ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 21: 1900ರಿಂದ ಮುಂದಕ್ಕೆ ರಕ್ತದಿಂದ ಸಿಡಿಸಲ್ಪಟ್ಟ ನೆರಿಗೆ
“ರಕ್ತದ ಮೇಲೆ ಹಾಕಲ್ಪಟ್ಟ ಯಾವ ಅಸ್ತಿವಾರವೂ ದೃಢವಲ್ಲ.”—ಶೇಕ್ಸ್ಪಿಯರ್, ಇಂಗ್ಲಿಷ್ ಕವಿ ಮತ್ತು ನಾಟಕಕಾರ (1564-1616)
ಹದಿಮೂರು ವರ್ಷಗಳ ಹಿಂದೆ ಜೋನ್ಸ್ಟೌನ್, ಗಯಾನದಲ್ಲಾದ ಆ ದುರಂತವು ನಿಮಗೆ ನೆನಪಿದೆಯೇ? ಅಂದು ಪೀಪಲ್ಸ್ ಟೆಂಪಲ್ ಎಂಬ ಧಾರ್ಮಿಕ ಗುಂಪಿನ 900ಕ್ಕಿಂತಲೂ ಹೆಚ್ಚು ಸದಸ್ಯರು, ಹೆಚ್ಚಿನವರು ಬುದ್ಧಿಪೂರ್ವಕವಾಗಿ, ಸೈನೈಡ್-ವಿಷ ಬೆರಸಿದ ಹಣ್ಣಿನರಸವನ್ನು ಕುಡಿದ ಮೂಲಕ ಸಾಮೂಹಿಕ ಆತ್ಮಹತ್ಯೆಯನ್ನು ಗೈದರು.
ಧಕ್ಕೆ ಬಡಿದವರಾಗಿ, ಜನರು ಕೇಳಿದ್ದು: ‘ತನ್ನ ಸ್ವಂತ ಸದಸ್ಯರ ಜೀವವನ್ನು ಬಲಿಕೊಡುವ ಈ ಧರ್ಮ ಯಾವ ರೀತಿಯದ್ದು?’ ಆದರೂ, ಬಹುಮಟ್ಟಿಗೆ 6,000 ವರ್ಷಗಳಿಂದಲೂ ಧರ್ಮದ ಹೆಸರಿನಲ್ಲಿ ನಿರ್ದೋಷಿಗಳ ರಕ್ತವು ಸುರಿಸಲ್ಪಟ್ಟಿದೆ. 20ನೇ ಶತಮಾನದಲ್ಲಾದರೋ, ಇತಿಹಾಸದ ಬೇರೆ ಯಾವ ಸಮಯಕ್ಕಿಂತಲೂ ಹೆಚ್ಚು ರಕ್ತವು ಹೆಚ್ಚು ಸಲ ಮತ್ತು ಹೆಚ್ಚು ವಿಧಾನಗಳಲ್ಲಿ ಸುರಿಸಲ್ಪಟ್ಟಿರುತ್ತದೆ. ಇದರ ಒಂದು ಬರೇ ಅಂಶಿಕ ರುಜುವಾತನ್ನು ಗಮನಿಸಿರಿ.
ಸುಳ್ಳು ದೇವರಿಗೆ ಮಾನವ ಬಲಿಗಳು
ಎರಡು ಲೋಕಯುದ್ಧಗಳು ಮತ್ತು ನೂರಕ್ಕಿಂತಲೂ ಹೆಚ್ಚು ಚಿಕ್ಕ ಚಿಕ್ಕ ಹೋರಾಟಗಳು 1914ರಿಂದ ರಕ್ತದ ಸಾಗರವನ್ನೇ ಹರಿಸಿವೆ. ಒಂದು ಶತಕದ ಹಿಂದೆ, ಫ್ರೆಂಚ್ ಲೇಖಕ ಗೈ ಡಿಮೌಪಾಸಂಟ್ ಹೇಳಿದ್ದು, “ಯಾವ ಮೊಟ್ಟೆಯಿಂದ ಯುದ್ಧಗಳೆಂಬ ಮರಿಗಳು ಬಂದವೋ” ಅದು ದೇಶಭಕ್ತಿ; ಇದನ್ನವರು “ಒಂದು ರೀತಿಯ ಧರ್ಮ” ಎಂದು ಕರೆದಿದ್ದಾರೆ. ವಾಸ್ತವದಲ್ಲಿ, ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳಿರುವದೇನಂದರೆ ದೇಶಭಕ್ತಿಯ ಸೋದರನೆಂಟನಾದ ರಾಷ್ಟ್ರಭಕ್ತಿಯು, “ಸಾಂಪ್ರದಾಯಿಕ ಧಾರ್ಮಿಕ ಮೌಲ್ಯಗಳ ಅವನತಿಯಿಂದಾಗಿ ಬಂದ ತೆರಪನ್ನು ಮುಂದಾಗಿ ಆಕ್ರಮಿಸುತ್ತಾ, ಆಧುನಿಕ ಲೋಕದಲ್ಲಿ ಒಂದು ಪ್ರಧಾನ ರೀತಿಯ ಧರ್ಮವಾಗಿ ಪರಿಣಮಿಸಿದೆ” ಎಂಬದಾಗಿ. (ಒತ್ತು ನಮ್ಮದು) ಸತ್ಯಾರಾಧನೆಯನ್ನು ಪ್ರವರ್ಧಿಸಲು ತಪ್ಪಿದ ಮೂಲಕವಾಗಿ, ಸುಳ್ಳು ಧರ್ಮವು ಒಂದು ಆತ್ಮಿಕ ತೆರಪನ್ನು ಉಂಟುಮಾಡಿತು, ಹೀಗೆ ರಾಷ್ಟ್ರೀಯತೆಯು ಅದರೊಳಗೆ ಪ್ರವಹಿಸಲು ಶಕವ್ತಾಯಿತು.
