ಮನೆಗಳಿಲ್ಲದ ಮಕ್ಕಳು ಸಹಾಯಮಾಡಲು ಅಷ್ಟು ಕಷ್ಟವೇಕೆ?
ಅಕ್ಟೋಬರ 14, 1987ರಲ್ಲಿ ಚಿಕ್ಕ ಜೆಸ್ಸಿಕಾ ಮ್ಯಾಕ್ಕ್ಲರ್, ಅಮೆರಿಕದಲ್ಲಿ ಒಂದು ಬಳಸದಿರುವ ಬಾವಿಯ 22 ಅಡಿ ತಳದಲ್ಲಿ ಸಿಕ್ಕಿಬಿದ್ದಳು. ರಕ್ಷಿಸುವ ಕೆಲಸಗಾರರು 18-ತಿಂಗಳು-ವಯಸ್ಸಿನ ಬಾಲಕಿಯನ್ನು ತಲುಪಲು, 58 ಯಾತನಾಮಯ ಗಂಟೆಗಳಷ್ಟು ಕಾಲ ಗಟ್ಟಿಯಾದ ಕಲ್ಲುಬಂಡೆಯ ಮೂಲಕ ದಾರಿಮಾಡಿಕೊಂಡು ಹೋಗಬೇಕಾಯಿತು. ಈ ಘಟನೆಯು ಇಡೀ ರಾಷ್ಟ್ರದ ಶಿರೋನಾಮಗಳನ್ನು ಮತ್ತು ಹೃದಯಗಳನ್ನು ಸೆರೆಹಿಡಿಯಿತು, ಮತ್ತು ಈ ಕತ್ತಲೆಗುಂಡಿಯಿಂದ ಜೆಸ್ಸಿಕಾಳನ್ನು ಮೇಲೆತ್ತುವ ತನಕ ಟೆಲಿವಿಶನ್ ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿರಿಸುವ ರೀತಿಯಲ್ಲಿ ಆವರಿಸಿತು.
ಆದರೆ ಜೆಸ್ಸಿಕಾಳಿಗೆ ಒಂದು ಮನೆಯಿತ್ತು. ಆದರೂ, ಸೋಜಿಗವೇನಂದರೆ ಮನೆಗಳಿಲ್ಲದ ಮಕ್ಕಳ ಅವಸ್ಥೆಯು ಅದೇ ರೀತಿಯ ಅಭಿರುಚಿಯನ್ನು ಕೆರಳಿಸುವುದಿಲ್ಲ. ಇದಕ್ಕೆ ಕಾರಣ, ಅವರ ಈ ಪಾಡು ಬಡತನದೊಂದಿಗೆ ಜೋಡಿಸಲ್ಪಟ್ಟಿರುವುದರಿಂದಲೋ? ನಿರ್ಗತಿಕರ ಸ್ಥಿತಿಯನ್ನು ವಿಮರ್ಶಿಸುತ್ತಾ, ಜಾಗತಿಕ ಆರೋಗ್ಯ ಸಂಸ್ಥೆಯ ಪತ್ರಿಕೆಯಾದ ವರ್ಲ್ಡ್ ಹೆಲ್ತ್ಗಾಗಿ ಲೇಖಕನು ಬರೆದದ್ದು: “ನಗರಗಳಲ್ಲಿರುವ ನಿರ್ಗತಿಕರು ಅವರ ಸ್ವಂತ ದೇಶದ ನೈಜ ನಾಗರಿಕರಾಗಿರುವುದಿಲ್ಲ, ಯಾಕಂದರೆ ಅವರಿಗೆ ರಾಜಕೀಯ, ಸಾಮಾಜಿಕ ಯಾ ಆರ್ಥಿಕ ಹಕ್ಕುಗಳಿರುವುದಿಲ್ಲ. ಬಡವರು ಬೇಗನೆ ಮುದುಕರಾಗುತ್ತಾರೆ ಮತ್ತು ಎಳೇತನದಲ್ಲಿಯೇ ಸಾಯುತ್ತಾರೆ.” ಈ ರೀತಿ, ಅವರಿಗೆ ಸಾಕಾಗುವಷ್ಟು ಆಹಾರ, ಬಟ್ಟೆ ಮತ್ತು ವಸತಿಗಳನ್ನು ರಾಷ್ಟ್ರದ ಆರ್ಥಿಕತೆಯು ಒದಗಿಸುವ ಮೊದಲು ಸರಕಾರಗಳು ಮತ್ತು ಜನರು ಬಡವರನ್ನು ವೀಕ್ಷಿಸುವ ವಿಧಾನದಲ್ಲಿ ಬಹಳಷ್ಟು ಅಗಾಧವಾದ ಬದಲಾವಣೆ ಆಗಬೇಕು.
