ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ypq ಪ್ರಶ್ನೆ 5 ಪು. 15-17
  • ಶಾಲೆಯಲ್ಲಿ ನನ್ನನ್ನ ರೇಗಿಸಿದರೆ ಏನ್‌ ಮಾಡೋದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಲೆಯಲ್ಲಿ ನನ್ನನ್ನ ರೇಗಿಸಿದರೆ ಏನ್‌ ಮಾಡೋದು?
  • ಯುವಜನರ 10 ಪ್ರಶ್ನೆಗಳಿಗೆ ಉತ್ತರ
  • ಅನುರೂಪ ಮಾಹಿತಿ
  • ದಬಾವಣೆಗಾರಿಕೆ ಹಾನಿಯೇನು?
    ಎಚ್ಚರ!—1997
  • ನನ್ನ ಮಗುವಿಗೆ ಯಾರಾದರೂ ತುಂಬ ತೊಂದರೆ ಕೊಡುತ್ತಿದ್ದರೆ ನಾನೇನು ಮಾಡಲಿ?
    ಸುಖೀ ಸಂಸಾರಕ್ಕೆ ಸಲಹೆಗಳು
  • ಶಾಲೆಯ ಹಿಂಸಕ ಹುಡುಗರ ಕುರಿತು ನೀವೇನು ಮಾಡಸಾಧ್ಯವಿದೆ?
    ಎಚ್ಚರ!—1990
  • ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಯುವಜನರ 10 ಪ್ರಶ್ನೆಗಳಿಗೆ ಉತ್ತರ
ypq ಪ್ರಶ್ನೆ 5 ಪು. 15-17
ತರಗತಿಯಲ್ಲಿ ಹುಡುಗನೊಬ್ಬ ಮತ್ತೊಬ್ಬನ್ನು ರೇಗಿಸುತ್ತಿದ್ದಾನೆ

ಪ್ರಶ್ನೆ 5

ಶಾಲೆಯಲ್ಲಿ ನನ್ನನ್ನ ರೇಗಿಸಿದರೆ ಏನ್‌ ಮಾಡೋದು?

ಪ್ರಾಮುಖ್ಯವೇಕೆ?

ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ, ಅದರಿಂದ ಸಮಸ್ಯೆ ದೊಡ್ಡದಾಗಬಹುದು ಇಲ್ಲ ಚಿಕ್ಕದಾಗಬಹುದು.

ನೀವು ಈ ಜಾಗದಲ್ಲಿ ಇದ್ದಿದ್ದರೆ. . .

ಇದನ್ನು ಚಿತ್ರಿಸಿಕೊಳ್ಳಿ: ಥಾಮಸ್‌ ‘ಇನ್ನೂ ಮುಂದೆ ನಾನು ಯಾವತ್ತು ಸ್ಕೂಲಿಗೆ ಹೋಗಲ್ಲ’ ಅಂತ ಹೇಳುತ್ತಾನೆ. ಇದಕ್ಕೆ ಕಾರಣ, ಕಳೆದ ಮೂರು ತಿಂಗಳಿಂದ ಮಕ್ಕಳು ಅವನಿಗೆ ತುಂಬ ಕಾಟ ಕೊಡುತ್ತಿರೋದೇ. ಇವನ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡೋದು, ಅಡ್ಡ ಹೆಸರಿಟ್ಟು ಕರೆಯೋದು, ಹಿಂದಿನಿಂದ ಅವನನ್ನ ತಳ್ಳಿ ಏನೂ ಮಾಡಲಿಲ್ಲವೇನೋ ಅನ್ನೊ ಥರ ಇರೋದು, ಬೇಕು ಬೇಕಂತ ಥಾಮಸ್‌ ಕೈಯಲ್ಲಿರುವ ಪುಸ್ತಕವನ್ನ ಬೀಳಿಸಿ ಗೊತ್ತಾಗದೆ ಇರೋ ಥರ ನಟಿಸೋದು ಹೀಗೆಲ್ಲಾ ಮಾಡ್ತಾ ಇದ್ದರು. ನಿನ್ನೆಯಂತೂ ಅವರ ಕಾಟ ಮಿತಿಮೀರಿ ಹೋಯಿತು. ಯಾರೋ ಥಾಮಸ್‌ಗೆ ಬೆದರಿಕೆಯ ಮೆಸೆಜ್‌ ಕಳುಹಿಸಿದ್ರು . . .

ಥಾಮಸ್‌ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಎಲ್ಲರೂ ನಿಮ್ಮನ್ನ ಬೆದರಿಸುತ್ತಿದ್ದರೆ ಅದರರ್ಥ ನಿಮಗೆ ಏನೂ ಶಕ್ತಿ ಇಲ್ಲ ಅಂತಲ್ಲ. ಜಗಳ ಮಾಡದೆ ಸಮಸ್ಯೆಯನ್ನು ಬಗೆಹರಿಸಬಹುದು. ಹೇಗೆ?

