ಮನೆಗಳಿಲ್ಲದ ಮಕ್ಕಳು ಅದಕ್ಕೊಂದು ಇದೆಯೇ ಪರಿಹಾರ?
ಅವರ ಸಹಮನುಷ್ಯರಿಗಾಗಿ ನಿಜವಾಗಿಯೂ ಲಕ್ಷ್ಯಗೊಡುವವರು, ಮನೆಗಳಿಲ್ಲದ ಮಕ್ಕಳಿಗಾಗಿ ಇನ್ನೇನೂ ಹೆಚ್ಚು ಮಾಡಲಿಕ್ಕಿಲ್ಲ ಎಂದೆಣಿಸಿ ಬಿಟ್ಟುಕೊಡಲು ಬಯಸುವುದಿಲ್ಲ. ಬೀದಿಮಕ್ಕಳಿಗೆ ಅವರ ತಲೆಯ ಮೇಲೆ ಒಂದು ಸೂರು ಇರುವುದಕ್ಕಿಂತಲೂ ಹೆಚ್ಚಿನದ್ದು ಬೇಕಾಗಿದೆ ಎಂದು ಅವರು ಅರಿತಿದ್ದಾರೆ. ಮಕ್ಕಳಿಗೆ ಮನಶ್ಶಾಂತಿ, ಆಹ್ಲಾದಕರ ಕೆಲಸ, ಒಳ್ಳೆಯ ಆರೋಗ್ಯ ಮತ್ತು ಸ್ವ-ಭರವಸೆ ಇದ್ದರೆ ಮಕ್ಕಳು ಚಲೋದಾಗಿ ಬೆಳೆಯುತ್ತಾರೆ. ಪರೋಪಕಾರಬುದ್ಧಿಯ ಪುರುಷರು ಮತ್ತು ಸ್ತ್ರೀಯರು ಮನೆಗಳಿಲ್ಲದವರ ಒಳಿತಿಗಾಗಿ ತಮ್ಮನ್ನು ಸ್ವ-ಇಚ್ಛೆಯಿಂದ ನೀಡಿಕೊಳ್ಳುತ್ತಾರೆ ಮತ್ತು ಅದು ಶ್ಲಾಘನೀಯವಾದದ್ದೇ. ಆದರೆ ಅವರ ಪ್ರಯತ್ನಗಳ ಹೊರತಾಗಿಯೂ ಬೀದಿಮಕ್ಕಳ ಸಮಸ್ಯೆಯು ಇಂದೂ ಮುಂದುವರಿಯುತ್ತಿದೆ.
ಬೀದಿಮಕ್ಕಳನ್ನು ಉತ್ಪಾದಿಸುವ ಪರಿಸ್ಥಿತಿಗಳನ್ನು ಊರ್ಜಿತದಲ್ಲಿಡುವ ಇಂದಿನ ವ್ಯವಸ್ಥೆಯ ಮೇಲೆ ಕಾರಣವನ್ನು ಅಂಟಿಸಸಾಧ್ಯವಿಲ್ಲ. ದುರುಸ್ತಿಮಾಡಲಾಗದ ಒಂದು ಶಿಥಿಲಗೊಂಡಿರುವ ಒಂದು ಕಾರಿನೋಪಾದಿ ಅದಿರುತ್ತದೆ. ಒಂದು ನ್ಯಾಯಯುಕ್ತ ಮಾನವ ಸಮಾಜವನ್ನು ಕೇವಲ ಮಾನವನ ರಚನಾತ್ಮಕತೆಯಿಂದ ತರಲು ಅಸಾಧ್ಯವೆಂದು ನಾವು ತಿಳಿಯುವುದು ಸಮಂಜಸತೆಯದ್ದಲ್ಲವೋ?
