ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 8/8 ಪು. 3-4
  • ಶಾಲೆಗಳು ಬಿಕ್ಕಟ್ಟಿನಲ್ಲಿವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಲೆಗಳು ಬಿಕ್ಕಟ್ಟಿನಲ್ಲಿವೆ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶಾಲೆಗಳಲ್ಲಿ ಹಿಂಸಾಚಾರ
  • ಹೆತ್ತವರೇ ನಿಮ್ಮ ಮಗುವಿನ ಪಕ್ಷವಾದಿಗಳಾಗಿರು
    ಎಚ್ಚರ!—1994
  • ಶಿಕ್ಷಕ ವೃತ್ತಿ ಕಷ್ಟನಷ್ಟಗಳು
    ಎಚ್ಚರ!—2002
  • ಹಿಂಸಾಚಾರ ನಾವು ಪಂಥಾಹ್ವಾನವನ್ನು ಎದುರಿಸುತ್ತೇವೋ?
    ಎಚ್ಚರ!—1991
  • ನಿಮ್ಮ ಮಗು ಬೋರ್ಡಿಂಗ್‌ ಸ್ಕೂಲಿಗೆ ಹೋಗಬೇಕೋ?
    ಕಾವಲಿನಬುರುಜು—1997
ಎಚ್ಚರ!—1994
g94 8/8 ಪು. 3-4

ಶಾಲೆಗಳು ಬಿಕ್ಕಟ್ಟಿನಲ್ಲಿವೆ

ಓದುವುದು, ಬರೆಯುವುದು, ಮತ್ತು ಅಂಕಗಣಿತಕ್ಕಿಂತಲೂ ಅಧಿಕವಾದುದನ್ನು ಕಲಿಯಲಿಕ್ಕಾಗಿ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಎಳೆಯರನ್ನು, ಹೆತ್ತವರು ಹೆಮ್ಮೆಪಡಸಾಧ್ಯವಿರುವ ವಯಸ್ಕರನ್ನಾಗಿ ವಿಕಾಸಗೊಳಿಸುವಂತಹ ಒಂದು ವ್ಯಾಪಕ ಶಿಕ್ಷಣವನ್ನು ಶಾಲೆಗಳು ಒದಗಿಸುವುದನ್ನು ಅವರು ನಿರೀಕ್ಷಿಸುತ್ತಾರೆ. ಆದರೆ ಅನೇಕ ವೇಳೆ ಅವರ ನಿರೀಕ್ಷಣೆಯು ಕೈಗೂಡುವುದಿಲ್ಲ. ಏಕೆ? ಏಕೆಂದರೆ ಲೋಕವ್ಯಾಪಕವಾಗಿ ಶಾಲೆಗಳು ಬಿಕ್ಕಟ್ಟಿನಲ್ಲಿವೆ.

ಅನೇಕ ದೇಶಗಳಲ್ಲಿ ಹಣದ ಮತ್ತು ಶಿಕ್ಷಕರ—ಹೀಗೆ ಎರಡೂ ಸಂಗತಿಗಳ ಕೊರತೆಯು ಮಕ್ಕಳ ಶಿಕ್ಷಣವನ್ನು ಅಪಾಯದಲ್ಲಿಡುತ್ತದೆ. ಉದಾಹರಣೆಗೆ, ಅಮೆರಿಕದಲ್ಲೆಲ್ಲೂ, ಇತ್ತೀಚಿಗಿನ ವರ್ಷಗಳ ಹಣಕಾಸಿನ ಹಿಂಜರಿತವು ಕೆಲವು ಶಾಲೆಗಳು ‘ಹಳೆಯ ಪಠ್ಯಪುಸ್ತಕಗಳನ್ನು ಪುನಃ ರಟ್ಟುಕಟ್ಟುವಂತೆ, ಒಳಮಾಳಿಗೆಯ ಗಾರೆಯು ಮುರಿದುಬೀಳುವಂತೆ, ಕಲೆಯ ತರಗತಿಗಳನ್ನು ಮತ್ತು ಕ್ರೀಡೆಯ ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ, ಅಥವಾ ಒಮ್ಮೆ ಅನೇಕ ದಿನಗಳ ವರೆಗೆ ಯಾವುದೇ ವ್ಯಾಸಂಗಿಕ ಶಿಕ್ಷಣವನ್ನು ಒದಗಿಸದಂತೆ,’ ನಿರ್ಬಂಧಿಸಿದೆ ಎಂದು ಟೈಮ್‌ ಪತ್ರಿಕೆಯು ಟಿಪ್ಪಣಿ ಮಾಡುತ್ತದೆ.

