ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 23: 1945ರಿಂದ ಮುಂದಕ್ಕೆ ಲೆಕ್ಕಗಳನ್ನು ಇತ್ಯರ್ಥಗೊಳಿಸುವ ಸಮಯ ಸಮೀಪಿಸಿದೆ
“ಜನರ ಸಂತೋಷಕ್ಕಾಗಿ ಮೊದಲನೆಯ ಆವಶ್ಯಕತೆಯು ಧರ್ಮವನ್ನು ರದ್ದುಗೊಳಿಸುವದಾಗಿದೆ.”—ಕಾರ್ಲ್ ಮಾರ್ಕ್ಸ್, 19ನೆಯ ಶತಕದ ಜರ್ಮನ್ ಸಮಾಜ ಶಾಸ್ತ್ರಜ್ಞ ಮತ್ತು ಅರ್ಥ ಶಾಸ್ತ್ರಜ್ಞ
ಕುಟುಂಬದ ಎರಡು ಪಕ್ಕಗಳಲ್ಲಿ ಹಲವಾರು ಯೆಹೂದಿ ರಬ್ಬಿಗಳ ಪೂರ್ವಜರು ಇದ್ದರೂ, ಕಾರ್ಲ್ ಮಾರ್ಕ್ಸ್ನು ಆರನೇ ವಯಸ್ಸಿನಲ್ಲಿ ಪ್ರಾಟೆಸ್ಟಂಟನಾಗಿ ದೀಕ್ಷಾಸ್ನಾನ ಹೊಂದಿದನು. ಆದರೆ ಎಳೆಯ ಪ್ರಾಯದಲ್ಲೇ ಧರ್ಮ ಮತ್ತು ರಾಜಕೀಯತೆಯೊಂದಿಗೆ ನಿರ್ಮೋಹಗೊಂಡನು. ಮಾನವ ಕುಲವು ಎಂದಾದರೂ ಸಂತೋಷವನ್ನು ಪಡೆಯಬೇಕಾದರೆ, ಅವರೆಡನ್ನೂ ಉಗ್ರವಾಗಿ ಬದಲಾಯಿಸಬೇಕೆಂದು ಅವನು ವಾದಿಸಿದ್ದನು.
ಇದರೊಂದಿಗೆ ಬೈಬಲು ಒಪ್ಪುತ್ತದೆ. ಆದರೆ ಮಾರ್ಕ್ಸ್ನಿಂದ ಪ್ರಸ್ತಾಪಿಸಲ್ಪಟ್ಟ ಉಗ್ರವಾದ ಬದಲಾವಣೆಗಳು ನೈಜ ಏಳಿಗೆಯನ್ನು ತರಲಿಲ್ಲ, ಬೈಬಲಿನಿಂದ ಮುಂತಿಳಿಸಲ್ಪಟ್ಟವುಗಳು ಈ ಸಂತತಿಯಲ್ಲಿಯೇ ನೆರವೇರಲ್ಪಟ್ಟು, ಮುಕುಟಪ್ರಾಯವಾದ ಬಾಳುವ ಯಶಸ್ವೀಯಾಗಲಿರುವದು. ಈ ವಿಷಯದಲ್ಲಿ ಅಲ್ಲಿ ಯಾವುದೇ ಸಂದೇಹವಿರ ಸಾಧ್ಯವಿಲ್ಲ.
ವಿಶೇಷವಾಗಿ 1914ರಿಂದ, ಸುಳ್ಳು ಧರ್ಮದ ರಕ್ತಾಪರಾಧವು ಪರಮಾವಧಿಯ ಮಟ್ಟಗಳಿಗೆ ಮುಟ್ಟಿರುತ್ತದೆ. ಅಂದಿನಿಂದ ಸುಳ್ಳು ಧರ್ಮವು ಬೆಳೆಯುತ್ತಿರುವ ಉಪೇಕ್ಷೆಯಿಂದ ಮತ್ತು ಜನಪ್ರಿಯ ಬೆಂಬಲದ ಕೊರತೆಯಿಂದ ಕೂಡ ಬಾಧಿಸಲ್ಪಟ್ಟಿರುತ್ತದೆ. (ಈ ಶ್ರೇಣಿಯ ಮೊದಲ ಎರಡು ಲೇಖನಗಳನ್ನು ನೋಡಿರಿ.) ಇದಕ್ಕೆ ವ್ಯತಿರಿಕ್ತವಾಗಿ, ಸತ್ಯ ಧರ್ಮವು ವರ್ಷದಿಂದ ವರ್ಷಕ್ಕೆ ಹೆಚ್ಚು ವಿಶಿಷ್ಟಕರವಾದ ರೀತಿಯಲ್ಲಿ ವೃದ್ಧಿಯಾಗುತ್ತಾ ಇದೆ.
ಆದರೆ, ಇನ್ನೂ ಏನು ಬರಲಿದೆ? ಹಿಂದೆಂದಿಗಿಂತಲೂ ಹೀಗೆ ಕೇಳುವದು ಹೆಚ್ಚು ತಕ್ಕದ್ದಾಗಿರುತ್ತದೆ, ಗತಕಾಲದ ನೋಟದಲ್ಲಿ ಧರ್ಮದ ಭವಿಷ್ಯತ್ತು ಏನು?
ಬೈಬಲು ಏನು ಹೇಳುತ್ತದೆ?
ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಕದ ಘಟನೆಗಳು ಈ ವಿಷಯದ ಮೇಲೆ ಬೆಳಕನ್ನು ಬೀರುತ್ತವೆ. ಸುಳ್ಳು ಧರ್ಮವನ್ನು ಸ್ವೀಕರಿಸಿದ್ದರ ಕಾರಣ, ಆ ಜನಾಂಗದ ವಿರುದ್ಧ ಮುಂತಿಳಿಸಿದ್ದ ದೇವರ ನ್ಯಾಯತೀರ್ಪಿನ ಜ್ಯಾರಿಗೊಳಿಸುವಿಕೆಯ ಪರಮಾವಧಿಯ ಒಂದು ಭವಿಷ್ಯವನ್ನು ಇಸ್ರಾಯೇಲ್ ಮುಖಮಾಡಿ ನಿಂತಿತ್ತು. ಆದರೆ ಯೆಹೂದಿ ವ್ಯವಸ್ಥೆಯೊಂದಿಗೆ ನಾಶನವನ್ನು ಪಾರಾಗಲು ಸತ್ಯ ಧರ್ಮವನ್ನು ಆಚರಿಸುತ್ತಿದವ್ದರಿಗೆ ಒದಗಿಸುವಿಕೆಯನ್ನು ಮಾಡಲಾಗಿತ್ತು. ಯೇಸುವು ತನ್ನ ಶಿಷ್ಯರಿಗೆ ಅಂದದ್ದು: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟು ಹೋಗಲಿ.”—ಲೂಕ 21: 20, 21.
