ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 143
  • ಧೂಮಪಾನ ಮಾಡೋದು ತಪ್ಪಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧೂಮಪಾನ ಮಾಡೋದು ತಪ್ಪಾ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ಮಜಾ ಮಾಡಕ್ಕೋಸ್ಕರ ಗಾಂಜಾ ಅಥ್ವಾ ಬೇರೆ ಮಾದಕ ವಸ್ತುಗಳನ್ನ ಉಪಯೋಗಿಸೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
  • ಸಿಗರೇಟ್‌ಗಳು ನೀವು ಅವನ್ನು ನಿರಾಕರಿಸುತ್ತೀರೊ?
    ಎಚ್ಚರ!—1996
  • ಧೂಮಪಾನದ ಬಗ್ಗೆ ದೇವರ ನೋಟವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಹೊಗೆಸೊಪ್ಪಿನ ಸಂರಕ್ಷಕರು ತಮ್ಮ ಜಂಬದ ಬಲೂನುಗಳನ್ನು ಉಡಾಯಿಸುತ್ತಾರೆ
    ಎಚ್ಚರ!—1995
  • ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?
    ಎಚ್ಚರ!—2000
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 143
ಸಿಗರೇಟ್‌ ಸೇದುತ್ತಿರೋ ವ್ಯಕ್ತಿ

ಧೂಮಪಾನ ಮಾಡೋದು ತಪ್ಪಾ?

ಬೈಬಲ್‌ ಕೊಡೋ ಉತ್ತರ

ಬೈಬಲ್‌ ಧೂಮಪಾನa ಅಥ್ವಾ ತಂಬಾಕು ಸೇವನೆ ಬಗ್ಗೆ ಏನೂ ಹೇಳಲ್ಲ. ಆದರೆ ನಮ್ಮ ಆರೋಗ್ಯನ ಹಾಳುಮಾಡೋ ಕೆಟ್ಟ ಚಟಗಳನ್ನ ದೇವರು ಇಷ್ಟಪಡಲ್ಲ ಅಂತ ತಿಳಿಸುತ್ತೆ. ಅದಕ್ಕೆ ಸಂಬಂಧಪಟ್ಟ ತುಂಬ ತತ್ವಗಳು ಬೈಬಲ್‌ನಲ್ಲಿ ಇವೆ. ಆದ್ರಿಂದ ಧೂಮಪಾನ ಮಾಡೋದು ತಪ್ಪು ಅಂತ ಗೊತ್ತಾಗುತ್ತೆ.

  • ಜೀವಕ್ಕೆ ಗೌರವ ಕೊಡಿ. “ದೇವರು . . . ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ . . . ಕೊಡುವಾತನಾಗಿದ್ದಾನೆ.” (ಅಪೊಸ್ತಲರ ಕಾರ್ಯ 17:24, 25) ಜೀವ, ದೇವರು ನಮಗೆ ಕೊಟ್ಟಿರೋ ಅಮೂಲ್ಯ ಉಡುಗೊರೆ. ಆದ್ರಿಂದ ನಮ್ಮ ಜೀವಕ್ಕೆ ಹಾನಿಯಾಗೋ ಧೂಮಪಾನದಂತ ಕೆಟ್ಟ ಚಟಗಳಿಂದ ದೂರ ಇರಬೇಕು. ಲೋಕದಲ್ಲಿ ತುಂಬ ಜನ ಧೂಮಪಾನ ಮಾಡಿ ಸಾಯ್ತಾ ಇದ್ದಾರೆ, ಒಂದುವೇಳೆ ಅದನ್ನ ಮಾಡದೆ ಇದ್ದಿದ್ರೆ ಅವರ ಜೀವನ ಉಳಿಸಿಕೊಳ್ಳಬಹುದಿತ್ತು.