ಸಂತಸಕರವಾಗಿಯೇ, ಆದರೂ ಒಂದು ಬದಲಾವಣೆ ಸಾಧ್ಯ—ಆದರೆ ಮಾನವನ ಹಸ್ತಗಳಿಂದಲ್ಲ. ಭೂಮಿಗೆ ಯಾವುದು ಕೆಡುಕಾಗಿದೆಯೋ ಅದನ್ನು ಪೂರ್ಣವಾಗಿ ನಿರ್ಮೂಲಗೊಳಿಸಲು ಕೇವಲ ಸರ್ವಶಕ್ತಿಯುಳ್ಳ ದೇವರಿಗೆ ಮಾತ್ರ ಸಾಮರ್ಥ್ಯ ಮತ್ತು ವಿವೇಕ ಇದೆ. ಅವನ ವಾಕ್ಯವಾದ ಬೈಬಲ್ ಅವನ ಸ್ವರ್ಗೀಯ ಸರಕಾರದ ಆಡಳಿತೆಯ ಕುರಿತು ಮತ್ತು ಅದು ಇದೇ ಭೂಮಿಯ ಮೇಲೆ ನೀತಿಯ ಪರಿಸ್ಥಿತಿಗಳಿಗಾಗಿ ಮಾನವನಿಗಿರುವ ಆಶೆಯನ್ನು ಹೇಗೆ ಪೂರೈಸುತ್ತದೆ ಎಂದು ನಮಗೆ ತಿಳಿಸುತ್ತದೆ.—ದಾನಿಯೇಲ 2:44.
ದೇವರು ಲಕ್ಷ್ಯಿಸುತ್ತಾನೆ
ಸದ್ಯದ ವ್ಯವಸ್ಥೆಯನ್ನು ತೆಗೆದು ಹಾಕಿ, ಜೀವಿತದ ಒಂದು ಹೊಸ ವಿಧಾನವನ್ನು ಆರಂಭಿಸಲು ದೇವರಿಗೆ ಸಾಧ್ಯವಿದೆ ಎಂದು ನೀವು ಎಣಿಸುತ್ತೀರೋ? ಹಾಗಿರುವುದಾದರೆ, ಕೇವಲ ಮಾನವನ ರಕ್ಷಣೆಯು ಮಾತ್ರವಲ್ಲ, ಬದಲು ಎಲ್ಲಕ್ಕಿಂತಲೂ ಮೇಲಾಗಿ ಯೆಹೋವ ದೇವರ ಹೆಸರು ಒಳಗೂಡಿದೆ ಎಂದು ನೆನಪಿನಲ್ಲಿಡಿರಿ. ನಿರ್ಮಾಣಿಕನಾಗಿರುವುದರಿಂದ, ಕ್ರಮಬದ್ಧತೆ ಮತ್ತು ಕಾಲನಿಷ್ಠೆ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದು, ಅವನ ತಕ್ಕ ಸಮಯದಲ್ಲಿ ಮತ್ತು ರೀತಿಯಲ್ಲಿ ಅವನು ಕ್ರಿಯೆಗೈಯುವನು ಮತ್ತು ಅದನ್ನವನು ತನ್ನ ರಾಜ್ಯದ ಮೂಲಕ ಮಾಡುವನು. ವಾಸ್ತವದಲ್ಲಿ ಆ ರಾಜ್ಯವು ಅನಿಶ್ಚಿತತೆ ಮತ್ತು ಅಸ್ಪಷ್ಟವಾದದ್ದಲ್ಲ, ಬದಲು ಅದು ಒಂದು ಸ್ವರ್ಗೀಯ ಸರಕಾರವಾಗಿದ್ದು, ಮಾನವನ ನೈಜ ಅಗತ್ಯತೆಗಳೊಂದಿಗೆ ವ್ಯವಹರಿಸಲು ಬೇಕಾದ ಮೇಲ್ವಿಚಾರಣೆ ಮತ್ತು ಪ್ರಗತಿಪರ ಶಿಕ್ಷಣವನ್ನು ಒದಗಿಸಲು ಶಕ್ತವಾಗಿದೆ.—ಯೆಶಾಯ 48:17, 18.