ಕೆಲವರಿಗೆ ಸಹಾಯಕೊಡಬಹುದಾದ ರೀತಿ
ಸಂಯುಕ್ತ ರಾಷ್ಟ್ರ ಸಂಘದ ಮಕ್ಕಳ ಹಕ್ಕುಗಳ ಘೋಷಣೆಯಲ್ಲಿ ವ್ಯಕ್ತ ಪಡಿಸಲ್ಪಟ್ಟ ಆದರ್ಶಗಳು ಖಂಡಿತವಾಗಿಯೂ ಉತ್ಕೃಷ್ಟವಾದವುಗಳು, ಆದರೆ ಅವುಗಳನ್ನು ಸಾಧಿಸಲು ಅಸಾಧ್ಯವೆಂದು ಯಾಕೆ ಭಾಸವಾಗುತ್ತದೆ? (ಆವರಣವನ್ನು ನೋಡಿರಿ.) ಸಾಮಾನ್ಯವಾಗಿ, ಜನರು ಮಕ್ಕಳನ್ನು ಮೆಚ್ಚುತ್ತಾರೆ ಮತ್ತು ಅವರಿಗಾಗಿ ಅತ್ಯುತ್ತಮವಾದುದ್ದನ್ನು ಬಯಸುತ್ತಾರೆ. ಅದಲ್ಲದೆ, ಒಂದು ರಾಷ್ಟ್ರದ ಭಾವೀ ಹಿತಕ್ಷೇಮಕ್ಕಾಗಿ ಮಕ್ಕಳು ಪ್ರಾಮುಖ್ಯವಾಗಿರುತ್ತಾರೆ. ಲ್ಯಾಟಿನ್ ಅಮೆರಿಕ ಡೈಲಿ ಪೋಸ್ಟ್ನಲ್ಲಿ ಯೂನಿಸಿಫ್ನ ಜೇಮ್ಸ್ ಗ್ರಾಂಟ್ ಹೇಳುವುದು: “ಏನಂದರೂ, ಕ್ರಮೇಣ ಮಕ್ಕಳು ತಾನೇ ಅವರ ದೇಶಗಳ ಆರ್ಥಿಕ ನಿಲುಗಡೆಯನ್ನು ತಪ್ಪಿಸಲು ಮುಂದಾಳುತನ ವಹಿಸಬೇಕಾಗಿದೆಯಷ್ಟೇ.” ಗ್ರಾಂಟ್ ಮುಂದುವರಿಸಿದ್ದು, ಒಂದು ವರದಿ ತೋರಿಸುವುದು, “ಮೂಲಭೂತ ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣದ ಮೇಲೆ ವೆಚ್ಚಮಾಡುವುದು ಉತ್ಪಾದಕತೆಯಲ್ಲಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಅಭಿವೃದ್ಧಿಗೆ ನಡಿಸಬಲ್ಲದು.” ಬ್ರೇಝಿಲ್ನಂತಹ ದೇಶಗಳು ಬೀದಿಮಕ್ಕಳ ಸ್ಥಿತಿ ಮತ್ತು ಸಂಬಂಧಿತ ಪಾತಕಗಳ ಮೂಲಕ ಬಿತ್ತರಿಸಲ್ಪಡುವ ನಕಾರಾತ್ಮಕ ಪ್ರತಿರೂಪಗಳ ಕುರಿತು ಸ್ಪಷ್ಟವಾಗಿ ತಿಳಿದವೆ. ಸೌಭಾಗ್ಯವಶಾತ್, ದಾನದತ್ತಿ, ಸಾಕು ಮನೆಗಳ, ಅನಾಥಾಶ್ರಮಗಳ ಮತ್ತು ಸುಧಾರಕ ಸೆರೆಮನೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಗಳನ್ನು ಬ್ರೇಝಿಲಿನಲ್ಲಿ ಮಾಡಲಾಗುತ್ತದೆ.