ಆಫ್ರಿಕದಲ್ಲಿ, ಶೈಕ್ಷಣಿಕ ಸಾಧನೋಪಾಯಗಳು ತದ್ರೀತಿಯಲ್ಲಿ ಪರಿಮಿತವಾಗಿವೆ. ಲೇಗಾಸ್‌ನ ಡೈಲಿ ಟೈಮ್ಸ್‌ಗನುಸಾರ, “ಪ್ರತಿ ಮೂವರು ಶಿಕ್ಷಕರಲ್ಲಿ ಒಬ್ಬರು ಅನರ್ಹರಾಗಿರುವ ಒಂದು ದೃಢವಾದ ಸಂಭವನೀಯತೆಯೊಂದಿಗೆ,” ನೈಜೀರಿಯ ದೇಶದ ಪ್ರತಿ 70 ವಿದ್ಯಾರ್ಥಿಗಳಿಗೆ ಕೇವಲ ಒಬ್ಬರು ಶಿಕ್ಷಕರಿದ್ದಾರೆ. ದಕ್ಷಿಣ ಆಫ್ರಿಕದಲ್ಲಿ—ಸಾಕಷ್ಟು ಸಂಖ್ಯೆಯ ಶಿಕ್ಷಕರ ಕೊರತೆಯ ಜೊತೆಗೆ—ತೀರ ಹೆಚ್ಚು ವಿದ್ಯಾರ್ಥಿಗಳಿರುವ ಕ್ಲಾಸ್‌ ರೂಮುಗಳು ಮತ್ತು ರಾಜಕೀಯ ಸಂಕ್ಷೋಭೆಯು, ಸೌತ್‌ ಆಫ್ರಿಕನ್‌ ಪ್ಯಾನರಾಮ ಕರೆಯುವ “ಕರಿಯರ ಶಾಲೆಗಳಲ್ಲಿ ಅಸ್ತವ್ಯಸ್ತತೆ”ಗೆ ನೆರವು ನೀಡುತ್ತದೆ.

ಅರ್ಹರಾದ ಸಾಕಷ್ಟು ಶಿಕ್ಷಕರಿರುವ ಮತ್ತು ಸುಸಜ್ಜಿತ ಶಾಲೆಯು ಶೈಕ್ಷಣಿಕ ಯಶಸ್ಸಿನ ಖಾತರಿಯನ್ನು ಕೊಡುವುದಿಲ್ಲ ನಿಶ್ಚಯ. ಉದಾಹರಣೆಗೆ, ವಾರ್ತೆಗನುಸಾರ ಆಸ್ಟ್ರಿಯದಲ್ಲಿ 14 ವರ್ಷ ಪ್ರಾಯದವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿ ಸರಳ ಅಂಕಗಣಿತವನ್ನು ಮಾಡಲು ಅಥವಾ ಸರಿಯಾಗಿ ಓದಲು ಶಕ್ತರಿಲ್ಲ. ಬ್ರಿಟನ್‌ನಲ್ಲಿ ಗಣಿತ ಶಾಸ್ತ್ರ, ವಿಜ್ಞಾನ, ಮತ್ತು ದೇಶೀಯ ಭಾಷೆಯಲ್ಲಿ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣವು, “ಜರ್ಮನಿ, ಫ್ರಾನ್ಸ್‌ ಮತ್ತು ಜಪಾನಿನ ವಿದ್ಯಾರ್ಥಿಗಳಿಗಿಂತ ಗಮನಾರ್ಹವಾಗಿ ಹಿಂದಿದೆ,” ಎಂದು ಲಂಡನಿನ ದ ಟೈಮ್ಸ್‌ ಗಮನಿಸುತ್ತದೆ.

