ಹಿಂದಿನ ದೇವರೊಬ್ಬನಿಗೆ ಶವಸಂಸ್ಕಾರ
ಜಪಾನಿನ ಅವೇಕ್! ಬಾತ್ಮಿದಾರನಿಂದ
ಸುಮಾರು 62 ವರ್ಷಗಳಿಗಿಂತ ಹೆಚ್ಚು ಆಳ್ವಿಕೆಯನ್ನು ನಡಿಸಿದ ನಂತರ, ಜಪಾನಿನ ಸಾಮ್ರಾಟ ಹಿರೋಹಿಟೊ ಕಳೆದ ಜನವರಿ 7ರಂದು ಮೃತನಾದನು. ಅವನಿಗೆ 87 ವಯಸ್ಸಾಗಿತ್ತು. ಫೆಬ್ರವರಿ 24 ರಂದು ಅವನ ಶವಸಂಸ್ಕಾರಕ್ಕೆ 164 ದೇಶಗಳಿಂದ ಪ್ರತಿನಿಧಿಗಳು ಹಾಜರಿದ್ದರು. ಆದಾಗ್ಯೂ, ಬಹಳ ಜನರು ಅದಕ್ಕೆ ಹಾಜರಾಗಬೇಕೋ ಅಥವಾ ಬೇಡವೋ ಎಂಬ ಸಂಕಟಕ್ಕೆ ಈಡಾದರು. ಏಕೆ? ಮತ್ತು ಹಿರೋಹಿಟೊನ ಮರಣವು ನಮ್ಮ ಮುಖಪುಟದ ಪ್ರಶ್ನೆಯೊಂದಿಗೆ ಏನು ಮಾಡಲಿಕ್ಕದೆ: ನಿಮ್ಮ ದೇವರು ಜೀವಂತನೋ?
“ಸಾಮ್ರಾಟ ಹಿರೋಹಿಟೊ ಒಬ್ಬ ಜೀವಂತ ದೇವರೆಂದು ಎಣಿಸಿದ್ದರು” ಎಂದು ಜಪಾನ್ ಕ್ವಾರ್ಟರ್ಲಿ ಈ ವರ್ಷಾದಾರಂಭದಲ್ಲಿ ಗಮನಿಸಿತು. ಕೊಡನ್ಶ ಎನ್ಸೈಕ್ಲೊಪೀಡಿಯಾ ಆಫ್ ಜಪಾನ್ ಅವನನ್ನು “ಶಿಂಟೋ ದೇವತೆಗಳ ಸಮೂಹದಲ್ಲಿ ಮುಖ್ಯದೇವರು” ಆದ ಅಮಟೆರಸು ಒಮಿಕಾಮಿ ಸೂರ್ಯ ದೇವತೆಯ 124 ನೆಯ ಮಾನವ ವಂಶದವನೆಂದು ಪಟ್ಟಿಮಾಡಿತ್ತು.
ಈ “ಜೀವಂತ ದೇವತೆ” ಗೆ ತಮ್ಮ ಪ್ರಾಣವನ್ನು ಅರ್ಪಿಸುವಂತೆ ಜಪಾನಿನ ಸೈನಿಕರಿಗೆ ಕೇಳಿದಾಗ ಅವರು ಅಚ್ಚರಿಗೊಳಿಸುವ ಆವೇಶದಿಂದ ಅದನ್ನು ಮಾಡಿದರು. ಎರಡನೆಯ ಲೋಕ ಯುದ್ಧದಲ್ಲಿ ಅವರ ದೇವರಿಗಾಗಿ ಅಂದರೆ ಸಾಮ್ರಾಟನಿಗಾಗಿ ಹೋರಾಡುವ ಜಪಾನಿನ ಭಕ್ತರಿಗಿಂತ ಉಗ್ರ ಯೋಧರು ಅಲ್ಲಿ ಬೇರೆ ಯಾರೂ ಇರಲಿಲ್ಲ.