ಇದು, ಯಾರ ನಾಗರಿಕರು 2ನೇ ಲೋಕಯುದ್ಧದ ಆರಂಭದಲ್ಲಿ ತಾವು 94.4 ಪ್ರತಿಶತ ಕ್ರೈಸ್ತರೆಂದು ಹೇಳಿಕೊಂಡರೋ ಆ ನಾಝೀ ಜರ್ಮನಿಗಿಂತ ಉತ್ತಮವಾಗಿ ಬೇರೆಲಿಯ್ಲೂ ಚಿತ್ರಿಸಲ್ಪಡಲಿಲ್ಲ. ಎಲ್ಲಾ ಸ್ಥಳಗಳಿಗಿಂತ ಹೆಚ್ಚಾಗಿ,—ಪ್ರಾಟೆಸ್ಟಾಂಟ್ ಮತೀಯ ಹುಟ್ಟೂರಾದ ಮತ್ತು 10ನೇ ಪೋಪ್ ಪಾಯಸ್ರಿಂದ “ಲೋಕದಲ್ಲಿ ಅತ್ಯುತ್ತಮ ಕ್ಯಾಥಲಿಕರ” ಬೀಡು ಎಂದು 1914ರಲ್ಲಿ ಹೊಗಳಲ್ಪಟ್ಟ—ಜರ್ಮನಿ, ಕ್ರೈಸ್ತ ಪ್ರಪಂಚವು ನೀಡಬಲ್ಲ ಅತ್ಯುತ್ತಮತವ್ವನ್ನು ಪ್ರತಿನಿಧಿಸಬೇಕಿತ್ತು.
ಗಮನಾರ್ಹವಾಗಿ, ಕ್ಯಾಥಲಿಕ ಅಡಾಲ್ಫ್ ಹಿಟ್ಲರನು ಪ್ರಾಟೆಸ್ಟಂಟರ ನಡುವೆ ಕ್ಯಾಥಲಿಕರಿಗಿಂತ ಹೆಚ್ಚು ಸಿದ್ಧಬೆಂಬಲವನ್ನು ಪಡೆದನು. 1930ರ ಚುನಾವಣೆಗಳಲ್ಲಿ ಪ್ರಾಟೆಸ್ಟಂಟ್ ಪ್ರಾಧಾನ್ಯತೆಯಿದ್ದ ಜಿಲ್ಲೆಗಳು ತಮ್ಮ ಮತಗಳ 20 ಪ್ರತಿಶತವನ್ನು ಅವನಿಗೆ ಕೊಟ್ಟವು, ಕ್ಯಾಥ್ಲಿಕ್ ಜಿಲ್ಲೆಗಳು ಕೊಟ್ಟದ್ದು 14 ಪ್ರತಿಶತ ಮಾತ್ರವೇ. ಮತ್ತು ನಾಝೀ ಪಕ್ಷಕ್ಕೆ ರಾಜ್ಯ ಚುನಾವಣೆಯಲ್ಲಿ ಮೊದಲನೆ ಪೂರ್ಣ ಬಹುಮತವು ದೊರಕಿದ್ದು 1932ರಲ್ಲಿ, ಇದು 75 ಪ್ರತಿಶತ ಪ್ರಾಟೆಸ್ಟಂಟರಿದ್ದ ಓಲೆನ್ಬ್ಡರ್ಗ್ ಜಿಲ್ಲೆಯಲ್ಲಿ.