ಸಾ.ಶ. 66ರಲ್ಲಿ ರೋಮನ್ ಸೇನೆಗಳು ಯೆರೂಸಲೇಮನ್ನು ಮುತ್ತಿಗೆ ಹಾಕಿದವು. ಆದರೆ ಫಕ್ಕನೇ ಸೇನೆಗಳು ಹಿಂದೆ ಸರಿದವು, ಇದು ಸುರಕ್ಷತೆಗಾಗಿ ಪಲಾಯನ ಮಾಡುವಂತೆ ಕ್ರೈಸ್ತರಿಗೆ ಒಂದು ಅವಕಾಶವನ್ನು ಕೊಟ್ಟಿತು. ರೋಮನರು ಇನ್ನೊಮ್ಮೆ ಹಿಂದಕ್ಕೆ ಬಂದು ನಗರಕ್ಕೆ ಮುತ್ತಿಗೆ ಹಾಕಿ, ಕಟ್ಟಕಡೆಗೆ ಅದರೊಳಗಿದ್ದ ಜನರ ಭಯಂಕರ ಜೀವನಷ್ಟದೊಂದಿಗೆ ತಮ್ಮ ಹಸ್ತಗತಮಾಡಿಕೊಂಡಾಗ, ಧರ್ಮಭೃಷ್ಟ ಇಸ್ರಾಯೇಲ್ ದಂಡನೆಯನ್ನು ಪಾರಾಯಿತು ಎಂಬ ಯಾವುದೇ ಕಲ್ಪನೆಯು ಇಲ್ಲವಾಯಿತು. ಯೆಹೂದ್ಯರ ಕೊನೆಯ ಭದ್ರಕೋಟೆಯಾಗಿದ್ದ ಮಸಾಡವು ಮೂರು ವರ್ಷಗಳ ನಂತರ ಪತನಗೊಂಡಿತು. ಆದಾಗ್ಯೂ, ನಂಬಿಗಸ್ತ ಕ್ರೈಸ್ತರಿಂದ ಆಚರಿಸಲ್ಪಟ್ಟ ಸತ್ಯ ಧರ್ಮವು ಪಾರಾಗಿ ಉಳಿಯಿತು.
ಈಗ ನಮ್ಮ ಸಂತತಿಯಲ್ಲಿ, ಸುಳ್ಳು ಧರ್ಮದ ಸಮಗ್ರ ಲೋಕ ಸಾಮ್ರಾಜ್ಯವು ವಿಪತ್ತಿನೊಂದಿಗೆ ಮುಖಮಾಡಿ ನಿಂತಿದೆ. ದೈವಿಕ ನ್ಯಾಯತೀರ್ಪನ್ನು ಜ್ಯಾರಿಗೊಳಿಸಲು, ಪುನೊಮ್ಮೆ “ದಂಡುಗಳು” ತಯಾರಾಗುತ್ತಾ ಇವೆ. ಪಾಕ್ಷ್ ರೋಮಾನಾ (ರೋಮನ್ ಶಾಂತಿ) ಯನ್ನು ಕಾಪಾಡಲು ರೂಪಿಸಲ್ಪಟ್ಟ ಮೊದಲನೆಯ ಶತಕದ ರೋಮನ್ ಸೇನೆಯಂತೆ, ಇಂದಿನ ದಂಡುಗಳು ಕೂಡ ಶಾಂತಿ-ಪಾಲನಾ ಸಾಧನಗಳಾಗಿವೆ. ಬೈಬಲಿನ ಪ್ರವಾದನೆಯು ಸೂಚಿಸುವದೇನಂದರೆ ಸಂಯುಕ್ತ ರಾಷ್ಟ್ರ ಸಂಘದ ಜನಾಂಗಗಳ ಮಿಲಿಟರಿ ಶಕ್ತಿಗಳು, ಆಧುನಿಕ ದಿನದ ಯೆರೂಸಲೇಮ್, ಕ್ರೈಸ್ತಧರ್ಮ ಹಾಗೂ ಮಹಾ ಬಾಬೇಲಿನ ಇತರ ಭಾಗಗಳು ಸಹಿತ, ಕೊನೆಗೂ ಲೆಕ್ಕವನ್ನು ಇತ್ಯರ್ಥಗೊಳಿಸಲು ಯೆಹೋವನ ಸಾಧನಗಳಾಗಲಿರುವವು.—ಪ್ರಕಟನೆ 17:7, 16.
ಇದು ಯಾವಾಗ ಸಂಭವಿಸಲಿರುವದು? ಮೊದಲನೆಯ ಥೆಸಲೊನೀಕ 5:3 ಉತ್ತರಿಸುವದು: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.”
“ಶಾಂತಿಯ ವ್ಯಾಧಿ”
ಅಮೆರಿಕದ ಮಾಜೀ ಸೆಕ್ರಟರಿ ಆಫ್ ಸ್ಟೇಟ್, ಜೋರ್ಜ್ ಶುಲ್ಶ್ 1988ರಲ್ಲಿ ಹೇಳಿದ್ದೇನಂದರೆ, “ಎಲ್ಲಾ ಕಡೆಗಳಲ್ಲಿ ಶಾಂತಿಯು ಹೊರಹೊಮ್ಮುತ್ತಾ ಇದೆ.” “ಶಾಂತಿಯ ಒಂದು ವ್ಯಾಧಿಯ” ಕುರಿತು ಒಬ್ಬ ವಿದೇಶಿ ಧೋರಣೆಯ ತಜ್ಞನು ಮಾತಾಡಿದನು. ಜರ್ಮನ್ನ ಪ್ರತಿಷ್ಠೆಯ ಡಯ್ ಜೆಯಟ್ ಸಾಪ್ತಾಹಿಕವು ಕೇಳಿದ್ದು: “ವಿನಾಶಗಳೊಂದಿಗೆ ಅಷ್ಟೊಂದು ಒಳ್ಳೆಯ ರೀತಿಯಲ್ಲಿ ಗೊತ್ತು ಮಾಡಿಕೊಂಡಿರುವ ಈ ಶತಮಾನವು, ಅದರ ಕೊನೆಯ ಶತಕವನ್ನು ನಾಶನದ ಒಂದು ಅಂತ್ಯ ಮತ್ತು ಶಾಂತಿಭರಿತ ರಚನೆಯ ಒಂದು ಶಕೆಯ ಆರಂಭದೊಂದಿಗೆ ಗುರುತಿಸಲ್ಪಡಲಿದೆಯೇ?” ಮತ್ತು ಟೈಮ್ ಪತ್ರಿಕೆಯು ಅಂದದ್ದು: “ಇರಾನ್-ಇರಾಕ್ನ್ನು, ಕಂಪೂಚಿಯ, ಅಪ್ಘಾನಿಸ್ಥಾನ್, ದಕ್ಷಿಣ ಆಫ್ರಿಕ ಮತ್ತು ಮಧ್ಯ ಅಮೆರಿಕವನ್ನು ಸಹಿತ, ಶಾಂತಿಯು ಬೆದರಿಕೆಯನ್ನೊಡ್ಡುತ್ತಾ ಇದೆ.”
1989ರ ವರ್ಷವು ಕೂಡ ಶಾಂತಿ ಮಾತುಕತೆಗಳಿಂದ ತುಂಬಿದ್ದಾಗಿತ್ತು. ಫೆಬ್ರವರಿಯಲ್ಲಿ ಜರ್ಮನ್ ವಾರ್ತಾಪತ್ರ ಸಡ್ಯೂಟ್ಶಇ ಜೈಟುಂಗ್ ಸಂಪಾದಕೀಯದಲ್ಲಿ ಹೇಳಿದ್ದು: “ಸುಮಾರು 1985ರಿಂದ ಲೋಕಶಕ್ತಿಗಳು ತಮ್ಮ ಪಂಜಗಳನ್ನು ಕೇವಲ ಎಳೆಯುವದಕ್ಕಿಂತ ಹೆಚ್ಚನ್ನು ಮಾಡಿದ ಒಂದು ಹಂತದಲ್ಲಿ ನಾವು ಜೀವಿಸುತ್ತಾ ಇದ್ದೇವೆ. . . . ಇಂದು ಎರಡು ಲೋಕಶಕ್ತಿಗಳು ಒಮ್ಮುಖವಾಗಿರದ ಸ್ಥಳ ಭೂಮಿಯ ಮೇಲೆ ಇಲ್ಲ. . . . ಯಾವುದೇ ಗತಿಯಲ್ಲಿ, ಶುಭಲಕ್ಷಣಗಳು ಹಿಂದೆಂದೂ ಇಷ್ಟೊಂದು ಅನುಕೂಲಕರವಾಗಿರಲಿಲ್ಲ, ಎರಡೂ ಪಕ್ಷಗಳು ಇಷ್ಟೊಂದು ಗಂಭೀರವಾಗಿರಲಿಲ್ಲ, ಮತ್ತು ಸರಿಯಾದ ದಿಕ್ಕಿನಲ್ಲಿ ಇಷ್ಟೊಂದು ಹೆಜ್ಜೆಗಳನ್ನು ಏಕ ಸಮಯದಲ್ಲಿ ತಕ್ಕೊಂಡಿರಲಿಲ್ಲ.”
