ನೀವು ಒಬ್ಬ ಜೀವಂತ ದೇವರನ್ನು ಆರಾಧಿಸುತ್ತೀರೋ?
ಎರಡನೆಯ ಜಾಗತಿಕ ಯುದ್ಧದ ನಂತರ—ಜಪಾನಿನ ಚಕ್ರವರ್ತಿಯ ಐತಿಹಾಸಿಕ ನಿರಾಕರಣೆಯ ನಂತರ—ತಡಾಶಿ ಇಶಿಗುರೊ ಹುಟಿದ್ದಾಗ್ಯೂ, ಅವನು ಇನ್ನೂ ಸಾಮ್ರಾಟನು ದೇವರೆಂದು ನಂಬುತ್ತಿದ್ದನು. “ಅವನು ತನ್ನ ದೈವಿಕತೆಯನ್ನು ತ್ಯಜಿಸಬಾರದಿತ್ತು” ಎಂದು ತಡಾಶಿ ಹೇಳುತ್ತಾನೆ.
ಆದರೆ, ಅವನ ಸಹೋದರನು ಈ ವಿಷಯದಲ್ಲಿ ಅವನೊಂದಿಗೆ ಚರ್ಚಿಸಿದನು: ‘ಸಾಮ್ರಾಟನೂ ಇತರ ಮನುಷ್ಯರಂತೆ ಮುದುಕನಾಗುತ್ತಾನೆ ಮತ್ತು ರೋಗಗ್ರಸ್ಥನಾಗುತ್ತಾನೆ. ಇತರ ಎಲ್ಲಾ ಮನುಷ್ಯರಿಗೆ ಸಂಭವಿಸುವ ಮರಣವನ್ನು ಅವನೂ ತಪ್ಪಿಸಿಕೊಳ್ಳಲಾರನು. ಬೇರೆ ಜನರನ್ನು ಬಿಡಲಿ, ತನ್ನನ್ನು ತಾನೇ ಅವನು ರಕ್ಷಿಸಿಕೊಳ್ಳಲಾರನು.’ ಆ ಸಮಯದಲ್ಲಿ ತನ್ನ ಸಹೋದರನು ಬೈಬಲನ್ನು ಉಲ್ಲೇಖಿಸಿ ಚರ್ಚಿಸಿದನಂತರ, ತಡಾಶಿ ತನ್ನ ನಂಬಿಕೆಯನ್ನು ಸಮೀಪದಿಂದ ಪರೀಕ್ಷಿಸಲು ನಿರ್ಧರಿಸಿದನು.—ಪ್ರಸಂಗಿ 3:19; ರೋಮಾಯ 5:12.
ಇದೇ ಸಮಯದಲ್ಲಿ, ಅವನು ಬೈಬಲಿನ ಪ್ರಬೋಧನೆಯ ವಿವೇಕವನ್ನು ನೋಡಲಾರಂಭಿಸಿದನು: “ಪ್ರಭುಗಳಲ್ಲಿ ಭರವಸವಿಡಬೇಡಿರಿ, ಮಾನವನನ್ನು ನೆಚ್ಚಬೇಡಿರಿ.” ಯಾಕೆ ಇಲ್ಲ? ಯಾಕೆಂದರೆ ಬೈಬಲ್ ಹೇಳುವಂತೆ: “ಅವನು ಸಹಾಯ ಮಾಡಶಕ್ತನಲ್ಲ. ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ. ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146: 3, 4) ನಿಜವಾಗಿಯೂ, ಮೃತಮಾನವನನ್ನು ದೇವರುಗಳಂತೆ ಅವನಲ್ಲಿ ಭರವಸವಿಡುವದು ಕೇವಲ ಆಶಾಭಂಗ ಹಾಗೂ ಆಪತ್ತಿಗೆ ನಡಿಸುವದು!