  • ಸುಮ್ಮನಿರಿ. “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು. ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 29:11) ಅಂಥ ಸಮಯದಲ್ಲಿ ನಿಮಗೆ ಎಷ್ಟು ಆಗುತ್ತೊ ಅಷ್ಟು ಸಮಾಧಾನದಿಂದ ಇರಿ. ಕೋಪವನ್ನಾಗಲಿ, ಭಯವನ್ನಾಗಲಿ ಹೊರಗೆ ತೋರಿಸಬೇಡಿ. ರೇಗಿಸಿ ರೇಗಿಸಿ ಅವರೇ ಸುಮ್ಮನಾಗುತ್ತಾರೆ.

  • ಸೇಡು ತೀರಿಸಿಕೊಳ್ಳಬೇಡಿ. “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ” ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 12:17) ಸೇಡು ತೀರಿಸಿಕೊಳ್ಳೋದರಿಂದ ಸಮಸ್ಯೆಗಳು ಇನ್ನೂ ಜಾಸ್ತಿ ಆಗುತ್ತೆ ಹೊರತು ಕಡಿಮೆ ಆಗಲ್ಲ.

  • ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಳ್ಳಬೇಡಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 22:3) ಯಾರು ನಿಮ್ಮನ್ನ ರೇಗಿಸುತ್ತಾರೋ ಅಂಥವರಿಂದ, ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವಂಥ ಸನ್ನಿವೇಶಗಳಿಂದ ಸಾಧ್ಯವಾದಷ್ಟು ದೂರ ಇರಿ.

  • ಸಮಾಧಾನದಿಂದ ಉತ್ತರ ಕೊಡಿ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 15:1) ಅಂಥ ಸಮಯದಲ್ಲಿ ನೀವು ತಮಾಷೆಯಾಗಿ ಮಾತಾಡಬಹುದು. ಉದಾಹರಣೆಗೆ, ಅವನು ನಿಮ್ಮನ್ನ ಡುಮ್ಮ, ದಡಿಯ ಅಂತ ರೇಗಿಸಿದ್ರೆ, ನೀವು ಬೇಜಾರು ಮಾಡಿಕೊಳ್ಳದೆ ಭುಜ ಕುಣಿಸಿ “ಸಣ್ಣ ಆಗೋದಕ್ಕೆ ಏನಾದ್ರೂ ಐಡಿಯಾ ಕೊಡೋ” ಅಂತ ನಗಾಡುತ್ತಾ ಹೇಳಿ.

  • ಅಲ್ಲಿಂದ ಹೊರಟು ಹೋಗಿ. “ಮೌನವಾಗಿದ್ದು, ಅಲ್ಲಿಂದ ಹೊರಟು ಹೋಗುವುದು ನಿಮ್ಮಲ್ಲಿ ಪ್ರೌಢತೆ ಇದೆ ಮತ್ತು ರೇಗಿಸುವವರಿಗಿಂತ ನೀವು ಮಾನಸಿಕವಾಗಿ ಬಲವುಳ್ಳವರು, ಸ್ವನಿಯಂತ್ರಣವುಳ್ಳವರು ಅಂತ ತೋರಿಸುತ್ತದೆ. ಇದು ನಿಮ್ಮನ್ನ ರೇಗಿಸುವವರಿಗೆ ಇರೋದಿಲ್ಲ ಅನ್ನೊದನ್ನ ನೆನಪಿಡಿ” ಅಂತ ಹೇಳುತ್ತಾಳೆ 19 ವರ್ಷದ ನೊರಾ.—2 ತಿಮೊಥೆಯ 2:24.

  • ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಯಾರಿಗೆ ಕಡಿಮೆ ಆತ್ಮವಿಶ್ವಾಸ ಇರುತ್ತದೋ, ಯಾರು ತುಂಬಾ ಅಮಾಯಕರಾಗಿರುತ್ತಾರೋ ಅಂಥವರನ್ನೇ ರೇಗಿಸುತ್ತಾರೆ. ಒಂದುವೇಳೆ ನೀವು ಇದಕ್ಕೆಲ್ಲಾ ಅವಕಾಶ ಕೊಟ್ಟಿಲ್ಲ ಅಂದರೆ ಅವರು ಸುಮ್ಮನಾಗುತ್ತಾರೆ.

