ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 10: ಸಾ.ಶ.ಪೂ. 573ರಿಂದ ಮುಂದಕ್ಕೆ ಮೆಸ್ಸೀಯನಿಗಾಗಿ ಇನ್ನೂ ಕಾದುಕೊಂಡಿರುವುದು
“ಭವಿಷ್ಯದಲ್ಲಿ ನಿರೀಕ್ಷೆ ಇಲ್ಲದಿದ್ದರೆ, ಸ್ವ-ನಿರ್ಣಯವು ಕೇವಲ ಗುರಿನುಡಿಯಲ್ಲದೇ ಮತ್ತೇನೂ ಅಲ್ಲ.”—ಜೋನ್ ಎಫ್. ಕೆನಡಿ, ಅಮೆರಿಕದ 35ನೆಯ ಅಧ್ಯಕ್ಷ
ಬೆಬಿಲೋನಿನ 70ವರ್ಷಗಳ ಬಂಧೀವಾಸವು ಮುಗಿಯಿತು! ಪರ್ಷಿಯಾದ ಅರಸನಾದ ಬೆಬಿಲೋನಿನ ವಿಜಯೀ ಕೊರೇಷನು ಯೆಹೂದಿಗಳನ್ನು ಸ್ವದೇಶಕ್ಕೆ ಹಿಂತೆರಳಿಸಲಿದ್ದನು. ಆದರೆ ಪುನಃ ಒಮ್ಮೆ ವಾಗ್ದತ್ತ ದೇಶದಲ್ಲಿ (ಸಾ.ಶ.ಪೂ.537) ಸ್ವತಂತ್ರ ರಾಷ್ಟ್ರವಾಗಿ ಸ್ವ-ನಿರ್ಣಯದಲ್ಲಿ ಅನಂದಿಸುವ ಅವರ ನಿರೀಕ್ಷೆಯು ನೆರವೇರದೆ ಹೋಯಿತು. ಅವರಿಗೆ ಅರಸನಿರಲಿಲ್ಲ, ಅವರ ದೇಶಾಧಿಪತಿಯ ರಾಜಕೀಯ ಅಧಿಕಾರವು ಮಹಾ ಯಾಜಕನ ಧಾರ್ಮಿಕ ಅಧಿಕಾರದಿಂದ ನಶಿಸಿಹೋಯಿತು, ಅವನು ಈ ರೀತಿ ರಾಷ್ಟ್ರದ ಮುಖ್ಯಸ್ಥನಾಗಿ ಎಣಿಸಲ್ಪಟ್ಟನು.
ಮೆಸ್ಸೀಯನ ನಿರೀಕ್ಷೆಯನ್ನು ಬೆನ್ನಟ್ಟುವದು
ದ ಕನ್ಸೈಸ್ ಜ್ಯೂವಿಷ್ ಎನ್ಸೈಕ್ಲೊಪೀಡಿಯಾಕ್ಕನುಸಾರ, ಈ ಸಮಯಾವಧಿಯಲ್ಲಿ ಮೆಸ್ಸೀಯನ ಒಂದು ಕಲ್ಪನೆಯು ಬೆಳೆಯಿತು, “ಕೇವಲ ‘ಅಭಿಷಿಕ್ತ’ನಾಗಿರದೇ, ಭಾವೀ ದಿನಗಳ ಆದರ್ಶಪ್ರಾಯನಾದ ರಾಜನು ಇಸ್ರಾಯೇಲ್ಯರ ಶತ್ರುಗಳನ್ನು ನಾಶಮಾಡುವವನೂ, ಶಾಂತಿಯ ಮತ್ತು ಪರಿಪೂರ್ಣತೆಯ ಒಂದು ಪರಿಪೂರ್ಣ ಯುಗವೊಂದನ್ನು ಸ್ಥಾಪಿಸುವವನೂ ಆಗಿರುವನು.”
ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ, ಮಹಾ ಅಲೆಕ್ಷಾಂಡರನು ವಿಜಯ ಗಳಿಸುವುದರ ಮೂಲಕ ಯೆಹೂದ್ಯರನ್ನು ತನ್ನ ಅಧಿಕಾರದೊಳಗೆ ತಂದನು. ಅವನ ಸಾಮ್ರಾಜ್ಯವು ಅವರ ದೇಶ, ಅವರ ಸಂಸ್ಕೃತಿ ಮತ್ತು ಧರ್ಮದ ಮೇಲೆ ಮಹತ್ತಾದ ಪ್ರಭಾವ ಬೀರಿದರೂ, ಅವನು ನಿಸ್ಸಂಶಯವಾಗಿ ಅವರು ಕಾದುಕೊಂಡಿರುವ ಮೆಸ್ಸೀಯನಾಗಿರಲಿಲ್ಲ.
