ಮನೆಗಳಿಲ್ಲದ ಮಕ್ಕಳು ಯಾರನ್ನು ದೂಷಿಸುವುದು?
ಬ್ರೆಝೀಲ್ನಲ್ಲಿನ ಎಚ್ಚರ! ಬಾತ್ಮಿದಾರನಿಂದ
ಒಂದು ರಾತ್ರೆ ಫ್ರಾನ್ಸಿಸ್ಕೊ ತನ್ನ ಹೆಂಡತಿ ಮತ್ತು ಮಕ್ಕಳನ್ನು ಒಂದು ಸ್ಥಳೀಯ ಉಪಹಾರಗೃಹಕ್ಕೆ ಕೊಂಡೊಯ್ಯುತ್ತಾನೆ. ನಿಲುಗಡೆಯ ತಾಣದಲ್ಲಿ ಹರಕುಬಟ್ಟೆಯ ಹುಡುಗನೊಬ್ಬನು, ಅವರು ಊಟದಲ್ಲಿ ಆನಂದಿಸುತ್ತಿರುವಾಗ, ಫ್ರಾನ್ಸಿಸ್ಕೊನ ಕಾರನ್ನು ತಾನು ನೋಡಿಕೊಳ್ಳುತ್ತೇನೆಂದು ಹೇಳುತ್ತಾನೆ. ಫ್ರಾನ್ಸಿಸ್ಕೊ ಮತ್ತು ಅವನ ಪರಿವಾರವು ರೆಸ್ಟೋರಾಂಟ್ನ್ನು ಬಿಟ್ಟು ಹೋಗುವಾಗ, ತಾನು ಸಲ್ಲಿಸಿದ ಸೇವೆಗಾಗಿ ಹುಡುಗನು ಆತುರತೆಯಿಂದ ಕೆಲವು ನಾಣ್ಯಗಳಿಗಾಗಿ ಕೈಯೊಡ್ಡುತ್ತಾನೆ. ನಗರದ ಬೀದಿಗಳಲ್ಲಿ ತಡವಾಗಿರುವ ರಾತ್ರೆಯಲ್ಲಿ ಅವನಂತಹ ಮಕ್ಕಳು ತಮ್ಮ ಜೀವನ ಸಂಪಾದನೆಗಾಗಿ ಹೋರಾಡುತ್ತಾರೆ. ಅವರೇನೂ ಬಿಟ್ಟುಹೋಗಲು ಅವಸರ ಪಡುವುದಿಲ್ಲ, ಯಾಕಂದರೆ ಬೀದಿಯೇ ಅವರ ಮನೆ.
ಮನೆಗಳಿಲ್ಲದ ಮಕ್ಕಳನ್ನು ಸಮಾಜದಿಂದ ಹೊರಗೆ ಹಾಕಲ್ಪಟ್ಟವರಾಗಿ ಕಾಣಲಾಗುತ್ತದೆ ಮತ್ತು “ಯಾರ ಮಕ್ಕಳೂ ಅಲ್ಲ” ಅಥವಾ “ಎಸೆಯಲ್ಪಟ್ಟ ಕೂಸುಗಳು” ಎಂಬ ಬಿಲ್ಲೆ ಹಚ್ಚಲಾಗುತ್ತದೆ. ಅವರ ಸಂಖ್ಯೆಯು ತತ್ತರಗೊಳಿಸುವಂತದ್ದು ಮತ್ತು ಭೀತಿಯನ್ನುಂಟುಮಾಡುವಂತಹದ್ದು—ಪ್ರಾಯಶಃ 4 ಕೋಟಿ. ನಿಖರವಾದ ಸಂಖ್ಯೆಯನ್ನು ಪಡೆಯುವುದು ಕಷ್ಟಕರವೇ. ಆದಾಗ್ಯೂ, ದುರದೃಷ್ಟಕರವಾಗಿ ಲೋಕವ್ಯಾಪಕವಾಗಿ ವಿಶೇಷವಾಗಿ ಲ್ಯಾಟೀನ್ ಅಮೆರಿಕದಲ್ಲಿ, ಈ ಸಮಸ್ಯೆಯು ವೃದ್ಧಿಯಾಗುತ್ತಲಿದೆ ಎಂದು ಪರಿಣಿತರು ಒಪ್ಪುತ್ತಾರೆ. ಬಾಗಲದಾರಿಗಳಲ್ಲಿ ಮುದುರಿಕೊಂಡು ಬಿದ್ದಿರುವ ಇಲ್ಲವೇ ಹಣಕ್ಕಾಗಿ ಬೇಡುವ ಮನೆಗಳಿಲ್ಲದ ಮಕ್ಕಳ ನೋಟವು ಎಷ್ಟೊಂದು ದಾರುಣವೆಂದರೆ ಸಮಾಜವು ಅವರನ್ನು ಒಂದು ದುರ್ಘಟನೆಯ ಸಂಖ್ಯಾಸಂಗ್ರಹಣವನ್ನಾಗಿ ಪರಿಗಣಿಸಿ, ಭುಜಹಾರಿಸಿ, ಮುಂದಕ್ಕೆ ಚಲಿಸುತ್ತದೆ. ಆದರೆ ಸಮಾಜವು ಇನ್ನು ಮುಂದೆ ಹಾಗೆ ಮಾಡಸಾಧ್ಯವಿಲ್ಲ. ಯೂನಿಸಿಫ್ (UNICEF-ವಿಶ್ವ ಸಂಸ್ಥೆಯ ಅಂತರ್ರಾಷ್ಟ್ರೀಯ ಮಕ್ಕಳ ತುರ್ತು ನಿಧಿ)ಗನುಸಾರ, 8 ಮತ್ತು 17 ವರ್ಷಗಳ ನಡುವಿನ ವಯಸ್ಸಿನ ಮನೆಗಳಿಲ್ಲದ ಮಕ್ಕಳಲ್ಲಿ ಶೇಕಡಾ 60 ಮನೋವಿಕಲ್ಪಗೊಳಿಸುವ ಪದಾರ್ಥಗಳನ್ನು, ಶೇಕಡಾ 40 ಮದ್ಯಪಾನಗಳನ್ನು ಬಳಸುತ್ತಾರೆ, ಮತ್ತು ಶೇಕಡಾ 16 ಮಾದಕೌಷಧದ ವ್ಯಸನಿಗಳೂ, ಶೇಕಡಾ 92 ತಂಬಾಕು ಸೇದುವವರೂ ಆಗಿದ್ದಾರೆ ಎಂದು ತಿಳಿಸುತ್ತದೆ. ಮತ್ತು ನೀಡಬಹುದಾದ ಯಾವುದೇ ವೃತ್ತಿಕೌಶಲ್ಯ ಅವರಲ್ಲಿ ಇಲ್ಲದಿರುವುದರಿಂದ, ಅವರು ಬೇಡುವ, ಕಳ್ಳತನ ಮಾಡುವ ಯಾ ಸೂಳೆಗಾರಿಕೆಯಿಂದ ಬದುಕುಳಿಯುತ್ತಾರೆ. “ಯಾರ ಮಕ್ಕಳೂ ಅಲ್ಲ”ದಂತೆ ಬೆಳೆಯುತ್ತಾ, ಗಡೀಪಾರುಗೊಳಿಸುವ ಪ್ರವೃತ್ತಿಯುಳ್ಳವರಾಗಿ ಬೆಳೆಯುತ್ತಾರೆ ಮತ್ತು ಗಡೀಪಾರುಗೊಳಿಸಲ್ಪಡುವವರು ಯಾವುದೇ ಸಮಾಜಕ್ಕೆ ಬೆದರಿಕೆಯನ್ನೊಡ್ಡುವವರಾಗಿರುತ್ತಾರೆ.
