ಯುವ ಜನರು ಪ್ರಶ್ನಿಸುವುದು. . .
ಶಾಲೆಯ ಹಿಂಸಕ ಹುಡುಗರ ಕುರಿತು ನೀವೇನು ಮಾಡಸಾಧ್ಯವಿದೆ?
ರಯನ್ ಒಂದು ಸಣ್ಣ ಹಳ್ಳಿಯ ಶಾಲೆಯಲ್ಲಿ ಹಾಜರಾಗುತ್ತಿದ್ದನು, ಅಲ್ಲಿ ಬಲಾತ್ಕಾರವು ಕೇಳಲ್ಪಟ್ಟಿರಲಿಲ್ಲ. ಆದರೆ ಅವನು ಒಂದು ದೊಡ್ಡ ಹಾಗೂ ಕಠಿಣಕರ ಹೈಸ್ಕೂಲಿಗೆ ವರ್ಗಾಂತರಗೊಂಡನು—ಮತ್ತು ಬಲುಬೇಗನೇ ಶಾಲೆಯ ಹಿಂಸಕ ಹುಡುಗರ ಗುರಿಯಾದನು. ರಯಾನ್ ವರ್ಣಿಸುವುದು: ‘15-ನಿಮಿಶದ ಬಸ್ ಪ್ರಯಾಣವು ಮುಗಿಯದ ಹಲವಾರು ತಾಸುಗಳ ಚಿತ್ರಹಿಂಸೆಯಾಗಿ ಪರಿಣಮಿಸುತ್ತಿತ್ತು, ಏಕಂದರೆ ನನ್ನ ಪೀಡಕರು ಮಾತಿನ ದೂಷಣೆಯಿಂದ ದೈಹಿಕ ಪೀಡನೆಗೆ ಮುಂದುವರಿದರು. ಅವರು ಪೇಪರ್ ಕ್ಲಿಪ್ಪೊಂದನ್ನು ತಿರುಚಿ ಸ್ವಸ್ತಿಕ ಮಾಡಿ, ಅದನ್ನು ಸಿಗರೇಟ್ ಲೈಟರ್ನಿಂದ ಕೆಂಪಗೆ ಬಿಸಿಮಾಡಿ ಗುಟ್ಟಿನಿಂದ ನನ್ನ ಕೈಯ ಮೇಲೆ ಮುದ್ರೆ ಒತ್ತಿದರು. ನಾನು ತಡೆದು ಕೊಳ್ಳಲಾರದೇ ಅತ್ತೆನು.’
ಎಲಿಜಾಬೇತಳು ಹಲವಾರು ವರ್ಷಗಳ ಹಿಂದೆ ಶಾಲೆಯನ್ನು ಮುಗಿಸಿದ್ದಳು. ಆದರೂ ಅವಳ ಶಾಲಾ ದಿನಗಳನ್ನು ನೆನಪಿಸುವಾಗ ಅವಳ ಕಣ್ಣುಗಳು ಕಣ್ಣೀರಿನಿಂದ ಈಗಲೂ ತೋಯುತ್ತಿದ್ದವು. “ನಾನು ಬೇರೆ ಮಕ್ಕಳಿಂದ ಭಿನ್ನವಾಗಿ ತೋರುತ್ತಿದ್ದೆ,” ಅವಳು ವಿವರಿಸುವುದು, “ಯಾಕಂದರೆ ನನ್ನ ತಾಯಿಯು ಇನ್ನೊಂದು ಜಾತಿಯವಳಾಗಿದ್ದಳು. ಎರಡನೆಯ ದರ್ಜೆಯಿಂದ ಹೈಸ್ಕೂಲ್ ತನಕ, ನಾನು ನಿರಂತರವಾಗಿ ಗೇಲಿಗೊಳಪಟ್ಟಿದ್ದೆ ಮತ್ತು ನಿರಾಕರಿಸಲ್ಪಟ್ಟಿದ್ದೆ. ‘ಎಲಿಜಾಬೇತಳನ್ನು ನಾನು ದ್ವೇಷಿಸುತ್ತೇನೆ’ ಎಂಬ ಹೆಸರಿನ ಒಂದು ಸಂಘವಿತ್ತೆಂದು ನನಗೆ ಭಾಸವಾಗುತ್ತಿತ್ತು ಮತ್ತು ಅವರ ಶತ್ರುಗಳ ತಲೆಗಳನ್ನು ಪಾಯಿಖಾನೆಯಲ್ಲಿ ಹಾಕುತ್ತೇವೆ ಎಂಬ ಕೆಲವು ನಿರ್ದಿಷ್ಟ ಹುಡುಗಿಯರ ಬೆದರಿಕೆಗಳಿಗೆ ನಾನು ಗುರಿಯಾಗದಿರುವುದಕ್ಕಾಗಿ, ಮುಂದಿನ ವರ್ಷಗಳಲ್ಲಿ ಶಾಲೆಯ ವಿಶ್ರಾಂತಿಕೋಣೆಗಳಿಗೂ ಹೋಗುವುದನ್ನು ನಾನು ಹೋಗಲಾಡಿಸುತ್ತಿದ್ದೆ. ನಾನು ಅವರ ಮುಖ್ಯ ಗುರಿ ಎಂದು ಲೆಕ್ಕ ಹಾಕಿದ್ದೆ.”
