ಹಿಂಸಾಚಾರ ನಾವು ಪಂಥಾಹ್ವಾನವನ್ನು ಎದುರಿಸುತ್ತೇವೋ?
ಸ್ಪಷ್ಟವಾಗಿ, ಹಿಂಸೆಯ ಪಾತಕಗಳು ಬೆಳೆಯುವ ವ್ಯಾಕುಲತೆಗೆ ಒಂದು ಕಾರಣವಾಗಿರುತ್ತದೆ. ಆದರೆ ಅವರು ಸಾದರಪಡಿಸುವ ಪಂಥಾಹ್ವಾನವನ್ನು ಎದುರಿಸಲು ಏನನ್ನು ಮಾಡಲಾಗಿದೆ?
ಬ್ರಿಟನಿನ ಹೆಚ್ಚಿನ ಪಾತಕಗಳು ಶಾಲಾ-ವಯಸ್ಸಿನ ಯುವಕರಿಂದ ನಡಿಸಲ್ಪಡುತ್ತದೆ. 15 ಮಂದಿ ವಿದ್ಯಾರ್ಥಿಗಳಲ್ಲಿದ್ದ ತರಗತಿಯೊಂದರಲ್ಲಿ, ಕೇವಲ 3 ವಿದ್ಯಾರ್ಥಿಗಳಿಗೆ ಮಾತ್ರ ತಕ್ಷೀರಿನ ದಾಖಲೆಯಿಲ್ಲದ ಶಾಲೆಯಲ್ಲಿ ಅವಳು ಕಲಿಸಿದ್ದಳು ಎಂದು ಶಫೀಲ್ಡ್— ಇಂಗ್ಲೆಂಡ್ನ ಒಬ್ಬಾಕೆ ಶಿಕ್ಷಕಿಯು ಅಂದಳು. ವಾಸ್ತವದಲ್ಲಿ, ಶಾಲಾತರಗತಿಯ ಹಿಂಸಾಚಾರದಲ್ಲಿ ಶಿಶುವಿಹಾರದ (K.G.) ಮಕ್ಕಳು ಕೂಡಾ ಈಗ ಸೇರಿರುತ್ತಾರೆ.
“ಕೂಸುಕೋಣೆಯ ದಾದಿಯರು ಅವರ ವಿದ್ಯಾರ್ಥಿಗಳಿಂದ ಗಂಭೀರವಾದ ಹಲ್ಲೆಗೆ ಈಡಾಗಿದ್ದಾರೆ, ಮತ್ತು ಬೇರೆ ಮಕ್ಕಳ ಹೃದಯದಲ್ಲಿರುವ ವಿಪರೀತ ಭಯವನ್ನು ನೀವು ಎಣಿಸಬಹುದು,” ಎಂದು ಹೇಳಿದಳು ಒಬ್ಬ ಯೋರ್ಕ್ಶೈರ್ ಅಧ್ಯಾಪಿಕೆ. ಅವಳು ಕೂಡಿಸಿದ್ದು: “ಪ್ರಾಥಮಿಕ ಶಾಲೆಯ ಮಟ್ಟದಲ್ಲಿ ಇಂತಹ ಕೇಡುಗಳನ್ನು ಮಗುವೊಂದು ಮಾಡಶಕ್ತನಾದರೆ, ಮತ್ತು ಅದರ ಕುರಿತು ನಾವೇನೂ ಮಾಡದಿದ್ದರೆ, ಎರಡನೆಯ ಹಂತದ ಶಾಲೆಯಲ್ಲಿ ಅವರು ಏನಾಗಬಹುದು?”
ಆದರೆ ಮಕ್ಕಳು ಇಷ್ಟೊಂದು ಹಿಂಸಾಚಾರದ ಕಡೆಗೆ ವಾಲಿರಲು ಕಾರಣವೇನು?
