ಮನುಷ್ಯ-ದೇವರಿಗೆ ಮೀಸಲಾದ ಶ್ರದ್ಧೆ ಯಾಕೆ?
ಎರಡನೆಯ ಲೋಕಯುದ್ಧದ ಮೊದಲು ಮತ್ತು ಆ ಸಮಯದಲ್ಲಿ ಸಾಮ್ರಾಟನಿಗೆ ಕೊಡಲ್ಪಟ್ಟ ಶ್ರದ್ಧೆಯ ಆಳವನ್ನು ಗ್ರಹಿಸಲು ಇಂದಿನ ಅನೇಕರಿಗೆ ಕಠಿಣವಾಗಬಹುದು. “ಶಾಲೆಗಳಲ್ಲಿ ವಿಶೇಷ ಪುಣ್ಯ ಕ್ಷೇತ್ರದಲ್ಲಿ ಹಿರೋಹಿಟೊನ ಚಿತ್ರವು ಇಡಲ್ಪಟ್ಟಿತ್ತು ಮತ್ತು ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳು ಪುಣ್ಯ ಕ್ಷೇತ್ರದ ಮುಂದೆ ನಿಂತು, ಅದರೆಡೆಗೆ ಆರಾಧನೆ ನಡಿಸುತ್ತಿದ್ದರು” ಎಂದು ಮಿಟ್ಸುಕೊ ತಕಹಾಶಿ ನೆನಪಿಸಿ ಕೊಂಡರು.
“ಸಾಮ್ರಾಟನು ಹಾದು ಹೋಗುವಾಗ” ಮಸಾಟೊ ಸಕಾಮೊಟೊ ನೆನಪಿಸುವುದು, “ನಾವು ನಮ್ಮ ತಲೆಗಳನ್ನು ಅತೀ ಕೆಳಗೆ ಬಗ್ಗಿಸ ಬೇಕಿತ್ತು.” ಸಾಮ್ರಾಟನನ್ನು ಸಾಮಾನ್ಯ ಜನರು ನೇರವಾಗಿ ನೋಡುವುದು ಅತಿ ಭಯ ಹುಟ್ಟಿಸುವುದಾಗಿದೆ ಎಂದು ನಾವು ನಂಬುವಂತೆ ಮಾಡಲಾಗಿತ್ತು. ವಾಸ್ತವದಲ್ಲಿ ಅವನ ಮುಖವನ್ನು ನೋಡಿದರೆ ಒಂದುವೇಳೆ ಅವರು ಕುರುಡರಾಗಬಹುದು ಎಂದು ಮಕ್ಕಳಿಗೆ ಹೇಳಲ್ಪಟ್ಟಿತ್ತು.
ಜಪಾನಿನ ಮಿಲಿಟರಿ ಮತ್ತು ರಾಜಕೀಯ ಮುಂದಾಳುಗಳು ಸಾಮ್ರಾಟನೆಡೆ ದೇವಭಕ್ತಿ ಉದ್ಭವಿಸುವಂತೆ ವಿಧ್ಯಾಭ್ಯಾಸದ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದರು. ಯುದ್ಧದ ಸಮಯವನ್ನೊಳಗೊಂಡಿದ್ದು, 50 ವರ್ಷ ಕಲಿಸುವಿಕೆಯನ್ನು ಮಾಡಿದ್ದ ಕಾಜುವೊ ಮಾಟ್ಸುಮಾಟೊ ಹೇಳುವುದು: “ನಾನು ತರುಣರಿಗೆ- ಸಾಯಲು ಸಿದ್ಧರಾಗಿರಿ” ಎಂದು ಕಲಿಸುತ್ತಿದ್ದೆನು. “ಅನೇಕ ತರುಣರನ್ನು ನಾನು ಯುದ್ಧರಂಗಕ್ಕೆ ಕಳುಹಿಸಿದ್ದೆ. ನನ್ನ ಈ ಗತಕಾಲದ ದೋಷಾರೋಪವನ್ನು ಅಳಿಸಲು ಸಾಧ್ಯವಿಲ್ಲ.”
ಸಾಮ್ರಾಟನ ಪ್ರಜೆಗಳು ಅಹಿಟೊಗುಸಾ ಅಥವಾ “ಬೆಳೆಯುತ್ತಿರುವ ಮಾನವ ಕಳೆಗಳು” ಮತ್ತು ಅವನ ಗುರಾಣಿಯಂತೆ ಸೇವೆ ಸಲ್ಲಿಸಿ ಅವನನ್ನು ರಕ್ಷಿಸಬೇಕೆಂದು ಜಪಾನಿನ ತರುಣರಿಗೆ ಹೇಳಲ್ಪಟ್ಟಿತ್ತು. ಫಿಲಿಪೈನ್ಸ್ನ ಹಲವಾರು ಆತ್ಮಹತ್ಯ ಧಾಳಿಗಳಲ್ಲಿ ಭಾಗವಹಿಸಿದ್ದ ಮತ್ತು ಅವರನ್ನು ರಕ್ಷಿಸಿದ ಟಾಶಿಯೊ ಮೊಶಿಕೊ ವಿವರಿಸುವುದು: “ಸಾಮ್ರಾಟನಿಗಾಗಿ ಸಾಯುವುದು ಅವನ ಪ್ರಜೆಗಳಿಗೆ ಅತೀ ಉತ್ತಮ ಗೌರವವೆಂದು ನಮಗೆ ಕಲಿಸಲ್ಪಟ್ಟಿತ್ತು.”