ಕೆಲವು ಸರಕಾರಗಳು, ಕೇವಲ ಮನೆಗಳನ್ನು ಕಟ್ಟಿಕೊಡುವುದರ ಬದಲು, ಬಡ ಕುಟುಂಬಗಳ ಮತ್ತು ಸಮಾಜಗಳ ಮನೆಕಟ್ಟುವಿಕೆಯ ಮುಂತೊಡಗುವಿಕೆಗೆ ಬೆಂಬಲ ಕೊಡುವ ಮೌಲ್ಯವನ್ನು ಕಾಣುತ್ತಿದ್ದಾರೆ. ಈ ರೀತಿಯಲ್ಲಿ, ಬಡವರು ತಾವೇ ಬದಲಾವಣೆಗೊಂದು ಉಗಮವಾಗುತ್ತಿದ್ದಾರೆ.
ಈ ರೀತಿಯಲ್ಲಿ ಬೇರೆ ಬೇರೆ ನಿಯೋಗಗಳಿಂದ ನೆರವನ್ನು ಪಡೆಯುವುದರ ಜೊತೆಗೆ, ಬಡ ಕುಟುಂಬಗಳು ತಮ್ಮ ಭಾಗವನ್ನು ಮಾಡಲು ಇಚ್ಛೆಯುಳ್ಳವರಾಗಿರಬೇಕು. ಕುಟುಂಬವೊಂದು ಒಟ್ಟಿಗೆ ಇದ್ದುಕೊಂಡು, ಅದರ ಸ್ವಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಾದರೆ, ಆ ಕುಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಧಿಕ ಉತ್ತಮವನ್ನು ಮಾಡುತ್ತದೆ. ಆವಶ್ಯಕವಿದ್ದಲ್ಲಿ, ಕುಟುಂಬದ ಆಯವ್ಯಯಪತ್ರಕ್ಕೆ ಸಾಮರ್ಥ್ಯವುಳ್ಳ ಎಲ್ಲಾ ಸದಸ್ಯರು ಸಹಾಯಧನ ನೀಡಬಹುದು.
ಕೆಲವರು ಯಶಸ್ವಿಯಾದ ವಿಧ
ಮನೆಗಳಿಲ್ಲದ ಕೆಲವು ಮಕ್ಕಳು ಅಂಥ ಪರಿಸ್ಥಿತಿಯಿಂದ ಪಾರಾಗಲು ಶಕ್ತರಾಗಿದ್ದಾರೆ. ಗ್ಯುಲಿರ್ಮೊನ ಉದಾಹರಣೆಯನ್ನು ಪರಿಗಣಿಸಿರಿ. ಅವನು ಹುಟ್ಟುವ ಮೊದಲು, ಅವನ ಕುಟುಂಬವು ಒಂದು ಚಿಕ್ಕ ಹಳ್ಳಿಯಲ್ಲಿ ಜೀವಿಸಿತ್ತು, ಆದರೆ ಆರ್ಥಿಕ ಬಡತನದ ದಸೆಯಿಂದ ಅವರು ರಾಜಧಾನಿಗೆ ವಲಸೆ ಬಂದರು. ಗ್ಯುಲಿರ್ಮೊ ಮೂರು ತಿಂಗಳ ಕೂಸಾಗಿದ್ದಾಗ ಅವನ ತಂದೆಯ ಹತ್ಯೆಯಾಯಿತು; ಅನಂತರ ಕೆಲವು ವರ್ಷಗಳ ನಂತರ ಅವನ ತಾಯಿಯು ಸತ್ತಳು, ಮಕ್ಕಳು ಅವರ ಅಜ್ಜಿಯೊಂದಿಗೆ ಬಿಡಲ್ಪಟ್ಟರು. ಈ ರೀತಿ, ಜೀವಿತದ ಆರಂಭದಲ್ಲಿಯೇ ಗ್ಯುಲಿರ್ಮೊ ಒಬ್ಬ ಬೀದಿ ಹುಡುಗನಾದನು. ಐದು ವರ್ಷಗಳ ತನಕ, ದಿನಂಪ್ರತಿ ಅವನು ಉಪಹಾರಗೃಹಗಳಲ್ಲಿ ಮತ್ತು ಮದ್ಯಪಾನಮಂದಿರಗಳ ಮುಂದೆ ಇದ್ದುಕೊಂಡು, ಅವನ ಪರಿವಾರದವರ ಪೋಷಣೆಗಾಗಿ ಆಹಾರ ಮತ್ತು ಹಣವನ್ನು ಕೇಳುತ್ತಿದ್ದನು, ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ತಡವಾಗಿ ನಡೆಯುತ್ತಿದ್ದನು. ರಸ್ತೆಯಲ್ಲಿ ಅವನಿರುವುದನ್ನು ನೋಡಿ ಪರಿಚಯವಿದ್ದ ದಯಾಮಯಿ ವ್ಯಕ್ತಿಗಳು ಅವನಿಗೆ ವೈಯಕ್ತಿಕ ಆರೋಗ್ಯ ಸ್ವಚ್ಛತೆಯ ಮತ್ತು ವರ್ತನೆಯ ಮೂಲಸೂತ್ರಗಳನ್ನು ಕಲಿಸಿದರು. ಅನಂತರ ಅವನನ್ನು ಸರಕಾರದ ನಿಯೋಗವು ರಸ್ತೆಯಿಂದ ಕೊಂಡೊಯ್ದು, ಮಕ್ಕಳ ಒಂದು ಆಶ್ರಯಸ್ಥಾನದಲ್ಲಿ ಅವನನ್ನು ಇಟ್ಟಿತು, ಅಲ್ಲಿ ಅವನು ಆಹಾರ ಮತ್ತು ಶಿಕ್ಷಣವನ್ನು ಪಡೆದನು. ಒಬ್ಬ ವ್ಯಕ್ತಿಯೋಪಾದಿ ನಿರ್ಮಾಣಿಕನು ಅವನಲ್ಲಿ ಅಭಿರುಚಿಯುಳ್ಳವನಾಗಿದ್ದಾನೆ ಎಂದು ಕಾಣಲು ಯೆಹೋವನ ಸಾಕ್ಷಿಗಳು ಅವನಿಗೆ ಸಹಾಯ ಮಾಡಿದರು ಮತ್ತು ಅವನ ಆತ್ಮಿಕ ಅಗತ್ಯತೆಗಳನ್ನು ಪೂರೈಸಿದರು. ಸಾಕ್ಷಿಗಳ ಯಥಾರ್ಥತೆ ಮತ್ತು ಸ್ನೇಹತ್ವದಿಂದ ಪ್ರಭಾವಿತನಾಗಿ, ತದನಂತರ ಗ್ಯುಲಿರ್ಮೊ ಹೇಳಿದ್ದು: “ಹೆಚ್ಚುಕಡಿಮೆ ಯಾವುದೇ ಮಾರ್ಗದರ್ಶನ ಮತ್ತು ತಿದ್ದುಪಾಡು ಇಲ್ಲದೆ ಬೆಳೆದ ಒಬ್ಬ ಯುವಕನಿಗೆ ಯಾರು ಸಹಾಯ ಕೊಡಬಲ್ಲರು? ಪ್ರೀತಿಯ ಸಹೋದರರು ಮಾತ್ರ ಅಂತಹ ಸಹಾಯವನ್ನು, ಆರ್ಥಿಕ ನೆರವಿನ ಹೊರತಾಗಿಯೂ ನನಗೆ ಕೊಟ್ಟರು.” ಗ್ಯುಲಿರ್ಮೊ 18ನೇ ವರ್ಷ ವಯಸ್ಸಿನಲ್ಲಿ ದೀಕ್ಷಾಸ್ನಾನ ಹೊಂದಿದನು. ಅವನ ದೇಶದಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಸಿಬ್ಬಂಧಿಯಾಗಿ ಸೇವೆ ಸಲ್ಲಿಸುತ್ತಾನೆ.
