ಜೂನ್ 9-15
ಜ್ಞಾನೋಕ್ತಿ 17
ಗೀತೆ 157 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
ಇಸ್ರಾಯೇಲಿನಲ್ಲಿ ವಾಸ ಮಾಡ್ತಿರೋ ಒಬ್ಬ ಗಂಡ ಹೆಂಡತಿ ಶಾಂತಿಯ ವಾತಾವರಣದಲ್ಲಿ ಸರಳವಾದ ಊಟ ಮಾಡ್ತಿದ್ದಾರೆ
1. ನಿಮ್ಮ ಮದ್ವೆ ಜೀವನದಲ್ಲಿ ಶಾಂತಿಯಿಂದ ಇರಿ
(10 ನಿ.)
ಶಾಂತಿಯಿಂದ ಇರೋದು ಅಷ್ಟು ಸುಲಭ ಅಲ್ಲ, ಆದ್ರೆ ಅದಕ್ಕಾಗಿ ಹಾಕೋ ಪ್ರಯತ್ನ ಸಾರ್ಥಕ (ಜ್ಞಾನೋ 17:1; ಚಿತ್ರ ನೋಡಿ)
ಚಿಕ್ಕಚಿಕ್ಕ ವಿಷ್ಯಗಳಿಗೆ ದೊಡ್ಡ ರಂಪ ಮಾಡಬೇಡಿ (ಜ್ಞಾನೋ 17:9; g 10/14 9 ¶2)
ಕೋಪಕ್ಕೆ ಕಡಿವಾಣ ಹಾಕಿ (ಜ್ಞಾನೋ 17:14; w08 7/1 10 ¶6-11 ¶1)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 17:24—ಯಾವ ರೀತಿಯಲ್ಲಿ “ಮೂರ್ಖನ ಮನಸ್ಸು ಭೂಮಿಯ ಮೂಲೆಮೂಲೆಗೂ ಅಲೆಯುತ್ತೆ?” (it-1-E 790 ¶2)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 17:1-17 (th ಪಾಠ 10)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. (lmd ಪಾಠ 3 ಪಾಯಿಂಟ್ 5)
5. ಸಂಭಾಷಣೆ ಶುರುಮಾಡಿ
(4 ನಿ.) ಸಾರ್ವಜನಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (lmd ಪಾಠ 6 ಪಾಯಿಂಟ್ 4)
6. ಭಾಷಣ
(5 ನಿ.) ijwbv ಲೇಖನ 60—ವಿಷ್ಯ: ಜ್ಞಾನೋಕ್ತಿ 17:17ರಲ್ಲಿ ಹೇಳಿರೋ ಮಾತಿನ ಅರ್ಥ ಏನು? (th ಪಾಠ 13)
ಗೀತೆ 113
7. ಮಾತಿನ ಕಲೆ ಬೆಳೆಸಿಕೊಳ್ಳೋಕೆ ಸಹಾಯ ಮಾಡೋ ರೂಢಿಗಳನ್ನ ಬೆಳೆಸಿಕೊಳ್ಳಿ
(15 ನಿ.) ಚರ್ಚೆ.
ಕುಟುಂಬ ಖುಷಿಯಾಗಿರಬೇಕು ಅಂದ್ರೆ ಎಲ್ಲರೂ ಚೆನ್ನಾಗಿ ಮಾತಾಡಬೇಕು. ಒಬ್ಬರಿಗೊಬ್ಬರು ಮನಸ್ಸು ಬಿಚ್ಚಿ ಮಾತಾಡಿದ್ರೆ ಸಮಸ್ಯೆಗಳು ಬಂದಾಗ ಒಬ್ಬರಿಗೊಬ್ಬರು ಹೆಗಲಿಗೆ ಹೆಗಲು ಕೊಡೋದಕ್ಕೆ ಆಗುತ್ತೆ. (ಜ್ಞಾನೋ 15:22) ನಿಮ್ಮ ಮನೆಯವ್ರ ಜೊತೆ ಮನಸ್ಸುಬಿಚ್ಚಿ ಮಾತಾಡೋಕೆ ನೀವು ಏನು ಮಾಡಬಹುದು?