ಶ್ರೇಷ್ಟ ಸಂಖ್ಯೆಯ ಮಿಲಿಟರಿ ಶಕ್ತಿಯಿಂದ ಪೂರ್ತಿ ತುಂಬಿದ್ದರೂ ಜಪಾನಿನವರು ಯುದ್ಧದಲ್ಲಿ ಸೋತರು. ಹೆಚ್ಚು ಕಡಿಮೆ ಐದು ತಿಂಗಳ ನಂತರ ಹಿರೋಹಿಟೊ ಜನವರಿ 1, 1946ರ ಐತಿಹಾಸಿಕ ಶಾಸನದಲ್ಲಿ ರಾಷ್ಟ್ರದ ಮುಂದೆ “ಸುಳ್ಳು ಕಲ್ಪನೆಯಾದ ಸಾಮ್ರಾಟನು ದೈವಿಕ” ನೆಂಬದನ್ನು ನಿರಾಕರಿಸಿದನು. “ಕೇವಲ ಕಥೆ ಮತ್ತು ಕಲ್ಪನೆಗಳು” ಈ ನಂಬಿಕೆಗೆ ಜವಾಬ್ದಾರವೆಂದು ಅವನು ಹೇಳಿದನು.
ಎಂಥಾ ಆಘಾತ! ಮಿಲಿಯಗಟ್ಟಲೆ ಜಪಾನಿನ ಜನರು ತೀವ್ರವಾಗಿ ತತ್ತರಿಸಿದರು. ಸಾಮ್ರಾಟನು ಒಬ್ಬ ದೇವರು ಎಂದು ಸುಮಾರು 2,600 ವರ್ಷಗಳಿಂದ ಎಣಿಸಲಾಗಿತ್ತು!a ಈಗ ಅವನೊಬ್ಬ ದೇವರಲ್ಲ? ಈ ಮನುಷ್ಯನನ್ನು ಒಮ್ಮೆ ಎಷ್ಟು ಘನಪಡಿಸುತ್ತಿದ್ದರೆಂದರೆ ಜನರು ಅವನನ್ನು ಕಣ್ಣೆತ್ತಿ ನೋಡುತ್ತಲೂ ಇರಲಿಲ್ಲ, ಆದರೆ ಈಗ ಅವನು ದೇವತೆಯಲ್ಲ? ಸಾಮ್ರಾಟನು ದೈವಿಕನೆಂಬ ದೀರ್ಘಕಾಲದ ವಿಶ್ವಾಸವನ್ನು ಬಿಟ್ಟುಬಿಡುವುದು ಅಷ್ಟೊಂದು ಸುಲಭವಲ್ಲ. ಆದಾಗ್ಯೂ, ಶತಮಾನಗಳ ಪುರಾತನ ಸಂಪ್ರದಾಯದಿಂದ ಹಲವಾರು ಮುಂಚಿನ ಸಾಮ್ರಾಜ್ಯದ ಜಪಾನಿನ ಸೈನಿಕರು ಹಿರೋಹಿಟೊನ ಮರಣವನ್ನು ತಿಳಿದು ತಮ್ಮನ್ನು ತಾವೇ ಹತಿಸಿಕೊಂಡರು.
ನಿಜವಾಗಿ ಹಿರೋಹಿಟೊ ಯಾರು? ಮತ್ತು ಅವನ ಪಾತ್ರವು ಇತಿಹಾಸದಲ್ಲಿ ಇಷ್ಟು ವಾದಾಸ್ಪದವಾಗುವಂತೆ ಮಾಡಿದ್ದು ಯಾವುದು? ಫೆಬ್ರವರಿ 24, 1989 ರಲ್ಲಿ ಅವನ ಶವದ ಪೆಟ್ಟಿಗೆಯನ್ನು ಹೊತ್ತಿರುವ ಬಂಡಿಯು ಟೋಕಿಯೋ ರಾಜ ಅರಮನೆಯಿಂದ ಹೊರಟು, ರಾಜ್ಯ ಶವ ಸಂಸ್ಕಾರಕ್ಕಾಗಿ ಶಿನ್ಜುಕು ಗ್ಯೊಯೆನ್ ಪಾರ್ಕಿಗೆ ಮುಂದುವರಿಯುತ್ತಿತ್ತು. ಮಿಲಿಯಗಟ್ಟಲೆ ಟೀವೀ ವೀಕ್ಷಕರಿಗೆ ಮತ್ತು ಸುಮಾರು 2,00,000 ದಾರಿಬದಿಯ ಪ್ರೇಕ್ಷಕರಿಗೆ ಇಂಥ ಪ್ರಶ್ನೆಗಳು ಮನಸ್ಸಿಗೆ ಹೊಳೆಯುವಂತೆ ಸಂದರ್ಭ ಕೊಟ್ಟಿತು.