ವ್ಯಕ್ತವಾಗಿಯೇ, “ಸಾಂಪ್ರದಾಯಿಕ ಧಾರ್ಮಿಕ ಮೌಲ್ಯಗಳ ಅವನತಿಯಿಂದಾಗಿ ಉಂಟಾದ ತೆರಪು” ಕ್ಯಾಥ್ಲಿಕರಿಗಿಂತ ಪ್ರಾಟೆಸ್ಟಂಟ್ ಪಂಗಡದಲ್ಲಿ ಹೆಚ್ಚಾಗಿತ್ತು. ಇದನ್ನು ಅರ್ಥೈಸಿಕೊಳ್ಳಬಹುದು. ದೇವತಾಶಾಸ್ತ್ರದ ಸುಧಾರಣೆ ಮತ್ತು ಬೈಬಲಿನ ಉಚ್ಛ ಠೀಕೆಯು ಮುಖ್ಯವಾಗಿ ಜರ್ಮನ್ ಭಾಷೆಯ ಪ್ರಾಟೆಸ್ಟಂಟ್ ವೇದಾಂತಿಗಳ ಉತ್ಪನ್ನವಾಗಿತ್ತು.
ಹಿಟ್ಲರನ ಹಿಂದೆ ನಿಧಾನವಾಗಿದ್ದ ಕ್ಯಾಥಲಿಕ ಬೆಂಬಲವನ್ನು ಕಟ್ಟಕಡೆಗೆ ಯಾವುದು ಗಟ್ಟಿಮಾಡಿತೋ ಅದು ಸಹಾ ಸರಿಸಮವಾಗಿ ಗಮನಾರ್ಹವು. “ಜರ್ಮನ್ ಕ್ಯಾಥ್ಲಿಕ್ ಮತಕ್ಕೆ ಸಾಂಪ್ರದಾಯಿಕವಾಗಿ ರೋಮ್ನೊಂದಿಗೆ ವಿಶೇಷವಾದ ಹತ್ತಿರ ಸಂಬಂಧವಿತ್ತು” ಎಂದು ಜರ್ಮನ್ ಇತಿಹಾಸಕಾರ ಕ್ಲಾವ್ಸ್ ಸ್ಕಾಲರ್ಡ್ ವಿವರಿಸುತ್ತಾರೆ. ನಾಝೀವಾದವು ಸಮತಾವಾದದ ವಿರುದ್ಧವಾಗಿ ಒಂದು ಭದ್ರಕೋಟೆಯಂತಿರುವದೆಂದು ಕಂಡು, ಹಿಟ್ಲರನ ಹಸ್ತವನ್ನು ಬಲಗೊಳಿಸಲು ವೆಟಿಕನ್ ತನ್ನ ಪ್ರಭಾವವನ್ನುಪಯೋಗಿಸಲು ಹಿಂಜರಿಯಲಿಲ್ಲ. “ಸಾಂಪ್ರದಾಯಿಕ ನಿರ್ಣಯಗಳು ಹೆಚ್ಚೆಚ್ಚಾಗಿ ಪೋಪರ ನ್ಯಾಯಸ್ಥಾನಕ್ಕೆ ಸ್ಥಳಾಂತರಗೊಂಡವು” ಎನ್ನುತ್ತಾರೆ ಸ್ಕಾಲರ್ಡರು, “ವಾಸ್ತವದಲ್ಲಿ, ಮೂರನೇ ಜರ್ಮನ್ ರಾಷ್ಟ್ರದಲ್ಲಿ ಕ್ಯಾಥ್ಲಿಕ್ ಮತದ ಅಂತಸ್ತು ಮತ್ತು ಭವಿಷ್ಯತ್ತು ಕಟ್ಟಕಡೆಗೆ ಬಹಳಷ್ಟು ಪೂರಾ ರೋಮಿನಲ್ಲಿಯೇ ನಿರ್ಧರಿಸಲ್ಪಟ್ಟಿತು.”
ಎರಡೂ ಲೋಕ ಯುದ್ಧಗಳಲ್ಲಿ ಕ್ರೈಸ್ತ ಪ್ರಪಂಚವು ವಹಿಸಿದ ಪಾತ್ರವು ತೀವ್ರ ಕೀರ್ತಿಭಂಗವನ್ನು ತಂದಿತು. ಕನ್ಸೈಸ್ ಡಿಕ್ಷನೆರಿ ಆಫ್ ದ ಕ್ರಿಶ್ಚ್ಯನ್ ವರ್ಲ್ಡ್ ಮಿಶನ್ ವಿವರಿಸುವ ಪ್ರಕಾರ: “ಕ್ರೈಸ್ತೇತರರ ಕಣ್ಣಮುಂದೆ . . . ಸಾವಿರ ವರ್ಷಗಳಿಂದ ಕ್ರೈಸ್ತ ಬೋಧನೆಗಳನ್ನು ಕಲಿಸುತ್ತಿದ್ದ ಜನಾಂಗಗಳು ತಮ್ಮ ಉದ್ವೇಗಗಳನ್ನು ಹತೋಟಿಯಲ್ಲಿಡಲು ತಪ್ಪಿದ ಮತ್ತು ಗಣನೀಯ ಹೆಬ್ಬಯಕೆಗಿಂತ ಕಡಿಮೆಯಾದ ಒಂದು ತೃಪ್ತಿಗಾಗಿ ಇಡೀ ಲೋಕವನ್ನೇ ಉರಿಸಿದ ವಾಸ್ತವ ರುಜುವಾತು ತೋರಿಬಂತು.”