ಮನೆಯಿಲ್ಲದ ಮಗುವೊಂದು ಕೀರ್ತನೆ 27:10ರಲ್ಲಿರುವ ದಾವೀದನ ಮಾತುಗಳನ್ನು ಹೃದಯಕ್ಕೆ ತೆಗೆದು ಕೊಳ್ಳಸಾಧ್ಯವಿದೆ: “ತಂದೆತಾಯಿಗಳು ನನ್ನನ್ನು ತೊರೆದು ಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” ಲೋಕದಲ್ಲಿನ ಒಬ್ಬನ ಕೆಳಸ್ತರವು ದೇವರ ಚಿತ್ತವನ್ನು ಕಲಿಯಲು ಒಬ್ಬನನ್ನು ಅನರ್ಹನನ್ನಾಗಿ ಮಾಡುವುದಿಲ್ಲ ಎಂಬುದನ್ನು ತಿಳಿಯುವುದು ಕೂಡಾ ಉತ್ತೇಜನೀಯವು. ಜ್ಞಾನೋಕ್ತಿ 22:2 ಹೇಳುವುದು: “ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.” ಹೌದು, ಅಭಾಗ್ಯತರು ಯಥಾರ್ಥತೆಯವರಾಗಿರುವುದಾದರೆ, ಯೆಹೋವ ದೇವರು ಅವರಿಗೆ ಸಹಾಯ ಮಾಡಲು ಇಚ್ಛೆಯುಳ್ಳವನಾಗಿದ್ದಾನೆ ಎಂಬ ಖಾತ್ರಿಯಿಂದಿರಬಹುದು.—ಕೀರ್ತನೆ 10:14, 17.
ನಮ್ಮ ಒಳಿತಿನಲ್ಲಿ ಯೆಹೋವನು ಅಭಿರುಚಿಯುಳ್ಳವನಾಗಿದ್ದಾನೆ ಮತ್ತು ಅವರ ಯಥಾಯೋಗ್ಯ ಆಸೆಗಳನ್ನು ತೃಪ್ತಿ ಪಡಿಸುವ ವಿಧ ಆತನಿಗೆ ತಿಳಿದದೆ. ಒಮ್ಮೆ ಯೆಶಾಯನ ಮೂಲಕ ಅವನು ಇಸ್ರಾಯೇಲ್ಯರಿಗೆ ಅವನು ಕೇಳಿದ್ದು: “ಇಂಥಹ ಉಪವಾಸವನ್ನು ನಾನು ಆರಿಸಿದ್ದಲ್ಲವೋ? . . . ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು ಅಲ್ಲವೇ?” (ಯೆಶಾಯ 58:6, 7, NW) ಇಂಥಹ ಸರಿಸಮಾನತೆ ಮತ್ತು ನ್ಯಾಯವನ್ನು ತನ್ನ ರಾಜ್ಯಸರಕಾರದ ಮೂಲಕ ದೇವರು ತರಲಿದ್ದಾನೆ. ಯಾರೇ ಒಬ್ಬನನ್ನು ಅವನು ಅಸ್ತಿತ್ವದಲ್ಲಿಯೇ ಇಲ್ಲ ಎಂಬಂತಹ ರೀತಿಯಲ್ಲಿ ಯಾರನ್ನೂ ಅಲಕ್ಷ್ಯಿಸಲಾಗುವುದಿಲ್ಲ ಯಾ ಸತ್ಕರಿಸಲಾಗುವುದಿಲ್ಲ. ಈ ರೀತಿ ಕೀರ್ತನೆ 145:19 ನಮಗೆ ತಿಳಿಸುವುದು: “ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” ಮಾನವ ಕುಟುಂಬವನ್ನು ಐಕ್ಯಗೊಳಿಸಲು ದೇವರ ಮತ್ತು ಸಹಮಾನವರ ಕಡೆಗಿನ ಪ್ರೀತಿಯು ಪ್ರಮುಖ ಶಕ್ತಿಯಾಗಲಿರುವುದು. ಇದರ ಫಲವಾಗಿ, ಮನೆಗಳಿಲ್ಲದ ಮಕ್ಕಳ ಸಮಸ್ಯೆಯು ಪರಿಹರಿಸಲ್ಪಡುವುದು. ಯಾರೂ ಏಕಾಂಗಿಯಾಗಿ ಬಿಡಲ್ಪಡುವುದಿಲ್ಲ!
