ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 1/8 ಪು. 18-20
  • ನಿಮ್ಮ ಕಿವಿ ಮಹಾ ನಿವೇದಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಕಿವಿ ಮಹಾ ನಿವೇದಕ
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊರ ಕಿವಿ—ಶ್ರುತಿ ಮಾಡಿದ ಕರ್ಣಗ್ರಾಹಕ
  • ನಡು ಕಿವಿ—ಒಬ್ಬ ಯಂತ್ರಕರ್ಮಿಯ ಕನಸು
  • ಒಳ ಕಿವಿ—ಕಿವಿಯ ವ್ಯವಹಾರದ ಕೊನೆ
  • ರಹಸ್ಯವು ಬಿಡಿಸಲ್ಪಟ್ಟದ್ದು
  • ಸೃಷ್ಟಿಯ ಒಂದು ನಾಯಕ ಕೃತಿ
  • ನಿಮ್ಮ ಶ್ರವಣ ಶಕ್ತಿ ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ
    ಎಚ್ಚರ!—1997
  • ದೇವರ ಸಮತೆಯ ಕೊಡುಗೆ
    ಎಚ್ಚರ!—1996
  • ಗೂಬೆಗಳು ರಾತ್ರಿ ಜೀವನಕ್ಕಾಗಿ ರಚಿಸಲ್ಪಟ್ಟಿವೆ
    ಎಚ್ಚರ!—1992
ಎಚ್ಚರ!—1991
g91 1/8 ಪು. 18-20

ನಿಮ್ಮ ಕಿವಿ ಮಹಾ ನಿವೇದಕ

ನಿಮಗೆ ನೋಡಲು ಮನಸ್ಸಿಲ್ಲದಿದ್ದರೆ ನಿಮ್ಮ ಕಣ್ಣುಗಳನ್ನು ನೀವು ಮುಚ್ಚಬಹುದು. ಆಘ್ರಾಣಿಸಲು ನೀವು ಬಯಸದಿದ್ದರೆ ನಿಮ್ಮ ಉಸಿರಾಟವನ್ನು ತಡೆಹಿಡಿಯಬಹುದು. ಆದರೆ ನಿಮಗೆ ಆಲಿಸಲು ಮನಸ್ಸಿಲ್ಲದಿದ್ದರೆ, ನೀವು ನಿಜವಾಗಿ ನಿಮ್ಮ ಕಿವಿಗಳನ್ನು ಮುಚ್ಚಲಾರಿರಿ. “ಕಿವಿಗೆ ಹಾಕಿಕೊಳ್ಳದಿರುವುದು” ಎಂಬ ನಾಣ್ನುಡಿಯು ಕೇವಲ ರೂಪಕಾಲಂಕಾರವಾಗಿದೆ. ನಿಮ್ಮ ಹೃದಯಬಡಿತದೋಪಾದಿ, ನೀವು ಆಲಿಸುವುದು ನೀವು ನಿದ್ರಿಸುವಾಗಲೂ ಕೆಲಸಮಾಡುತ್ತದೆ.

ನಮ್ಮ ಸುತ್ತಲಿರುವ ಜಗತ್ತಿನೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲು ನಮ್ಮ ಕಿವಿಗಳು ಎಲ್ಲಾ ಸಮಯ ಕೆಲಸ ಮಾಡುತ್ತಾ ಇರುತ್ತವೆ. ಅವುಗಳು ಆರಿಸುತ್ತವೆ, ವಿಮರ್ಶಿಸುತ್ತವೆ ಮತ್ತು ಕೇಳುವುದನ್ನು ಅರ್ಥಮಾಡಿ ಕೊಂಡು ಮತ್ತು ಮಿದುಳಿಗೆ ನಿವೇದಿಸುತ್ತವೆ. ಸುಮಾರು ಒಂದು ಘನ ಇಂಚಿನಷ್ಟು ಆವರಣದೊಳಗೆ ನಮ್ಮ ಕಿವಿಗಳು ಅವುಗಳು ಏನನ್ನು ಮಾಡುತ್ತವೋ ಅದನ್ನು ಪೂರೈಸಲು ಧ್ವನಿಶಾಸ್ತ್ರದ, ಯಂತ್ರಕಲಾ ಶಾಸ್ತ್ರದ, ಜಲಭಾರ ಶಾಸ್ತ್ರದ, ವಿದ್ಯುನ್ಮಾನ ಶಾಸ್ತ್ರದ, ಮತ್ತು ಉನ್ನತಮಟ್ಟದ ಗಣಿತದ ಸೂತ್ರಗಳನ್ನು ನಮ್ಮ ಕಿವಿಗಳು ಬಳಸುತ್ತವೆ. ನಮ್ಮ ಆಲಿಸುವಿಕೆ ಅಸಮರ್ಪಕವಾಗಿರದಿದ್ದರೆ. ನಮ್ಮ ಕಿವಿಗಳು ಮಾಡಸಾಧ್ಯವಿರುವ ಸಂಗತಿಗಳಲ್ಲಿ ಕೆಲವನ್ನು ಮಾತ್ರ ಪರಿಗಣಿಸಿರಿ.