ಆ ವ್ಯಕ್ತಿ ಮತ್ತು ಅವನ ಆಳ್ವಿಕೆ
ಟಾಯಿಶೋ ಸಾಮ್ರಾಟನ ಮಗನಿಗೆ ಅವನ ಹುಟ್ಟುದಿನವಾದ ಎಪ್ರಿಲ್ 29, 1901 ರಲ್ಲಿ ಹಿರೋಹಿಟೊ ಅಂದರೆ “ವಿಸ್ತಾರಮನಸ್ಸಿನ ಉಪಕಾರ ಬುದ್ಧಿಯವ” ಎಂದು ಹೆಸರಿಸಲಾಗಿತ್ತು. 1926ನೇ ಕ್ರಿಸ್ಮಸ್ ದಿನದಲ್ಲಿ ಅವನ ತಂದೆಯು ಸತ್ತಾಗ ಹಿರೋಹಿಟೊ ಅವನ ಬದಲಿಗೆ ಸಾಮ್ರಾಟನಾದನು. ಅವನ ಆಳ್ವಿಕೆಯ ಶಕವನ್ನು ಶೋವಾ ಅಥವಾ ಜ್ಞಾನೋದಯ ಪಡೆದ ಶಾಂತಿ ಎಂದು ಆಸ್ಥಾನದ ವಿದ್ವಾಂಸರು ಹೆಸರನ್ನು ಆರಿಸಿದರು. ಅವನ ಮೃತ್ಯುವಿನ ನಂತರ, ಅವನು ಸಾಮ್ರಾಟ ಹಿರೋಹಿಟೊ ಎಂದಲ್ಲ, ಸಾಮ್ರಾಟ ಶೋವಾ ಎಂದು ತಿಳಿಯಲ್ಪಟ್ಟನು.
ಆದಾಗ್ಯೂ, 1930 ರಲ್ಲಿ ಮಂಚೂರಿಯ ಮತ್ತು ಚೀನಾದಲ್ಲಿ ಜಪಾನಿನ ಮಿಲಿಟರಿ ಸಾಹಸ, 1940 ರಲ್ಲಿ ಫ್ರೆಂಚ್ ಇಂಡೊಚೈನಾದ ಮೇಲೆ ಅತಿಕ್ರಮಣ ಮತ್ತು 1941 ರಲ್ಲಿ ಅಮೆರಿಕದ ಮೇಲೆ ಆಕ್ರಮಣ ಇವುಗಳನ್ನು ಎಣಿಸಿದರೆ, ಹಿರೋಹಿಟೊನ ಆರಂಭದ ಆಳಿಕೆಯು ಜ್ಞಾನೋದಯ ಪಡೆದ ಶಾಂತಿ ಎಂದು ಹೇಳುವ ಬದಲಿಗೆ ಬೇರೆಯೇ ಆಗಿತ್ತು. ಹಿರೋಹಿಟೊನ ಹೆಸರಿನ ಆಳಿಕೆಯ ಆರಂಭದ ವರ್ಷಗಳ ಸಮಯವನ್ನು ಒಬ್ಬನು ವಿಚಾರ ಮಾಡುವದಾದರೆ, ವಿಶೇಷವಾಗಿ ಹಾಸ್ಯಾಸ್ಪದವಾಗಿತ್ತು. ವಾಸ್ತವವಾಗಿ ತನ್ನ ಅಧಿಕಾರಯುಕ್ತ ಸಮ್ಮತಿಯಿಂದ ನಡಿಸಲ್ಪಟ್ಟ ಯುದ್ಧಗಳಲ್ಲಿ ಲಕ್ಷಗಟ್ಟಲೆ ಜನರ ಜೀವಗಳು ನಶಿಸಲ್ಪಟ್ಟವು.