ಮಾನವನ ಅಪರಿಪೂರ್ಣತೆಯು ದೇವರ ಉದ್ದೇಶಕ್ಕೆ ಅಡ್ಡಿಯಾಗುವುದೋ?
ಇಲ್ಲ, ಸಂತಸದ ಪರದೈಸವನ್ನಾಗಿ ಈ ಭೂಮಿಯನ್ನು ಪರಿವರ್ತಿಸುವ ಯೆಹೋವನ ಉದ್ದೇ,ವನ್ನು ಅಡ್ಡಿಗೊಳಿಸಲು ಮಾನವನ ಕೆಟ್ಟ ಮನೋಪ್ರವೃತ್ತಿಯನ್ನು ಅನುಮತಿಸಲಾಗುವುದಿಲ್ಲ. ದೇವರ ಹೊಸ ಲೋಕದಲ್ಲಿ ಜೀವಿಸುವ ಸುಯೋಗ ಪಡೆಯಲಿರುವವರು, ಒಂದೇ ಅವರು ಬೈಬಲಿನಲ್ಲಿ ವಿವರಿಸಲ್ಪಟ್ಟ ಅರ್ಮೆಗೆದ್ದೋನ್ ಯುದ್ಧದಿಂದ ಪಾರಾದವರು ಯಾ ಈ ಭೂಮಿಯ ಮೇಲೆ ಪುನಃ ಜೀವಿಸಲು ಮೃತರಿಂದ ಪುನರುತ್ಥಾನಗೊಳಿಸಲ್ಪಟ್ಟವರಾಗಿದ್ದಾರೆ, ಮತ್ತು ಇವರು ಅತ್ಯುತ್ತಮವಾದದ್ದನ್ನೇ ಮಾಡಲು ಪ್ರೋತ್ಸಾಹಿಸಲ್ಪಡುವರು.—ಯೋಹಾನ 5:28, 29; ಪ್ರಕಟನೆ 16:14, 16.
ಪ್ರತಿವರ್ತನೆ ತೋರಿಸುವ ಯಾವನೂ ತನ್ನ ಕೆಲಸವೂ ವ್ಯರ್ಥವಾಗುವುದನ್ನು ಕಾಣುವುದಿಲ್ಲ. ತಕ್ಕಂತಹ ರೀತಿಯಲ್ಲಿ ಅವನ ಕೆಲಸಕ್ಕೆ ಪ್ರತಿಫಲ ದೊರಕಲಿರುವುದು. ದಯಮಾಡಿ ದೇವರ ವಾಗ್ದಾನವನ್ನು ಗಮನಿಸಿರಿ: “ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು. ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದ ಸಂತಾನವಷ್ಟೆ; ಅವರ ಸಂತತಿಯವರು ಬಹುದಿನವಿರುವರು.” (ಯೆಶಾಯ 65:22, 23) ಈ ಮಾತುಗಳ ನೆರವೇರಿಕೆಯನ್ನು ಕಾಣಲು ನೀವೂ ನಿಮ್ಮ ಕುಟುಂಬದವರೂ ಬಯಸುವುದಿಲ್ಲವೇ? ಮತ್ತು ಆಗ ಎಲ್ಲಿಯೂ ಬರಗಾಲವಾಗಲಿ, ದಾರಿದ್ರ್ಯತೆಯನ್ನಾಗಲಿ, ನಿರುದ್ಯೋಗವನ್ನಾಗಲಿ ಯಾ ಮನೆಗಳಿಲ್ಲದ ಮಕ್ಕಳನ್ನಾಗಲಿ ನಿಮಗೆ ಕಾಣಲು ಸಿಗಲಿಕ್ಕಿಲ್ಲ ಎಂದು ತಿಳಿಯುವುದು ಎಷ್ಟೊಂದು ಆನಂದದ ಸಂಗತಿಯಾಗಿರುತ್ತದೆ!
