲಕ ಯೆಹೋಷಾಫಾಟನಿಗೆ ಯೆಹೋವ ಹೇಳಿದ್ದು: “ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.” (2 ಪೂರ್ವ. 20:13-17) ಈ ತರ ಯಾರೂ ಯುದ್ಧ ಮಾಡಲ್ಲ, ಆದ್ರೆ ಈ ತರಾನೇ ಯುದ್ಧ ಮಾಡಿ ಅಂತ ಯೆಹೋವ ಹೇಳಿದನು. ಆಗ ಯೆಹೋಷಾಫಾಟ ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ಟು ಅದೇ ತರ ಮಾಡಿದ. ಯುದ್ಧಕ್ಕೆ ಹೋಗುವಾಗ ಸೈನ್ಯದ ಮುಂದಿನ ಸಾಲಲ್ಲಿ ಯುದ್ಧವೀರರನ್ನ ನಿಲ್ಲಿಸಲಿಲ್ಲ, ಬದಲಿಗೆ ಗಾಯಕರನ್ನ ನಿಲ್ಲಿಸಿದ. ಅವರ ಹತ್ರ ಯಾವ ಆಯುಧನೂ ಇರಲಿಲ್ಲ. ಯೆಹೋಷಾಫಾಟ ಯುದ್ಧದಲ್ಲಿ ಗೆದ್ದನಾ? ಹೌದು, ಶತ್ರು ಸೈನ್ಯವನ್ನ ಯೆಹೋವ ಸೋಲಿಸಿಬಿಟ್ಟನು, ಕೊಟ್ಟ ಮಾತನ್ನ ಉಳಿಸಿಕೊಂಡನು.—2 ಪೂರ್ವ. 20:18-23.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 1271 ಪ್ಯಾರ 1-2
ಯೆಹೋರಾಮ
ಯೆಹೋರಾಮ ಆಳ್ವಿಕೆ ಮಾಡಿದಷ್ಟು ವರ್ಷಗಳು ತುಂಬ ಕಷ್ಟ ಅನುಭವಿಸಿದ. ಮೊದಲು ಎದೋಮ್ಯರು ಅವನ ವಿರುದ್ಧ ದಂಗೆ ಎದ್ದರು, ಆಮೇಲೆ ಲಿಬ್ನದವರು ಯೆಹೂದದ ವಿರುದ್ಧ ತಿರುಗಿಬಿದ್ರು. (2ಅರ 8:20-22) ಎಲೀಯ ಯೆಹೋರಾಮನಿಗೆ, “ಯೆಹೋವ ನಿನ್ನ ಜನ್ರ ಮೇಲೆ, ನಿನ್ನ ಮಕ್ಕಳ ಮೇಲೆ, ನಿನ್ನ ಹೆಂಡತಿಯರ ಮೇಲೆ ಮತ್ತು ನಿನ್ನ ಎಲ್ಲ ಆಸ್ತಿ ಮೇಲೆ ದೊಡ್ಡ ವಿಪತ್ತನ್ನ ತರ್ತಾನೆ” ಅಂತ ಎಚ್ಚರಿಸಿದ. ಅಷ್ಟೇ ಅಲ್ಲ, “ನೀನು ತುಂಬ ರೋಗಗಳಿಂದ ನರಳ್ತೀಯ. ನಿನಗೆ ಕರುಳಿನ ರೋಗಾನೂ ಬರುತ್ತೆ. ಆ ರೋಗ ದಿನದಿಂದ ದಿನಕ್ಕೆ ಜಾಸ್ತಿ ಆಗಿ ಕೊನೆಗೆ ನಿನ್ನ ಕರುಳು ಹೊರಗೆ ಬರುತ್ತೆ” ಅಂದನು.—2ಪೂರ್ವ 21:12-15.
ಯೆಹೋವ ಹೇಳಿದ್ದ ತರಾನೇ ಆಯ್ತು. ಫಿಲಿಷ್ಟಿಯರು ಮತ್ತು ಅರಬಿಯರು ಯೆಹೋರಾಮನ ವಿರುದ್ಧ ಹೋರಾಡೋಕೆ ಯೆಹೋವ ಅನುಮತಿಸಿದ. ಅವರು ಯೆಹೋರಾಮನ ಮಕ್ಕಳನ್ನ, ಹೆಂಡತಿಯರನ್ನ ಹಿಡಿದುಕೊಂಡು ಹೋದ್ರು. “ಎರಡು ವರ್ಷ ಆದ್ಮೇಲೆ ಅವನ ರೋಗದಿಂದ ಅವನ ಕರುಳು ಹೊರಗೆ ಬಂತು” ಕೊನೆಗೆ ಅವನು ಸತ್ತುಹೋದ.—2ಪೂರ್ವ 21:7, 16-20; 22:1; 1ಪೂರ್ವ 3:10, 11.
ಮೇ 15-21
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 22-24
“ಧೈರ್ಯದಿಂದ ಕೆಲಸ ಮಾಡಿದ್ರೆ ಯೆಹೋವ ಆಶೀರ್ವದಿಸ್ತಾನೆ”
ಕಾವಲಿನಬುರುಜು09 10/1 ಪುಟ 22 ಪ್ಯಾರ 1-2
ಸಹವಾಸದಿಂದ ಕೆಟ್ಟ ಯೆಹೋವಾಷ
ದೇವರ ಆಲಯವಿದ್ದ ಯೆರೂಸಲೇಮ್ ಪಟ್ಟಣಕ್ಕೆ ಅದೊಂದು ಭಯಾನಕ ಸಮಯವಾಗಿತ್ತು. ರಾಜ ಅಹಜ್ಯನು ಆಗ ತಾನೇ ಕೊಲೆಯಾಗಿದ್ದನು. ಅಹಜ್ಯನ ತಾಯಿಯಾದ ಅತಲ್ಯ ಆಗ ಮಾಡಿದ ವಿಷಯವನ್ನು ನಮಗೆ ಊಹಿಸಲೂ ಅಸಾಧ್ಯ. ಅದೇನದು? ಅಹಜ್ಯನ ಗಂಡುಮಕ್ಕಳನ್ನು ಅಂದರೆ ತನ್ನ ಸ್ವಂತ ಮೊಮ್ಮಕ್ಕಳನ್ನೇ ಅವಳು ಕೊಂದುಹಾಕಿದಳು! ಅದೇಕೆಂದು ನಿಮಗೆ ಗೊತ್ತೋ?— ಏಕೆಂದರೆ ಅವಳಿಗೆ ತಾನೇ ರಾಣಿಯಾಗಬೇಕಿತ್ತು, ಬೇರೆ ಯಾರೂ ರಾಜ್ಯವಾಳುವುದು ಅವಳಿಗೆ ಬೇಡವಿತ್ತು.
ಆದರೂ ಅತಲ್ಯಳ ಮೊಮ್ಮಕ್ಕಳಲ್ಲಿ ಪುಟ್ಟ ಮಗು ಯೆಹೋವಾಷನು ಬದುಕುಳಿದನು. ಇದರ ಬಗ್ಗೆ ಅವನ ಅಜ್ಜಿಗೆ ಕಿಂಚಿತ್ತೂ ತಿಳಿದಿರಲಿಲ್ಲ. ಅದು ಹೇಗೆಂದು ನೋಡೋಣವೇ?— ಒಳ್ಳೇದು, ಮಗುವಿಗೆ ಯೆಹೋಷೆಬಳೆಂಬ ಸೋದರತ್ತೆ ಇದ್ದಳು. ಅವಳು ಮಗುವನ್ನು ತೆಗೆದುಕೊಂಡು ಹೋಗಿ ದೇವರ ಆಲಯದಲ್ಲಿ ಅಡಗಿಸಿಟ್ಟಳು. ಅದು ಹೇಗೆ ಸಾಧ್ಯವಿತ್ತು? ಹೇಗೆಂದರೆ ಅವಳ ಗಂಡನಾದ ಯೆಹೋಯಾದಾವನು ಆಲಯದಲ್ಲಿ ಮಹಾಯಾಜಕನಾಗಿ ಇದ್ದದರಿಂದಲೇ. ಅವರಿಬ್ಬರು ಆ ಮಗುವಿಗೆ ಯಾವ ಹಾನಿಯೂ ಆಗದಂತೆ ನೋಡಿಕೊಂಡರು.
ಕಾವಲಿನಬುರುಜು09 10/1 ಪುಟ 22 ಪ್ಯಾರ 3-5
ಸಹವಾಸದಿಂದ ಕೆಟ್ಟ ಯೆಹೋವಾಷ
ಹೀಗೆ ಆರು ವರ್ಷಗಳ ವರೆಗೆ ಯೆಹೋವಾಷನನ್ನು ದೇವಾಲಯದಲ್ಲಿ ಗುಪ್ತವಾಗಿಟ್ಟು ಅವರು ಪೋಷಿಸಿದರು. ಅಲ್ಲಿ ಅವನಿಗೆ ಯೆಹೋವ ದೇವರ ಮತ್ತು ಆತನ ಕಟ್ಟಳೆಗಳ ಕುರಿತು ಕಲಿಸಿದರು. ಕೊನೆಗೆ, ಯೆಹೋವಾಷನು ಏಳು ವರ್ಷದವನಾದಾಗ ಅವನನ್ನು ಅರಸನನ್ನಾಗಿ ಮಾಡಲು ಯೆಹೋಯಾದಾವನು ಕ್ರಿಯೆಗೈದನು. ಇದನ್ನು ಅವನು ಹೇಗೆ ಮಾಡಿದನು ಮತ್ತು ಯೆಹೋವಾಷನ ಅಜ್ಜಿಯಾದ ದುಷ್ಟರಾಣಿ ಅತಲ್ಯಳಿಗೆ ಏನಾಯಿತೆಂದು ನೀವು ತಿಳಿಯಬಯಸುವಿರೋ?—
ಆ ಸಮಯದಲ್ಲಿ ಯೆರೂಸಲೇಮಿನ ರಾಜರಿಗಿದ್ದ ವಿಶೇಷ ಅಂಗರಕ್ಷಕರನ್ನು ಯೆಹೋಯಾದಾವನು ಗುಪ್ತವಾಗಿ ಕರೆತಂದನು. ತಾನೂ ತನ್ನ ಪತ್ನಿಯೂ ರಾಜ ಅಹಜ್ಯನ ಚಿಕ್ಕ ಕೂಸನ್ನು ಹೇಗೆ ಕಾಪಾಡಿ ಉಳಿಸಿದ್ದೆವೆಂದು ಅವರಿಗೆ ತಿಳಿಸಿದನು. ಅನಂತರ ಯೆಹೋವಾಷನನ್ನು ಅಂಗರಕ್ಷಕರಿಗೆ ತೋರಿಸಿದನು. ಆಗ ಅವನೇ ಹಕ್ಕುದಾರ ಅರಸನೆಂದು ಅವರು ಮನಗಂಡರು. ಮುಂದೇನು ಮಾಡಬೇಕೆಂಬ ವಿಷಯದಲ್ಲಿ ಆಲೋಚಿಸಿದರು.