ಟೀವೀ ಮತ್ತು ಚಲನಚಿತ್ರಗಳ ಪಾತ್ರ
ಅಧಿಕ ಮಕ್ಕಳು ಹಿಂಸಾಚಾರದ ಮತ್ತು ಕೌರ್ಯ ಕಾಮವಿಕಾರದ ಟೆಲಿವಿಶನ್ ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ, ಮತ್ತು ಹಿಂಸಾಚಾರದ ಏರುವಿಕೆಗೆ ಇದೊಂದು ಕಾರಣವಾಗಿದೆ ಎಂದು ಅನೇಕ ಅಧಿಕಾರಿಗಳು ಹೇಳುತ್ತಾರೆ. ಉದಾಹರಣೆಗೆ, ಆಷ್ಟ್ರೇಲಿಯಾದಲ್ಲಿ 10 ಮತ್ತು 11 ವಯಸ್ಸಿನ 1,500 ಮಕ್ಕಳ ವೀಕ್ಷಣದ ನಮೂನೆಯ ಸಮೀಕ್ಷೆಯನ್ನು ತೆಗೆದುಕೊಳ್ಳಲಾಯಿತು. ಆಷ್ಟ್ರೇಲಿಯನ್ ಚಲನ ಚಿತ್ರ ವಿಮರ್ಶಕ ಮಂಡಲಿಯು ಮಕ್ಕಳು ನೋಡಿದ ಚಿತ್ರಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅವರಿಗೆ ಅಯೋಗ್ಯವಾದದ್ದು ಎಂದು ಪರಿಗಣಿಸಿದೆ. ಆದರೂ, ಮೂರನೆಯ ಒಂದು ಅಂಶ ಮಕ್ಕಳು ತಾವು ಹಿಂಸಾಚಾರದ ದೃಶ್ಯಗಳಲ್ಲಿ ಆನಂದಿಸುವುದಾಗಿ ಹೇಳಿದರು.
ಒಬ್ಬನು ವಿವರಿಸಿದ್ದು: “ಒಬ್ಬ ಹುಡುಗಿ ತನ್ನ ತಂದೆಯ ಶಿರಸ್ಸನ್ನು ಕಡಿದು, ತನ್ನ ಜನ್ಮ ದಿನದ ಕೇಕ್ನೋಪಾದಿ ಅದನ್ನು ತಿನ್ನುವ ದೃಶ್ಯವು ನನಗೆ ಒಳ್ಳೇದಾಗಿ ರುಚಿಸಿತು.” ಇನ್ನೊಂದು ಚಲನಚಿತ್ರದ ಕುರಿತಾಗಿ ಒಂದು ಮಗು ಹೇಳುವುದು: “ಒಬ್ಬ ಅನ್ಯನು ಹೆಂಗಸೊಬ್ಬಳ ತಲೆಯನ್ನು ತಿನ್ನುತ್ತಾ, ತೇಗುವುದನ್ನು ನಾನು ಮೆಚ್ಚಿದೆನು.” ಇನ್ನೂ ಒಂದು ಮಗುವು ಅಂದದ್ದು: “ಅವರು ಒಬ್ಬ ಹೆಂಗಸನ್ನು ತುಂಡು ತುಂಡಾಗಿ ಸಿಗಿದಾಗ, ಅವಳಿಂದ ಬಿಳಿಪು ಹೊರಬಂದದನ್ನು ನಾನು ಮೆಚ್ಚಿದೆನು.”
ಇಂತಹ ಥರಹದ ಸಂಗತಿಗಳನ್ನು ವೀಕ್ಷಿಸುವುದರ ಪರಿಣಾಮವಾಗಿ ಮಕ್ಕಳೂ, ಪ್ರಾಯಸ್ಥರೂ ಹಿಂಸಾಚಾರದ ಹಂಬಲದ ಹಸಿವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಸಂಶೋಧಕರು ತೀರ್ಮಾನಿಸಿರುತ್ತಾರೆ. ಅಂತಹ ಚಲನಚಿತ್ರಗಳನ್ನು ಅವರ ಮಕ್ಕಳು ವೀಕ್ಷಿಸುವಂತೆ ಅನುಮತಿಸಲು, ಅವರ ಮಕ್ಕಳ ಮೂಲಕ ಬಲವಾದ ಸಾಮಾಜಿಕ ಒತ್ತಡವು ಹಾಕಲ್ಪಡುವುದರಿಂದ ಹೆತ್ತವರು ಅದನ್ನು ಮಾಡುವಂತೆ ಬೆದರಿಸಲ್ಪಡುತ್ತಾರೆ ಯಾ ಒತ್ತಡಕ್ಕೊಳಪಡುತ್ತಾರೆಂದೂ ಅವರು ಹೇಳುತ್ತಾರೆ.
ಹಿಂಸಾಚಾರವನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೋಡುವುದರ ಮೂಲಕ ಆಗುವ ಪರಿಣಾಮಗಳ ಅಧ್ಯಯನವನ್ನು ಬ್ರಿಟನಿನ ಸ್ವತಂತ್ರ ಪ್ರಸರಣಾ ಪ್ರಾಧಿಕಾರ ನಡಿಸಿತು. ಇಪ್ಪತ್ತು ಲಕ್ಷದಷ್ಟು ವೀಕ್ಷಕರು ಇಲ್ಲವೇ ಜುಮ್ಲೀ ವೀಕ್ಷಕರ 6 ಪ್ರತಿಶತದಷ್ಟು, ಪಾತಕಗಳ ಕಾರ್ಯಕ್ರಮವನ್ನು ನೋಡಿದ ನಂತರ “ಬಹಳಷ್ಟು ಹಿಂಸಾಪ್ರವೃತ್ತಿ”ಯ ಭಾವನೆ ತಮಗಾಗುತ್ತದೆ ಎಂದು ಹೇಳಿದರು. ಲಂಡನಿನ ಟೈಮ್ಸ್ ಅದರ ಕಂಡುಹಿಡಿತಗಳ ವರದಿಯಲ್ಲಿ, ಪರದೆಯ ಹಿಂಸಾಚಾರ ನೈಜವಲ್ಲವೆಂದು ಅರ್ಥಮಾಡಿಕೊಳ್ಳಲು ಮಕ್ಕಳು ತಪ್ಪುತ್ತಾರೆ ಮತ್ತು ಕೊಲೆಯು “ದೈನಂದಿನ ಸಂಗತಿ” ಎಂಬ ಭಾವನೆಯುಳ್ಳವರಾಗುತ್ತಾರೆ. ಆದುದರಿಂದ ಹಿಂಸಾಚಾರಕ್ಕೆ ಅನೇಕ ಮಕ್ಕಳು ತಮ್ಮನ್ನು ಒಗ್ಗಿಸಿಕೊಳ್ಳುವುದರಲ್ಲಿ ಮತ್ತು ತಾವೇ ಸ್ವತಹ ಅಂತಹ ದುಷ್ಕರ್ಮಗಳನ್ನು ನಡಿಸುವುದರಲ್ಲಿ ಕೊಂಚವೇ ಅಳುಕನ್ನು ತೋರಿಸುವುದರಲ್ಲಿ ಆಶ್ಚರ್ಯವೇನಿದೆ?
