ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 167
  • ಮೊದಲ ಪಾಪ ಯಾವುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೊದಲ ಪಾಪ ಯಾವುದು?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ಮೊದಲ ಪಾಪದಿಂದ ಆದಾಮ ಹವ್ವಗೆ ಯಾವ ಕಷ್ಟ ಬಂತು?
  • ಮೊದಲ ಪಾಪದಿಂದ ನಮಗೆ ಯಾವ ಕಷ್ಟ ಬಂದಿದೆ?
  • ಈ ಕಷ್ಟಗಳಿಂದ ನಮಗೆ ಮುಕ್ತಿ ಇದ್ಯಾ?
  • ಮೊದಲ ಪಾಪದ ಬಗ್ಗೆ ಇರುವ ತಪ್ಪು ಕಲ್ಪನೆಗಳು
  • ಯೇಸು ರಕ್ಷಿಸುತ್ತಾನೆ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಪ್ರಥಮ ಮಾನವ ದಂಪತಿಗಳಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಕೊನೆಯ ಶತ್ರುವಾದ ಮರಣ​—⁠ಆಗಲಿದೆ ನಿರ್ಮೂಲನ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಪಾಪವು ಇನ್ನಿಲ್ಲದಿರುವಾಗ
    ಕಾವಲಿನಬುರುಜು—1997
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 167
ಏದೆನ್‌ ತೋಟದಲ್ಲಿ ಆದಾಮ ಹಣ್ಣನ್ನು ಹಿಡ್ಕೊಂಡಿದ್ದಾನೆ, ಆದಾಮ ಹವ್ವ ಒಬ್ಬರನ್ನೊಬ್ರು ನೋಡ್ತಿದ್ದಾರೆ.

ಮೊದಲ ಪಾಪ ಯಾವುದು?

ಬೈಬಲ್‌ ಕೊಡೋ ಉತ್ತರ

ಮನುಷ್ಯರಲ್ಲಿ ಮೊದಲು ಪಾಪ ಮಾಡಿದ್ದು ಆದಾಮ ಹವ್ವ. ಅವರು ದೇವರ ಮಾತನ್ನ ಮೀರಿ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ತಿಂದ್ರು. ಇದನ್ನೇ ತುಂಬ ಜನ ಮೊದಲ ಪಾಪa ಅಂತಾರೆ. (ಆದಿಕಾಂಡ 2:16, 17; 3:6; ರೋಮನ್ನರಿಗೆ 5:19) ಆ ಮರದ ಹಣ್ಣನ್ನು ತಿನ್ನಬಾರದು ಅಂತ ದೇವರು ಮೊದಲೇ ಅವರಿಗೆ ಹೇಳಿದ್ದನು. ಏಕೆಂದ್ರೆ ಮನುಷ್ಯರಿಗೆ ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಅಂತ ತೀರ್ಮಾನ ಮಾಡೋ ಅಧಿಕಾರ ಅಥವಾ ಹಕ್ಕು ದೇವರಿಗೆ ಮಾತ್ರ ಇದೆ. ಆದ್ರೆ ಆದಾಮ ಹವ್ವ ಆ ಅಧಿಕಾರನ ತಮ್ಮ ಕೈಗೆ ಎತ್ಕೊಂಡ್ರು. ಅವರಿಗೆ ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಅಂತ ಅವರೇ ತೀರ್ಮಾನ ಮಾಡ್ಕೊಂಡ್ರು. ಆ ಹಣ್ಣನ್ನು ತಿಂದು ದೇವರ ಅಧಿಕಾರ ಬೇಡವೇ ಬೇಡ ಅಂತ ತೋರಿಸಿದ್ರು.

  • ಮೊದಲ ಪಾಪದಿಂದ ಆದಾಮ ಹವ್ವಗೆ ಯಾವ ಕಷ್ಟ ಬಂತು?

  • ಮೊದಲ ಪಾಪದಿಂದ ನಮಗೆ ಯಾವ ಕಷ್ಟ ಬಂದಿದೆ?