  • ನೆರೆಯವರನ್ನ ಪ್ರೀತಿಸಿ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 22:39) ಒಂದುವೇಳೆ ಧೂಮಪಾನ ಮಾಡಿದ್ರೆ ನಮ್ಮ ಸುತ್ತ ಮುತ್ತ ಇರೋರ ಮೇಲೆ ನಮಗೆ ಪ್ರೀತಿ ಇಲ್ಲ ಅಂತರ್ಥ. ಯಾಕಂದ್ರೆ ಧೂಮಪಾನ, ಅದನ್ನ ಸೇದೋರಿಗೆ ಮಾತ್ರ ಅಲ್ಲ ಅವ್ರ ಸುತ್ತಮುತ್ತ ಇರೋರಿಗೂ ಸಮಸ್ಯೆ ತರುತ್ತೆ. ಸಿಗರೇಟ್‌ ಸೇದೋರಿಗೆ ಬರೋ ಅದೇ ಕಾಯಿಲೆಗಳು ಅದ್ರ ಹೊಗೆಯನ್ನ ಸೇವಿಸೋರಿಗೂ ಬರುತ್ತೆ.

  • ಶುದ್ಧರಾಗಿರಿ. “ನೀವು ನಿಮ್ಮ ದೇಹಗಳನ್ನು ಸಜೀವವಾಗಿಯೂ ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಇರುವ ಯಜ್ಞವಾಗಿ ಅರ್ಪಿಸಿರಿ.” (ರೋಮನ್ನರಿಗೆ 12:1) “ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.” (2 ಕೊರಿಂಥ 7:1) ನಾವು ಧೂಮಪಾನ ಮಾಡಿದ್ರೆ ಪವಿತ್ರರಾಗಿ, ಶುದ್ಧರಾಗಿ ಇರೋಕೆ ಆಗಲ್ಲ. ಯಾಕಂದ್ರೆ ಧೂಮಪಾನ ಮಾಡೋದ್ರಿಂದ ನಮ್ಮ ದೇಹಕ್ಕೆ ನಾವು ಬೇಕು ಬೇಕಂತನೇ ತುಂಬ ಹಾನಿಮಾಡಿಕೊಳ್ತೀವಿ.

ಮಜಾ ಮಾಡಕ್ಕೋಸ್ಕರ ಗಾಂಜಾ ಅಥ್ವಾ ಬೇರೆ ಮಾದಕ ವಸ್ತುಗಳನ್ನ ಉಪಯೋಗಿಸೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಗಾಂಜಾ ಅಥ್ವಾ ಬೇರೆ ಮಾದಕ ವಸ್ತುಗಳ ಬಗ್ಗೆ ಬೈಬಲ್‌ ನೇರವಾಗಿ ಏನೂ ಹೇಳಿಲ್ಲ. ಆದ್ರೆ ಮಜಾ ಮಾಡಕ್ಕೋಸ್ಕರ ಇಂಥ ವಸ್ತುಗಳನ್ನ ಉಪಯೋಗಿಸೋದು ತಪ್ಪು ಅಂತ ಬೈಬಲ್‌ ತತ್ವಗಳು ಹೇಳುತ್ತೆ. ಆ ಕೆಲವು ತತ್ವಗಳು ಇಲ್ಲಿವೆ:

  • ನಿಮ್ಮ ಮನಸ್ಸನ್ನ ಕಂಟ್ರೋಲ್‌ ಮಾಡಿ. “ನಿನ್ನ ದೇವರಾದ ಯೆಹೋವನನ್ನು ನಿನ್ನ . . . ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” (ಮತ್ತಾಯ 22:37, 38) “ಪೂರ್ಣವಾಗಿ ಸ್ವಸ್ಥಚಿತ್ತರಾಗಿರಿ.” (1 ಪೇತ್ರ 1:13) ಮಾದಕ ವಸ್ತುಗಳನ್ನ ಉಪಯೋಗಿಸುವ ವ್ಯಕ್ತಿಯ ಮನಸ್ಸು ಕಂಟ್ರೋಲ್‌ನಲ್ಲಿ ಇರಲ್ಲ, ಇನ್ನೂ ಕೆಲವರು ಆ ಕೆಟ್ಟಚಟಕ್ಕೆ ದಾಸರಾಗಿ ಬಿಡ್ತಾರೆ. ಅವರ ಯೋಚನೆಗಳು ಯಾವಾಗ್ಲೂ, ಏನಾದ್ರೂ ಮಾಡಿ ಡ್ರಗ್ಸ್‌ ತಗೊಳೋದರ ಮೇಲೇನೇ ಇರುತ್ತೆ ಹೊರತು ಒಳ್ಳೇ ವಿಷಯಗಳ ಮೇಲಿರಲ್ಲ.—ಫಿಲಿಪ್ಪಿ 4:8.

  • ಸರಕಾರದ ನಿಯಮಗಳನ್ನ ಪಾಲಿಸಿ. “ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ.” (ತೀತ 3:1) ತುಂಬ ದೇಶದ ಸರ್ಕಾರಗಳು ಕೆಲವು ಡ್ರಗ್ಸ್‌ಗಳನ್ನ ಸಂಪೂರ್ಣವಾಗಿ ನಿಷೇಧಿಸಿದೆ. ನಾವು ದೇವರ ಮನಸ್ಸನ್ನ ಖುಷಿಪಡಿಸಬೇಕಾದ್ರೆ ಸರ್ಕಾರ ಹೇಳೋ ಮಾತನ್ನ ಕೇಳಬೇಕು.—ರೋಮನ್ನರಿಗೆ 13:1.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ ವರ್ಷ ಸುಮಾರು 60 ಲಕ್ಷ ಜನ ತಂಬಾಕು ಸೇವಿಸಿ ಸಾಯ್ತಾ ಇದ್ದಾರೆ. ಜೊತೆಗೆ 6 ಲಕ್ಷ ಜನರು ಬೇರೆಯವರು ಧೂಮಪಾನ ಮಾಡೋದ್ರಿಂದ ಕಾಯಿಲೆಗೆ ತುತ್ತಾಗ್ತಿದ್ದಾರೆ. ತಂಬಾಕು ಸೇವಿಸೋದ್ರಿಂದ ಅವ್ರಿಗೂ ಅವ್ರ ಸುತ್ತ ಮುತ್ತ ಇರೋರಿಗೂ ತುಂಬಾ ಹಾನಿಯಾಗ್ತಿದೆ.

ಕ್ಯಾನ್ಸರ್‌. ತಂಬಾಕಿನ ಹೊಗೆಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗಿರೋ 50 ತರದ ಕೆಮಿಕಲ್ಸ್‌ಗಳಿವೆ. ದ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕಾ, “ಸುಮಾರು 90 ಪರ್ಸೆಂಟ್‌ ಶ್ವಾಸಕೋಶ ಕ್ಯಾನ್ಸರಿಗೆ ತಂಬಾಕಿನ ಸೇವನೆಯೇ ಕಾರಣ” ಅಂತ ಹೇಳುತ್ತೆ. ಇದರ ಜೊತೆ ತಂಬಾಕಿನ ಹೊಗೆಯಿಂದ ಬಾಯಿ, ಗಂಟಲು, ಲಿವರ್‌, ಪಿತ್ತಜನಕಾಂಗ, ಮೂತ್ರಪಿಂಡಗಳಿಗೆ ಸಂಬಂಧಪಟ್ಟ ಕ್ಯಾನ್ಸರ್‌ ಬರುತ್ತೆ.

ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆ. ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳಾದ ನ್ಯುಮೋನಿಯಾ ಮತ್ತು ಇನ್‌ಫ್ಲುಎಂಜಾ ಬರುತ್ತವೆ. ಧೂಮಪಾನ ಮಾಡುವವರ ಹತ್ರ ಇರೋ ಮಕ್ಕಳಿಗೆ ಅಸ್ತಮಾ, ದೀರ್ಘ ಕಾಲದ ಕೆಮ್ಮು ಬರುತ್ತೆ. ಇನ್ನೂ ಕೆಲವು ಮಕ್ಕಳಿಗೆ ಶ್ವಾಸಕೋಶ ಸರಿಯಾಗಿ ಕೆಲಸ ಮಾಡಲ್ಲ ಮತ್ತು ಬೆಳವಣಿಗೆಯಾಗಿರಲ್ಲ.

ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ. ಅತಿಯಾಗಿ ಧೂಮಪಾನ ಮಾಡೋರಿಗೆ ಸ್ಟ್ರೋಕ್‌ ಅಥ್ವಾ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತವೆ. ತಂಬಾಕಿನ ಹೊಗೆಯಲ್ಲಿರೋ ಕಾರ್ಬನ್‌ ಮೊನಾಕ್ಸೈಡ್‌ ರಕ್ತದ ಜೊತೆ ಸೇರಿ ರಕ್ತದಲ್ಲಿರೋ ಆಮ್ಲಜನಕದ ಪ್ರಮಾಣವನ್ನ ಕಡಿಮೆ ಮಾಡುತ್ತೆ. ಇದರಿಂದ ಆಮ್ಲಜನಕವನ್ನ ದೇಹದ ಎಲ್ಲಾ ಭಾಗಗಳಿಗೆ ಕಳಿಸಲು ಹೃದಯಕ್ಕೆ ತುಂಬ ಒತ್ತಡ ಆಗುತ್ತೆ.

ಗರ್ಭಿಣಿಯರಿಗೆ ಆಗೋ ಅಪಾಯ. ಧೂಮಪಾನ ಮಾಡೋ ಗರ್ಭಿಣಿಯರಿಗೆ ದಿನ ತುಂಬೋಕ್ಕಿಂತ ಮುಂಚೆನೇ ಮಗು ಹುಟ್ಟುತ್ತೆ, ಮಗುವಿನ ತೂಕ ಕಮ್ಮಿ ಇರುತ್ತೆ. ಇನ್ನೂ ಕೆಲವು ಮಕ್ಕಳಿಗೆ ಹುಟ್ಟಿದಾಗಿಂದಾನೇ ಸೀಳು ತುಟಿಯಂಥ ಸಮಸ್ಯೆ, ಶ್ವಾಸಕೋಶದ ಸಮಸ್ಯೆಗಳು ಬರುತ್ತವೆ. ಇನ್ನೂ ಕೆಲವು ಮಕ್ಕಳು ಹುಟ್ಟಿದ ಮೇಲೆ ಅನಿರೀಕ್ಷಿತವಾಗಿ ಸತ್ತುಹೋಗುತ್ತವೆ.

a ಧೂಮಪಾನ ಅಂದ್ರೆ ಬೀಡಿ, ಸಿಗರೇಟ್‌, ಸಿಗಾರ್‌, ಚುಟ್ಟವನ್ನು ಸೇದುವುದಕ್ಕೆ ಸೂಚಿಸುತ್ತೆ. ಆದ್ರೂ ಇಲ್ಲಿ ಚರ್ಚಿಸಿರೋ ತತ್ವಗಳು ತಂಬಾಕು, ಅಡಿಕೆ ಅಗಿಯುವುದು, ನಶೆ ಏರಿಸೋದು, ಗುಟ್ಕಾ, ಪಾನ್‌, ನಿಕೋಟಿನ್‌ ಇರುವ ಎಲೆಕ್ಟ್ರಾನಿಕ್‌ ಸಿಗರೇಟ್‌ ಮತ್ತು ಇತರ ಚಟ ಹಿಡಿಸುವ ಮಾದಕ ಪದಾರ್ಥಗಳನ್ನ ಸೇವಿಸೋದಕ್ಕೂ ಅನ್ವಯಿಸುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