ಹೆಚ್ಚಿನ ಪ್ರಮಾಣದಲ್ಲಿ ಶಾಲಾ-ಪ್ರಾಯದ ಯುವಕರಲ್ಲಿ ಗಾಬರಿಗೊಳಿಸುವ ಶಾಲೆಯ ಭಯವಾದವು ದೈನಂದಿನ ಅನುಭವವಾಗಿರುತ್ತದೆ, ಶಾಲೆಯ ಹಿಂಸಕ ಹುಡುಗರಿಂದ ಮಾತಿನ ಮತ್ತು ಲಿಖಿತ ಅವಾಚ್ಯ ದೂಷಣೆ, ವಿರಾಮ ಕೋಣೆಗಳಲ್ಲಿ ಪೀಡಿಸುವುದು, ಅವರು ಊಟದ ಹಣ ಕ್ರಮವಾಗಿ ಬಲಾತ್ಕಾರದಿಂದ ತೆಗೆದು ಕೊಳ್ಳುವುದು—ಲೈಂಗಿಕ ಸಂಭೋಗ ನಡಿಸಲು ಒತ್ತಡ ಹೇರುವುದು ಇರುತ್ತದೆ.a ಮತ್ತು ಇದಕ್ಕೆ ಬಲಿಯಾದವರಲ್ಲಿ ನೀವು ಒಬ್ಬರಾಗಿರುವುದಾದರೆ, ಬೇರೆ ಯಾವುದರ ಕಡೆಗೂ ನೀವು ಕೇಂದ್ರೀಕರಿಸಲು ಅಸಾಧ್ಯದ್ದಗಿ ಮಾಡುವ ನಿಮ್ಮ ಅತಿ ದೊಡ್ಡ ಸಮಸ್ಯೆಯಾಗಿರ ಬಹುದು! ಸಂತಸಕರವಾಗಿಯೇ, ಇದರ ಕುರಿತು ಕೆಲವೊಂದನ್ನು ಮಾಡ ಸಾಧ್ಯವಿದೆ! ಆದರೆ ಮೊದಲು ನೀವು ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಯಾವುದು ಹಿಂಸಕ ಹುಡುಗನನ್ನಾಗಿ ಮಾಡುತ್ತದೆ?
ಯಾವನೇ ಒಬ್ಬನು ಹಿಂಸಕ ಹುಡುಗನಾಗಿ ಹುಟ್ಟುವುದಿಲ್ಲ ಎಂದು ಸಂಶೋಧಕರು ಸಾಮಾನ್ಯವಾಗಿ ಒಪ್ಪುತ್ತಾರೆ. “ಶಾಲೆಯಲ್ಲಿ ಒಬ್ಬ ಹಿಂಸಕ ಹುಡುಗನು ಮನೆಯಲ್ಲಿ ಒಬ್ಬ ಬಲಿಪಶು,” ಎಂದು ಮನಶಾಸ್ತ್ರಜ್ಞ ನತಾನಿಯೇಲ್ ಫ್ಲೊಡ್ ವಾದಿಸುತ್ತಾರೆ. ಮನೆಯಲ್ಲಿ ಪಡೆಯುವ ತನ್ನ ಕೆಟ್ಟ ಉಪಚಾರವನ್ನು ಹಿಂಸಕ ಹುಡುಗನು ಇಲ್ಲಿ ದಾಟಿಸುತ್ತಿರಬಹುದು.—ಪ್ರಸಂಗಿ 7:7.