  • ಈ ಕಷ್ಟದಿಂದ ನಮಗೆ ಮುಕ್ತಿ ಇದ್ಯಾ?

  • ಮೊದಲ ಪಾಪದ ಬಗ್ಗೆ ಇರೋ ತಪ್ಪು ಕಲ್ಪನೆಗಳು

ಮೊದಲ ಪಾಪದಿಂದ ಆದಾಮ ಹವ್ವಗೆ ಯಾವ ಕಷ್ಟ ಬಂತು?

ಆದಾಮ ಹವ್ವ ಪಾಪ ಮಾಡಿದ್ರಿಂದ ದೇವರ ಜೊತೆ ಅವರಿಗಿದ್ದ ಸ್ನೇಹ ಮುರಿದುಹೋಯ್ತು. ಯಾವುದೇ ಕಾಯಿಲೆ ಇಲ್ಲದೆ ಸಂತೋಷವಾಗಿ ಶಾಶ್ವತವಾಗಿ ಜೀವಿಸೋ ಅವಕಾಶನ ಕಳಕೊಂಡ್ರು. ಅವರಿಗೆ ವಯಸ್ಸಾಯಿತು. ಕೊನೆಗೆ ಮಣ್ಣಲ್ಲಿ ಮಣ್ಣಾಗಿ ಹೋದ್ರು.—ಆದಿಕಾಂಡ 3:19.

ಮೊದಲ ಪಾಪದಿಂದ ನಮಗೆ ಯಾವ ಕಷ್ಟ ಬಂದಿದೆ?

ಆದಾಮ ಹವ್ವ ಪಾಪ ಅನ್ನೋದನ್ನ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೀಗೆ ಇಡೀ ಮಾನವಕುಲಕ್ಕೆ ದಾಟಿಸಿದ್ರು. ಇದು ಹೇಗಿದೆ ಅಂದ್ರೆ ಅಪ್ಪಅಮ್ಮಗೆ ಇರೋ ಕಾಯಿಲೆ ಮಕ್ಕಳಿಗೆ ಬರೋ ಹಾಗೆ. (ರೋಮನ್ನರಿಗೆ 5:12) ಹಾಗಾಗಿ ಎಲ್ಲರೂ ಹುಟ್ಟಿದಾಗಿಂದನೇ ‘ಪಾಪಿಗಳು.’b ಅದರ ಅರ್ಥ, ಹುಟ್ಟುವಾಗಲೇ ನಮ್ಮಲ್ಲಿ ಕುಂದುಕೊರತೆ ಇದೆ, ತುಂಬ ಸುಲಭವಾಗಿ ನಾವು ತಪ್ಪು ಮಾಡಿಬಿಡ್ತೀವಿ.—ಕೀರ್ತನೆ 51:5; ಎಫೆಸ 2:3.

ಈ ಪಾಪ ಅಥವಾ ಕುಂದುಕೊರತೆಯಿಂದನೇ ನಮಗೆ ಕಾಯಿಲೆ ಬರುತ್ತೆ, ವಯಸ್ಸಾಗುತ್ತೆ, ಸಾವೂ ಬರುತ್ತೆ. (ರೋಮನ್ನರಿಗೆ 6:23) ಅಲ್ಲದೆ ನಾವು ಮಾಡುವ ತಪ್ಪುಗಳಿಂದ, ಬೇರೆಯವರು ಮಾಡುವ ತಪ್ಪುಗಳಿಂದ ಕಷ್ಟಪಡ್ತೀವಿ.—ಪ್ರಸಂಗಿ 8:9; ಯಾಕೋಬ 3:2.

ಈ ಕಷ್ಟಗಳಿಂದ ನಮಗೆ ಮುಕ್ತಿ ಇದ್ಯಾ?