◻ ಮೃದುವಾದ ಪಿಸುಗುಟ್ಟುವಿಕೆಯಿಂದ ಹಿಡಿದು ಒಂದು ಜೆಟ್‌ ವಿಮಾನವು ಮೇಲಕ್ಕೇಳುವ ಗುಡುಗಿನ ಆರ್ಭಟದ ತನಕ, ನಮ್ಮ ಕಿವಿಗಳು 10000,00,00,00,000 ಪಟ್ಟು ಧ್ವನಿ ಏರಿಳಿತದ ಭಿನ್ನತೆಯನ್ನು ನಿಭಾಯಿಸಬಲ್ಲವು. ವೈಜ್ಞಾನಿಕ ಮಾತಿನಲ್ಲಿ, ಅದು ಸುಮಾರು 130 ಡೆಸಿಬೆಲ್‌ ಶ್ರೇಣಿಯಾಗಿರುತ್ತದೆ.

◻ ಒಂದು ಕೋಣೆ ತುಂಬಾ ಜನರು ಸಂಭಾಷಿಸುತ್ತಿರುವಾಗ, ಅದರಲ್ಲಿ ಒಂದನ್ನು ಬೇರ್ಪಡಿಸಿ, ನಮ್ಮ ಕಿವಿಗಳು ಅದರ ಮೇಲೆ ಕೇಂದ್ರೀಕೃತಮಾಡಬಲ್ಲದು ಇಲ್ಲವೇ 100 ವಾದ್ಯಗಳ ಸಂಗೀತ ಮೇಳದಲ್ಲಿ ಯಾವುದಾದರೊಂದು ವಾದ್ಯ ತಪ್ಪಾದ ರಾಗವನ್ನು ಮೀಟಿಸಿದರೆ, ಅದರ ವ್ಯತ್ಯಾಸ ತಿಳಿದುಕೊಳ್ಳಬಲ್ಲದು.

◻ ಮಾನವ ಕಿವಿಗಳು ಧ್ವನಿ ಉಗಮದ ದಿಕ್ಕಿನಲ್ಲಿರುವ ಎರಡು ಡಿಗ್ರಿಗಳಷ್ಟು ವ್ಯತ್ಯಾಸವನ್ನು ಪತ್ತೆ ಹಚ್ಚಬಲ್ಲದು. ಇದನ್ನು ಅವುಗಳು, ಎರಡು ಕಿವಿಗಳಿಗೆ ಧ್ವನಿ ಬಂದು ತಲಪುವ ಸಮಯದ ಮತ್ತು ತೀವ್ರತೆಯ ಸೂಕ್ಷ್ಮ ವ್ಯತ್ಯಾಸವನ್ನು ಪತ್ತೆ ಹಚ್ಚುವ ಮೂಲಕ ಮಾಡುತ್ತವೆ. ಸಮಯದ ವ್ಯತ್ಯಾಸವು ಒಂದು ಸೆಕುಂಡಿನ ಹತ್ತು ಸಾವಿರ ಭಾಗದಲ್ಲಿ ಒಂದು ಭಾಗದಷ್ಟು ಅತಿ ಕೊಂಚವಾಗಿರಬಹುದು, ಆದರೆ ಕಿವಿಗಳು ಇದನ್ನು ಗೊತ್ತುಮಾಡಿ, ಮಿದುಳಿಗೆ ನಿವೇದಿಸುತ್ತವೆ.