ಯೆಹೋಯಾದಾವನು ಯೆಹೋವಾಷನನ್ನು ಹೊರಕ್ಕೆ ತಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟನು. ಆಗ “ಕೂಡಲೆ ಜನರು ಚಪ್ಪಾಳೆಹೊಡೆದು ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿ ಹೇಳಿದರು. ಅಂಗರಕ್ಷಕರು ಯೆಹೋವಾಷನನ್ನು ರಕ್ಷಿಸಲಿಕ್ಕಾಗಿ ಅವನನ್ನು ಸುತ್ತುವರಿದರು. ಅತಲ್ಯಳು ಈ ಎಲ್ಲಾ ಸಂಭ್ರಮವನ್ನು ಕೇಳಿದಾಗ ಹೊರಗೋಡಿ ಬಂದು ಅದು ದ್ರೋಹ ದ್ರೋಹ ಎಂದು ಕೂಗಾಡಿ ಆಕ್ಷೇಪವೆತ್ತಿದಳು. ಆದರೆ ಯೆಹೋಯಾದಾವನು ಆಜ್ಞಾಪಿಸಲಾಗಿ ಅಂಗರಕ್ಷಕರು ಅತಲ್ಯಳನ್ನು ಹಿಡಿದು ಕೊಂದುಹಾಕಿದರು.—2 ಅರಸುಗಳು 11:1-16.
it-1-E ಪುಟ 379 ಪ್ಯಾರ 5
ಹೂಣಿಡು, ಸಮಾಧಿ ಮಾಡುವ ಸ್ಥಳ
ಮಹಾ ಪುರೋಹಿತ ಯೆಹೋಯಾದನಿಗೆ ವಿಶೇಷ ಗೌರವ ಸಿಕ್ತು. ಅದೇನಂದ್ರೆ ಅವನನ್ನ “ದಾವೀದಪಟ್ಟಣದಲ್ಲಿ ರಾಜರ ಸಮಾಧಿಯಲ್ಲಿ ಹೂಣಿಟ್ರು.” ಅವನು ರಾಜ ಮನೆತನದಿಂದ ಬರದಿದ್ರೂ ಅವನಿಗೆ ಈ ವಿಶೇಷ ಅವಕಾಶ ಸಿಕ್ತು. ಈ ರೀತಿ ಅವಕಾಶ ಇನ್ಯಾರಿಗೂ ಸಿಗಲಿಲ್ಲ ಅಂತ ಬೈಬಲ್ ಹೇಳುತ್ತೆ.—2ಪೂರ್ವ 24:15, 16.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 1223 ಪ್ಯಾರ 13
ಜೆಕರ್ಯ
12. ಜೆಕರ್ಯ ಸಾಯೋ ಸಮಯದಲ್ಲಿ ಯೆಹೋವಾಷನಿಗೆ ಹೀಗಂದ, “ನೀನು ಮಾಡಿದ್ದನ್ನ ಯೆಹೋವನೇ ನೋಡಲಿ, ಆತನೇ ಶಿಕ್ಷೆ ಕೊಡಲಿ.” ಈ ಮಾತು ಆರಾಮ್ಯರು ಯೆಹೂದವನ್ನ ನಾಶ ಮಾಡಿದಾಗ ನೆರವೇರಿತು. ಯೆಹೋವಾಷ “ಪುರೋಹಿತ ಯೆಹೋಯಾದನ ಮಕ್ಕಳ ರಕ್ತವನ್ನ ಸುರಿಸಿದ್ದ.” (2ಪೂರ್ವ 24:17-22, 25) ಅದಕ್ಕೆ ಅವನ ಇಬ್ಬರು ಸೇವಕರೇ ಅವನನ್ನ ಕೊಂದು ಹಾಕಿದ್ರು.
ಮೇ 22-28
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 25-27
“ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”
it-1-E ಪುಟ 1266 ಪ್ಯಾರ 6
ಯೆಹೋವಾಷ
ಯೆಹೂದದ ರಾಜನಾದ ಅಮಚ್ಯ ಎದೋಮ್ಯರ ವಿರುದ್ಧ ಹೋರಾಡೋಕೆ ಇಸ್ರಾಯೇಲಿನ ರಾಜನಿಂದ 1,00,000 ಸೈನಿಕರನ್ನ ಬಾಡಿಗೆಗೆ ತಗೊಂಡ. ಆದರೆ ದೇವರ ಮನುಷ್ಯನ ಮಾತಿನ ಮೇರೆಗೆ ಅವರನ್ನೆಲ್ಲಾ ವಾಪಸ್ ಕಳಿಸಿಬಿಡ್ತಾನೆ. ಅವರಿಗೆ 100 ತಲಾಂತು ಬೆಳ್ಳಿಯನ್ನ ಕೊಟ್ಟರೂ ಆ ಸೈನಿಕರಿಗೆ ಸಮಾಧಾನ ಆಗಲಿಲ್ಲ. ಯಾಕಂದ್ರೆ ಕೊಳ್ಳೆ ಹೊಡೆಯೋದ್ರಲ್ಲಿ ಅವರಿಗೆ ಪಾಲು ಸಿಗಲ್ಲ ಅಂತ ಅವರಿಗೆ ಕೋಪ ಬಂತು. ಅವರು ಮನೆಗೆ ವಾಪಸ್ ಹೋದ್ರು ಆದರೆ ಅವರು ಮತ್ತೆ ಬಂದು ದಕ್ಷಿಣ ಭಾಗದ ಪಟ್ಟಣವನ್ನ ಕೊಳ್ಳೆ ಹೊಡೆದ್ರು.—2ಪೂರ್ವ 25:6-10, 13.
ಕಾವಲಿನಬುರುಜು21.08 ಪುಟ 30 ಪ್ಯಾರ 16
‘ಯೆಹೋವನ ಒಳ್ಳೇತನವನ್ನ ಸವಿದು ನೋಡಿ’
16 ಯೆಹೋವನಿಗೋಸ್ಕರ ತ್ಯಾಗ ಮಾಡಿ. ಯೆಹೋವನಿಗೋಸ್ಕರ ತ್ಯಾಗ ಮಾಡಬೇಕು ಅಂದ್ರೆ ಅದರರ್ಥ ಎಲ್ಲಾನೂ ಬಿಟ್ಟುಬಿಡಬೇಕು ಅಂತ ಅಲ್ಲ. (ಪ್ರಸಂ. 5:19, 20) ನಮ್ಮ ಸುಖ-ಸೌಕರ್ಯಗಳನ್ನ ನೋಡ್ತಾ ಯೆಹೋವ ದೇವರ ಸೇವೆನ ಬಿಟ್ಟುಬಿಡಬಾರದು ಅಂತ ಅದರರ್ಥ. ಯೇಸುವಿನ ಉದಾಹರಣೆಯಲ್ಲಿದ್ದ ಶ್ರೀಮಂತ ವ್ಯಕ್ತಿ ತನ್ನ ಸುಖ-ಸೌಕರ್ಯಗಳಿಗೆ ಗಮನಕೊಟ್ಟ. ದೇವರನ್ನ ಬಿಟ್ಟುಬಿಟ್ಟ. ಅವನು ಮಾಡಿದ ತಪ್ಪನ್ನ ನಾವು ಮಾಡಬಾರದು. (ಲೂಕ 12:16-21 ಓದಿ.) ಫ್ರಾನ್ಸ್ ದೇಶದಲ್ಲಿರೋ ಸಹೋದರ ಚಾರ್ಲ್ಸ್ ಅವರ ಅನುಭವ ನೋಡಿ. “ನಾನು ನನ್ನ ಕುಟುಂಬಕ್ಕೆ ಮತ್ತು ಯೆಹೋವ ದೇವರಿಗೆ ಸಮಯನೇ ಕೊಡ್ತಿರಲಿಲ್ಲ” ಅಂತ ಸಹೋದರ ಹೇಳ್ತಾರೆ. ಆದ್ರೆ ಆಮೇಲೆ ಅವರು ಮತ್ತು ಅವರ ಹೆಂಡತಿ ಪಯನೀಯರ್ ಸೇವೆ ಮಾಡೋಣ ಅಂತ ತೀರ್ಮಾನ ಮಾಡಿದ್ರು. ಅದಕ್ಕೋಸ್ಕರ ಅವರು ಕೆಲಸ ಬಿಟ್ರು. ಮನೆ, ಆಫೀಸ್ಗಳನ್ನ ಕ್ಲೀನ್ ಮಾಡೋ ಒಂದು ಚಿಕ್ಕ ಕೆಲಸ ಮಾಡೋಕೆ ಶುರುಮಾಡಿದ್ರು. ಕಡಿಮೆ ದುಡ್ಡಲ್ಲಿ ಜೀವನ ಮಾಡಿ ಖುಷಿಯಾಗಿದ್ರು. “ಈಗ ನಾವು ಜಾಸ್ತಿ ಯೆಹೋವನ ಸೇವೆ ಮಾಡ್ತಾ ಇರೋದ್ರಿಂದ ಜೀವನ ಸಾರ್ಥಕ ಅಂತ ಅನಿಸುತ್ತೆ. ನಾವು ಬೈಬಲ್ ಸ್ಟಡಿಗಳನ್ನ ಮಾಡ್ತಾ, ಪುನರ್ಭೇಟಿಗಳನ್ನ ಮಾಡ್ತಾ ಜನರಿಗೆ ಯೆಹೋವನ ಬಗ್ಗೆ ಕಲಿಸಿ ಖುಷಿಯಾಗಿದ್ದೀವಿ” ಅಂತ ಚಾರ್ಲ್ಸ್ ಹೇಳ್ತಾರೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು 07-E 12/15 ಪುಟ 10 ಪ್ಯಾರ 1-2
ನೀವು ಪ್ರಗತಿಯಾಗೋಕೆ ಯಾರಾದ್ರೂ ಸಹಾಯ ಮಾಡೋರಿದ್ದಾರಾ?
ಉಜ್ಜೀಯನಿಗೆ 16 ವರ್ಷ ಆದಾಗ ಅವನು ದಕ್ಷಿಣ ಯೆಹೂದದ ರಾಜ ಆಗ್ತಾನೆ. ಅಲ್ಲಿ ಅವನು 50 ವರ್ಷ ಆಳ್ವಿಕೆ ಮಾಡ್ತಾನೆ. ಮೊದಲಿಂದಾನೂ ಅವನು “ಯೆಹೋವನಿಗೆ ಇಷ್ಟ ಆಗೋದ್ದನ್ನೇ ಮಾಡ್ತಾ ಇದ್ದ.” ಹೀಗೆ ಮಾಡೋಕೆ ಅವನಿಗೆ ಯಾವುದು ಸಹಾಯ ಮಾಡ್ತು? ಬೈಬಲ್ ಹೀಗೆ ಹೇಳುತ್ತೆ: “ಜೆಕರ್ಯನ ಕಾಲದಲ್ಲಿ ಉಜ್ಜೀಯ ದೇವರನ್ನ ಹುಡುಕ್ತಾ ಇದ್ದ. ಸತ್ಯ ದೇವರ ಮೇಲೆ ಭಯಭಕ್ತಿ ಬೆಳೆಸ್ಕೊಳ್ಳೋಕೆ ಅವನಿಗೆ ಸಹಾಯ ಮಾಡಿದವನೇ ಜೆಕರ್ಯ. ಉಜ್ಜೀಯ ಯೆಹೋವನನ್ನ ಹುಡುಕ್ತಿದ್ದಾಗೆಲ್ಲ ಸತ್ಯ ದೇವರ ಆಶೀರ್ವಾದದಿಂದ ಅಭಿವೃದ್ಧಿ ಆಗ್ತಾ ಹೋದ.”—2ಪೂರ್ವ 26:1, 4, 5.