ಮನೆಗಳಿಲ್ಲದ ಮಕ್ಕಳ ತಂಡವೊಂದರ ಕುರಿತು ಬ್ರೇಝಿಲಿನ ವಾರ್ತಾಪತ್ರ ಓ ಇಸ್ಟಾಡೊ ಡೀ ಸಾವೊ ಪೌಲೊ ವರದಿಸಿದ್ದು: “ಅವರಿಗೆ ಕುಟುಂಬವಿಲ್ಲ, ಸಂಬಂಧಿಕರಿಲ್ಲ, ಮತ್ತು ಭವಿಷ್ಯದ ಯಾವುದೇ ನಿರೀಕ್ಷೆಯಿಲ್ಲ. ಪ್ರತಿ ದಿನವೂ ಕೊನೆಯ ದಿನವೂ ಎಂಬಂತೆ ಅವರು ಜೀವಿಸುತ್ತಾರೆ. . . . ಮಕ್ಕಳು . . . ಹೆಚ್ಚು ಸಮಯವೇನೂ ತೆಗೆದು ಕೊಳ್ಳುವುದಿಲ್ಲ: ಕ್ಷಣಗಳೊಳಗೆ ಹದಿವಯಸ್ಕನ ಕೈಗಡಿಯಾರವನ್ನು ತೆಗೆಯುತ್ತಾರೆ, ಸ್ತ್ರೀಯೊಬ್ಬಳ ಕೊರಳಿನ ಚೈನನ್ನು ಕಸಿಯುತ್ತಾರೆ, ಪ್ರಾಯಸ್ಥನ ಕಿಸೆಯನ್ನು ದೋಚುತ್ತಾರೆ. ಮತ್ತು ಗುಂಪಿನಲ್ಲಿ ಕಾಣೆಯಾಗಲು ಅವರೇನೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. . . . ಅಪ್ರಾಪ್ತ ವಯಸ್ಕರಲ್ಲಿ . . . ಅತಿ ಎಳೇ ಪ್ರಾಯದಲ್ಲಿಯೇ ಲೈಂಗಿಕ ಸಂಭೋಗವು ಆರಂಭಗೊಳ್ಳುತ್ತದೆ. ಹನ್ನೊಂದು ವರ್ಷದ ಹುಡುಗಿಯು ಮತ್ತು ಹನ್ನೆರಡು ವರ್ಷದ ಹುಡುಗನು ಒಟ್ಟುಗೂಡುತ್ತಾರೆ ಮತ್ತು ಎಷ್ಟೊಂದು ಸುಲಭವಾಗಿ ಆರಂಭಗೊಂಡಿತ್ತೋ ಅಷ್ಟೇ ಸುಲಭತೆಯಲ್ಲಿ ಅವರ ಪ್ರಣಯಾಚರಣೆಯನ್ನು ಒಂದೆರಡು ತಿಂಗಳುಗಳೊಳಗೆ ಮುರಿಯುತ್ತಾರೆ.”
ಅವರು ಬೀದಿಗಳಲ್ಲಿ ಜೀವಿಸಲು ಕಾರಣ
ಮನೆಗಳಿಲ್ಲದ ಮಕ್ಕಳಿಗೆ ಸಹಾಯ ನೀಡುವುದು ಅಷ್ಟೇನೂ ಸುಲಭವಲ್ಲ. ಬೀದಿಮಕ್ಕಳು ಎಷ್ಟೊಂದು ಭಯಪಡುತ್ತಾರೆಂದರೆ ಅವರಲ್ಲಿ ಸುಮಾರು ಶೇಕಡಾ 30 ಅಧಿಕಾರಿಗಳಿಗೆ ಅವರ ಹಿನ್ನೆಲೆಯ ಯಾವುದೇ ವಿವರಗಳನ್ನು, ತಮ್ಮ ಹೆಸರನ್ನು ಸಹಿತ, ಕೊಡಲು ನಿರಾಕರಿಸಿದರು. ಆದರೆ ಅವರು ಬೀದಿಯಲ್ಲಿ ಜೀವಿಸಲು ಕಾರಣವೇನು? ಸ್ವತಂತ್ರರಾಗಿರಬೇಕೆಂಬ ಇಚ್ಛೆಯಿಂದಿರಬಹುದೇ? ತಾನು ಇಚ್ಛಿಸಿದ್ದನ್ನು ಮಾಡಲು ತನ್ನ ತಂದೆಯು ಅನುಮತಿಸದ ಕಾರಣ ತಾನು ಪುನಃ ಮನೆಗೆ ಹಿಂತೆರಳಲಾರೆನು ಎಂದು ಬ್ರೇಝಿಲಿನ ಯುವಕನೊಬ್ಬನ ವಿಷಯದಲ್ಲಿ ಇದು ಸತ್ಯ. ಆದಾಗ್ಯೂ, ಮೆಕ್ಷಿಕನ್ ವಾರ್ತಾಪತ್ರ ಎಲ್ ಯೂನಿವರ್ಸಲ್ಕ್ಕನುಸಾರ, ಬೀದಿಮಕ್ಕಳ ಸಂಖ್ಯೆಯಲ್ಲಿ ಏರುವಿಕೆಗೆ ಮುಖ್ಯ ಕಾರಣವು ತಂದೆಗಳಿಂದ ಮಕ್ಕಳು ತೊರೆಯಲ್ಪಡುವುದೇ. ಈ ರೀತಿಯಲ್ಲಿ ಬೀದಿಮಕ್ಕಳ ಸಂಖ್ಯೆಯ ಏರುವಿಕೆಗೆ ಒಂದು ಪ್ರಮುಖ ಕಾರಣ ವೈವಾಹಿಕ ಮುರಿತವೇ.