ಅಲೆಕ್ಷಾಂಡರನ ಮೃತ್ಯುವಿನ ನಂತರ, ಅಲೆಕ್ಷಾಂಡರನ ಉತ್ತರಾಧಿಕಾರಿಗಳಿಂದ ನಿರ್ಮಿಸಲ್ಪಟ್ಟ ಎರಡು ವಂಶಗಳಾದ ಈಜಿಪ್ಟಿನ ಟೊಲೊಮಿಸನ ಕೆಳಗೆ ಮೊದಲಾಗಿ ಮತ್ತು ನಂತರ ಸಿರಿಯಾದ ಸೆಲ್ಯೂಸಿಡ್ಸನ ಕೆಳಗೆ ಪೆಲೆಸ್ತೀನ್ ಗ್ರೀಕರ ಕೆಳಗೆ ಉಳಿಯಿತು. ಗ್ರೀಕರ ಪ್ರಭಾವವು ಬೆಳೆದಂತೆ ಪ್ರಮುಖ ಮತ್ತು ಕುಲೀನಸ್ಥ ಯೆಹೂದ್ಯರು ಯೆಹೂದ್ಯ ಸಂಪ್ರದಾಯಗಳು ಮತ್ತು ಪದ್ಧತಿಗಳು ಪುರಾತನ ಕಾಲದವುಗಳು ಎಂಬಂತೆ ವೀಕ್ಷಿಸಲಾರಂಭಿಸಿದರು. ಸೆಲ್ಯೂಸಿಡ್ ರಾಜನಾದ ಅಂಟಿಯೋಕಸ್ IV ಎಪಿಫಾಸನಿಸನ ಆಳ್ವಿಕೆಯ ಕಾಲದಲ್ಲಿ ಟೊಬಿಯಡನ ಕುಟುಂಬವು ಇದರಲ್ಲಿ ನಾಯಕತ್ವವನ್ನು ವಹಿಸಿ ಪ್ರಾಯಶಃ ಅವರ ಸಂಬಂಧಿಕರಲೊಬ್ಬನಾದ ಮೆನಿಲೋಸನನ್ನು ಯಾಜಕತ್ವಕ್ಕೆ ಏರಿಸಿತು. (ಸಾ.ಶ.ಪೂ.175-164) ಸೊಲೊಮೋನನ ದೇವಾಲಯದ ಮಹಾಯಾಜಕ ಚಾದೋಕನ ಸಾಂಪ್ರದಾಯಿಕ ಯಾಜಕ ಮನೆತನದವನಲ್ಲದಿದ್ದರೂ ಮೆನೆಲೋಸನನ್ನು ಅವರು ಇದನ್ನು ಮಾಡಿದರು. ಗ್ರೀಕರ ಪ್ರಭಾವವು ಎಷ್ಟು ಪ್ರಬಲವಾಯಿತೆಂದರೆ ಯೆಹೂದಿ ಧಾರ್ಮಿಕ ಉತ್ಸವಗಳು ನ್ಯಾಯಬಾಹಿರಗೊಂಡು, ದೇವಾಲಯವು ಗ್ರೀಕರ ಪೂಜಾಗುಡಿಯಾಗಿ ಪರಿವರ್ತಿತವಾಯಿತು.
ಸಾ.ಶ.ಪೂ.167ರಲ್ಲಿ ಸಾಮಾನ್ಯವಾಗಿ ಮಕ್ಕಾಬೀಸ್ ಅಥವಾ ಹೆಸ್ಮೊನಾಯಿನ್ಸ್ ಎಂದು ಕರೆಯಲ್ಪಡುವ, ಯೆಹೂದಿ ಯಾಜಕ ಮತ್ತಾತಿಯಸ್ ಮತ್ತು ಅವನ 5 ಜನ ಪುತ್ರರು ದಂಗೆಯೆದ್ದರು. ಮಕ್ಕಾಬಿಯನರ ಪ್ರತಿಭಟನೆಯು ವಾಸ್ತವದಲ್ಲಿ ಧಾರ್ಮಿಕವಾಗಿದ್ದರೂ, ಬಲು ಬೇಗನೆ ಯೆಹೂದ್ಯರ ಸ್ವ-ನಿರ್ಣಯದ ರಾಜಕೀಯ ಹೋರಾಟವಾಯಿತು. ಸಾ.ಶ.ಪೂ.165ರಲ್ಲಿ ದೇವಾಲಯವು ಪುನಃ ಹಿಡಿಯಲ್ಪಟ್ಟಿತು., ಪುನಃ ಸಮರ್ಪಿಸಲ್ಪಟ್ಟು, ಇಂದು ಹಸುಕ್ಕಾ ಎನ್ನುವ 8 ದಿನಗಳ ದೀಪಗಳ ಹಬ್ಬವಾಗಿ ಜಗತ್ತಿನ ಸುತ್ತಲೂ ವಾರ್ಷಿಕವಾಗಿ ಯೆಹೂದ್ಯರು ಆಚರಿಸುವ ಒಂದು ಘಟನೆಯಾಗಿದೆ. ಆದರೆ ಮೆಸ್ಸೀಯನು ಇನ್ನೂ ನೋಟದಲ್ಲಿ ಇರಲಿಲ್ಲ.
ಅಲಕ್ಷ್ಯದ ಕುರುಬರು, ಧಾರ್ಮಿಕ ಅನೈಕ್ಯತೆ
ಈ ಸಮಯದಲ್ಲಿ “ಯಾಜಕರ ಕೈಗಳಲ್ಲಿ ಜನರ ಆತ್ಮೀಕ ಮತ್ತು ಸಾಮಾಜಿಕ ನಾಯಕತ್ವ ಇದ್ದದ್ದು ಮಾತ್ರವಲ್ಲ, ಆದರೆ ರಾಜಕೀಯ ಹಾಗೂ ಆರ್ಥಿಕವಾಗಿ ಬಲವಾದ ಮತ್ತು ಶ್ರೀಮಂತ ವರ್ಗವನ್ನು ಅವರು ಯೆರೂಸಲೇಮಿನಲ್ಲಿ ಸ್ಥಾಪಿಸಿದರು” ಎಂದು ಯೆಹೂದಿ ಪಿಕ್ಟೋರಿಯಲ್ ಬಿಬ್ಲಿಕಲ್ ಎನ್ಸೈಕ್ಲೊಪೀಡಿಯಾವು ಹೇಳುತ್ತದೆ. ಕುರುಬರಾಗಿ ಅವರ ಕರ್ತವ್ಯಗಳನ್ನು ಪೂರೈಸುವುದರಲ್ಲಿ ಯಾಜಕರು ಅತೀ ಕುಲೀನಸ್ಥರೂ, ನಿರ್ಲಕ್ಷ್ಯಿಸುವವರೂ ಆದರು, ಯಾಜಕರಲ್ಲದವರು ನಿಯಮಶಾಸ್ತ್ರದ ಅರ್ಥವಿವರಣೆಯ ಮತ್ತು ನ್ಯಾಯತೀರ್ಮಾನದ ನಿರ್ವಹಣೆಯ ಸ್ಥಾನದಲ್ಲಿ ಬರಲಾರಂಭಿಸಿದರು. ಶಾಸ್ತ್ರಿಗಳೆಂದು ಪರಿಚಿತರಾಗಿರುವ ಜನರು ಅಂದರೆ ನಿಯಮಶಾಸ್ತ್ರವನ್ನು ಮೀರುವ ಉದ್ದೇಶವುಳ್ಳವರಿಗೆ ಅದರಲ್ಲಿರುವ ಲೋಪದೋಷಗಳನ್ನು ಹುಡುಕುವುದರಲ್ಲಿ ಬುದ್ಧಿವಂತರಾಗಿದ್ದರು.
