ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಜನವರಿ ಪು. 12-13
  • ಫೆಬ್ರವರಿ 19-25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 19-25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಜನವರಿ ಪು. 12-13

ಫೆಬ್ರವರಿ 19-25

ಕೀರ್ತನೆ 8-10

ಗೀತೆ 138 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಯೆಹೋವನೇ, ನಾನು . . . ನಿನ್ನನ್ನ ಹೊಗಳ್ತೀನಿ”!

(10 ನಿ.)

ಯೆಹೋವ ನಮಗಾಗಿ ಎಷ್ಟೋ ಒಳ್ಳೇ ವಿಷ್ಯಗಳನ್ನ ಮಾಡಿದ್ದಾನೆ (ಕೀರ್ತ 8:3-6; ಕಾವಲಿನಬುರುಜು21.08 ಪುಟ 3 ಪ್ಯಾರ 6)

ಯೆಹೋವ ಮಾಡಿರೋ ಒಳ್ಳೇ ವಿಷ್ಯಗಳ ಬಗ್ಗೆ ಬೇರೆಯವ್ರಿಗೆ ಹೇಳ್ತಾ ಆತನನ್ನ ಹೊಗಳ್ತೀವಿ (ಕೀರ್ತ 9:1; ಕಾವಲಿನಬುರುಜು20.05 ಪುಟ 23 ಪ್ಯಾರ 10)

ಯೆಹೋವನಿಗಾಗಿ ಹಾಡುಗಳನ್ನೂ ಹಾಡಿ ಆತನನ್ನ ಹೊಗಳ್ತೀವಿ (ಕೀರ್ತ 9:02; ಕಾವಲಿನಬುರುಜು22.04 ಪುಟ 7 ಪ್ಯಾರ 13)

ಚಿತ್ರಗಳು: ನಾವು ಯೆಹೋವನನ್ನ ಹೇಗೆಲ್ಲಾ ಹೊಗಳಬಹುದು ತೋರಿಸಲಾಗಿದೆ. 1. ಒಬ್ಬ ವಯಸ್ಸಾದ ಸಹೋದರಿ ತಮ್ಮನ್ನ ನೋಡ್ಕೊಳ್ತಿರೋ ನರ್ಸಿಗೆ ಸಿಹಿಸುದ್ದಿ ಸಾರ್ತಿದ್ದಾರೆ. 2. ಸಹೋದರ ಸಹೋದರಿಯರು ಕೂಟದಲ್ಲಿ ಹಾಡ್ತಿದ್ದಾರೆ. 3. ಒಬ್ಬ ಚಿಕ್ಕ ಹುಡುಗ ಕೂಟದಲ್ಲಿ ಉತ್ರ ಹೇಳೋಕೆ ಕೈ ಎತ್ತಿದ್ದಾನೆ. 4. ಒಬ್ಬ ಸಹೋದರ ರಾಜ್ಯ ಸಭಾಗೃಹ ಕ್ಲೀನ್‌ ಮಾಡೋಕೆ ಸಹಾಯ ಮಾಡ್ತಿದ್ದಾನೆ. 5. ಒಬ್ಬಳು ಹುಡುಗಿ ತನ್ನ ಕ್ಲಾಸ್‌ಮೇಟಿಗೆ ಸಿಹಿಸುದ್ದಿ ಸಾರ್ತಿದ್ದಾಳೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಯೆಹೋವನನ್ನ ಇನ್ನೂ ಹೇಗೆಲ್ಲ ಹೊಗಳಬಹುದು?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 8:3 ಮತ್ತು ಪಾದಟಿಪ್ಪಣಿ—ಕೀರ್ತನೆಗಾರ ಯಾವುದನ್ನ ದೇವರ ಕೈಕೆಲಸ ಅಂತ ಹೇಳ್ತಿದ್ದಾನೆ? (it-1-E ಪುಟ 832)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 10:1-18 (ಪ್ರಗತಿ ಪಾಠ 11)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಮನೆಯವರು ದೇವರನ್ನ ನಂಬಲ್ಲ ಅಂತ ಹೇಳ್ತಾರೆ. (ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 4)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಹೋದ ಸಲ ಮನೆಯವರು ದೇವರನ್ನ ನಂಬಲ್ಲ ಅಂತ ಹೇಳಿದ್ರು. ಆದ್ರೆ ಸೃಷ್ಟಿಕರ್ತ ಇದ್ದಾನೆ ಅನ್ನೋದಕ್ಕಿರೋ ಆಧಾರಗಳನ್ನ ತಿಳ್ಕೊಳ್ಳೋಕೆ ಅವ್ರಿಗೆ ಇಷ್ಟನೂ ಇರುತ್ತೆ. (ಪ್ರಗತಿ ಪಾಠ 7)

