ಅಕ್ಟೋಬರ್ 13-19
ಪ್ರಸಂಗಿ 7-8
ಗೀತೆ 28 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ‘ಸಾವಿನ ಮನೆಗೆ ಹೋಗಿ’
(10 ನಿ.)
ದುಃಖ ಪಡ್ತಿರೋರನ್ನ ಸಮಾಧಾನ ಮಾಡೋಕೆ ಸಮಯ ಮಾಡ್ಕೊಳ್ಳಿ (ಪ್ರಸಂ 7:2; it-E “ಅಳೋದು” ¶9)
ತೀರಿಹೋಗಿರೋ ವ್ಯಕ್ತಿಯಲ್ಲಿದ್ದ ಒಳ್ಳೇ ಗುಣಗಳ ಬಗ್ಗೆ ಮಾತಾಡಿ ಸಾಂತ್ವನ ಕೊಡಿ (ಪ್ರಸಂ 7:1; w19.06 23 ¶15)
ದುಃಖದಲ್ಲಿರೋರ ಜೊತೆ ಪ್ರಾರ್ಥನೆ ಮಾಡಿ (w17.07 16 ¶16)
ನೆನಪಿಡಿ: ತಾವು ತುಂಬ ಪ್ರೀತಿಸೋ ವ್ಯಕ್ತಿಗಳನ್ನ ಕಳ್ಕೊಂಡು ದುಃಖದಲ್ಲಿ ಇರೋರಿಗೆ ಒಂದೆರಡು ದಿನ ಅಲ್ಲ, ಸ್ವಲ್ಪ ಜಾಸ್ತಿ ಸಮಯದ ತನಕ ಸಹೋದರ ಸಹೋದರಿಯರಿಂದ ಪ್ರೋತ್ಸಾಹ ಬೇಕಾಗುತ್ತೆ.—w17.07 16 ¶17-19.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಪ್ರಸಂ 7:20-22—ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ಅದ್ರ ಬಗ್ಗೆ ಅವ್ರ ಹತ್ರ ಮಾತಾಡಬೇಕಾ ಬೇಡ್ವಾ ಅಂತ ತಿಳ್ಕೊಳ್ಳೋಕೆ ಈ ವಚನ ಹೇಗೆ ಸಹಾಯ ಮಾಡುತ್ತೆ? (w23.03 31 ¶18)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಪ್ರಸಂ 8:1-13 (th ಪಾಠ 10)
4. ಸಂಭಾಷಣೆ ಶುರುಮಾಡಿ
(2 ನಿ.) ಸಾರ್ವಜನಿಕ ಸಾಕ್ಷಿ. ನೀವು ಮಾತಾಡ್ತಿರೋ ವ್ಯಕ್ತಿಗೆ ಯಾವ ವಿಷ್ಯ ಇಷ್ಟ ಅಂತ ತಿಳ್ಕೊಳ್ಳಿ, ಆಮೇಲೆ ಮತ್ತೆ ಅವ್ರನ್ನ ಭೇಟಿಯಾಗೋದ್ರ ಬಗ್ಗೆ ಮಾತಾಡಿ. (lmd ಪಾಠ 2 ಪಾಯಿಂಟ್ 4)
5. ಸಂಭಾಷಣೆ ಶುರುಮಾಡಿ
(2 ನಿ.) ಅನೌಪಚಾರಿಕ ಸಾಕ್ಷಿ. (lmd ಪಾಠ 2 ಪಾಯಿಂಟ್ 3)
6. ಮತ್ತೆ ಭೇಟಿ ಮಾಡಿ
(2 ನಿ.) ಮನೆ-ಮನೆ ಸೇವೆ. ನಮ್ಮ jw.org ವೆಬ್‌ಸೈಟಿಂದ ಏನಾದ್ರೂ ತೋರಿಸಿ. (lmd ಪಾಠ 9 ಪಾಯಿಂಟ್ 4)
7. ನಿಮ್ಮ ನಂಬಿಕೆ ಬಗ್ಗೆ ಹೇಳಿ
(5 ನಿ.) ಅಭಿನಯ. ijwfq ಲೇಖನ 50—ವಿಷ್ಯ: ಯೆಹೋವನ ಸಾಕ್ಷಿಗಳು ಶವಸಂಸ್ಕಾರನ ಹೇಗೆ ಮಾಡ್ತಾರೆ? (th ಪಾಠ 17)
ಗೀತೆ 139
8. ಸತ್ತವರಿಗೆ ಮತ್ತೆ ಜೀವ ಸಿಕ್ಕೇ ಸಿಗುತ್ತೆ ಅಂತ ನಂಬಿ
(15 ನಿ.) ಚರ್ಚೆ.