◻ ನಮ್ಮ ಕಿವಿಗಳು ಸುಮಾರು 4,00,000 ವಿವಿಧ ಧ್ವನಿಗಳನ್ನು ಮತ್ತು ಅವುಗಳಲ್ಲಿರುವ ಭಿನ್ನತೆಯನ್ನು ತಿಳಿದು ಕೊಳ್ಳಲು ಶಕ್ಯವಾಗಿವೆ. ಕಿವಿಯಲ್ಲಿರುವ ಯಾಂತ್ರಿಕ ಕೌಶಲ್ಯವು ಸ್ವಯಂಚಾಲಿತವಾಗಿ ಧ್ವನಿಯ ತರಂಗಗಳನ್ನು ವಿಮರ್ಶಿಸಿ, ಅದನ್ನು ನಮ್ಮ ಸ್ಮರಣನಿಧಿ (ಮೆಮರಿ ಬ್ಯಾಂಕ್‌) ಯಲ್ಲಿ ಜೋಡಿಸಿಟ್ಟಿರುವವುಗಳೊಂದಿಗೆ ತುಲನೆಮಾಡುತ್ತದೆ. ಆದುದರಿಂದ ಒಂದು ಸಂಗೀತದ ನಾದವು ಪಿಟೀಲಿನಿಂದ ಯಾ ಕೊಳಲಿನಿಂದ ಬಾರಿಸಿದ್ದೋ ಎಂದು ಯಾ ಫೋನಿನಲ್ಲಿ ನಿಮ್ಮನ್ನು ಕರೆಯುವವನು ಯಾರು ಎಂದು ನೀವು ಹೇಳ ಶಕ್ತರಾಗಿರುವಿರಿ.

ನಮ್ಮ ತಲೆಯ ಪಕ್ಕದಲ್ಲಿ ನಾವು ಕಾಣುವ “ಕಿವಿಯು” ವಾಸ್ತವದಲ್ಲಿ ನಮ್ಮ ಕಿವಿಯ ಅತಿ ಹೆಚ್ಚು ಕಾಣಬಹುದಾದ ಒಂದು ಭಾಗ ಮಾತ್ರ. ಕಿವಿಯು ಮೂರು ವಿಭಾಗಗಳಿಂದ ಮಾಡಲ್ಪಟ್ಟಿದೆ ಎಂಬದನ್ನು ನಮ್ಮ ಶಾಲಾ ದಿನಗಳಲ್ಲಿ ನಾವು ಕಲಿತಿರುವುದನ್ನು ನೆನಪಿಸಬಹುದು: ಹೊರ, ನಡು ಮತ್ತು ಒಳ ಕಿವಿಗಳೆಂದು ಅವುಗಳನ್ನು ಕರೆಯಲಾಗಿದೆ. ಹೊರ ಕಿವಿಯು ಪರಿಚಿತವಿರುವ ಚರ್ಮದ “ಕಿವಿ” ಮತ್ತು ಮೃದ್ವಸ್ಥಿ ಮತ್ತು ಒಳ ಕಿವಿಯ ಹರೆಗೆ ನಡಿಸುವ ಕಿವಿಯ ನಾಲೆ ಇರುತ್ತದೆ. ನಡು ಕಿವಿಯಲ್ಲಿ ಮಾನವ ಶರೀರದಲ್ಲಿರುವ ಅತಿ ಚಿಕ್ಕ ಮೂರು ಎಲುಬುಗಳು—ಮುದ್ಗರಾಸ್ಥಿ, ಧ್ವನಿಕಂಪನವಾಹಕದ ಸಣ್ಣ ಎಲುಬು ಮತ್ತು ಸೇಪ್ಟಿಸ್‌ ಇವುಗಳನ್ನು ಸಾಮಾನ್ಯವಾಗಿ ಸುತ್ತಿಗೆ, ಸ್ಥೂಣ (ಬಡಿಗಲ್ಲು) ಮತ್ತು ರಿಕಾಪಿನಾಕಾರದ ಮೂಳೆ—ಇದು ಕಿವಿಯ ಹರೆಯನ್ನು ಅಂಡಾಕಾರದ ಕಿಟಕಿಯೊಂದಿಗೆ, ಒಳ ಕಿವಿಯ ಹೊಸ್ತಿಲನ್ನು ಜೋಡಿಸುವ ಸೇತುವೆಯಾಗುತ್ತದೆ. ಒಳ ಕಿವಿಯು ಎರಡು ಸೋಜಿಗವಾಗಿ ತೋರುವ ಅಂಗಗಳಿಂದ ಮಾಡಲ್ಪಟ್ಟಿದೆ: ಮೂರು ಅರ್ಧ ವರ್ತುಲಾಕಾರದ ನಾಲೆಗಳ ಒಂದು ಗೊಂಚಲು ಮತ್ತು ಶಂಕಾಕಾರದ ಕರ್ಣಶಂಖ.