ಅನೇಕರು ಸಾಮ್ರಾಟನ ರಕ್ಷಣೆಯ ಸಾಮರ್ಥ್ಯವನ್ನು ನಿಜವಾಗಿ ನಂಬಿದ್ದರು. ಆದ್ದರಿಂದ ಅವರು ಯುದ್ಧಕ್ಕೆ ಕಂಗೆಡದೆ ಆವೇಶದಿಂದ ಮುನ್ನುಗ್ಗುತ್ತಿದ್ದರು. ಉದಾಹರಣೆಗೆ, ಜನರಿಗೆ ಕಲಿಸಲ್ಪಟ್ಟ “ದೈವಿಕ ರಾಷ್ಟ್ರದ” ತಾನೊಬ್ಬ ಸೈನಿಕನಾದ್ದರಿಂದ ಗುಂಡುಗಳು ತನ್ನ ಶರೀರದಿಂದ ಹಿಂದಕ್ಕೆ ನೆಗೆಯುತ್ತವೆ ಎಂದು ಶುನಿಚಿ ಇಶಿಗೊರೊ ಯೋಚಿಸಿದ್ದರು.
ನಿಶ್ಚಯವಾಗಿ, ಯುದ್ಧದ ಗತಿಯು ಜಪಾನಿನ ವಿರುದ್ಧವಾಗಿ ತಿರುಗಿದಾಗ, ಒಬ್ಬ ತರುಣ ಇಸಾಮು ತನ್ನ ತಾಯಿಗೆ ತನ್ನ ಆತಂಕದ ಭಾವನೆಗಳನ್ನು ವ್ಯಕ್ತಪಡಿಸಿದನು. “ನೀನು ಚಿಂತಿಸಬೇಡ. ನಾವೆಂದಿಗೂ ಸೋಲುವುದಿಲ್ಲ. ಯಾಕಂದರೆ ಕಾಮಿಕಾಜಿa (ದೈವಿಕ ಗಾಳಿ) ನಮ್ಮ ಶತ್ರುಗಳನ್ನು ದೂರ ತಳ್ಳುವುದು” ಎಂದು ಅವನ ಶಿಂಟೊ ತಾಯಿ ಆಶ್ವಾಸನೆ ಇತ್ತಳು.
ಒಬ್ಬ ದೇವರು ಆದರೆ ಅಪೂರ್ವವಾದ ಪ್ರಭು
ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಷದಿಂದ ಸಾಮ್ರಾಟನ ಆರಾಧನೆಯು ಜನರ ಜೀವನದ ಒಂದು ಭಾಗವಾಗಿದ್ದು ಅದರಲ್ಲಿ ಜಪಾನಿನಲ್ಲಿ ದೀರ್ಘ ಇತಿಹಾಸವಿದೆ. ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ತೊಡೆದು ಹಾಕುವದು ಕಷ್ಟಕರ. ಉದಾಹರಣೆಗೆ, ಕ್ರೈಸ್ತ ಪ್ರಪಂಚದ ಜನರು ಸಹ ಹೇಳುವುದು: ‘ನನ್ನ ಧರ್ಮವು ನನ್ನ ಹೆತ್ತವರಿಗೆ ಒಳ್ಳೇದಾಗಿತ್ತೆಂದರೆ ಅದು ನನಗೂ ಒಳ್ಳೆಯದಾಗಿದೆ.’ ಮತ್ತು ‘ಪ್ರತಿಯೊಬ್ಬರು ಇದನ್ನು ನಂಬುತ್ತಾರೆ, ಮತ್ತು ಅವರೆಲ್ಲರೂ ತಪ್ಪಾಗಿರ ಸಾಧ್ಯವಿಲ್ಲ.’ ಆದರೆ ಕಳೆದ ಶತಮಾನಗಳಿಂದ ತಮ್ಮ ಮುಂದಾಳುಗಳು ದೈವಿಕತೆಯುಳ್ಳವರೆಂದು ನಂಬುವುದರಲ್ಲಿ ಮಿಲಿಯಗಟ್ಟಲೆ ಜನರು ತಪ್ಪಾಗಿರುತ್ತಾರೆ! ಜಪಾನಿನ ಸಾಮ್ರಾಟನ ಇತಿಹಾಸವನ್ನು ಗಮನಿಸಿರಿ.
ಶತಮಾನಗಳಿಂದ ಅವನ ಸ್ಥಾನ ಗಮನಾರ್ಹವಾಗಿ ಬಹಳಷ್ಟು ಬದಲಾಗಿದೆ. ಕೊಡನ್ಶಾ ಎನ್ಸೈಕ್ಲೊಪೀಡಿಯ ಆಫ್ ಜಪಾನ್ ವಿವರಿಸುವುದು: “ದೇವತೆಗಳನ್ನು ಒಲಿಸಿಕೊಳ್ಳುವ ಅಥವಾ ಅವರೊಂದಿಗೆ ಮಧಸ್ಥಿಕೆ ವಹಿಸುವ ತಾಂತ್ರಿಕ ಶಕ್ತಿಯು ಸಾಮ್ರಾಟನಿಗೆ ಇದೆ ಎಂದು ಎಣಿಸಲಾಗುತ್ತಿತ್ತು. ಆದ್ದರಿಂದ ಅವನ ವ್ಯಕ್ತಿತ್ವದ ಸುತ್ತಲೂ ಭೀತಿಯು ಆವರಿಸಿದ್ದರಿಂದ ಸರ್ಕಾರದ ಐಹಿಕ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸುವುದು ಸಾಮ್ರಾಟನಿಗೆ ಅಸಂಗತವೆಂದು ಎಣಿಸಲಾಗುತ್ತಿತ್ತು. ನಿಯಮಗಳನ್ನು ಮಾಡುವ ಮತ್ತು ಕಾರ್ಯರೂಪಕ್ಕೆ ತರುವ ಎರಡೂ ವ್ಯವಹಾರವು ಸಾಮ್ರಾಟನ ಸೇವೆಮಾಡುವ ಮಂತ್ರಿಗಳಿಗೆ ಸೇರಿತ್ತು.”