ಧಾರ್ಮಿಕವಾಗಿ ಪ್ರಚೋದಿಸಲ್ಪಟ್ಟ ಯುದ್ಧಗಳೇನೂ ಹೊಸತಲ್ಲ ನಿಶ್ಚಯ. ಆದರೆ, ವಿವಿಧ ಧರ್ಮಗಳ ಜನಾಂಗಗಳು ಒಂದಕ್ಕೊಂದು ವಿರುದ್ಧವಾಗಿ ನಡಿಸಿದ್ದ ಹಿಂದಿನ ಕಾಲದ ಯುದ್ಧಗಳಿಗೆ ಹೋಲಿಕೆಯಲ್ಲಿ, 20ನೇ ಶತಮಾನದದಾದ್ದರೋ ಒಂದೇ ಧರ್ಮದ ಜನಾಂಗಗಳು ಹೆಚ್ಚೆಚ್ಚಾಗಿ ಕಟು ಹೋರಾಟದಲ್ಲಿ ಸುತ್ತಲ್ಪಟ್ಟದ್ದು ತೋರಿಬಂದಿದೆ. ರಾಷ್ಟ್ರೀಯತೆಯ ದೇವರು ಧರ್ಮದ ದೇವರುಗಳನ್ನು ಯುಕ್ತಿಯಿಂದ ನಿರ್ವಹಿಸಲು ಶಕ್ತನಾಗಿರುವದು ಕಂಡುಬಂತು. ಹೀಗೆ, 2ನೇ ಲೋಕ ಯುದ್ಧದಲ್ಲಿ, ಗ್ರೇಟ್ ಬ್ರಿಟನಿನ ಮತ್ತು ಅಮೆರಿಕದ ಕಥೋಲಿಕರು ಮತ್ತು ಪ್ರಾಟೆಸ್ಟಂಟರು ಇಟೆಲಿ ಮತ್ತು ಜರ್ಮನಿಯ ಕ್ಯಾಥಲಿಕರನ್ನು ಮತ್ತು ಪ್ರಾಟೆಸ್ಟಂಟರನ್ನು ಕೊಲ್ಲುತ್ತಿದ್ದಾಗ, ಜಪಾನಿನ ಬೌದ್ಧರು ಆಗ್ನೇಯ ಏಷ್ಯಾದ ತಮ್ಮ ಬೌದ್ಧ ಸಹೋದರರಿಗೆ ಅದನ್ನೇ ಮಾಡುತ್ತಿದ್ದರು.
ಆದಾಗ್ಯೂ, ತನ್ನ ಸ್ವಂತ ಬಟ್ಟೆಯನ್ನು ರಕ್ತದಿಂದ ಮಲಿನಿಸಿಕೊಂಡ ಕ್ರೈಸ್ತ ಪ್ರಪಂಚವು, ಸ್ವನೀತಿಯಿಂದ ಬೇರೆಯವರೆಡೆಗೆ ದೂರಿನ ಬೆರಳನ್ನೆತ್ತ ಸಾಧ್ಯವಿಲ್ಲ. ಅಸಂಪೂರ್ಣ ಮಾನವ ಸರಕಾರಗಳನ್ನು ಪ್ರತಿಪಾದಿಸುವ, ಬೆಂಬಲಿಸುವ ಮತ್ತು ಕೆಲವೊಮ್ಮೆ ಚುನಾಯಿಸುವ ಮೂಲಕ, ಕ್ರೈಸ್ತರು ಮತ್ತು ಕ್ರೈಸ್ತೇತರರು ಇಬ್ಬರೂ, ಈ ಸರಕಾರಗಳು ಸುರಿಸಿದ ರಕ್ತಕ್ಕಾಗಿ ಜವಾಬ್ದಾರಿಯನ್ನು ಹೊರಲೇ ಬೇಕು.
ಆದರೆ, ಸರಕಾರವನ್ನು ದೇವರಿಗಿಂತಲೂ ಮೇಲಿನ ಸ್ಥಾನದಲ್ಲಿಟ್ಟು ತನ್ನ ಸ್ವಂತ ಸದಸ್ಯರನ್ನು ಯುದ್ಧದೇವತೆಯ ಬಲಿಪೀಠದ ಮೇಲೆ ರಾಜಕೀಯ ಯಜ್ಞಗಳಾಗಿ ಕೊಡುವ ಧರ್ಮವು ಅದು ಯಾವ ರೀತಿಯದ್ದು?