  • ಇದರ ಬಗ್ಗೆ ದೊಡ್ಡವರಿಗೆ ಹೇಳಿ. ಹಿಂದೆ ಟೀಚರ್‌ ಆಗಿದ್ದ ಒಬ್ಬರು ಹೇಳುವುದು: “ಯಾರಾದರೂ ರೇಗಿಸಿದರೆ ಅದನ್ನ ಬಂದು ಹೇಳಬೇಕು. ಆ ರೀತಿ ಹೇಳುವುದು ತಪ್ಪಲ್ಲ. ಯಾಕೆಂದರೆ ಹೇಳಲಿಲ್ಲ ಅಂದರೆ ಅವರು ಬೇರೆಯವರನ್ನು ರೇಗಿಸುತ್ತಾನೇ ಇರುತ್ತಾರೆ.”

ಬೇರೆಯವರು ರೇಗಿಸುವಾಗ ಯುವಕನೊಬ್ಬ ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದಾನೆ

ಆತ್ಮವಿಶ್ವಾಸ ನಿಮಗೆ ಆನೆ ಬಲ ಇದ್ದಂತೆ. ಯಾರು ರೇಗಿಸುತ್ತಾರೋ ಅಂಥವರಿಗೆ ಇದು ಇರುವುದಿಲ್ಲ

ನಿಮಗೆ ಗೊತ್ತಾ?

ರೇಗಿಸುವುದರಲ್ಲಿ ಏನೆಲ್ಲಾ ವಿಷಯಗಳಿವೆ ಅಂದ್ರೆ . . .

  • ರೇಗಿಸುವವರ ಬಾಯಿಂದ ಬರುವ ಮಾತುಗಳು ಬೆಂಕಿಯಂತಿವೆ

    ಬಯ್ಯುವುದು. “ಒಂದುವೇಳೆ ನನಗೆ ಒಂದು ಏಟಾಕಿದ್ದರೂ ಪರವಾಗಿರಲ್ಲಿಲ್ಲ. ಆದರೆ ಅವರು ನನ್ನನ್ನ ಅಡ್ಡ ಹೆಸರಿನಿಂದ ಕರೆಯುತ್ತಿದ್ದದ್ದು, ನಾನು ಯಾವುದಕ್ಕೂ ಪ್ರಯೋಜನ ಇಲ್ಲ, ನಲಾಯಕ್‌ ಅಂತೆಲ್ಲಾ ಬಯ್ಯುತ್ತಿದ್ದನ್ನ ಇವತ್ತಿಗೂ ಮರೆಯೋದಕ್ಕಾಗಲ್ಲ.”—ಸೆಲಿನ್‌, 20 ವರ್ಷ.

  • ಯುವಕನೊಬ್ಬ ತನ್ನ ಸಮವಯಸ್ಕರು ಸೇರಿಸಿಕೊಳ್ಳದೇ ಇದ್ದದ್ದರಿಂದ ಒಬ್ಬನೇ ಕುಳಿತಿದ್ದಾನೆ

    ಸೇರಿಸಿಕೊಳ್ಳದೇ ಇರುವುದು. “ಯಾರೂ ನನ್ನನ್ನ ಸೇರಿಸಿಕೊಳ್ಳುತ್ತಿರಲಿಲ್ಲ. ಊಟಕ್ಕೆ ಕೂತುಕೊಳ್ಳೋವಾಗ ನನಗೆ ಜಾಗ ಬಿಡದೆ ಕೂತುಕೊಂಡು ಬಿಡುತ್ತಿದ್ದರು. ಒಂದಿಡೀ ವರ್ಷ ಒಂಟಿಯಾಗಿ ಅತ್ತುಕೊಂಡು ಊಟ ಮಾಡಿದ್ದೇನೆ.”—ಹಾಲಿ, 18 ವರ್ಷ.

  • ಸೈಬರ್‌ಬುಲ್ಲಿಯಿಂಗ್‌ನಿಂದ ಭಯಗೊಂಡಿರುವ ಯುವತಿ

    ಸೈಬರ್‌ಬುಲ್ಲಿಯಿಂಗ್‌. “ಕಂಪ್ಯೂಟರ್‌ನಲ್ಲಿ ಒಂದು ನಾಲ್ಕು ಅಕ್ಷರಗಳನ್ನ ಟೈಪ್‌ ಮಾಡಿ ಒಬ್ಬ ವ್ಯಕ್ತಿಯ ಹೆಸರನ್ನೇ ಹಾಳು ಮಾಡಿಬಿಡಬಹುದು, ಹೆಸರು ಯಾಕೆ ಜೀವನೇ ತೆಗೆದುಬಿಡಬಹುದು. ಇದು ಆಶ್ಚರ್ಯ ಅಂತ ಅನಿಸಬಹುದು ಆದರೆ ನಿಜ.”—ಡ್ಯಾನಿಯೇಲ್‌, 14 ವರ್ಷ.

ಸರಿನಾ ತಪ್ಪಾ ಹೇಳಿ

ಸರಿ ಅಥವಾ ತಪ್ಪು

ಉತ್ತರ

1 ರೇಗಿಸುವುದು ಹೊಸತೇನಲ್ಲ. ಸಾವಿರಾರು ವರ್ಷಗಳ ಹಿಂದೆನೂ ಇದು ನಡೆಯುತ್ತಿತ್ತು.