ಖಂಡಿತ ಇದೆ. ‘ನಮ್ಮ ಪಾಪಗಳನ್ನು ನಿವಾರಿಸಲು’ ಯೇಸು ತನ್ನ ಜೀವವನ್ನೇ ಯಜ್ಞವಾಗಿ ಕೊಟ್ಟ ಎಂದು ಬೈಬಲ್‌ ಹೇಳುತ್ತೆ. (1 ಯೋಹಾನ 4:10) ಯೇಸು ನಮಗಾಗಿ ಜೀವ ಕೊಟ್ಟಿದ್ರಿಂದ ನಾವು ಪಾಪದಿಂದ ಅನುಭವಿಸ್ತಿರೋ ಎಲ್ಲ ಕಷ್ಟಗಳಿಗೆ ಮುಕ್ತಿ ಇದೆ. ಅಷ್ಟೇ ಅಲ್ಲ, ಆದಾಮ ಹವ್ವ ಕಳಕೊಂಡ ಸುವರ್ಣ ಅವಕಾಶ ಅಂದ್ರೆ ಪೂರ್ತಿ ಆರೋಗ್ಯದಿಂದ ಶಾಶ್ವತವಾಗಿ ಬದುಕುವ ಅವಕಾಶ ನಮಗೆ ಸಿಗುತ್ತದೆ.—ಯೋಹಾನ 3:16.c

ಮೊದಲ ಪಾಪದ ಬಗ್ಗೆ ಇರುವ ತಪ್ಪು ಕಲ್ಪನೆಗಳು

ತಪ್ಪು: ಮೊದಲ ಪಾಪದಿಂದಾಗಿ ನಾವು ದೇವರಿಗೆ ಹತ್ರ ಆಗಲಿಕ್ಕೆ ಆಗೋದೇ ಇಲ್ಲ.

ಸರಿ: ಆದಾಮ ಹವ್ವ ಮಾಡಿದ ಪಾಪಕ್ಕೆ ದೇವರು ನಮ್ಮನ್ನು ದೂರುವುದಿಲ್ಲ. ನಮ್ಮಲ್ಲಿ ಕುಂದುಕೊರತೆ ಇದೆ ಅಂತ ಆತನಿಗೆ ಗೊತ್ತು. ಹಾಗಾಗಿ ನಮ್ಮ ಕೈಯಲ್ಲಿ ಆಗದೇ ಇರೋ ಯಾವುದನ್ನೂ ಮಾಡಲಿಕ್ಕೆ ಹೇಳಲ್ಲ. (ಕೀರ್ತನೆ 103:14) ಆ ಪಾಪದಿಂದ ನಾವು ತುಂಬ ಕಷ್ಟ ಅನುಭವಿಸ್ತಿರೋದಾದ್ರೂ ದೇವರ ಆಪ್ತ ಸ್ನೇಹಿತರಾಗುವ ಅವಕಾಶ ನಮಗಿದೆ.—ಜ್ಞಾನೋಕ್ತಿ 3:32.

ತಪ್ಪು: ದೀಕ್ಷಾಸ್ನಾನ ಪಡ್ಕೊಂಡ್ರೆ ಮೊದಲ ಪಾಪದಿಂದ ಬಿಡುಗಡೆ ಸಿಗುತ್ತೆ. ಹಾಗಾಗಿ ಎಳೇ ಮಕ್ಕಳಿಗೆ ದೀಕ್ಷಾಸ್ನಾನ ಮಾಡಿಸಬೇಕು.