“ಅವರು ನಿರಪರಾಧ ರಕ್ತವನ್ನು ಸುರಿಸಿದರು”
ಧರ್ಮಭ್ರಷ್ಟ ಇಸ್ರಾಯೇಲಿಗೆ ಶತಮಾನಗಳ ಹಿಂದೆ ನುಡಿದ ಈ ಮಾತುಗಳು, ಎಲ್ಲಾ ಸುಳ್ಳು ಧರ್ಮಗಳಿಗೆ ಮತ್ತು ವಿಶೇಷವಾಗಿ ಕ್ರೈಸ್ತ ಪ್ರಪಂಚದಲ್ಲಿರುವವರಿಗೆ ಅನ್ವಯಿಸುತ್ತದೆ. (ಕೀರ್ತನೆ 106:38) ಯುದ್ಧದ ಸರ್ವನಾಶದಲ್ಲಿ ಮಿಲ್ಯಾಂತರ ಜನರ ಜೀವಗಳು ಅಣಗಿಸಲ್ಪಟವ್ಟೆಂಬದನ್ನು ಮರೆಯಬೇಡಿರಿ, ಈ ದುರಂತಕ್ಕೆ ಕ್ರೈಸ್ತ ಪ್ರಪಂಚದ ಚರ್ಚುಗಳು ನಿರಪರಾಧಿಗಳಲ್ಲ.—ಅವೇಕ್! ಮೇ, 8, 1990 ನೋಡಿರಿ.
ಜರ್ಮನ್ ವೈದಿಕರು ಸಹಾ, ಕಡಿಮೆ ಜ್ಞಾತವಾದ, ಆದರೆ ಅಷ್ಟೇ ದುರಂತದ ಬೇರೊಂದು ಪ್ರಶ್ನೆಯಲ್ಲಿ ಮೌನವಾಗಿ ಉಳಿದರು. 1927ರಲ್ಲಿ ಹಿಟ್ಲರನು, ಮೈನ್ ಕೆಂಫ್ ಪತ್ರಿಕೆಯಲ್ಲಿ ಜಾತೀಯತೆಯ ಕುರಿತು ತನ್ನ ವಿಚಾರಗಳನ್ನು ತಿಳಿಸಿದ ಎರಡು ವರ್ಷಗಳ ನಂತರ, ಕಥೋಲಿಕ ಸಂಪಾದಕ ಮತ್ತು ವೇದಾಂತಿ ಜೋಸೆಫ್ ಮೆಯರ್ ಪ್ರಕಟಿಸಿದ ಬಿಷಪ್ಪಿನ ಅಧಿಕಾರ ಮುದ್ರೆಯಿದ್ದ ಒಂದು ಪುಸ್ತಕವು ಅಂದದ್ದು: “ಮಾನಸಿಕ ರೋಗಿಗಳಿಗೆ, ನೈತಿಕ ಬುದ್ಧಿಹೀನರಿಗೆ ಮತ್ತು ಇತರ ಕನಿಷ್ಟ ವ್ಯಕ್ತಿಗಳಿಗೆ ಬೆಂಕಿ ಹತ್ತಿಸಲು ಹೇಗಿಲ್ಲವೋ ಹಾಗೆ ಸಂತಾನೋತ್ಪತ್ತಿಯ ಹಕ್ಕೂ ಇರುವದಿಲ್ಲ.” ಅನರ್ಹ ವ್ಯಕ್ತಿಗಳ ಸಂತಾನ ಶಕ್ತಿಹರಣವು ಯೇಸುವಿನ ಚಿತ್ತಕ್ಕೆ ಹೊಂದಿಕೆಯಲ್ಲಿದೆ ಎಂದು ಲುಥರನ್ ಪಾದ್ರಿ ಫ್ರೆಡ್ರಿಚ್ ವಾನ್ ಬಾಡೆಲ್ವ್ಸ್ಕಿಂಗ್ ಕಂಡುಕೊಂಡರು.
ಈ ಧಾರ್ಮಿಕ ಬೆಂಬಲಿತ ಮನೋಭಾವವು, ಹಿಟ್ಲರನ 1939ರ “ಸುಖಮರಣ ಕಾಯಿದೆ”ಗೆ ದಾರಿತೆರೆಯಲು ಸಹಾಯ ಮಾಡಿತು, ಇದು ಬುದ್ಧಿ ಭ್ರಮಿಷರ್ಟಾದ 1,00,000ಕ್ಕಿಂತಲೂ ಹೆಚ್ಚು ನಾಗರಿಕರ ಮರಣಕ್ಕೆ ಮತ್ತು 4,00,000 ಮಂದಿಯ ಬಲವಂತ ಸಂತಾನ ಶಕ್ತಿಹರಣಕ್ಕೆ ನಡಿಸಿತೆಂದು ಅಂದಾಜು ಮಾಡಲಾಗಿದೆ.a
ಯುದ್ಧವು ಅಂತ್ಯಗೊಂಡ ನಾಲ್ಪತ್ತು ವರ್ಷಗಳ ನಂತರ, 1985ರಲ್ಲಿ, ರೈನ್ಲ್ಯಾಂಡಿನ ಲುಥರನ್ ಚರ್ಚ್ ಅಧಿಕಾರಿಗಳು ಈ ಬಹಿರಂಗ ಅರಿಕೆಯನ್ನು ಮಾಡಿದರು: “ಬಲವಂತ ಸಂತಾನ ಶಕ್ತಿಹರಣವನ್ನು, ರೋಗಿಗಳ ಮತ್ತು ಅಂಗವಿಕಲರ ಕೊಲೆಯನ್ನು ಮತ್ತು ಮನುಷ್ಯರ ಮೇಲೆ ಕ್ರೂರ ವೈದ್ಯಕೀಯ ಪ್ರಯೋಗಗಳ ನಡಿಸುವಿಕೆಯನ್ನು ನಾವು ಸಾಕಷ್ಟು ಬಲವಾಗಿ ವಿರೋಧಿಸಲಿಲ್ಲ. ಇನ್ನೂ ಜೀವಂತರಿರುವ ಆ ಬಲಿಗಳ ಮತ್ತು ಅವರ ಸಂಬಂಧಿಕರ ಕ್ಷಮೆಯನ್ನು ನಾವು ಯಾಚಿಸುತ್ತೇವೆ.”