ಹೊರ ಕಿವಿ—ಶ್ರುತಿ ಮಾಡಿದ ಕರ್ಣಗ್ರಾಹಕ

ಗಾಳಿಯಲ್ಲಿರುವ ಧ್ವನಿ ತರಂಗಗಳನ್ನು ಸಂಗ್ರಹಿಸುವ ಮತ್ತು ಕಿವಿಯ ಒಳಭಾಗಗಳಿಗೆ ಕಳುಹಿಸುವ ಕೆಲಸವನ್ನು ಹೊರ ಕಿವಿಯು ಮಾಡುತ್ತದೆಂದು ತಿಳಿಯುತ್ತದೆ. ಆದರೆ ಅದು ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ.

ಸುರುಳಿಯಂತೆ ಸುತ್ತಿಕೊಂಡಿರುವ ಹೊರ ಕಿವಿಯು ಏನಾದರೂ ನಿರ್ದಿಷ್ಟ ಉದ್ದೇಶವನ್ನು ಜ್ಯಾರಿಗೊಳಿಸಲು ಇದೆಯೆಂಬ ಕುರಿತು ನೀವೆಂದಾದರೂ ವಿಸ್ಮಿತರಾಗಿದ್ದೀರೋ? ಹೊರ ಕಿವಿಯ ಮಧ್ಯದಲ್ಲಿರುವ ಪೊಳ್ಳು ಭಾಗವು ಮತ್ತು ಕಿವಿಯ ನಾಲೆಯು ಈ ರೀತಿಯಲ್ಲಿ ರೂಪಿಸಲ್ಪಟ್ಟಿದೆಯೆಂದರೆ, ಧ್ವನಿತರಂಗದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಅವುಗಳು ಧ್ವನಿಯನ್ನು ಏರಿಸಬಲ್ಲವು, ಇಲ್ಲವೇ ಮಾರ್ದನಿಸ ಬಲ್ಲವು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ನಮಗೆ ಹೇಗೆ ಪ್ರಯೋಜನಕರವಾಗಿರ ಬಲ್ಲವು? ಮಾನವ ಮಾತುಕತೆಯ ಧ್ವನಿಗಳ ಪ್ರಾಮುಖ್ಯ ಲಕ್ಷಣಗಳಲ್ಲಿ ಹೆಚ್ಚಿನವುಗಳು ಅದೇ ಶ್ರೇಣಿಯೊಳಗೆ ಬರುತ್ತವೆ.a ಹೊರ ಕಿವಿ ಮತ್ತು ಕಿವಿಯ ನಾಲೆಯ ಮೂಲಕ ಈ ಧ್ವನಿಗಳು ಪಯಣಿಸಿದಂತೆ, ಅವುಗಳು ತಮ್ಮ ಮೂಲದ ತೀವ್ರತೆಗಿಂತ ಎರಡು ಪಟ್ಟು ಅತಿಶಯಿಸಲ್ಪಡುತ್ತವೆ. ಇದು ಅತ್ಯುನ್ನತ ಕ್ರಮವಿಧಾನದ ಧ್ವನಿ-ಶಾಸ್ತ್ರದ ಯಾಂತ್ರಿಕ ಕೌಶಲ್ಯವಾಗಿರುತ್ತದೆ!

ಹೊರ ಕಿವಿಯು ಧ್ವನಿಯ ಉಗಮವನ್ನು ಪತ್ತೆ ಮಾಡಲು ನಮಗಿರುವ ಸಾಮರ್ಥ್ಯದಲ್ಲಿ ಒಂದು ಪ್ರಾಮುಖ್ಯ ಪಾತ್ರವನ್ನು ಆಡುತ್ತದೆ. ತಲೆಯ ಎಡ ಮತ್ತು ಬಲ ಕಿವಿಗಳಿಗೆ ಧ್ವನಿಯು ಬರುವುದನ್ನು, ಅದರ ತೀವ್ರತೆ ಮತ್ತು ಎರಡು ಕಿವಿಗಳಿಗೆ ಅದು ಆಗಮಿಸುವ ಸಮಯದ ವ್ಯತ್ಯಾಸದಿಂದ ಪತ್ತೆ ಹಚ್ಚಲಾಗುತ್ತದೆ. ಆದರೆ ಹಿಂಬದಿಯಿಂದ ಬರುವುದರ ಕುರಿತಾಗಿ ಏನು? ಪುನಃ, ಕಿವಿಯ ಆಕಾರವು ತನ್ನ ಪಾತ್ರವನ್ನು ವಹಿಸುತ್ತದೆ. ನಮ್ಮ ಕಿವಿಯ ತುದಿಗಳು ಹೇಗೆ ರಚಿಸಲ್ಪಟ್ಟಿವೆಯೆಂದರೆ ಹಿಂಬದಿಯಿಂದ ಬರುವ ಧ್ವನಿಗಳೊಂದಿಗೆ ಅವುಗಳು ಪರಸ್ಪರ ಕ್ರಿಯೆಯನ್ನೆಸಗಿ, 3,000ದಿಂದ 6,000 HZ ಶ್ರೇಣಿಯಲ್ಲಿ ನಷ್ಟವೊಂದಕ್ಕೆ ಕಾರಣವಾಗುತ್ತವೆ. ಇದು ಧ್ವನಿಯ ಲಕ್ಷಣವನ್ನು ಬದಲಾಯಿಸುತ್ತದೆ ಮತ್ತು ಹಿಂದಿನಿಂದ ಬರುವದರ ಅರ್ಥವಿವರಣೆಯನ್ನು ಮಿದುಳು ಮಾಡುತ್ತದೆ. ತಲೆಯ ಮೇಲಿನಿಂದ ಬರುವುದು ಕೂಡಾ ಇದೇ ರೀತಿ ಬದಲಾಯಿಸಲ್ಪಡುತ್ತದೆ, ಆದರೆ ಒಂದು ಭಿನ್ನವಾದ ತರಂಗಾಂತರದಲ್ಲಿ.