ಇದೇ ಸಮಯದಲ್ಲಿ ಯೆಹೂದಿ ಧರ್ಮವು ಹೋರಾಡುವ ಪಕ್ಷಗಳಾಗಿ ಒಡೆಯಿತು. ದೇವರು ಇಸ್ರಾಯೇಲ್ಯರಿಗೆ ಎರಡು ವಿಧದ ನಿಯಮಗಳನ್ನು ಅಂದರೆ ಲಿಖಿತ ಮತ್ತು ಮೌಖಿಕ ವಿಭಾಗಗಳನ್ನು ಕೊಟ್ಟಿದ್ದನು ಎಂದು ಪರಿಸಾಯರು ಕಲಿಸಿದರು. ಸಾಂಪ್ರದಾಯಿಕ ವಂಶಾವಳಿ ಮುರಿದ ನಂತರ ಈ ಮೌಖಿಕ ನಿಯಮದ ಆಧಾರದ ಮೇಲೆ ಅವರು ಯಾಜಕ ವರ್ಗದ ಸಾಲಿನ ನ್ಯಾಯಬದ್ಧತೆಯನ್ನು ಅಂಗೀಕರಿಸಿದರು. ಇನ್ನೊಂದು ಪಕ್ಕದಲ್ಲಿ ಸದ್ದುಕಾಯರು ಮೌಖಿಕ ನಿಯಮದ ಅಸ್ತತ್ವವನ್ನು ಒಪ್ಪದೇ, ಕೇವಲ ಚಾದೋಕನ ನೇರ ವಂಶಜನು ಮಾತ್ರ ಮಹಾಯಾಜಕನಾಗಿ ಸೇವೆ ಸಲ್ಲಿಸ ಶಕ್ತನು ಎಂದು ವಾದಿಸಿದರು.
“ಬೇರ್ಪಟ್ಟವನು” ಯಾ “ವಿಶಿಷ್ಟಕರವಾದದ್ದು” ಎಂಬ ಅರ್ಥ ಕೊಡುವ ಶಬ್ದದಿಂದ “ಫರಿಸಾಯ” ಎಂಬ ಹೆಸರು ಬಂದಿದೆ. ಮತಪಾಷಂಡಿಗಳು ಎಂದು ಅವರನ್ನು ನಿಂದಿಸಲು ಅವರ ವಿರೋಧಿಗಳಿಂದ ಇದು ಉಪಯೋಗಿಸಲ್ಪಟ್ಟಿತು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಯಾರನ್ನು ಅವರು ಅಪವಿತ್ರರು ಎಂದು ಎಣಿಸುತ್ತಿದ್ದರೋ ಆ ಆಮ್ಹಾಅರೆಟ್ಸ್ (ದೇಶದ ಜನರು) ರಿಂದ ತಾವೇ ಬೇರ್ಪಡಿಸಿಕೊಂಡು ಅವರೇ ಎಣಿಸಿಕೊಂಡ “ವಿಶಿಷ್ಟಕರವಾದ” ಸ್ಥಾನಕ್ಕೆ ಇದು ಸೂಚಿಸುತ್ತದೆ ಎಂದು ಇತರರು ವಾದಿಸುತ್ತಾರೆ. ಫರಿಸಾಯರು ಲಿಖಿತ ನಿಯಮ ಮತ್ತು ಮೌಖಿಕ ನಿಯಮ ಎರಡನ್ನೂ ಪಾಲಿಸುವುದರಲ್ಲಿ ಅತೀ ಸ್ವ-ನೀತಿಯವರಾಗಿದ್ದರು. ಸದ್ದುಕಾಯರ ಲಿಖಿತ ನಿಯಮದ ಕಡೆಗಿನ ಕಟ್ಟುನಿಟ್ಟಿನ ಮನೋಭಾವವು ಪ್ರಾಯಶಃ ಯೆಹೂದಿ ಲೇಖಕ ಗಾಲ್ಯಾಹು ಕೊರ್ನ್ಫೆಲ್ಡ್ ಬರೆದಂತೆ “ವಿಶೇಷವಾಗಿ ಯಾವುದೇ ಧಾರ್ಮಿಕ ಭಾವನೆಯಿಂದ ಉಂಟಾಗದೆ, ಇದು ಫರಿಸಾಯರ ಸಂಸದೀಯ ಶಕ್ತಿಗೆ ವಿರುದ್ಧವಾಗಿ ಒಂದು ರಾಜಕೀಯ ಶಸ್ತ್ರವಾಗಿತ್ತು.”
