ಜೂನ್ 16-22
ಜ್ಞಾನೋಕ್ತಿ 18
ಗೀತೆ 87 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಹುಷಾರಿಲ್ಲದವರನ್ನ ಪ್ರೋತ್ಸಾಹಿಸೋ ತರ ಮಾತಾಡಿ
(10 ನಿ.)
ಏನು ಮಾತಾಡಬೇಕು ಅನ್ನೋದಕ್ಕೆ ದೇವರ ವಾಕ್ಯ ಸಹಾಯ ಮಾಡುತ್ತೆ (ಜ್ಞಾನೋ 18:4; w22.10 22 ¶17)
ಅವರ ಪರಿಸ್ಥಿತಿನ ಅರ್ಥ ಮಾಡ್ಕೊಳ್ಳಿ (ಜ್ಞಾನೋ 18:13; mrt ಲೇಖನ 19 ಚೌಕ)
ಅವ್ರಿಗೆ ಸಹಾಯ ಮಾಡಿ ಮತ್ತು ಒಳ್ಳೇ ಸ್ನೇಹಿತರಾಗಿ ತಾಳ್ಮೆ ತೋರಿಸಿ (ಜ್ಞಾನೋ 18:24; wp23.1 14 ¶3-15 ¶1)
ನಿಮ್ಮನ್ನೇ ಕೇಳಿಕೊಳ್ಳಿ, ‘ನನ್ನ ಸಂಗಾತಿಗೆ ಶಾರೀರಿಕವಾಗಿ ಅಥವಾ ಮಾನಸಿಕವಾಗಿ ತೊಂದ್ರೆ ಇದ್ದರೆ ಅವ್ರಿಗೆ ನಾನು ಹೇಗೆ ಸಹಾಯ ಮಾಡಬಹುದು?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 18:18—ಬೈಬಲ್ ಕಾಲದಲ್ಲಿ ಚೀಟು ಹಾಕೋ ಪದ್ಧತಿಯನ್ನ ಯಾಕೆ ಬಳಸ್ತಿದ್ರು? (it-2-E 271-272)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 18:1-17 (th ಪಾಠ 11)
4. ಸಂಭಾಷಣೆ ಶುರುಮಾಡಿ
(1 ನಿ.) ಮನೆ-ಮನೆ ಸೇವೆ. ನೀವು ಭೇಟಿ ಮಾಡಿದ ವ್ಯಕ್ತಿ ಬೇರೆ ಭಾಷೆ ಮಾತಾಡ್ತಾರೆ. (lmd ಪಾಠ 2 ಪಾಯಿಂಟ್ 5)
5. ಮತ್ತೆ ಭೇಟಿ ಮಾಡಿ
(3 ನಿ.) ಸಾರ್ವಜನಿಕ ಸಾಕ್ಷಿ. ನೀವು ಭೇಟಿ ಮಾಡಿದ ವ್ಯಕ್ತಿ ‘ನೀವು ಏನು ಹೇಳಬೇಕೋ ಅದನ್ನ ಬೇಗ ಹೇಳಿ’ ಅಂತ ಹೇಳ್ತಾರೆ. (lmd ಪಾಠ 7 ಪಾಯಿಂಟ್ 4)
6. ಮತ್ತೆ ಭೇಟಿ ಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ದೇವರ ಸರ್ಕಾರದ ಬಗ್ಗೆ ಒಂದು ಪ್ರಾಮುಖ್ಯ ಸತ್ಯವನ್ನ ಹೇಳಿ. (lmd ಪಾಠ 9 ಪಾಯಿಂಟ್ 5)
7. ನಿಮ್ಮ ನಂಬಿಕೆ ಬಗ್ಗೆ ಹೇಳಿ
(4 ನಿ.) ಅಭಿನಯ. ijwfq ಲೇಖನ 29—ವಿಷ್ಯ: ಸೃಷ್ಟಿವಾದವನ್ನ ನೀವು ನಂಬ್ತೀರಾ? (lmd ಪಾಠ 5 ಪಾಯಿಂಟ್ 5)
ಗೀತೆ 144
8. “ಒಂದು ಮಾತೂ ಆಡದೆ” ನೀವು ಪ್ರೀತಿಸೋರನ್ನ ಯೆಹೋವನ ಹತ್ರ ಸೆಳೀಬಹುದು
(15 ನಿ.) ಚರ್ಚೆ.