ಅಮೆರಿಕದಲ್ಲಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ದರ್ಜೆಗಳನ್ನು ಗಳಿಸುವುದಾದರೂ, ಅನೇಕರು ಒಂದು ಒಳ್ಳೆಯ ಪ್ರಬಂಧವನ್ನು ಬರೆಯಲು, ಗಣಿತದ ಸಮಸ್ಯೆಯನ್ನು ಬಗೆಹರಿಸಲು, ಅಥವಾ ವಿವಿಧ ಪಾಠಗಳ ಅಥವಾ ವಿವರಣೆಗಳ ಅಗತ್ಯವಾದ ಅಂಶಗಳ ಒಂದು ಸಾರಾಂಶವನ್ನು ತಯಾರಿಸಲು ಅಶಕ್ತರಾಗಿದ್ದಾರೆ ಎಂದು ಶಿಕ್ಷಕರು ದೂರುತ್ತಾರೆ. ಆದುದರಿಂದ, ಲೋಕದಾದ್ಯಂತ ಶಿಕ್ಷಣ ಅಧಿಕಾರಿಗಳು ಶಾಲಾ ವ್ಯಾಸಂಗ ಕ್ರಮವನ್ನು ಮತ್ತು ವಿದ್ಯಾರ್ಥಿಯೊಬ್ಬನ ಪ್ರಗತಿಯನ್ನು ನಿರ್ಧರಿಸಲು ಉಪಯೋಗಿಸಲ್ಪಡುವ ವಿಧಾನಗಳನ್ನು ಹೀಗೆ ಎರಡನ್ನೂ ವಾಸ್ತವಿಕವಾಗಿ ಪುನಃ ಪರಿಗಣಿಸುತ್ತಿದ್ದಾರೆ.

ಶಾಲೆಗಳಲ್ಲಿ ಹಿಂಸಾಚಾರ

ಶಾಲೆಗಳಲ್ಲಿ ಹಿಂಸಾಚಾರದ ಭಯಸೂಚಕವಾದ ಮತ್ತು ಅಧಿಕಗೊಳ್ಳುತ್ತಿರುವ ಮಟ್ಟವನ್ನು ವರದಿಗಳು ಪ್ರಕಟಿಸುತ್ತವೆ. ಜರ್ಮನಿಯಲ್ಲಿ ಒಂದು ಶಿಕ್ಷಕರ ಸಮ್ಮೇಳನಕ್ಕೆ ಹೇಳಲ್ಪಟ್ಟದ್ದೇನಂದರೆ, ಶಾಲಾ ಮಕ್ಕಳಲ್ಲಿ 15 ಪ್ರತಿಶತ ಮಂದಿ “ಹಿಂಸಾಚಾರಕ್ಕಾಗಿ ತಯಾರಾಗಿದ್ದಾರೆ ಮತ್ತು ಪ್ರವೃತ್ತರಾಗಿದ್ದಾರೆ—ಮತ್ತು 5 ಪ್ರತಿಶತ ಮಂದಿ ವಿಪರೀತ ಪಾಶವೀಯ ಕೃತ್ಯಗಳನ್ನು ಮಾಡಲು ಸಹ ಹಿಂಜರಿಯುವುದಿಲ್ಲ, ಉದಾಹರಣೆಗೆ ನೆಲದ ಮೇಲೆ ಬಿದ್ದಿರುವ ಅರಕ್ಷಿತ ವ್ಯಕ್ತಿಯೊಬ್ಬನನ್ನು ಅವರು ಒದೆಯುವರು.”—ಫ್ರಾಂಕ್‌ಫುರ್ಟರ್‌ ಆಲ್‌ಗೆಮೈನ ಟ್ಸೈಟುಂಗ್‌.