ಜೆಕರ್ಯ, ಉಜ್ಜೀಯ ರಾಜನ ಸಲಹೆಗಾರ ಅನ್ನೋದು ಬಿಟ್ಟು ಅವನ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಅವನು “ಸತ್ಯ ದೇವರ ಮೇಲೆ ಭಯಭಕ್ತಿ ಬೆಳೆಸ್ಕೊಳ್ಳೋಕೆ” ರಾಜನಿಗೆ ಸಹಾಯ ಮಾಡಿದನು. ಅವನು ಯುವ ರಾಜನ ಮೇಲೆ ಒಳ್ಳೇ ಪ್ರಭಾವ ಬೀರಿದ ಅನ್ನೋದರಲ್ಲಿ ಎರಡು ಮಾತಿಲ್ಲ. ದ ಎಕ್ಸ್ಪೊಸಿಟರ್ಸ್ ಬೈಬಲ್ ಹೀಗೆ ಹೇಳುತ್ತೆ, ಬಹುಶಃ ಜೆಕರ್ಯನಿಗೆ “ದೇವರ ವಾಕ್ಯದ ಒಳ್ಳೇ ಜ್ಞಾನ ಇತ್ತು, ತುಂಬ ಅನುಭವ ಇತ್ತು ಮತ್ತು ತನಗಿದ್ದ ಜ್ಞಾನವನ್ನ ಬೇರೆಯವ್ರ ಜೊತೆ ಹಂಚಿಕೊಳ್ಳುತ್ತಿದ್ದ.” ಒಬ್ಬ ಬೈಬಲ್ ಪಂಡಿತ ಜೆಕರ್ಯನ ಬಗ್ಗೆ ಹೀಗೆ ಹೇಳ್ತಾನೆ: “ಅವನಿಗೆ ಭವಿಷ್ಯವಾಣಿಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು ಮತ್ತು . . . ತುಂಬ ಬುದ್ಧಿವಂತನಾಗಿದ್ದ, ದೇವರ ಮೇಲೆ ತುಂಬ ಭಯಭಕ್ತಿ ಇತ್ತು ಮತ್ತು ಒಳ್ಳೆಯವನಾಗಿದ್ದ. ಅವನು ಉಜ್ಜೀಯನ ಮೇಲೆ ಒಳ್ಳೇ ಪ್ರಭಾವ ಬೀರಿದ್ದ.”
ಮೇ 29–ಜೂನ್ 4
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 28-29
“ನಿಮ್ಮ ಹೆತ್ತವರು ಮಾದರಿಯಾಗಿಲ್ಲ ಅಂದ್ರೂ ನೀವು ಯೆಹೋವನ ಸೇವೆ ಮಾಡಬಹುದು”
ಕಾವಲಿನಬುರುಜು16.02 ಪುಟ 14 ಪ್ಯಾರ 8
ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ
8 ಹಿಜ್ಕೀಯನು ಬೆಳೆದು ಬಂದ ವಿಧ ರೂತಳಿಗಿಂತ ತುಂಬ ಭಿನ್ನವಾಗಿತ್ತು. ದೇವರಿಗೆ ಸಮರ್ಪಿತವಾದ ಇಸ್ರಾಯೇಲ್ ಜನಾಂಗಕ್ಕೆ ಅವನು ಸೇರಿದವನಾಗಿದ್ದನು. ಆದರೆ ಹೆಚ್ಚಿನ ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಹಿಜ್ಕೀಯನ ತಂದೆಯಾದ ರಾಜ ಆಹಾಜ ದುಷ್ಟನಾಗಿದ್ದನು. ದೇವರ ಆಲಯವನ್ನು ಅಪವಿತ್ರ ಮಾಡಿದನು. ಮಾತ್ರವಲ್ಲ ಬೇರೆ ದೇವರುಗಳನ್ನು ಆರಾಧಿಸುವಂತೆ ಜನರ ಮನಸ್ಸನ್ನು ತಿರುಗಿಸಿದನು. ಆಹಾಜನು ತನ್ನ ಗಂಡುಮಕ್ಕಳನ್ನು ಅಂದರೆ ಹಿಜ್ಕೀಯನ ಕೆಲವು ಸಹೋದರರನ್ನು ಸುಳ್ಳು ದೇವರುಗಳಿಗೆ ಜೀವಂತವಾಗಿ ಆಹುತಿ ಕೊಟ್ಟನು. ಹಿಜ್ಕೀಯನ ಬಾಲ್ಯದ ದಿನಗಳು ತೀರಾ ಕೆಟ್ಟದ್ದಾಗಿದ್ದವು.—2 ಅರ. 16:2-4, 10-17; 2 ಪೂರ್ವ. 28:1-3.
ಕಾವಲಿನಬುರುಜು16.02 ಪುಟ 15-16 ಪ್ಯಾರ 9-11
ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ
9 ತಂದೆಯ ಕೆಟ್ಟ ಮಾದರಿಯಿಂದ ಮಗ ಹಿಜ್ಕೀಯನು ಯೆಹೋವನ ಮೇಲೆ ಸಿಟ್ಟು ಮಾಡಿಕೊಂಡು ತನ್ನ ತಂದೆಯಂತೆಯೇ ದುಷ್ಟನಾಗಬಹುದಿತ್ತು. ಇಂದು ಕೆಲವರು ಹಿಜ್ಕೀಯನಷ್ಟು ಕಷ್ಟವನ್ನು ಅನುಭವಿಸಿಲ್ಲ. ಆದರೂ ‘ಯೆಹೋವನ ಮೇಲೆ ಕುದಿಯಲು’ ಅಥವಾ ಆತನ ಸಂಘಟನೆಯ ವಿರುದ್ಧ ಮಾತಾಡಲು ತಮಗೆ ಕಾರಣವಿದೆ ಎಂದು ನೆನಸುತ್ತಾರೆ. (ಜ್ಞಾನೋ. 19:3) ಇನ್ನೂ ಕೆಲವರು ತಮ್ಮ ಕುಟುಂಬ ಕೆಟ್ಟದ್ದು ಹಾಗಾಗಿ ತಾವು ಕೂಡ ಕೆಟ್ಟವರಾಗಿದ್ದೇವೆ ಅಥವಾ ತಮ್ಮ ಅಪ್ಪಅಮ್ಮ ತಪ್ಪು ಮಾಡಿದ್ದರಿಂದಲೇ ತಾವೂ ತಪ್ಪು ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. (ಯೆಹೆ. 18:2, 3) ಆದರೆ ಈ ರೀತಿ ಯೋಚಿಸುವುದು ಸರಿಯಾ?
10 ‘ಸರಿಯಲ್ಲ’ ಎಂದು ಹಿಜ್ಕೀಯನ ಜೀವನವು ತೋರಿಸುತ್ತದೆ. ಯೆಹೋವನ ಮೇಲೆ ಕೋಪಗೊಳ್ಳಲು ಅಥವಾ ಕುದಿಯಲು ಯಾರಿಗೂ ಕಾರಣವೇ ಇಲ್ಲ. ಏಕೆಂದರೆ ಆತನು ಎಂದಿಗೂ ಜನರಿಗೆ ಕೆಟ್ಟದ್ದನ್ನು ಮಾಡುವುದೇ ಇಲ್ಲ. (ಯೋಬ 34:10) ಒಳ್ಳೇದನ್ನು ಅಥವಾ ಕೆಟ್ಟದ್ದನ್ನು ಮಾಡಲು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಬಹುದು ನಿಜ. (ಜ್ಞಾನೋ. 22:6; ಕೊಲೊ. 3:21) ಆದರೆ ನಾವು ಯಾವ ರೀತಿಯ ವ್ಯಕ್ತಿಯಾಗುತ್ತೇವೆ ಎನ್ನುವುದಕ್ಕೆ ಕುಟುಂಬದ ಹಿನ್ನೆಲೆಯೇ ಕಾರಣವೆಂದು ಇದರ ಅರ್ಥವಲ್ಲ. ಏಕೆ? ಏಕೆಂದರೆ ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ವರವನ್ನು ಕೊಟ್ಟಿದ್ದಾನೆ ಅಂದರೆ ಒಳ್ಳೇದನ್ನು ಅಥವಾ ಕೆಟ್ಟದನ್ನು ಮಾಡಲು ನಾವು ಆರಿಸಿಕೊಳ್ಳಬಹುದು. (ಧರ್ಮೋ. 30:19) ಹಿಜ್ಕೀಯನು ಆ ಅಮೂಲ್ಯ ಸಾಮರ್ಥ್ಯವನ್ನು ಹೇಗೆ ಬಳಸಿದನು?
11 ಆಹಾಜ ಯೆಹೂದದ ಅತಿ ಕೆಟ್ಟ ರಾಜನಾಗಿದ್ದರೂ ಅವನ ಮಗ ಹಿಜ್ಕೀಯನು ತುಂಬ ಒಳ್ಳೆಯ ರಾಜನಾದನು. (2 ಅರಸುಗಳು 18:5, 6 ಓದಿ.) ತನ್ನ ತಂದೆಯ ಕೆಟ್ಟ ಮಾದರಿಯನ್ನು ಅವನು ಅನುಸರಿಸಲಿಲ್ಲ. ಬದಲಾಗಿ ಯೆಹೋವನ ಪ್ರವಾದಿಗಳಾದ ಯೆಶಾಯ, ಮೀಕ, ಹೋಶೇಯರ ಮಾತನ್ನು ಕೇಳಿದನು. ಅವರ ಸೂಚನೆ ಮತ್ತು ಬುದ್ಧಿವಾದಕ್ಕೆ ಗಮನಕೊಟ್ಟನು. ಇದು ಅವನ ತಂದೆ ಮಾಡಿದ ಅನೇಕ ಕೆಟ್ಟ ಕೃತ್ಯಗಳನ್ನು ಸರಿಪಡಿಸಲು ಅವನನ್ನು ಪ್ರಚೋದಿಸಿತು. ಉದಾಹರಣೆಗೆ, ತಂದೆ ಅಪವಿತ್ರ ಮಾಡಿದ ಆಲಯವನ್ನು ಹಿಜ್ಕೀಯ ಶುದ್ಧೀಕರಿಸಿದನು. ಜನರು ಮಾಡಿದ ಪಾಪಗಳನ್ನು ಕ್ಷಮಿಸುವಂತೆ ದೇವರಲ್ಲಿ ಬೇಡಿಕೊಂಡನು. ದೇಶದಲ್ಲೆಲ್ಲಾ ಇದ್ದ ಸುಳ್ಳು ದೇವರ ವಿಗ್ರಹಗಳನ್ನು ನಾಶಮಾಡಿದನು. (2 ಪೂರ್ವ. 29:1-11, 18-24; 31:1) ಅಶ್ಶೂರ ರಾಜನಾದ ಸನ್ಹೇರೀಬನು ಯೆರೂಸಲೇಮನ್ನು ಆಕ್ರಮಿಸುವ ಬೆದರಿಕೆ ಹಾಕಿದಾಗ ಹಿಜ್ಕೀಯ ಬಹಳ ಧೈರ್ಯ ಮತ್ತು ನಂಬಿಕೆ ತೋರಿಸಿದನು. ಯೆಹೋವನು ಕೊಡುವ ರಕ್ಷಣೆಯಲ್ಲಿ ಭರವಸೆ ಇಟ್ಟು ಜನರಲ್ಲಿ ಧೈರ್ಯ ತುಂಬಿದನು. (2 ಪೂರ್ವ. 32:7, 8) ಒಂದು ಸಂದರ್ಭದಲ್ಲಿ ಹಿಜ್ಕೀಯನು ಅಹಂಕಾರಿಯಾದನು ನಿಜ. ಆದರೆ ಯೆಹೋವನು ಅವನನ್ನು ತಿದ್ದಿದಾಗ ತನ್ನನ್ನು ತಗ್ಗಿಸಿಕೊಂಡನು. (2 ಪೂರ್ವ. 32:24-26) ಹಿಜ್ಕೀಯನು ನಿಜವಾಗಿಯೂ ನಮಗೆ ಒಳ್ಳೆಯ ಮಾದರಿ. ತನ್ನ ಕುಟುಂಬ ಮಾಡಿದ ತಪ್ಪುಗಳು ತನ್ನ ಜೀವನವನ್ನು ಹಾಳುಮಾಡುವಂತೆ ಅವನು ಬಿಡಲಿಲ್ಲ. ಅವನು ಯೆಹೋವನ ಸ್ನೇಹಿತನೆಂದು ತೋರಿಸಿಕೊಟ್ಟನು.