ಸರಿ: ರಕ್ಷಣೆ ಪಡೆಯಲು ದೀಕ್ಷಾಸ್ನಾನ ಒಂದು ಪ್ರಾಮುಖ್ಯ ಹೆಜ್ಜೆ ನಿಜ. ಆದ್ರೆ ಯೇಸುವಿನ ಯಜ್ಞದಲ್ಲಿ ನಂಬಿಕೆ ಇಟ್ಟರೆ ಮಾತ್ರ ಪಾಪದಿಂದ ಬಿಡುಗಡೆ ಸಿಗುತ್ತದೆ. (1 ಪೇತ್ರ 3:21; 1 ಯೋಹಾನ 1:7) ನಂಬಿಕೆ ಇರಬೇಕಾದ್ರೆ ಮೊದಲು ಬೈಬಲಿನ ಜ್ಞಾನ ಪಡ್ಕೊಳ್ಳಬೇಕು. ಎಳೇ ಮಕ್ಕಳಿಗೆ ಜ್ಞಾನ ಪಡ್ಕೊಂಡು ನಂಬಿಕೆ ಇಡಲಿಕ್ಕೆ ಆಗುತ್ತಾ? ಹಾಗಾಗಿ ಎಳೇ ಮಕ್ಕಳಿಗೆ ದೀಕ್ಷಾಸ್ನಾನ ಕೊಡೋದನ್ನು ಬೈಬಲ್‌ ಒಪ್ಪುವುದಿಲ್ಲ. ಒಂದನೇ ಶತಮಾನದಲ್ಲಿ ದೇವರ ವಾಕ್ಯವನ್ನು ನಂಬಿದ ‘ಗಂಡಸರಿಗೆ ಹೆಂಗಸರಿಗೆ’ ದೀಕ್ಷಾಸ್ನಾನ ಕೊಡ್ತಿದ್ರು, ಎಳೇ ಮಕ್ಕಳಿಗಲ್ಲ.—ಅಪೊಸ್ತಲರ ಕಾರ್ಯ 2:41; 8:12.

ತಪ್ಪು: ತಿನ್ನಬಾರದು ಅಂತ ಹೇಳಿದ ಹಣ್ಣನ್ನು ಮೊದಲು ತಿಂದದ್ದು ಹವ್ವ. ಅದಕ್ಕೇ ದೇವರು ಸ್ತ್ರೀಯರಿಗೆ ಶಾಪ ಕೊಟ್ಟಿದ್ದಾನೆ.

ಸರಿ: ಹವ್ವ ಪಾಪ ಮಾಡುವಂತೆ ಪ್ರೇರೇಪಿಸಿದ ಸರ್ಪಕ್ಕೆ ಅಂದ್ರೆ ಪಿಶಾಚ ಸೈತಾನ ಅಂತ ಹೆಸರಿರುವ ಪುರಾತನ ಸರ್ಪಕ್ಕೆ ದೇವರು ಶಾಪ ಕೊಟ್ಟನು, ಸ್ತ್ರೀಯರಿಗೆ ಅಲ್ಲ. (ಪ್ರಕಟನೆ 12:9; ಆದಿಕಾಂಡ 3:14) ಗಮನಿಸಬೇಕಾದ ವಿಷ್ಯ ಏನಂದ್ರೆ, ಮೊದಲ ಪಾಪಕ್ಕೆ ಮುಖ್ಯ ಕಾರಣ ಆದಾಮ ಅಂತ ದೇವರು ಹೇಳಿದನೇ ವಿನಃ ಹವ್ವ ಅಂತ ಹೇಳಲಿಲ್ಲ.—ರೋಮನ್ನರಿಗೆ 5:12.

ಆದಾಮ ತನ್ನ ಹೆಂಡತಿ ಮೇಲೆ ಅಧಿಕಾರ ನಡೆಸ್ತಾನೆ ಅಂತ ದೇವರು ಹೇಳಿದನಲ್ಲಾ. ಅದು ಯಾಕೆ? (ಆದಿಕಾಂಡ 3:16) ದೇವರು ಆ ಮಾತು ಹೇಳಿದಾಗ ಪಾಪದಿಂದ ಗಂಡಹೆಂಡತಿ ಮಧ್ಯೆ ಸಮಸ್ಯೆ ಬರುತ್ತೆ ಅಂತ ಹೇಳಿದನು. ಗಂಡ ಹೆಂಡತಿ ಮೇಲೆ ದಬ್ಬಾಳಿಕೆ ಮಾಡೋದನ್ನು ದೇವರು ಒಪ್ಪಲ್ಲ. ಅವಳನ್ನು ಪ್ರೀತಿಸಿ ಗೌರವಿಸಬೇಕು ಅಂತ ಹೇಳಿದ್ದಾನೆ. ಗಂಡಸರು ಹೆಂಗಸರಿಗೆ ಆಳವಾದ ಗೌರವ ಕೊಡಬೇಕು ಅಂತನೂ ಹೇಳಿದ್ದಾನೆ.—ಎಫೆಸ 5:25; 1 ಪೇತ್ರ 3:7.