ಶಾಲೆಗಳು ಮತ್ತು ಹೆತ್ತವರು
ಹಿಂಸಾಚಾರದಲ್ಲಿ ಏರಿಕೆಯಾಗಲು ಹೆಚ್ಚಿನ ಆರೋಪವು ಶಾಲೆಯಲ್ಲಿ ನೈತಿಕ ಮೌಲ್ಯತೆಯನ್ನು ಕಲಿಸುವುದರಲ್ಲಿ ಶಾಲೆಗಳು ತಪ್ಪಿಹೋಗಿರುವುದೇ ಎಂದು ಹೇಳಲಾಗುತ್ತದೆ. ಈ ತಪ್ಪಿಹೋಗುವಿಕೆಯ ಕುರಿತು, ಇಬ್ಬರು ಬ್ರಿಟನಿನಲ್ಲಿ ಆಂತರಿಕ-ನಗರ ಅಧ್ಯಾಪಕರಿಂದ ತಯಾರಿಸಲ್ಪಟ್ಟ ಒಂದು ವರದಿಯು ಹೇಳುವುದು: “ಇದೊಂದು ದಾರುಣ ಸನ್ನಿವೇಶ ಮತ್ತು ನಮ್ಮ ಸಮಾಜದಲ್ಲಿ ಹಿಂಸಾಚಾರದ ಏರುವಿಕೆಯ ಕಾರಣವನ್ನು ವಿವರಿಸುವಲ್ಲಿ ಬಹಳಷ್ಟನ್ನು ಹೇಳಲಿಕ್ಕಿದೆ.” ಆದರೆ ಮಕ್ಕಳಲ್ಲಿ ನೈತಿಕ ಮೌಲ್ಯತೆಯನ್ನು ಬೇರೂರಿಸುವುದರಲ್ಲಿ ಶಿಕ್ಷಕರನ್ನು ಆರೋಪಿಸುವುದು ಸಮಂಜಸವೇ?
ಮುಖ್ಯ ಅಧ್ಯಾಪಕರ ಬ್ರಿಟಿಷ್ ರಾಷ್ಟ್ರೀಯ ಸಂಘಟನೆಯ ಒಂದು ವರದಿಯು ಉತ್ತರಿಸುವುದು: “ಶಾಲೆಯಲ್ಲಿ ಮತ್ತು ಸಮಾಜದಲ್ಲಿ ನಡತೆಯ ಮಟ್ಟಗಳು ಕೀಳ್ಮಟ್ಟಕ್ಕೆ ಇಳಿಯುತ್ತಿವೆ, ಆದರೆ ಎಳೆಯರ ಮೂಲಕ ಸಮಾಜದ ಮೇಲೆ ಶಾಲೆಯ ಪ್ರಭಾವ ಎಷ್ಟಾಗುತ್ತದೆ ಎನ್ನುವುದನ್ನು ಅಧಿಕ ಒತ್ತಾಗಿ ಹೇಳ ಸಾಧ್ಯವಿಲ್ಲ.” ಅವನು ಇಲ್ಲವೇ ಅವಳು ಶಾಲೆಗೆ ಬರುವ ಎಷ್ಟೋ ಮೊದಲು ಮಗುವಿನ ಗುಣವ್ಯವಸ್ಥೆಯು ಈಗಾಗಲೇ ರೂಪಿಸಲ್ಪಟ್ಟಿರುವುದರಿಂದ, ವರದಿಯು ಹೇಳುವುದು: ‘ಅದನ್ನು ಬದಲಾಯಿಸಲು ಅಧ್ಯಾಪಕರಿಗೆ ಇರುವ ಅವಕಾಶ ಅಲ್ಲಿ ಕೊಂಚವೇ.’
ಸಿಟಿ ಆಫ್ ಪೊರ್ಟ್ಸ್ಮೌತ್ ಹುಡುಗರ ಶಾಲೆಯ ಉಪ ಮುಖ್ಯಸ್ಥನಾದ ರೋಯ್ ಮುಡ್, ದಿನದ ಕೆಲವೇ ತಾಸು ತಮ್ಮ ವಿದ್ಯಾರ್ಥಿಗಳನ್ನು ನೋಡುವಂಥಾ ಅಧ್ಯಾಪಕರು ‘ಮಕ್ಕಳಿಗೆ ಅವರ ಹೆತ್ತವರಿಂದ ಸರಿ ಮತ್ತು ತಪ್ಪು ಯಾವುದು ಎನ್ನುವುದರ ಭಿನ್ನತೆಯು ಕಲಿಸಲ್ಪಡದ ಹೊರತು, ಶಾಲೆಯ ಪಥ್ಯದಲ್ಲಿ ಅಧಿಕ ನೈತಿಕ ತಂತನ್ನು ಕೂಡಿಸುವ ವಿಷಯದಲ್ಲಿ ಏನನ್ನೂ ಮಾಡಲಾರರು” ಎಂದು ಒತ್ತಿಹೇಳುತ್ತಾರೆ.