ಹೀಗೆ ಸಾಮ್ರಾಟನು ಒಬ್ಬ ಯಾಜಕನೋಪಾದಿ ಕಾರ್ಯ ನಿರ್ವಹಿಸುತ್ತಿದ್ದನು, ರಾಜಕೀಯವಾಗಿ ಅಲ್ಲ. “ಜಪಾನಿನ ಇತಿಹಾಸವನ್ನು ವಿಸ್ತರಿಸಿದ ಕಾಲದಲ್ಲಿ ಅಂದರೆ 7ನೇ ಶತಮಾನದ ಕೊನೆಯ ಅರ್ಧದಲ್ಲಿ ತೆಂಜಿ ಯ ಆಳಿಕೆಯ ಆರಂಭದಿಂದ, 8ನೇ ಶತಕದ ಕೊನೆಯಲ್ಲಿ ಮತ್ತು 9ನೇ ಶತಮಾನದ ಆರಂಭದಲ್ಲಿದ್ದ ಕಮ್ಮು ವಿನ ಆಳಿಕೆಯ ವರೆಗೆ ಕೇವಲ ಸಾಮ್ರಾಟನು ವಾಸ್ತವದಲ್ಲಿ ಜತೆಯಾಗಿ ಎರಡೂ ಕಾರ್ಯಗಳನ್ನು ನಡೆಸುತ್ತಿದ್ದನು.”
ಆ ನಿರ್ದಿಷ್ಟ ಸಮಯವನ್ನು ಬಿಟ್ಟು, ಜಪಾನಿನ ಸಾಮ್ರಾಟರು ನಿಜವಾಗಿಯೂ ಆಳ್ವಿಕೆ ನಡಿಸಲಿಲ್ಲ. 9ನೇ ಶತಮಾನದ ನಂತರ ಸಾಮ್ರಾಟನ ಬಲ ಕುಂದ ತೊಡಗಿತು. ಮತ್ತು ಅಷ್ಟರಲ್ಲಿ, ಶೋಗನ್ ಅಂದರೆ “ಸೇನೆಯ ಅಧಿಕಾರಿ” ರಾಜಕೀಯ ಅಧಿಕಾರ ಚಲಾಯಿಸುವುದು ಅಸ್ತಿತ್ವಕ್ಕೆ ಬಂತು. ಸಾಮ್ರಾಟನು ಶೋಗನ್ನ್ನು ತಾತ್ಕಾಲಿಕವಾಗಿ ನೇಮಿಸಿದರೂ, ಶೋಗನ್ನು ಒಬ್ಬ ನಿಜವಾದ ಪ್ರಭುವಾದನು. ಆದರೆ ಜಪಾನಿನ ಶತಮಾನಗಳ ಪ್ರಭುತ್ವದ ನಂತರ ಶೋಗುನೆಟ್ ಸರ್ಕಾರವು 1867 ರಲ್ಲಿ ಪ್ರಭುತ್ವವನ್ನು ಸಾಮ್ರಾಟನಿಗೆ ಬಿಟ್ಟುಕೊಟ್ಟಿತು.
ಆ ಕಾಲದಲ್ಲಿ ಹಿರೋಹಿಟೊನ ಅಜ್ಜನಾದ ಸಾಮ್ರಾಟ ಮೈಜೀಯು ಜಪಾನಿನ ಪ್ರಭುವಾಗಿ ಮಾಡಲ್ಪಟ್ಟನು. ಅವನು ನಂತರ ತನ್ನ ಪ್ರಜೆಗಳಿಗೆ ಸಂವಿಧಾನವನ್ನು ಅನುಗ್ರಹಿಸಿ, ಅದರಲ್ಲಿ ಸಾಮ್ರಾಟನು “ಪವಿತ್ರನು ಮತ್ತು ಉಲ್ಲಂಘಿಸ ಕೂಡದವನು” ಎಂಬ ನಿರ್ಬಂಧ ಹಾಕಿದನು. ಆದರೂ ಸಾಂಪ್ರದಾಯಿಕವಾಗಿ ಸಾಮ್ರಾಟನಿಗೆ ರಾಜಕೀಯ ಅಧಿಕಾರವು ಕೊಡಲ್ಪಟ್ಟಿದ್ದರೂ, ಅವನಿಗೆ ರಾಜಕೀಯ ಶಕ್ತಿಯನ್ನು ಕೊಟ್ಟಿರಲಿಲ್ಲ. ಅವನು ರಾಜ್ಯಭಾರ ಮಾಡಿದನಾದರೂ ವಾಸ್ತವವಾಗಿ ಆಡಳಿತ ನಡಿಸಲಿಲ್ಲ.
