ಯುವ ಜನರು ಪ್ರಶ್ನಿಸುವುದು. . .
ನನ್ನ ಹೆತ್ತವರು ಜಗಳವಾಡಿದರೆ ನಾನೇನು ಮಾಡಬೇಕು?
ಲೋಕದಲ್ಲಿ ಇರುವ ಎಲ್ಲರಿಗಿಂತಲೂ ಹೆಚ್ಚಾಗಿ ನೀವು ಪ್ರೀತಿಸುವ ಇಬ್ಬರು; ನೋಯಿಸುವ ಮಾತುಗಳೊಂದಿಗೆ “ಒಬ್ಬರನ್ನೊಬ್ಬರು ಕಚ್ಚಿ ಹರಕೊಂಡು ನುಂಗುವವರಾದರೆ” ಜೀವನವು ಒಂದು ದಿನನಿತ್ಯದ ದುಃಸ್ವಪ್ನವಾಗಿರಬಲ್ಲದು. (ಗಲಾತ್ಯದವರಿಗೆ 5:15) ಅತ್ಯುತ್ತಮ ವಿವಾಹಗಳು ಕೂಡ ಕೆಲವು “ಕಷ್ಟ”ದಿಂದ ಬಾಧಿಸಲ್ಪಡುತ್ತವೆ. (1 ಕೊರಿಂಥದವರಿಗೆ 7:28) ಆದರೆ ಹೆತ್ತವರ ತಿಕ್ಕಾಟವು ಬಿಟ್ಟುಕೊಡುವಂತಹದ್ದಲ್ಲ, ಕ್ರೂರವೂ ಯಾ ಹಿಂಸಾತ್ಮಕವೂ ಆಗಿದ್ದು, ಏನೋ ಒಂದು ಗಂಭೀರ ತಪ್ಪು ಇರುತ್ತದೆ.
ಹಾಗಿರುವಾಗ, ತಮ್ಮ ಹೆತ್ತವರ ಮದುವೆಯನ್ನು ಸರಿಪಡಿಸಲು ಕೆಲವು ಯುವಕರು ಹತಾಶೆಯಿಂದ ಪ್ರಯತ್ನಿಸುವದು ಆಶ್ಚರ್ಯದ ಸಂಗತಿಯೇನಲ್ಲ. “ಒಂದು ಜಗಳದ ಮಧ್ಯದಲ್ಲೇ ನಾನು ಒಳಗೂಡಿದೆನು ಮತ್ತು ಅವರು ಜಗಳಾಡುವದನ್ನು ನಿಲ್ಲಿಸಲು ತಂದೆಯನ್ನು ಕೋಣೆಯಿಂದ ಹೊರತರಲು ಪ್ರಯತ್ನಿಸಿದೆನು” ಎಂದು ಒಬ್ಬ ಹದಿವಯಸ್ಕ ಹುಡುಗನು ಹೇಳುತ್ತಾನೆ. ಇನ್ನಿತರರು ಹತಾಶೆಯಿಂದ ಮೌನವಾಗಿ ಹಿಂದೆ ಸರಿಯುತ್ತಾರೆ. “ಅವರಿಗೆ ಈ ಜಗಳಗಳಿರುವಾಗ, ನಾನು ಎದೆಗುಂದದಂತೆ ಅವರಿಂದ ನಾನು ದೂರವಿರಲು ಪ್ರಯತ್ನಿಸುತ್ತೇನೆ” ಎಂದಳು ಒಬ್ಬಾಕೆ ಎಳೆಯ ಹುಡುಗಿ. “ಆದರೆ ಸಹಾಯ ಮಾಡಲು ಪ್ರಯತ್ನಿಸದೇ ಇದ್ದುದ್ದಕ್ಕೆ ಅನಂತರ ನನಗೆ ತಪ್ಪಿತಸ್ಥಳೆಂಬ ಭಾವನೆಯುಂಟಾಗುತ್ತದೆ.”
ಹಾಗಾದರೆ, ಒಂದು ಕುಟುಂಬ ಕಲಹ ಸ್ಫೋಟಗೊಂಡರೆ, ನೀವೇನು ಮಾಡತಕ್ಕದ್ದು?
