ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g90 11/8 ಪು. 30
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1990
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಏಯ್ಡ್ಸ್‌ ಭವಿಷ್ಯನುಡಿ
  • ಹೊಸ ಪೋನ್‌ ಸವಲತ್ತುಗಳು
  • ಬೀದಿಮಕ್ಕಳು
  • ಬರ್ಮಾದ ಹೊಸ ಹೆಸರು ಮೈಯ್ನ್‌ಮಾರ್‌
  • ಬಾಡಿಗೆಗೆ ಅತಿಥಿಗಳು
  • ಟಿವೀ ಸಂಬಂಧಿತ ಕೊಲೆ
  • ಏಯ್ಡ್ಸ್‌—ನಾನು ಗಂಡಾಂತರದಲ್ಲಿರುವೆನೊ?
    ಎಚ್ಚರ!—1993
  • ಏಯ್ಡ್ಸ್‌ ಹದಿಹರೆಯದವರಿಗೆ ಆಪತ್ಕಾಲ
    ಎಚ್ಚರ!—1992
  • ಬೂದಿಬಣ್ಣದ ಕುದುರೆಯು ಸವಾರಿಗೈಯುತ್ತಾ ಇದೆ
    ಎಚ್ಚರ!—1990
  • ಏಯ್ಡ್ಸ್‌ ಮಕ್ಕಳು ಅದಕ್ಕೆ ತೆರುವ ಹೃದಯದ್ರಾವಕ ಬೆಲೆ
    ಎಚ್ಚರ!—1992
ಇನ್ನಷ್ಟು
ಎಚ್ಚರ!—1990
g90 11/8 ಪು. 30

ಜಗತ್ತನ್ನು ಗಮನಿಸುವುದು

ಏಯ್ಡ್ಸ್‌ ಭವಿಷ್ಯನುಡಿ

ಜಾಗತಿಕ ಆರೋಗ್ಯ ಸಂಸ್ಥೆಯು, ಈಗಿರುವ 4,50,000 ಜುಮ್ಲಾದಿಂದ 50,00,000ಕ್ಕೆ ಏರಿ 2,000 ವರ್ಷದೊಳಗೆ ಲೋಕವ್ಯಾಪಕವಾಗಿ ಏಯ್ಡ್ಸ್‌ನ ರೋಗಿಗಳು ಹತ್ತುಪಟ್ಟು ಹೆಚ್ಚಾಗಲಿವೆ ಎಂದು ಭವಿಷತ್‌ವಾಣಿ ನುಡಿದಿದೆ. ಏಯ್ಡ್ಸ್‌ಗೆ ಕಾರಣವಾಗುವ ರೋಗಾಣುವಿನಿಂದ ಸೋಂಕು ತಗಲಿದವರ ಸಂಖ್ಯೆಯು ಮೂರು ಪಟ್ಟು ಏರುವ ನಿರೀಕ್ಷೆಯಿದೆ. ಈಗ 50 ಲಕ್ಷದಿಂದ 1 ಕೋಟಿಯಷ್ಟು ಈ ರೋಗಪೀಡಿತರಾಗಿದ್ದಾರೆಂದು ಹೇಳಲಾಗಿದೆ. “1980ರ ದಶಕದಲ್ಲಿ ನಾವು ಅನುಭವಿಸಿದ್ದಕ್ಕಿಂತಲೂ ಹೆಚ್ಚು ಕೆಡುಕಾದ ರೀತಿಯಲ್ಲಿ 1990ರ ದಶಕದಲ್ಲಿ ಹೆಚ್‌ಐವಿ/ಏಯ್ಡ್ಸ್‌ ಸನ್ನಿವೇಶವು ಇರುತ್ತದೆ ಎಂದು ಈ ಪ್ರಕ್ಷೇಪಣಗಳು ಸೂಚಿಸುತ್ತವೆ,” ಎಂದು ಡಾ.ಜೊನಾತನ್‌ ಮ್ಯಾನ್‌, ಏಯ್ಡ್ಸ್‌ ಕಾರ್ಯಕ್ರಮದ ನಿಯೋಗದ ಡೈರೆಕ್ಟರ್‌ ಹೇಳಿದರು. ಚುಚ್ಚು ಮದ್ದನ್ನು ಬಲುಬೇಗನೇ ಕಂಡುಕೊಂಡರೂ ಕೂಡಾ ಈಗ ಮತ್ತು 1990ರ ದಶಕದ ಮಧ್ಯಭಾಗದಲ್ಲಿ ಏಯ್ಡ್ಸ್‌ ತಗಲಿದ ಹೆಚ್ಚಿನವರಿಗೆ ಇದರಿಂದೇನೂ ಒಳಿತಾಗದು ಯಾಕಂದರೆ ಅವರು ಈಗಾಗಲೇ ಸೋಂಕುಬಾಧಿತರಾಗಿದ್ದಾರೆ. (g89 9/22)

