ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಜನವರಿ ಪು. 14-15
  • ಫೆಬ್ರವರಿ 26–ಮಾರ್ಚ್‌ 3

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 26–ಮಾರ್ಚ್‌ 3
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಜನವರಿ ಪು. 14-15

ಫೆಬ್ರವರಿ 26–ಮಾರ್ಚ್‌ 3

ಕೀರ್ತನೆ 11-15

ಗೀತೆ 134 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಶಾಂತಿ ತುಂಬಿರೋ ಹೊಸ ಲೋಕದಲ್ಲಿ ನಿಮ್ಮನ್ನ ಕಲ್ಪಿಸ್ಕೊಳ್ಳಿ

(10 ನಿ.)

ಜನ್ರು ನಿಯಮಗಳನ್ನ ಪಾಲಿಸದೇ ಇರೋದ್ರಿಂದ ಇವತ್ತು ಹಿಂಸೆ ತುಂಬಿದೆ (ಕೀರ್ತ 11:2, 3; ಕಾವಲಿನಬುರುಜು06 5/15 ಪುಟ 18 ಪ್ಯಾರ 3)

ಈ ಹಿಂಸೆನ ಯೆಹೋವ ಆದಷ್ಟು ಬೇಗ ತೆಗೆದುಹಾಕ್ತಾನೆ ಅಂತ ನಾವು ನಂಬಬಹುದು (ಕೀರ್ತ 11:5; ಕಾವಲಿನಬುರುಜು (ಸಾರ್ವಜನಿಕ)16.3 ಪುಟ 13 ಪ್ಯಾರ 5-6)

ಯೆಹೋವ ನಮ್ಮನ್ನ ಕಾಪಾಡ್ತಾನೆ ಅಂತ ಕೊಟ್ಟಿರೋ ಮಾತನ್ನ ಆಗಾಗ ನೆನಪಿಸ್ಕೊಳ್ತಾ ಇದ್ರೆ ಹೊಸ ಲೋಕ ಬರೋ ತನಕ ತಾಳ್ಮೆಯಿಂದ ಕಾಯೋಕೆ ಆಗುತ್ತೆ (ಕೀರ್ತ 13:5, 6; ಕಾವಲಿನಬುರುಜು17.08 ಪುಟ 7 ಪ್ಯಾರ 15)

ಒಂದು ಹುಡುಗಿ ಕಾಡಲ್ಲಿ ಇದ್ದಾಳೆ. ಅವಳು ಒಂದು ಮರದ ಕೆಳಗೆ ರಾತ್ರಿ ಹೊತ್ತು ನೆಮ್ಮದಿಯಿಂದ ಮಲಗಿದ್ದಾಳೆ. ಆ ಮರದ ಮೇಲೆ ಒಂದು ಕಪ್ಪು ಚಿರತೆ ಮಲಗಿದೆ.

ಇದನ್ನ ಮಾಡಿ ನೋಡಿ: ಯೆಹೆಜ್ಕೇಲ 34:25 ಓದಿ, ಅಲ್ಲಿ ಹೇಳಿರೋ ಜಾಗದಲ್ಲಿ ನೀವಿದ್ದೀರ ಅಂತ ಕಲ್ಪಿಸ್ಕೊಳ್ಳಿ.—kr-E ಪುಟ 236 ಪ್ಯಾರ 16.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 14:1—ಇಲ್ಲಿ ಹೇಳಿರೋ ಗುಣಗಳು ನಮಗೆ ಬಂದುಬಿಟ್ರೆ ಏನಾಗುತ್ತೆ? (ಕಾವಲಿನಬುರಜು13 9/15 ಪುಟ 19 ಪ್ಯಾರ 12)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 13:1–14:7 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ: ಸ್ಮರಣೆ ಕಾರ್ಯಕ್ರಮಕ್ಕೆ ಆಮಂತ್ರಿಸಿ. (ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(1 ನಿ.) ಮನೆ-ಮನೆ ಸೇವೆ: ಸ್ಮರಣೆ ಕಾರ್ಯಕ್ರಮಕ್ಕೆ ಆಮಂತ್ರಿಸಿ. (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 4)

6. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಸ್ಮರಣೆಗೆ ಕರೆದಾಗ ಆ ವ್ಯಕ್ತಿ ಆಸಕ್ತಿ ತೋರಿಸ್ತಾನೆ. (ಪ್ರೀತಿಸಿ-ಕಲಿಸಿ ಪಾಠ 7ರ ಪಾಯಿಂಟ್‌ 4)

7. ಶಿಷ್ಯರಾಗೋಕೆ ಕಲಿಸಿ

(5 ನಿ.) ಖುಷಿಯಾಗಿ ಬಾಳೋಣ ಪಾಠ 13ರ ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ. “ಇದನ್ನೂ ನೋಡಿ” ಅನ್ನೋ ಭಾಗದಲ್ಲಿ ಯಾವುದಾದ್ರೂ ಒಂದು ಲೇಖನದಿಂದ, ದೇವರಿಗೆ ಸುಳ್ಳು ಧರ್ಮದ ಬಗ್ಗೆ ಹೇಗನಿಸುತ್ತೆ ಅಂತ ವಿದ್ಯಾರ್ಥಿಗೆ ಅರ್ಥ ಮಾಡಿಸಿ. (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

ಗೀತೆ 49

8. “ವಿವೇಕ ಯುದ್ಧದ ಆಯುಧಗಳಿಗಿಂತ ಶ್ರೇಷ್ಠ”

(10 ನಿ.) ಚರ್ಚೆ.

“ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ—ಹನೋಕನನ್ನ, ಲೆಮೆಕನನ್ನಲ್ಲ” ಅನ್ನೋ ವಿಡಿಯೋದಲ್ಲಿರೋ ಒಬ್ಬ ಅಪ್ಪ ಬೈಬಲಿಂದ ಓದಿದ ವಿಷ್ಯದ ಬಗ್ಗೆ ಯೋಚಿಸ್ತಿದ್ದಾನೆ. ಜನ್ರು ಹನೋಕನನ್ನ ಕೊಲ್ಲೋಕೆ ಆಯುಧಗಳನ್ನ ಹಿಡ್ಕೊಂಡು ಅವನನ್ನ ಹುಡುಕ್ತಿರುವಾಗ ಹನೋಕ ಗುಹೆಯಲ್ಲಿ ಬಚ್ಚಿಟ್ಕೊಳ್ಳೋದನ್ನ ಯೋಚಿಸ್ತಿದ್ದಾನೆ.

ಇವತ್ತು ಎಲ್ಲೆಲ್ಲೂ ಹಿಂಸೆನೇ ತುಂಬಿದೆ. ಇದನ್ನ ನಾವು ನೋಡುವಾಗ ಅಥವಾ ನಮಗೆ ಯಾರಾದ್ರೂ ಹಿಂಸೆ ಕೊಟ್ಟಾಗ ತುಂಬ ಚಿಂತೆ ಆಗುತ್ತೆ. ಯೆಹೋವನಿಗೆ ಅದು ಅರ್ಥ ಆಗೋದ್ರಿಂದಾನೇ ನಮ್ಮನ್ನ ಕಾಪಾಡೋಕೆ ಆತನು ಬೈಬಲನ್ನ ಕೊಟ್ಟಿದ್ದಾನೆ. —ಕೀರ್ತ 12:5-7.

ಬೈಬಲಲ್ಲಿ ತುಂಬ ಬುದ್ಧಿಮಾತುಗಳಿವೆ. ಅವು “ಯುದ್ಧದ ಆಯುಧಗಳಿಗಿಂತ ಶ್ರೇಷ್ಠ.” (ಪ್ರಸಂ 9:18) ನಾವು ಹಿಂಸೆಗೆ ತುತ್ತಾಗದಿರೋಕೆ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ. ಅದು ಯಾವುದು ಅಂತ ನೋಡೋಣ.