ಜಪಾನ್ ತನ್ನ ಯುದ್ಧದ ನಂತರದ ಆರ್ಥಿಕತೆಯನ್ನು ಮರಳಿ ಪಡೆದರೂ ಅಂದಿನಿಂದ ಆನಂದಿಸಲ್ಪಟ್ಟ ಜಪಾನಿನ ಶಾಂತಿಯ ಕಾಲವನ್ನು ಜ್ಞಾನೋದಯ ಪಡೆದ ಶಾಂತಿಯಂತೆ ಎಣಿಸಲಾಗದು. 86 ವಯಸ್ಸಿನ ಜಪಾನಿನ ಲೇಖಕ ಸ್ಯೂ ಸುಮ್ಮಿ ಹೇಳುವುದು: “ಶೋವಾ ಶಕವನ್ನು ನಾನು ಹಿಂತಿರುಗಿ ನೋಡಿದರೆ ನನಗೆ ಶೂನ್ಯವೆಂಬಂತೆ ಭಾಸವಾಗುತ್ತದೆ. ಜಪಾನ್ ಯುದ್ಧದಲ್ಲಿ ಸೋತಂದಿನಿಂದ ದೇಶವು ಅವನತಿಯಲ್ಲಿದೆ ಎಂದು ನನಗೆ ಅನಿಸುತ್ತದೆ. . . . ಜಪಾನಿನ ಸಮೃದ್ಧಿ ಒಂದು ಭ್ರಮೆ.”
ಮಿಶ್ರ ಭಾವನೆಗಳು
ಜಪಾನಿನ ಅಧಿಕಾರದ ಕೆಳಗೆ ಮತ್ತು ಅದರ ವಿರುದ್ಧವಾಗಿ ಹೋರಾಡಿದ ರಾಷ್ಟ್ರಗಳು ಹಿರೋಹಿಟೊನ ಶವಸಂಸ್ಕಾರಕ್ಕೆ ಪ್ರತಿನಿಧಿಗಳನ್ನು ಕಳುಹಿಸಲು ವಿಚಾರ ಮಾಡಬೇಕಾಯಿತು. ಉದಾಹರಣೆಗೆ, ಜಪಾನಿನ ಅಧಿಕಾರವಿದ್ದ ಕೊರಿಯದ ಪರ್ಯಾಯ ದ್ವೀಪದಲ್ಲಿ, ‘ಸಾಮ್ರಾಟನ ಹೆಸರಿನಲ್ಲಿ’ ‘ತಮ್ಮ ದೇಶಕ್ಕೆ ಮಾಡಿದ ಗುರುತುಗಳನ್ನು’ ಕೊರಿಯದವರು ಈಗಲೂ ನೆನಪಿಸುತ್ತಾರೆ. ಬ್ರಿಟಿಷ್ ಪ್ರೆಸ್ಸುಗಳು ಶವಸಂಸ್ಕಾರವನ್ನು ಬಹಿಷ್ಕರಿಸುವಂತೆ ಕರೆಕೊಟ್ಟಿದ್ದವು. ಕೆಲವು 27,000 ಬ್ರಿಟಿಷ್ ಯುದ್ಧಕೈದಿಗಳು ಸಾಮ್ರಾಟನ ಕೈಯಿಂದ ಹತ್ತಿಸಲ್ಪಟ್ಟದ್ದನ್ನು ಹಲವರು ಮರೆಯುವಂತಿರಲಿಲ್ಲ.
ಅಮೆರಿಕದ ಸ್ಥಿತಿಯೂ ತದ್ರೀತಿಯದ್ದಾಗಿತ್ತು. ಅಲ್ಲಿ ಜಪಾನಿನ ಮಿಲಿಟರಿ ಆಕ್ರಮಣದ ಗಣನೀಯ ದೋಷವನ್ನು ಹಿರೋಹಿಟೊನ ಮೇಲೆ ಹೊರಿಸಲಾಗಿತ್ತು. ಅವನ ಮರಣದ ಸಮಯದಲ್ಲಿ ನ್ಯೂಯೋರ್ಕ್ ಟೈಮ್ಸ್ ಸಂಪಾದಕೀಯ ವ್ಯಕ್ತಪಡಿಸಿದ್ದು: “ಅವನ ಉನ್ನತ ಸ್ಥಿತಿಯಲ್ಲಿ ಜಗತ್ತಿನ ಮಿತಿಯಿಲ್ಲದ ಅನಾಹುತವನ್ನು ಅವನು ತಡೆಯಲು ಸಹಾಯ ಮಾಡಬಹುದಿತ್ತು.”