ಮನೆಗಳಿಲ್ಲದ ಮಕ್ಕಳಂತೆಯೇ ಇಂದು ಅಭಾವದಿಂದ ಭಾದೆಪಡುವವರು, ನಿಸ್ಸಂದೇಹವಾಗಿ ಒಂದು ಸಂತೋಷದ ಕುಟುಂಬ ಮತ್ತು ಒಂದು ತೃಪ್ತಿಕರ ಮನೆಯ ಆಶೀರ್ವಾದಗಳನ್ನು ಹೆಚ್ಚು ಪೂರ್ಣವಾಗಿ ಗಣ್ಯಮಾಡುವರು. ನಾವು ಯೆಶಾಯ 65:17ರಲ್ಲಿ ಓದುವುದು: “ಮೊದಲಿದ್ದದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” ಆಗ ಜೀವಿಸುವ ಸುಯೋಗ ಪಡೆಯುವ ವ್ಯಕ್ತಿಗಳು, ಪ್ರತಿಕೂಲ ಪರಿಸ್ಥಿತಿಗಳು ಸದಾಕಾಲಕ್ಕೂ ಹೋಗಿರುವುದನ್ನೂ, ಮತ್ತು ಎಲ್ಲಾ ಜನಾಂಗಗಳ, ಭಾಷೆಗಳ ಮತ್ತು ಕುಲಗಳ ಜನರು ಒಂದು ಪ್ರೀತಿಯ ಸಹೋದರತ್ವದೊಳಗೆ ಒಟ್ಟಾಗಿ ಕೆಲಸ ಮಾಡುವುದನ್ನು ಕಾಣುವರು. ಆ ಸಮಯದಲ್ಲಿ ಕುಟುಂಬಗಳಾಗಿ ಪಾರಾಗುವವರು ನಿಸ್ಸಂದೇಹವಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸುವುದನ್ನು ಮುಂದುವರಿಸುವರು. ಆ ಐಹಿಕ ಪರದೈಸದ ಕುರಿತು ಕೀರ್ತನೆ 37:11 (NW) ಹೇಳುವುದು: “ದೀನರು ಸ್ವತಃ ದೇಶವನ್ನು ಅಧೀನ ಪಡಿಸಿಕೊಳ್ಳುವರು; ಅವರು ಮಹಾಸೌಖ್ಯದಿಂದ ಸಮಾಧಾನದ ವಿಫುಲತೆಯಲ್ಲಿ ಆನಂದಿಸುವರು.”
ಭವಿಷ್ಯಕ್ಕಾಗಿ ನೀವು ಹೇಗೆ ಸ್ವತಃ ತಯಾರಿಮಾಡಿಕೊಳ್ಳಸಾಧ್ಯವಿದೆ?