ವಿಪರೀತ ಪಾಶವೀಯತೆಯ ಕುರಿತಾದ ಒಂದೊಂದು ಪ್ರಸಂಗವೂ ಭಾರಿ ಚಿಂತೆಯನ್ನು ಉಂಟುಮಾಡುತ್ತದೆ. ಪ್ಯಾರಿಸ್‌ ಪ್ರೌಢ ಶಾಲೆಯ ಬಚ್ಚಲುಕೋಣೆಯೊಂದರಲ್ಲಿ ನಾಲ್ಕು ಯೌವನಸ್ಥರಿಂದ 15 ವರ್ಷ ಪ್ರಾಯದ ಹುಡುಗಿಯೊಬ್ಬಳ ಮೇಲೆ ನಡಿಸಲ್ಪಟ್ಟ ಬಲಾತ್ಕಾರ ಸಂಭೋಗವು, ಶಾಲೆಯಲ್ಲಿ ರಕ್ಷಣೆಗಾಗಿ ಉತ್ತಮವಾದ ಏರ್ಪಾಡುಗಳನ್ನು ಮಾಡಲಿಕ್ಕಾಗಿ ಸಾರ್ವಜನಿಕವಾದ ಪ್ರದರ್ಶನವನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರಚೋದಿಸಿತು. ಲೈಂಗಿಕ ಅಪರಾಧಗಳು, ಬೆದರಿಕೆ, ಮತ್ತು ಭಾವನಾತ್ಮಕ ಹಿಂಸಾಚಾರದಲ್ಲಿ ಆಗುತ್ತಿರುವ ವೃದ್ಧಿಯ ಕುರಿತು ಹೆತ್ತವರು ಆತಂಕಗೊಳ್ಳುತ್ತಾರೆ. ಅಂತಹ ಘಟನೆಗಳು ಕೇವಲ ಯೂರೋಪ್‌ನಲ್ಲಿ ಮಾತ್ರವಲ್ಲ, ಬದಲಾಗಿ ಲೋಕವ್ಯಾಪಕವಾಗಿ ಅವು ಹೆಚ್ಚು ಸಾಮಾನ್ಯವಾಗಿ ಪರಿಣಮಿಸುತ್ತಿವೆ.

ಪ್ರೌಢ ಶಾಲೆಯ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಹಿಂಸಾಚಾರಗಳ ಉಕ್ಕೇರುವಿಕೆಯನ್ನು ಜಪಾನಿನ ಶಿಕ್ಷಣ ಇಲಾಖೆಯು ವರದಿಸುತ್ತದೆ. ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆಯಾದ ದ ಸ್ಟಾರ್‌, “ಬಂದೂಕನ್ನು ಕೊಂಡೊಯ್ಯುವ ವಿದ್ಯಾರ್ಥಿಗಳು ಶಾಲೆಗಳ ಆಡಳಿತವನ್ನು ವಹಿಸಿಕೊಳ್ಳುತ್ತಾರೆ” ಎಂಬ ಶಿರೋನಾಮದ ಕೆಳಗೆ, ಅನೇಕ ಸವೆಟೊ ಕ್ಲಾಸ್‌ ರೂಮ್‌ಗಳ ದೃಶ್ಯವನ್ನು, 19ನೆಯ ಶತಮಾನದಲ್ಲಿ ಅಮೆರಿಕದಲ್ಲಿನ “ದ ವೈಲ್ಡ್‌ ವೆಸ್ಟ್‌”ನ ದೃಶ್ಯಕ್ಕೆ ಹೋಲಿಸುತ್ತದೆ. ನ್ಯೂ ಯಾರ್ಕ್‌ ಸಿಟಿಯ ಹಿಂಸಾಚಾರದ ಕುರಿತಾದ ಪ್ರಖ್ಯಾತಿಯೂ—ಲಂಡನಿನ ದ ಗಾರ್ಡಿಯನ್‌ಗನುಸಾರ—“ಶಾಲಾ ಮಕ್ಕಳಿಗಾಗಿ ಗುಂಡು ತೂರದ ಬಟ್ಟೆಗೆಳನ್ನು ಖರೀದಿಸುವುದರ ಕುರಿತಾದ ಬೇಡಿಕೆಯನ್ನು ಒಂದು ಭದ್ರತಾ ಕಂಪನಿಯು ಪ್ರಕಟಿಸುವುದರೊಂದಿಗೆ ಒಂದು ಹೊಸ ಉಚ್ಛಾಯ್ರವನ್ನು” ಮುಟ್ಟಿದೆ.