ಸೂರ್ಯ ದೇವತೆ ಅಮತೇರಸ ಒಮಕಾಮಿ ಎಂಬವನ ತಂದೆಯಾದ ಇಜಾನಗಿಯ ಭರ್ಜಿಯಿಂದ ಬೀಳುವ ತುಂತುರುಹನಿಗಳಿಂದ ಜಪಾನಿನ ದ್ವೀಪಸ್ತೋಮವು ಸೃಷ್ಟಿಸಲ್ಪಟ್ಟಿರಬಹುದೆಂದು ಎಣಿಕೆ. ಆದರೆ ಇಂಥಾ ನಂಬಿಕೆಗೆ ನಿಜವಾದ ಅಸ್ತಿವಾರವಿಲ್ಲ. ಹಾಗಾದರೆ, ಜಪಾನಿನ ಚಕ್ರವರ್ತಿಯು ಈ ದೇವತೆಯ ಮನುಷ್ಯ ವಂಶಜನೆಂದು ಮತ್ತು ದೈವಿಕನೆಂಬ ಈ ನಂಬಿಕೆಯ ಕುರಿತಾಗಿ ಏನು? ಇದು ಕೂಡ ಒಂದು ಆಧಾರವಿಲ್ಲದ ಕಾಲ್ಪನಿಕ ಕಥೆಯಲ್ಲವೇ? ಅವರಿಗೆ ನಿಜವಾಗಿಯೂ ಏನು ತಿಳಿದಿರಲಿಲ್ಲವೋ ಅದನ್ನು ಆರಾಧಿಸಿದರಿಂದ, ಯಾರು ತಮಗೆ ಸಹಾಯ ಮಾಡಲು ಅಶಕ್ಯನೋ ಅವನಿಗಾಗಿ ಸಾವಿರಾರು ಜಪಾನಿಯರು ತಮ್ಮ ಜೀವವನ್ನು ಅರ್ಪಿಸಿದರು. ಎಷ್ಟೊಂದು ಶೋಚನೀಯ!
ತನ್ನ ಸಹೋದರನೊಂದಿಗೆ ಚರ್ಚೆಯ ಪರಿಣಾಮವಾಗಿ ತಡಾಶಿಯು ಈ ನಮ್ಮ ಸುಂದರ ಭೂಮಿ ಮತ್ತು ಅದರ ಮೇಲಿರುವ ಜೀವ, ಒಬ್ಬ ಶಕ್ತಿಶಾಲಿ ಮತ್ತು ಪ್ರೀತಿಯ ಸೃಷ್ಟಿಕರ್ತನ ಉತ್ಪಾದನೆಯೆಂದು ತಿಳಿದನು. (ಇಬ್ರಿಯ 3:4) ಬೈಬಲಿಗನುಸಾರವಾಗಿ, ಸತ್ಯದೇವರು “ಯುಗಯಗಾಂತರಗಳಲ್ಲಿರುವವನಾಗಿದ್ದಾನೆ.” (ಕೀರ್ತನೆ 90:2) ಅವನು ನಿರಂತರವೂ ಸಜೀವನಾಗಿದ್ದಾನೆ. ಅವನು ಕೇವಲ 70 ಅಥವಾ 80 ವರ್ಷಗಳ ಜೀವಿತದ ಅವಧಿಗೆ ಸೀಮಿತನಾಗಿಲ್ಲ ಅಥವಾ ಅವನು ಸಲಹೆಗಾರರಿಂದ ಬರುವ ಸಲಹೆಯ ಮೇಲೆ ಆತುಕೊಂಡಿಲ್ಲ.—ಕೀರ್ತನೆ 90:10; ರೋಮಾಯ 11:34.
ಬದಲಾಗಿ, ಬೈಬಲ್ ಸೃಷ್ಟಿಕರ್ತನ ಕುರಿತು ಹೇಳುವುದು: “ಪರಲೋಕ ಸೈನ್ಯದವರಲ್ಲಿಯೂ ಭೂಲೋಕದವರಲ್ಲಿಯೂ ತನ್ನ ಇಚ್ಛಾನುಸಾರ ನಡಿಯುತ್ತಾನೆ; ಯಾರೂ ಅವನ ಕೈಯನ್ನು ಹಿಂದಕ್ಕೆ ತಳ್ಳಲಾರರು. ನೀನು ಏನು ಮಾಡುತ್ತೀ ಎಂದು ಕೇಳಲಾರರು.” (ದಾನಿಯೇಲ 4:35) ದೇವರುಗಳಂತೆ ಸತ್ಕರಿಸಲ್ಪಡುವದಾದರೂ ತಮ್ಮ ಸ್ವಇಚ್ಛೆಯನ್ನು ಪೂರೈಸಿಕೊಳ್ಳಲಾರದ ಮಾನವರಿಂದ ಇದು ಎಷ್ಟು ಭಿನ್ನವಾಗಿದೆ!