“ಟೆಲಿವಿಶನ್ನಲ್ಲಿ ಬಹಳಷ್ಟು ಬಲಾತ್ಕಾರವನ್ನು ನೋಡುವುದರಿಂದ” ಮತ್ತು “ಬಾಲ್ಯತನದಲ್ಲಿ ಅತಿ ಕೊಂಚ ಪ್ರೀತಿ ಮತ್ತು ಲಕ್ಷ್ಯ ಹಾಗೂ ಅತಿಯಾದ ಸ್ವಾತಂತ್ರವು” ಇನ್ನಿತರ ನೆರವಾಗುವ ವಾಸ್ತವಾಂಶಗಳು ಎಂದು ಇತರ ತಜ್ಞರು ಉಲ್ಲೇಖಿಸುತ್ತಾರೆ. ಸಾಮಾನ್ಯವಾಗಿ ಆಕ್ರಮಣಕಾರಿಯಲ್ಲದ ಯುವಕರು ಒಂದು ತಂಡದ ಭಾಗವಾಗಿರಬೇಕೆಂಬ ಆಶೆಯಿಂದ ಕೆಲವೊಮ್ಮೆ ಹಿಂಸಕರಾಗುವದಕ್ಕೆ ಮತ್ತು ಅವರಿಂದ ತಮ್ಮಡೆಗೆ ಸ್ವತಃ ಗಮನ ತಪ್ಪಿಸಲು ಸೆಳೆಯಲ್ಪಡುತ್ತಾರೆ.
ಬಲಿಯಾದವನ ಒಂದು ಪಾರ್ಶ್ವ ನೋಟ
ಭಿನ್ನವೆಂದು ತೋರುವ ಯಾವುದೇ ಸಂಗತಿಯು—ಶರೀರದ ಒಂದು ಹೆಚ್ಚಾಗಿರುವ ಯಾ ಲೋಪವಾಗಿರುವ ಅಂಗ, ಯಾ ಶಾಲೆಯಲ್ಲಿ ಕೇವಲ ಹೊಸಬನಾಗಿರುವುದು,—ಹಿಂಸಕ ಹುಡುಗನು ಧಾಳಿಮಾಡಲು ಪ್ರಚೋದಿಸಬಹುದು. ಆದಾಗ್ಯೂ, ಒಂದು ಸ್ವಭಾವವು ಹಿಂಸಕ ಹುಡುಗರಿಗೆ ಬಲಿಯಾದವರಲ್ಲಿ ವಿಶೇಷವಾಗಿ ಎದ್ದು ತೋರುತ್ತದೆ. ಈ ಹಿಂದೆ ಉಲ್ಲೇಖಿಸಿದ ಎಲಿಜಾಬೇತಳು ಅದನ್ನು ಸೂಚಿಸಿ ಹೇಳಿದ್ದು: “ನನಗೆ ವೇದನೆಯಾಗಿದೆ ಯಾ ಹೆದರಿದ್ದೇನೆಂದು ಇತರರು ಬೇಗನೇ ಹೇಳಲಾಗುವಂತೆ ನಾನು ಯಾವಾಗಲೂ ಬಹಳ ಸುಲಭವಾಗಿಯೇ ಅತ್ತು ಬಿಡುತ್ತಿದ್ದೆ.”
ಹಿಂಸಕ ಹುಡುಗರಿಗೆ ಬಲಿಯಾಗುವವರ ಸಾಮಾನ್ಯ ಗುಣಲಕ್ಷಣಗಳ ಪಟ್ಟಿಯೊಂದನ್ನು ಪೇರೆಂಟ್ಸ್ (ಹೆತ್ತವರು) ಎಂಬ ಪತ್ರಿಕೆಯು ಮಾಡಿದೆ: “ಉದ್ವೇಗ, ನಾಚಿಕೆ, ಜಾಗರೂಕತೆ, ಸೂಕ್ಷ್ಮ ಸಂವೇದಿ, ಕೆಳಸ್ತರದ ಸ್ವ-ಗೌರವ” ಮತ್ತು “ಧಾಳಿಗೊಳಗಾದಾಗ ಅಳುವ ಯಾ ಪಲಾಯನ ಮಾಡುವ ಪ್ರವೃತ್ತಿ”! (ಒತ್ತು ನಮ್ಮದು.) ಇಲ್ಲ, ಬಲಿಯಾದವರನ್ನು ಅವರ ಸಂಕಟಗಳಿಗಾಗಿ ದೋಷಾರೋಪಣೆ ಮಾಡುವುದಲ್ಲ. ಆದಾಗ್ಯೂ, ನಿಸ್ಸಹಾಯಕತೆಯೆಡೆಗೆ ಹಿಂಸಕ ಹುಡುಗರು ಆಕರ್ಷಿಸಲ್ಪಡುತ್ತಾರೆ ಎಂಬದನ್ನು ತಿಳಿಯುವುದರಿಂದ ಅವರೊಂದಿಗೆ ನಿರ್ವಹಣೆ ಮಾಡಲು ಸಹಾಯ ಮಾಡಸಾಧ್ಯವಿದೆ.