ಏನನ್ನು ಮಾಡಬಾರದು
ಅವರೊಂದಿಗೆ ಅಗೌರವದಿಂದ ವರ್ತಿಸಬೇಡಿರಿ: ಕಾದಾಡುವ ಹೆತ್ತವರೊಂದಿಗೆ ಬೇಸರ ಬರುವದು ಸುಲಭವಾಗಿದೆ. ಏನೆಂದರೂ, ಅವರು ನಿಮಗಾಗಿ ಒಂದು ಮಾದರಿಯನ್ನು ಇಡಬೇಕಾಗಿದೆಯೇ ಹೊರತು ಅದಕ್ಕೆ ವಿಪರ್ಯಸ್ತವಾಗಿ ಅಲ್ಲ. ಒಬ್ಬ ಹೆತ್ತವನೊಂದಿಗೆ ತಿರಸ್ಕಾರದಿಂದ ವರ್ತಿಸುವುದರಿಂದ ಕೂಡ, ಕುಟುಂಬದ ಬಿಗುಪು ಪರಿಸ್ಥಿತಿಗಳಿಗೆ ಇನ್ನಷ್ಟನ್ನು ಕೇವಲ ಕೂಡಿಸುವ ಸಂಭವವಿದೆ. ಹೆಚ್ಚು ಪ್ರಾಮುಖ್ಯವಾಗಿ, ತಮ್ಮ ಹೆತ್ತವರನ್ನು ಗೌರವಿಸಲು ಮತ್ತು ವಿಧೇಯರಾಗಿರಲು, ಹಾಗೆ ಮಾಡಲು ಕಷ್ಟಕರವಾಗಿ ಮಾಡಿದರೂ ಸಹ, ಯೆಹೋವ ದೇವರು ಯುವಕರಿಗೆ ಆಜ್ಞಾಪಿಸುತ್ತಾನೆ.—ವಿಮೋಚನಕಾಂಡ 20:12; ಜ್ಞಾನೋಕ್ತಿ 30:17.
ಪಕ್ಷಗಳನ್ನು ಹಿಡಿಯಬೇಡಿರಿ: “ಕೆಲವೊಮ್ಮೆ ನನ್ನ ಹೆತ್ತವರು ವಾದಿಸುತ್ತಿರುವಾಗ” ಎಂದಳು ಹದಿವಯಸ್ಕ ಹುಡುಗಿ, “ಅವರಲ್ಲಿ ಒಬ್ಬರು ನಾನು ಏನು ನೆನಸುತ್ತೇನೆ ಎಂದು ಕೇಳುವರು. ಅದು ನಿಜವಾಗಿ ನನ್ನನ್ನು ಅಸ್ವಸ್ಥಗೊಳಿಸುತ್ತದೆ.” ಖಂಡಿತವಾಗಿಯೂ, ಒಂದು ವಿವಾದವು ನಿಮ್ಮನ್ನು ನೇರವಾಗಿ ಒಳಗೂಡಿಸುವಾಗ, ಒಂದು ಸೌಮ್ಯ, ಗೌರವಪೂರ್ಣ ಉತ್ತರವು ಸೂಕ್ತವಾಗಿರಬಲ್ಲದು.—ಜ್ಞಾನೋಕ್ತಿ 15:1.
ಅಥವಾ ನಿಮ್ಮ ಹೆತ್ತವರಲ್ಲಿ ಒಬ್ಬರು ಕ್ರೈಸ್ತರಾಗಿರಬಹುದು ಮತ್ತು ಇನ್ನೊಬ್ಬರು ಅವಿಶ್ವಾಸೀಯಾಗಿರಬಹುದು. ದೇವ-ಭೀರು ಹೆತ್ತವನೊಂದಿಗೆ ನೀತಿಗಾಗಿ ಒಂದು ನಿಲುವನ್ನು ನೀವು ತೆಗೆದುಕೊಳ್ಳುವ ಅಗತ್ಯವಿರುವ ಧಾರ್ಮಿಕ ತೊಂದರೆಗಳು ಏಳಬಹುದು. (ಮತ್ತಾಯ 10:34-37) ಹಾಗಿದ್ದರೂ ಕೂಡ, ಒಂದಾನೊಂದು ದಿನ ಆ ಅವಿಶ್ವಾಸೀ ಹೆತ್ತವನನ್ನು ಗಳಿಸಲಿಕ್ಕಾಗಿ, ಅದನ್ನು “ಸಾತ್ವಿಕತದ್ವಿಂದಲೂ ಮನೋಭೀತಿಯಿಂದಲೂ” ಮಾಡತಕ್ಕದ್ದು.—1 ಪೇತ್ರ 3:15.