ಆರೋಗ್ಯಕರ ನೈತಿಕ ನಡತೆಯ ಬುನಾದಿಯು ಜೀವನದ ಆರಂಭದಲ್ಲಿಯೇ ಹೆತ್ತವರಿಂದ ಹಾಕಲ್ಪಡಬೇಕು ಎನ್ನುವುದರಲ್ಲಿ ಪ್ರಶ್ನೆಯಿರುವುದಿಲ್ಲ. ವೃದ್ಧಿಗೊಳ್ಳುತ್ತರುವ ಹಿಂಸಾಚಾರವು ಹಿಮ್ಮುಖವಾಗ ಬೇಕಾದರೆ, ಶಾಲೆಗಳ ಬದಲು, ಹೆತ್ತವರು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯತೆಗಳನ್ನು ಕಲಿಸುವುದರಲ್ಲಿ ಮುಖ್ಯವಾಗಿ ಒಳಗೂಡಿರಬೇಕು. ಆದರೂ ಹೆತ್ತವರಾಗಲಿ, ಶಾಲೆಗಳಾಗಲಿ ಹಿಂಸಾಚಾರದ ಪಂಥಾಹ್ವಾನವನ್ನು ಎದುರಿಸುತ್ತಿಲ್ಲ, ಇಲ್ಲವೇ ಕಡಿಮೆ ಪಕ್ಷ ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲ.
ಕಾನೂನು ಜ್ಯಾರಿಗೊಳಿಸುವದರ ಕುರಿತೇನು?
ಕಾನೂನು ಜ್ಯಾರಿಗೊಳಿಸುವ ಅಧಿಕಾರಿಗಳು ಈ ಪಂಥಾಹ್ವಾನವನ್ನು ಎದುರಿಸುತ್ತಾರೋ? ದಕ್ಷಿಣ ಅಮೆರಿಕದ ಕೊಲಂಬಿಯದಲ್ಲಿ, ಕೊಕೆಯ್ನ್ ಮದ್ಯ ಕಳ್ಳಸಾಗಣೆದಾರರು ನೀಡಿದ ಲಂಚವನ್ನು ಸ್ವೀಕರಿಸಲು ನಿರಾಕರಿಸಿದ 62 ನ್ಯಾಯಾಧೀಶರನ್ನು ಹತಿಸಲಾಯಿತು ಎಂದು ವರದಿಯಾಗಿದೆ. ತದ್ರೀತಿಯಲ್ಲಿ, ಅಮೆರಿಕದ ಲಾಸೆಂಜಲೀಸ್ನಲ್ಲಿ, 1987ರಲ್ಲಿ ಮಾದಕೌಷಧ—ತಂಡಗಳ 387 ಕೊಲ್ಲುವಿಕೆಗಳನ್ನು ನಿಯಮ ವಿಧಾಯಕ ಅಧಿಕಾರಿಗಳು ತಡೆಯಲಶಕ್ಯರಾದರು. ಅಂತಹ ಅನೇಕ ಸ್ಥಳಗಳಲ್ಲಿ, ವಿಶೇಷವಾಗಿ ಮಾದಕೌಷಧಗಳ ಕಾರಣ ಇದೊಂದು ನಿಯಂತ್ರಣಗೊಳಿಸಲಾಗದ ಒಂದು ವಿಷಮ ಸ್ಥಿತಿ ಎಂದು ನಿಯಮ ವಿಧಾಯಕ ಅಧಿಕಾರಿಗಳು ಒಪ್ಪುತ್ತಾರೆ. ಆದರೆ ಅವರು ಈ ಪಂಥಾಹ್ವಾನವನ್ನು ಯಾಕೆ ಎದುರಿಸಶಕ್ಯರಲ್ಲ?