ಬ್ರಿಟನ್‌ ಸಹ ಶಾಲಾ ಹಿಂಸಾಚಾರದ ಒಂದು ಉಪದ್ರವದಿಂದ ಕಷ್ಟಾನುಭವಿಸುತ್ತದೆ. “ಕಳೆದ 10 ವರ್ಷಗಳಲ್ಲಿ, ಶಸ್ತ್ರಗಳನ್ನು ಆಶ್ರಯಿಸುವ ಪ್ರವೃತ್ತಿಯು ಅಧಿಕಗೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ. ಆ ಪ್ರವೃತ್ತಿಯು ಯುವ ಜನರಲ್ಲಿ ಸಹ ಸಂಭವಿಸುತ್ತಿದೆ ಮತ್ತು ಕೇವಲ ಗಂಡುಗಳು ಮಾತ್ರವಲ್ಲ, ಹೆಣ್ಣುಗಳು ಸಹ ಶಸ್ತ್ರಗಳನ್ನು ಉಪಯೋಗಿಸುತ್ತಾರೆ” ಎಂದು ಶಿಕ್ಷಕರ ಒಂದು ಒಕ್ಕೂಟದ ಅಧಿಕಾರಿಯು ಗಮನಿಸುತ್ತಾನೆ.

ಆದುದರಿಂದ, ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಶಾಲೆಯಿಂದ ತೆಗೆದು, ಅವರಿಗೆ ಮನೆಯಲ್ಲಿ ಕಲಿಸುವುದು ಆಶ್ಚರ್ಯವನ್ನುಂಟು ಮಾಡುವುದಿಲ್ಲ.a ಮನೆಯಲ್ಲಿ ಕಲಿಸುವುದನ್ನು ಅಪ್ರಾಯೋಗಿಕವಾಗಿ ಕಂಡುಕೊಳ್ಳುವವರು, ತಮ್ಮ ಮಕ್ಕಳ ಮೇಲೆ ಶಾಲೆಯು ಹಾಕಿರುವ ಕೆಟ್ಟ ಪರಿಣಾಮದ ಕುರಿತು ಆತಂಕಗೊಳ್ಳುತ್ತಾರೆ, ಮತ್ತು ಇದನ್ನು ಪ್ರತಿರೋಧಿಸುವ ವಿಧಾನದ ಕುರಿತು ಅವರು ಕುತೂಹಲಗೊಳ್ಳುತ್ತಾರೆ. ಶಾಲೆಯಲ್ಲಿ ಎದುರಿಸುವ ಸಮಸ್ಯೆಗಳನ್ನು ನಿಭಾಯಿಸಲು ತಮ್ಮ ಮಕ್ಕಳಿಗೆ ಸಹಾಯ ಮಾಡಲು ಹೆತ್ತವರು ಏನು ಮಾಡಬಲ್ಲರು? ಮತ್ತು ಮಕ್ಕಳು ಶಾಲೆಯಿಂದ ಅತ್ಯುತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲಿಕ್ಕಾಗಿ ಹೆತ್ತವರು ಶಿಕ್ಷಕರೊಂದಿಗೆ ಹೇಗೆ ಸಹಕರಿಸಬಲ್ಲರು? ಮುಂಬರುವ ಲೇಖನಗಳು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತವೆ.

[ಅಧ್ಯಯನ ಪ್ರಶ್ನೆಗಳು]

a ಜುಲೈ 8, 1993ರ ಎಚ್ಚರ!ದಲ್ಲಿ ಪ್ರಕಾಶಿಸಲ್ಪಟ್ಟಿರುವ “ಗೃಹ ಶಾಲಾ ಶಿಕ್ಷಣ—ಅದು ನಿಮಗೊ?” ಎಂಬ ಲೇಖನವು ಈ ಆಯ್ಕೆಯನ್ನು ಪುನರ್ವಿಮರ್ಶಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