ಆದರೆ ಒಂದು ಕಾದಾಟ ಸ್ಪಷ್ಟವಾಗಿಗಿಯೂ ಅವರ ವಾಗ್ವಾದವಾಗಿರುವಾಗ, ತಟಸ್ಥತೆಯಿಂದ ಇರುವದು ಸಾಮಾನ್ಯವಾಗಿ ವಿವೇಕದ ಮಾರ್ಗವಾಗಿರುತ್ತದೆ. ಜ್ಞಾನೋಕ್ತಿ 26:17 ಎಚ್ಚರಿಸುವದು: “ಒಬ್ಬನು ದಾರಿಯಲ್ಲಿ ಹೋಗುತ್ತಾ ಪರರ ವ್ಯಾಜ್ಯಕ್ಕೆ ಸೇರಿ ರೇಗಿಕೊಳ್ಳುವದು ನಾಯಿಯನ್ನು ಕಿವಿಹಿಡಿದ ಹಾಗೆ.” ನೀವು ಪಕ್ಷವನ್ನು ತಕ್ಕೊಂಡರೆ, ನಿಮ್ಮ ಹೆತ್ತವರಲ್ಲಿ ಒಬ್ಬನ ಕೋಪವನ್ನು ಎಬ್ಬಿಸುವ—ಮತ್ತು ಪ್ರಾಯಶಃ ದೂರ ಸರಿಯುವ—ಸಂಭಾವ್ಯತೆಯನ್ನು ತಕ್ಕೊಳ್ಳುತ್ತೀರಿ.
ಹೆತ್ತವರ ಒಂದು ವಾಗ್ವಾದದಲ್ಲಿ ಪಕ್ಷವನ್ನು ತಕ್ಕೊಳ್ಳುವ ಒಬ್ಬ ಯುವಕನು “ನಿಜವಾಗಿ ಅರ್ಥಮಾಡಲು ಜಟಿಲವಾಗಿರುವ ಒಂದು ಸನ್ನಿವೇಶದ ಮೇಲೆ ಒಂದು ಹಿಡಿತವನ್ನು ತಕ್ಕೊಳ್ಳಲೂ” ಪ್ರಯತ್ನಿಸುತ್ತಾನೆ. ಟೀನ್ ಪತ್ರಿಕೆಯಲ್ಲಿ ಕೌಟುಂಬಿಕ ಸಲಹೆಗಾರನಾದ ಮಿಶೆಲ್ ರೊಸೆನ್ ಹಾಗಂದನು. ಅವನು ಹೇಳಿದ್ದು, ವೈವಾಹಿಕ ವಾಗ್ವಾದಗಳಲ್ಲಿ “ಒಂದು ದೊಡ್ಡ ಪ್ರಮಾಣದ ಸಂಗತಿಗಳು ಒಳಗೂಡಿರುತ್ತವೆ ಮತ್ತು ಇದು ಕೇವಲ ಅವಳು ಸರಿ, ಇವನು ತಪ್ಪು ಎಂಬ ವಿಷಯವಾಗಿರುವದಿಲ್ಲ.” ಹೆಚ್ಚಾಗಿ, ಒಂದು ವಾಗ್ವಾದದ ತಿರುಳಿನಲ್ಲಿ ಹಲವಾರು ವರ್ಷಗಳ ಒಂದು ಅವಧಿಯಲ್ಲಿ ಕಟ್ಟಲ್ಪಟ್ಟ ಮನದುಬ್ಬಸಗಳು ಮತ್ತು ಅಸಮಾಧಾನಗಳ ಸೇರಿರುತ್ತವೆ. ಆದುದರಿಂದ, ಕೆಲವು ನಿಮಿಷಗಳಿಗಾಗಿ ಊಟವು ತಡವಾದುದರ್ದಿಂದ ಅಥವಾ ಸ್ನಾನದ ಮನೆಯಲ್ಲಿ ರೊಚ್ಚುಗುಂಡಿ [ಸಿಂಕ್]ಯನ್ನು ಕೊಳಕಾಗಿ ಬಿಟ್ಟಿರುವದರಿಂದ, ಅಪ್ಪ ಅಥವಾ ಅಮ್ಮ ಗೊಣಗಿದರೆ, ದೃಷ್ಠಿಗೆ ಗೋಚರವಾಗುವದಕ್ಕಿಂತಲೂ ಏನೋ ಹೆಚ್ಚಿನದ್ದು ಒಳಗೊಂಡಿರುತ್ತದೆ.