ಕಂಠೋಕ್ತವಾಗಿ ಹೇಳಿರಿ, ಆಕ್ರಮಿಸುವವರಾಗದಿರ್ರಿ
ಮೊದಲಾಗಿ, ಒಬ್ಬ ಹಿಂಸಕನೊಡನೆ ಪ್ರತಿಏಟು ಕೊಡುವ ಶೋಧನೆಗೆ ಬಲಿಯಾಗಬೇಡಿರಿ. ‘ಕೇಡಿಗೆ ಕೇಡನ್ನು ಪ್ರತಿಯಾಗಿ ತಿರುಗಿಸುವುದು’ ಕೇವಲ ತಪ್ಪು ಮಾತ್ರವಲ್ಲ, ನೀವು ಪಡೆಯಬಾರದಾದ ತೊಂದರೆಗಳಿಗೆ ಅದು ನಿಮ್ಮನ್ನು ಸಿಕ್ಕಿಸಬಹುದು ಮತ್ತು ಅದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಬಹುದು. (ರೋಮಾಪುರದವರಿಗೆ 12:17) ಆದರೆ ಆಕ್ರಮಿಸುವವರಾಗಿರುವುದು ಅವಿವೇಕತನದ್ದಾಗಿರುವಾಗ, ಕಂಠೋಕ್ತವಾಗಿ ಹೇಳುವುದು ಸಹಾಯಕಾರೀಯಾಗಿ ಪರಿಣಮಿಸಬಹುದು. “ಹಿಂಸಕ ಹುಡುಗನಿಗೆ ಸರಳವಾಗಿ ನಿಲ್ಲಿಸಲು ಹೇಳುವುದರಿಂದ,” ಪೇರೆಂಟ್ಸ್ ಪತ್ರಿಕೆಯು ಶಿಫಾರಸು ಮಾಡುವುದು, “ಹಿಂಸಕ ಹುಡುಗನು ಏನನ್ನು ಮಾಡುತ್ತಾನೋ ಅದನ್ನು ಅವನು ಮೆಚ್ಚುವದಿಲ್ಲವೆಂದು ವಿವರಿಸಿ, ಅನಂತರ ದೂರಕ್ಕೆ ನಡೆದರೆ, ಭವಿಷ್ಯದಲ್ಲಿ ಹಿಂಸೆಗೊಳಗಾಗುವ ಅವನ ಸಂಭವಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದು.” ಇಲ್ಲವೇ ಒಬ್ಬ ಮನೋಶಾಸ್ತ್ರಜ್ಞನು ತಿಳಿಸಿದಂತೆ, ‘ನಿಲುವೊಂದನ್ನು ತೆಗೆದು ಕೊಳ್ಳಿರಿ ಮತ್ತು ಗೌರವಯುಕ್ತವಾಗಿ ಬಿಟ್ಟು ಹೋಗಿರಿ.’