ತದನಂತರ ಜೊವೂ ಇದ್ದಾನೆ, ಅವರ ಕುಡಿಕ ತಂದೆಯು ಸಹೋದರರೊಂದಿಗೆ ಮನೆಯಿಂದ ಹೊರಗೆ ದಬ್ಬಲ್ಪಟ್ಟ ಇವನು ಇನ್ನೂ ಎಳೆಯನಾಗಿದ್ದನು. ಆದರೆ ಒಬ್ಬ ಕಿರಾಣಿ ಅಂಗಡಿಯವನು ಅವನನ್ನು ಕೆಲಸಕ್ಕಿಟ್ಟನು. ಕಷ್ಟಪಟ್ಟು ದುಡಿದದರ್ದಿಂದ, ಜೊವೋ ಅಭಿವೃದ್ಧಿಗೊಂಡನು ಮತ್ತು ಬಲುಬೇಗನೆ ಅವನ ಜೊತೆಕೆಲಸಗಾರರ ಮತ್ತು ಇತರರ ನೆಚ್ಚಿಕೆಯನ್ನು ಸಂಪಾದಿಸಿದನು. ಈಗ ಅವನು ತನ್ನ ಸ್ವಂತ ಕುಟುಂಬವಿರುವ ಒಬ್ಬ ಆನಂದವುಳ್ಳ ಮನುಷ್ಯನಾಗಿದ್ದಾನೆ. 12 ವರ್ಷ ಪ್ರಾಯದ ರೋಬರ್ಟೊನನ್ನು ಗಮನಿಸಿರಿ. ಅವನ ಕುಟುಂಬದವರಿಂದಲೇ ಅವನೂ ಹೊರಗೆ ಹಾಕಲ್ಪಟ್ಟವನು. ಅವನು ಪಾದರಕ್ಷೆಗಳನ್ನು ಶುಭ್ರಗೊಳಿಸುವ ಮತ್ತು ಸಿಹಿತಿಂಡಿಗಳನ್ನು ಮಾರುವ ಕೆಲಸಕ್ಕೆ ಹೋದನು ಮತ್ತು ಆ ಮೇಲೆ ಅವನು ಪೈಂಟರ್ ಆಗಿ ಕೆಲಸ ಮಾಡಿದನು. ಜೊವೋ ಮತ್ತು ರೋಬರ್ಟೊರಲ್ಲಿ ಕಲಿಯಲು ಮತ್ತು ಕೆಲಸಮಾಡಲು ಇದ್ದ ಇಚ್ಛೆಯು ಅನೇಕ ಅಡ್ಡಿತಡೆಗಳನ್ನು ಜಯಿಸಲು ಸಾಧ್ಯಮಾಡಿತು. ಮನೆಗಳಿಲ್ಲದ ಯುವಕರೋಪಾದಿ ಅವರ ಉದ್ವೇಗದ ಮತ್ತು ಅಭದ್ರತೆಯ ಕ್ಷಣಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ, ಆದರೆ ಯೆಹೋವನ ಸಾಕ್ಷಿಗಳೊಂದಿಗಿನ ಅವರ ಬೈಬಲ್ ಅಧ್ಯಯನವು ಅವರನ್ನು ದೃಢಗೊಳಿಸಿದೆ. ಮಕ್ಕಳು ಚೇತರಿಸಿಕೊಳ್ಳುವ ಶಕ್ತಿಯುಳ್ಳವರಾಗಿದ್ದು, ಯೋಗ್ಯವಾದ ಸಹಾಯದಿಂದ ಅವರು ಕ್ರಮೇಣ ವಿಪತ್ಕಾರಕ ಪತಿಸ್ಥಿತಿಗಳಲ್ಲೂ, ತೊರೆಯಲ್ಪಟ್ಟರೂ ಕೂಡಾ, ಯಶಸ್ವಿಯಾಗಬಲ್ಲರು ಎಂದು ಈ ಕೆಲವು ಉದಾಹರಣೆಗಳು ತೋರಿಸುತ್ತವೆ.
ಇದಕ್ಕೆ ಕೂಡಿಸಿ, ದೇವರ ವಾಕ್ಯದ ಸಹಮತದಲ್ಲಿ ಹೆತ್ತವರ ಮಾರ್ಗದರ್ಶನೆ ಎಳೆಯರು ಪಡೆಯುವಲ್ಲಿ, ಸ್ಥಿರವಾದ ಕುಟುಂಬಗಳು ಇರುತ್ತವೆ ಮತ್ತು ತೊರೆಯುವಿಕೆ ಮತ್ತು ಮಕ್ಕಳನ್ನು ದೂಷಿಸುವಿಕೆಯಂಥ ಸಮಸ್ಯೆಗಳು ಎದ್ದೇಳುವುದಿಲ್ಲ.