ಇದಕ್ಕೆ ಕೂಡಿಸಿ, ಅವರನ್ನು ಹೊಡೆಯುವ, ಲೈಂಗಿಕವಾಗಿ ದುರ್ವ್ಯವಹಾರ ನಡೆಸುವ, ಹೊರಗೆ ದಬ್ಬುವ ಇಲ್ಲವೇ ಅವರನ್ನು ಕೇವಲ ತಾತ್ಸಾರ ಮಾಡುವುದರ ಮೂಲಕ ತಮ್ಮ ಮಕ್ಕಳನ್ನು ಪೋಷಿಸುವುದರಲ್ಲಿ ಕೆಲವು ಹೆತ್ತವರು, ಬೇಜವಾಬ್ದಾರಿಗಳಾಗಿರುತ್ತಾರೆ. ಫಲಿತಾಂಶವಾಗಿ, ದೂಷಿಸಲ್ಪಟ್ಟ ಇಲ್ಲವೇ ಅಲಕ್ಷ್ಯಿಸಲ್ಪಟ್ಟ ಮಗುವು ಕೆಲವೊಮ್ಮೆ ತಾನು ತನ್ನಷ್ಟಕ್ಕೆ ಇರುವುದರಿಂದ, ಬೀದಿಗಳಲ್ಲಿರುವುದಾದರೂ, ಚೆನ್ನಾಗಿರುತ್ತೇನೆ ಎಂದು ಭಾವಿಸುತ್ತಾನೆ.
ಆದರೂ, ಮಕ್ಕಳಿಗೆ ಪ್ರೀತಿಯ ಶುಶ್ರೂಷೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಇದು ಚಲೋದಾಗಿ ಯೂನಿಸಿಫ್ನ ಕಾರ್ಯಕಾರಿ ನಿರ್ದೇಶಕ, ಜೇಮ್ಸ್ ಗ್ರಾಂಟ್ರಿಂದ ವ್ಯಕ್ತ ಮಾಡಲ್ಪಟ್ಟಿದೆ. “ಚಿಕ್ಕಮಕ್ಕಳು ಮತ್ತು ನಾಳೆ” ಎಂಬ ಮೇಲ್ಬರಹದ ಲ್ಯಾಟಿನ್ ಅಮೆರಿಕ ಡೈಲಿ ಪೋಸ್ಟ್ನ ಸಂಪಾದಕೀಯವೊಂದರಲ್ಲಿ ಅವನಂದದ್ದನ್ನು ಉಲ್ಲೇಖಿಸಿದ್ದು: “ಮೂರು ಯಾ ನಾಲ್ಕು ವರ್ಷಗಳೊಳಗೆ ವ್ಯಕ್ತಿಯೊಬ್ಬನ 90 ಶೇಕಡಾ ಮಿದುಳಿನ ಕಣಗಳು ಈಗಾಗಲೇ ಜೋಡಿಸಲ್ಪಟ್ಟಿವೆ ಮತ್ತು ಶಾರೀರಿಕ ಬೆಳವಣಿಗೆಯು ಎಷ್ಟೊಂದು ಪ್ರಗತಿಗೊಂಡಿದೆಯೆಂದರೆ ವ್ಯಕ್ತಿಯ ಉಳಿದ ಜೀವನಕ್ಕಾಗಿ ನಮೂನೆಯು ರೂಢಿತಗೊಳ್ಳಲ್ಪಟ್ಟಿದೆ. ಆದಕಾರಣ ಆರಂಭದ ವರ್ಷಗಳು ಸುರಕ್ಷತೆಗಾಗಿ ಬೇಡುತ್ತವೆ, ಅದರ ಸ್ವಂತ ಸಾಮರ್ಥ್ಯವನ್ನು ಪೂರ್ಣವಾಗಿ ವಿಕಸಿತಗೊಳಿಸಲು ಮಗುವಿಗೆ ಇರುವ ಹಕ್ಕನ್ನು ಸಮರ್ಥಿಸಲು ಮತ್ತು ಜನರ ಬೆಳವಣಿಗೆಯಲ್ಲಿ ತನ್ನ ಬಂಡವಾಳ ಹೂಡಲು ಕೇಳುತ್ತದೆ, ಆ ಮೂಲಕ ಅವರ ಕುಟುಂಬಗಳ, ಅವರ ರಾಷ್ಟ್ರಗಳ ಕ್ಷೇಮಾಭಿವೃದ್ಧಿಗಾಗಿ ಅವರು ಪೂರ್ಣವಾಗಿ ಕೊಡಶಕ್ತರಾಗಬಹುದು.”