ಎಸ್ಸೆನಿಸ್ ಎನ್ನುವ ಇನ್ನೊಂದು ಧಾರ್ಮಿಕ ಪಂಗಡ ಪ್ರಾಯಶಃ ಅದೇ ಸಮಯದಲ್ಲಿ ಬೆಳೆಯಿತು. ಅವರು ಅಧಿಕೃತ ಯಾಜಕತ್ವದೊಂದಿಗೆ ಸಂಬಂಧ ಕಡಿದುಕೊಂಡು ಧಾರ್ಮಿಕಸೇವೆಗಳಲ್ಲಿ ಮತ್ತು ದೇವಾಲಯದಲ್ಲಿನ ಯಜ್ಞಗಳಲ್ಲಿ ಭಾಗವಹಿಸುವಿಕೆಯಿಂದ ದೂರನಿಂತರು. ಆದಾಗ್ಯೂ, ನಿಯಮಗಳಿಗೆ ನಿಕಟವಾಗಿ ಅಂಟಿಕೊಂಡಿದ್ದರು. ಫರಿಸಾಯರಿಗೆ ಹಲವು ರೀತಿಗಳಲ್ಲಿ ಸಮಾನರಾಗಿದ್ದ ಇವರು ಗ್ರೀಕ್ ಸಂಸ್ಕೃತಿಯ ಪ್ರಭಾವಕ್ಕೆ ಬಲಿಯಾಗಿ, ಆತ್ಮದ ಅಮರತ್ವದಲ್ಲಿ ನಂಬಿಕೆಯಿಟ್ಟರು.
ಈ ಪಂಗಡದಲ್ಲಿ ಪ್ರಾಯಶಃ 4,000 ಸದಸ್ಯರುಗಳಿಗಿಂತ ಹೆಚ್ಚಿರಲಿಲ್ಲ, ಎಲ್ಲರೂ ವಯಸ್ಕರಾದ ಪುರುಷರಾಗಿದ್ದು ಹೆಚ್ಚಿನವರು ಅವಿವಾಹಿತರಾಗಿದ್ದರು. ಇವರು ಪೆಲೆಸ್ತೀನಿನ ಸುತ್ತಲೂ ಏಕಾಂತತೆಯ ಸಮಾಜಗಳಲ್ಲಿ ಸಾಮೂಹಿಕ ಮನೆಗಳಲ್ಲಿ ವಾಸಿಸುತ್ತಿದ್ದರು. ಎನ್ಸೈಕ್ಲೋಪೀಡಿಯಾ ಜುಡೆಯಿಕಾ ಅವರು ಹೇಳಿಕೊಳ್ಳುವ ನಿರಾಶಾವಾದದ ಕುರಿತು ಮಾತಾಡುತ್ತಾ ಹೇಳುವುದು: ಇದು “ಪ್ರಾಯಶಃ ಆಧುನಿಕ ಯೆಹೋವನ ಸಾಕ್ಷಿಗಳಂತೆ ಇದ್ದಿರಬಹುದು.” ಆದರೆ ಯೆಹೋವನ ಸಾಕ್ಷಿಗಳಿಂದ ಇಂದು ಪಾಲಿಸಲ್ಪಡುವ ಕಟ್ಟುನಿಟ್ಟಿನ ತಾಟಸ್ಥತೆಯನ್ನು ಎಸ್ಸೆನಿಯರು ಪಾಲಿಸಲಿಲ್ಲ ಎಂದು ವ್ಯಕ್ತವಾಗುತ್ತದೆ. ಯೆಹೂದ್ಯರ ಪಿಕ್ಟೋರಿಯಲ್ ಎನ್ಸೈಕೋಪೀಡಿಯಾ ಹೇಳುವುದು: “ರೋಮಿನ ವಿರುದ್ಧದ ದಂಗೆಯಲ್ಲಿ ಅವರ ಗುಂಪಿನಿಂದ ಕೆಲವು ಮುಖಂಡರು ಸಹಿತ ಎದ್ದರು ಮತ್ತು ಶೌರ್ಯದಿಂದ ಹೋರಾಡಿದರು.” ಯೆಹೂದಿ ಇತಿಹಾಸಗಾರ ಜೊಸೀಫಸನು ಸಾ.ಶ.66ರ ದಂಗೆಯಲ್ಲಿ ಯೆಹೂದಿ ಸೇನಾಪತಿಯಾಗಿ ಸೇವೆ ಸಲ್ಲಿಸಿದ “ಜೋನ್ ದಿ ಎಸ್ಸೆನ್” ಎಂಬ ಮುಖಂಡನ ಕುರಿತು ತಿಳಿಸುತ್ತಾನೆ.
ಕೆಲವು ವಿದ್ವಾಂಸರಿಂದ ಎಣಿಸಲ್ಪಟ್ಟಂತೆ ಎಸ್ಸೆನಿಸರಿಗೆ ಸಮಾನವಾಗಿದ್ದ ಕ್ಯುಮಾರಾನ್ ಧಾರ್ಮಿಕ ಪಂಗಡದ ಕುರಿತು 1947ರಲ್ಲಿ ದೊರಕಿದ ಸತ್ತ ಸಮುದ್ರದ ಸುರುಳಿಗಳು ಮಾಹಿತಿಗಳನ್ನು ಒದಗಿಸುತ್ತವೆ. ಸ್ನಾನಿಕ ಯೋಹಾನ ಮತ್ತು ಯೇಸು ಈ ಪಂಗಡಕ್ಕೆ ಸೇರಿದ್ದರು ಅಥವಾ ಇದರಿಂದ ಸ್ವಲ್ಪವಾದರೂ ಪ್ರಭಾವಿತರಾಗಿದ್ದರು ಎಂಬ ಸೂಚನೆಗೆ ದ ನ್ಯೂ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುವುದು: “ಪ್ರಾಮುಖ್ಯವಾದ ವಿವಾದಗಳು . . . ಈ ಸೂಚನೆಯ ವಿರುದ್ಧವಾಗಿ ಮಾತಾಡುತ್ತವೆ.” “ಕ್ಯುಮಾರಾನ್ ಗುಂಪು ಮತ್ತು ಸ್ನಾನಿಕ ಯೋಹಾನನ ನಡುವೆ ಮೂಲಭೂತ ವ್ಯತ್ಯಾಸಗಳಿದ್ದವು. . . . (ಮತ್ತು) ಈ ಪಂಗಡದ ಮನೋಭಾವಗಳಿಗೆ ಮತ್ತು ಯೇಸುವಿನ ಸೇವೆಯ ಕ್ಷೇತ್ರ, ರಕ್ಷಣೆಯ ಅವನ ಸಂದೇಶ, ದೇವರ ಚಿತ್ತದ ತಿಳುವಳಿಕೆ ಮತ್ತು ವಿಶೇಷವಾಗಿ, ಅವನ ಪ್ರೀತಿಯ ಆಜ್ಞೆಗಳ ಮೂಲಗುಣ ಮತ್ತು ಪಾಪಿಗಳೊಂದಿಗೆ ಮತ್ತು ಸಾಮಾಜಿಕ ಬಹಿಷ್ಕೃತರೊಂದಿಗೆ ಅವನ ಒಡನಾಟ ಇವುಗಳಲ್ಲಿ ನೇರ ಭಿನ್ನತೆಗಳಿದ್ದವು.”