ಸಂವಿಧಾನವು ತಿಳಿಸುವುದು: “ಸಂಬಂಧಪಟ್ಟ ರಾಜ್ಯದ ಮಂತ್ರಿಗಳು ತಮ್ಮ ಸಲಹೆಯನ್ನು (ಮತ್ತು ಸಹಾಯವನ್ನು) ಸಾಮ್ರಾಟನಿಗೆ ಕೊಡುವರು ಮತ್ತು ಅದಕ್ಕೆ ಜವಾಬ್ದಾರರಾಗಿರಬೇಕು.” ಕೊನ್ಶಾ ಎನ್ಸೈಕ್ಲೊಪೀಡಿಯ ಕ್ಕೆ ಅನುಸಾರ, “ರಾಜಕೀಯ ಜವಾಬ್ದಾರಿಯು ಸಾಮ್ರಾಟನ ಮೇಲೆ ಬೀಳಲಿಲ್ಲ, ಆದರೆ ಅವನ ಮಂತ್ರಿಗಳ ಮೇಲೆ ಎಂದು ಇದು ವಾಸ್ತವದಲ್ಲಿ ಅರ್ಥಕೊಟ್ಟಿತು.”
ಹೀಗೆ ಸರ್ಕಾರದ ಮಂತ್ರಿಗಳು ರಾಜಕೀಯ ಶಕ್ತಿಯನ್ನು ನಿಜವಾಗಿ ಪ್ರಯೋಗಿಸಿದರು. ಹಾಗಿದ್ದರೂ, ಸಾಮ್ರಾಟನು ರಾಷ್ಟ್ರದ ಮೇಲೆ ಸಂಪೂರ್ಣ ಅಧಿಕಾರವಿದ್ದ ದೇವರಂತೆ ಸಾಮಾನ್ಯ ಜನರಿಗೆ ತೋರಿಸಲ್ಪಟ್ಟಿದ್ದನು. ಹೀಗೆ ಆಡಳಿತ ವರ್ಗವು ಸಾಮ್ರಾಟನ ಸಾಂಪ್ರದಾಯಿಕ ಮತ್ತು ಅಧಿಕಾರಯುಕ್ತವಾಗಿ ಉತ್ತೇಜಿಸಲ್ಪಟ್ಟ ದೈವಿಕತೆಯನ್ನು ಸಾಮಾನ್ಯ ಜನರನ್ನು ಹತೋಟಿಯಲ್ಲಿಡಲು ಬಳಸುತ್ತಿದ್ದರು. 20ನೇ ಶತಮಾನದಲ್ಲಿ ಜಪಾನ್ ಕಾದಾಡಿದ ಯುದ್ಧಗಳು ಸಾಮ್ರಾಟನ ಹೆಸರಿನಲ್ಲಿ ಹೋರಾಡಲ್ಪಟ್ಟವು ಮತ್ತು ಅವನು ಅದ್ಭುತ ಶಕ್ತಿಗಳನ್ನು ಹೊಂದಿದ್ದ ಒಬ್ಬ ದೇವರೆಂದು ಜನರು ಸಾಮಾನ್ಯವಾಗಿ ನಂಬಿದ್ದರು.
ಆದಾಗ್ಯೂ ಹಿರೋಹಿಟೊವು ತನ್ನ ಸ್ವಂತ ದೈವಿಕತೆಯನ್ನು ನಂಬಲಿಲ್ಲ ಎಂದರೆ ಅನೇಕರಿಗೆ ಆಶ್ಚರ್ಯ. “ನಾನು ಎಂದಿಗೂ ನನ್ನನ್ನು ಒಬ್ಬ ದೇವರೆಂದು ಎಣಿಸಿರಲಿಲ್ಲ” ಎಂದು ಅವನು ಅಮೇರಿಕದ ಸೇನಾ ಅಧಿಕಾರಕ್ಕೆ ಎರಡನೇ ಲೋಕ ಯುದ್ಧದ ನಂತರ ಹೇಳಿದ್ದನು. “ಸಾಮ್ರಾಟನು ದೈವಿಕನೆಂಬ ಮತ್ತು ಜಪಾನಿನ ಜನರು ಇತರ ವಂಶಗಳಿಗಿಂತ ಶ್ರೇಷ್ಟರು ಎಂಬ ಸುಳ್ಳು ಭಾವನೆಯನ್ನು” ನಿರಾಕರಿಸಿದ ಅನಂತರ ಅವನು ತನ್ನ ಹೆಂಡತಿಗೆ ಹೀಗೆ ಹೇಳಿದ್ದನೆಂದು ವರದಿಯಾಗಿದೆ: “ನೀನು ಏನಾದರೂ ವ್ಯತ್ಯಾಸವನ್ನು ಕಾಣುತ್ತಿಯಾ? ಈಗ ನಾನು ನಿನಗೆ ಹೆಚ್ಚು ಮನುಷ್ಯನಾಗಿ ಕಾಣುತ್ತಿದ್ದೇನೋ?”
ನಿಶ್ಚಯವಾಗಿ, ಇತರ ಜಪಾನೀಯರು ಕೂಡ ದೈವಿಕತೆಯ ಮುಖಾವರಣವನ್ನು ಕಂಡುಕೊಂಡರು ಮತ್ತು ವಾಸ್ತವಿಕತೆಯನ್ನು ಅರಿತುಕೊಂಡರು. ರುಜುವಾತಿನ ಮೇಲೆ ಅವರು ತರ್ಕಿಸಿದರು. ಉದಾಹರಣೆಗೆ, ಸಾಮ್ರಾಟನ ಸೇನೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ ಮಿನೊರು ಯಮನಾಕ ವಿವರಿಸುವುದು: “ಸಾಮ್ರಾಟನ ತಂದೆಯವರು 47ನೇ ವಯಸ್ಸಲ್ಲಿ ತೀರಿದರು ಮತ್ತು ಅವರ ಅಜ್ಜ 59ನೇ ವರ್ಷದಲ್ಲಿ; ಬೇರೆ ಅನೇಕರಿಗಿಂತ ಮೊದಲೇ. ಆದ್ದರಿಂದ ಸಾಮ್ರಾಟನು ಒಬ್ಬ ದೇವರೆಂದು ನಾನು ಎಂದಿಗೂ ಎಣಿಸಿರಲಿಲ್ಲ.”