ಆದಕಾರಣ, ಮನೆಗಳಿಲ್ಲದ ಮಕ್ಕಳ ಪರವಾಗಿ ಅವಲೋಕಿಸುವವರು ಚಿಂತಿತರಾಗಿ, ಆರ್ಥಿಕತೆಯನ್ನು, ಸರಕಾರಗಳನ್ನು, ಯಾ ಸಾರ್ವಜನಿಕರನ್ನು ಆಪಾದಿಸುತ್ತಾರೆ. ಅದೇ ಸಂಪಾದಕೀಯ ಮುಂದುವರಿಸಿದ್ದು: “ಮಾನವೀಯತೆಯ ಅಥವಾ ಆರ್ಥಿಕತೆಯ ಕಾರಣದಿಂದಾಗಲಿ ‘ಮಕ್ಕಳ ಮೇಲೆ ಬಂಡವಾಳ ಹೂಡುವಿಕೆ’ಯಲ್ಲಿ ಅಷ್ಟೇನೂ ಪ್ರಗತಿಯಾಗಿರುವುದಿಲ್ಲ. . . . ‘ಆರ್ಥಿಕ ಅಳವಡಿಸಿಕೆ’ ಅಂದರೆ ಅಧಿಕಾಂಶ ಆಹಾರ ಮತ್ತು ದೈನಂದಿನ ಆವಶ್ಯಕತೆಗಳಿಗಾಗಿ ನೆರವು ನೀಡುವುದರಲ್ಲಿ ಹಿಮ್ಮುಖ ಕಡಿತಮಾಡುವುದು ಎಂಬರ್ಥದಲ್ಲರುತ್ತದೆ. . . . ಏರುತ್ತರುವ ನಿರುದ್ಯೋಗವು ಮತ್ತು ನೈಜ ಸಂಪಾದನೆಯ ಇಳಿಮುಖವು, ಅಂತಹ ಹಿಮ್ಮುಖ ಕಡಿತಗಳು, ಅರ್ಥಿಕ ಕುಗ್ಗುವಿಕೆಯ ಅತೀ ಹೊರೆಯನ್ನು ಅದನ್ನು ತಡೆದುಕೊಳ್ಳಲು ಅತೀ ಕಡಿಮೆ ಶಕ್ತಿಯುಳ್ಳವರ — ಕಡುಬಡತನದ ಕುಟುಂಬಗಳ ಮತ್ತು ಅವರ ಮಕ್ಕಳ — ಮೇಲೆ ದಾಟಿಸುವುದೆಂದರ್ಥವಾಗಿದೆ.”
ನಿಸ್ಸಂದೇಹವಾಗಿ, ಹಲವು ದೇಶಗಳ ಬಡ ಆರ್ಥಿಕತೆಯು ಬೀದಿಮಕ್ಕಳ ಏರುವಿಕೆಗೆ ಇನ್ನೊಂದು ಕಾರಣವಾಗಿದೆ. ತಮ್ಮ ಮಕ್ಕಳು ಅವರಿಗೆ ಸಾಧ್ಯವಾದದ್ದು ಏನಾದರೂ, ಹೇಗಾದರೂ ಅವರು ಮಾಡಿ ಸಂಪಾದಿಸುವಂತೆ ತಮ್ಮ ಮಕ್ಕಳನ್ನು ಹೆತ್ತವರು ಬೀದಿಗೆ ದೂಡುತ್ತಾರೆ. ಆದರೂ, ಮನೆಯಿಲ್ಲದ ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಅಷ್ಟೊಂದು ಕಷ್ಟ ಯಾಕೆ? (g90 1/8)