ಎಲ್ಲಿ ಹಿರೋಹಿಟೊವನ್ನು ಸಾಮಾನ್ಯವಾಗಿ ಶಾಂತಿಪ್ರಿಯ ಸಾಮ್ರಾಟನೆಂದು ಗೌರವಿಸಲ್ಪಡುತ್ತಿತ್ತೋ, ಆ ಜಪಾನಿನಲ್ಲಿ ಕೂಡ ಅವನು ಭಾರಿ ಜವಾಬ್ದಾರಿಕೆಯನ್ನು ಹೊರಬೇಕು ಎಂದು ಕೆಲವರು ಎಣಿಸಿದರು. ಯುದ್ಧದಲ್ಲಿ ತನ್ನ ಹಿರೀ ಸಹೋದರನ ಮೃತ್ಯುವಿನ ಸಂದೇಶವನ್ನು ಕೇಳಿ ಕಟ್ಸುರೋ ನಕಮುರಾ ತನ್ನ ತಂದೆಯ ಮಾತನ್ನು ನೆನಪಿಸುವುದು: “ನನ್ನ ಮಗನು ಆ ವ್ಯಕ್ತಿ ಹಿರೋಹಿಟೊನಿಂದ ಕೊಲ್ಲಲ್ಪಟ್ಟನು.” ಮತ್ತೊಬ್ಬ ಪ್ರಾಯಸ್ಥ ಜಪಾನಿನ ವ್ಯಕ್ತಿ ಮಸಾಶಿ ಇನಗಾಕಿ ವಿವರಿಸುವುದು: “ಯುದ್ಧದಿಂದ ನಾವು ತೀವ್ರ ನರಳಬೇಕಾಯಿತು ಎಂದು ನಾನು ಬಹುಕಾಲದಿಂದಲೇ ಅವನನ್ನು ದೂಷಿಸಿದ್ದೆ.” ಆದರೆ ಅವನು ಕೂಡಿಸಿದ್ದು: “ಸಾಮ್ರಾಟನು ತಾನೇ ತನ್ನ ಜೀವನದ ಮುಖಾಂತರ ಗತಕಾಲದ ಎಲ್ಲವನ್ನು ಹೊರಬೇಕಾಗುತ್ತದೆ ಎಂದು ತಿಳಿದಾಗ ನನ್ನ ಭಾವನೆಗಳು ನಶಿಸಿಹೋದವು.”
ಆತ್ಮವಿಶ್ವಾಸ ತಪ್ಪುಸ್ಥಳದಲ್ಲಿಟ್ಟಾಗ
ಸಾಮ್ರಾಟನ ಸೈನ್ಯಗಳಿಂದ ಅದೇ ಬಲಿಪೀಠದ ಮೇಲೆ ಅರ್ಪಿಸಲ್ಪಟ್ಟ ಬೇರೆ ಮಿಲ್ಯಾಂತರ ಜೀವಗಳನ್ನು ಉಲ್ಲೇಖಿಸದೆ ಇದ್ದರೂ, ಈ ಶಿಂಟೋ ದೇವತೆಯ ಬಲಿಪೀಠದ ಮೇಲೆ ಮಿಲ್ಯಾಂತರ ಜಪಾನೀಯರು ತಮ್ಮ ಜೀವಗಳನ್ನು ಅರ್ಪಿಸಿದರು ಎನ್ನಬಹುದು. ಯಾರು ವಿಶ್ವಾಸವಿಟ್ಟರೋ ಅವರು ತೊಡಕಾದ ಸಿಪಾಯಿ ಪ್ರವೃತ್ತಿಗೆ ಅವರ ದೇವರ ಹೆಸರಿನಲ್ಲಿ ನಿರ್ಭಂಧಿಸಲ್ಪಟ್ಟರು. ನಂತರ ಕೇವಲ ಅವನು ದೇವರು ಅಲ್ಲವೇ ಅಲ್ಲ ಎಂದು ಅವರಿಗೆ ತಿಳಿಸಲ್ಪಟ್ಟಿತು. ಅಸಾಹಿ ಈವ್ನಿಂಗ್ ನ್ಯೂಸ್ ಹೇಳಿದಂತೆ: “ಲಕ್ಷಗಟ್ಟಲೆ ಜಪಾನೀಯರು ತಪ್ಪು ತಿಳುವಳಿಕೆಯಿಂದ ಆಹುತಿಯಾದರು.”