ತಡಾಶಿಯು ಬೈಬಲನ್ನು ಅಭ್ಯಾಸಿಸಿದಂತೆ, ಅದನ್ನು ಪ್ರೇರಿಸಿದ ದೇವರ ಮೇಲಿನ ನಂಬಿಕೆಯು ಬೆಳೆಯ ತೊಡಗಿತು. ಇವನು ಒಬ್ಬ ಕಾಲ್ಪನಿಕ ದೇವರಲ್ಲ. ಬದಲಾಗಿ, ಇವನು ವಾಸ್ತವಿಕ, ಅದೃಶ್ಯ ವ್ಯಕ್ತಿ. ಮನುಷ್ಯರು ಬರೆಯುವಂತೆ ಪ್ರೇರಿಸಿದ ದೇವರು, ತನ್ನ ಹೆಸರು ಯೆಹೋವನೆಂದು ಬೈಬಲಲ್ಲಿ ಹೇಳುತ್ತಾನೆ. (ಕೀರ್ತನೆ 83:18) ತಾನು ಏನು ಮಾಡಿದ್ದಾನೆ, ಏನನ್ನು ಮಾಡಲು ಉದ್ದೇಶಿಸಿದ್ದಾನೆ, ಅವನನ್ನು ಹೇಗೆ ಆರಾಧಿಸಬೇಕು ಎಂಬದನ್ನು ಸಹಾ ಅವನು ನಮಗೆ ತಿಳಿಸಿರುವನು. ಆದರೂ, ಯೆಹೋವನು ಒಬ್ಬ ಜೀವಂತ ದೇವರು ಎಂದೂ ಅವನಲ್ಲಿ ನಿಮ್ಮ ಭರವಸ ವ್ಯರ್ಥವಾಗಬಾರದೆಂದೂ ನೀವು ಹೇಗೆ ಖಾತ್ರಿಯಿಂದಿರಬಹುದು?
ಒಳ್ಳೇದು, ಇತರರೆಲ್ಲರ ಮೇಲೆ ತನ್ನ ಶ್ರೇಷ್ಟತೆಯನ್ನು ಪ್ರಚುರಪಡಿಸುತ್ತಾ ಯೆಹೋವನು ಹೇಳುತ್ತಾನೆ: “ನಾನೇ ಪರಮ ದೇವರು, ನನಗೆ ಸರಿ ಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ನನ್ನ ಸಂಕಲ್ಪವು ನಿಲ್ಲುವುದು. ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನ ಕಾಲದಲ್ಲಿಯೇ ಅರುಹಿದ್ದೇನೆ.”—ಯೆಶಾಯ 46:9, 10.
ಹೀಗೆ ಅವನ ದೇವತ್ವವು ಭವಿಷ್ಯ ಹೇಳುವ ಅವನ ಸಾಮರ್ಥ್ಯದಿಂದ ಮತ್ತು ಸ್ವಇಚ್ಛೆಯು ಪೂರ್ಣವಾಗುವಂತೆ ನೋಡುವುದರಿಂದ ದೃಢೀಕರಿಸಲ್ಪಟ್ಟಿದೆ. ದೇವರೆಂದು ಗೌರವಿಸಲ್ಪಡುವ ಆದರೆ ಅವರ ಪ್ರಜೆಗಳಿಂದ ಕಾಪಾಡಲ್ಪಡುವ ಮನುಷ್ಯರಂತೆ ಅವನಿರದೆ, ಅವನು ತನ್ನ ಸೇವಕರನ್ನು ಕಾಪಾಡಲು ಮತ್ತು ರಕ್ಷಿಸಲು ಶಕ್ತನಾಗಿದ್ದಾನೆ. ಆದ್ದರಿಂದ, ಸರಿಯಾಗಿ ತಡಾಶಿಯು ಬೈಬಲಿನ ದೇವರನ್ನು ಆರಾಧಿಸಲು ತನ್ನ ಸಹೋದರನೊಂದಿಗೆ ಸೇರಿ, ಯೆಹೋವ ದೇವರ ಸೇವೆ ಮಾಡಲು, ಅವನ ಸಾಕ್ಷಿಗಳಲ್ಲಿ ಒಬ್ಬನಾಗುವಂತೆ ನಡಿಸಲ್ಪಟ್ಟನು.