ವಾಸ್ತವದಲ್ಲಿ, ಪ್ರತಿಯೊಂದು ಯೆಹೂದಿ ಧಾರ್ಮಿಕ ಪಂಗಡವು ಸ್ನಾನಿಕ ಯೋಹಾನನನ್ನು ಮತ್ತು ಮೆಸ್ಸೀಯನೆಂದು ಯಾರನ್ನು ಪ್ರಚುರಪಡಿಸಿದ್ದನೋ ಅವನನ್ನು ವಿರೋಧಿಸಿದರು. ಯೋಹಾನನ ಸಂದೇಶವನ್ನು ಮಾನ್ಯಮಾಡುವುದರ ಬದಲಾಗಿ, ಜೊಸೀಫಸನು ತಿಳಿಸಿದಂತೆ ಸ್ವ-ನಿರ್ಣಯಕ್ಕೆ ವಾಲಿದ ಯೆಹೂದೀ ಕ್ರಾಂತಿಕಾರರ ಪಂಗಡವಾದ ಜೀಲೊಟ್ಸ್ಗೆ ಯಾಜಕರಲ್ಲಿ ಅನೇಕರು ಸೇರಿದ್ದರು. ಈ ಪಂಗಡಗಳು, ಸಾ.ಶ.ಪೂ. 63ರಲ್ಲಿ ಗ್ರೀಕರ ಸ್ಥಾನಕ್ಕೆ ಬಂದ ರೋಮ್ ಸಾಮ್ರಾಜ್ಯದ ವಿರುದ್ಧ ಹಲವಾರು ದಶಕಗಳ ವರೆಗೆ ಭಯವಾದಿಗಳ ಕ್ರಿಯೆಗಳನ್ನು ಮುಂದುವರಿಸಿದರು. ಕೊನೆಯದಾಗಿ ಸಾ.ಶ. 66ರಲ್ಲಿ ಅವರು ಬಹಿರಂಗ ದಂಗೆಯಲ್ಲಿ ಸೇರಿದರು. ಇದು ಯೆಹೂದ್ಯರ ದೇವಾಲಯ ಮತ್ತು ಅವರು ಯಾಜಕತ್ವದ ಧ್ವಂಸಕ್ಕೆ ನಡಿಸಿತು. ಮೆಸ್ಸೀಯನ ನಿರೀಕ್ಷೆಯು ಮೊಬ್ಬಾಯಿತು.
ದೇವಾಲಯ ಹಾಗೂ ಯಾಜಕತ್ವವಿಲ್ಲದ ಯೆಹೂದ್ಯ ಮತ
ಶತಮಾನಗಳ ಮೊದಲು, ಆ ಸಮಯದಲ್ಲಿ ಅಥವಾ ಪ್ರಾಯಶಃ ಬೆಬಿಲೋನಿನ ಬಂಧೀವಾಸದ ಸ್ವಲ್ಪ ನಂತರ, ನಿಯಮಶಾಸ್ತ್ರದ ಜ್ಞಾನವನ್ನು ಪಡೆಯುವುದರ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇಡಲಾಯಿತು. ಕಲಿಸುವಿಕೆಯ ಕೇಂದ್ರಗಳಾಗಿ ಪರಿಚಿತವಾಗಿರುವ ಸಿನೆಗೋಗ್(ಸಭಾಮಂದಿರ)ಗಳು ಕಟ್ಟಲ್ಪಟ್ಟವು ಮತ್ತು ಅದರ ನಂತರ ದೇವಾಲಯಕ್ಕೆ ಕೇವಲ ವಿಶೇಷ ಸಂದರ್ಭಗಳಲ್ಲಿ ಮತ್ತು ಯಜ್ಞಗಳನ್ನು ಅರ್ಪಿಸುವುದರ ಉದ್ದೇಶದಿಂದ ಮಾತ್ರ ಭೇಟಿಕೊಡುತ್ತಿದ್ದರು. ಆದ್ದರಿಂದ ಸಾ.ಶ. ಒಂದನೆಯ ಶತಮಾನದೊಳಗೆ ಸಭಾಮಂದಿರದಲ್ಲಿ ಆರಾಧಿಸುವುದು ಅತೀ ಸಾಮಾನ್ಯವಾಯಿತು. ನಂತರ, ಸಾ.ಶ.70ರಲ್ಲಿ ದೇವಾಲಯದ ನಾಶನದ ನಂತರ ಅವುಗಳು ಪ್ರಾಯಶಃ ದೇವಾಲಯದ ಬದಲೀಯಾಗಿ ವೀಕ್ಷಿಸಲ್ಪಟ್ಟವು.