ಅದು ಯಾಕಂದರೆ ಲೋಕವ್ಯಾಪಕವಾಗಿ ನಿಯಮ ಮತ್ತು ಶಿಸ್ತುಕ್ರಮವು ಮುರಿದು ಹೋಗಿರುವುದೇ. ಗ್ರೇಟ್ ಬ್ರಿಟನಿನ ಸರ್ರೇಯ ಮುಖ್ಯ ಕಾನ್ ಸ್ಟೇಬಲ್ ಬ್ರೈನ್ ಹೆಯಸ್ ವಿವರಿಸುವುದು: “ಗತಿಸಿದ ವರ್ಷಗಳಲ್ಲಿ ಪೋಲೀಸರು ಒಂದು ಗುಂಪಿಗೆ ಇಲ್ಲಿಂದ ಬಿಟ್ಟು ತೆರಳಿರಿ ಅಂದರೆ ಅವರು ಹೋಗುತ್ತಿದ್ದರು. ಈ ದಿನಗಳಲ್ಲಿ ಪೋಲೀಸರ ಮೇಲೇ ಮುನ್ನುಗ್ಗಲಾಗುತ್ತದೆ.” ಸಮಾಜದಲ್ಲಿ ಕೆಲವೊಮ್ಮೆ “ಹಿಂದುಮುಂದಾದ ಮೌಲ್ಯತೆಗಳು ಇವೆ, ಅಲ್ಲಿ ಪೊಲೀಸರನ್ನು ದುಷ್ಕರ್ಮಿಗಳನ್ನಾಗಿ, ನಿಯಮಭಂಜಕರನ್ನು ಕಥಾನಾಯಕರನ್ನಾಗಿ ಮಾಡಲಾಗುತ್ತದೆ” ಎಂದು ಲಂಡನಿನ ಸಂಡೇ ಟೈಮ್ಸ್ ಗಮನಿಸಿದೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪಾತಕಶಾಸ್ತ್ರದ ಉಪನ್ಯಾಸಕರಾದ ರಿಚರ್ಡ್ ಕಿನ್ಸೇ ಹೇಳುವುದು: “ಸ್ಕಾಟ್ಲೆಂಡಿನಲ್ಲಿ ನಾವು ಯೂರೋಪಿನ ಯಾವುದೇ ದೇಶಕ್ಕಿಂತ ಹೆಚ್ಚು ಜನರನ್ನು ಸೆರೆಮನೆಗೆ ಕಳುಹಿಸುತ್ತೇವೆ ಮತ್ತು ಇದು ದಕ್ಷಿಣದ [ಇಂಗ್ಲೆಂಡ್]ಕ್ಕಿಂತ ಎರಡೂವರೆ ಪಟ್ಟು ಹೆಚ್ಚು.” ಫಲಿತಾಂಶವೇನು? ಕಳೆದ 12 ತಿಂಗಳುಗಳ ಅವಧಿಯಲ್ಲಿ ಹಿಂಸಾಚಾರದ ಪಾತಕಗಳ ಏರುವಿಕೆ 20 ಸೇಕಡಾ ಎಂದು 1988ರಲ್ಲಿ ಗ್ಲಾಸ್ಕೋವಿನ ಸ್ಟ್ರಾತ್ಕ್ಲೈಡ್ ಪೊಲೀಸರು ವರದಿಸಿದ್ದಾರೆ. ವ್ಯಂಗ್ಯವಾಗಿ ಕಿನ್ಸೇ ಸಮಾಪ್ತಿಗೊಳಿಸಿದ್ದು: “ಜೇಲುಕೋಣೆಯ ದ್ವಾರದ ಬೀಗ ನಿಷ್ಪಯ್ರೋಜಕ ಎಂದು ನಾವು ಸ್ಕಾಟ್ಲೆಂಡಿನಲ್ಲಿ ಕಂಡಿದ್ದೇವೆ.”