ಬೈಬಲಿನಲ್ಲಿರುವ ರತ್ನಗಳು
ನಾತಾನ ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ
ಭೂಮಿಯಲ್ಲಿ ಶುದ್ಧಾರಾಧನೆಯ ಕೇಂದ್ರವಾಗಿ ಮೊತ್ತಮೊದಲ ಬಾರಿ ಆಲಯವನ್ನು ಕಟ್ಟುವ ದಾವೀದನ ಯೋಜನೆಯನ್ನು ಯೆಹೋವನ ನಂಬಿಗಸ್ತ ಆರಾಧಕನಾದ ನಾತಾನನು ಹುರುಪಿನಿಂದ ಬೆಂಬಲಿಸಿದನು. ನಾತಾನನು ವ್ಯಕ್ತಪಡಿಸಿದ ಈ ಅಭಿಪ್ರಾಯವು ಅವನ ಸ್ವಂತದ್ದಾಗಿತ್ತು. ಆದರೆ ಯೆಹೋವನ ಅಭಿಪ್ರಾಯ ಬೇರೆಯೇ ಆಗಿತ್ತು. ಆ ರಾತ್ರಿ ದೇವರು ತನ್ನ ಅಭಿಪ್ರಾಯವನ್ನು ಪ್ರವಾದಿಗೆ ತಿಳಿಸಿದನು. ಅದೇನೆಂದರೆ, ಆಲಯವನ್ನು ದಾವೀದನಲ್ಲ, ಅವನ ಪುತ್ರರಲ್ಲಿ ಒಬ್ಬನು ಕಟ್ಟುವನು. ಈ ಮಾತನ್ನು ನಾತಾನನು ದಾವೀದನಿಗೆ ತಿಳಿಸಿದನು. ಆದರೆ ಅದರೊಂದಿಗೆ ದೇವರು ದಾವೀದನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಲಿದ್ದಾನೆ ಮತ್ತು ಅವನ ಸಿಂಹಾಸನವನ್ನು ‘ನಿರಂತರವಾಗಿ ಸ್ಥಿರಪಡಿಸಲಿದ್ದಾನೆ’ ಎಂಬುದಾಗಿಯೂ ತಿಳಿಸಿದನು.—2 ಸಮು. 7:4-16.
ದೇವಾಲಯವನ್ನು ಕಟ್ಟುವ ವಿಷಯದಲ್ಲಿ ನಾತಾನನ ಅಭಿಪ್ರಾಯ ಒಂದಾಗಿದ್ದರೆ ದೇವರ ಆಲೋಚನೆ ಬೇರೆಯೇ ಆಗಿತ್ತು. ಆದರೆ ಈ ನಮ್ರ ಪ್ರವಾದಿ ಸ್ವಲ್ಪವೂ ಗುಣುಗುಟ್ಟದೆ ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಿ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದನು. ಎಂಥ ಉತ್ತಮ ಮಾದರಿ! ದೇವರು ಯಾವುದೇ ವಿಧದಲ್ಲಿ ನಮ್ಮನ್ನು ಸರಿಪಡಿಸುವಾಗ ನಾವು ನಾತಾನನಂತೆ ಅದನ್ನು ಸ್ವೀಕರಿಸಬೇಕು. ಯೆಹೋವನು ತದನಂತರವೂ ನಾತಾನನನ್ನು ಪ್ರವಾದಿಯಾಗಿ ಉಪಯೋಗಿಸಿದ್ದು ಅವನಿಗೆ ಆತನ ಅನುಗ್ರಹವಿತ್ತೆಂದು ತೋರಿಸುತ್ತದೆ. ದೇವಾಲಯದಲ್ಲಿ ನಾಲ್ಕು ಸಾವಿರ ಸಂಗೀತಗಾರರನ್ನು ನೇಮಿಸುವಂತೆ ದಾವೀದನನ್ನು ನಿರ್ದೇಶಿಸಲು ಸಹ ಯೆಹೋವನು ನಾತಾನನನ್ನು ಮತ್ತು ರಾಜದರ್ಶಿಯಾದ ಗಾದನನ್ನು ಉಪಯೋಗಿಸಿದನು.—1 ಪೂರ್ವ. 23:1-5; 2 ಪೂರ್ವ. 29:25.
ಜೂನ್ 5-11
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 30-31
“ಒಟ್ಟಿಗೆ ಸೇರಿ ಬರೋದ್ರಿಂದ ನಮಗೇ ಒಳ್ಳೇದು”
it-1-E ಪುಟ 1103 ಪ್ಯಾರ 2
ಹಿಜ್ಕೀಯ
ಶುದ್ಧ ಆರಾಧನೆ ಕಡೆ ಅವನಿಗಿದ್ದ ಹುರುಪು. ಹಿಜ್ಕೀಯ 25ನೇ ವಯಸ್ಸಿನಲ್ಲಿ ರಾಜನಾದ. ಆಗಲಿಂದನೇ ಅವನು ಯೆಹೋವನ ಆರಾಧನೆಗಾಗಿ ಮಾಡಬೇಕಾಗಿದ್ದನ್ನೆಲ್ಲ ಮಾಡಿದ. ಮೊದಲು ಯೆಹೋವನ ಆಲಯದ ಬಾಗಿಲುಗಳನ್ನ ತೆಗೆದು ದುರಸ್ತಿ ಮಾಡಿಸಿದ. ಆಮೇಲೆ ಅವನು ಪುರೋಹಿತರನ್ನ ಮತ್ತು ಲೇವಿಯರನ್ನ ಕರೆಸಿ ಅವರಿಗೆ, ‘ಇಸ್ರಾಯೇಲ್ ದೇವರಾದ ಯೆಹೋವನ ಜೊತೆ ಒಂದು ಒಪ್ಪಂದ ಮಾಡ್ಕೊಳ್ಳಬೇಕು ಅನ್ನೋದು ನನ್ನ ಆಸೆ’ ಅಂದ. ಇದು ಅವನಿಗೆ ಯೆಹೋವನ ಮೇಲೆ ಎಷ್ಟು ನಂಬಿಕೆ ಇತ್ತು ಅಂತ ತೋರಿಸಿಕೊಡುತ್ತೆ. ನಿಯಮ ಪುಸ್ತಕದ ಒಪ್ಪಂದ ಆಗ ಜಾರಿಯಲ್ಲಿದ್ರೂ ಅದನ್ನ ಜನ್ರು ಪಾಲಿಸ್ತಿರಲಿಲ್ಲ. ಹಾಗಾಗಿ ಹಿಜ್ಕೀಯ ಆ ಒಪ್ಪಂದದಲ್ಲಿರೋ ವಿಷಯಗಳನ್ನ ಪಾಲಿಸುವಂತೆ ಜನ್ರಿಗೆ ಹೇಳಿದ. ರಾಜ ತುಂಬ ಹುರುಪಿನಿಂದ ಪುರೋಹಿತರನ್ನ, ಸಂಗೀತಗಾರರನ್ನ ಮತ್ತು ಹಾಡು ಹೇಳೋರನ್ನೆಲ್ಲ ಏರ್ಪಡಿಸಿದ. ನೈಸಾನ್ ತಿಂಗಳಿನಲ್ಲಿ ಪಸ್ಕಹಬ್ಬವನ್ನ ಮಾಡಬೇಕಾಗಿತ್ತು. ಆದರೆ ಆಗ ದೇವಾಲಯ ಪವಿತ್ರವಾಗಿರಲಿಲ್ಲ. ಅಷ್ಟೇ ಅಲ್ಲ ಪುರೋಹಿತರು ಮತ್ತು ಲೇವಿಯರು ಕೂಡ ಪವಿತ್ರರಾಗಿರಲಿಲ್ಲ. ನೈಸಾನ್ 16ರಷ್ಟಕ್ಕೆ ಅವರು ಎಲ್ಲವನ್ನ ಪವಿತ್ರ ಮಾಡಿಕೊಂಡ್ರು. ಆಮೇಲೆ ಎಲ್ಲ ಇಸ್ರಾಯೇಲ್ಯರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ವಿಶೇಷ ಬಲಿಯನ್ನ ಅರ್ಪಿಸಬೇಕಾಗಿತ್ತು. ಮೊದಲು ಎಲ್ಲ ಅಧಿಕಾರಿಗಳು ಬಲಿಗಳನ್ನ ಅರ್ಪಿಸಿದ್ರು. ನಂತರ ಜನ್ರು ಸಾವಿರಾರು ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಿದ್ರು.—2ಪೂರ್ವ 29:1-36.