ಕೇವಲ ಎಂಟು ವರ್ಷಗಳಷ್ಟು ಇತ್ತೀಚೆಗೆ, ವಿಷಯಗಳು ಇಷ್ಟೊಂದು ಉಜ್ವಲವಾಗಿ ತೋರುತ್ತಿರಲಿಲ್ಲ. ವಾರ್ತಾ ವರದಿಗಾರ ಲಾರ್ಸನ್ ಅವಲೋಕಿಸಿದ್ದು, “1983ರಲ್ಲಿ ಲೋಕದ ಎಲ್ಲಾ ಧಾರ್ಮಿಕ ಮುಂದಾಳುಗಳು ‘ಶಾಂತಿ, ಶಾಂತಿ’ ಎಂದು ಕೂಗಿದರೂ ಕೂಡ, ಶಾಂತಿಯು ಅಲ್ಲಿ ಇರಲಿಲ್ಲ.” ಹಾಗಾದರೆ ಆಶ್ಚರ್ಯವನ್ನುಂಟುಮಾಡುವ ಲೋಕ ಘಟನೆಗಳು 1 ಥೆಸಲೊನೀಕ 5:3ರ ಒಂದು ನೆರವೇರಿಕೆಯೋ? ನಾವು ಹೇಳಶಕ್ತರಲ್ಲ. ಆದಾಗ್ಯೂ, ಇಂದು ದಶಂಬರ, 1991ರಲ್ಲಿ ಇದು ಸುಸ್ಪಷ್ಟ ಏನಂದರೆ “ಶಾಂತಿ ಮತ್ತು ಭದ್ರತೆ” ಯು ಜ್ಯಾರಿಗೆ ಬರುವದು ಹಿಂದಿಗಿಂತಲೂ ಹೆಚ್ಚು ಸಮೀಪಿಸಿದೆ.
ಧಾರ್ಮಿಕ ಮುಂದಾಳುಗಳು ಪರಿಶ್ರಮಿಸುತ್ತಿದ್ದಾರೆ—ಯಾಕಾಗಿ?
ಲಾರ್ಸನ್ನು ತೋರಿಸುವಂತೆ, ಶಾಂತಿಯನ್ನು ಬೆನ್ನಟ್ಟುವದರಲ್ಲಿ ಧಾರ್ಮಿಕ ಮುಖಂಡರು ಏನೂ ನಿಷ್ಕ್ರಿಯರಾಗಿರುವದಿಲ್ಲ. 1983ರ ಅವನ ವಿಮರ್ಶೆಯನ್ನು ಮುಂದರಿಸುತ್ತಾ, ಜೋನ್ ಪೌಲ್ II ಮಧ್ಯ ಅಮೆರಿಕ ಮತ್ತು ಕ್ಯಾರಿಬಿಯನ್ ದ್ವೀಪಗಳಿಗೆ ಮಾಡಿದ “ಶಾಂತಿಯ ತೀರ್ಥಯಾತ್ರೆ”ಗಳ ಕುರಿತು ಉಲ್ಲೇಖಿಸುತ್ತಾನೆ. ಆ ವರ್ಷದಲ್ಲಿ, ಅಮೆರಿಕದ ಕ್ಯಾಥಲಿಕ್ ಬಿಶಪರುಗಳ ರಾಷ್ಟ್ರೀಯ ಪರಿಷತ್ತು (ನ್ಯಾಶನಲ್ ಕಾನ್ಫರೆನ್ಸ್ ಆಫ್ ಕ್ಯಾಥಲಿಕ್ ಬಿಶಪ್ಸ್) “ಶಾಂತಿಯ ಒಂದು ಪಂಥಾಹ್ವಾನ” ಎಂಬ ನಾಮಾಂಕಿತವಿರುವ ಒಂದು ಅಧಿಕೃತ ಧಾರ್ಮಿಕ ಪತ್ರವನ್ನು ಅಂಗೀಕಾರ ಮಾಡಿತು. ಕೊಂಚವೇ ಸಮಯದ ನಂತರ, 100 ದೇಶಗಳ 300ಕ್ಕಿಂತಲೂ ಹೆಚ್ಚು ಚರ್ಚುಗಳಿಂದ ಪ್ರತಿನಿಧಿಗಳು, ಚರ್ಚುಗಳ ಲೋಕ ಕೌನ್ಸಿಲಿನ ಆರನೆಯ ಸಾಮಾನ್ಯ ಸಮ್ಮೇಳ (ಜನರಲ್ ಎಸೆಂಬ್ಲಿ ಆಫ್ ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್) ದಲ್ಲಿ ಒಟ್ಟಾಗಿ ಸೇರಿದರು ಮತ್ತು ತದ್ರೀತಿಯ ಒಂದು ನಿರ್ಧಾರಕ್ಕೆ ಸಮ್ಮತಿಯನ್ನಿತ್ತರು. ಹಲವು ಪ್ರಾಟೆಸ್ಟಂಟ್ ಇವಾಂಜಲಿಕಲ್ರುಗಳು ಕೂಡ, ಲಾರ್ಸನ್ ಕರೆದಿರುವಂತಹ “ಶಾಂತಿಯ ಕುರಿತಾಗಿ ಭೌಗೋಳಿಕ ಪೂರ್ವಾಕ್ರಮಣ” ಒಂದರಲ್ಲಿ ಒಳಗೂಡಿದ್ದರು.
1948ರಲ್ಲಿ ಅದರ ಸ್ಥಾಪನೆಯ ಮತ್ತು 1966ರ ಅದರ ಕಾನ್ಫರೆನ್ಸ್ನಲ್ಲಿ ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ ವಿಧ್ವಂಸಕತೆಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವದರ ವಿರುದ್ಧ ಬಲವಾಗಿ ಮಾತಾಡಿತ್ತು. ತದ್ರೀತಿಯಲ್ಲಿ, ಒಂದು ಡಜನ್ ಅಷ್ಟು ವೈದಿಕರು ಮತ್ತು ದೇವತಾಶಾಸ್ತ್ರಜ್ಞರು ಶಾಂತಿಗಾಗಿ ಆಯುಧಗಳನ್ನು ತೆಗೆದುಕೊಂಡರು, ಅವರಲ್ಲಿ ಜರ್ಮನ್ ಪ್ರಾಟೆಸ್ಟಂಟ್ ಹೆಲ್ಮಟ್ ಗೊಲ್ವಿಝರ್ರಂಥಹ ಪುರುಷರಿದ್ದರು. 1989ರ ಆರಂಭದಲ್ಲಿ ಅವನ 80ನೆಯ ಜನ್ಮದಿನದ ಸಂದರ್ಭದಲ್ಲಿ, ಅವನನ್ನು ಒಂದು ಸ್ವಿಸ್ ಪ್ರಾಟೆಸ್ಟಂಟ್ ಸಾಪ್ತಾಹಿಕವು ಅವನನ್ನು “ರಾಜಕೀಯವಾಗಿ ತೊಡಗಿಸಲ್ಪಟ್ಟ ದೇವತಾ ಶಾಸ್ತ್ರಜ್ಞನಾಗಿದ್ದು, ಯಾವಾಗಲೂ ಶಾಂತಿಗಾಗಿ ದುಡಿದನು” ಎನ್ನುತ್ತಾ ಅವನು “ಅವನ ಬೋಧನೆಗಳ ಮತ್ತು ರಾಜಕೀಯ ಕಟ್ಟುಪಾಡುಗಳ ಮೂಲಕ ಅನೇಕ ದೇವತಾ ಶಾಸ್ತ್ರಜ್ಞರನ್ನು ಮತ್ತು ಚರ್ಚಿನೊಳಗೆಯೂ ಕೂಡ ಶಾಂತಿ ಚಳುವಳಿಯನ್ನು ಪ್ರಭಾವಿಸಿದನು” ಎಂದು ಹೊಗಳಿತು.