ಬೈಬಲು ಒತ್ತಾಯಿಸುವದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರ್ರಿ.” (ರೋಮಾಪುರದವರಿಗೆ 12:18) ಆದುದರಿಂದ ತಟಸ್ಥರಾಗಿ ನಿಲ್ಲಲು ಪ್ರಯತ್ನಿಸಿರಿ. ಆದರೆ ನಿಮ್ಮ ಹೆತ್ತವರು ನೀವು ಪಕ್ಷವನ್ನು ತಕ್ಕೊಳ್ಳಲು ಒತ್ತಾಯಿಸಿದರೆ, ಆಗೇನು? “ಹಿಡಿದು ಮಾತಾಡುವವನು” ಬೈಬಲು ಹೇಳುವದು “ಜ್ಞಾನಿ.” (ಜ್ಞಾನೋಕ್ತಿ 17:27) ಹೌದು, ಧ್ವನಿಗೂಡಿಸುವದರಿಂದ—ಅಥವಾ ಇನ್ನೂ ಕೆಟ್ಟದ್ದಾಗಿ, ನಿಮ್ಮ ಅಭಿಪ್ರಾಯಗಳನ್ನು ಅರಚುವದರಿಂದ—ದೂರವಿರ್ರಿ. “ಅಮ್ಮ ಮತ್ತು ಅಪ್ಪ, ನಾನು ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ. ಆದರೆ ನಾನು ಪಕ್ಷಗಳನ್ನು ಹಿಡಿಯುವಂತೆ ದಯವಿಟ್ಟು ಕೇಳಬೇಡಿರಿ. ಇದು ನಿಮ್ಮೊಳಗೆಯೇ ಸರಿಪಡಿಸಬೇಕಾದ ಒಂದು ವಿಷಯ” ಎಂದು ಹೇಳಿ, ಪ್ರಾಯಶಃ ನೀವು ನಿಮ್ಮನ್ನೇ ವಿನಮ್ರವಾಗಿ ತಪ್ಪಿಸಿಕೊಳ್ಳಬಹುದು.
ಕಾದಾಟದಲ್ಲಿ ಜತೆಗೂಡಬೇಡಿರಿ: ಎರಡು ಏರಿಸಲ್ಪಟ್ಟ ಧ್ವನಿಗಳು ತಾನೇ ಸಾಕಷ್ಟು ಕೆಟ್ಟದ್ದಾಗಿವೆ. ಈ ಮೇಳಕ್ಕೆ ಮೂರನೆಯ ಸರ್ವವನ್ನು ಯಾಕೆ ಜತೆಗೂಡಿಸಬೇಕು? ಜ್ಞಾನೋಕ್ತಿ 15:18 ಹೇಳುವದು: “ಕೋಷ್ಠಿನು ವ್ಯಾಜ್ಯವನ್ನೆಬ್ಬಿಸುವನು. ಧೀರ್ಘಶಾಂತನು ಜಗಳವನ್ನು ಶಮನಪಡಿಸುವನು.” ತಿಕ್ಕಾಟದಲ್ಲಿ ಧುಮುಕಲು ಸರಳವಾಗಿಯೇ ನಿರಾಕರಿಸಿರಿ. ಮತ್ತು ಒಂದು ಜಗಳವು ಸ್ಫೋಟಗೊಳ್ಳಲಿದೆ ಎಂದು ನಿಮಗೆ ತಿಳಿದುಬರುವದಾದರೆ, ಜ್ಞಾನೋಕ್ತಿ 17:14ರ ವಾಕ್ಯಗಳನ್ನು ನೆನಪಿಸಿರಿ: “ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಜಗಳವು ಸ್ಫೋಟಿಸುವ ಮೊದಲೇ ಅಲ್ಲಿಂದ ಹೊರಟುಬಿಡು.”(NW)
ಪ್ರಾಯಶಃ ನೀವು ಅಲ್ಲಿಂದ ಸುಮ್ಮನೆ ವಿನಾಯಿತಿ ತಕ್ಕೊಳ್ಳಬಹುದು ಮತ್ತು ನಿಮ್ಮ ಕೋಣೆಗೆ ಹೋಗಿ ಓದಬಹುದು, ಅಭ್ಯಾಸಿಸಬಹುದು ಅಥವಾ ಸಂಗೀತವನ್ನು ಆಡಬಹುದು. ಅಥವಾ ನಿಮ್ಮ ಒಬ್ಬ ಮಿತ್ರರನ್ನು ಭೇಟಿಕೊಡಲು ಇದೊಂದು ಒಳ್ಳೆಯ ಸಮಯವಾಗಿರುವದು. ಮಾಡಲು ಫಲಕಾರಿಯಾದ ಯಾವುದಾದರೂ ಕೆಲಸವನ್ನು ಕಂಡುಕೊಳ್ಳುವದು ನಿಮ್ಮನ್ನು ವ್ಯಾಜ್ಯದ ಕ್ಷೇತ್ರದಿಂದ ದೂರವಿರಿಸುತ್ತದೆ ಮತ್ತು ಆ ವಿಷಯದಿಂದ ನಿಮ್ಮ ಮನಸ್ಸನ್ನು ತೆಗೆಯುತ್ತದೆ.