it-1-E ಪುಟ 1103 ಪ್ಯಾರ 3
ಹಿಜ್ಕೀಯ
ಜನ್ರಿಗೆ ಮೊದಲನೇ ತಿಂಗಳಿನಲ್ಲಿ ಪಸ್ಕ ಹಬ್ಬ ಮಾಡೋಕಾಗಲಿಲ್ಲ. ಯಾಕಂದ್ರೆ ಅವರು ತಮ್ಮನ್ನ ಪವಿತ್ರೀಕರಿಸಿಕೊಂಡಿರಲಿಲ್ಲ. ಹಾಗಾಗಿ ಹಿಜ್ಕೀಯ ಅವರಿಗೆ, ನಿಯಮದ ಪ್ರಕಾರ ಒಂದು ತಿಂಗಳ ನಂತರ ಪಸ್ಕ ಹಬ್ಬವನ್ನ ಮಾಡೋಕೆ ಹೇಳಿದ. ಆಮೇಲೆ ಇಸ್ರಾಯೇಲಿನ ಮತ್ತು ಯೆಹೂದದ ಎಲ್ಲ ಪ್ರಾಂತ್ಯಗಳಲ್ಲಿರೋ ಜನ್ರು ಪಸ್ಕ ಹಬ್ಬಕ್ಕೆ ಬರಬೇಕು ಅಂತ ರಾಜ ಸಂದೇಶವಾಹಕರ ಹತ್ತಿರ ಪತ್ರಗಳನ್ನ ಕಳಿಸಿದ. ಆದರೆ ಇಸ್ರಾಯೇಲಿನಲ್ಲಿದ್ದ ಅನೇಕರು ಸಂದೇಶವಾಹಕರನ್ನ ಗೇಲಿ ಮಾಡಿದ್ರು. ಹಾಗಿದ್ರೂ ಅಶೇರ್, ಮನಸ್ಸೆ ಮತ್ತು ಜೆಬುಲೂನಿನ ಕೆಲವು ಜನ ತಮ್ಮನ್ನ ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದ್ರು. ಎಫ್ರಾಯೀಮ್ ಮತ್ತು ಇಸ್ಸಾಕಾರಿನ ಕೆಲವು ಜನ್ರು ಕೂಡ ಬಂದ್ರು. ಅಷ್ಟೇ ಅಲ್ಲ, ಇಸ್ರಾಯೇಲ್ಯರಲ್ಲದ ಯೆಹೋವನ ಆರಾಧಕರಾಗಿದ್ದವರು ಕೂಡ ಬಂದ್ರು. ಉತ್ತರ ರಾಜ್ಯದಲ್ಲಿ ಇದ್ದವರಿಗೆ ಅಲ್ಲಿ ಹೋಗಿ ಆರಾಧನೆ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ, ಸಂದೇಶವಾಹಕರ ತರ ಅವರಿಗೂ ವಿರೋಧ ಬಂತು ಮತ್ತು ಗೇಲಿಗೆ ಗುರಿಯಾಗಿದ್ರು. ಯಾಕಂದ್ರೆ ಹತ್ತು ಕುಲದವರು ಸುಳ್ಳು ಆರಾಧನೆಯಲ್ಲಿ ಮುಳುಗಿಹೋಗಿದ್ರು.—2ಪೂರ್ವ 30:1-20; ಅರ 9:10-13.
it-1-E ಪುಟ 1103 ಪ್ಯಾರ 4-5
ಹಿಜ್ಕೀಯ
ಪಸ್ಕ ಹಬ್ಬ ಆದಮೇಲೆ ಹುಳಿಯಿಲ್ಲದ ರೊಟ್ಟಿ ಹಬ್ಬವನ್ನ 7 ದಿನಗಳ ತನಕ ಸಂಭ್ರಮದಿಂದ ಆಚರಿಸಿದ್ರು. ಜನ್ರಿಗೆ ಎಷ್ಟು ಖುಷಿಯಾಯ್ತು ಅಂದ್ರೆ ಅವರು ಹಬ್ಬವನ್ನ ಇನ್ನೂ ಏಳು ದಿನ ಆಚರಿಸಿ ಸಂಭ್ರಮಿಸಿದ್ರು. “ದಾವೀದನ ಮಗನೂ ಇಸ್ರಾಯೇಲಿನ ರಾಜನೂ ಆಗಿದ್ದ ಸೊಲೊಮೋನನ ದಿನಗಳಿಂದ ಅವತ್ತಿನ ತನಕ ಯೆರೂಸಲೇಮಲ್ಲಿ ಇಷ್ಟು ಸಂಭ್ರಮದಿಂದ ಹಬ್ಬ ಆಚರಿಸಿರಲೇ ಇಲ್ಲ.”—2ಪೂರ್ವ 30:21-27.
ಅವರ ಖುಷಿ ಅಲ್ಲಿಗಷ್ಟೇ ಸೀಮಿತವಾಗಿರಲಿಲ್ಲ. ಜನ್ರು ತಮ್ಮ ಮನೆಗೆ ವಾಪಸ್ ಹೋದ ಮೇಲೆ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯದಲ್ಲೆಲ್ಲ ಇದ್ದ ವಿಗ್ರಹಸ್ತಂಭಗಳನ್ನ, ಪೂಜಾಕಂಬಗಳನ್ನ ಕಡಿದುಹಾಕಿದ್ರು. ದೇವಸ್ಥಾನಗಳನ್ನ ಮತ್ತು ಯಜ್ಞವೇದಿಗಳನ್ನ ಕೆಡವಿಹಾಕಿದ್ರು. (2ಪೂರ್ವ 31:1) ಅಷ್ಟೇ ಅಲ್ಲ, ಮೋಶೆ ಮಾಡಿಸಿದ ತಾಮ್ರದ ಹಾವಿನ ಮೂರ್ತಿಯನ್ನ ಹಿಜ್ಕೀಯ ಪುಡಿ ಪುಡಿ ಮಾಡಿದ. ಯಾಕಂದ್ರೆ ಇಸ್ರಾಯೇಲ್ಯರು ಅದಕ್ಕೆ ಬಲಿಯನ್ನ ಅರ್ಪಿಸ್ತಿದ್ರು. ಅದನ್ನ ನಾಶ ಮಾಡೋ ಮೂಲಕ ಅವನು ಒಳ್ಳೇ ಮಾದರಿಯಿಟ್ಟ. (2ಅರ 18:4) ಹೀಗೆ ಮಾಡಿದ್ರಿಂದ ಸತ್ಯ ಆರಾಧನೆ ಮತ್ತೆ ಪುನಸ್ಥಾಪನೆ ಆಯ್ತು. ಅದು ಮುಂದುವರಿಯೋಕಾಗಿ ಬೇಕಾದ ಎಲ್ಲಾ ಏರ್ಪಾಡುಗಳನ್ನ ಮಾಡಿದ. ಅದಕ್ಕಾಗಿ ಲೇವಿಯರನ್ನ ಮತ್ತು ಪುರೋಹಿತರನ್ನ ನೇಮಿಸಿದ. ಇದನ್ನ ಬೆಂಬಲಿಸಲಿಕ್ಕಾಗಿ ಜನ್ರು ಇವರಿಗೆ ಒಂದು ಪಾಲನ್ನ ಕೊಡಬೇಕಂತ ರಾಜ ಹೇಳಿದ. ಜನ್ರು ಅದಕ್ಕೆ ಭಾರೀ ಬೆಂಬಲ ಕೊಟ್ಟರು.—2ಪೂರ್ವ 31:2-12.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು18.09 ಪುಟ 6 ಪ್ಯಾರ 14-15
‘ನೀವು ಈ ವಿಷಯಗಳಂತೆ ನಡೆದರೆ ಸಂತೋಷಿತರು’
14 ಬೇರೆಯವರು ಮಾತಾಡುವಾಗ ಕಿವಿಗೊಟ್ಟು ಕೇಳಬೇಕು. ಇದು ನಾವು ದೀನರಾಗಿದ್ದೇವೆ ಎಂದು ತೋರಿಸುವ ಮತ್ತೊಂದು ವಿಧ. ನಾವು “ಕಿವಿಗೊಡುವುದರಲ್ಲಿ ಶೀಘ್ರ” ಆಗಿರಬೇಕು ಎಂದು ಯಾಕೋಬ 1:19 ಹೇಳುತ್ತದೆ. ಈ ವಿಷಯದಲ್ಲಿ ಯೆಹೋವನು ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. (ಆದಿ. 18:32; ಯೆಹೋ. 10:14) ಅದಕ್ಕೊಂದು ಉದಾಹರಣೆ ವಿಮೋಚನಕಾಂಡ 32:11-14ರಲ್ಲಿದೆ. (ಓದಿ.) ಯೆಹೋವನಿಗೆ ಮೋಶೆಯ ಅಭಿಪ್ರಾಯವನ್ನು ಕೇಳುವ ಅಗತ್ಯ ಇರಲಿಲ್ಲ. ಆದರೂ ಅವನ ಮನಸ್ಸಲ್ಲಿರುವುದನ್ನು ಹೇಳಲು ಯೆಹೋವನು ಅವಕಾಶ ಕೊಟ್ಟನು. ನಿಮಗೆ ಒಬ್ಬ ವ್ಯಕ್ತಿ ಕೊಡುವ ಸಲಹೆಗಳಿಂದ ಅಷ್ಟು ಪ್ರಯೋಜನ ಆಗುವುದಿಲ್ಲ ಎಂದಿಟ್ಟುಕೊಳ್ಳಿ. ಅವರು ತಮ್ಮ ಅಭಿಪ್ರಾಯ ತಿಳಿಸುವಾಗ ನೀವು ತಾಳ್ಮೆಯಿಂದ ಕೇಳಿ ಆ ಸಲಹೆಯನ್ನು ಅನ್ವಯಿಸಿಕೊಳ್ಳಲು ಮನಸ್ಸು ಮಾಡುತ್ತೀರಾ? ಆದರೆ ಯೆಹೋವನು ತನ್ನ ಮೇಲೆ ನಂಬಿಕೆಯಿಟ್ಟು ಪ್ರಾರ್ಥಿಸುವ ಮಾನವರೆಲ್ಲರಿಗೂ ಕಿವಿಗೊಡುತ್ತಾನೆ.
15 ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೆಹೋವನು ತನ್ನ ಉನ್ನತ ಸ್ಥಾನದಿಂದ ಬಾಗಿ ಅಬ್ರಹಾಮ, ರಾಹೇಲ, ಮೋಶೆ, ಯೆಹೋಶುವ, ಮಾನೋಹ, ಎಲೀಯ, ಹಿಜ್ಕೀಯರಂಥ ಮನುಷ್ಯರಿಗೆ ಕಿವಿಗೊಟ್ಟ ಅಂದಮೇಲೆ ನಾನೂ ಅದನ್ನೇ ಮಾಡಬೇಕಲ್ವಾ? ನಾನು ಸಹೋದರ ಸಹೋದರಿಯರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಸಾಧ್ಯವಾದಾಗೆಲ್ಲ ಅದನ್ನು ಅನ್ವಯಿಸಿಕೊಳ್ಳುವ ಮೂಲಕ ಅವರನ್ನು ಗೌರವಿಸುತ್ತೇನಾ? ನನ್ನ ಸಭೆಯಲ್ಲಿ ಅಥವಾ ಮನೆಯಲ್ಲಿ ನಾನು ಯಾರಿಗಾದರೂ ಹೆಚ್ಚು ಗಮನ ಕೊಡಬೇಕಾಗಿದೆಯಾ? ಈ ವಿಷಯಗಳ ಬಗ್ಗೆ ನಾನೇನು ಮಾಡಬೇಕು ಅಂತ ಇದ್ದೇನೆ?’—ಆದಿ. 30:6; ನ್ಯಾಯ. 13:9; 1 ಅರ. 17:22; 2 ಪೂರ್ವ. 30:20.