ಇನ್ನೊಂದು ವಿಧಾನವು, (ಒಂದು ಸಮಂಜಸವಾದ ಸಮಯ ಮತ್ತು ಸ್ಥಳದಲ್ಲಿ) ಹಿಂಸಕ ಹುಡುಗನೊಂದಿಗೆ ಸಮಾಧಾನದಿಂದ ವಿವೇಚಿಸಲು ಪ್ರಯತ್ನಿಸುವುದು. ‘ಅವನೊಂದಿಗೆ—ವಿವೇಚನೆ?’ ನೀವು ಕೇಳ ಬಹುದು. ಹೌದು, ಅವನ ಕ್ರೋಧವನ್ನು ಕೆರಳಿಸುವಂತಹ ಯಾವುದೋ ಸಂಗತಿ ನೀವು ತಿಳಿಯದೇ ಮಾಡಿರಬಹುದು, ಅದು ಅವನಲ್ಲಿ ತಪ್ಪಭಿಪ್ರಾಯಕ್ಕೆ ಎಡೆಮಾಡಿರಬಹುದು. ನೀವು ಶಾಂತತೆಯಿಂದ ಮತ್ತು ಧೈರ್ಯದಿಂದ ಸಮೀಪಿಸುವುದು ತಾನೇ, ನೀವು ನಿಸ್ಸಹಾಯಕ ಬಲಿಯಾಗಿರಲು ನಿರಾಕರಿಸುತ್ತೀರಿ ಎಂಬ ಸಂದೇಶವು, ಕಡಿಮೆಪಕ್ಷ ಅವನಿಗೆ ತಲುಪುತ್ತದೆ. ಡಾ. ಕೆನೆತ್ ಡೊಜ್ ವಿವರಿಸುವುದು: “ಹಿಂಸಕ ಹುಡುಗರು ನಿರಾಸಕ್ತಿಯಿಂದ ಸ್ವೀಕರಿಸುವವರಿಗಾಗಿ, ಕಣ್ಣೀರಿಗಾಗಿ ನೋಡುತ್ತಾ ಇರುತ್ತಾರೆ. ಬಯಸಿದ ರೀತಿಯಲ್ಲಿ ಮಕ್ಕಳು ಪ್ರತಿವರ್ತಿಸದಿದ್ದರೆ, ಪುನಃ ಗುರಿಯಾಗಿ ಆರಿಸಲು ಹೆಚ್ಚಿನಾಂಶ ಸಂಭವ ಇರುವದಿಲ್ಲ.” ಜ್ಞಾನೋಕ್ತಿಯೂ ಚಲೋದಾಗಿಯೇ ಹೇಳುತ್ತದೆ: “ಮನುಷ್ಯನ ಭಯ ಉರುಳು.”—ಜ್ಞಾನೋಕ್ತಿ 29:25.
ನಿಮ್ಮ ಹೆತ್ತವರಿಗೆ ಹೇಳಿರಿ
ಹಿಂಸಿಸುವುದು ನಿಲ್ಲಿಸಲ್ಪಡದಿದ್ದಲ್ಲಿ ಏನು? ಸಮಸ್ಯೆಯ ಕುರಿತು ನೀವು ನಿಮ್ಮ ಹೆತ್ತವರಿಗೆ ತಿಳಿಸುವ ಅವಶ್ಯಕತೆ ಇದೆ ಎಂದು ವಿದ್ಯಾಪರಿಣತರು ಮತ್ತು ಮನೋಶಾಸ್ತ್ರಜ್ಞರು ಧೃಡವಾಗಿ ಸಹಮತಿಸುತ್ತಾರೆ. ನಿಜ, ನಿಮ್ಮ ಹೆತ್ತವರು ಅರ್ಥಮಾಡಿಕೊಳ್ಳಲಾರರು ಎಂದು ನೀವು ಭಾವಿಸ ಬಹುದು. ಹಿಂಸಕ ಹುಡುಗನ ಕುರಿತು ಹೇಳಿದರೆ ಇನ್ನಷ್ಟು ಹೆಚ್ಚು ಕೆಟ್ಟ ರೀತಿಯ ಉಪಚಾರ ಕೊಡಲಾಗುವುದು ಎಂಬ ಬೆದರಿಕೆ ನಿಮಗೆ ಒಡ್ಡಿರಬಹುದು. ಆದರೆ, ಶಾಲೆಯಲ್ಲಿ ನಿಮಗೇನು ಸಂಭವಿಸುತ್ತದೆಂದು ತಿಳಿಯುವ ಹಕ್ಕು ನಿಮ್ಮ ಹೆತ್ತವರಿಗೆ ಇದೆ, ಅವರಿಗೆ ಇಲ್ಲವೋ?