ಈ ರೀತಿಯಲ್ಲಿ, ಮಹಾ ಬೆಬಿಲೊನ್ 1986ರ ಅಂತರ್ರಾಷ್ಟ್ರೀಯ ಶಾಂತಿ ವರ್ಷಕ್ಕೆ ಬೆಂಬಲವನ್ನು ಕೊಟ್ಟದ್ದರಲ್ಲಿ ಏನೂ ಆಶ್ಚರ್ಯವಿಲ್ಲ, ಇದನ್ನು ಸಂಯುಕ್ತ ರಾಷ್ಟ್ರ ಸಂಘವು ನೇಮಕ ಮಾಡಿದ್ದು, ಅದರ ಒಂದು ಧ್ಯೇಯದಲ್ಲಿ “ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು” ಅದು ಕರೆಯನ್ನಿತ್ತಿದೆ. ಆ ವರ್ಷದಲ್ಲಿ ಕ್ಯಾಥಲಿಕ್ ಪೋಪ್, ಆಂಗ್ಲಿಕನ್ ಆರ್ಚ್ಬಿಶಪ್ ಆಫ್ ಕ್ಯಾಂಟರ್ಬರಿ, ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವವರು, ಬೌದ್ಧರು, ಹಿಂದುಗಳು, ಮುಸ್ಲಿಮರು, ಆಫ್ರಿಕನ್ ಸರ್ವಚೇತನವಾದಿಗಳು, ಸ್ಥಳೀಯ ಅಮೆರಿಕನು (ಇಂಡಿಯನರು), ಯೆಹೂದ್ಯರು, ಸಿಖ್ರು, ಜೊರೊಸ್ಟ್ರಿಯನರು, ಶಿಂಟೋಯಿಸ್ಟರು, ಮತ್ತು ಜೈನರು, ಹೀಗೆ 700 ಇತರ ಧರ್ಮಗಳ ಮುಖಂಡರು ರೋಮಿನ ಪಕ್ಕದ ಆಶಿಶಿಯಲ್ಲಿ ಶಾಂತಿಯ ಪರವಾಗಿ ಪ್ರಾರ್ಥಿಸಲು ಒಟ್ಟಾಗಿ ಸೇರಿದರು.
ಜನವರಿ 1989ರಲ್ಲಿ ಆಷ್ಟ್ರೇಲಿಯಾದ ಸಿಡ್ನೀಯಲ್ಲಿ, ಸಂಡೇ ಟೆಲಿಗ್ರಾಫ್ ಬರೆದದ್ದು, “ಬೌದ್ಧ ಧರ್ಮದ, ಕ್ರೈಸ್ತ, ಹಿಂದು, ಯೆಹೂದ್ಯ, ಮುಸ್ಲಿಮ್, ಸಿಖ್, ಯುನಿಟೆರಿಯನ್, ಬಹಾಯ್, ಕನ್ಫೂಶಿಯನ್, ಜೈನ್, ಶಿಂಟೋ, ಟಾವೋ, ರಾಜಾ ಯೋಗ ಮತ್ತು ಜೊರೊಸ್ಟ್ರಿಯನ್ ಮತದ” ಸದಸ್ಯರು ಧರ್ಮ ಮತ್ತು ಶಾಂತಿಯ ಐದನೆಯ ವರ್ಲ್ಡ್ ಕಾನ್ಫರೆನ್ಸ್ನ ಸಮ್ಮೇಳನಕ್ಕಾಗಿ ಮೇಲ್ಬೊರ್ನ್ನಲ್ಲಿ ಒಟ್ಟಾಗಿ ಸೇರಿದರು. ವೈಶಿಷ್ಟಮಯವಾಗಿಯೇ, “ಸುಮಾರು 85 ದೇಶಗಳಿಂದ ಬಂದ 600 ಪ್ರತಿನಿಧಿಗಳು . . . ಧಾರ್ಮಿಕ ಭಿನ್ನತೆಗಳಿಂದ ಉಂಟಾದ ಉದ್ರೇಕಗಳು ದೀರ್ಘಕಾಲದಿಂದ ದುರುಪಯೋಗಿಸಲ್ಪಟ್ಟಿರುವವು, ಇದು ಯುದ್ಧದ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಅಂಗೀಕಾರ ಮಾಡಿದರು.”
ಶಾಂತಿಯ ಅನ್ವೇಷಣೆಯಲ್ಲಿ ಧಾರ್ಮಿಕ ಒಳಗೂಡುವಿಕೆಯು, ಸಂಯುಕ್ತ ರಾಷ್ಟ್ರ ಸಂಘದ ಮಾಜಿ ಮಹಾ ಕಾರ್ಯದರ್ಶಿ ಡಾಗ್ ಹ್ಯಾಮರ್ಶಿಲ್ಡ್ ಒಮ್ಮೆ ಹೇಳಿದ್ದನ್ನು ಸ್ಥಿರೀಕರಿಸುತ್ತದೆ: “ಅವರ ಮತಸೂತ್ರ ಯಾ ಆರಾಧನೆಯ ರೀತಿ ಯಾವುದೇ ಆಗಿದ್ದರೂ ಅದನ್ನು ಗಣನೆಗೆ ತಾರದೆ, ಭೂಮಿಯ ಮೇಲೆ ಶಾಂತಿಯನ್ನು ಸ್ಥಾಪಿಸಲು ಮಾಡುವ ಸುಚಿತ್ತದ ಎಲ್ಲಾ ಮನುಷ್ಯರ ಪ್ರಯತ್ನಗಳಲ್ಲಿ, [ಸಂಯುಕ್ತ ರಾಷ್ಟ್ರ] ಸಂಘವು ಮತ್ತು ಚರ್ಚುಗಳು, ಅಕ್ಕ-ಪಕ್ಕದಲ್ಲಿ ನಿಲ್ಲುವ ಸಹಭಾಗಿಗಳಾಗಿರುತ್ತಾರೆ.”
ಮಹಾ ಬೆಬಿಲೊನ್ನ ಪ್ರತಿಭಟನೆಯ ಮೆರವಣಿಗೆಗಳು, ಅವಳ ಸಾರ್ವಜನಿಕ ಪ್ರದರ್ಶನಗಳು, ಮತ್ತು ರಾಜಕೀಯ ವ್ಯವಹಾರಗಳಲ್ಲಿ ಅವಳ ಅತಿ ಕುಟಿಲ ರೀತಿಯ ಧಾರ್ಮಿಕ ಹಸ್ತಕ್ಷೇಪಗಳ ಹೊರತಾಗಿಯೂ, ಅವಳ ನಾಶನಕ್ಕೆ ಅದು ನಡಿಸುವದು.a ಈಗಾಗಲೇ ಗಮನಾರ್ಹವಾದ ತಿಕ್ಕಾಟಕ್ಕೆ ಇದು ಕಾರಣವಾಗಿದೆ, ದಕ್ಷಿಣ ಆಫ್ರಿಕದ ಒಬ್ಬ ಡೊಮಿನಿಕನ್ ಕ್ರಮದ ಪಾದ್ರಿ ಆಲ್ಬರ್ಟ್ ನೊಲನ್ ಇತ್ತೀಚೆಗೆ ಅದನ್ನು ಒಪ್ಪಿರುತ್ತಾನೆ: “ದೇವರ ಚಿತ್ತಕ್ಕನುಸಾರ ಶಾಂತಿಯನ್ನು ಪರಿಣಾಮಕಾರಿಯಾಗಿ ದೊರಕಿಸಿ ಕೊಳ್ಳುವ ಒಂದೇ ವಿಧಾನವು ಕಾದಾಟದಲ್ಲಿ ಸೇರಿಕೊಳ್ಳುವದೇ ಆಗಿದೆ. . . . ಶಸ್ತ್ರಸಂಚಯ ಕಡಿಮೆಗೊಳಿಸಬೇಕಾದರೆ, ಸರಕಾರದೊಂದಿಗೆ ಸಂಘರ್ಷಣೆಯು ಹೆಚ್ಚು ಕಡಿಮೆ ತಪ್ಪಿಸಲಾಗದ ಒಂದು ಸಂಗತಿಯಾಗಿದೆ.”