ಯೆಹೋವ ನಮಗೆ ಕೊಟ್ಟಿರೋ ಬೆಸ್ಟ್ ಗಿಫ್ಟ್‌ಗಳಲ್ಲಿ ‘ಸತ್ತವರಿಗೆ ಮತ್ತೆ ಜೀವ ಕೊಡ್ತೀನಿ’ ಅಂತ ಆತನು ಕೊಟ್ಟಿರೋ ಮಾತೂ ಸೇರಿದೆ. ಈ ಗಿಫ್ಟ್ ಆತನಲ್ಲಿರೋ ಶಕ್ತಿ, ವಿವೇಕ, ಕರುಣೆ ಮತ್ತು ಮುಖ್ಯವಾಗಿ ನಮ್ಮ ಮೇಲಿರೋ ಪ್ರೀತಿಯನ್ನ ತೋರಿಸುತ್ತೆ.—ಯೋಹಾ 3:16.
ಸತ್ತವರಿಗೆ ಮತ್ತೆ ಜೀವ ಸಿಕ್ಕೇ ಸಿಗುತ್ತೆ ಅಂತ ನಾವು ನಂಬಿದ್ರೆ ಬರೀ ನಮ್ಮ ಸಮಸ್ಯೆಗಳ ಬಗ್ಗೆನೇ ನಾವು ಯೋಚ್ನೆ ಮಾಡ್ತಾ ಕೂರಲ್ಲ, ಮುಂದೆ ಸಿಗೋ ಆಶೀರ್ವಾದಗಳ ಮೇಲೆ ಗಮನ ಕೊಡ್ತೀವಿ. (2ಕೊರಿಂ 4:16-18) ನಮಗೆ ಹಿಂಸೆ ಬಂದಾಗ, ಕಾಯಿಲೆ ಬಂದಾಗ ಅಥವಾ ನಾವು ಪ್ರೀತಿಸಿದವ್ರನ್ನ ಸಾವಲ್ಲಿ ಕಳ್ಕೊಂಡಾಗ ಈ ನಿರೀಕ್ಷೆ ಶಾಂತಿ, ಸಮಾಧಾನ ಕೊಡುತ್ತೆ. (1ಥೆಸ 4:13) ಸತ್ತವ್ರಿಗೆ ಮತ್ತೆ ಜೀವ ಸಿಗುತ್ತೆ ಅಂತ ನಂಬಲಿಲ್ಲಾಂದ್ರೆ ನಾವು ಯಾವತ್ತೂ ಖುಷಿಯಾಗಿ ಇರಕ್ಕಾಗಲ್ಲ. (1ಕೊರಿಂ 15:19) ಹಾಗಾಗಿ ಈ ನಿರೀಕ್ಷೆ ಮೇಲೆ ನಂಬಿಕೆ ಬೆಳೆಸ್ಕೊಳ್ಳಿ.
ಯೋಹಾನ 11:21-24 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಸತ್ತವ್ರಿಗೆ ಮತ್ತೆ ಜೀವ ಸಿಗುತ್ತೆ ಅನ್ನೋ ನಂಬಿಕೆ ತನಗಿದೆ ಅಂತ ಮಾರ್ಥ ಹೇಗೆ ತೋರಿಸಿದಳು?
ಈ ನಂಬಿಕೆ ಇಟ್ಟಿದ್ದಕ್ಕೆ ಅವಳಿಗೆ ಯಾವ ಆಶೀರ್ವಾದ ಸಿಕ್ತು?—ಯೋಹಾ 11:38-44
ನಂಬಿಕೆಗೆ ಹೆಸರುವಾಸಿ ಆಗಿರೋ ಸ್ತ್ರೀಯರನ್ನ ಅನುಕರಿಸಿ!—ಮಾರ್ಥ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಸತ್ತವ್ರಿಗೆ ಮತ್ತೆ ಜೀವ ಸಿಗುತ್ತೆ ಅನ್ನೋ ನಿರೀಕ್ಷೆ ತುಂಬ ಮುಖ್ಯ ಅಂತ ನಿಮಗ್ಯಾಕೆ ಅನಿಸುತ್ತೆ?
ಈ ನಿರೀಕ್ಷೆ ಮೇಲಿರೋ ನಿಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬಹುದು?
9. ಸಭಾ ಬೈಬಲ್ ಅಧ್ಯಯನ
(30 ನಿ.) lfb ಪಾಠ 26-27