ಆಗಸ್ಟ್ 3, 1941ರಂದು ಮ್ಯೂನ್ಸರ್ಟ್ನ ಕ್ಯಾಥ್ಲಿಕ್ ಬಿಷಪ್ ಆ ಕಾಯಿದೆಯನ್ನು ಕೊಲೆಪಾತವೆಂದು ಕರೆಯುತ್ತಾ, ಕಡು ಟೀಕಾಕ್ರಮಣವನ್ನು ಮಾಡಿದ ನಂತರ ಸರಕಾರದ ಆ ಸುಖಮರಣ ಚಟುವಟಿಕೆಯು ನಿಧಾನಿಸಿತೆಂಬದು ನಿಜ. ಆದರೆ ಒಂದು ಬಹಿರಂಗ ಖಂಡನೆಯು ಕೇಳಿಬರುವ ಮುಂಚೆ 19 ತಿಂಗಳುಗಳನ್ನೂ ಮತ್ತು 60,000 ಮರಣಗಳನ್ನೂ ಅದು ತಕ್ಕೊಂಡದ್ದೇಕೆ?
ಧರ್ಮದ ರಕ್ತಾಪರಾಧ
ಹೆಚ್ಚಿನ ಧರ್ಮಗಳು ಜೀವವನ್ನು ಗೌರವಿಸುತ್ತೇವೆಂಬದಾಗಿ ಮತ್ತು ಜನರನ್ನು ಹಾನಿಯಿಂದ ರಕ್ಷಿಸಲು ಆಸಕ್ತರೆಂಬದಾಗಿ ವಾದಿಸುತ್ತವೆ. ಆದರೆ ವೈದಿಕರು ತಮ್ಮ ಮಂದೆಯನ್ನು ಧೂಮ್ರಪಾನದಲ್ಲಿ, ಔಷಧದ್ರವ್ಯದ ದುರುಪಯೋಗದಲ್ಲಿ, ಮದ್ಯಸಾರ, ರಕ್ತವನ್ನು ಶರೀರದೊಳಗೆ ತಕ್ಕೊಳ್ಳುವದು ಮತ್ತು ಲೈಂಗಿಕ ಸ್ವೇಚ್ಛಾಸಂಪರ್ಕದಲ್ಲಿ ಒಳಗೂಡಿರುವ ದೈಹಿಕ ಅಪಾಯಗಳ ಕುರಿತು ಎಚ್ಚರಿಸುತ್ತಾರೋ? ಅಧಿಕ ಮಹತ್ವದ್ದಾಗಿ, ಬೈಬಲು ಖಂಡಿಸುವಂತೆ ಅವರು ಶರೀರದ ಕರ್ಮಗಳನ್ನು ಖಂಡಿಸುತ್ತಾರೋ, ಅದು ದೇವರ ಮೆಚ್ಚಿಗೆಯನ್ನು ಅಪಹರಿಸುತ್ತದೆಂದು ವಿವರಿಸುತ್ತಾರೋ?—ಅ.ಕೃ. 15:28, 29; ಗಲಾತ್ಯ 5:19-21.
ನಿಶ್ಚಯವಾಗಿಯೂ, ಕೆಲವರು ಅದನ್ನು ಮಾಡುತ್ತಾರೆ ನಿಜ. ಕ್ಯಾಥಲಿಕ ಚರ್ಚು ಹಾಗೂ ಅನೇಕ ಸಾಂಪ್ರದಾಯಿಕ ಚರ್ಚುಗಳು ಗರ್ಭಪಾತವನ್ನು ನಿರ್ದೋಷ ರಕ್ತಸುರಿಸುವಿಕೆಯೆಂದು ಖಂಡಿಸುವಷ್ಟರ ಮಟ್ಟಿಗೆ ಜೀವಕ್ಕೆ ಗೌರವವನ್ನು ತೋರಿಸುತ್ತವೆ. ಆದರೂ, ಕಥೋಲಿಕ ಇಟೆಲಿಯ ಗರ್ಭಪಾತ ಕಾಯಿದೆಯು ಯೂರೋಪಿನಲ್ಲೀ ಅತ್ಯಂತ ಹೆಚ್ಚು ಔದಾರ್ಯದ್ದು.