ಇದರ ಅರ್ಥ, ನಿಮ್ಮ ಹೆತ್ತವರು ಹಿಂಸಕ ಹುಡುಗನೊಂದಿಗೆ ನೇರವಾಗಿ ಮಾತಾಡಬೇಕಂದಲ್ಲ. ಆದರೆ ಅವರು ನಿಮಗೆ ಪ್ರೋತ್ಸಾಹವನ್ನು ನೀಡಬಹುದು ಮತ್ತು ಈ ನಿಮ್ಮಲ್ಲಿ ಕುಂದುತ್ತಿರುವ ಸ್ವ-ಭರವಸೆಯನ್ನು ಕಟ್ಟಬಹುದು ಮತ್ತು ದೈವಿಕ ತತ್ವಗಳಿಗನುಸಾರ ಜೀವಿಸಲು ಮನವರಿಕೆ ಮಾಡಬಹುದು. ಅವರು ವ್ಯಾವಹಾರಿಕ ಸಲಹೆಗಳನ್ನು ಕೂಡಾ ಕೊಡಬಹುದು. ಉದಾಹರಣೆಗೆ, ಹಿಂಸಿಸಲ್ಪಡುವುದರ ಕುರಿತು ಶಾಲಾ ಅಧಿಕಾರಿಗಳೊಂದಿಗೆ ಮಾತಾಡಲು ಸೂಚಿಸಬಹುದು. ಶಾಲಾಶಿಕ್ಷಕ ಜೆರಾಲ್ಡ್ ಹೊಫ್ ಸೂಚಿಸುವುದು: “ವಿಶೇಷವಾಗಿ ನಿಮಗೆ ನಿಮ್ಮ ಹೆತ್ತವರ ಬೆಂಬಲ ಇರುವಾಗ, ಮೊದಲು ಶಾಲೆಯ ಮಾರ್ಗದರ್ಶಕನೊಂದಿಗೆ ಭೇಟಿಮಾಡಿರಿ. ಆದರೆ, ಸಾಧ್ಯವಿದ್ದರೆ ಇದನ್ನು ಬೇರೆ ಮಕ್ಕಳಿಗೆ ತಿಳಿಯಲ್ಪಡದ ರೀತಿಯಲ್ಲಿ, ನೀವಿದನ್ನು ಮಾಡಿರಿ. ಮಾರ್ಗದರ್ಶಕನು ಹಿಂಸಕ ಹುಡುಗನೊಂದಿಗೆ ಹೇಗೆ ಉತ್ತಮವಾಗಿ ಮಾತಾಡ ಬೇಕು ಎಂದು ತರಬೇತಿ ಪಡೆದವನಾಗಿರುತ್ತಾನೆ, ಆದರೆ ವಿಷಯವು ಇನ್ನಷ್ಟು ಕೇಡಿಗೆ ನಡಿಸಲ್ಪಡುವುದಾದರೆ, ಪ್ರಿನ್ಸಿಪಾಲನಿಗೆ ತಿಳಿಸುವುದು ಅವನ ಕರ್ತವ್ಯ ಆಗಿರುತ್ತದೆ.”
ಕೆಲವೊಮ್ಮೆ ಹೆತ್ತವರು ನಿಮ್ಮ ಪರವಾಗಿ ಶಾಲಾ ಅಧಿಕಾರಿಗಳೊಂದಿಗೆ ಮಾತಾಡಲು ತೀರ್ಮಾನಿಸಬಹುದು. ಈ ರೀತಿ ಅವರು ಮಧ್ಯ ಪ್ರವೇಶಿಸುವುದರ ಕುರಿತು ನೀವು ಒಪ್ಪದೇ ಇರಬಹುದು ಎಂಬದನ್ನು ಅರ್ಥೈಸಿಕೊಳ್ಳಬಹುದು. ಆರಂಭದಲ್ಲಿ ತಿಳಿಸಲ್ಪಟ್ಟ ರಯಾನ್ ನೆನಪಿಸಿ ಕೊಳ್ಳುವುದು: “ಇದರಲ್ಲಿ ಸೇರಿಕೊಳ್ಳಬೇಡಿ ಎಂದು ನಾನು ನನ್ನ ತಂದೆ ಮತ್ತು ತಾಯಿಗೆ ಪ್ರಾರ್ಥಿಸಿದೆ, ಯಾಕಂದರೆ ತಂಡವಾಗಿ ನನ್ನ ವಿರುದ್ಧ ಕಾರ್ಯಾಚರಿಸಬಹುದೆಂದು ನಾನು ಹೆದರಿದ್ದೆ, ಮತ್ತು ದಿನ ಕಳೆದಂತೆ ಪರಿಸ್ಥಿತಿ ಒಳ್ಳೆಯದಾಗಬಹುದು ಎಂದು ನಾನು ನಿರೀಕ್ಷಿಸಿದ್ದೆ.” ಆದರೆ ಈ ಸುಡುಮುದ್ರೆ ಹಗರಣದ ನಂತರ ಅವನ ತಂದೆಯು ಶಾಲಾ ಅಧಿಕಾರಿಗಳನ್ನು ಭೇಟಿಯಾಗುವುದನ್ನು ಒತ್ತಾಯಿಸಿದನು. ಅದರ ಫಲಿತಾಂಶ? ಅವನ ಪರವಾಗಿ ಜಾಗರೂಕತೆಯ ಹೆಜ್ಜೆಗಳನ್ನು ತೆಗೆದುಕೊಳ್ಳಲಾಯಿತು. “ಅವಶ್ಯಕತೆಗಿಂತ ಹೆಚ್ಚಾಗಿ ನನ್ನನ್ನು ಒಳಗೂಡಿಸದೇ, ಕಠಿಣತಮ ಆಸನದ ನೇಮಕಗಳನ್ನು ಮಾಡಲಾಯಿತು ಮತ್ತು ತಪ್ಪು ಗೈದ ಹುಡುಗರ ಮೇಲೆ ನಿಕಟ ಗಮನ ಇಡಲಾಯಿತು,” ಎಂದನ್ನುತ್ತಾನೆ ರಯಾನ್.