ಜವಾಬ್ದಾರಿಕೆಯ ಪ್ರಶ್ನೆ
ಹಿರೋಹಿಟೊನ ಅನಾರೋಗ್ಯ ಮತ್ತು ಮರಣ ಸೂಕ್ಷ್ಮವೇದಿ ಪ್ರಶ್ನೆಯನ್ನು ಮರುಕಳಿಸಿತು: ಜಪಾನಿನ ಮಿಲಿಟರಿ ಆಕ್ರಮಣಕ್ಕೆ ಸಾಮ್ರಾಟನು ಯಾವ ಜವಾಬ್ದಾರಿಯನ್ನು ಹೊರಬೇಕು? ವೈಯಕ್ತಿಕವಾಗಿ ಹಿರೋಹಿಟೊವು ಯುದ್ಧಕ್ಕೆ ವಿರೋಧಿಯಾಗಿದ್ದನು, ಆದರೆ ತನ್ನ ಮಂತ್ರಿಗಳ ನಿರ್ಣಯದೊಂದಿಗೆ ಹೋಗಲು ಕಟ್ಟುಬಿದ್ದನು ಎಂದು ಹೆಚ್ಚಿನವರ ಅಭಿಪ್ರಾಯ. ಆದ್ದರಿಂದ 1941 ರಲ್ಲಿ ಅಮೇರಿಕದ ಆಕ್ರಮಣದ ತನ್ನ ಮಂತ್ರಿಗಳ ಯೋಜನೆಯ ಕುರಿತಾಗಿ, ಅವನು ವಾದಿಸುವದು: “ನಾನು ಅವರ ನಿರ್ಣಯಗಳನ್ನು ತಳ್ಳಿಹಾಕಲು ಸಾಧ್ಯವಿರಲಿಲ್ಲ. ಇದು ಜಪಾನಿನ ಸಂವಿಧಾನದ ಅನುಸಾರವಾಗಿದೆ ಎಂದು ನಾನು ನಂಬಿದೆ.”
ಇನ್ನೊಂದು ಪಕ್ಷದಲ್ಲಿ, ತನ್ನ ಮಂತ್ರಿಗಳು ಈ ವಾದದಲ್ಲಿ ವಿಭಾಗಿತರಾದಾಗ ಹಿರೋಹಿಟೊ ಆಸಕ್ತಿಯನ್ನು ತಾನಾಗಿ ತೆಗೆದುಕೊಂಡು ಶರಣಾಗತರಾಗುವ ನಿರ್ಣಯವನ್ನು ಮಾಡಿದನು. ಅಗೋಸ್ತು 15, 1945 ರಲ್ಲಿ, ಈ ನಿರ್ಣಯವನ್ನು ಮಾಡಿದ ಕೆಲವು ದಿವಸಗಳ ನಂತರ, ರಾಷ್ಟ್ರೀಯ ರೇಡಿಯೋದ ಮೇಲೆ ಶರಣಾಗತರಾಗಲು ಪ್ರಕಟಿಸಿದ ಅವನ ಸ್ವರವನ್ನು ಮೊದಲ ಬಾರಿಗೆ ಕೇಳಿದ ಅವನ ಪ್ರಜೆಗಳಿಗೆ ಧಕ್ಕೆ ತಗಲಿತು. “ಸಹಿಸಿಕೊಳ್ಳಲಾಗದನ್ನು ಸಹಿಸುವಂತೆ ಮತ್ತು ತಾಳಿಕೊಳ್ಳಲಾಗದ್ದನ್ನು ತಾಳಿಕೊಳ್ಳುವಂತೆ” ಅವನು ಅವರಿಗೆ ಕರೆಗೊಟ್ಟನು.
ತಿಂಗಳುಗಳ ನಂತರ, ಬ್ರಿಟಿಷ್ ಸರ್ಕಾರವು ಪ್ರಕಟಿಸಿದ್ದು: “ಜಪಾನೀಯರು ಶರಣಾಗತರಾಗಲು ಅಣುಬಾಂಬು ಕಾರಣವಲ್ಲ, ಸಾಮ್ರಾಟನ ಶಾಸನಯುಕ್ತ ಆಜ್ಞೆಯು ಅವರನ್ನು ಹಾಗೆ ಮಾಡಿತು. ಅದಲ್ಲದಿದ್ದರೆ, ನಾವು ಹೆಚ್ಚು ಬೆಲೆಯ ಆಕ್ರಮಣಕ್ಕೆ ಈಡಾಗಬೇಕಿತ್ತು.”