ಹೊಸ ಪೋನ್‌ ಸವಲತ್ತುಗಳು

ಜ್ಞಾಪಕದ, ಸ್ವಯಂಚಾಲಿತ ಅಂಕೆ ತಿರುಗಿಸುವ, ಹಸ್ತ-ಮುಕ್ತ ಕಾರ್ಯನಿರ್ವಹಣೆಯ ಮತ್ತು ಸೂಚೀಅಂಕೆ ಪ್ರದರ್ಶಿಸುವ ಪೋನುಗಳು ಈಗ ಸರ್ವೇಸಾಮಾನ್ಯವಾಗಿವೆ. ಆದರೂ ಅವೆಲ್ಲಾ ಕರೆ ಬಂದಾಗ ಮಾತ್ರ ಘಣಘಣಿಸುತ್ತವೆ. ಈಗ ಅದು ಬದಲಾಗುತ್ತಾ ಇದೆ. ಅಮೆರಿಕದಲ್ಲಿ ಪೋನ್‌ ಕಂಪೆನಿಗಳು ಹೊಸ ಸಂಕೇತ ಸಾಧನಗಳನ್ನು ಅಳವಡಿಸುವಾಗ, ಕೆಲವೊಂದು ಗುಂಡಿಗಳನ್ನು ನೀವು ಒತ್ತಿದಾಕ್ಷಣ ನಿಮಗೆ ಹಲವಾರು ಹೊಸ ಸವಲತ್ತುಗಳನ್ನು ಕೊಡುತ್ತಾರೆ. ಇದರಲ್ಲಿ ಸೇರಿವೆ: ಕರೆ ಪತ್ತೆಹಚ್ಚುವಿಕೆ—ಇದು ಕರೆಯುವವನ ಅಂಕೆಯು, ಕೊಂಚ ಸಮಯದ್ದಾಗಿದ್ದರೂ ಪೋನ್‌ಕಂಪೆನಿಯ ಹತ್ತಿರ ದಾಖಲಾಗುತ್ತದೆ ಮತ್ತು ಅವನನ್ನು ಸರದಿಯಲ್ಲಿ ಕಾದು ತಿಳಿಸಲಾಗುತ್ತದೆ; ಕರೆ ಸಂಚಯ (ಕಾಲ್‌ಬ್ಲೋಕ್‌)—ಪೋನಿನಲ್ಲಿ ಅಳವಡಿಸಿದ ಅಂಕೆಗಳು, ಈಗಲೇ ಸಂದೇಶವನ್ನು ನೀವು ತೆಗೆದುಕೊಳ್ಳಲಾರಿರಿ ಎಂಬ ಒಂದು ಸುದ್ದಿ ಕೇಳಬರುತ್ತದೆ; ಪುನಃ ಕರೆ(ಕಾಲ್‌ ಬ್ಯಾಕ್‌)—ನೀವು ಪೋನ್‌ ಮಾಡುತ್ತಿರುವಾಗಲೇ ಯಾ ಕರೆಗಳು ಬರುತ್ತಿರುವಾಗಲೇ, ಇದು ಒಂದು ಕಾರ್ಯಮಗ್ನ ಅಂಕೆಯನ್ನು ಸುಮಾರು 30 ನಿಮಿಶಗಳ ತನಕ ಸಂಪರ್ಕಿಸಲು ಪ್ರಯತ್ನಿಸುತ್ತದೆ; ಹಿಂದಕ್ಕೆ ಕರೆ (ರಿಟರ್ನ್‌ ಕಾಲ್‌)—ನೀವು ಮಾತಾಡಬೇಕೆಂದು ಎತ್ತುವಾಗ ಸಂಪರ್ಕ ಕಡಿದರೆ, ಈ ಸವಲತ್ತಿನಲ್ಲಿ ನಿಮ್ಮೊಡನೆ ಮಾತಾಡಲು ಪ್ರಯತ್ನಿಸಿದ ಕಡೆಯ ವ್ಯಕ್ತಿಯ ಅಂಕೆಯು ನಿಮಗೆ ಹಿಂದಕ್ಕೆ ಸಿಗುವಂತೆ ಮಾಡುತ್ತದೆ; ಆದ್ಯತೆಯ ಕರೆ (ಪ್ರಾಯಾರಿಟಿ ಕಾಲ್‌)—ಒಂದು ನಿರ್ದಿಷ್ಟ ಸಂಖ್ಯೆಯಿಂದ ಕರೆಬಂದರೆ ಒಂದು ವಿಶಿಷ್ಟ ರೀತಿಯಲ್ಲಿ ನಾದಮಾಡುತ್ತದೆ; ಕರೆಗಾರನ ಗುರುತು (ಕಾಲರ್‌ ಐಡಿ)—ಒಂದು ಪರದೆಯ ಮೇಲೆ ಕರೆಯುವ ವ್ಯಕ್ತಿಯ ಅಂಕೆಯು ತೋರಿಸಲ್ಪಡುತ್ತದೆ. (g89 12/8)