ಈಗ ಅಸ್ತಿತ್ವದಲ್ಲಿಲ್ಲದ ಯಾಜಕವರ್ಗದಿಂದ ರಬ್ಬಿಗಳೆಂದು ಪರಿಚಿತರಾದ ಶಿಕ್ಷಕರಿಗೆ ಪ್ರಾಮುಖ್ಯತೆಯು ಸ್ಥಾನಾಂತರಗೊಂಡಿತು. ಸದ್ದುಕಾಯರು ಒಂದು ಪರಿಣಾಮಕಾರಿ ಭಾಗವಾಗಿ ಅಸ್ತಿತ್ವದಿಂದ ಇಲ್ಲವಾದರು ಮತ್ತು ಎಸ್ಸೆನಿಸರು ಸರಳವಾಗಿಯೇ ಮಾಯವಾದರು. ಹೀಗೆ, ಫರಿಸಾಯರು ವಿವಾದವಿಲ್ಲದೆ ಮುಖಂಡರಾಗಿ ಮೇಲೇರಿದರು. ಹಿಬ್ರೂ ಯೂನಿಯನ್ ಕಾಲೇಜಿನ ಎಲಿಸ್ ರಿವಕಿನ್, ಅವರಿಗಿದ್ದ ಪ್ರಭಾವದ ಕುರಿತು ವಿವರಿಸುತ್ತಾರೆ: “ಫರಿಸಾಯರ ಮೌಖಿಕ ಕಾಯಿದೆಯು ಮಿಶ್ನ್ಹಾಕ್ಕೆ, ಪೆಲೆಸ್ತೀನ್ ಮತ್ತು ಬೆಬಿಲೋನಿನ ಟಾಲ್ಮುಡುಗಳಿಗೆ, ಆರಂಭಿಕ, ಮಧ್ಯಕಾಲೀನ ಹಾಗೂ ಆಧುನಿಕ ರಿಸ್ಪೊನ್ಸಾಗಳಿಗೆ ಮತ್ತು ಯೆಹೂದಿ ಕಾಯಿದೆಯ ಹಲವಾರು ನಿಯಮಗಳಿಗೆ ಜನ್ಮವನ್ನಿತಿತ್ತು.” ದ ನ್ಯೂ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಸೇರಿಸಿದ್ದು: “ ಇಂದು ಕೂಡಾ ಹಲವಾರು ಯೆಹೂದಿ ಪಂಗಡಗಳು—ಸಂಪ್ರದಾಯಬದ್ಧ, ಪೂರ್ವಾಚಾರ ಪ್ರಿಯ ಅಥವಾ ಸುಧಾರಿತ—ಯಾವುದೇ ಇರಲಿ, ಎಲ್ಲವೂ ಫರಿಸಾಯರ ಮತ್ತು ರಬ್ಬಿಗಳ ಪಂಡಿತರುಗಳಿಂದ ನೇರವಾಗಿ ಆತ್ಮೀಕ ರೀತಿಯಲ್ಲಿ ಇಳಿದು ಬಂದಿದೆ ಎಂದು ವಾದಿಸುತ್ತಾರೆ.”
ಡಯಾಸ್ಪೊರದಲ್ಲಿ ಮೆಸ್ಸೀಯನಾಧರಿತ ನಿರೀಕ್ಷೆಗಳು
ಸಾ.ಶ.70ರ ಮೊದಲು ಸಹಿತ ಲಕ್ಷಗಟ್ಟಲೆ ಯೆಹೂದ್ಯರು ಪೆಲೆಸ್ತೀನಿನ ಹೊರಗೆ, ಮುಖ್ಯವಾಗಿ ಸಿರಿಯಾದಲ್ಲಿ, ಏಶ್ಯಾ ಮೈನರ್ನಲ್ಲಿ, ಬೆಬಿಲೋನ್ ಮತ್ತು ಈಜಿಪ್ಟ್ನಲ್ಲಿ ಜೀವಿಸುತ್ತಿದ್ದರು. ಆದಾಗ್ಯೂ, ಸಾ.ಶ. 70ರ ನಂತರ ಯಾವುದೇ ಬದುಕುಳಿದ ಯೆಹೂದ್ಯರು ಸಂಪೂರ್ಣವಾಗಿ ಕಿತ್ತುಹಾಕಲ್ಪಟ್ಟು, “ಚದರಿಸುವಿಕೆ” ಎಂದರ್ಥವಿರುವ ಗ್ರೀಕ್ ಪದವಾದ ಡಯಾಸ್ಪೊರದಲ್ಲಿ ಜೀವನವನ್ನು ನಡೆಸಲು ಚದರಿಸಲ್ಪಟ್ಟರು. ಅಲ್ಲಿ ಕೂಡಾ, ಹಲವರು ಬರಲಿರುವ ಮೆಸ್ಸೀಯನ ಕೆಳಗೆ ಸ್ವ-ನಿರ್ಣಯದ ಅವರ ನಿರೀಕ್ಷೆಯನ್ನು ಉಳಿಸಿದರು. ಯೆಹೂದಿ ಮುಖಂಡ ಬಾರ್ ಕೊಖ್ಬಾ ಸಾ.ಶ.132ರಲ್ಲಿ ರೋಮಿನ ವಿರುದ್ಧದ ದಂಗೆಯನ್ನು ಅಸಫಲತೆಯಿಂದ ಮುಂದುವರಿಸಿ ಸುಳ್ಳು ಮೆಸ್ಸೀಯನಾಗಿ ರುಜುವಾದನು. ದ ಜೂವಿಷ್ ಎನ್ಸೈಕ್ಲೋಪೀಡಿಯಾಕ್ಕನುಸಾರ ಇದರ ನಂತರ ಮತ್ತು ಸಾ.ಶ.1744ರ ನಡುವೆ ಇಂತಹ 28 ಸುಳ್ಳು ಮೆಸ್ಸೀಯರುಗಳು ಕಾಣಿಸಿಕೊಂಡರು.