ಮಹಾ ಬೆಬಿಲೊನ್ ಶಾಂತಿಗಾಗಿ ಅರಚಲಿ. ಪೋಪ್ ತನ್ನ ಸಾಂಪ್ರದಾಯಿಕ ಅರ್ಬಿ ಇಟ್ ಒರ್ಬಿ ([ರೋಮ್] ನಗರಕ್ಕೆ ಮತ್ತು ಲೋಕಕ್ಕೆ) ಆಶೀರ್ವಾದವನ್ನು ಕ್ರಿಸ್ಮಸ್ ಮತ್ತು ಈಸ್ಟರ್ನಲ್ಲಿ ಕೊಡುವದನ್ನು ಮುಂದರಿಸಲಿ. ಕಳೆದ ಮೇಯಲ್ಲಿ ಅವರು ಮಾಡಿದಂತೆ—ಇಂದಿನ ರಾಜಕೀಯ ಬಿಗುಪುಗಳ ಸಡಿಲುಗೊಳಿಸುವಿಕೆಯು “ಕ್ರೈಸ್ತ” ಪ್ರಾರ್ಥನೆಗಳಿಗೆ ದೇವರ ಉತ್ತರವೆಂದು ಅವನು ಭಾವಿಸುವದನ್ನು ಮುಂದರಿಸಲಿ. ಶಾಂತಿಯ ನುಡಿಗಳನ್ನು ಬಾಯಿತುಂಬಾ ಹೇಳುವದರ ಮೂಲಕ ಮತ್ತು ಸ್ವತಃ ದೇವರ ಆಶೀರ್ವಾದಗಳೆಂದು ಭಾವಿಸಿಕೊಳ್ಳುವದರ ಮೂಲಕ ಮಹಾ ಬೆಬಿಲೊನ್ ತನ್ನ ಗತಕಾಲದ ರಕ್ತಾಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾನವರ ನಡುವೆ ಮತ್ತು ದೇವರ ಮತ್ತು ಮಾನವರ ನಡುವಣ ಶಾಂತಿಗೆ ಒಂದು ಅತಿ ಮಹಾ ಅಡ್ಡಿಯಾಗಿ ಎಂದೆಂದಿಗೂ ಅಸ್ತಿತ್ವದಲ್ಲಿದ್ದದ್ದು ಎಂಬದಾಗಿ ಅದು ಗುರುತಿಸುತ್ತದೆ. ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಮಾನವ ಕುಲದ ಪ್ರತಿಯೊಂದು ಸಮಸ್ಯೆಯನ್ನು ಅವಳ ಬಾಗಲಲ್ಲಿ ಮೂಲವನ್ನು ಕಂಡುಕೊಳ್ಳಬಹುದು!
ಸುಳ್ಳು ಧರ್ಮವು ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಅದೇ “ಶಾಂತಿ ಮತ್ತು ಭದ್ರತೆ”ಯನ್ನು ತರುವದರಲ್ಲಿ ಹೆಣಗುವದರಲ್ಲಿ ಮುಂದರಿಯುತ್ತಿರುವಾಗ, ಅದು ತಾನೇ ಅವಳ ನಾಶನವನ್ನು ತ್ವರಿತಗೊಳಿಸುವದು ಎಷ್ಟೊಂದು ಹಾಸ್ಯವ್ಯಂಗ ಪ್ರಯೋಗವಾಗಿದೆ! ಸುಳ್ಳು ಧರ್ಮದ ಅಂತ್ಯವು ಸತ್ಯ ಧರ್ಮದ ದೇವರನ್ನು ಸಮರ್ಥಿಸುತ್ತದೆ, ಅವನನ್ನುವದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುವನು.”—ಗಲಾತ್ಯ 6:7.
ಸಮಯವನ್ನು ವ್ಯರ್ಥಗೊಳಿಸಬೇಡಿರಿ—ನಿಮ್ಮ ಜೀವಕ್ಕಾಗಿ ಪಲಾಯನ ಮಾಡಿರಿ
ಸುಳ್ಳು ಧರ್ಮಕ್ಕೆ ತನ್ನ ಲೆಕ್ಕವನ್ನು ಇತ್ಯರ್ಥಗೊಳಿಸುವ ಸಮಯವು ಸಮೀಪಿಸಿದೆ! ಜೀವನಷ್ಟದ ಹಾನಿಯನ್ನು ತಪ್ಪಿಸಿಕೊಳ್ಳುವ ಒಂದೇ ಒಂದು ದಾರಿ ಅವಳನ್ನು ತಡಮಾಡದೇ, ತೊರೆಯುವದೇ. (ಪ್ರಕಟನೆ 18:4) ನಾಶನದ ಕೊನೆಯ ವಿಪರ್ಯಸ್ತ ಎಣಿಕೆಯು ಈಗಾಗಲೇ ಆರಂಭಗೊಂಡಿದೆ.
ದೇವರ ಸುಂದರಮಯ ಭೂಮಿಯು ಕೃತಕ ಧರ್ಮ ಮತ್ತು ಕಪಟ ಧಾರ್ಮಿಕ ರಾಷ್ಟ್ರೀಯತೆಯಿಂದ ಶುಭ್ರಗೊಳಿಸಲ್ಪಟ್ಟ ನಂತರ, ದೈವಿಕ ಸರಕಾರದ ಕೆಳಗೆ ಕೇವಲ ಒಂದೇ ಒಂದು ಸತ್ಯ ಧರ್ಮವು ಉಳಿಯುವದು. ಇವೆಲ್ಲಾ ಪ್ರಚಂಡ ಬದಲಾವಣೆಗಳಿಂದ ಪಾರಾಗುವ ವ್ಯಕ್ತಿಗಳಿಗೆ ಎಂಥಹ ಒಂದು ಉದ್ರೇಕದ ಹೊರನೋಟವಿರುವದು! ಅವರಲ್ಲಿ ನೀವು ಇರುವಿರೋ? “ಸತ್ಯ ಧರ್ಮದ ಶಾಶ್ವತ ಸೌಂದರ್ಯಗಳು” ಇದರಲ್ಲಿ ಸದಾಕಾಲ ಸಂತೋಷಿಸಲು ನೀವು ಇಚ್ಛಿಸುವಿರೋ? ಹಾಗಿರುವದಾದರೆ ಜನವರಿ 8, 1992ರ ಎಚ್ಚರ!ದಲ್ಲಿರುವ, ಈ ಶ್ರೇಣಿಯ ಕೊನೆಯ ಲೇಖನವನ್ನು ಓದುವದರ ಮೂಲಕ ಕಲಿಯಿರಿ! (g89 12/8)
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಮತ್ತು ಟ್ರ್ಯಾಕ್ಟ್ ಸೊಸೈಟಿಯು ಪ್ರಕಾಶಿಸಿದ ರೆವಲೇಶನ್—ಇಟ್ಸ್ ಗ್ರಾಂಡ್ ಕ್ಲೈಮೆಕ್ಷ್ ಎಟ್ ಹ್ಯಾಂಡ್! ಪುಸ್ತಕವು ಇದು ಅಗುವ ವಿಧವನ್ನು ವಿವರಿಸುತ್ತದೆ.