ಹೀಗೆ ಜಪಾನಿನಲ್ಲಿ ಸಂಯುಕ್ತ ಸೇನೆಯ ಅಮೇರಿಕದ ಸೇನಾಧಿಕಾರಿ ಜನರಲ್ ಮ್ಯಾಕಾರ್ಥರ್, ಹಿರೋಹಿಟೊವನ್ನು ಒಬ್ಬ ಯುದ್ಧದ ಅಪರಾಧಿ ಎಂದು ವಿಚಾರಣೆ ಮಾಡುವ ಯುದ್ಧಾನಂತರದ ಕರೆಗಳನ್ನು ಬಲವಾಗಿ ತಡೆಗಟ್ಟಿದರು. ಅವರು ಅನಂತರ ವಿವರಿಸಿದ್ದು: “ಸಾಮ್ರಾಟನ ಮೇಲೆ ದೋಷ ಹೊರಿಸಲ್ಪಟ್ಟರೆ ಮತ್ತು ಒಂದುವೇಳೆ ಗಲ್ಲಿಗೇರಿಸಲ್ಪಟ್ಟರೆ, ಇಡೀ ಜಪಾನಿನಲ್ಲಿ ಮಿಲಿಟರಿ ಸರಕಾರವನ್ನು ನೇಮಿಸಬೇಕಿತ್ತು, ಮತ್ತು ಗೆರಿಲ್ಲಾ ಯುದ್ಧವು ಬಹುಮಟ್ಟಿಗೆ ತಲೆದೋರುತ್ತಿತ್ತು.”
ಮ್ಯಾಕಾರ್ಥರ್ ಸಪ್ಟಂಬರ 26, 1945 ರಲ್ಲಿ ಹಿರೋಹಿಟೊವನ್ನು ಭೇಟಿಯಾದರು ಮತ್ತು ಅವನಿಂದ ಪ್ರಭಾವಿತರಾದರು. ಯುದ್ಧದ ಜವಾಬ್ದಾರಿಕೆಯನ್ನು ಜಾರಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಬದಲಾಗಿ “ಯುದ್ಧದ ನಡವಳಿಕೆಯಲ್ಲಿ ತನ್ನ ಜನರಿಂದ ಮಾಡಿದ ಮತ್ತು ತೆಗೆದುಕೊಂಡ ಪ್ರತಿಯೊಂದು ರಾಜಕೀಯ ಮತ್ತು ಮಿಲಿಟರಿ ನಿರ್ಣಯಗಳಿಗೆ ಪೂರ್ಣ ಜವಾಬ್ದಾರಿಕೆಯನ್ನು ಹೊರಬೇಕಾದವನು ತಾನೊಬ್ಬನೇ” ಎಂದು ಒಪ್ಪಿ ಸಾಮ್ರಾಟನು ತನ್ನನ್ನು ನೀಡಿಕೊಂಡನು.
ಆದರೂ ಹಿರೋಹಿಟೊನನ್ನು ಯುದ್ಧಕ್ಕೆ ಜವಾಬ್ದಾರನನ್ನಾಗಿ ಮಾಡದೆ ಅದು ನಿಜವಾಗಿಯೂ ಅವನ ಮಂತ್ರಿಗಳಿಂದ ಉತ್ತೇಜಿಸಲ್ಪಟ್ಟದ್ದು ಎನ್ನುವ ಇನ್ನು ಹಲವಾರು ಮಂದಿ ಜಪಾನಿನಲ್ಲಿ ಇನ್ನೂ ಇದ್ದಾರೆ. ಆದ್ದರಿಂದ ಸಾಮ್ರಾಟನು ಒಂದು ವರ್ಷದ ಹಿಂದೆ ಮರಣಶಯ್ಯೆಯಲ್ಲಿ ಇದ್ದಾಗ, ನಾಗಸಾಕಿಯ ಪೌರ ಸಭಾಧ್ಯಕ್ಷನಾದ ಹಿಟೊಶಿ ಮೊಟೊಶಿಮೊ, ಅಸಮಾಧಾನವನ್ನು ಪ್ರಚಂಡವಾಗಿ ಕಲಕಿಸಿ ಬಹಿರಂಗವಾಗಿ, “ಸೇನೆಯ ಶಿಕ್ಷಣದ ನನ್ನ ಸ್ವಂತ ಅನುಭವದಿಂದ ಯುದ್ಧದ ಜವಾಬ್ದಾರಿಕೆಯನ್ನು ಸಾಮ್ರಾಟನು ಹೊರಬೇಕಾಗಿದೆಯೆಂದು ನಾನೆಣಿಸುತ್ತೇನೆ” ಎಂದು ಧೈರ್ಯದಿಂದ ಹೇಳಿದನು.
ಯುದ್ಧದ ಸಮಯದಲ್ಲಿ ಹೊಸ ಸೈನಿಕನಿಗೆ ಶಿಕ್ಷಣಕೊಡುವ ಒಬ್ಬ ಅಧಿಕಾರಿಯಾಗಿ ಮೊಟೊಶಿಮೊ ಗಮನಿಸಿದ್ದು: “ಸಾಮ್ರಾಟನ ಹೆಸರಿನಲ್ಲಿ ಸಾಯಿರಿ ಎಂದು ಹೇಳಲು ನಾನು ಒತ್ತಾಯಿಸಲ್ಪಟ್ಟೆನು.” ಪ್ರಜೆಗಳಿಂದ ಆರಾಧಿಸಲ್ಪಟ್ಟ ಸಾಮ್ರಾಟನ ಸರ್ವವು ಒಂದುವೇಳೆ ಯುದ್ಧದ ವಿರುದ್ಧವಾಗಿ ಎತ್ತಲ್ಪಟ್ಟಿದ್ದರೆ ಭೀಕರ ಪ್ರಭಾವ ಬೀರಲ್ಪಡುತ್ತಿತ್ತು ಎಂದು ಇತರರ ಹಾಗೆ ಮೊಟೊಶಿಮೊ ಪ್ರತ್ಯಕ್ಷವಾಗಿ ಭಾವಿಸುತ್ತಾರೆ.