ಈಗಲೂ ಕೂಡಾ, ಜೀವದಾಯಕ ಜ್ಞಾನವನ್ನು ಪಡೆಯಲು ಮತ್ತು ಪ್ರೀತಿ ಮತ್ತು ದಯೆಯಂತಹ ಅಪೇಕ್ಷಣೀಯ ಗುಣಗಳನ್ನು ಬೆಳೆಸಲು ಸಾಧ್ಯವಿದೆ. ಅದು ಹೇಗೆ? ಯೆಹೋವನ ಮಾನವ ಕುಟುಂಬವನ್ನು ಪ್ರೀತಿಸುತ್ತಾನೆ ಮತ್ತು ಅವನ ಮಗನಾದ ಯೇಸು ಕ್ರಿಸ್ತನ ಮೂಲಕ, ಅವನ ವಾಕ್ಯ ಮತ್ತು ಅವನ ಜನರ ಸಂಪರ್ಕಕ್ಕೆ ತರುವುದರಿಂದ, ಅವನು ‘ಕ್ರಿಸ್ತನ ಬಳಿಗೆ ಜನರನ್ನು ಎಳೆಯುತ್ತಾನೆ.’ (ಯೋಹಾನ 6:44) ಒಂದು ಸದಾಕಾಲದ ಸಂತೋಷದ ಮತ್ತು ಅರ್ಥಭರಿತ ಜೀವಿತವನ್ನು ನೀವು ಮುನ್ನೋಡಸಾಧ್ಯವಾಗುವಂತೆ ದೇವರ ಚಿತ್ತವನ್ನು ಮಾಡಲು ಸಹಾಯ ಮಾಡುವ ಒಂದು ಶೈಕ್ಷಣಿಕ ಕಾರ್ಯಕ್ರಮವೊಂದಿರುವ ಒಂದು ಸಂಸ್ಥೆಯು ಅವನಿಗೆ ಈ ಭೂಮಿಯ ಮೇಲೆ ಇದೆ. ಆದುದರಿಂದ, ಆವಶ್ಯಕತೆಯಿರುವವರಿಗೆ ದೇವರ ರಾಜ್ಯದ ಶುಭವಾರ್ತೆಯು ಸಾರಲ್ಪಡುತ್ತದೆ. (ಮತ್ತಾಯ 24:14) ದೇವರ ವಾಕ್ಯವು ಹೇಳುವುದು: “ನೆರೆಯವನನ್ನು ತಿರಸ್ಕರಿಸುವವನು ಧನ್ಯನು; ದರಿದ್ರನನ್ನು ಕನಿಕರಿಸುವವನು ಧನ್ಯನು.” (ಜ್ಞಾನೋಕ್ತಿ 14:21) ಅವರ ಹೇತುವು ಯೋಗ್ಯವಾಗಿರುವುದಾದರೆ, ಹೀನಾಯಸ್ಥಿತಿಯಲ್ಲಿರುವವರು ಕೂಡಾ ಯೆಹೋವನನ್ನು ಸಮೀಪಿಸಬಹುದು ಎಂಬ ತಿಳುವಳಿಕೆ ಹೃದಯ ಬೆಚ್ಚಗೆ ಮಾಡುವಂತಹದ್ದಾಗಿದೆ. ಕೀರ್ತನೆಗಾರನು ಬರೆದದ್ದು: “ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; ದೇವರೇ, ಶೀಘ್ರವಾಗಿ ಬಾ. ಯೆಹೋವನೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ; ತಡಮಾಡಬೇಡ.”—ಕೀರ್ತನೆ 70:5.
ಹೌದು, ದೇವರ ವಾಕ್ಯವು ಭವಿಷ್ಯಕ್ಕಾಗಿ ಒಂದು ವಾಸ್ತವ ನಿರೀಕ್ಷೆಯನ್ನು ನಿಮಗೆ ಕೊಡುತ್ತದೆ. ಆದರೂ, “ನಿರೀಕ್ಷೆ” ಎಂಬ ಪದದ ಸಾಮಾನ್ಯ ಬಳಕೆಯಲ್ಲಿ ಯಾವಾಗಲೂ ಖಾತ್ರಿಯು ಒಳಗೂಡಿರುವುದಿಲ್ಲ. ಬ್ರೇಝಿಲಿನಲ್ಲಿ ಒಬ್ಬನು ಆಗಾಗ್ಯೆ ಒಂದು ಹೇಳಿಕೆಯನ್ನು