1946 ರಲ್ಲಿ ಅವರ ದೇವರು ತನ್ನ ದೇವತ್ವವನ್ನು ತ್ಯಜಿಸಿದಾಗ ವಿಶ್ವಾಸಿಗಳ ಪ್ರತಿಕ್ರಿಯೆ ಏನಾಗಿತ್ತು? ಸಾಮ್ರಾಟನಿಗೋಸ್ಕರ ಹೋರಾಡಿದ್ದ ಒಬ್ಬನು ಹೇಳುವುದು: “ತೆರೆದ ಸಮುದ್ರದ ಮಧ್ಯೆ ಚುಕ್ಕಾಣಿಯನ್ನು ಕಳಕೊಂಡ ಹಡಗಿನಂತೆ” ಅವನ ಅನುಭವವಾಯಿತು. ಅವನ ಪ್ರತಿಕ್ರಿಯೆ ಪ್ರತಿನಿಧಿರೂಪದ್ದಾಗಿತ್ತು. ಯಾರು ಯುದ್ಧದಲ್ಲಿ ಬದುಕಿ ಉಳಿದರೋ ಅವರು “ಒಮ್ಮೆಲೇ ಅಗಾಧ ಶೂನ್ಯತೆಯಲ್ಲಿ ಹಾಕಲ್ಪಟ್ಟರು” ಎಂದು ಜಪಾನಿನ ಕವಿ ಸಾಕೊನ ಸೌ ಪ್ರಲಾಪಿಸಿದರು. ಅವರು ಆ ಶೂನ್ಯತೆಯನ್ನು ಹೇಗೆ ತುಂಬಿಸಬಲ್ಲರು?
“ನಾನು ಸಂಪೂರ್ಣವಾಗಿ ಮೋಸಗೊಳಿಸಲ್ಪಟ್ಟೆ. ನಾನು ದೇವರಿಗಾಗಿ ಹೋರಾಡಲಿಲ್ಲ. ಆದರೆ ಸಾಮಾನ್ಯ ಮನುಷ್ಯನಿಗಾಗಿ” ಎಂದು ಕಿಯೊಶಿ ತಮುರಾ ಹೇಳುತ್ತಾರೆ. “ಅದರ ನಂತರ ನನಗೆ ಅದರಲ್ಲಿ ವಿಶ್ವಾಸವಿಡಲು ಏನಿದೆ?” ಕಿಯೊಶಿಯು ಶ್ರೀಮಂತಿಕೆಯನ್ನು ಗಳಿಸಲು ಉದ್ರೇಕದಿಂದ ಕೆಲಸ ಮಾಡ ತೊಡಗಿದನು. ಆದರೆ ಇವು ಸಮಾಧಾನವನ್ನು ತರಲು ವಿಫಲವಾದವು. ನಿಮ್ಮ ನಂಬಿಕೆಯು ನುಚ್ಚುನೂರಾದಾಗ ಬೆಲೆಯಿಲ್ಲದ ಮೂಲ್ಯತೆಗಳು ಶೂನ್ಯತೆಯನ್ನು ತುಂಬಲು ಬಿರುಸಿನಿಂದ ನುಗ್ಗಬಹುದು.
ಸಾಮ್ರಾಟ ಶೋವ ಮತ್ತು ಅವನ ಶವಸಂಸ್ಕಾರವನ್ನು ಪ್ರತಿಬಿಂಬಿಸುವುದರಿಂದ ಒಂದು ಪಾಠವನ್ನು ಕಲಿಯಬಹುದು. ಅದೇನಂದರೆ, “ನಿಮಗೆ ಅರಿಯದಿರುವುದನ್ನು ಆರಾಧಿಸುವುದಾದರೆ” ಅದು ಆಪತ್ತಾಗಿರುವುದು. (ಯೋಹಾ. 4:22) ನೀವು ಯಾರನ್ನು ಆರಾಧಿಸುತ್ತೀರಿ? ಅವನು ನಿಜವಾಗಿಯೂ ದೇವರೂ ನಿಮ್ಮ ಆರಾಧನೆಗೆ ಯೋಗ್ಯನೂ ಆಗಿದ್ದಾನೆಂಬ ನಂಬಿಕೆಗೆ ನಿಮ್ಮಲ್ಲಿ ಭದ್ರವಾದ ಆಧಾರವಿದೆಯೋ?