ಮಾನವರ ಪ್ರಯತ್ನಗಳು ಪರಾಜಯಗೊಳ್ಳುವ ಕಾರಣ
ಆದಾಗ್ಯೂ, ಮನೆಗಳಿಲ್ಲದ ಲಕ್ಷಾಂತರ ಮಕ್ಕಳ ಇರುವಿಕೆಯು ತಾನೇ, ಈ ಗುರುತರವಾದ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಮಾನವನ ಪರಾಜಯವನ್ನು ತೋರಿಸುತ್ತದೆ. ಮಕ್ಕಳ ಹಿತಾಸಕ್ತಿಯ ನಿಯೋಗವೊಂದರ ನಿರ್ದೇಶಕನನ್ನು ಉಲ್ಲೇಖಿಸುತ್ತಾ ಟೈಮ್ ಪತ್ರಿಕೆಯಲ್ಲಿ ಹೇಳಿದ್ದು: “ವ್ಯಕ್ತಿಯೊಬ್ಬನು ಮನಶಾಸ್ತ್ರಕ್ಕನುಗುಣವಾದ ಅವ್ಯವಸ್ಥೆ ಮತ್ತು ಮಾನಸಿಕ ಅಸಮಾನತೆಗಳಿರುವವನಾದರೆ, ಅನಾರೋಗ್ಯ ವ್ಯಕ್ತಿಯು—ಒಂದು ರೋಗಗ್ರಸ್ತ, ದುರ್ಬಲ ಜನಸಮೂಹ—ಪ್ರಗತಿಯ ಒಬ್ಬ ಕಾರ್ಯಭಾರಿಯಾಗಿ ವರ್ತಿಸಶಕ್ತನಲ್ಲ.” ಅದೇ ಪತ್ರಿಕೆಯು ಭವಿಷ್ಯನುಡಿದದ್ದೇನಂದರೆ ಇದರ ಫಲಿತಾಂಶವಾಗಿ, ಲ್ಯಾಟೀನ್ ಅಮೆರಿಕನ್ ದೇಶವೊಂದು “ಲಕ್ಷಗಟ್ಟಲೆ ನ್ಯೂನ್ಯ ಆಹಾರಪೋಷಣೆಯಿಂದ, ಕೌಶಲ್ಯಭರಿತರಲ್ಲದ ಮತ್ತು ಅಶಿಕ್ಷಿತರಾದ ವಯಸ್ಕರ ಹೊರೆಯಿಂದ ತುಂಬಿಹೋಗಿದೆ, ಇದರಿಂದ ಯಾವುದೇ ತರಹದ ನಾಗರಿಕ ಪ್ರಕ್ರಿಯೆಗಳ ಪ್ರವೇಶಕ್ಕೆಡೆಗುಡದವರಾಗಿ ಅವರಿರುತ್ತಾರೆ.”
ಇದರ ನೋಟದಲ್ಲಿ, ಕೇವಲ ಮಾನವ ಸಾಧನಗಳಿಂದ ನ್ಯೂನ್ಯ ಪೌಷ್ಟಿಕಾಹಾರದ, ಲೈಂಗಿಕ ದುರುಪಯೋಗದ ಮತ್ತು ದುಷ್ಕರ್ಮದ ಪರಿಣಾಮಗಳನ್ನು ಪರಿಹರಿಸಸಾಧ್ಯವಿದೆ ಎಂದು ನೀವು ಎಣಿಸುತ್ತೀರೋ? ಆಕ್ರಮಣಕಾರಿ, ನಿರ್ದಯಿ ವ್ಯಕ್ತಿಗಳ ನಡುವೆ ಬೀದಿಗಳಲ್ಲಿ ಹೋರಾಡುತ್ತಾ ಬದುಕುಳಿದ ಎಲ್ಲಾ ಬೀದಿಮಕ್ಕಳನ್ನು ಯಾವುದೇ ಮಾನವ-ಕೃತ ಕಾರ್ಯಕ್ರಮವು ಪುನಃ ಸರಿಯಾದ ಸ್ಥಿತಿಗೆ ಸ್ಥಾಪಿಸಬಹುದೆಂದು ನೀವೆಣಿಸುತ್ತೀರೋ? ಅವರ ಮಕ್ಕಳ ಕಡೆಗೆ ಜವಾಬ್ದಾರಿಯುತವಾಗಿ ವರ್ತಿಸಲು ಹೆತ್ತವರಿಗೆ ಶಿಕ್ಷಣವನ್ನೀಯುವ ಕಾರ್ಯಕ್ರಮದ ಒಂದು ದೃಶ್ಯವನ್ನು ನೀವು ಕಾಣಶಕ್ತರೋ? ಮಾನವ ಪ್ರಯತ್ನಗಳಿಂದ ಎಷ್ಟೇ ಯಥಾರ್ಥತೆಯವುದ್ದಾಗಿರಲಿ, ಮನೆಗಳಿಲ್ಲದ ಮಕ್ಕಳ ಸಮಸ್ಯೆಯನ್ನು ಸಮಗ್ರವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದು ವಿಷಾಧಕರವಾಗಿ ಹೇಳಬೇಕಾಗುತ್ತದೆ.