ಬೀದಿಮಕ್ಕಳು

ಹತ್ತುಕೋಟಿಯಷ್ಟು ಮಕ್ಕಳು ಲೋಕದ ಬೀದಿಗಳಲ್ಲಿ ಜೀವಿಸುತ್ತಾರೆಂದು ವರದಿಸಲಾಗಿದೆ. ಬೀದಿಯಲ್ಲಿ ಮಾರುವವರಾಗಿಯೋ, ಕಳ್ಳರಾಗಿಯೋ ಯಾ ಭಿಕ್ಷುಕರಾಗಿಯೋ ಅವರು ತಮ್ಮ ಬಡತನದಲ್ಲಿ ಹೊಟ್ಟೆಹೊರೆದುಕೊಳ್ಳುತ್ತಾರೆ. ಲೋಕವ್ಯಾಪಕವಾಗಿರುವ ಈ ಮಕ್ಕಳಿಗೆ ಸಹಾಯಮಾಡುವ ಗುಂಪೊಂದರ ಕಾರ್ಯಕಾರೀ ಡೈರೆಕ್ಟರ್‌ ಪೀಟರ್‌ ಟಾಕೊನ್‌ಗನುಸಾರ, ಹೆಚ್ಚಿನವರು ಮಗು-ಲೈಂಗಿಕತೆಯ ಹುಲುಸಾಗಿರುವ ವ್ಯಾಪಾರದಲ್ಲಿ ಬಲಿಯಾಗುತ್ತಾರೆ ಮತ್ತು ಇಂತಹ ಮಕ್ಕಳೊಂದಿಗೆ ಅನೈತಿಕತೆ ನಡಿಸುವ ಸಂಸ್ಥೆಗಳಿಂದ ದುರ್ಬಳಕೆಗೊಂಡಿದ್ದಾರೆ. ಪ್ರತಿ ದಿನ ಸುಮಾರು 5,000 ಹೊಸ “ಬೀದಿಗಾಗಿ ಅಭ್ಯರ್ಥಿಗಳು” ಹುಟ್ಟುತ್ತಾರೆ.

ಬರ್ಮಾದ ಹೊಸ ಹೆಸರು ಮೈಯ್ನ್‌ಮಾರ್‌

ಮೊದಲು ಬರ್ಮಾವೆಂದು ಪರಿಚಿತವಾಗಿರುವ ಆಗ್ನೇಯ ಏಶ್ಯಾದ ದೇಶದ ಹೊಸ ಅಧಿಕೃತ ಹೆಸರು ಮೈಯ್ನ್‌ಮಾರ್‌ ಮತ್ತು ಅದರ ಅತೀ ದೊಡ್ಡ ನಗರ ರಂಗೂನ್‌ನನ್ನು ಯಾಂಗೊನ್‌ ಎಂದಾಗಿದೆ. ಈ ಬದಲಾವಣೆಗಳು ಈಗ ಬಳಕೆಯಲ್ಲಿರುವ ಬರ್ಮೀಯ ಭಾಷೆಗೆ ಅನುಗುಣವಾಗಿದೆ. ಸಂಯುಕ್ತ ರಾಷ್ಟ್ರ ಸಂಘದಲ್ಲಿ ದೇಶದ ಹೊಸ ಹೆಸರನ್ನು ಜೂನ್‌ 22, 1989ರಲ್ಲಿ ಅಂಗೀಕೃತವಾಯಿತು.