ನಡು ಕಿವಿ—ಒಬ್ಬ ಯಂತ್ರಕರ್ಮಿಯ ಕನಸು

ನಡು ಕಿವಿಯ ಕೆಲಸವು ಧ್ವನಿ ತರಂಗದ ಶ್ರವಣೇಂದ್ರಿಯಗಳ ಕಂಪನವನ್ನು ಯಾಂತ್ರಿಕ ಕಂಪನಗಳನ್ನಾಗಿ ಮಾರ್ಪಡಿಸಿ, ಅದನ್ನು ಒಳ ಕಿವಿಗೆ ರವಾನಿಸುವುದೇ ಆಗಿದೆ. ಒಂದು ಕಾಳಿನಾಕಾರ ಗಾತ್ರದ ಕೋಣೆಯಲ್ಲಿ ಏನಾಗುತ್ತದೋ ಅದು ನಿಜವಾಗಿಯೂ ಯಂತ್ರಕರ್ಮಿಯ ಒಂದು ಕನಸಾಗಿರುತ್ತದೆ.

ಗಟ್ಟಿಯಾದ ಧ್ವನಿಗಳು ಕಿವಿಯ ಹರೆಯಲ್ಲಿ ಗಮನಾರ್ಹ ಚಲನೆಯನ್ನು ಉಂಟು ಮಾಡುತ್ತವೆ ಎಂಬ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಧ್ವನಿತರಂಗಗಳು ಹಾಗೆಯೇ ಮಾಡುವುದು ಕೇವಲ ಸೂಕ್ಷ್ಮದರ್ಶಕೀಯ ಪ್ರಮಾಣದಲ್ಲಿ ಮಾತ್ರ. ದ್ರವ ತುಂಬಿದ ಒಳ ಕಿವಿಯು ಪ್ರತಿವರ್ತಿಸಲು ಕಾರಣವಾಗುವಷ್ಟು ಚಿಕ್ಕ ಪ್ರಮಾಣದ ಆ ಚಲನೆಯು ಇರುವುದಿಲ್ಲ. ಈ ಅಡ್ಡಿಯನ್ನು ಬಗೆಹರಿಸುವ ವಿಧವು ಪುನೊಮ್ಮೆ ಕಿವಿಯ ರಚನೆಯ ಅತಿ ಕೌಶಲ್ಯವನ್ನು ಪ್ರದರ್ಶಿಸುತ್ತದೆ.