ಬೌದ್ಧ ಮತವು ಸಹಾ ಗರ್ಭಪಾತಗಳನ್ನು ಖಂಡಿಸುತ್ತದೆ. ಆದರೆ ಜಪಾನಿನಲ್ಲಿ 70 ಪ್ರತಿಶತ ಜನಸಂಖ್ಯೆಯು ಬೌದ್ಧಧರ್ಮವನ್ನು ಪಾಲಿಸುತ್ತಾರಾದರೂ, ಒಂದೇ ವರ್ಷದಲ್ಲಿ 6,18,000 ಗರ್ಭಪಾತಗಳು ನಡಿಸಲ್ಪಟ್ಟವೆಂದು ವರದಿಯಾಗಿದೆ. ಇದು ಈ ಪ್ರಶ್ನೆಯನ್ನೆಬ್ಬಿಸುತ್ತದೆ: ಒಂದು ಧರ್ಮವನ್ನು ಯಾವ ಆಧಾರದಿಂದ ಅಳೆಯಬೇಕು, ಅದರ ಅಧಿಕೃತ ಅಂಗಗಳು ಮತ್ತು ಅದರ ವೈದಿಕರಲ್ಲಿ ಕೆಲವರು ಏನನ್ನುತ್ತಾರೋ ಅದರಿಂದಲೋ ಅಥವಾ ಅದರ ಗಣನೀಯ ಸದಸ್ಯರಲ್ಲಿ ಅಧಿಕ ಸಂಖ್ಯಾತರು ಏನು ಮಾಡುತ್ತಾರೋ ಅದರಿಂದಲೋ?
ದುಷ್ಟರಿಗೆ ಎಚ್ಚರಿಕೆ ಕೊಡಲು ತಪ್ಪುವ ಇನ್ನೊಂದು ಉದಾಹರಣೆಯು, ಬೈಬಲಿನ ಕಾಲಗಣನೆ ಮತ್ತು ಬೈಬಲ್ ಪ್ರವಾದನೆಯ ನೆರವೇರಿಕೆಯ ಸಂಬಂಧದಲ್ಲಿದೆ. ದೇವರ ಸ್ವರ್ಗೀಯ ರಾಜ್ಯವು 1914ರಲ್ಲಿ ಯೇಸು ಕ್ರಿಸ್ತನ ಮೂಲಕ ಸ್ಥಾಪನೆಗೊಂಡಿದೆ ಎಂದು ಎರಡೂ ಸೂಚಿಸುತ್ತವೆ.b ಕ್ರೈಸ್ತ ಪ್ರಪಂಚವು ಕ್ರಿಸ್ತನ ಕಲ್ಪಿತ ಜನ್ಮದಿನವನ್ನು ಪ್ರತಿ ದಶಂಬರದಲ್ಲಿ ಆಚರಿಸುತ್ತಿದೆಯಾದರೂ, ವೈದಿಕರು ಆತನನ್ನು ಆಳುವ ರಾಜನಾಗಿ ಎಂದೂ ಘೋಷಿಸಿರುವುದಿಲ್ಲ, 19 ಶತಕಗಳ ಹಿಂದೆ ರಾಜ-ನಿಯುಕನ್ತಾದ ಆತನನ್ನು ಯೆಹೂದಿ ಮುಖಂಡರು ಸ್ವೀಕರಿಸದೆ ಇದ್ದ ಹಾಗೆಯೇ.
ಯಾವುದೇ ಮತದ ವೈದಿಕರೇ ಆಗಿರಲಿ, ನೈತಿಕತೆಯ ಮೇಲಿನ ದೇವರ ನಿಯಮಗಳನ್ನು ಮೀರುವುದರಿಂದ ಮತ್ತು ದೇವರ ರಾಜ್ಯಕ್ಕೆ ಅಧೀನರಾಗಲು ನಿರಾಕರಿಸುವದರಿಂದ ಉಂಟಾಗುವ ಫಲಿಶಾಂಶಗಳ ಕುರಿತು ಜನರನ್ನು ಎಚ್ಚರಿಸದೆ ಹೋದರೆ, ಯೆಹೆಜ್ಕೇಲ 33:8ಕ್ಕೆ ಅನುಸಾರವಾಗಿ, ತಮ್ಮ ಮೇಲೆ ರಕ್ತಾಪರಾಧದ ಹೊರೆಯನ್ನೇ ತರುತ್ತಾರೆ. ಅವರ ಮೌನವು, ಅವರ ಮಂದೆಯ ಮಿಲ್ಯಾಂತರ ಜನರು ರಕ್ತಾಪರಾಧಕ್ಕೆ ದೋಷಿಗಳಾಗುವಾಗ ಅವರು ಸುಮ್ಮನೆ ನಿಂತು ನೋಡುವದಕ್ಕೆ ಸಮಾನವಾಗಿರುವದು.