6. ಭಾಷಣ

(5 ನಿ.) ಕಾವಲಿನಬುರುಜು21.06 ಪುಟ 6-7 ಪ್ಯಾರ 15-18—ವಿಷ್ಯ: ದೇವರನ್ನ ಹೊಗಳೋಕೆ ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಸಹಾಯ ಮಾಡಿ. (ಪ್ರಗತಿ ಪಾಠ 10)

ನಮ್ಮ ಕ್ರೈಸ್ತ ಜೀವನ

ಗೀತೆ 9

7. ಅನೌಪಚಾರಿಕ ಸಾಕ್ಷಿಯನ್ನ ಸ್ವಾಭಾವಿಕವಾಗಿ ಮಾಡೋದು ಹೇಗೆ?

(10 ನಿ.) ಚರ್ಚೆ.

ನಾವು ಪ್ರತಿದಿನ ಬೇರೆಬೇರೆ ಜನ್ರ ಹತ್ರ ಮಾತಾಡ್ತೀವಿ. ಅವ್ರಿಗೆ ಯೆಹೋವನ ಬಗ್ಗೆ ಹೇಳುವಾಗ ನಾವು ಆತನನ್ನ ಹೊಗಳಿದ ಹಾಗಾಗುತ್ತೆ. (ಕೀರ್ತ 35:28) ಮೊದಮೊದ್ಲು ಅನೌಪಚಾರಿಕ ಸಾಕ್ಷಿ ಮಾಡೋಕೆ ನಮಗೆ ಭಯ ಆಗಬಹುದು. ಅದಕ್ಕೇ ಸಮಾನ್ಯವಾಗಿ ಮಾತಾಡ್ತಾ ಸಂಭಾಷಣೆ ಶುರು ಮಾಡಿ. ಆಮೇಲೆ ಅದನ್ನ ಮುಂದುವರಿಸ್ಕೊಂಡು ಹೋಗೋದು ಹೇಗೆ ಅಂತ ಕಲಿರಿ. ಆಗ ನಿಮಗೆ ಚೆನ್ನಾಗಿ ಸಿಹಿಸುದ್ದಿ ಸಾರೋಕಾಗುತ್ತೆ ಮತ್ತು ಖುಷಿಖುಷಿಯಾಗಿ ಸೇವೆ ಮಾಡೋಕಾಗುತ್ತೆ.

“‘ಶಾಂತಿಯ ಸಿಹಿಸುದ್ದಿಯನ್ನ’ ಸಾರಲು ಯಾವಾಗಲೂ ತಯಾರಾಗಿರಿ” ಅನ್ನೋ ವಿಡಿಯೋದ ಚಿತ್ರ ತೋರಿಸಿದ್ದಾರೆ. ಒಬ್ಬ ಸಹೋದರಿ ಹೋಟೆಲಿನಲ್ಲಿ ಕೂತಿದ್ದಾರೆ. ಅವರು ಪಕ್ಕದ ಟೋಬಲಲ್ಲಿರೋ ಒಬ್ಬ ಸ್ತ್ರೀ ಜೊತೆ ಸಂಭಾಷಣೆ ಶುರು ಮಾಡ್ತಿದ್ದಾರೆ.