ನೀವು ಯಾರನ್ನು ಆರಾಧಿಸುವಿರಿ?
ಜನರು ದೈವಿಕ ಶಕ್ತಿಯ ಗುಣಗಳನ್ನು ಕೊಟ್ಟ ಮಾನವರನ್ನು ಸೇರಿಸಿ, ಇಂದು ಹಲವಾರು ದೇವರುಗಳು ಆರಾಧಿಸಲ್ಪಡುತ್ತವೆ. ಬೈಬಲ್ ಗಮನಿಸುವದು: “ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವವರಿದ್ದಾರೆ.”(1 ಕೊರಿಂಥ 8:5) ಉದಾಹರಣೆಗೆ, ಪುರಾತನ ಗ್ರೀಸಿನ ಪಟ್ಟಣವಾದ ಏಥೆನ್ಸ್ನಲ್ಲಿ, ಒಂದು ಬಲಿಪೀಠವು ಕಟ್ಟಲ್ಪಟ್ಟಿದ್ದು ಅದರ ಮೇಲೆ “ತಿಳಿಯದ ದೇವರಿಗೆ” ಎಂದು ಕೆತ್ತಲ್ಪಟ್ಟಿತ್ತು. (ಅಪೋಸ್ತಲರ ಕೃತ್ಯ 17:23) ಯಾವುದನ್ನು ಅವರು ನಿಜವಾಗಿ ತಿಳಿದಿರಲಿಲ್ಲವೋ ಅದನ್ನು ಒಪ್ಪಿಕೊಂಡು ಆರಾಧಿಸುವದರಲ್ಲಿ ಅಥೇನಿನವರು ಒಬ್ಬರಾಗಿದ್ದರು.
ಇಂದು ಕೂಡಾ ಏನನ್ನು ನಾವು ತಿಳಿದಿಲ್ಲವೋ ಅದನ್ನು ಆರಾಧಿಸುವಂತೆ ಒಳಗೂಡುವ ಶಕ್ಯತೆ ಇದೆ. ಚಕ್ರವರ್ತಿಯು ದೇವತ್ವವುಳ್ಳವನೆಂಬ ನಂಬಿಕೆಯು ಬೆಳೆಯುವಂತೆ ಮಾಡಿದ ಸುಳ್ಳು ಮಂತ್ರಿಗಳಿಂದ ಮೋಸಹೋಗಿ, ಜಪಾನಿನ ಲಕ್ಷಗಟ್ಟಲೆ ಜನರು ಇಂಥಾ ಆರಾಧನೆಯಲ್ಲಿ ಜತೆಗೂಡಿದ್ದರು. ಚಕ್ರವರ್ತಿಯು ಕೂಡಾ ಇದರಲ್ಲಿ ಮೋಸ ಹೋಗಿದ್ದನು. ಆದ್ದರಿಂದ ಪಾಠವನ್ನು ಕಲಿಯಿರಿ: ನಮ್ಮ ಹೆತ್ತವರು ಯಾವುದನ್ನೋ ನಂಬುತ್ತಿದ್ದರು ಅಥವಾ ಮಂತ್ರಿಗಳು ಹೇಳುವುದು ಸತ್ಯ ಇರಬಹುದು ಎಂಬದು ತನ್ನಷ್ಟಕ್ಕೆ ತಾನೇ ಅದನ್ನು ಸತ್ಯವಾಗಿ ಮಾಡಲಾರದು. ನಾವು ಯಾವುದನ್ನು ಆರಾಧಿಸುತ್ತೇವೋ ಅದನ್ನು ನಿಜವಾಗಿ ತಿಳಿದಿದ್ದೇವೆ ಎಂಬದನ್ನು ಖಾತ್ರಿ ಪಡಿಸಲು ಪರೀಕ್ಷಣೆ ಮಾಡುವ ಅಗತ್ಯ ನಮಗಿದೆ.