ಎದುರಿಸದಂತಹ ಒಂದು ಪಂಥಾಹ್ವಾನ
ಹಿಂಸಾಚಾರದ ಪಂಥಾಹ್ವಾನವನ್ನು ಎದುರಿಸುವುದರಲ್ಲಿ ಸೋಲನ್ನು ಬ್ರಿಟನಿನ ನರ್ಸಿಂಗ್ ಟೈಮ್ಸ್ನ ಸಂಪಾದಕೀಯ ಉದಾಹರಿಸುತ್ತದೆ. ಅದು ಅಂದದ್ದು: “ನರ್ಸಿಂಗ್ಗೆ ಸೇರುವವರಿಗೆ ಅವರೊಂದು ಅಪಾಯಕಾರಿ ವೃತ್ತಿಯಲ್ಲಿ ಸೇರ್ಪಡೆಯಾಗುತ್ತಾರೆಂದು ಯಾರೂ ಅವರನ್ನು ಎಚ್ಚರಿಸುವುದಿಲ್ಲ—ಪ್ರಾಯಶಃ ಅವರನ್ನು ಎಚ್ಚರಿಸಬೇಕು.” ಆರೋಗ್ಯ ಮತ್ತು ಸುರಕ್ಷತೆಯ ಆಯೋಗದ ಕಂಡುಹಿಡಿತಗಳು, ಸಂಪಾದಕೀಯವು ಮುಂದುವರಿಸಿದ್ದು, ನರ್ಸುಗಳು “ಜನಸಾಮಾನ್ಯರು ಒಟ್ಟಾಗಿ ಎದುರಿಸುವುದಕ್ಕಿಂತಲೂ ಅಧಿಕವಾಗಿ ಅನೇಕ ವೇಳೆ ಹಿಂಸಾಚಾರ ಮತ್ತು ಬೆದರಿಕೆಗಳ ಸ್ತರವನ್ನು” ಎದುರಿಸುತ್ತಾರೆ.
ದಾದಿಯರು ಕೆಲಸ ಮಾಡಬೇಕಾದ ಅತ್ಯಂತ ಅಪಾಯದ ಸ್ಥಳಗಳು ಅಪಘಾತ ಮತ್ತು ತುರ್ತುಚಿಕಿತ್ಸೆಯಲ್ಲಿಯೇ. ಬ್ರಿಟನಿನಲ್ಲಿ ಅದನ್ನು A&E ಎಂದು ಕರೆಯಲಾಗುತ್ತದೆ. ಕ್ರಮದ ಆಸ್ಪತ್ರೆಯ ಇತರ ವಿಭಾಗಗಳು ವಾರಾಂತ್ಯಗಳಲ್ಲಿ ಮುಚ್ಚಲ್ಪಟ್ಟಿರುವಾಗ ಇವುಗಳು ವಿಶೇಷವಾಗಿ ಅಪಾಯಕಾರಿ ಸ್ಥಳಗಳಾಗಿರಬಲ್ಲವು. ಎಚ್ಚರ! ಲಂಡನಿನ A&Eಯ ಒಬ್ಬ ಮಾಜೀ ದಾದಿಯನ್ನು ಸಂದರ್ಶಿಸಿತು.
“ಅನೇಕ ಮಾದಕೌಷಧ ವ್ಯಸನಿಗಳಿದ್ದ ಪ್ರದೇಶದಲ್ಲಿ ಈ ಆಸ್ಪತ್ರೆಯು ಇತ್ತು ಮತ್ತು ಅವರಿಗಾಗಿ ಒಂದು ನಿರ್ದಿಷ್ಟ ಜಾಗ ಅಪಘಾತ ವಿಭಾಗದಲ್ಲಿ ಇತ್ತು. ಅವರ ಹೆಚ್ಚಾದ ಸೇವನೆಯ ಪ್ರಭಾವವನ್ನು ಇಳಿಸಲು ಅವರನ್ನು ಅಲ್ಲಿ, ಇತರ ರೋಗಿಗಳಿಂದ ದೂರ, ಮಲಗಲು ಬಿಡಲಾಗುತ್ತದೆ. ಕೆಲವೊಮ್ಮೆ ಅವರು ಮತಿಗೆ ಬರುವಾಗ, ಬಹಳ ಹಿಂಸಾಚಾರಿಗಳಾಗುತ್ತಾರೆ. ಅದು ದಿಗಿಲುಗೊಳಿಸುವ ಅನುಭವ.