ಗಮನಿಸಬೇಕಾದ ಒಂದು ವಿಷಯ
“ಆದರೆ” ಕೆಲವರು ಹೇಳಬಹುದು, “ಅದೆಲ್ಲವೂ ಇತಿಹಾಸ.” ಆಗಿರಬಹುದು. ಆದರೆ ಸಂಪ್ರದಾಯಿಕ ನಂಬಿಕೆಗಳು ಸುಲಭವಾಗಿ ನಶಿಸಲಾರವು. ಮಧ್ಯ ಜಪಾನಿನ ಐಸೆಯಲ್ಲಿರುವ ಪ್ರಸಿದ್ಧ ಶಿಂಟೊ ಪುಣ್ಯ ಕ್ಷೇತ್ರದಲ್ಲಿ, ಶಿಂಟೊ ಯಾಜಕನೊಬ್ಬನು ಇತ್ತೀಚೆಗೆ ಹೇಳಿದ್ದು: “ಸೂರ್ಯ ದೇವತೆಯು ನಮ್ಮ ಸಾಮ್ರಾಟನ ಮತ್ತು ಜಪಾನ್ ವಂಶದವರ ದೈವಿಕ ಪೂರ್ವಜನೆಂದು ತಿಳಿದು ಅನೇಕರು ಇಲ್ಲಿಗೆ ಆರಾಧಿಸಲು ಬರುತ್ತಾರೆ.”
ಯುದ್ಧಕ್ಕೆ ಸಾಮ್ರಾಟನು ಜವಾಬ್ದಾರನೆಂದು ಹೇಳಿದಕ್ಕಾಗಿ ಮೊಟೊಶಿಮನನ್ನು ಕೊಲ್ಲುವ ಬೆದರಿಕೆಯಿಂದ ಸಾಮ್ರಾಟನಿಗಿರುವ ಗೌರವದ ಮಟ್ಟವು ಸ್ಪಷ್ಟಿಪಡಿಸಲ್ಪಟ್ಟಿದೆ. ಪೆಟ್ರೋಲಿನ ಡಬ್ಬಿಯೊಂದಿಗೆ ಮೊಟೊಶಿಮನ ಆಫೀಸಿನೊಳಗೆ ನುಗ್ಗಲು ಪ್ರಯತ್ನಿಸಿದ ಒಬ್ಬ ಮನುಷ್ಟನನ್ನು ಬಂಧಿಸಲಾಯಿತು ಮತ್ತು “ಮೊಟೊಶಿಮಗೆ ಮರಣ” ಎಂದು ನೂರಾರು ಧ್ವನಿವಾಹಕಗಳು ನಾಗಸಾಕಿಯ ಬೀದಿಗಳಲ್ಲಿ ಪ್ರಸಾರ ಮಾಡಿದವು. ಇನ್ನೂ ಬೇರೆ ರೀತಿಗಳಲ್ಲಿ ಸಾಮ್ರಾಟನಿಗೆ ಗೌರವವು ತೋರಿಸಲ್ಪಟ್ಟಿತು.
ಉದಾಹರಣೆಗಾಗಿ, ಹಿರೋಹಿಟೊನ ಸ್ಥಿತಿಯು ಸಂಕಟಮಯವಾದಾಗ, ದೇಶದಲ್ಲಿ ಆತ್ಮ ಸಂಯಮದ ಪ್ರಚಂಡವಾದ ಅಲೆಯು ಬೀಸಿತು. ಹಬ್ಬಗಳು ಮತ್ತು ಸಮಾಜಗೋಷ್ಟಿಗಳು ರದ್ದುಮಾಡಲ್ಪಟ್ಟವು. ಆನಂದದ ಸಂದರ್ಭಗಳಿಗಾಗಿ ಒದಗಿಸುವ ವ್ಯವಹಾರವು ಪ್ರತಿಕೂಲವಾಗಿ ಬಾಧಿಸಲ್ಪಟ್ಟಿತು. ವ್ಯಾಯಾಮದ ಸೇರಿಸುವಿಕೆಗಳನ್ನು ರದ್ದುಪಡಿಸುವಂತೆ ಶಾಲೆಯ ಮಕ್ಕಳನ್ನು ಒತ್ತಾಯಿಸಲಾಯಿತು. ಯಾಕುಜಾ ಅಥವಾ ದರೋಡೆಕೋರರು ಸಹಾ ಜಗಳವಾಡುವುದನ್ನು ಮತ್ತು ಗುಂಡುಹೊಡೆಯುವದನ್ನು ನಿಲ್ಲಿಸಿದರು. ಜಪಾನಿನಲ್ಲಿ ಜೀವವು ನಾಟಕೀಯವಾಗಿ ಪ್ರಭಾವಕ್ಕೊಳಪಟ್ಟಿತು, ಆದ್ದರಿಂದ ದ ಡೈಲೀ ಯೊಮ್ಯೂರಿ ಹೀಗೆ ಹೇಳಲು ಕಾರಣವಾಯಿತು, “ದೇಶವು ಸಾಮ್ರಾಟನ ಅನಾರೋಗ್ಯಕ್ಕೋಸ್ಕರ ಅತಿಯಾಗಿ ಪ್ರತಿಕ್ರಿಯಿಸಿದೆ.”