ಕೇಳುತ್ತಿರುತ್ತಾನೆ: “ಎ ಇಸ್ಪಾರಾನ್ಸಾ ಇ ಎ ಅಲಿಮ್ಟಾ ಕ್ಯು ಮೊರ್ರೆ” (ಇಂಗ್ಲಿಷಿನಲ್ಲಿ ಅದಕ್ಕೆ ತತ್ಸಮಾನವಾದದ್ದು, “ನಿರೀಕ್ಷೆಯು ನಿತ್ಯತೆಯನ್ನು ಉದ್ಭವಿಸುತ್ತದೆ”). ಆಧಾರವಿಲ್ಲವೆಂದು ತೋಚುವುದಾದರೂ ನಿರೀಕ್ಷಾಭರಿತರಾಗಿ ಇರುವುದು ಎಂಬ ವಿಚಾರವದಾಗಿದೆ. ಅದಕ್ಕೆ ವಿರುದ್ಧವಾಗಿ, ದೇವರಲ್ಲಿ ದೃಢವಾದ ನಂಬಿಕೆ ಮತ್ತು ಅವನ ವಾಗ್ದಾನಗಳಲ್ಲಿ ನಿರೀಕ್ಷೆಯನ್ನು ಕಾಪಾಡಿ ಕೊಳ್ಳಲು ಶಾಸ್ತ್ರವಚನಗಳು ನಮಗೆ ಬಲವಾದ ಕಾರಣಗಳನ್ನು ಕೊಡುತ್ತದೆ. ನಾವು ರೋಮಾಪುರ 10:11ರಲ್ಲಿ ಓದುವುದು: “ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗ ಪಡುವುದಿಲ್ಲ.” ಅಂತಹ ಬೈಬಲಾಧರಿತ ನಿರೀಕ್ಷೆಯು ನಮ್ಮನ್ನು ಹತಾಶೆಗೆ ನಡಿಸುವುದಿಲ್ಲ. ನಮ್ಮ ಭೂಮಿಯ ವಿಸ್ಮಯಗಳು ನಮಗೆ ನೈಜವಾಗಿದ್ದು ಯೆಹೋವನ ವಿವೇಕ ಮತ್ತು ಪ್ರೀತಿಯನ್ನು ಹೇಗೆ ರುಜುಪಡಿಸುತ್ತವೋ, ಹಾಗೆಯೇ ಬೈಬಲಿನ ಪ್ರವಾದನೆಗಳ ನೆರವೇರಿಕೆಯು ನಿಮಗೆ ಒಂದು ನಿರ್ಧಾರಾತ್ಮಕ ಹೊರನೋಟವಿರುವಂತೆ, ಭವಿಷ್ಯಕ್ಕಾಗಿ ಒಂದು ಅಪ್ಪಟವಾದ ನಿರೀಕ್ಷೆಯಿರುವಂತೆ ಅನುಮತಿಸುತ್ತವೆ.—ರೋಮಾಪುರ 15:13.
ದೇವರ ರಾಜ್ಯವು ಮನೆಗಳಿಲ್ಲದ ಮಕ್ಕಳಿಗೆ, ಹೌದು, ನ್ಯಾಯವಾದುದ್ದನ್ನು ಪ್ರೀತಿಸುವವರೆಲ್ಲರಿಗೂ ಒಂದು ನೈಜ ಪರಿಹಾರವಾಗಿರುತ್ತದೆ. ಬೈಬಲಿನ ಸ್ಪಷ್ಟ ಜ್ಞಾನವನ್ನು ಈಗ ಪಡೆಯುವುದರಿಂದ ದೇವರ ಹೊಸ ಲೋಕದಲ್ಲಿ ಸಂತೋಷವನ್ನು ಮತ್ತು ನಿತ್ಯಜೀವವನ್ನು ನೀವು ಅನುಭವಿಸಬಲ್ಲಿರಿ. ಈ ವಾಗ್ದಾನಗಳ ನಿರೀಕ್ಷೆಯು ಒಂದು ಕಲ್ಪನಾವಿಚಾರದ ಉತ್ಪಾದನೆಯಲ್ಲ. ಜ್ಞಾನೋಕ್ತಿ 11:19 (NW) ಘೋಷಿಸುವುದು: “ನೀತಿಗಾಗಿ ಸ್ಥಿರನಾಗಿ ನಿಂತಿರುವವನು ಜೀವದ ಸಾಲಿನಲ್ಲಿರುತ್ತಾನೆ.” (g90 1/8)
[ಪುಟ 11ರಲ್ಲಿರುವಚೌಕ]
ಒಂದು ತಾತ್ಕಾಲಿಕ ಪರಿಹಾರ?