ಜೂನ್ 12-18
ಬೈಬಲಿನಲ್ಲಿರುವ ನಿಧಿ|2 ಪೂರ್ವಕಾಲವೃತ್ತಾಂತ 32-33
“ಕಷ್ಟದಲ್ಲಿ ಇರೋರನ್ನ ಬಲಪಡಿಸಿ”
it-1-E ಪುಟ 204 ಪ್ಯಾರ 5
ಅಶ್ಶೂರ್ಯ
ಸನ್ಹೇರೀಬ. ಹಿಜ್ಕೀಯ ಅಶ್ಶೂರ್ಯರ ರಾಜನ ವಿರುದ್ಧ ತಿರುಗಿಬಿದ್ದ. (2ಅರ 18:7) ಅದಕ್ಕೆ ಸನ್ಹೇರೀಬ ಯೆಹೂದದ 46 ಪಟ್ಟಣಗಳ ಮೇಲೆ ದಾಳಿ ಮಾಡಿ ಅವುಗಳನ್ನ ವಶ ಮಾಡ್ಕೊಂಡ. (ಯೆಶಾ 36:1, 2 ಹೋಲಿಸಿ.) ಲಾಕೀಷಿನಲ್ಲಿದ್ದ ಅಶ್ಶೂರ್ಯರ ರಾಜ ಹಿಜ್ಕೀಯನಿಗೆ 300 ತಲಾಂತು ಬೆಳ್ಳಿ ಮತ್ತು 30 ತಲಾಂತು ಬಂಗಾರವನ್ನ ಕಪ್ಪವಾಗಿ ಕೊಡಬೇಕು ಅಂತ ಹೇಳಿದ. (2ಅರ 18:14-16; 2ಪೂರ್ವ 32:1; ಯೆಶಾ 8:5-8 ಹೋಲಿಸಿ.) ಅವನು ಕೇಳಿಕೊಂಡಿದ್ದನ್ನ ಹಿಜ್ಕೀಯ ಕೊಟ್ಟರೂ ಯೆರೂಸಲೇಮನ್ನ ತನಗೆ ಬಿಟ್ಟು ಕೊಡು ಅಂತ ಸನ್ಹೇರೀಬ ಸೇವಕರನ್ನ ಕಳಿಸಿ ಧಮ್ಕಿ ಹಾಕಿದ. (2ಅರ 18:17–19:34; 2ಪೂರ್ವ 32:2-20).
ಕಾವಲಿನಬುರುಜು13 11/15 ಪುಟ 19 ಪ್ಯಾರ 12
ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು—ಇಂದು ಯಾರು?
12 ನಮ್ಮ ಸ್ವಂತ ಶಕ್ತಿಯಿಂದ ಯಾವುದನ್ನು ಮಾಡಲು ಆಗುವುದಿಲ್ಲವೊ ಅದನ್ನು ನಮಗೋಸ್ಕರ ಮಾಡಲು ಯೆಹೋವನು ಯಾವಾಗಲೂ ಸಿದ್ಧನಿದ್ದಾನೆ. ಆದರೆ ನಮ್ಮಿಂದ ಏನು ಸಾಧ್ಯವಾಗುತ್ತದೊ ಅದನ್ನು ಮಾಡುವಂತೆ ಆತನು ನಿರೀಕ್ಷಿಸುತ್ತಾನೆ. ಅಂತೆಯೇ ಹಿಜ್ಕೀಯನು “ತನ್ನ ಸರದಾರರ ಮತ್ತು ಶೂರರ” ಜೊತೆ ಸಮಾಲೋಚನೆ ಮಾಡಿ, ‘ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸುವ’ ನಿರ್ಣಯ ಮಾಡಿದನು. ಅಲ್ಲದೆ ಹಿಜ್ಕೀಯನು “ಧೈರ್ಯಗೊಂಡು ಅಲ್ಲಲ್ಲಿ ಬಿದ್ದುಹೋದ ಪೌಳಿಗೋಡೆಯನ್ನು ಜೀರ್ಣೋದ್ಧಾರಮಾಡಿಸಿ ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿ . . . ಅನೇಕಾಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.” (2 ಪೂರ್ವ. 32:3-5) ಆ ಸಮಯದಲ್ಲಿ ಯೆಹೋವನು ಕುರಿಗಳಂಥ ತನ್ನ ಜನರನ್ನು ಪಾಲಿಸಲು ಮತ್ತು ಸಂರಕ್ಷಿಸಲು ಹಲವಾರು ಧೀರ ಪುರುಷರನ್ನು ಅಂದರೆ ಹಿಜ್ಕೀಯ, ಅವನ ಸರದಾರರು ಹಾಗೂ ಆಧ್ಯಾತ್ಮಿಕವಾಗಿ ಬಲಿಷ್ಠರಾಗಿದ್ದ ಪ್ರವಾದಿಗಳನ್ನು ಉಪಯೋಗಿಸಿದನು.
ಕಾವಲಿನಬುರುಜು13 11/15 ಪುಟ 19 ಪ್ಯಾರ 13
ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು—ಇಂದು ಯಾರು?
13 ಬಾವಿಗಳನ್ನು ಮುಚ್ಚಿಸುವ, ಪಟ್ಟಣದ ಗೋಡೆಗಳನ್ನು ಭದ್ರಪಡಿಸುವ ಕೆಲಸಕ್ಕಿಂತಲೂ ಹೆಚ್ಚು ಮಹತ್ವವಾದ ಕೆಲಸವನ್ನು ಹಿಜ್ಕೀಯ ಮುಂದೆ ಮಾಡಿದನು. ಕಾಳಜಿಭರಿತ ಕುರಿಪಾಲಕನಾಗಿದ್ದ ಅವನು ಜನರನ್ನು ಒಟ್ಟುಸೇರಿಸಿ ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸಲು ಹೀಗಂದನು: ‘ಅಶ್ಶೂರದ ಅರಸನಿಗೆ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು. ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು.’ ಎಂಥ ಮನಮುಟ್ಟುವ ಮಾತುಗಳಿವು! ಯೆಹೋವನು ತನ್ನ ಜನರಿಗಾಗಿ ಕಾದಾಡುವನು ಎಂದು ಹಿಜ್ಕೀಯನು ನೆನಪಿಸಿದನು. ಇದು ಜನರ ನಂಬಿಕೆಯನ್ನು ಬಲಪಡಿಸಿ ಅವರಲ್ಲಿ ಧೈರ್ಯ ತುಂಬಿತು. ಯೆಹೂದ್ಯರು “ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು.” ಗಮನಿಸಿ, ಜನರಲ್ಲಿ ಧೈರ್ಯ ತುಂಬಿದ್ದು ‘ಹಿಜ್ಕೀಯನ ಮಾತುಗಳೇ.’ ಹಿಜ್ಕೀಯ, ಅವನ ಶೂರರು, ಸರದಾರರು, ಮಾತ್ರವಲ್ಲ ಪ್ರವಾದಿಗಳಾದ ಮೀಕ ಮತ್ತು ಯೆಶಾಯ ಇವರೆಲ್ಲ ಯೆಹೋವನು ತನ್ನ ಪ್ರವಾದಿಯ ಮೂಲಕ ಮುಂತಿಳಿಸಿದಂತೆಯೇ ಅತ್ಯುತ್ತಮ ಕುರಿಪಾಲಕರಾಗಿ ಕ್ರಿಯೆಗೈದರು.—2 ಪೂರ್ವ. 32:7, 8; ಮೀಕ 5:5, 6 ಓದಿ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು21.10 ಪುಟ 4 ಪ್ಯಾರ 11-12
ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಏನು?
11 ಮನಸ್ಸೆ ಪ್ರಾರ್ಥನೆ ಮಾಡ್ತಿದ್ದಾಗ ಅವನ ಮನಸ್ಸು ಬದಲಾಗ್ತಾ ಇರೋದನ್ನ ಯೆಹೋವ ದೇವರು ನೋಡಿದ್ರು. ಅದಕ್ಕೆ ಅವನನ್ನ ಕ್ಷಮಿಸಿದ್ರು, ಸ್ವಲ್ಪ ಸಮಯ ಆದಮೇಲೆ ಅವನ ಅಧಿಕಾರನ ವಾಪಸ್ ಕೊಟ್ರು. ಅವನು ರಾಜ ಆದಮೇಲೆ ತಾನು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ತೋರಿಸಿಕೊಟ್ಟ, ಒಳ್ಳೆಯವನಾದ. ಆಹಾಬ ಏನನ್ನ ಮಾಡೋಕೆ ತಪ್ಪಿ ಹೋದನೋ ಅದನ್ನ ಇವನು ಮಾಡಿದ. ಸುಳ್ಳು ದೇವರುಗಳನ್ನ ಆರಾಧನೆ ಮಾಡೋದನ್ನ ಬಿಟ್ಟುಬಿಟ್ಟ. ಯೆಹೋವ ದೇವರ ಆರಾಧನೆ ಮಾಡೋಕೆ ಜನರಿಗೆ ಪ್ರೋತ್ಸಾಹ ಕೊಟ್ಟ. (2 ಪೂರ್ವಕಾಲವೃತ್ತಾಂತ 33:15, 16 ಓದಿ.) ಇದನ್ನ ಮಾಡೋದು ಮನಸ್ಸೆಗೆ ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅವನೇ ತನ್ನ ಕುಟುಂಬದವರನ್ನ, ಪ್ರಜೆಗಳನ್ನ, ಪ್ರಧಾನರನ್ನ ತಪ್ಪುದಾರಿಗೆ ಎಳೆದುಬಿಟ್ಟಿದ್ದ. ಇಷ್ಟು ವರ್ಷಗಳಿಂದ ಹೀಗಿದ್ದ ಜನರನ್ನ ಸರಿದಾರಿಗೆ ತರೋಕೆ ಅವನಿಗೆ ತುಂಬ ಧೈರ್ಯ ಮತ್ತು ನಂಬಿಕೆ ಬೇಕಿತ್ತು. ಅವನಿಗೆ ವಯಸ್ಸಾಗಿದ್ರೂ ತನ್ನ ತಪ್ಪುಗಳನ್ನ ತಿದ್ದೋಕೆ ಹೆಜ್ಜೆ ತಗೊಂಡ. ಇದು ಅವನ ಮೊಮ್ಮಗನಾದ ಯೋಷೀಯನ ಮೇಲೆ ಒಳ್ಳೇ ಪ್ರಭಾವ ಬೀರಿರಬೇಕು. ಯೋಷೀಯನೂ ಮುಂದೆ ಒಳ್ಳೇ ರಾಜನಾದ.—2 ಅರ. 22:1, 2.