[ಪುಟ 25ರಲ್ಲಿರುವಚೌಕ]
ಶಾಂತಿ ಮತ್ತು ಭದ್ರತೆಗೆ ಹುಡುಕಾಟ
ಅಧಿಕಾಂಶ ವ್ಯಕ್ತಿಗಳಿಗೆ ಶಾಂತಿ ಮತ್ತು ನೆಮ್ಮದಿಗಾಗಿ ಒಂದು ಸ್ವಾಭಾವಿಕ ಆಶೆಯಿರುತ್ತದೆ, ಆದರೆ ಅಂತಹ ಆಶೆಯು ಮಾನವ ಇತಿಹಾಸದಲ್ಲೆಲ್ಲಾ ಕೆಡಿಸಲ್ಪಟ್ಟಿದೆ. ಇತ್ತೀಚೆಗಿನ ವರ್ಷಗಳಲ್ಲಾದರೋ, ಶಾಂತಿಗಾಗಿ ಮಾನವನ ಹುಡುಕಾಟದಲ್ಲಿ ಕೆಲವು ಗಮನಾರ್ಹ ಗಳಿಕೆಯನ್ನು ಮಾಡಿರುವದನ್ನು ಈ ಕೆಳಗಿನ ಪಟ್ಟಿಯು ತೋರಿಸುತ್ತದೆ:
1985: (ಅಕ್ಟೋಬರ) ಸಂಯುಕ್ತ ರಾಷ್ಟ್ರ ಸಂಘವು ತನ್ನ 40ನೆಯ ಹುಟ್ಟುಹಬ್ಬವನ್ನು ಆಚರಿಸಿತು ಮತ್ತು 1986ನೆಯ ವರ್ಷವನ್ನು ಅಂತರ್ರಾಷ್ಟ್ರೀಯ ಶಾಂತಿ ವರ್ಷವೆಂದು ಘೋಷಿಸಿತು.
(ನವಂಬರ) ಆರು ವರ್ಷಗಳಲ್ಲಿ ಲೋಕ ಶಕ್ತಿಗಳ ಮೊದಲ ಶಿಖರ ಸಮ್ಮೇಳವು, ಗೊರ್ಬಚೆವ್ ಮತ್ತು ರೀಗನ್ ಭೇಟಿಯಾದಾಗ ನಡೆಯಿತು; ರೀಗನರು ಒಂದು “ಹೊಸ ಆರಂಭ”ದ ಕುರಿತು ಮಾತಾಡಿದರು.
1986: (ಜನವರಿ) ಗೊರ್ಬಚೆವ್ 2000 ವರ್ಷದೊಳಗೆ ಎಲ್ಲಾ ಅಣ್ವಸ್ತ್ರಗಳ ನಿಷೇಧಕ್ಕಾಗಿ ಕರೆಯಿತ್ತರು.
(ಸಪ್ಟಂಬರ) ಭರವಸೆ ಮತ್ತು ಭದ್ರತೆ ಕಟ್ಟುವ ತಂತ್ರಗಳ ಮತ್ತು ಯೂರೋಪಿನಲ್ಲಿ ನಿಶಸ್ತ್ರೀಕರಣದ ಮೇಲೆ ಕಾನ್ಫರೆನ್ಸ್ (ಅಮೆರಿಕ, ಕೆನಡಾ, ಸೊವಿಯೆಟ್ ಯೂನಿಯನ್ ಸೇರಿ 35 ರಾಷ್ಟ್ರಗಳು, ಆಲ್ಬೆನಿಯಾ ಹೊರತುಪಡಿಸಿ) ಆಕಸ್ಮಿಕ ಯುದ್ಧದ ಗಂಡಾಂತರಗಳನ್ನು ಕಡಿಮೆಗೊಳಿಸಲು ಒಪ್ಪಂದಕ್ಕೆ ಸಹಿ ಮಾಡಲಾಯಿತು.
(ಅಕ್ಟೋಬರ) ಒಂದು “ಪ್ರಧಾನ, ಇತಿಹಾಸವನ್ನುಂಟು ಮಾಡುವ ತೀರ್ಮಾನಗಳಿಗೆ” ಅತಿ ಸಮೀಪಕ್ಕೆ ಬಂದಿದ್ದೆವು” ಎಂದು ಗೊರ್ಬಚೆವ್ರ ಹೇಳಿದರೂ, ಐಸ್ಲೇಂಡಿನಲ್ಲಿ ರೀಗನ್ ಮತ್ತು ಗೊರ್ಬಚೆವ್ ಶಿಖರ ಸಮ್ಮೇಳ ಅಪಜಯಗೊಳ್ಳುತ್ತದೆ.
1987: (ಜನವರಿ) ಗ್ನಾಸನೊಸ್ಟ್ (ತೆರೆಯುವಿಕೆ) ಧೋರಣೆಯು ಸೊವಿಯೆಟ್ ಯೂನಿಯನ್ನಲ್ಲಿ ಹೊಸ ಶಖೆಯನ್ನು ತೋರಿಸುತ್ತದೆ.
(ಮಾರ್ಚ್) ಮಾಸ್ಕೋವಿಗೆ 12 ವರ್ಷಗಳ ನಂತರ ಬ್ರಿಟಿಶ್ ಪಂತ ಪ್ರಧಾನಿಯ ಮೊದಲ ಭೇಟಿ.
(ದಶಂಬರ) ಗೊರ್ಬಚೆವ್ ಮತ್ತು ರೀಗನ್ INF (ಮಧ್ಯಮ-ಶ್ರೇಣಿ ವ್ಯಾಪ್ತಿಯ ನ್ಯೂಕ್ಲಿಯರ್ ಶಕ್ತಿಗಳು) ಒಪ್ಪಂದಕ್ಕೆ ಸಹಿ ಮಾಡುತ್ತಾರೆ, ಇದರಿಂದ ಮಧ್ಯಮ-ಶ್ರೇಣಿ ವ್ಯಾಪ್ತಿಯ ನ್ಯೂಕ್ಲಿಯರ್ ಕ್ಷಿಪಣಿಗಳನ್ನು ಇಲ್ಲದಂತೆ ಮಾಡುವದು.
1988: (ಮಾರ್ಚ್) ನಿಕಾರಗುವ ಮತ್ತು ಕಮ್ಯೂನಿಸ್ಟ್ ವಿರೋಧಿ ಕೊಂಟ್ರಾಗಳು ಘರ್ಷಣೆ ನಿಲುಗಡೆಗೆ ಸಹಿ ಹಾಕುತ್ತಾರೆ, ಒಂದು ಶಾಶ್ವತ ಇತ್ಯರ್ಥಕ್ಕೆ ತಲಪಲು ಸಂಧಾನ ಮಾತುಕತೆಯನ್ನು ಆರಂಭಿಸುತ್ತಾರೆ.
(ಏಪ್ರಿಲ್) ಸೊವಿಯೆಟ್ ಯೂನಿಯನ್ ಅಪ್ಘಾನಿಸ್ಥಾನದಿಂದ ಸೇನೆಯನ್ನು ಫೆಬ್ರವರಿ 1989ರ ಒಳಗೆ ಹಿಂತೆಗೆಯುವದನ್ನು ಪ್ರಕಟಿಸುತ್ತದೆ; ಇಥಿಯೋಪಿಯ ಮತ್ತು ಸೊಮಾಲಿಯವು ಸಂಘರ್ಷಣೆಯನ್ನು ಕೊನೆಗೊಳಿಸಲು ಸಮ್ಮತಿಸುತ್ತವೆ.
(ಮೇ) ಕಂಪೂಚಿಯದಿಂದ 50,000 ಸೇನೆಯನ್ನು ವರ್ಷಾಂತ್ಯದೊಳಗೆ ಮತ್ತು ಉಳಿದಿರುವದನ್ನು 1990 ರೊಳಗೆ ಹಿಂತೆಗೆಯುವದನ್ನು ವಿಯೆಟ್ನಾಮ್ ಪ್ರಕಟಿಸುತ್ತದೆ.