ನಾವು ಇಷ್ಟಪಡೋ ವ್ಯಕ್ತಿಗಳು ಸತ್ಯ ಬಿಟ್ಟು ಹೋಗಿರೋದನ್ನ ನಮ್ಮಲ್ಲಿ ತುಂಬಾ ಜನ್ರು ನೋಡಿದ್ದೀವಿ. ಉದಾಹರಣೆಗೆ ನಮ್ಮ ಸಂಗಾತಿ, ನಮ್ಮ ಮಕ್ಕಳು, ನಮ್ಮ ಸ್ನೇಹಿತರು ಯೆಹೋವನಿಂದ ದೂರ ಹೋಗಿರಬಹುದು. ನೀವು ಯಾವತ್ತಾದ್ರೂ ಅವರಿಗೆ ಯೆಹೋವನನ್ನ ಆರಾಧನೆ ಮಾಡೋಕೆ ಒತ್ತಾಯ ಮಾಡ್ತಾ ಒರಟಾಗಿ ನಡ್ಕೊಂಡಿದ್ದೀರಾ? ನೀವು ಇದನ್ನ ಒಳ್ಳೇ ಉದ್ದೇಶದಿಂದಲೇ ಮಾಡಿರ್ತೀರ ನಿಜ. ಆದ್ರೆ ಆ ಸಮಯದಲ್ಲಿ ನೀವು ಆಡೋ ಮಾತಿಂದ ಪರಿಸ್ಥಿತಿ ಇನ್ನೂ ಹದಗೆಡಬಹುದು. (ಜ್ಞಾನೋ 12:18) ಅಂಥ ಸಂದರ್ಭದಲ್ಲಿ ನೀವು ಏನು ಮಾಡಬೇಕು?
ಒಂದನೇ ಪೇತ್ರ 3:1 ಹೇಳೋ ತರ ಸತ್ಯದಲ್ಲಿ ಇಲ್ಲದ ಗಂಡನನ್ನ “ಒಂದು ಮಾತೂ ಆಡದೆ . . . ಗೆಲ್ಲಬಹುದು.” ಒಬ್ಬ ಸಹೋದರಿಯ ಗಂಡ ಬೈಬಲ್ ಬಗ್ಗೆ ಕಲಿಯೋಕೆ ಇಷ್ಟ ಪಟ್ಟಿಲ್ಲ ಅಂದ್ರೂ ಅವಳು ತನ್ನ ಗಂಡ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡಬಹುದು. ಅದು ಹೇಗೆ ಸಾಧ್ಯ? ಅವಳ ಒಳ್ಳೇ ನಡತೆಯಿಂದ. ಯೆಹೋವ ದೇವರ ತರ ಪ್ರೀತಿ, ಕರುಣೆ ಮತ್ತು ವಿವೇಕದಿಂದ ನಡ್ಕೊಂಡ್ರೆ ಅವಳ ಗಂಡನ ಮನಸ್ಸು ಕರಗಬಹುದು. (ಜ್ಞಾನೋ 16:23) ನಾವು ಇಷ್ಟಪಡೋ ವ್ಯಕ್ತಿಗಳು ಈಗ ಯೆಹೋವ ದೇವರನ್ನ ಆರಾಧಿಸದೆ ಇರಬಹುದು. ಆದ್ರೆ ನಮ್ಮ ಒಳ್ಳೇ ನಡತೆ ಮತ್ತು ದಯೆ, ಒಂದಲ್ಲ ಒಂದಿನ ಅವರ ಮೇಲೆ ಒಳ್ಳೇ ಪರಿಣಾಮ ಬೀರೋದಂತೂ ನಿಜ.—“ಮೃದುವಾಗಿ” ಕೊಲೊ 4:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ.
ನಂಬಿಕೆಗೋಸ್ಕರ ಹೋರಾಡುವ ಧೀರರು—ಸಂಗಾತಿ ಸತ್ಯದಲ್ಲಿ ಇಲ್ಲದಿದ್ದರೂ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಸಹೋದರಿ ಸಸಾಕಿಯವರ ಅನುಭವದಿಂದ ನೀವು ಏನು ಕಲಿತ್ರಿ?
ಸಹೋದರಿ ಇಟೊರವರ ಅನುಭವದಿಂದ ನೀವು ಏನು ಕಲಿತ್ರಿ?
ಸಹೋದರಿ ಒಕಾಡರವರ ಅನುಭವದಿಂದ ನೀವು ಏನು ಕಲಿತ್ರಿ?
9. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 27 ¶23-26, ಪುಟ 214, 217ರಲ್ಲಿರೋ ಚೌಕಗಳು