ನಡು ಕಿವಿಯಲ್ಲಿರುವ ಮೂರು ಚಿಕ್ಕ ಎಲುಬುಗಳ ಜೋಡಣೆಯು ಕೇವಲ ಸೂಕ್ಷ್ಮ ವೇದಿಯಾಗಿರುವುದು ಮಾತ್ರವಲ್ಲ, ಅದು ಪರಿಣಾಮಕಾರಿಯೂ ಆಗಿದೆ. ಸನ್ನೆಕೋಲಿನ ಒಂದು ವ್ಯವಸ್ಥೆ ಪ್ರಕಾರ ಅದು ಕ್ರಿಯೆಮಾಡುತ್ತಾ, ಯಾವುದೇ ಒಳಬರುವ ಶಕ್ತಿಯನ್ನು ಅದು ಶೇಕಡಾ 30ರಷ್ಟು ಉತ್ಪ್ರೇಕ್ಷಿಸುತ್ತದೆ. ಅದಲ್ಲದೇ, ಕಿವಿಯ ಹರೆಯು ರಿಕಾಪಿನಾಕಾರದ ಮೂಳೆಯ ಪೀಠದ ಕ್ಷೇತ್ರಕ್ಕಿಂತ ಸುಮಾರು 20 ಪಟ್ಟು ದೊಡ್ಡದಾಗಿದೆ. ಈ ರೀತಿ, ಕಿವಿಯ ಹರೆಯ ಮೇಲೆ ಹಾಕಲ್ಪಟ್ಟ ಒತ್ತಡವು ಅಂಡಾಕಾರದ ಕಿಟಕಿಯ ಅತ್ಯಂತ ಚಿಕ್ಕ ಪ್ರದೇಶದಲ್ಲಿ ಕೇಂದ್ರಿತವಾಗುತ್ತದೆ. ಈ ಎರಡು ವಾಸ್ತವತೆಗಳು ಒಟ್ಟಿಗೆ ಕಂಪಿಸುವ ಕಿವಿಯ ಹರೆಯಲ್ಲಿ ಒತ್ತಡವನ್ನು 25ರಿಂದ 30 ಪಟ್ಟು ಅಂಡಾಕಾರದ ಕಿಟಕಿಯಷ್ಟೇ ವರ್ಧಿಸುವುದರಿಂದ, ಅದು ಕರ್ಣಶಂಖದಲ್ಲಿರುವ ದ್ರಾವಣವನ್ನು ಚಲಿಸುವಂತೆ ಮಾಡಲು ಸಾಕಾಗುವಷ್ಟೇ ಇರುತ್ತದೆ.

ಕೆಲವೊಮ್ಮೆ ತಲೆಯ ಶೀತವು ನಿಮ್ಮ ಕೇಳುವಿಕೆಯನ್ನು ಬಾಧಿಸುವುದನ್ನು ನೀವು ಕಂಡಿದ್ದೀರೋ? ಇದು ಯಾಕಂದರೆ ಕಿವಿಯ ಹರೆಯ ಯೋಗ್ಯ ನಿರ್ವಹಣೆಗೆ ಎರಡೂ ಪಕ್ಕದಲ್ಲಿ ಸಮಾನವಾದ ಒತ್ತಡವಿರುವಂತೆ ಅಪೇಕ್ಷಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಯೂಸ್ಟೇಕಿಯಸ್ಸಿನ ನಾಳವೆಂದು ಕರೆಯಲ್ಪಡುವ ಒಂದು ಚಿಕ್ಕ ಕಂಡಿಯ (ತೆರಪು) ಮೂಲಕ ಕಾಪಾಡಲ್ಪಡುತ್ತದೆ, ನಡು ಕಿವಿಯ ಕುಹರಕ್ಕೆ ಗಂಟಲ ಮೇಲ್ಭಾಗದಿಂದ ಈ ನಾಳ ಜೋಡಿಸುತ್ತದೆ. ನಾವು ಪ್ರತಿ ಸಾರಿ ನುಂಗುವಾಗ ಈ ನಾಳವು ತೆರೆಯಲ್ಪಡುತ್ತದೆ ಮತ್ತು ನಡು ಕಿವಿಯಲ್ಲಿ ಎದ್ದಿರಬಹುದಾದ ಯಾವುದೇ ಒತ್ತಡವನ್ನು ಬಿಡುಗಡೆಗೊಳಿಸುತ್ತದೆ.

ಒಳ ಕಿವಿ—ಕಿವಿಯ ವ್ಯವಹಾರದ ಕೊನೆ

ಅಂಡಾಕಾರದ ಕಿಟಕಿಯ ಮೂಲಕ, ನಾವು ಒಳ ಕಿವಿಗೆ ಬರುತ್ತೇವೆ. ಅರ್ಧವೃತ್ತಾಕಾರದ ನಾಲೆಗಳೆಂದು ಕರೆಯಲ್ಪಡುವ ಮೂರು ಪರಸ್ಪರ ಲಂಬಾಕಾರದಲ್ಲಿರುವ ಕುಣಿಕೆಗಳು ಸಮತೂಕ ಮತ್ತು ಸರಿಹೊಂದಾಣಿಕೆ ಮಾಡಲು ನಮಗೆ ಸಾಧ್ಯಮಾಡುತ್ತವೆ. ಆದಾಗ್ಯೂ ಕರ್ಣಶಂಖದಲ್ಲಿ ಆಲಿಸುವ ವ್ಯವಹಾರವು ನಿಜವಾಗಿ ಆರಂಭಗೊಳ್ಳುತ್ತದೆ.