12 ಮನಸ್ಸೆಯಿಂದ ನಾವು ಏನು ಕಲಿಬಹುದು? ಅವನು ದೇವರ ಮುಂದೆ ತನ್ನನ್ನ ತಗ್ಗಿಸಿಕೊಂಡ. ಅಷ್ಟೇ ಅಲ್ಲ, ಇನ್ನೂ ಕೆಲವು ವಿಷಯಗಳನ್ನ ಮಾಡಿದ. ದೇವರ ಹತ್ರ ‘ಕರುಣೆ ತೋರಿಸಪ್ಪಾ’ ಅಂತ ಬೇಡಿಕೊಂಡ. ಅವನು ಒಳ್ಳೆಯವನಾದ. ತಾನು ಮಾಡಿದ ಕೆಲಸಗಳಿಂದ ಆದ ನಷ್ಟವನ್ನ ಸರಿಮಾಡೋಕೆ ತನ್ನ ಕೈಯಿಂದ ಆಗಿದ್ದೆಲ್ಲಾ ಮಾಡಿದ. ಅವನೂ ಯೆಹೋವ ದೇವರನ್ನ ಆರಾಧಿಸಿದ, ಜನರಿಗೂ ಅದನ್ನೇ ಮಾಡೋಕೆ ಹೇಳಿದ. ತುಂಬ ಕೆಟ್ಟ ಕೆಲಸ ಮಾಡಿರೋರನ್ನ, ದೊಡ್ಡ-ದೊಡ್ಡ ಪಾಪ ಮಾಡಿರೋರನ್ನೂ, ಯೆಹೋವ ದೇವರು ಕ್ಷಮಿಸ್ತಾರೆ. ಯಾಕಂದ್ರೆ ‘ಯೆಹೋವ ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿರೋ’ ದೇವರು. (ಕೀರ್ತ. 86:5) ಆದ್ರೆ ಯಾರು ಮನಸಾರೆ ಪಶ್ಚಾತ್ತಾಪ ಪಡ್ತಾರೋ ಅವರಿಗೆ ಮಾತ್ರ ಯೆಹೋವನ ಕ್ಷಮೆ ಸಿಗೋದು ಅಂತ ಮನಸ್ಸೆಯ ಉದಾಹರಣೆಯಿಂದ ಗೊತ್ತಾಗುತ್ತೆ.
ಜೂನ್ 19-25
ಬೈಬಲಿನಲ್ಲಿರುವ ನಿಧಿ | 2 ಪೂರ್ವಕಾಲವೃತ್ತಾಂತ 34-36
“ದೇವರ ವಾಕ್ಯದಿಂದ ನೀವು ಪೂರ್ತಿ ಪ್ರಯೋಜನ ಪಡ್ಕೊಳ್ತಿದ್ದೀರಾ?”
it-1-E ಪುಟ 1157 ಪ್ಯಾರ 4
ಯೋಷೀಯ ನಿಯಮ ಪುಸ್ತಕದಲ್ಲಿರೋ ಮಾತುಗಳನ್ನ ಕೇಳಿಸಿಕೊಂಡಾಗ ತನಗೆ ಯೆಹೋವನ ಮಾರ್ಗದರ್ಶನ ಬೇಕು ಅಂತ ಕೇಳಿಕೊಂಡ. ಅದಕ್ಕೆ ಕೆಲವು ಜನ್ರನ್ನ ಪ್ರವಾದಿನಿ ಹುಲ್ದಳ ಹತ್ತಿರ ಕಳಿಸ್ತಾನೆ. ಅವಳು ಯೆಹೋವನ ಸಂದೇಶ ಏನು ಅಂತ ಅವರಿಗೆ ಹೇಳಿದಳು. ಧರ್ಮಭ್ರಷ್ಟರಾಗಿರೋ ಜನ್ರು ನಿಯಮಪುಸ್ತಕದಲ್ಲಿ ಹೇಳಿರೋ ಎಲ್ಲ ವಿಪತ್ತುಗಳನ್ನ ಅನುಭವಿಸ್ತಾರೆ ಅಂತ ಹೇಳಿದಳು. ಆದರೆ ಯೋಷೀಯ ದೀನತೆ ತೋರಿಸಿದ್ರಿಂದ ಅವನು ಬದುಕಿರೋ ತನಕ ಈ ಕಷ್ಟವನ್ನ ದೇವರು ತರಲ್ಲ ಅಂತನೂ ಹೇಳಿದಳು.—2ಅರ 22:8-20; 2ಪೂರ್ವ 34:14-28.
ಕಾವಲಿನಬುರುಜು09 6/15 ಪುಟ 10 ಪ್ಯಾರ 20
ಯೆಹೋವನ ಆಲಯಕ್ಕಾಗಿ ಅಭಿಮಾನವುಳ್ಳವರಾಗಿರಿ!
20 ರಾಜ ಯೋಷೀಯನು ಏರ್ಪಡಿಸಿದ ದೇವಾಲಯದ ಪುನಃಸ್ಥಾಪನೆಯ ಕೆಲಸದ ಸಮಯದಲ್ಲಿ, “ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥ” ಮಹಾ ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು. ಹಿಲ್ಕೀಯನು ಅದನ್ನು ಅರಸನ ಲೇಖಕನಾದ ಶಾಫಾನನ ಕೈಯಲ್ಲಿ ಕೊಟ್ಟನು ಮತ್ತು ಅವನದನ್ನು ಅರಸನ ಮುಂದೆ ಓದಿದನು. (2 ಪೂರ್ವಕಾಲವೃತ್ತಾಂತ 34:14-18 ಓದಿ.) ಪರಿಣಾಮವೇನಾಗಿತ್ತು? ತಕ್ಷಣ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು ಮತ್ತು ಯೆಹೋವನನ್ನು ವಿಚಾರಿಸಿ ಬರುವಂತೆ ಆ ಪುರುಷರಿಗೆ ಹೇಳಿದನು. ದೇವರು ಪ್ರವಾದಿನಿ ಹುಲ್ದಳ ಮೂಲಕ, ಯೆಹೂದದಲ್ಲಿ ನಡೆಯುತ್ತಿದ್ದ ಕೆಲವೊಂದು ಧಾರ್ಮಿಕ ಪದ್ಧತಿಗಳನ್ನು ಖಂಡಿಸುವ ಸಂದೇಶವನ್ನು ಕೊಟ್ಟನು. ಯೆಹೂದದಲ್ಲಿ ಇದೆಲ್ಲಾ ನಡೆಯುತ್ತಿದ್ದರೂ ಯೋಷೀಯನು ವಿಗ್ರಹಾರಾಧನೆಯನ್ನು ತೊಡೆದುಹಾಕಲು ಮಾಡುತ್ತಿದ್ದ ಪ್ರಯತ್ನಗಳನ್ನು ಯೆಹೋವನು ಗಮನಿಸಿದ್ದನು. ಆದ್ದರಿಂದ ಆ ಇಡೀ ಜನಾಂಗದ ಮೇಲೆ ವಿಪತ್ತನ್ನು ಬರಮಾಡುವುದಾಗಿ ಯೆಹೋವನು ಮುಂತಿಳಿಸಿದ್ದರೂ ಯೋಷೀಯನಾದರೋ ಆತನ ಅನುಗ್ರಹಕ್ಕೆ ಪಾತ್ರನಾದನು. (2 ಪೂರ್ವ. 34:19-28) ಇದರಿಂದ ನಾವೇನು ಕಲಿಯಬಲ್ಲೆವು? ನಮಗೂ ಯೋಷೀಯನಿಗಿದ್ದಂಥದ್ದೇ ಅಪೇಕ್ಷೆಯಿದೆ. ನಾವು ಯೆಹೋವನ ನಿರ್ದೇಶನವನ್ನು ಸ್ವೀಕರಿಸಲು ತಡಮಾಡಬಾರದು ಮತ್ತು ಆರಾಧನೆಯಲ್ಲಿ ಧರ್ಮಭ್ರಷ್ಟತೆ ಹಾಗೂ ಅಪನಂಬಿಗಸ್ತಿಕೆ ನುಸುಳಿದರೆ ಏನಾಗಬಲ್ಲದು ಎಂಬುದರ ಕುರಿತು ಗಂಭೀರವಾಗಿ ಯೋಚಿಸಬೇಕು. ಯೋಷೀಯನ ವಿಷಯದಲ್ಲಾದಂತೆ, ಸತ್ಯಾರಾಧನೆಗಾಗಿ ನಮಗಿರುವ ಅಭಿಮಾನವನ್ನು ಯೆಹೋವನು ಮೆಚ್ಚುವನು ಎಂಬ ಭರವಸೆ ನಮಗಿರಬಲ್ಲದು.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.03 ಪುಟ 27 ಪ್ಯಾರ 15-17
ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ
15 ಕೊನೆಯದಾಗಿ ಯೋಷೀಯನ ಬಗ್ಗೆ ಚರ್ಚಿಸೋಣ. ಅವನಿಂದ ನಮಗೇನು ಪಾಠ? ಅವನೊಬ್ಬ ಒಳ್ಳೇ ರಾಜನಾಗಿದ್ದ. ಆದರೆ ಅವನು ಮಾಡಿದ ತಪ್ಪಿನಿಂದ ಅವನ ಜೀವವನ್ನೇ ಕಳೆದುಕೊಂಡ. (2 ಪೂರ್ವಕಾಲವೃತ್ತಾಂತ 35:20-22 ಓದಿ.) ಏನಾಯಿತು? ಯೋಷೀಯನು ಐಗುಪ್ತದ ರಾಜನಾದ ನೆಕೋ ಜೊತೆ ಯುದ್ಧಕ್ಕಿಳಿದ. ಅವನು ಆ ಯುದ್ಧಮಾಡುವ ಅಗತ್ಯವೇ ಇರಲಿಲ್ಲ. ತನಗೆ ಯುದ್ಧಮಾಡಲು ಮನಸ್ಸಿಲ್ಲ ಎಂದೂ ನೆಕೋ ಹೇಳಿದ್ದ. ನೆಕೋವಿನ ಆ ಮಾತುಗಳು “ದೇವೋಕ್ತಿ” ಆಗಿದ್ದವೆಂದು ಬೈಬಲ್ ಹೇಳುತ್ತದೆ. ಆದರೂ ಯೋಷೀಯ ಯುದ್ಧಕ್ಕೆ ಕೈಹಾಕಿ ಅದರಲ್ಲಿ ಸತ್ತುಹೋದ. ಆದರೆ ಅವನು ಯುದ್ಧಕ್ಕಿಳಿದಿದ್ದಾದರೂ ಯಾಕೆ? ಕಾರಣವನ್ನು ಬೈಬಲ್ ತಿಳಿಸುವುದಿಲ್ಲ.