“ತಂಡಗಳೊಳಗಿನ ಕಾದಾಟದಿಂದ ಗಾಯಗೊಂಡವರನ್ನು ದಾಖಲಾತಿ ಮಾಡಿರುವುದನ್ನೂ ಮತ್ತು ಅವರು ತಮ್ಮ ಕಾದಾಟವನ್ನು A&Eಯಲ್ಲೂ ಮುಂದುವರಿಸುವುದನ್ನೂ ನಾನು ನೋಡಿದ್ದೇನೆ. ಎಷ್ಟೋ ಸಲ ಎಚ್ಚರಿಕೆ ಕೊಡದೇ ಇಂಥಹ ಹಿಂಸಾಚಾರ ನರ್ಸುಗಳ ಮೇಲೆ ಬೀಳಬಹುದು. ನಾನು ದಾದಿಯ ವೃತ್ತಿಯಲ್ಲಿ ಪ್ರವೇಶಿಸಿದಾಗ, ದಾದಿಯವರ ಸಮವಸ್ತ್ರವು ಕೆಲವೊಂದು ಮಟ್ಟಿಗೆ ಸುರಕ್ಷತೆಯಾಗಿತ್ತು—ಆದರೆ ಇಂದು ಹಾಗಿಲ್ಲ.”
ಹಿಂಸಾಚಾರವು ನಮ್ಮೆಲ್ಲರನ್ನೂ ರಕ್ಷಣಾತ್ಮಕವಾಗಿರುವಂತೆ ಮಾಡಿದೆ. “ಯಾರೂ ಇಂದು ಸುರಕ್ಷಿತರಾಗಿರುವುದಿಲ್ಲ” ಮತ್ತು, “ನೀವು ಎಲ್ಲಿಯೂ ಸುರಕ್ಷಿತರಾಗಿರುವಂತೆ ಕಾಣುವುದಿಲ್ಲ” ಎಂಬಂತಹ ಹೇಳಿಕೆಗಳು ಇಂದು ಹೆಚ್ಚೆಚ್ಚು ಸಾಮಾನ್ಯವಾಗುತ್ತಾ ಬರುತ್ತವೆ. ಹೆತ್ತವರು ಹೆದರಿಕೆಯಿಂದ ತಮ್ಮ ಮಕ್ಕಳನ್ನು ಕಣ್ನೋಟದಿಂದ ಮರೆಯಾಗಲು ಬಿಡದೆ ನೋಡಿಕೊಂಡೇ ಇರುತ್ತಾರೆ. ಹೆಂಗಸರು ಆಕ್ರಮಣಗಾರರ ಮತ್ತು ಬಲಾತ್ಕಾರ ಸಂಭೋಗಿಗಳ ಹೆದರಿಕೆಯಿಂದ ಜೀವಿಸುತ್ತಾರೆ. ವಯಸ್ಕರು ತಮ್ಮ ಮನೆಯೊಳಗೆ ರಕ್ಷಣೆಯ ಅಡ್ಡಗಟ್ಟು ಹಾಕಿಕೊಂಡಿರುತ್ತಾರೆ. ಯಾವುದೇ ಕೋನದಿಂದ ನೋಡಿದರೂ, ಚಿತ್ರಣವು ವಿಷಾಧಕರ.
ಇದು ಒಂದು ಅತ್ಯಾವಶ್ಯಕ ಪ್ರಶ್ನೆಯನ್ನು ನಮ್ಮ ಮುಂದೆ ತರುತ್ತದೆ, ಹಿಂಸಾಚಾರ ಎದುರಾದಾಗ ನಾವೇನು ಮಾಡಬಲ್ಲೆವು? (g89 4/22)
[ಪುಟ 5 ರಲ್ಲಿರುವಚಿತ್ರ]
ಟೆಲಿವಿಶನ್ ಹಿಂಸಾಚಾರವು ನೈಜ-ಜೀವನದ ಹಿಂಸಾಚಾರವನ್ನು ಪ್ರವರ್ಧಿಸ ಶಕ್ಯವಾಗಿದೆ