ಕರ್ಣಶಂಖವು (ಗ್ರೀಕಿನಲ್ಲಿ ಕೊ-ಖಿಯ್ಲಾಸ್‌, ಬಸವನ ಹುಳ) ಮೂಲತಃ ಮೂರು ದ್ರಾವಣ ತುಂಬಿದ ನಾಳಗಳ ಇಲ್ಲವೇ ನಾಲೆಗಳ ಒಂದು ವ್ಯೂಹವಾಗಿದೆ, ಬಸವನ ಹುಳದ ಶಂಖದಂತೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡಿರುತ್ತವೆ, ನಾಳಗಳಲ್ಲಿ ಎರಡು ಸುರುಳಿಯ ತುದಿಯಲ್ಲಿ ಜೋಡಿಸಲ್ಪಟ್ಟಿವೆ. ಸುರುಳಿಯ ಪೀಠಭಾಗದಲ್ಲಿರುವ ಅಂಡಾಕಾರದ ಕಿಟಕಿಯು ರಿಕಾಪಿನಾಕಾರದ ಮೂಳೆಯಿಂದ ಚಲಿಸುವಂತೆ ಮಾಡಿದಾಗ, ಅದು ಪಿಸ್ಟನ್‌ ಮಾದರಿಯಲ್ಲಿ ಹಿಂದೆ ಮುಂದೆ ಚಲಿಸುತ್ತದೆ, ಆ ಮೂಲಕ ದ್ರಾವಣದಲ್ಲಿ ಜಲಭಾರದ ಒತ್ತಡದ ತರಂಗಗಳನ್ನು ಎಬ್ಬಿಸುತ್ತದೆ. ಅಗ್ರ ತುದಿಯಿಂದ ಈ ತರಂಗಗಳು ಪಯಣಿಸುವಾಗ, ನಾಳಗಳನ್ನು ಪ್ರತ್ಯೇಕಿಸುವ ಗೋಡೆಗಳನ್ನು ತರಂಗದಂತೆ ಏರಿಳಿತಗೊಳ್ಳಲು ಕಾರಣವಾಗುತ್ತವೆ.

ಈ ಗೋಡೆಗಳಲ್ಲಿ ಒಂದಾದ ಮೂಲದ ಸೂಕ್ಷ್ಮ ಚರ್ಮವೆಂದು ಕರೆಯಲ್ಪಡುವುದು ಬಹಳ ಸೂಕ್ಷ್ಮ ಸಂವೇದಿ ಕೊರ್ಟಿ ಅಂಗವಾಗಿರುತ್ತದೆ, ಆಲಿಸುವಿಕೆಯ ನಿಜ ಕೇಂದ್ರವನ್ನು 1851ರಲ್ಲಿ ಆಲ್ಫೊನ್ಸೊ ಕೊರ್ಟಿ ಅನ್ವೇಷಿಸಿದ್ದರಿಂದ ಅವನ ಹೆಸರಿನಿಂದ ಕರೆಯಲ್ಪಡುತ್ತದೆ. ಇದರ ಕೀಲಿಕೈಯಂತಿರುವ ಭಾಗದಲ್ಲಿ ಸುಮಾರು 15,000 ಇಲ್ಲವೇ ಹೆಚ್ಚು ಕೂದಲಿನ ಸಂವೇದಕ ಕಣಗಳ ಸಾಲುಗಳು ಇವೆ. ಈ ಕೂದಲಿನ ಕಣಗಳಿಂದ ಸಾವಿರಾರು ನರತಂತುಗಳು ಕಂಪನದ ವೇಗ, ತೀವ್ರತೆ ಮತ್ತು ಧ್ವನಿಯ ನಾದಗುಣದ ಸಮಾಚಾರವನ್ನು ಮಿದುಳಿಗೆ ಕೊಂಡೊಯ್ಯುತ್ತವೆ, ಅಲ್ಲಿ ಆಲಿಸುವಿಕೆಯ ಇಂದ್ರಿಯಾನುಭವವು ಸಂಭವಿಸುತ್ತದೆ.