ಬಾಡಿಗೆಗೆ ಅತಿಥಿಗಳು

ಮನೆಶುಭ್ರಗೊಳಿಸುವ ಮತ್ತು ಸಾಗಣೆಕೆಲಸಮಾಡುವದರೊಂದಿಗೆ ಜಪಾನಿನ ಒಂದು ಕಂಪೆನಿಯು ಹಣಕೊಟ್ಟರೆ ಅತಿಥಿಗಳನ್ನು ಕೂಡಾ ಒದಗಿಸುತ್ತದೆ. ಮದುವೆಯಿಂದ ಮಸಣದ ತನಕ ಯಾವುದಕ್ಕೂ ಬದಲೀಯಾಗಿ ಈ ಬಾಡಿಗೆಗೆ ಅತಿಥಿಗಳು ದೊರಕುತ್ತಾರೆಂದು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಮಾಡಿದೆ. ಮದುವೆಯಲ್ಲಿ ಅವರು ವಧುವಿನ ಯಾ ವರನ ಬಾಲ್ಯದ ಶಾಲೆಯ ಗೆಳೆಯರಾಗಿ, ಅವರ ಕೆಲಸದಲ್ಲಿನ ದೊಡ್ಡೆ ಅಧಿಕಾರಿಯಾಗಿ, ಬಲುದೂರದ ಸಂಬಂಧಿಕನಾಗಿ ಇಲ್ಲವೇ ಹೆತ್ತವರಲ್ಲೊಬ್ಬನಾಗಿ ವರ್ತಿಸಬಹುದು. ಈ ಕಂಪೆನಿಯು ಸಲ್ಲಿಸಿದ ಅತೀ ದೊಡ್ಡ ಸೇವೆಯೆಂದರೆ ಮದುವೆಯೊಂದರಲ್ಲಿ ವರನ 80 ಅತಿಥಿಗಳಲ್ಲಿ 60 ಮಂದಿಯನ್ನು ಒದಗಿಸಿದ್ದು. ಪ್ರತಿಯೊಬ್ಬನ ಸೇವೆಗೆ ಬೆಲೆ ತೆತ್ತದ್ದು 15,000 ಮತ್ತು 25,000 ಯೆನ್‌ಗಳ ನಡುವೆ (ಭಾರತದ ಸುಮಾರು ರೂ.1,800 ಮತ್ತು ರೂ. 3,000).

ಟಿವೀ ಸಂಬಂಧಿತ ಕೊಲೆ

ಸಮಾಜದ ಜುಲುಂಗಳಿಗೆ ಟೆಲಿವಿಷನ್‌ ವೀಕ್ಷಿಸುವುದು ನೆರವನ್ನೀಯುತ್ತದೋ? ಅಮೆರಿಕನ್‌ ಜರ್ನಲ್‌ ಆಫ್‌ ಎಪಿಡೆಮಿಯೊಲೊಜಿಯಲ್ಲಿ ಪ್ರಕಾಶಿತವಾದ ಒಂದು ಅಧ್ಯಯನವು ಮೂರು ದೇಶಗಳನ್ನು ಸಮೀಕ್ಷಿಸಿತು ಮತ್ತು ಹೌದೆಂಬ ತೀರ್ಮಾನಕ್ಕೆ ಬಂತು. ಪ್ರತಿಯೊಂದು ದೇಶದಲ್ಲಿ ಟೆಲಿವಿಷನ್‌ ಆರಂಭಿಸಿದ 10 ಯಾ 15 ವರ್ಷಗಳ ನಂತರ, ಕೊಲೆಯ ಸಂಖ್ಯೆಗಳು ಮೇಲಕ್ಕೇರಿದವು. ಎಲ್ಲಿ ಟೆಲಿವಿಷನ್‌ ತಡವಾಗಿ ಆರಂಭಿಸಲಾಯಿತೋ ಜುಲುಂ ತದನಂತರ ಏರಿತು. ಅಮೆರಿಕದ ಕುರಿತು ಈ ಅಧ್ಯಯನದ ಗ್ರಂಥಕರ್ತನು ಅವಲೋಕಿಸುವದು, “ನಮ್ಮ ಸಮಾಜದಲ್ಲಿ ಬಲಾತ್ಕಾರ ಏರಲು ಟೆಲಿವಿಷನ್‌ ಒಂದೇ ಕಾರಣವಾಗಿಲ್ಲವಾದರೂ, ಊಹನಾತ್ಮಕವಾಗಿ ಟೆಲಿವಿಷನ್‌ ಇಲ್ಲದಿರುತ್ತಿದ್ದರೆ ಪ್ರತಿ ವರ್ಷ 10,000ದಷ್ಟು ಕೊಲೆಗಳು ಕಡಿಮೆಯಾಗಿರುತ್ತಿದ್ದವು.” (g89 10/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