ಯಾಕೆ? ಈ ಸಮಸ್ಯೆಯು ಪರಿಹಾರವಾಗದಿರುವಂತೆ ಯಾವನೋ ಒಬ್ಬನು ಅಥವಾ ಯಾವುದೋ ಒಂದು ತಡೆಗಟ್ಟುತ್ತದೆ. ಆಸಕ್ತಕರವಾಗಿಯೇ, ಯೇಸುವು ಆ ವ್ಯಕ್ತಿಯನ್ನು ಗುರುತಿಸಿದ್ದಾನೆ, ಅವನನ್ನು “ಇಹ ಲೋಕಾಧಿಪತಿ” ಎಂದು ಕರೆದಿದ್ದಾನೆ. (ಯೋಹಾನ 14:30) ಅವನು ಪಿಶಾಚನಾದ ಸೈತಾನನು. (ಪುಟ 12ನ್ನು ನೋಡಿರಿ.) ಈ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ನಿಜ ಸಂತೋಷವನ್ನು ತರಲು ಪ್ರಮುಖ ಅಡ್ಡಿ ಏನಂದರೆ ಮಾನವಕುಲದ ಮೇಲೆ ಅವನಿಗಿರುವ ಅಗೋಚರವಾದ ಪ್ರಭಾವವೇ. (2 ಕೊರಿಂಥ 4:4) ಆದಕಾರಣ, ಮನೆಗಳಿಲ್ಲದ ಎಲ್ಲಾ ಮಕ್ಕಳಿಗೆ ಮತ್ತು ಅಭಾಗ್ಯತ ವ್ಯಕ್ತಿಗಳಿಗೆ ಒಂದು ನೀತಿಯುಕ್ತ ಪರಿಸ್ಥಿತಿಗಳು ದೊರಕ ಬೇಕಾದರೆ, ಈ ಅದೃಶ್ಯ ಜೀವಿಗಳನ್ನು ತೆಗೆದು ಹಾಕುವುದು ಅತ್ಯಾವಶ್ಯಕ. ಹಾಗಾದರೆ, ಬೀದಿಮಕ್ಕಳಿಲ್ಲದ ಮತ್ತು ದಾರಿದ್ರ್ಯತೆಯಿಲ್ಲದ ಲೋಕವೊಂದನ್ನು ನಾವು ಮುನ್ನೋಡಬಹುದೋ? ಮನೆಗಳಿಲ್ಲದ ಮಕ್ಕಳಿಗೆ ಒಂದು ನೈಜವಾದ, ಬಾಳುವ ನಿರೀಕ್ಷೆಯಿದೆಯೇ? (g90 1/8)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಯಾವುದೇ ಮಾರ್ಗದರ್ಶನ ಮತ್ತು ತಿದ್ದುಪಾಡು ಇಲ್ಲದೆ ಬೆಳೆದ ಒಬ್ಬ ಯುವಕನಿಗೆ ಸಹಾಯಕೊಡಲು ಯಾರು ಬಯಸುವರು?’
[ಪುಟ 7ರಲ್ಲಿರುವಚೌಕ]
ಸಂಯುಕ್ತ ರಾಷ್ಟ್ರ ಸಂಘದ ಮಗುವಿನ ಹಕ್ಕುಗಳ ಘೋಷಣೆ:
◼ ಒಂದು ಹೆಸರು ಮತ್ತು ರಾಷ್ಟ್ರೀಯತೆಯ ಹಕ್ಕು.
