ಅಕ್ಟೋಬರ್ 20-26
ಪ್ರಸಂಗಿ 9-10
ಗೀತೆ 107 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಸಮಸ್ಯೆಗಳು ಬಂದಾಗ ಮನಸ್ಸಲ್ಲಿಡಬೇಕಾದ ವಿಷ್ಯಗಳು
(10 ನಿ.)
ಸಮಸ್ಯೆಗಳು ಬಂತು ಅಂದ್ರೆ ಅದ್ರ ಅರ್ಥ ಯೆಹೋವನಿಗೆ ನಾವು ಇಷ್ಟ ಇಲ್ಲ ಅಂತಲ್ಲ (ಪ್ರಸಂ 9:11; w13 8/15 14 ¶20-21)
ಭೂಮಿ ಸೈತಾನನ ಕೈಯಲ್ಲಿ ಇರೋದ್ರಿಂದ ನಮ್ಮ ಜೀವನ ಚೆನ್ನಾಗಿರುತ್ತೆ ಅಂತ ಅಂದ್ಕೊಳ್ಳೋಕೆ ಆಗಲ್ಲ (ಪ್ರಸಂ 10:7; w19.09 5 ¶10)
ಸಮಸ್ಯೆ ಬಂದಾಗ್ಲೂ ಯೆಹೋವ ನಮಗೆ ಕೊಟ್ಟಿರೋ ಒಳ್ಳೆ ವಿಷ್ಯಗಳನ್ನ ನೆನಸ್ಕೊಂಡು ಖುಷಿಪಡೋಕೆ ಸಮಯ ಮಾಡ್ಕೊಬೇಕು (ಪ್ರಸಂ 9:7, 10; w11 10/15 8 ¶1-2)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಪ್ರಸಂ 10:12-14—ಒಬ್ರ ಬಗ್ಗೆ ಬೆನ್ನ ಹಿಂದೆ ಮಾತಾಡೋದ್ರಿಂದ ಏನೆಲ್ಲಾ ಆಗುತ್ತೆ ಅಂತ ಈ ವಚನಗಳು ಎಚ್ಚರಿಸುತ್ತೆ? (it-E “ಬೆನ್ನ ಹಿಂದೆ ಮಾತಾಡೋದು, ಚಾಡಿ ಹೇಳೋದು” ¶4, 8)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಪ್ರಸಂ 10:1-20 (th ಪಾಠ 11)
4. ಸಂಭಾಷಣೆ ಶುರುಮಾಡಿ
(3 ನಿ.) ಸಾರ್ವಜನಿಕ ಸಾಕ್ಷಿ. ಬೇಜಾರಲ್ಲಿರೋ ಒಬ್ಬ ವ್ಯಕ್ತಿ ಜೊತೆ ಮಾತು ಶುರುಮಾಡಿ. (lmd ಪಾಠ 3 ಪಾಯಿಂಟ್ 4)
5. ಸಂಭಾಷಣೆ ಶುರುಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಚಿಂತೆ ಮಾಡ್ತಿರೋ ವ್ಯಕ್ತಿಗೆ ಪ್ರೀತಿಸಿ-ಕಲಿಸಿ ಕಿರುಹೊತ್ತಿಗೆಯ ಪರಿಶಿಷ್ಟ ಎ, “ನಾನು ಮಾತನ್ನ ಹೇಗೆ ಶುರುಮಾಡ್ಲಿ?” ಅನ್ನೋ ಭಾಗದಲ್ಲಿರೋ ಒಂದು ವಿಷ್ಯದ ಬಗ್ಗೆ ಮಾತಾಡಿ. (lmd ಪಾಠ 4 ಪಾಯಿಂಟ್ 4)
6. ಶಿಷ್ಯರಾಗೋಕೆ ಕಲಿಸಿ
ಗೀತೆ 45
7. ಸಮಸ್ಯೆಗಳು ಬಂದಾಗ ಯೆಹೋವ ಕೈ ಹಿಡಿತಾನೆ
(15 ನಿ.) ಚರ್ಚೆ.
ನಮಗೆ ದಿನಾಲೂ ಒಂದಲ್ಲಾ ಒಂದು ಸಮಸ್ಯೆ ಬಂದೇ ಬರುತ್ತೆ. ಕೆಲವು ಸಮಸ್ಯೆಗಳಂತೂ ದಿಢೀರಂತ ಬರುತ್ತೆ. ಆಗ ಅದ್ರಿಂದ ಆಗೋ ದುಃಖನ ತಡಿಯೋಕೇ ಆಗಲ್ಲ, ಏನು ಮಾಡಬೇಕು ಅಂತನೂ ಗೊತ್ತಾಗಲ್ಲ. ಈ ತರ ಆದಾಗ ನಾವೇನು ಮಾಡಬೇಕು? ನಮಗೆ ಯಾರು ಸಹಾಯ ಮಾಡ್ತಾರೆ?
ನಮಗೆ ಎಂಥಾ ಕಷ್ಟ ಬಂದ್ರೂ ಯೆಹೋವ “ಸ್ಥಿರತೆ” ಕೊಡ್ತಾನೆ. (ಯೆಶಾ 33:6) ಆದ್ರೆ ನಾವು ಆ ಸ್ಥಿರತೆ ಅಥವಾ ಸಹಾಯನ ಪಡ್ಕೊಬೇಕಾದ್ರೆ ನಮ್ಮ ಇತಿಮಿತಿಗಳನ್ನ ಅರ್ಥಮಾಡ್ಕೊಬೇಕು. ಆಗ ಯೆಹೋವ ಖಂಡಿತ ನಮಗೆ ಸಹಾಯ ಮಾಡ್ತಾನೆ. (ಜ್ಞಾನೋ 11:2) ನಮ್ಮ ಜೀವನದಲ್ಲಿ ಏನಾದ್ರೂ ದುರಂತ ನಡೆದಾಗ ದುಃಖದಿಂದ ಹೊರಗೆ ಬರೋಕೆ, ಸರಿಯಾದ ತೀರ್ಮಾನ ಮಾಡೋಕೆ, ನಮ್ಮನ್ನ ಅಥವಾ ನಮ್ಮ ಕುಟುಂಬದವ್ರನ್ನ ನೋಡ್ಕೊಳ್ಳೋಕೆ ಸಮಯ ಮಾಡ್ಕೊಬೇಕು. (ಪ್ರಸಂ 4:6)
ಯೆಹೋವ ತನ್ನ ಆರಾಧಕರಿಂದ ನಮಗೆ ಧೈರ್ಯ ತುಂಬ್ತಾನೆ. ಹಾಗಾಗಿ ನಾವು ಅವ್ರ ಸಹಾಯ ಕೇಳೋಕೆ ಹಿಂದೆಮುಂದೆ ನೋಡಬಾರದು. ಅವರು ನಮ್ಮನ್ನ ತುಂಬ ಪ್ರೀತಿಸ್ತಾರೆ, ನಮಗೆ ಸಹಾಯ ಮಾಡೋಕೆ ಖುಷಿಯಿಂದ ಮುಂದೆ ಬರ್ತಾರೆ ಅನ್ನೋದನ್ನ ಯಾವಾಗ್ಲೂ ಮನಸ್ಸಲ್ಲಿಡಬೇಕು.
2 ಕೊರಿಂಥ 4:7-9 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
ಕಷ್ಟ ಆದ್ರೂ ನಾವ್ಯಾಕೆ ಕೂಟಗಳಿಗೆ ಹೋಗೋದನ್ನ, ಬೈಬಲ್ ಓದೋದನ್ನ, ಸಿಹಿಸುದ್ದಿ ಸಾರೋದನ್ನ ನಿಲ್ಲಿಸಬಾರದು?
“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ” ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
ಯೆಹೋವ ದೇವರು ಸಹೋದರ ಮತ್ತು ಸಹೋದರಿ ಸೆಪ್ಟರ್‌ಗೆ ಹೇಗೆ ಸಹಾಯ ಮಾಡಿದನು?
ಸಹೋದರ ಸಹೋದರಿಯರು ಅವ್ರಿಗೆ ಹೇಗೆ ಸಹಾಯ ಮಾಡಿದ್ರು?
ಆ ದಂಪತಿಯಿಂದ ನಾವು ಇನ್ನೂ ಏನೆಲ್ಲ ಕಲಿಬಹುದು?
8. ಸಭಾ ಬೈಬಲ್ ಅಧ್ಯಯನ
(30 ನಿ.) lfb ಪಾಠ 28, ಭಾಗ 6ರ ಪರಿಚಯ ಮತ್ತು ಪಾಠ 29