ಭಾವೋದಾತ್ತತೆಯಿಂದ ಕಾಣುವ ನಿರ್ಗತಿಕನ ಚಾಚಲ್ಪಟ್ಟ ಕೈಯು ಹೃದಯವನ್ನು ಜಗ್ಗಬಹುದು. ಆದರೆ ಪರಿಗಣನೆ ತೋರಿಸುವ ವ್ಯಕ್ತಿಗಳು ಮನೆಯಿಲ್ಲದ ಮಗುವೊಂದಕ್ಕೆ ಸಹಾಯ ಹೇಗೆ ನೀಡಬಹುದೆಂಬುದರ ಕುರಿತು ನಿರುತ್ತರಿಗಳಾಗಿದ್ದಾರೆ. ಕಡಿಮೆ ತಪ್ಪಿತಸ್ಥರ ಭಾವನೆಯುಳ್ಳವರಾಗುವಂತೆ, ಕೆಲವು ಜನರು ಮಗುವಿನ ಹಸ್ತದಲ್ಲಿ ಕೆಲವು ನಾಣ್ಯಗಳನ್ನಿಟ್ಟು, ಬಲುಬೇಗನೆ ದೂರ ನಡೆಯುತ್ತಾರೆ. ಆದರೂ, ನೀಡಿದ ಹಣ ಆಹಾರಕ್ಕಾಗಿ ಯಾ ಆಶ್ರಯಕ್ಕಾಗಿ ಬಳಸಲ್ಪಡುತ್ತದೆ ಎಂಬದು ಅಧಿಕಾಂಶ ಸಂದೇಹದ್ದೇ. ಬದಲಿಗೆ, ಮಾದಕೌಷಧ ಇಲ್ಲವೆ ಮದ್ಯಪಾನ ಖರೀದಿಸಲು ವಿನಿಯೋಗಿಸಲ್ಪಡಬಹುದು. ಆದಕಾರಣ, ಕೆಲವು ನಾಗರಿಕ ಪ್ರಜ್ಞೆಯುಳ್ಳ ವಯಸ್ಕರು ಅವರು ಗಮನ ಮತ್ತು ಹಣವನ್ನು ಒಂದು ಸರಕಾರ-ನಿಯೋಜಿತ ಕಾರ್ಯಕ್ರಮಗಳಿಗೆ ನೀಡುತ್ತಾರೆ, ಇದು ಮನೆಗಳಿಲ್ಲದ ಮಕ್ಕಳಿಗೆ ನೆರವಾಗುತ್ತದೆಂದು ಅವರು ಭಾವಿಸುತ್ತಾರೆ. ಇನ್ನಿತರರು ಸಹಾಯಕ್ಕಾಗಿ ಯೋಗ್ಯ ಕಾರ್ಯನಿಯೋಗಗಳ ಬಳಿಗೆ ಮನೆಗಳಿಲ್ಲದ ಮಕ್ಕಳನ್ನು ಮಾರ್ಗದರ್ಶಿಸುತ್ತಾರೆ. ಈ ರೀತಿಯಲ್ಲಿ, ಗಮನಹರಿಸುವ ನಾಗರಿಕರು ಅವರ ಸ್ವಂತ ಸಮಾಜವು ಹೆಚ್ಚು ಪರೋಪಕಾರಿಯಾಗಿ ಮಾಡಲು ಪ್ರಯತ್ನಿಸುತ್ತಾರೆ.
[ಪುಟ 9 ರಲ್ಲಿರುವಚಿತ್ರ]
“ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:22.
[ಕೃಪೆ]
FAO photo
[ಪುಟ 10 ರಲ್ಲಿರುವಚಿತ್ರ]
“ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು”—ಯೆಶಾಯ 65:22.