ಹೀಗೆ, ಪ್ರಾಯಶಃ ಮೆಸ್ಸೀಯಾಧರಿತ ನಿರೀಕ್ಷೆಯು ಗಲಿಬಿಲಿಗೊಂಡಿತು ಎಂದು ತಿಳಿಯುವುದು. ದ ಎನ್ಸೈಕ್ಲೋಪೀಡಿಯಾ ಜುಡೆಯಿಕಾ ವಿವರಿಸುವುದು: “ಮಧ್ಯ ಯುಗದಲ್ಲಿ ಯೆಹೂದಿ ಕಲ್ಪನೆಯು ಪುರಾತನ ಅವಧಿಯಿಂದ ಮೆಸ್ಸೀಯನ ಕುರಿತು ಸುಬದ್ಧ, ಐಕ್ಯಭಾವನೆಯನ್ನು ಪಡೆಯಲಿಲ್ಲ, . . . ಮತ್ತು ತಾಲ್ಮುಡಿಕ್ ಸಾಹಿತ್ಯಗಳಲ್ಲಿ ಮತ್ತು ವಿವಿಧ ಮಿದ್ರಾಶಿಮ್ಗಳಲ್ಲಿ ಹಲವಾರು ವಿರುದ್ಧ ದೃಷ್ಟಿಕೋನಗಳು ಒಳಗೂಡಿವೆ.” 12ನೆಯ ಶತಮಾನದಷ್ಟು ಆರಂಭದಲ್ಲಿ ಯೆಹೂದಿ ತತ್ವಜ್ಞಾನಿ ಮೋಶೆಸ್ ವೈಮೊನಿಡಸ್ ವಾದಿಸಿದ್ದೇನಂದರೆ ಮೆಸ್ಸೀಯನ ಆಳ್ವಿಕೆಯು ಪ್ರಾಯಶಃ ಕೇವಲ ಮೇಲ್ತರಗತಿಯ ಸಮಾಜದ ರಚನೆಯ ಒಂದು ಚಿತ್ರವಾಗಿದೆ. 19ನೆಯ ಶತಮಾನದಲ್ಲಿ, ಸುಧಾರಣೆಯ ಯೆಹೂದಿಗಳು “ಮೆಸ್ಸೀಯನಾಧರಿತ ಯುಗದ ಮೇಲಿನ ನಂಬಿಕೆಯ ಬದಲೀಯಾಗಿ ವೈಯಕ್ತಿಕ ಮೆಸ್ಸೀಯನಲ್ಲಿ ನಂಬಿಕೆಯನ್ನಿಟ್ಟರು. . . . ಚಿಯೋನಿಗೆ ಬಂಧೀವಾಸಿಗಳ ಹಿಂದಿರುಗುವಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಜೋಡಿಸಲ್ಪಟ್ಟ ಮೆಸ್ಸೀಯನಾಧರಿತ ನಿರೀಕ್ಷೆಯು ಕಡಿಯಲ್ಪಟ್ಟಿತು.”
ಇದಕ್ಕೆ ಸ್ವಲ್ಪ ಮೊದಲು, ಯುರೋಪಿನಲ್ಲಿ ಹಸ್ಕಲಾಹ (ಜ್ಞಾನೋದಯ) ಚಳುವಳಿಯು ವಿವಾದವನ್ನು ಇನ್ನಷ್ಟು ಜಟಿಲಗೊಳಿಸಿತು. ಇದು ಪಾಶ್ಚಿಮಾತ್ಯ ಜೀವನ ರೀತಿಗೆ ಸರಿಹೊಂದಿಸಲು ಇಚ್ಛಿಸುತ್ತಿದ್ದ ಯೆಹೂದಿ ಮತವನ್ನು ಉತ್ಪಾದಿಸಿತು. ಇದು ಮೆಸ್ಸೀಯನ ಕೆಳಗೆ ಪುನಃ ಸ್ಥಾಪಿತ ಯೆಹೂದಿ ತಾಯ್ನಾಡಿನಲ್ಲಿ ಸ್ವ-ನಿರ್ಣಯ ಮಾಡುವುದನ್ನು ಪ್ರಥಮವಾಗಿಟ್ಟವರನ್ನು ಮತ್ತು ಹುಟ್ಟಿದ ದೇಶದ ಜೀವನದಲ್ಲಿ ಸೇರ್ಪಡೆಯಾಗುವುದು ಅತೀ ಮಹತ್ವದ್ದು ಎಂದು ಎಣಿಸಿದವರನ್ನು ಹೀಗೆ ಇಬ್ಭಾಗಮಾಡಲು ನೆರವಾಯಿತು.
ಶೇಮ್ಯರ ವಿರುದ್ಧದ ಏಳುವಿಕೆಯೊಂದಿಗೆ ಈ ಬೆಳವಣಿಗೆಗಳು 19ನೆಯ ಶತಮಾನದ ಕೊನೆಯಲ್ಲಿ ಪಿತೃನಂತಿದ್ದ ಥಿಯೊಡರ್ ಹೆರ್ಜಿಲ್ರಿಂದ ಆಧುನಿಕ ಚಿಯೋನಿಸಮ್ನ ಜನ್ಮಕ್ಕೆ ದಾರಿಮಾಡಿಕೊಟ್ಟಿತು. ಇಂದು ಮೇ, 1989ರಲ್ಲಿ ಇಸ್ರಾಯೇಲ್ ರಾಜ್ಯದ ಸ್ಥಾಪನೆಯ ತಿಂಗಳಿನ 41 ವರ್ಷಗಳ ನಂತರ ಯೆಹೂದಿ ತಾಯ್ನಾಡಿನಲ್ಲಿ ಯೆಹೂದಿ ಸಮಾಜವಾಗಿ ಕಲ್ಪಿಸಿದ ಸ್ವ-ನಿರ್ಣಯದಲ್ಲಿ ಯೆಹೂದ್ಯರು ಆನಂದಿಸುತ್ತಾರೆ. ಅವರ ಮೆಸ್ಸೀಯನಾಧರಿತ ನಿರೀಕ್ಷೆಯು ಕೈಗೂಡಿತೋ?