ವಿವಾಹದ ಒಬ್ಬ ಸಲಹೆಗಾರನಾಗಲು ಪ್ರಯತ್ನಿಸಬೇಡಿರಿ: ಜ್ಞಾನೋಕ್ತಿಯೊಂದು ಹೀಗಂದಂತೆ ಇದೆ: “ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.” (ಜ್ಞಾನೋಕ್ತಿ 18:19) ಜಗಳ ಮಾಡುವ ಹೆತ್ತವರು ಹೆಚ್ಚಾಗಿ, “ಕೋಟೆಯ ಅಗುಳಿ”ಯಷ್ಟು ದುಸ್ಸಾಧ್ಯವಾದ ಕೋಪದ ಒಂದು ತಡೆಗಟ್ಟನ್ನು ಕಟ್ಟಿರುತ್ತಾರೆ. ಆ ತಡೆಗಟ್ಟನ್ನು ಮುರಿದು ಹಾಕುವಂತೆ, ಅವರಿಗೆ ಸಹಾಯ ಮಾಡಲು ಜೀವಿತದಲ್ಲಿ ನಿಮಗೆ ಅಷ್ಟೊಂದು ಜ್ಞಾನ ಅಥವಾ ಅನುಭವವಿದೆಯೋ? ಹಾಗಿರುವ ಸಂಭವ ಕಾಣುವದಿಲ್ಲ.
ನಿಮ್ಮ ಹೆತ್ತವರ ವೈವಾಹಿಕ ತೊಂದರೆಗಳಲ್ಲಿ ನಿಮ್ಮನ್ನು ಒಳಗೂಡಿಸಲಿಕ್ಕಾಗಿ ಹಮ್ಮು ಇಟ್ಟುಕೊಳ್ಳುವದು ತಾನೇ ಅವುಗಳನ್ನು ಇನ್ನಷ್ಟು ಹದಗೆಡಿಸಬಹುದು. ಜ್ಞಾನೋಕ್ತಿ 13:10 ಹೇಳುವದು: “ದುರಹಂಕಾರದ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.” ಹೌದು, ಪ್ರಾಯಶಃ ನಿಮ್ಮ ಹೆತ್ತವರು ಒಟ್ಟಿಗೆ ಏಕಾಂತದಲ್ಲಿ ವಿಚಾರವಿನಿಮಯ ಮಾಡಿಕೊಳ್ಳುವದರಿಂದ ಅವರ ಕಷ್ಟಗಳನ್ನು ನಿವಾರಿಸುವ ಉತ್ತಮ ವಿಧವನ್ನು ಕಂಡಕೊಳ್ಳಬಹುದು.—ಜ್ಞಾನೋಕ್ತಿ 25:9ನ್ನು ಹೋಲಿಸಿರಿ.
ಅಲ್ಲದೇ, ಕುಟುಂಬದ ಮಧ್ಯಸ್ಥನ ಪಾತ್ರವು ನೀವು ಅರ್ಥೈಸಿಕೊಂಡಿರುವದಕ್ಕಿಂತಲೂ ಹೆಚ್ಚು ತಗಾದೆಯ ಕೆಲಸವಾಗಿರಬಹುದು. ಟೀನ್ ಟ್ರಬಲ್ಸ್ ಎಂಬ ತನ್ನ ಪುಸ್ತಕದಲ್ಲಿ, ವಿವಾಹದ ಸಲಹೆಗಾರ್ತಿಯ ಪಾತ್ರವನ್ನು ಆಡಲು ಪ್ರಯತ್ನಿಸಿದ ಕೊರಾ ಎಂಬ ಹೆಸರಿನ ಒಬ್ಬಾಕೆ ಯುವತಿಯ ಕುರಿತಾಗಿ ಕಾರೊಲಿನ್ ಮಾಕ್ಕೆನ್ಲಾಹನ್ ವೆಸ್ಸನ್ ತಿಳಿಸುತ್ತಾಳೆ. ಅದರ ಪರಿಣಾಮ? ಅವಳ ಹೆತ್ತವರ ವೈವಾಹಿಕ ಜೀವನ ಉತ್ತಮಗೊಂಡಿತಾದರೂ, ಕೊರಾಳು ಹೊಟ್ಟೆಯ ಸಮಸ್ಯೆಗಳನ್ನು ಪಡೆದಳು. ಕಾರೊಲಿನ್ ವೆಸ್ಸನ್ ಹೀಗೆ ಅಂತ್ಯಗೊಳಿಸಿದಳು: “ನಿಮ್ಮ ಹೆತ್ತವರು ಅವರ ಸಮಸ್ಯೆಗಳನ್ನು ನಿರ್ವಹಿಸುವಂತೆ ಬಿಟ್ಟುಬಿಡಿರಿ. ಕೇವಲ ಒಬ್ಬ ತರುಣರಾಗಿಯೇ ನಿಮಗೆ ವ್ಯವಹರಿಸಲು ಸಾಕಷ್ಟು ಸಮಸ್ಯೆಗಳಿವೆ.”