ಕೆಲವರು ಈ ಅತ್ಯಭಿಮಾನದಿಂದ ಭಯಭೀತರಾದರು. ಅವರು ಇದನ್ನು ಒಪ್ಪದಿದ್ದರೂ ಕೂಡ, ಒಂದುವೇಳೆ ಇದನ್ನು ಮಾಡದಿದ್ದರೆ ಪ್ರತಿಕೂಲ ಪರಿಣಾಮಗಳು ಸಂಭವನೀಯ ಎಂದೆಣಿಸಿ ಅವರು ಸಾಮಾನ್ಯವಾಗಿ ಇದನ್ನು ಸಹಿಸಿದರು ಮತ್ತು ಮನ್ನಿಸಿದರು. “ಈ ಸಮಯದಲ್ಲಿ ಸಂಪ್ರದಾಯ ಪಾಲಕನಾಗಿರುವುದು ಒಂದು ಸುರಕ್ಷಿತ ವಿಷಯ” ಎಂದನು ಒಬ್ಬ ಮನಶಾಸ್ತ್ರಜ್ಞ. ಆದರೆ ಮುಂಚಿನ ಸೈನಿಕನೊಬ್ಬನು ಪ್ರಲಾಪಿಸಿದ್ದು: “ಜನರು ಕೇವಲ ಸುತ್ತಲೂ ನೋಡುತ್ತಾರೆ ಮತ್ತು ಇತರರು ಮಾಡುವುದನ್ನು ಅನುಸರಿಸುತ್ತಾರೆ. ಇದು ನಿಶ್ಚಯವಾಗಿ ನಮ್ಮನ್ನು ಯುದ್ಧಕ್ಕೆ ಉದ್ರೇಕಿಸಿದ ಅದೇ ತರಹದ ಚೌಕಟ್ಟಾಗಿದೆ.”
ಆದರೆ, ಕೇವಲ ನಿಮ್ಮ ಸುತ್ತಲಿನವರ ವರ್ತನೆ ಮತ್ತು ಆರಾಧನೆಯ ಮೇಲೆ ನಾವು ಹೇಗೆ ವರ್ತಿಸುತ್ತೇವೆ ಮತ್ತು ವಿಶೇಷವಾಗಿ ನಾವು ಯಾರನ್ನು ಆರಾಧಿಸುತ್ತೇವೆ ಎಂಬದು ನಿರ್ಣಯಿಸಲ್ಪಡಬೇಕೋ? ನಿಷ್ಪಲದಾಯಕ ಯುದ್ಧದಲ್ಲಿ ತಮ್ಮ ಜೀವವನ್ನು ಕೊಡುವಂತೆ, ತಳಪಾಯವಿಲ್ಲದ ಧಾರ್ಮಿಕ ನಂಬಿಕೆಗಳ ಕಾರಣದಿಂದ ಮಿಲಿಯಗಟ್ಟಲೆ ಜನರನ್ನು ನಡಿಸಿದ ಬಗ್ಗೆ ಯೋಚಿಸಿರಿ! ಕುರುಡುತನದಿಂದ ಗುಂಪೊಂದನ್ನು ಅನುಸರಿಸುವುದು ನಿಶ್ಚಯವಾಗಿ ವಿಪತ್ಕಾರಕವಾಗಿರ ಸಾಧ್ಯವಿದೆ. ಈ ಐತಿಹಾಸಿಕ ಘಟನೆಗಳು ಮನಸ್ಸಿಗೆ ತಂದು ‘ನಾವು ಏನನ್ನು ತಿಳಿದಿಲ್ಲವೋ’ ಅದನ್ನು ಆರಾಧಿಸುವುದು ನಿಜವಾಗಿ ಆಪತ್ತಾಗಿರಬಹುದೆಂಬ ಪಾಠವನ್ನು ಕಲಿಸಬೇಕು. (ಯೋಹಾನ 4:22) ಆದ್ದರಿಂದ, ನಾವು ನಿಜವಾಗಿ ತಿಳಿದಿರುವದನ್ನು ಆರಾಧಿಸುತ್ತೇವೋ ಎಂಬದನ್ನು ಪರೀಕ್ಷಿಸುವುದು ಎಷ್ಟು ಪ್ರಾಮುಖ್ಯವು! (g89 12/22)
[ಅಧ್ಯಯನ ಪ್ರಶ್ನೆಗಳು]
a ತಮ್ಮ ಗುರಿಯ (ಹಡಗೊಂದರ) ಮೇಲೆ ಆತ್ಮಹತ್ಯೆಯ ಧಾಳಿ ಮಾಡುವ ಜಪಾನಿನ ವಾಯುದಳದ ಸದಸ್ಯರು ಸಹಾ ಕಾಮಿಕಾಜಿ ಎಂದು ಕರೆಯಲ್ಪಡುತ್ತಿದ್ದರು.
[ಪುಟ 8 ರಲ್ಲಿರುವಚಿತ್ರ]
ಸಾಮ್ರಾಟನ ಹೆಸರಿನಲ್ಲಿ ಸಾವಿರಾರು ಮಂದಿ ಸತ್ತರು
[ಕೃಪೆ]
Above: Official U.S. Navy photo.
[ಚಿತ್ರ] Hirohito acknowledged his responsibility for the war to General Douglas MacArthur
ಹಿರೋಹಿಟೊ ಯುದ್ಧಕ್ಕಾಗಿ ತನ್ನ ಜವಾಬ್ದಾರಿಯನ್ನು ಜನರಲ್ ಡಗ್ಲಸ್ ಮ್ಯಾಕಾರ್ಥರ್ ಮುಂದೆ ಒಪ್ಪಿದ್ದನು
[ಕೃಪೆ]
Right: U.S. Army