ಇನ್ನೂ ಬಿಡುಗಡೆ ಬಾರದಿದ್ದರೆ, ತಪ್ಪು ಗೈದವನ ವಿರುದ್ಧ ಕಠಿಣಕರ ಕ್ರಮಗಳನ್ನು ತೆಗೆದು ಕೊಳ್ಳುವುದರ ಕುರಿತಾಗಿ ನಿಮ್ಮ ಹೆತ್ತವರು ತೀರ್ಮಾನಿಸ ಸಾಧ್ಯವಿದೆ.
ಪ್ರತಿಬಂಧಕ ಕ್ರಮಗಳು
ಆದಾಗ್ಯೂ, ಮೊದಲ ಹಂತದಲ್ಲೇ ಕಿರುಕುಳ ಕೊಡಲ್ಪಡದೇ ಇರುವುದು ಅತ್ಯುತ್ತಮ. ಹೇಗೆ? ಒಂದು ವಿಷಯವೇನಂದರೆ, ಸಾಮಾನ್ಯವಾಗಿ ಕ್ಲಾಸಿನ ಒಳಗೆ ಮತ್ತು ಹೊರಗೆ ಇತರರೊಡನೆ ನೀವು ಸಂಭಾಷಿಸುವುದು ತಾನೇ, ನೀವು ಒಂಟಿಗರಾಗಿದ್ದೀರಿ ಎಂಬ ಭಾವನೆಯನ್ನು ಹಿಂಸಕ ಹುಡುಗರಲ್ಲಿ ಇಲ್ಲದಂತೆ ಮಾಡಲು ಸಹಾಯ ಮಾಡುತ್ತದೆ. ಶಿಕ್ಷಕರೊಂದಿಗೆ, ಬಸ್ಸಿನ ವಾಹಕರುಗಳೊಂದಿಗೆ ಮಿತ್ರತ್ವದಿಂದ ಇರುವುದು, ಅವರನ್ನು ನೋಡಿ ನಸುನಗೆ ಬೀರುವುದು ಮತ್ತು ವಂದಿಸುವುದು, ಇದರಿಂದ ನಿಮ್ಮೆಡೆಗೆ ಅವರು ಹೆಚ್ಚು ಮೆಚ್ಚಿಕೆಯ ಗಮನ ನೀಡುವಂತಾಗುತ್ತದೆ ಮತ್ತು ಅದು ನಿಮಗೆ ಭದ್ರತೆಯ ಕ್ರಮವಾಗಿರುತ್ತದೆ. ಎಲ್ಲಿ ತೊಂದರೆಗಳು ಸಂಭವನೀಯವೋ ಅಂತಹ ಸಮಯಗಳನ್ನೂ, ಸ್ಥಳಗಳನ್ನೂ ಹೋಗಲಾಡಿಸಲು ನೀವು ಪ್ರಯತ್ನಿಸಬಹುದು.—ಜ್ಞಾನೋಕ್ತಿ 22:3.
ಹೆಚ್ಚು ಬಿಗುಪು ಇಲ್ಲದ ಮತ್ತು ಸಮಾಧಾನ ಚಿತ್ತದ ತೋರಿಸುವಿಕೆ ಪ್ರದರ್ಶಿಸಲು ಪ್ರಯತ್ನಿಸಿರಿ. ಇದೂ ಕೂಡಾ ಹಿಂಸಕ ಹುಡುಗರ ಗುರಿಯಾಗುವುದನ್ನು ಕಡಿಮೆ ಮಾಡುತ್ತದೆ. ಬೈಬಲನ್ನುವುದು: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.” (2 ತಿಮೊಥೆಯನಿಗೆ 1:7) ಈ ವಾಸ್ತವಾಂಶವನ್ನು ಧ್ಯಾನಿಸುವುದರ ಮೂಲಕ ಆ ಆತ್ಮವನ್ನು ನೀವು ದೃಢಗೊಳಿಸ ಸಾಧ್ಯವಿದೆ: “ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ.” (1 ಕೊರಿಂಥದವರಿಗೆ 8:3) ನಿಮ್ಮ ಸಮಸ್ಯೆಗಳ ಅರಿವು ದೇವರಿಗೆ ಇದೆ ಮತ್ತು ಅವನು ನಿಜವಾಗಿ ನಮ್ಮ ಜಾಗ್ರತೆ ತೆಗೆದುಕೊಳ್ಳುತ್ತಾನೆ ಎಂಬದು ತಾನೇ ಆ ಸಮಸ್ಯೆಯನ್ನು ನಿಭಾಯಿಸಲು ನಿಮಗೆ ನೆರವಾಗುವುದು.