ಹೆತ್ತವರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಆಡಿಸಬೇಡಿರಿ: ಕೆಲವು ಯುವಕರು ಮನೆಯಲ್ಲಿನ ಘರ್ಷಣೆಯನ್ನು ಅವರ ಲಾಭಕ್ಕಾಗಿ ಬಳಸಲು ಸಂಚು ಹೂಡುತ್ತಾರೆ. ಅಮ್ಮ “ಇಲ್ಲ!” ಎಂದು ಹೇಳುವಾಗ, ಅವರು ತಂದೆಯ ಮನೋಭಾವಗಳನ್ನು ದುರುಪಯೋಗಿಸುತ್ತಾರೆ ಮತ್ತು “ಹೌದು” ಎಂಬ ಪದವನ್ನು ಅವನಿಂದ ಒತ್ತಾಯದಿಂದ ಹೊರಡಿಸುತ್ತಾರೆ. ಚತುರತೆಯಿಂದ ಹೆತ್ತವರನ್ನು ಬಳಸಿಕೊಳ್ಳುವದು, ಒಬ್ಬನಿಗೆ ಸ್ವಲ್ಪ ಸ್ವಾತಂತ್ರ್ಯವನ್ನು ಗಳಿಸಿಕೊಡಬಹುದು, ಆದರೆ ದೀರ್ಘಕಾಲದಲ್ಲಿ ಅದು ಕೌಟುಂಬಿಕ ಕಲಹವನ್ನು ವಿಸ್ತರಿಸುತ್ತದೆ. ತನ್ನ ಹೆತ್ತವರನ್ನು ನಿಜವಾಗಿ ಗೌರವಿಸುವ ಯುವಕನೊಬ್ಬನು ಇಂಥಹ ಅಧಿಕಾರದ ಆಟವನ್ನಾಡಲು ಕಾರ್ಯಹೂಡುವದಿಲ್ಲ.
ಪರಿಸ್ಥಿತಿಯನ್ನು ಇನ್ನಷ್ಟು ಕೆರಳಿಸಬೇಡಿರಿ: ಸೋಮಾರಿತನ ಯಾ ವಕ್ರ ನಡಾವಳಿಕೆಯು, ಶಾಲೆಯಲ್ಲಿ ತಂತ್ರವನ್ನಾಡುವದು, ನಿಮ್ಮ ದರ್ಜೆಯು ಇಳಿಮುಖವಾಗಲು ಬಿಡುವದು—ಇವು ಸಮಸ್ಯೆಗಳನ್ನು ಇನ್ನಷ್ಟು ಸಂಕಿಷ್ಲಗ್ಟೊಳಿಸುತ್ತವೆ. ನಿಮ್ಮ ವರ್ತನೆಗಳಿಗೆ ಜವಾಬ್ದಾರಿಕೆಯನ್ನು ತೆಗೆದು ಕೊಳ್ಳಿರಿ, ಮತ್ತು ಅಂಕೆಯಿಲ್ಲದ ನಡತೆಗೆ ನಿಮ್ಮ ಹೆತ್ತವರ ಅಪಕರ್ಷಣೆಯು ಒಂದು ನೆವನವಾಗಿರುವಂತೆ ಬಿಡಬೇಡಿರಿ. ಸಹಾಯ ಮಾಡಲು ಮತ್ತು ಸಹಕಾರ ನೀಡಲು ನಿಮ್ಮಿಂದ ಅಗುವದೆಲವ್ಲನ್ನು ಮಾಡಿರಿ.