ಒಟ್ಟಿಗೆ ಸಮಯ ಕಳೀರಿ. (ಧರ್ಮೋ 6:6, 7) ಒಟ್ಟಿಗೆ ಕೆಲ್ಸ ಮಾಡಿದ್ರೆ, ಒಟ್ಟಿಗೆ ಕೂಟಗಳಿಗೆ, ಸೇವೆಗೆ ಹೋದ್ರೆ ಮತ್ತು ಒಟ್ಟಿಗೆ ಸಮಯ ಕಳೆದ್ರೆ ನಿಮ್ಮ ಮತ್ತು ಕುಟುಂಬದವರ ಮಧ್ಯೆ ಪ್ರೀತಿ ಮತ್ತು ನಂಬಿಕೆ ಜಾಸ್ತಿ ಆಗುತ್ತೆ. ಜೊತೆಗೆ ಮನಸ್ಸು ಬಿಚ್ಚಿ ಮಾತಾಡೋಕೆ ಅವಕಾಶನೂ ಸಿಗುತ್ತೆ. ಕೆಲವು ಸಲ ನಾವು ನಮ್ಮ ಕುಟುಂಬದವರಿಗೋಸ್ಕರ ನಮ್ಮ ಆಸೆಗಳನ್ನ ತ್ಯಾಗ ಮಾಡಬೇಕಾಗುತ್ತೆ, ಆದ್ರೆ ಹೀಗೆ ಮಾಡೋದ್ರಿಂದ ಮುಂದೆ ಒಳ್ಳೇದೇ ಆಗುತ್ತೆ! (ಫಿಲಿ 2:3, 4) ಕುಟುಂಬವಾಗಿ ಒಟ್ಟಿಗೆ ಇರೋವಾಗ ನಿಮ್ಮ ಸಮಯವನ್ನ ಹೇಗೆ ಚೆನ್ನಾಗಿ ಬಳಸಬಹುದು?—ಎಫೆ 5:15, 16.
ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಇರುವ ನಕ್ಷೆಯನ್ನು ಪಾಲಿಸಿ—ಸಂವಾದ ಉತ್ತಮಗೊಳಿಸಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಎಲೆಕ್ಟ್ರಾನಿಕ್ ಸಾಧನಗಳನ್ನ ಜಾಸ್ತಿ ಬಳಸೋದು ಕುಟುಂಬದವರ ಜೊತೆ ಮಾತಾಡೋದ್ರ ಮೇಲೆ ಯಾವ ಪರಿಣಾಮ ಬೀರುತ್ತೆ?
ಚೆನ್ನಾಗಿ ಮಾತಾಡೋದ್ರ ಬಗ್ಗೆ ಈ ವಿಡಿಯೋದಿಂದ ನೀವೇನು ಕಲಿತ್ರಿ?
ಚೆನ್ನಾಗಿ ಕೇಳಿಸಿಕೊಳ್ಳಿ. (ಯಾಕೋ 1:19) ನಮ್ಮನ್ನ ಯಾರು ತಪ್ಪರ್ಥ ಮಾಡ್ಕೊಳ್ಳಲ್ಲ ಅಂತ ಅನಿಸಿದಾಗ ಮಾತ್ರ ಮಕ್ಕಳು ತಮ್ಮ ಮನಸ್ಸಲ್ಲಿ ಇರೋದನ್ನ ಮುಚ್ಚು ಮರೆ ಇಲ್ಲದೇ ಹೇಳ್ತಾರೆ. ಹಾಗಾಗಿ ಅವ್ರು ನಿಮಗೆ ಟೆನ್ಷನ್ ಆಗೋ ವಿಷ್ಯ ಹೇಳಿದಾಗ ಅವ್ರ ಮೇಲೆ ರೇಗಾಡಬೇಡಿ. (ಜ್ಞಾನೋ 17:27) ಅವ್ರು ಹೇಳೋ ಮಾತನ್ನ ಗಮನಕೊಟ್ಟು ಕೇಳಿಸಿಕೊಳ್ಳಿ. ಅವ್ರ ಯೋಚ್ನೆ ಮತ್ತೆ ಭಾವನೆಗಳನ್ನ ಅರ್ಥ ಮಾಡ್ಕೊಳ್ಳಿ. ಆಗ ಅವ್ರಿಗೆ ಪ್ರೀತಿಯಿಂದ ಸಹಾಯ ಮಾಡೋಕೆ ಆಗುತ್ತೆ.
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 27 ¶19-22, ಪುಟ 212ರಲ್ಲಿರೋ ಚೌಕ