(ಜೂನ್) ಆಷ್ಟ್ರೇಲಿಯನ್ ಪಂತ ಪ್ರಧಾನಿ ಬೊಬ್ ಹವ್ಕ್ ಮಾಸ್ಕೋವಿನಲ್ಲಿ ನಡೆದ ಗೊರ್ಬಚೆವ್-ರೀಗನ್ ಶಿಖರ ಸಮ್ಮೇಳನದ ಕುರಿತು ಹೀಗನ್ನುತ್ತಾರೆ: “ಯುದ್ಧಾನಂತರದ ಸಮಯಾವಧಿಯಲ್ಲಿ ಪ್ರಥಮ ಬಾರಿಗೆ ಶಾಂತಿಗಾಗಿ ಸಕಾರಾತ್ಮಕವಾಗಿ ಜೀವಿಸಸಾಧ್ಯವಿರುವ ಲೋಕವೊಂದು ಉದಯಗೊಳ್ಳುವ ನಿಜ ಸೂಚನೆಗಳು ಅಲ್ಲಿವೆ.”
(ಜುಲೈ) ಎಂಟು-ವರ್ಷ-ಹಳೆಯ ಇರಾನ್—ಇರಾಕ್ ಯುದ್ಧವನ್ನು ನಿಲ್ಲಿಸುವಂತೆ ಸಂ. ರಾ. ಠರಾವಿನ ಕರೆಗೆ ಅಂಗೀಕಾರವನ್ನು ಇರಾನ್ ಪ್ರಕಟಿಸುತ್ತದೆ.
(ಆಗಸ್ಟ್) ಸಂ. ರಾ.ಕ್ಕೆ ಸಲ್ಲಿಸಬೇಕಾಗಿದ್ದ, ಆದರೆ ತಡೆಹಿಡಿದಿದ್ದ ಹಣವನ್ನು ಕೊಡಲು ಅಮೆರಿಕವು ಒಪ್ಪುತ್ತದೆ, ಇದೇ ಕ್ರಮವನ್ನು ಈಗಾಗಲೇ ಸೊವಿಯೆಟ್ರು ಕೈಗೊಂಡಿರುತ್ತದೆ, ಈ ರೀತಿಯಲ್ಲಿ ಸಂ. ರಾ. ಸಂಘಕ್ಕೆ ಹಾಕಿದ ಆರ್ಥಿಕ ಮುತ್ತಿಗೆಯನ್ನು ತೆಗೆದು, ಅದಕ್ಕೆ ಪುನರ್ಶ್ಚೈತನ್ಯಗೊಳಿಸಿದ ಅಂತಸ್ತನ್ನು ಕೊಡಲಾಗುತ್ತದೆ.
(ಸಪ್ಟಂಬರ) ಮೊರೆಕ್ಕೊ ಮತ್ತು ಪೊಲಿಸಾರಿಯೊ ಗೆರಿಲ್ಲಾ ಶಕ್ತಿಗಳು ಪಶ್ಚಿಮ ಸಹರಾದ 13 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸುವ ಸಂ. ರಾ. ಸಂಘದ ಯೋಜನೆಯನ್ನು ಅಂಗೀಕರಿಸುತ್ತದೆ.
(ಅಕ್ಟೋಬರ) ಸಂ. ರಾ. ಸಂಘದ ಶಾಂತಿ ಪಾಲನಾ ಪಡೆಗೆ ಶಾಂತಿಗಾಗಿ ನೋಬೆಲ್ ಬಹುಮಾನವನ್ನು ಕೊಡಲಾಗುತ್ತದೆ; ಲಿಬಿಯ ಮತ್ತು ಚಾಡ್ ಔಪಚಾರಿಕವಾಗಿ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸುತ್ತವೆ.
(ದಶಂಬರ) ಸಂ. ರಾ. ಸಂಘದಲ್ಲಿ, ಗೊರ್ಬಚೆವ್, ಎರಡು ವರ್ಷಗಳೊಳಗೆ ಸೊವಿಯೆಟ್ ಯೂನಿಯನ್ನ ಸೇನಾಶಕ್ತಿಯಲ್ಲಿ ದೊಡ್ಡ ಮೊತ್ತದಲ್ಲಿ ಏಕಪಕ್ಷೀಯವಾಗಿ ಕಡಿಮೆಗೊಳಿಸುವ ಮತ್ತು ಜೆಕೊಸ್ಲೊವಕಿಯ, ಹಂಗೆರಿ, ಮತ್ತು ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (ಪೂರ್ವ ಜರ್ಮನಿ) ಯಿಂದ ಸೇನಾ ತುಕಡಿಗಳನ್ನು ಮತ್ತು ಯುದ್ಧ ಟ್ಯಾಂಕ್ಗಳನ್ನು ಹಿಂತೆಗೆದು ಕೊಳ್ಳುತ್ತೇನೆ ಎಂದು ಪ್ರಕಟಿಸುತ್ತಾರೆ; ದಕ್ಷಿಣ ಆಫ್ರಿಕ, ನಮಿಬಿಯಾ, ಮತ್ತು ಕ್ಯೂಬ ಏಪ್ರಿಲ್ 1, 1989ರ ಸಂ. ರಾ. ಠರಾವನ್ನು ಜ್ಯಾರಿಗೊಳಿಸಲು ಒಪ್ಪುತ್ತವೆ; ನಮಿಬಿಯಾಕ್ಕೆ ಸ್ವಾತಂತ್ರ್ಯವನ್ನು ನೀಡಿ, ಈ ರೀತಿಯಲ್ಲಿ 22 ವರ್ಷಗಳ ಯುದ್ಧವನ್ನು ಕೊನೆಗೊಳಿಸಲಾಯಿತು; ಆಂಗೋಲದಲ್ಲಿರುವ ಕ್ಯೂಬದ 50,000 ಸೇನೆಯ ಅರ್ಧದಷ್ಟನ್ನು ನವಂಬರ 1 ರೊಳಗೆ, ಉಳಿದದದ್ದನ್ನು ಜುಲೈ 1, 1991 ರೊಳಗೆ ಹಿಂತೆಗೆದು ಕೊಳ್ಳುವಿಕೆ; ಇಸ್ರಾಯೇಲಿಗೆ “ಶಾಂತಿ ಮತ್ತು ಭದ್ರತೆಯಲ್ಲಿ ಅಸ್ತಿತ್ವದಲ್ಲಿರುವ” ಹಕ್ಕನ್ನು ಯಾಸ್ಸೆರ್ ಅರಾಫತ್ ಖಾತರಿ ಕೊಟ್ಟನಂತರ, ಪ್ಯಾಲಿಸ್ಟೀನ್ ವಿಮೋಚನಾ ಸಂಸ್ಥೆಯೊಡನೆ ಮಾತಾಡಲು ಅಮೆರಿಕವು ಸಮ್ಮತಿಸುತ್ತದೆ.
1989: (ಜನವರಿ) ರಾಸಾಯನಿಕ ಆಯುಧಗಳನ್ನು ವಿಕಸಿಸುವ, ಉತ್ಪಾದಿಸುವ, ದಾಸ್ತಾನು ಇಡುವ ಮತ್ತು ನೆಲೆಗೊಳಿಸುವದನ್ನು ನಿಷೇಧಿಸಲು ತೀವ್ರ ಕ್ರಮವನ್ನು ಕೈಗೊಳ್ಳಲು ರಾಸಾಯನಿಕ ಆಯುಧಗಳ ಮೇಲಿನ ಪ್ಯಾರಿಸ್ ಪರಿಷತ್ತಿನಲ್ಲಿ ಹಾಜರಾದ 149 ರಾಷ್ಟ್ರಗಳು ಕರೆಯಿತ್ತವು.