  • ಪ್ರಸಂ 4:9, 10—ಅಪಾಯ ಬರೋ ಜಾಗದಲ್ಲಿ ಅಥವಾ ಪರಿಸ್ಥಿತಿಯಲ್ಲಿ ಒಬ್ರೇ ಇರಬೇಡಿ

  • ಜ್ಞಾನೋ 22:3—ಹೊರಗಡೆ ಇರುವಾಗ ಸುತ್ತಮುತ್ತ ಏನಾಗ್ತಿದೆ ಅಂತ ಗಮನಿಸ್ತಾ ಇರಿ

  • ಜ್ಞಾನೋ 26:17—ಬೇಡದೇ ಇರೋ ವಿಷ್ಯಕ್ಕೆ ತಲೆ ಹಾಕೋಕೆ ಹೋಗಬೇಡಿ

  • ಜ್ಞಾನೋ 17:14—ಜಗಳ ಆಗ್ತಿದೆ ಅಂತ ಗೊತ್ತಾದ್ರೆ ಅಥವಾ ಜನ್ರೆಲ್ಲ ಸೇರಿ ಗಲಾಟೆ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಅಲ್ಲಿಂದ ಜಾಗ ಖಾಲಿ ಮಾಡಿ

  • ಲೂಕ 12:15—ಆಸ್ತಿ-ಪಾಸ್ತಿ ಮತ್ತು ವಸ್ತುಗಳನ್ನ ಉಳಿಸ್ಕೊಳ್ಳೋಕೆ ಹೋಗಿ ಜೀವನೇ ಕಳ್ಕೊಬೇಡಿ

ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ—ಹನೋಕನನ್ನ, ಲೆಮೆಕನನ್ನಲ್ಲ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಹನೋಕನನ್ನ ನೆನಸ್ಕೊಂಡು ಆ ಸಹೋದರ ಯಾವ ತೀರ್ಮಾನ ಮಾಡಿದ್ರು? —ಇಬ್ರಿ 11:5

ಕೆಲವೊಮ್ಮೆ ನಾವು ನಮ್ಮನ್ನ ಮತ್ತು ನಮ್ಮ ವಸ್ತುಗಳನ್ನ ಕಾಪಾಡ್ಕೊಬೇಕಾಗುತ್ತೆ. ಆದ್ರೆ ಆ ಸಮಯದಲ್ಲಿ ಬೇರೆಯವ್ರ ಜೀವ ಹೋಗದೇ ಇರೋ ತರ, ಅವರ ರಕ್ತಾಪರಾಧ ನಮ್ಮ ಮೇಲೆ ಬರದೇ ಇರೋ ತರ ನೋಡ್ಕೊಬೇಕು.—ಕೀರ್ತ 51:14; ಜುಲೈ 2017ರ ಕಾವಲಿನಬುರುಜುವಿನಲ್ಲಿ ಇರೋ “ವಾಚಕರಿಂದ ಪ್ರಶ್ನೆಗಳು” ನೋಡಿ.

9. ಮಾರ್ಚ್‌ 2, ಶನಿವಾರದಂದು ಸ್ಮರಣೆಯ ಅಭಿಯಾನ ಶುರುವಾಗುತ್ತೆ

(5 ನಿ.) ಹಿರಿಯನಿಂದ ಭಾಷಣ. ಅಭಿಯಾನ, ವಿಶೇಷ ಭಾಷಣ ಮತ್ತು ಸ್ಮರಣೆಗಾಗಿ ಸಭೆ ಮಾಡಿರೋ ಏರ್ಪಾಡಿನ ಬಗ್ಗೆ ತಿಳಿಸಿ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಪ್ರಚಾರಕರು 15 ತಾಸಿನ ಸಹಾಯಕ ಪಯನೀಯರ್‌ ಸೇವೆ ಮಾಡಬಹುದು ಅನ್ನೋದನ್ನ ನೆನಪಿಸಿ.

10. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 6ರ ಪ್ಯಾರ 9-17

ಸಮಾಪ್ತಿ ಮಾತುಗಳು (3 ನಿ.) | ಗೀತೆ 62 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