ಹಾಗಿರುವುದಾದರೆ, ಲಂಡನಿನ ದ ಟೈಮ್ಸ್ಗನುಸಾರ “ಯಾವುದು ಇಸ್ರಾಯೇಲಿನ ಸ್ಥಾಪನೆಯೊಂದಿಗೆ ವಾಸ್ತವತೆಯಾಯಿತೋ ಆ ಜಿಯೋನಿಸಮ್ ಒಂದು ಕೆಡಕು ಎಂಬ ರೀತಿಯಲ್ಲಿ” ಕೆಲವು ಯೆಹೂದ್ಯರು ಯಾಕೆ ನೋಡುತ್ತಾರೆ? ಸ್ವತಃ ಯೆಹೂದಿಯಾಗಿದ್ದ ಮೃತ ಇತಿಹಾಸಗಾರ ಥಿಯೋಡರ್ ಹೆಚ್. ವೈಟ್ “ಪ್ರೊಟೆಸ್ಟಾಂಟ್ರುಗಳಲ್ಲಿ ಇರುವಂತೆ . . . ಯೆಹೂದ್ಯರುಗಳು ತಮ್ಮೊಳಗೆ ಜಗಳ ಕಾಯುವ ಪಂಗಡಗಳು ಇವೆ” ಎಂದು ಯಾಕೆ ಯಥಾರ್ಥವಾಗಿ ಒಪ್ಪುತ್ತಾರೆ? “ಒಂದು ವೇಳೆ ಇಸ್ರಾಯೇಲ್ . . . ತನ್ನ ವಿರುದ್ಧವಾಗಿ ಘಾತುಕ ರೀತಿಯಲ್ಲಿ ವಿಭಜಿತವಾದ ಮನೆಯಾಗದಂತೆ, . . . ಬಾಳುವ ಒಂದು ಪರಿಹಾರವನ್ನು ಹುಡುಕಬೇಕಾಗಿದೆ” ಎಂದು ಇಸ್ರಾಯೇಲಿನ ನೆಸೆಟ್ನ 120 ಸದಸ್ಯರುಗಳ ರಾಜಕೀಯ ಅಂಗವಾಗಿ ಕಚ್ಛಾಡುವ ಧಾರ್ಮಿಕ ಪಂಗಡಗಳ ಕುರಿತಾಗಿ ಟೈಮ್ಸ್ ಪತ್ರಿಕೆಯು 1987ರಲ್ಲಿ ಯಾಕೆ ಗಮನ ಸೆಳೆದಿದೆ?
ಆಧುನಿಕ ಯೆಹೂದಿ ಸ್ವ-ನಿರ್ಣಯವು ಭವಿಷ್ಯಕ್ಕೆ ಅಲ್ಪ ನಿರೀಕ್ಷೆಯನ್ನು ಪೂರೈಸಲು ಮಾನವ ರಾಜಕೀಯದಲ್ಲಿ ಭರವಸವಿಡುವುದರಿಂದ ಯೆಹೂದ್ಯ ಮತವು ಅದರ ಸ್ವಂತ ಪವಿತ್ರ ಬರಹಗಳನ್ನು ನಿರ್ಲಕ್ಷಿಸಿದೆ: “ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ ಕರ್ತನನ್ನು ಆಶ್ರಯಿಸುವುದು ಒಳ್ಳೇದು. . . .ಪ್ರಭುಗಳಲ್ಲಿ ಭರವಸವಿಡಬೇಡಿರಿ, ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡಶಕ್ತನಲ್ಲ.”—ಕೀರ್ತನೆ 118:8; 146:3, ದ ಹೋಲಿ ಸ್ಕ್ರಿಪ್ಚರ್ಸ್, ಅಮೇರಿಕದ ಯೆಹೂದ್ಯ ಸಾಹಿತ್ಯ ಸಂಸ್ಥೆಯಿಂದ ಪ್ರಕಾಶಿಸಲಟ್ಟಿದೆ.
ಮೆಸ್ಸೀಯನಾಧರಿತ ನಿರೀಕ್ಷೆಯನ್ನು ಗುರುತಿಸಲು ಇಂದಿನ ಅನೇಕ ಯೆಹೂದ್ಯರಿಗೆ ಆಗುವ ಕಷ್ಟಕ್ಕೆ ವ್ಯತಿರಿಕ್ತವಾಗಿ, ಸಾ.ಶ.ಒಂದನೆಯ ಶತಮಾನದಲ್ಲಿ ಅವರ ಹಲವಾರು ಪೂರ್ವಜರಿಗಾದರೋ ಯಾವುದೇ ಕಷ್ಟಗಳಿಲ್ಲದೆ ಗುರುತಿಸಲು ಸಾಧ್ಯವಾಗಿತ್ತು. (ಯೋಹಾನ 1:41 ನೋಡಿ.) ಅವರು ಸ್ವೀಕರಿಸಿದ ಮೆಸ್ಸೀಯನ ಹಿಂಬಾಲಕರಾದರು, ನಾವು ಸಹಜವಾಗಿ ಕರೆಯಸಾಧ್ಯವಿರುವ “ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಮಾರ್ಗ” ಎಂಬ ಧರ್ಮದ ಪ್ರತಿಪಾದಕರಾಗಿದ್ದರು. ನಮ್ಮ ಮುಂದಿನ ಸಂಚಿಕೆಯು ವಿವರಿಸುತ್ತದೆ. (g89 5/22)
[ಪುಟ 21 ರಲ್ಲಿರುವಚಿತ್ರ]
ಪಶ್ಚಿಮ ಗೋಡೆಯನ್ನು ಸಾಮಾನ್ಯವಾಗಿ ಗೋಳಾಡುವ ಗೋಡೆ ಎಂದು ಕರೆಯಲ್ಪಡುತ್ತದೆ, ಸಾ.ಶ.70ರಲ್ಲಿ ನಾಶಗೊಂಡ ಅವರ ಪವಿತ್ರ ದೇವಾಲಯದಲ್ಲಿ ಇದಿಷ್ಟೇ ಭಾಗ ಉಳಿದಿದೆ