16 ನೆಕೋವಿನ ಮಾತನ್ನು ಅಲಕ್ಷ್ಯಮಾಡದೇ ಅದನ್ನು ಯೆಹೋವನೇ ಹೇಳಿರಬಹುದಾ ಅಂತ ಯೋಷೀಯನು ತಿಳಿದುಕೊಳ್ಳಬೇಕಿತ್ತು. ಹೇಗೆ? ಯೆಹೋವನ ಪ್ರವಾದಿಯಾಗಿದ್ದ ಯೆರೆಮೀಯನನ್ನು ಕೇಳಬಹುದಿತ್ತು. (2 ಪೂರ್ವ. 35:23, 25) ಅಷ್ಟುಮಾತ್ರವಲ್ಲ, ನೆಕೋ ಯೆರೂಸಲೇಮಿನ ಮೇಲೆ ದಾಳಿ ಮಾಡಲಿಕ್ಕೆ ಬರಲಿಲ್ಲ. ಬದಲಾಗಿ ಇನ್ನೊಂದು ಜನಾಂಗದ ಮೇಲೆ ದಾಳಿ ಮಾಡಲು ಹೋಗುತ್ತಿದ್ದನು. ಅವನು ಯೆಹೋವನನ್ನಾಗಲಿ, ಆತನ ಜನರನ್ನಾಗಲಿ ಅವಮಾನಿಸಿರಲೂ ಇಲ್ಲ. ಯೋಷೀಯ ನಿರ್ಣಯ ಮಾಡುವ ಮುಂಚೆ ಇದೆಲ್ಲದ್ದರ ಬಗ್ಗೆ ಚೆನ್ನಾಗಿ ಯೋಚಿಸಬೇಕಿತ್ತು. ಇದರಿಂದ ನಮಗೇನು ಪಾಠ? ಒಂದು ಸಮಸ್ಯೆ ಎದ್ದಾಗ ನಿರ್ಣಯ ಮಾಡುವ ಮುಂಚೆ, ನಾವೇನು ಮಾಡುವಂತೆ ಯೆಹೋವನು ಬಯಸುತ್ತಾನೆಂದು ಮೊದಲು ತಿಳಿದುಕೊಳ್ಳಬೇಕು.
17 ನಾವೊಂದು ನಿರ್ಣಯ ಮಾಡಬೇಕಾಗಿರುವಾಗ, ಸಂಬಂಧಪಟ್ಟ ಬೈಬಲ್ ತತ್ವಗಳು ಯಾವುದು, ಅವುಗಳನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎನ್ನುವುದರ ಕುರಿತು ಮೊದಲು ಯೋಚಿಸಬೇಕು. ಕೆಲವೊಮ್ಮೆ ನಮ್ಮ ಪ್ರಕಾಶನಗಳಲ್ಲಿ ಹೆಚ್ಚು ಸಂಶೋಧನೆ ಮಾಡಬೇಕಾಗಬಹುದು ಅಥವಾ ಒಬ್ಬ ಹಿರಿಯನ ಸಲಹೆ ಕೇಳಬೇಕಾಗಬಹುದು. ಆಗ ಆ ಹಿರಿಯನು ಇನ್ನೂ ಹೆಚ್ಚು ಬೈಬಲ್ ತತ್ವಗಳ ಕುರಿತು ಯೋಚಿಸುವಂತೆ ಸಹಾಯ ಮಾಡಬಲ್ಲನು. ಈ ಸನ್ನಿವೇಶ ಕಲ್ಪಿಸಿಕೊಳ್ಳಿ: ಒಬ್ಬ ಸಹೋದರಿ ಒಂದು ನಿರ್ದಿಷ್ಟ ದಿನ ಸೇವೆಗೆ ಹೋಗಬೇಕೆಂದು ನಿರ್ಧರಿಸಿದ್ದಾಳೆ. (ಅ. ಕಾ. 4:20) ಆದರೆ ಆ ದಿನ ಬಂದಾಗ, ಸತ್ಯದಲ್ಲಿಲ್ಲದ ಅವಳ ಗಂಡ ಅವಳಿಗೆ ಸೇವೆಗೆ ಹೋಗಬೇಡ ಅಂತ ಹೇಳುತ್ತಾನೆ. ‘ನಿನ್ನ ಜೊತೆ ಸಮಯ ಕಳೆದು ತುಂಬ ದಿನ ಆಯ್ತು, ಎಲ್ಲಾದರೂ ಹೊರಗೆ ಹೋಗೋಣ’ ಅಂತ ಹೇಳುತ್ತಾನೆ. ಆಗ ಈ ಸಹೋದರಿ ಸರಿಯಾದ ನಿರ್ಣಯ ಮಾಡಲಿಕ್ಕಾಗಿ ಕೆಲವೊಂದು ಬೈಬಲ್ ವಚನಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾಳೆ. ದೇವರಿಗೆ ವಿಧೇಯತೆ ತೋರಿಸಬೇಕು ಮತ್ತು ಯೇಸು ಆಜ್ಞೆ ಕೊಟ್ಟಂತೆ ಶಿಷ್ಯರನ್ನಾಗಿ ಮಾಡುವ ಕೆಲಸ ಮಾಡಬೇಕೆಂದು ಆಕೆಗೆ ಗೊತ್ತು. (ಮತ್ತಾ. 28:19, 20; ಅ. ಕಾ. 5:29) ಹೆಂಡತಿಯಾಗಿ ತಾನು ಗಂಡನಿಗೆ ಅಧೀನಳಾಗಿರಬೇಕು ಮತ್ತು ದೇವರ ಸೇವಕಳಾಗಿ ತಾನು ನ್ಯಾಯಸಮ್ಮತತೆ ತೋರಿಸಬೇಕೆಂದೂ ನೆನಪಿಗೆ ತರುತ್ತಾಳೆ. (ಎಫೆ. 5:22-24; ಫಿಲಿ. 4:5) ಆಕೆ ಸೇವೆಗೆ ಹೋಗದಂತೆ ಗಂಡ ತಡೆಯುತ್ತಿದ್ದಾನಾ ಅಥವಾ ಆಕೆಯ ಜೊತೆ ಸಮಯ ಕಳೆಯಲು ಇಷ್ಟಪಡುವುದರಿಂದ ಬರೀ ಆ ದಿನ ಹೋಗಬೇಡ ಅಂತ ಹೇಳುತ್ತಿದ್ದಾನಾ? ಯೆಹೋವನ ಸೇವಕರಾದ ನಾವು ಆತನಿಗೆ ಮೆಚ್ಚಿಕೆಯಾಗುವ, ನ್ಯಾಯಸಮ್ಮತವಾದ ನಿರ್ಣಯಗಳನ್ನು ಮಾಡಬೇಕು.
ಜೂನ್ 26–ಜುಲೈ 2
ಬೈಬಲಿನಲ್ಲಿರುವ ನಿಧಿ | ಎಜ್ರ 1-3
“ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ”
ಕಾವಲಿನಬುರುಜು22.03 ಪುಟ 14 ಪ್ಯಾರ 1
ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ?
ಯೆಹೂದ್ಯರು ಬಾಬೆಲಿನಲ್ಲಿ ಹತ್ತಾರು ವರ್ಷಗಳಿಂದ ಕೈದಿಗಳಾಗಿದ್ದಾರೆ. ಈಗ ಅವರನ್ನೆಲ್ಲಾ ಬಿಡುಗಡೆ ಮಾಡಬೇಕಂತ ಯೆಹೋವ ದೇವರು ಪರ್ಷಿಯದ ರಾಜ “ಕೋರೆಷನ ಮನಸ್ಸನ್ನ ಪ್ರಚೋದಿಸಿದನು.” ಆಗ ರಾಜ ಯೆಹೂದ್ಯರು ತಮ್ಮ ಸ್ವದೇಶಕ್ಕೆ ವಾಪಸ್ಸು ಹೋಗಿ “ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು” ಅಂತ ಆಜ್ಞೆ ಕೊಟ್ಟ. (ಎಜ್ರ 1:1, 3) ಇದನ್ನ ಕೇಳಿದಾಗ ಅಲ್ಲಿದ್ದ ಯೆಹೂದ್ಯರು ಖುಷಿಯಿಂದ ಕುಣಿದು ಕುಪ್ಪಳಿಸಿರಬೇಕು! ಯಾಕಂದ್ರೆ ಇದ್ರಿಂದ ಅವರು ಸ್ವದೇಶಕ್ಕೆ ಹೋಗಿ ಸತ್ಯದೇವರಾದ ಯೆಹೋವನ ಶುದ್ಧಾರಾಧನೆಯನ್ನು ಪುನಃ ಶುರುಮಾಡೋಕೆ ಆಯ್ತು.
ಕಾವಲಿನಬುರುಜು17.10 ಪುಟ 26 ಪ್ಯಾರ 2
ರಥಗಳು ಮತ್ತು ಕಿರೀಟ ನಿಮ್ಮನ್ನು ಸಂರಕ್ಷಿಸುತ್ತವೆ
2 ಯೆರೂಸಲೇಮಿಗೆ ಹಿಂದಿರುಗಿ ಬಂದ ಯೆಹೂದ್ಯರೆಲ್ಲರೂ ಯೆಹೋವನ ಆರಾಧಕರಾಗಿದ್ದರು ಎಂದು ಜೆಕರ್ಯನಿಗೆ ತಿಳಿದಿತ್ತು. ಇವರೆಲ್ಲರೂ ‘ದೇವರ ಪ್ರೇರಣೆಗೆ ಒಳಗಾಗಿ’ ಬಾಬೆಲ್ನಲ್ಲಿದ್ದ ತಮ್ಮ ಮನೆ-ವ್ಯಾಪಾರ ಎಲ್ಲ ಬಿಟ್ಟು ಯೆರೂಸಲೇಮಿಗೆ ಬಂದಿದ್ದರು. (ಎಜ್ರ 1:2, 3, 5) ತಮಗೆ ಚಿರಪರಿಚಿತವಾಗಿದ್ದ ದೇಶವನ್ನು ಬಿಟ್ಟು ಅವರಲ್ಲಿ ಹೆಚ್ಚಿನವರು ಹಿಂದೆಂದೂ ನೋಡಿರದ ದೇಶಕ್ಕೆ ಬಂದಿದ್ದರು. ಯೆಹೋವನ ಆಲಯವನ್ನು ಪುನಃ ಕಟ್ಟುವ ಕೆಲಸ ಈ ಯೆಹೂದ್ಯರಿಗೆ ಎಷ್ಟು ಪ್ರಾಮುಖ್ಯವಾಗಿತ್ತೆಂದರೆ, ಅವರು ಗುಡ್ಡಗಾಡು ಪ್ರದೇಶದಲ್ಲಿ 1,600 ಕಿ.ಮೀ. ದೂರದ ಅಪಾಯಕರ ಪ್ರಯಾಣ ಮಾಡಿ ಯೆರೂಸಲೇಮಿಗೆ ಬಂದರು.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 1/15 ಪುಟ 19 ಪ್ಯಾರ 2
ಎಜ್ರ ಪುಸ್ತಕದ ಮುಖ್ಯಾಂಶಗಳು
1:3-6. ಬಾಬೆಲಿನಲ್ಲಿ ಉಳಿದಿದ್ದ ಕೆಲವು ಮಂದಿ ಇಸ್ರಾಯೇಲ್ಯರಂತೆ, ಯೆಹೋವನ ಸಾಕ್ಷಿಗಳಲ್ಲಿ ಅನೇಕ ಮಂದಿ ಇಂದು ಪೂರ್ಣ ಸಮಯದ ಸೇವೆಯನ್ನು ಮಾಡಲಾರರು ಇಲ್ಲವೆ ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಲಾರರು. ಆದರೂ ಅವರು, ಯಾರು ಅಂಥ ಸೇವೆಯನ್ನು ಮಾಡಬಲ್ಲರೊ ಅವರನ್ನು ಬೆಂಬಲಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ, ಹಾಗೂ ರಾಜ್ಯ ಸಾರುವಿಕೆಯ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಸ್ವಯಂಪ್ರೇರಿತ ದಾನಗಳನ್ನು ಕೊಡುತ್ತಾರೆ.