ಹೀಗೆ, ತನ್ನ ನೆರಿಗೆಯನ್ನು ನಿರಪರಾಧ ರಕ್ತದಿಂದ ಸಿಡಿಸಿಕೊಂಡ ಮೂಲಕ ಸುಳ್ಳುಧರ್ಮವು ಕ್ರಿಸ್ತ ಯೇಸುವು ಸುರಿಸಿದ ಜೀವದಾಯಕ ರಕ್ತವನ್ನು ನಿರಾಕರಿಸಿದೆ. (ಮತ್ತಾಯ 20:28 ಮತ್ತು ಎಫೆಸ 1:7 ನೋಡಿ.) ಆ ಕಾರಣಕ್ಕಾಗಿ, ಸುಳ್ಳು ಧರ್ಮದ ನೆರಿಗೆಯಲ್ಲಿ ಸಿಡಿಸಲ್ಪಡುವ ರಕ್ತವು ಶೀಘ್ರದಲ್ಲಿ—ಅತಿ ಬೇಗನೇ—ಅದರ ಸ್ವಂತ ರಕ್ತವಾಗಿ ಇರಲಿದೆ!—ಪ್ರಕಟನೆ 18:8.
“ಸುಳ್ಳುಧರ್ಮ—ಅದರ ಹಿಂದಣ ಕೃತ್ಯಗಳಿಂದ ಬೆನ್ನಟ್ಟಲ್ಪಟ್ಟು!” ಪಾರಾಗುವ ಮಾರ್ಗವನ್ನು ಕಾಣದೆ ಇದೆ. ಅದನ್ನು ನಮ್ಮ ಮುಂದಿನ ಸಂಚಿಕೆಯು ವಿವರಿಸಲಿ. (g89 11/8)
[ಅಧ್ಯಯನ ಪ್ರಶ್ನೆಗಳು]
a ಇದು, 15ನೇ ಶತಮಾನದ ಆರಂಭದಲ್ಲಿ, ಸುಮಾರು 3,00,000ದಿಂದ 30,00,000 “ಮಾಟಗಾರ್ತಿ”ಯರ ಹತ್ಯೆಯನ್ನು ಪೋಪರ ಆಶೀರ್ವಾದದಿಂದ ನಡಿಸಿದ್ದನ್ನು ನೆನಪಿಗೆ ತರುತ್ತದೆ.
b ವಾಚ್ಟವರ್ ಬೈಬಲ್ ಆ್ಯಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1982ರಲ್ಲಿ ಪ್ರಕಾಶಿಸಲ್ಪಟ್ಟ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ಅಧ್ಯಾಯ 16-18 ನೋಡಿರಿ.
[Box on page ]
ಧರ್ಮ, ಇಂದು ಲೋಕದ ಅನೇಕ ಭಾಗಗಳಲ್ಲಿ, ಕ್ರಾಂತಿಯ ದಾಸಿಯಾಗಿ ಪರಿಣಮಿಸಿದೆ . . . ಅದು ಉತ್ತರ ಆರ್ಯಲೆಂಡಿನಲ್ಲಿ ಹೇಗೋ ಹಾಗೆ ಭಾರತ ಉಪಖಂಡದಲ್ಲಿ ಮತ್ತು ಫಿಲಿಪ್ಪೀನ್ಸ್ನಲ್ಲಿ ಹತ್ಯೆಯನ್ನು ಪ್ರೇರೇಪಿಸುತ್ತಾ ಇದೆ.”—ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್
[Picture on page ]
ಈ 15ನೇ ಶತಮಾನದ ಮರದ ಪಡಿಯಚ್ಚು ಪಾಷಂಡಿಗಳ ಸಾಮೂಹಿಕ ಸುಡುವಿಕೆಯನ್ನು ಚಿತ್ರಿಸುವ ಪ್ರಕಾರ, ಸುಳ್ಳು ಧರ್ಮದ ಗತಕಾಲದ ರಕ್ತಾಪರಾಧವು, ಈ 20ನೇ ಶತಮಾನದ ಅದರ ದಾಖಲೆಯಿಂದ ನಿಸೇಜ್ತವಾಗಿದೆ
[Picture on page ]
ಯುದ್ಧೋದ್ಯಮಗಳಿಗಾಗಿ 1ನೇ ಲೋಕ ಯುದ್ಧದ ಸಮಯದಲ್ಲಿ ಜರ್ಮನ್ ಚರ್ಚ್ ಗಂಟೆಗಳನ್ನು ಕರಗಿಸಲಾಯಿತು
[ಕೃಪೆ]
Bundesarchiv Koblenz