ಕುಟುಂಬದ ಬಿಕ್ಕಟ್ಟಿನಿಂದ ಪಾರಾಗುವದು
ಸ್ಪಷ್ಟವಾಗಿಗಿ, ನೀವು ನಿಮ್ಮ ಹೆತ್ತವರನ್ನು ಬದಲಾಯಿಸಲಾರಿರಿ. ಆದಾಗ್ಯೂ, ನೀವು ಅವರನ್ನು ಒಳ್ಳೆಯದಕ್ಕಾಗಿ ಪ್ರಭಾವಿಸಲು ಪ್ರಯತ್ನಿಸಬಹುದು. ನೆನಪಿಡಿರಿ, ಪ್ರೀತಿಯು “ಎಲ್ಲವನ್ನು ನಂಬುತ್ತದೆ, ಎಲ್ಲವನ್ನು ನಿರೀಕ್ಷಿಸುತ್ತದೆ, ಎಲ್ಲವನ್ನು ಸಹಿಸಿಕೊಳ್ಳುತ್ತದೆ.” (1 ಕೊರಿಂಥದವರಿಗೆ 13:7) ವಿಷಯಗಳು ಉತ್ತಮಗೊಳ್ಳಲು ಪ್ರಾರ್ಥಿಸುವದನ್ನು ಎಂದೂ ನಿಲ್ಲಿಸಬೇಡಿರಿ. (ಫಿಲಿಪ್ಪಿಯವರಿಗೆ 4:6, 7) ಕೌಟುಂಬಿಕ ಸಲಹೆಗಾರ ಕೆಟ್ಲನ್ ಬಾರ್ಬ್ಯೂ ಇನ್ನಷ್ಟು ಸಲಹೆ ಕೊಟ್ಟಿರುತ್ತಾನೆ: “ಅವರಲ್ಲಿ ಪ್ರತಿಯೊಬ್ಬರನ್ನು ನೀವು ಪ್ರೀತಿಸುತ್ತೀರಿ ಎಂದು ಅವರಿಗೆ (ನಿಮ್ಮ ಹೆತ್ತವರಿಗೆ) ಸ್ವತಂತ್ರವಾಗಿ ತಿಳಿದಿರಲಿ.” ಅದು ಮಾತ್ರವೇ ಕುಟುಂಬ ಬಿಗುಪನ್ನು ಸಡಿಲಿಸಬಹುದು.
ಸಹಾಯವನ್ನು ಪಡೆಯಲು ನೀವು ನಿಮ್ಮ ಹೆತ್ತವರನ್ನು ಒತ್ತಾಯಿಸಲೂ ಪ್ರಯತ್ನಿಸಬಹುದು. ವಾಗ್ವಾದದ ಒಂದು ತಾಪವಿರುವಾಗ ಇದನ್ನು ಮಾಡಬಾರದು. ಜ್ಞಾನೋಕ್ತಿ 25:11 “ಸಮಯೋಚಿತ ಮಾತುಗಳ” ಕುರಿತು ಮಾತಾಡುತ್ತದೆ. ಅದು ವಿಷಯಗಳು ಶಮನಗೊಂಡ ನಂತರ ಮತ್ತು ನಿಮ್ಮ ಹೆತ್ತವರು ಹೆಚ್ಚು ಗ್ರಹಿಸುವ ಮನೋಸ್ಥಿತಿಯಲ್ಲಿರುವಾಗ ಹೆಚ್ಚಿನಾಂಶ ಸಾಧ್ಯವಿದೆ. (ಒಬ್ಬ ಹೆತ್ತವನು⁄ಳು ಅತಿ ಸೂಕ್ಷ್ಮಸಂವೇದಿಯಾಗಿರುವಲ್ಲಿ, ವಿಷಯಗಳನ್ನು ಸಮಂಜಸವಾಗಿ ಚರ್ಚಿಸಲು ಹೆಚ್ಚು ಒಲವು ಇದ್ದವರನ್ನು ಸಮೀಪಿಸಲು ಪ್ರಯತ್ನಿಸಿರಿ.)