ಪುರಾತನ ಅಥೇನ್ಯರು ಅಥವಾ ಎರಡನೇ ಲೋಕ ಯುದ್ಧದ ಮೊದಲು ಜೀವಿಸಿದ ಜಪಾನೀಯರು, ಏನನ್ನು ಅವರು ತಿಳಿದಿರಲಿಲ್ಲವೋ ಅದನ್ನು ಅರಾಧಿಸಿದವರಲ್ಲಿ ಕೇವಲ ಸೇರಿರುವವರಲ್ಲ. ಇಂದು ಕೂಡ ಕ್ರೈಸ್ತ ಪ್ರಪಂಚದಲ್ಲಿ ಲಕ್ಷಗಟ್ಟಲೆ ಜನರು ತ್ರಯೇಕತ್ವವನ್ನು ಆರಾಧಿಸುತ್ತಾರೆ. ನೀವು ಅಂಥಾ ವ್ಯಕ್ತಿಯಾಗಿದ್ದರೆ, ನಿಮ್ಮನ್ನು ನೀವೇ ಕೇಳಿಕೊಳ್ಳಿ: ನಾನು ಆರಾಧಿಸುವ ದೇವರನ್ನು ನಾನು ನಿಜವಾಗಿ ತಿಳಿದಿದ್ದೇನೋ? ಆತನ ಹೆಸರೇನು? ಒಬ್ಬ ದೇವರಲ್ಲಿ ಮೂರು ವ್ಯಕ್ತಿಗಳಿರುವುದು ಹೇಗೆ ಸಾಧ್ಯ? ಈ ನನ್ನ ನಂಬಿಕೆಗೆ ಮೂಲ ಯಾವುದು?
ತ್ರಯೈಕ್ಯದಲ್ಲಿ ಭರವಸವಿಡುವವರು, ಇದನ್ನು ಯೇಸು ಕ್ರಿಸ್ತನು ಮತ್ತು ಅವನ ಅಪೋಸ್ತಲರು ಕಲಿಸಿದ್ದಾರೆ ಮತ್ತು ಇದು ಒಂದು ಬೈಬಲಿನ ಬೋಧನೆಯೆಂದು ಪ್ರಾಯಶ: ಭಾವಿಸಿಕೊಳ್ಳುತ್ತಾರೆ. ಆದರೆ ಅದು ಹಾಗಿಲ್ಲ. ನ್ಯೂ ಕ್ಯಾಥ್ಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಂಡಿರುವುದು: “ಒಬ್ಬ ದೇವರಲ್ಲಿ ಮೂರು ವ್ಯಕ್ತಿಗಳು ಎಂಬ ಈ ರಚನೆಯು ಸ್ಥಿರವಾಗಿ ಸ್ಥಾಪಿತವಾಗಿಲ್ಲ. 4ನೇ ಶತಮಾನ ಮುಗಿಯುವ ಮೊದಲು (ಯೇಸು ಕ್ರಿಸ್ತನು ಮತ್ತು ಅವನ ಅಪೋಸ್ತಲರು ಈ ಭೂಮಿಯಲ್ಲಿ ಇದ್ದ ನೂರಾರು ವರ್ಷಗಳ ನಂತರ) ನಿಶ್ಚಯವಾಗಿ ಕ್ರೈಸ್ತ ಜೀವನದಲ್ಲಿ ಮತ್ತು ನಂಬಿಕೆಗಳಲ್ಲಿ ಪೂರ್ಣವಾಗಿ ಬೆರೆತಿರಲಿಲ್ಲ. ಅಪೋಸ್ತಲಿಕ ಫಾದರ್ಸ್ಗಳಲ್ಲಿ ಇಂಥಾ ಸಮನಾಗಿ ಹೋಲುವ ಮನೋಭಾವ ಅಥವಾ ಯೋಚನೆಯು ಕೂಡಾ ಅವರ ಹತ್ತರಕ್ಕೆ ಸುಳಿದದ್ದು ಎಲ್ಲಿಯೂ ಇಲ್ಲ.”