(ಫೆಬ್ರವರಿ) ಮಧ್ಯ ಅಮೆರಿಕದಲ್ಲಿ ಶಾಂತಿಯನ್ನು ಭದ್ರಗೊಳಿಸಲು ಕೊಸ್ಟ ರಿಕಾ, ಹೊಂಡುರಾಸ್, ಎಲ್. ಸಾಲ್ವಾಡೊರ್, ನಿಕಾರಗುವ ಮತ್ತು ಗೌಟೆಮಾಲಾಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿದವು; ಕೊಲಂಬಿಯದ ಅತಿ ದೊಡ್ಡ ದಂಗೆಕೋರ ಗುಂಪು, FARC (ಕೊಲಂಬಿಯದ ಕ್ರಾಂತಿಕಾರ ಸಶಸ್ತ್ರ ಪಡೆಗಳು) ಯುದ್ಧ-ನಿಲುಗಡೆಯನ್ನು ಪ್ರಕಟಿಸುವದರ ಮೂಲಕ, 35 ವರ್ಷಗಳ ಗೆರಿಲ್ಲಾ ಯುದ್ಧವು ಕೊನೆಗೊಳ್ಳಬಹುದು ಎಂಬ ನಿರೀಕ್ಷೆಗಳನ್ನು ಏರಿಸಿತು.
(ಮಾರ್ಚ್) 35 ರಾಷ್ಟ್ರಗಳ ವಿದೇಶ ಮಂತ್ರಿಗಳು CEEಯ (ಯೂರೋಪಿನಲ್ಲಿ ಸಾಮಹಿಕ ಸಶಸ್ತ್ರ ಪಡೆಗಳ ಮೇಲೆ ಸಮಾಲೋಚನೆಗಳು) ಮೇಲೆ ಮಾತುಕತೆಗಳು ಆರಂಭಿಸಿದರು, ಯೂರೋಪಿನಲ್ಲಿ ಮಿಲಟರಿ ಪಡೆಗಳನ್ನು ಕಡಿಮೆಗೊಳಿಸಲು ಇದು ರೂಪಿಸಲ್ಪಟ್ಟಿತ್ತು.
(ಏಪ್ರಿಲ್) ವಿಯೆಟ್ನಾಮ್ ಕಂಪೂಚಿಯದಿಂದ ಸಪ್ಟಂಬರ 30 ರೊಳಗೆ ತನ್ನ ಸೇನೆಯನ್ನು ಪೂರ್ಣವಾಗಿ ಹಿಂತೆಗೆದುಕೊಳ್ಳುವದನ್ನು ಪ್ರಕಟಿಸಿತು.
(ಮೇ) ಹಂಗೆರಿಯು 40-ವರ್ಷಗಳ ಹಳೆಯ ಆಷ್ಟ್ರಿಯಾದ ಗಡಿಯ ಮೇಲಿದ್ದ ಮುಳ್ಳುಬೇಲಿಯ ತಡೆಯನ್ನು ಕಿತ್ತೆಸೆಯಲು ಆರಂಭಿಸಿತು; 30 ವರ್ಷಗಳಲ್ಲಿ ಸೊವಿಯೆಟ್ ಮತ್ತು ಚೀನಿಯರ ಮುಖಂಡರುಗಳ ಮೊದಲ ಸಭೆಯು ಜರುಗಿ, ಸೊವಿಯೆಟ್ರು ಏಶಿಯಾದ ಸೇನೆಯನ್ನು ಕಡಿಮೆಗೊಳಿಸುವಿಕೆಯನ್ನು ಘೋಷಿಸಿದರು; ಪೌರ್ವಾತ್ಯ ಯೂರೋಪಿನಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಏಕ ಪಕ್ಷಿಯವಾಗಿ ಹಿಂತೆಗೆದುಕೊಳ್ಳಲು ಸೊವಿಯೆಟ್ರು ಆರಂಭಿಸಿದರು.
(ಜೂನ್) 1992ರ ಜೂನ್ರೊಳಗೆ ಯೂರೋಪಿನಲ್ಲಿ ಸೇನಾ ತುಕಡಿ, ಟ್ಯಾಂಕುಗಳು, ಫಿರಂಗಿ ದಳ, ಮತ್ತು ವಾಯುಸೇನೆಯನ್ನು ಬಹಳಷ್ಟು ಕಡಿತಗೊಳಿಸಲು ಬುಶ್ ಕರೆಯನ್ನಿತ್ತರು, ಇದು ವಾರ್ತಾಪತ್ರವು ಹೀಗನ್ನಲು ನಡಿಸಿತು: “ಎರಡನೆಯ ಲೋಕ ಯುದ್ಧದ ನಂತರ ಅತಿ ಗಮನಾರ್ಹ ರೀತಿಯಲ್ಲಿ ಶಸ್ತ್ರಗಳ ಕಡಿತಗೊಳಿಸುವಿಕೆಗೆ ಬಾಗಲನ್ನು ತೆರೆಯಿತು ಎಂದನ್ನಬಹುದು.”
(ಆಗಸ್ಟ್) ಮಧ್ಯ ಅಮೆರಿಕದ ಐದು ರಾಷ್ಟ್ರಗಳು ನಿಕಾರಗುವದಲ್ಲಿ ಸಂಘರ್ಷಣೆಯನ್ನು ಕೊನೆಗೊಳಿಸುವ ಒಂದು ಯೋಜನೆಯ ಮೇಲೆ ಒಮ್ಮತಕ್ಕೆ ಬಂದವು.
ಇವೆಲ್ಲಾ ಮನತಟ್ಟುವ ಗಳಿಕೆಗಳಾಗಿರುವದಾದರೂ, ಅನೇಕ ದೇಶಗಳು ಶಾಂತಿಯಲ್ಲಿ ಸಂತೋಷಿಸುವದರಿಂದ ಬಹಳಷ್ಟು ದೂರದಲ್ಲಿವೆ. ಉತ್ತರ ಆಯರ್ಲೇಂಡ್, ಲೆಬನೊನ್, ಸುಡಾನ್, ಶ್ರೀ ಲಂಕಾ, ಅಪ್ಘಾನಿಸ್ಥಾನ್, ಮತ್ತು ಫಿಲಿಪೈನ್ಸ್ನಲ್ಲಿ—ಹೀಗೆ ಹೆಸರಿಸಬಹುದಾದ ಕೆಲವು ದೇಶಗಳು—ಜನರು ಮಿಲಿಟರಿ ಕಾರ್ಯಾಚರಣೆಯ ಮೂಲಕ ಸಾಯುತ್ತಾ ಇದ್ದಾರೆ. ಆದಕಾರಣ, ಶಾಂತಿಯ ಪ್ರತೀಕ್ಷೆಯ ಕುರಿತು ಹಿಂದಿಗಿಂತಲೂ ಈಗ ಹೆಚ್ಚು ಆಶಾವಾದಿಗಳಾಗಿರುವದಾದರೂ, ಅಪೊಕಲಿಪ್ಸಿನ ಎರಡನೆಯ ಕುದುರೆ ಸವಾರನು,—ಯುದ್ಧದ “ಕೆಂಪು ಕುದುರೆಯು”—ಭೂಮಿಯ ಮೇಲೆ ಇನ್ನೂ ದೌಡಾಯಿಸುತ್ತಾ ಇದ್ದಾನೆ ಎಂಬದನ್ನು ನಾವು ಮರೆಯ ಕೂಡದು.—ಪ್ರಕಟನೆ 6:3, 4.
[ಪುಟ 25 ರಲ್ಲಿರುವಚಿತ್ರ]
ನ್ಯೂ ಯೋರ್ಕ್ನಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಕೇಂದ್ರಾಲಯ ಮತ್ತು ಲೋಕಶಾಂತಿಯ ಒಂದು ಪ್ರತಿಮೆ—ಮನುಷ್ಯನು ಕತ್ತಿಯನ್ನು ಗುಳವನ್ನಾಗಿ ಬಡಿಯುವದು