ಇಂದು ಕೂಡ ಕೆಲವು ವ್ಯಕ್ತಿಗಳು, ದಲೈಲಾಮನಂತಿರುವವರು ಜೀವಂತ ಬುದ್ಧನೆಂದು ಎಣಿಸಲ್ಪಟ್ಟು, ತಮ್ಮ ಭಕ್ತರಿಂದ ಆರಾಧಿಸಲ್ಪಡುವುದರಿಂದ ನಾವೆಲ್ಲರೂ ಈ ವಿಷಯದ ಮೇಲೆ ಪ್ರತಿಬಿಂಬಿಸುವುದು ಅಗತ್ಯವಾಗಿದೆ. ಕ್ರೈಸ್ತರೆನಿಸಿಕೊಳ್ಳುವ ಅನೇಕರು ತ್ರಯೈಕ್ಯವನ್ನು ನಂಬುವಂತೆ ಕಲಿಸಲ್ಪಟ್ಟಿದ್ದಾರೆ, ಮತ್ತು ತಂದೆ, ಮಗ, ಮತ್ತು ಪವಿತ್ರಾತ್ಮ ಎಂಬ ಮೂವರಿಂದ ರಚಿಸಲ್ಪಟ್ಟ ಎಂಬ ಊಹನೆಯ ತ್ರಿತ್ವವನ್ನು ಆರಾಧಿಸುತ್ತಾರೆ. ಯಾರು ನಿಜವಾಗಿ ದೇವರಾಗಿರಲಿಲ್ಲವೋ ಆ ದೇವರ ಮೇಲೆ ವಿಶ್ವಾಸವಿಡುವಂತೆ ಜಪಾನಿಯರು ಹೇಗೆ ನಡಿಸಲ್ಪಟ್ಟರು ಮತ್ತು ನಾವು ಇದರಿಂದ ಏನನ್ನು ಕಲಿಯ ಸಾಧ್ಯವಿದೆ ಎಂದು ನೋಡಲು ಮುಂದಿನ ಲೇಖನವನ್ನು ಗಮನಿಸಿರಿ. (g89 12/22)
[ಅಧ್ಯಯನ ಪ್ರಶ್ನೆಗಳು]
a 124 ಜನರ ಪಟ್ಟಿಯಲ್ಲಿ ಆರಂಭದ ಸಾಮ್ರಾಟರುಗಳು (ಹಿರೋಹಿಟೊವಿನ ಮಗನಾದ ಅಕಿಹಿಟೊವಿನಿಂದ ಲೆಕ್ಕ ಮಾಡಿದರೆ 125) ಒಂದು ಪುರಾಣಕತೆಯೆಂದು ಪರಿಗಣಿಸಲ್ಪಟ್ಟರೂ, ಕಡಿಮೆ ಪಕ್ಷ ಸಾ.ಶ. ಐದನೆಯ ಶತಕದಿಂದ ಯಾ ಹೆಚ್ಚು ಕಡಿಮೆ, ಸಾಮ್ರಾಟರುಗಳು ನೈಜ ವ್ಯಕ್ತಿಗಳಾಗಿದ್ದರು. ಇದು ಜಪಾನಿನ ಅರಸುಮನೆತನವನ್ನು ಲೋಕದ ಅತೀ ಪ್ರಾಚೀನ ವಂಶಪಾರ್ಯಂಪರ್ಯ ರಾಜಮನೆತನವನ್ನಾಗಿ ಮಾಡುತ್ತದೆ.
[Picture on page ]
Japanese character (above left ) means “ god, deity”
[Picture Credit Line on page ]
Hirohito (opposite): U.S. National Archives photo