ಇನ್ನೊಂದು ಪಕ್ಷದಲ್ಲಿ, ಯೇಸು ಕ್ರಿಸ್ತನು ಈ ಭೂಮಿಗೆ ಮನುಷ್ಯನಾಗಿ ಬರುವ ನೂರಾರು ವರ್ಷಗಳಿಗೆ ಮೊದಲು, ಯಾರ ಧರ್ಮವು ಪುರಾಣ ಕಥೆಗಳ ಮೇಲೆ ಆಧಾರವಾಗಿತ್ತೋ ಆ ಜನರ ನಡುವೆ ತ್ರಯೈಕ್ಯ ಬೋಧನೆಯು ಭದ್ರವಾಗಿ ಬೇರೂರಿತ್ತು. ಉದಾಹರಣೆಗಾಗಿ, ಪುರಾತನ ಐಗುಪ್ತದವರು ತ್ರಯೈಕ್ಯನಾದ ಒಸಿರಿಸ್, ಐಸಿಸ್ (ಅವನ ಹೆಂಡತಿ) ಮತ್ತು ಹೊರಸ್ (ಅವನ ಮಗ) ನನ್ನು ಆರಾಧಿಸುತ್ತಿದ್ದರು. ಮತ್ತು ಹಿಂದುಗಳು ಇಂದಿನ ವರೆಗೂ ಮೂರು ತಲೆಗಳಿಂದ ರಚಿಸಿದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಈ ತ್ರಯೈಕ್ಯವನ್ನು ಆರಾಧಿಸುತ್ತಾರೆ.
ನಿಮ್ಮ ಸುತ್ತಲಿರುವ ಜನರು ಮಾಡಿದಂತೆ ಕೇವಲ ಅವರೊಂದಿಗೆ ಹೋಗಿ ಮತ್ತು ಅವರು ಮಾಡಿದ ರೀತಿಯಲ್ಲಿ ಆರಾಧಿಸುವ ಬದಲಾಗಿ, ನೀವು ಏನನ್ನು ಆರಾಧಿಸುತ್ತೀರೋ ಅದನ್ನು ನಿಜವಾಗಿ ತಿಳಿದು ಮಾಡುತ್ತಿದ್ದೇವೆಂದು ಖಾತ್ರಿಪಡಿಸಲು ಪರೀಕ್ಷಿಸಿರಿ. ನಿಜವಾಗಿ ತಿಳಿಯದೆ ಆರಾಧಿಸುವ ಅಥೇನಿಯದವರಿಗೆ ಹೀಗೆ ಹೇಳಲ್ಪಟ್ಟಿದೆ: “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” ಮತ್ತು ತನ್ನನ್ನು ಪ್ರಯತ್ನಪೂರ್ವಕವಾಗಿ ಹುಡುಕುವ ಪ್ರತಿಯೊಬ್ಬನಿಗೆ ಅವನು ಸಿಗಲು ಸಾಧ್ಯವಿದೆ. ಒಂದು ವೇಳೆ ಸತ್ಯ, ಜೀವಂತ ದೇವರಿಗೆ ಪ್ರಯತ್ನ ಪೂರ್ವಕವಾಗಿ ಹುಡುಕಿದರೆ ನಾವು ಅವನನ್ನು ಕಂಡುಕೊಳ್ಳ ಸಾಧ್ಯವಿದೆ.— ಅಪೋಸ್ತಲರ ಕೃತ್ಯ 17:27. (g89 12/22)
[ಪುಟ 10 ರಲ್ಲಿರುವಚಿತ್ರ]
ತಡಾಶಿ ತನ್ನ ನಂಬಿಕೆಗಳನ್ನು ಸಮೀಪದಿಂದ ಪರೀಕ್ಷಿಸಲು ನಿರ್ಣಯಿಸಿದನು