1 ಸರಿ. ಸಾವಿರಾರು ವರ್ಷಗಳ ಹಿಂದೆ ಕೂಡ ಕೆಟ್ಟ ಜನರು ಇದ್ದರು ಅಂತ ಬೈಬಲ್‌ ಹೇಳುತ್ತೆ. ಅವರು ಜನರಿಗೆ ಕೊಡುತ್ತಿದ್ದ ಕಾಟಕ್ಕೆ ಅವರನ್ನು ನೆಫಿಲಿಮ್‌ ಅಂದರೆ ಇತರರನ್ನು ಕೆಡವಿ ಹಾಕುವವರು ಅಂತ ಕರೆಯುತ್ತಿದ್ದರು.—ಆದಿಕಾಂಡ 6:4.

2 ರೇಗಿಸುವುದರಿಂದ ಯಾವ ತೊಂದರೆನೂ ಆಗಲ್ಲ. ಅದು ಟೈಂ ಪಾಸ್‌ ಅಷ್ಟೇ.

2 ತಪ್ಪು. ರೇಗಿಸುವುದು ತುಂಬಾ ಅಪಾಯಕಾರಿ. ಇದರಿಂದ ಎಷ್ಟೋ ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

3 ‘ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು,’ ರೇಗಿಸುವುದರಿಂದ ತಪ್ಪಿಸಿಕೊಳ್ಳಬೇಕು ಅಂದರೆ ತಿರಿಗಿಸಿ ನಾವೂ ರೇಗಿಸಬೇಕು.

3 ತಪ್ಪು. ಅವರು ತುಂಬಾ ಬಲಿಷ್ಠರಾಗಿರುವುದರಿಂದ ನಾವೇನಾದ್ರೂ ತಿರುಗಿಸಿ ರೇಗಿಸಿದರೆ ಪರಿಸ್ಥಿತಿ ಇನ್ನೂ ಹದಗೆಡುತ್ತೆ.

4 ಯಾರಾದರೂ ಬೇರೆಯವರನ್ನು ರೇಗಿಸುತ್ತಿದ್ದರೆ ನೀವು ಅದನ್ನು ನೋಡಿ ನೋಡದವರಂತೆ ಇರಬೇಕು.

4 ತಪ್ಪು. ನೋಡಿ ನೋಡದವರಂತೆ ಇದ್ದರೆ ನೀವು ಆ ಕೆಟ್ಟ ಸಂಗತಿಯಲ್ಲಿ ಪಾಲಿಗರಾದಂತೆ. ಇದರಿಂದ ಯಾರಿಗೂ ಒಳ್ಳೆದಾಗುವುದಿಲ್ಲ.

5 ಯಾರು ರೇಗಿಸುತ್ತಾರೋ ಅವರು ನೋಡೋಕಷ್ಟೇ ಬಲಶಾಲಿಗಳು.

5 ಸರಿ. ರೇಗಿಸುವ ಕೆಲವರಲ್ಲಿ ಒಣಹೆಮ್ಮೆ ಇರುವುದಾದರೂ, ಅನೇಕರಲ್ಲಿ ಅಸುರಕ್ಷತೆಯ ಭಾವನೆ ಇರುವುದರಿಂದ ಬೇರೆಯವರನ್ನ ಕೆಳಗೆ ಹಾಕುತ್ತಾರೆ.

6 ಅಂಥವರು ಬದಲಾಗುತ್ತಾರೆ.

6 ಸರಿ. ಅವರಿಗೆ ತಿದ್ದಿ ಬುದ್ಧಿ ಹೇಳಿ ಸಹಾಯ ಮಾಡಿದರೆ ಅಂಥ ಕೆಟ್ಟ ಸ್ವಭಾವ ಇರುವವರು ಬದಲಾಗುತ್ತಾರೆ.

ನಿಮ್ಮ ತೀರ್ಮಾನ

  • ಯಾರಾದರೂ ನನ್ನನ್ನ ರೇಗಿಸಿದ್ರೆ ಏನು ಮಾಡಬೇಕು?

ವಿಡಿಯೋ ನೋಡಿ!

ಕೈಮಾಡದೆ ರ್ಯಾಗಿಂಗನ್ನು ಜಯಿಸಿ

www.pr2711.comನಲ್ಲಿ ಚಲಿಸುವ ಚಿತ್ರಗಳಿಂದ ಪಾಠಗಳು—ಕೈಮಾಡದೆ ರಾಗಿಂಗನ್ನು ಜಯಿಸಿ ಎಂಬ ವಿಡಿಯೋ ನೋಡಿ. (BIBLE TEACHINGS > TEENAGERS ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