“ಶಾಂತಿಯ ಸಿಹಿಸುದ್ದಿಯನ್ನ” ಸಾರಲು ಯಾವಾಗಲೂ ತಯಾರಾಗಿರಿ—ನೀವೇ ಮೊದಲ ಹೆಜ್ಜೆ ತೆಗೆದುಕೊಳ್ಳಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಅನೌಪಚಾರಿಕ ಸಾಕ್ಷಿಯನ್ನ ಚೆನ್ನಾಗಿ ಮಾಡೋಕೆ ಯಾವುದು ಸಹಾಯ ಮಾಡುತ್ತೆ ಅಂತ ಈ ವಿಡಿಯೋದಿಂದ ಕಲಿತ್ರಿ?

ಮಾತು ಶುರುಮಾಡೋಕೆ ಕೆಲವು ಸಲಹೆಗಳು:

  • ಮನೆಯಿಂದ ಹೊರಗೆ ಹೋದಾಗ ಯಾರ ಹತ್ರನಾದ್ರೂ ಮಾತಾಡೋಕೆ ಅವಕಾಶ ಸಿಗುತ್ತಾ ನೋಡಿ. ಒಳ್ಳೇ ಮನಸ್ಸಿನ ಜನ್ರನ್ನ ಹುಡುಕೋಕೆ ಯೆಹೋವನ ಹತ್ರ ಸಹಾಯ ಕೇಳಿ

  • ಜನ್ರನ್ನ ಪ್ರೀತಿಯಿಂದ ಮಾತಾಡಿಸಿ, ಅವರ ಮೇಲೆ ಕಾಳಜಿ ಇದೆ ಅಂತ ತೋರಿಸಿ. ಅವರ ಬಗ್ಗೆ ಏನಾದ್ರೂ ತಿಳ್ಕೊಳ್ಳೋಕೆ ಪ್ರಯತ್ನಿಸಿ. ಆಗ ಯಾವ ಬೈಬಲ್‌ ವಿಷ್ಯದ ಬಗ್ಗೆ ಮಾತಾಡಬಹುದು ಅಂತ ಗೊತ್ತಾಗುತ್ತೆ

  • ಸಾಧ್ಯವಾದ್ರೆ ಅವರ ನಂಬರ್‌ ತಗೊಳ್ಳಿ ಅಥವಾ ಅವರ ಮನೆ ಎಲ್ಲಿದೆ ಅಂತ ತಿಳ್ಕೊಳ್ಳಿ

  • ನೀವು ಸಾಕ್ಷಿ ಕೊಡೋ ಮುಂಚೆನೇ ಸಂಭಾಷಣೆ ನಿಂತುಹೋದ್ರೆ ಬೇಜಾರಾಗಬೇಡಿ

  • ಮಾತು ಮುಗಿದ ಮೇಲೆ ಆ ವ್ಯಕ್ತಿ ಬಗ್ಗೆ ಯೋಚ್ನೆ ಮಾಡಿ. jw.orgನಲ್ಲಿ ಅವ್ರಿಗೆ ಸಹಾಯ ಮಾಡೋ ಯಾವುದಾದ್ರೂ ಲೇಖನ ಅಥವಾ ಬೈಬಲ್‌ ವಚನ ಇದ್ರೆ ಅದ್ರ ಲಿಂಕನ್ನ ಅವ್ರಿಗೆ ಕಳಿಸಿ

ಇದನ್ನ ಮಾಡಿ ನೋಡಿ: ‘ಶನಿವಾರ, ಭಾನುವಾರ ಏನು ಮಾಡಿದ್ರಿ?’ ಅಂತ ಯಾರಾದ್ರೂ ಕೇಳಿದಾಗ, ಕೂಟದಲ್ಲಿ ಕಲಿತ ವಿಷ್ಯದ ಬಗ್ಗೆ ಅಥವಾ ನೀವು ಸಿಹಿಸುದ್ದಿ ಸಾರಿದ್ರ ಬಗ್ಗೆ ಹೇಳಿ.

8. ಸ್ಥಳೀಯ ಅಗತ್ಯಗಳು

(5 ನಿ.)

9. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 6ರ ಪ್ಯಾರ 1-8 ಮತ್ತು ವಿಭಾಗ 2ರ ಪರಿಚಯ

ಸಮಾಪ್ತಿ ಮಾತುಗಳು (3 ನಿ.) | ಗೀತೆ 45 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