◼ ಮಮತೆ, ಪ್ರೀತಿ ಮತ್ತು ತಿಳುವಳಿಕೆಗಾಗಿ ಮತ್ತು ಪ್ರಾಪಂಚಿಕ ಭದ್ರತೆಗಾಗಿ ಹಕ್ಕು.
◼ ಸಾಕಾಗುವಷ್ಟು ಪೌಷ್ಟಿಕಾಹಾರ, ವಸತಿ ಮತ್ತು ವೈದ್ಯಕೀಯ ಸವಲತ್ತುಗಳಿಗಾಗಿ ಹಕ್ಕುಗಳು.
◼ ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ, ಯಾ ಸಾಮಾಜಿಕವಾಗಿಯಾಗಲಿ ನ್ಯೂನ್ಯತೆಯುಳ್ಳವನಾದರೆ ವಿಶೇಷ ಶುಶ್ರೂಷೆಯ ಹಕ್ಕು.
◼ ಎಲ್ಲಾ ಪರಿಸ್ಥಿತಿಗಳಲ್ಲಿ ಭದ್ರತೆ ಮತ್ತು ಬಿಡುಗಡೆ ಪಡೆಯಲು ಮೊದಲ ಆದ್ಯತೆಯ ಹಕ್ಕು.
◼ ಎಲ್ಲಾ ವಿಧದ ಅಲಕ್ಷ್ಯ, ಕ್ರೂರತನ ಮತ್ತು ಸ್ವಪ್ರಯೋಜನದ ದುಡಿಮೆಯಿಂದ ಸಂರಕ್ಷಿಸಲ್ಪಡುವ ಹಕ್ಕು.
◼ ಆಡಲು ಮತ್ತು ವಿನೋದಪಡಲು ಪೂರ್ಣ ಅವಕಾಶಗಳ ಮತ್ತು ಮಗುವು ತನ್ನ ವೈಯಕ್ತಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಸಮಾಜದ ಒಬ್ಬ ಉಪಯುಕ್ತ ಸದಸ್ಯನಾಗಲು, ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಸಮಾನ ಅವಕಾಶಗಳಿಗಾಗಿ ಹಕ್ಕು.
◼ ಸ್ವಾತಂತ್ರ್ಯ ಮತ್ತು ಗೌರವದ ಶರ್ತಗಳಿಗನುಸಾರ ತನ್ನ ಪೂರ್ಣ ಸಾಮರ್ಥ್ಯಗಳನ್ನು ಬೆಳೆಸಲು ಹಕ್ಕು.
◼ ತಿಳುವಳಿಕೆಯ, ಸಹಿಷ್ಣುತೆಯ, ಜನಾಂಗಗಳಲ್ಲಿ ಸ್ನೇಹತನದ, ಸಮಾಧಾನದ ಮತ್ತು ಸಾರ್ವತ್ರಿಕ ಭಾತ್ರತ್ವದ ಆತ್ಮದಲ್ಲಿ ಬೆಳೆಸಲ್ಪಡುವ ಹಕ್ಕು.
◼ ಯಾವುದೇ ಕುಲ, ಬಣ್ಣ, ಲಿಂಗ, ಧರ್ಮ, ರಾಜಕೀಯ ಇಲ್ಲವೇ ಇತರ ಕಾರಣ, ರಾಷ್ಟ್ರೀಯ ಯಾ ಸಾಮಾಜಿಕ ಮೂಲ ಮತ್ತು ಆಸ್ತಿ, ಜನನ ಯಾ ಇತರ ಅಂತಸ್ತುಗಳ ಹೊರತಾಗಿಯೂ, ಈ ಹಕ್ಕುಗಳನ್ನು ಆನಂದಿಸಲು ಇರುವ ಹಕ್ಕು.
ಎವೆರಿಮಾನ್ಸ್ ಯುನೈಟೆಡ್ ನೇಶನ್ಸ್ ಮೇಲೆ ಆಧರಿತವಾದ ಸಾರಾಂಶ.
[ಪುಟ 5 ರಲ್ಲಿರುವ ಚಿತ್ರ ಕೃಪೆ]
Reuters/Bettmann News photos