ರಯಾನ್ ನೆನಪಿಸಿಕೊಳ್ಳುವುದು: “ಈ ಎಲ್ಲಾ ಸಮಯಗಳಲ್ಲಿ ನಾನು ತುಂಬಾ ಪ್ರಾರ್ಥಿಸುತ್ತಿದ್ದೆ ಮತ್ತು ಇದರಿಂದಾಗಿ ಯೆಹೋವನ ಹತ್ತಿರ ಇದ್ದೇನೆ ಎಂಬ ಭಾವನೆ ನನಗುಂಟಾಗುತ್ತಿತ್ತು. ನಾನು ಹೆಚ್ಚು ಸ್ವ-ನಿಯಂತ್ರಣವನ್ನು ಸಂಪಾದಿಸಿ ಕೊಂಡೆನು. ಅವನು ‘ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸುವುದಿಲ್ಲ’ ಎಂದು ಹೇಳುವಾಗ, ಎಲ್ಲಾಕ್ಕಿಂತಲೂ ಹೆಚ್ಚಾಗಿ ಯೆಹೋವನ ಮೇಲೆ ಹೆಚ್ಚು ಭರವಸ ಪಡೆದೆನು.” (1 ಕೊರಿಂಥದವರಿಗೆ 10:13) ನಿಮ್ಮ ಸಮಸ್ಯೆಗಳೊಂದಿಗೆ—ಅದೂ ಹೇಡಿತನದ ಹಿಂಸಕ ಹುಡುಗನಂತಹ ತೊಂದರೆಯಾಗಿರುವುದಾದರೂ— ವ್ಯವಹರಿಸಲು ದೇವರು ನಿಮಗೂ ಸಹಾಯ ಮಾಡುವನು. (g89 8/8)
[ಅಧ್ಯಯನ ಪ್ರಶ್ನೆಗಳು]
a ಒಂದು ಅಧ್ಯಯನದಲ್ಲಿ, ಅಮೆರಿಕದ ಜೂನಿಯರ್ ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಶೇಕಡಾ 25 ತಮ್ಮ ಮುಖ್ಯ ಚಿಂತೆ “ಹಿಂಸಕ ಹುಡುಗರು ಮತ್ತು ಗಲಭೆಗೊಳಿಸುವ ವರ್ತನೆಗಳು” ಎಂದು ಪಟ್ಟಿ ಮಾಡಿದ್ದರು. ಇಂಗ್ಲೆಂಡಿನಲ್ಲಿ ಮತ್ತು ಪಶ್ಚಿಮ ಜರ್ಮನಿಯಲ್ಲಿ, ಸಂಖ್ಯೆಯಲ್ಲಿ ಮತ್ತು ತೀವ್ರತೆಯಲ್ಲಿ ಹಿಂಸಕ ಪ್ರವೃತ್ತಿಯು ಏರಿರುವುದರ ಕುರಿತು ಶಿಕ್ಷಣತಜ್ಞರುತಮ್ಮ ಚಿಂತೆಯನ್ನು ತದ್ರೀತಿಯಲ್ಲಿ ವ್ಯಕ್ತ ಪಡಿಸಿರುತ್ತಾರೆ.
[ಪುಟ 18 ರಲ್ಲಿರುವಚಿತ್ರ]
ಹಿಂಸಕ ಹುಡುಗರು ತಮಗಿಂತ ಚಿಕ್ಕ, ನಿರ್ಬಲ ವಿರೋಧಿಗಳನ್ನು ಕೆಣಕುವುದರಲ್ಲಿ ಆನಂದಿಸುವರು
[ಪುಟ 19 ರಲ್ಲಿರುವಚಿತ್ರ]
ಸನ್ನಿವೇಶವು ನಿಮಗೆ ನಿಭಾಯಿಸಲು ಹೆಚ್ಚಾಗಿರುವುದಾದರೆ, ನಿಮ್ಮ ಹೆತ್ತವರಿಗೆ ತಿಳಿಸಿರಿ