ತಪ್ಪು: ಲೈಂಗಿಕ ಸಂಬಂಧವೇ ಮೊದಲ ಪಾಪ.

ಸರಿ: ಲೈಂಗಿಕ ಸಂಬಂಧವೇ ಮೊದಲ ಪಾಪ ಅಲ್ಲ. ಏಕೆಂದ್ರೆ,

  • ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬಾರದು ಅಂತ ದೇವರು ಆದಾಮನಿಗೆ ಹೇಳಿದ್ದು ಹವ್ವ ಸೃಷ್ಟಿಯಾಗೋದಕ್ಕೆ ಮುಂಚೆ ಆದಾಮ ಒಬ್ಬನೇ ಇದ್ದಾಗ.—ಆದಿಕಾಂಡ 2:17, 18.

  • ದೇವರು ಆದಾಮ ಹವ್ವಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ” ಅಂದ್ರೆ ಮಕ್ಕಳನ್ನು ಪಡೆಯಿರಿ ಅಂತ ಆಶೀರ್ವದಿಸಿದನು. (ಆದಿಕಾಂಡ 1:28) ಮಕ್ಕಳನ್ನು ಪಡೆಯಿರಿ ಅಂತ ದೇವರೇ ಹೇಳಿ, ಹಾಗೆ ಮಾಡಿದ್ದಕ್ಕೆ ಅವರಿಗೆ ಶಿಕ್ಷೆ ಕೊಟ್ರೆ ದೇವರು ಕ್ರೂರಿ ಅಂತ ಆಗಲ್ವಾ?

  • ಆದಾಮ ಹವ್ವ ಒಂದೇ ಸಮಯದಲ್ಲಿ ಪಾಪ ಮಾಡಲಿಲ್ಲ, ಮೊದಲು ಹವ್ವ ಪಾಪ ಮಾಡಿದಳು, ಆಮೇಲೆ ಅವಳ ಗಂಡ.—ಆದಿಕಾಂಡ 3:6.

  • ಗಂಡ ಹೆಂಡತಿ ಮಧ್ಯೆ ಲೈಂಗಿಕ ಸಂಬಂಧ ತಪ್ಪಲ್ಲ ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 5:18, 19; 1 ಕೊರಿಂಥ 7:3.

a ಮೊದಲ ಪಾಪ ಅನ್ನೋ ಪದ ಬೈಬಲಲ್ಲಿ ಎಲ್ಲೂ ಇಲ್ಲ. ನಿಜ ಹೇಳಬೇಕಾದ್ರೆ, ಸೈತಾನನು ಹವ್ವಳಿಗೆ ಹೇಳಿದ ಮೋಸದ ಮಾತುಗಳು ಮತ್ತು ಹಸಿ ಹಸಿ ಸುಳ್ಳೇ ಬೈಬಲಲ್ಲಿ ಹೇಳಿರುವ ಮೊದಲ ಪಾಪ.—ಆದಿಕಾಂಡ 3:4, 5; ಯೋಹಾನ 8:44.

b ಬೈಬಲಲ್ಲಿ ‘ಪಾಪ’ ಅಂತ ಹೇಳುವಾಗ ನಾವು ಮಾಡುವ ತಪ್ಪುಗಳಿಗೆ ಮಾತ್ರ ಅಲ್ಲ ನಮ್ಮಲ್ಲಿರೋ ಕುಂದುಕೊರತೆಗೆ ಅಥವಾ ಆದಾಮ ಹವ್ವಳಿಂದ ನಾವು ಪಡೆದ ಪಾಪಕ್ಕೂ ಸೂಚಿಸುತ್ತೆ.

c ಯೇಸುವಿನ ಯಜ್ಞದ ಬಗ್ಗೆ ಮತ್ತು ಅದರಿಂದ ನಾವು ಪ್ರಯೋಜನ ಪಡೆಯುವ ವಿಧದ ಬಗ್ಗೆ ಹೆಚ್ಚು ತಿಳಿಯಲು “ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?” ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