ಅವರ ಕಡೆಗೆ ನಿಮಗಿರುವ ಪ್ರೀತಿಯನ್ನು ದೃಢಪಡಿಸುವ ಮೂಲಕ ಆರಂಭಿಸಿರಿ. ಅನಂತರ ಶಾಂತತೆಯಿಂದ, ಅವರ ಕಾದಾಟವು ನಿಮ್ಮನ್ನು ಹೇಗೆ ಬಾಧಿಸುತ್ತದೆ ಎಂದು ಅವರಿಗೆ ವಿವರಿಸಿರಿ. ಇದು ಸುಲಭವಾಗಿರಲಿಕ್ಕಿಲ್ಲ. ಅವರ ಪುಸ್ತಕವಾದ ಟ್ರಬಲ್ ಎಟ್ ಹೋಮ್ (ಮನೆಯಲ್ಲಿ ತೊಂದರೆ)ನಲ್ಲಿ ಸಾರಾ ಗಿಲ್ಬರ್ಟ್ ಒಪ್ಪುತ್ತಾಳೇನಂದರೆ, ಅಂಥಹ ಪ್ರಯತ್ನಗಳು “ಅದು ನಿನ್ನ ಕೆಲಸವಲ್ಲ—ಅದರಿಂದ ದೂರನಿಲ್ಲು!” ಎಂಬ ಮಾತುಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಅವಳು ಉಪದೇಶಿಸುವದೇನಂದರೆ “ಅದು ನಿಮ್ಮ ಕೆಲಸ ಆಗಿದೆ ಎಂದು ನೀವು ಸೃಷ್ಟಗೊಳಿಸುವ ಅಗತ್ಯವಿದೆ.” ಅವರ ಜಗಳವು ನಿಮ್ಮನ್ನು ಹೇಗೆ ಹೆದರಿಸುತ್ತದೆ, ಕ್ಷೋಭೆಗೊಳಿಸುತ್ತದೆ ಮತ್ತು ಸಿಟ್ಟುಗೊಳಿಸುತ್ತದೆ ಎಂದು ಅವರಿಗೆ ಹೇಳಿರಿ. ನೀವು ಅವರ ಜೀವಿತದೊಳಗೆ ತಲೇಹಾಕಲು ಬಯಸುವದಿಲವ್ಲಾದರೂ, ಅವರ ಕಾದಾಟವು ನಿಮ್ಮ ಜೀವಿತವನ್ನು ಬಹಳಷ್ಟು ಭಂಗಗೊಳಿಸುತ್ತದೆ! ನಿಮ್ಮ ಹೆತ್ತವರು ಸಹಾಯವನ್ನು—ಪ್ರಾಯಶಃ ಒಬ್ಬ ವಿಶ್ವಾಸಾರ್ಹ ಹಿರಿಯನನ್ನು ಸಮೀಪಿಸುವದರಿಂದ—ಪಡೆಯಲು ಸಲಹೆ ಕೊಡಿರಿ.a
ಅವರ ವೈವಾಹಿಕ ಕಲಹದ ಪರಿಣಾಮಗಳಿಗೆ ಮುಖಾಮುಖಿ ತರಲ್ಪಟ್ಟಿರುವದರಿಂದ ಮತ್ತು ಅವರ ಸಮಸ್ಯೆಗಳನ್ನು ಸರಿಪಡಿಸಲು ಮತ್ತು—ಪ್ರಾಯಶಃ ಕಾದಾಟವನ್ನು ನಿಲ್ಲಿಸಲೂ ಇರಬಹುದು—ಗಂಭೀರವಾದ ಗಮನವನ್ನು ಕೊಡಲು ನಿಮ್ಮ ಹೆತ್ತವರು ನಡಿಸಲ್ಪಡಬಹುದು. (g89 12⁄8)
[ಅಧ್ಯಯನ ಪ್ರಶ್ನೆಗಳು]
a ನಿಮ್ಮ ಹೆತ್ತವರು ವಿಚಾರಹೀನರು ಇಲ್ಲವೇ ಆಲಿಸಲು ತಯಾರಿಲ್ಲದವರು ಎಂದು ರುಜುವಾದರೆ, ಬಲಿತ ಕ್ರೈಸ್ತನೊಬ್ಬನೊಂದಿಗೆ ವಿಷಯಗಳನ್ನು ತಿಳಿಸುವದು ವಿವೇಕತನದ್ದಾಗಿರಬಹುದು. ಅವನು ಯಾ ಅವಳು ನಿಮ್ಮ ಹೆತ್ತವರ ವಿವಾಹದಲ್ಲಿ ನಡುಪ್ರವೇಶ ಮಾಡಲು ಸಾಧ್ಯವಿಲ್ಲದಿರಬಹುದು, ಆದರೆ ಸುಸ್ವಾಗತಿಸಬಹುದಾದ ಭಾವನಾತ್ಮಕ ಬೆಂಬಲ ಮತ್ತು ಉತ್ತಮ ಬುದ್ಧಿವಾದವನ್ನು ನೀಡಶಕ್ತರು.
[ಪುಟ 18 ರಲ್ಲಿರುವಚಿತ್ರ]
ಹೆತ್ತವರ ವ್ಯಾಜ್ಯಗಳಲ್ಲಿ ಎಳೆಯವರು ಪರಿಣಾಮಕಾರಿಯಾಗಿ ಮಧ್ಯಸಿಕ್ಥೆ ಮಾಡಶಕ್ತರೋ?