ರಹಸ್ಯವು ಬಿಡಿಸಲ್ಪಟ್ಟದ್ದು

ಕೊರ್ಟಿ ಅಂಗವು ಈ ಸಂಕ್ಲಿಷ್ಟವಾದ ಸಮಾಚಾರವನ್ನು ಮಿದುಳಿಗೆ ಹೇಗೆ ನಿವೇದಿಸುತ್ತದೆ ಎಂಬದು ದೀರ್ಘ ಕಾಲದ ತನಕ ರಹಸ್ಯವಾಗಿಯೇ ಉಳಿಯಿತು. ಒಂದು ಸಂಗತಿ ವಿಜ್ಞಾನಿಗಳಿಗೆ ತಿಳಿದಿತ್ತು ಏನಂದರೆ ಮಿದುಳು ಯಾಂತ್ರಿಕ ಕಂಪನಗಳಿಗೆ ಪ್ರತಿಸ್ಪಂದಿಸುವುದಿಲ್ಲ, ಆದರೆ ಕೇವಲ ವಿದ್ಯುತ್‌-ರಾಸಾಯನಿಕ ಬದಲಾವಣೆಗಳಿಗೆ ಪ್ರತಿಸ್ಪಂದಿಸುತ್ತದೆ. ಕೊರ್ಟಿ ಅಂಗವು ಹೇಗಾದರೂ ಮಾಡಿ ತರಂಗದಂತೆ ಏರಿಳಿತಗೊಳ್ಳುವ ಮೂಲ ಸೂಕ್ಷ್ಮಚರ್ಮದ ಚಲನೆಯನ್ನು ತತ್ಸಮಾನವಾದ ವಿದ್ಯುತ್‌ ಪ್ರೇರಕಗಳಾಗಿ ಮಾರ್ಪಡಿಸಿ ಮಿದುಳಿಗೆ ಅವುಗಳನ್ನು ಕಳುಹಿಸ ಬೇಕು.

ಈ ಚಿಕ್ಕ ಅಂಗದ ರಹಸ್ಯವನ್ನು ಬಿಡಿಸಲು ಹಂಗೇರಿಯಾದ ವಿಜ್ಞಾನಿ, ಜೋರ್ಜ್‌ ವಾನ್‌ ಬೆಕ್‌ಸೀಗೆ ಸುಮಾರು 25 ವರ್ಷಗಳು ಹಿಡಿದವು. ಅವನು ಅನ್ವೇಷಿಸಿದ ಒಂದು ಸಂಗತಿಯೆಂದರೆ ಜಲಭಾರದ ಒತ್ತಡದ ತರಂಗಗಳು ಶಂಖಕರ್ಣದಲ್ಲಿ ಪಯಣಿಸುತ್ತಿರುವಾಗ, ಅವುಗಳು ದಾರಿಯಲ್ಲಿ ಎಲ್ಲಿಯೋ ಒಂದು ಗರಿಷ್ಠ ಉನ್ನತವನ್ನು ಮುಟ್ಟುತ್ತವೆ ಮತ್ತು ಮೂಲತಃ ಸೂಕ್ಷ್ಮಚರ್ಮವನ್ನು ದೂಡುತ್ತವೆ. ಉನ್ನತ ತರಂಗಾಂತರದ ಧ್ವನಿಯಿಂದ ಉತ್ಪಾದಿತವಾದ ತರಂಗಗಳು ಶಂಖಕರ್ಣದ ಪೀಠದ ಹತ್ತಿರದಲ್ಲಿಯೇ ಸೂಕ್ಷ್ಮಚರ್ಮದ ಮೇಲೆ ಮುಂದೊತ್ತುತ್ತವೆ ಮತ್ತು ಅಗ್ರ ತುದಿಯ ಹತ್ತಿರದ ಸೂಕ್ಷ್ಮಚರ್ಮದ ಮೇಲೆ ಕಡಿಮೆ ತರಂಗಾಂತರದ ಧ್ವನಿಗಳು ಮುಂದೊತ್ತುತ್ತವೆ. ಈ ರೀತಿ ಬೆಕ್‌ಸೀ ತೀರ್ಮಾನಿಸಿದ್ದೇನಂದರೆ ಒಂದು ನಿರ್ದಿಷ್ಟ ತರಂಗಾಂತರವು ಒಂದು ನಿರ್ದಿಷ್ಟ ಸ್ಥಾನದಲ್ಲಿ ಮೂಲತಃ ಸೂಕ್ಷ್ಮಚರ್ಮವನ್ನು ಬಗ್ಗಿಸುವಂತಹ ತರಂಗಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ, ಇದು ಕೂದಲಿನ ಕಣಗಳು ಪ್ರತಿಕ್ರಿಯಿಸುವಂತೆ ಕಾರಣಮಾಡಿ, ಮಿದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಕೂದಲಿನ ಕಣಗಳು ಇರುವ ಸ್ಥಾನವು ತರಂಗಾಂತರಕ್ಕೆ ಸಮಾನವಾಗಿರುತ್ತವೆ ಮತ್ತು ಕೂದಲಿನ ಕಣಗಳ ಸಂಖ್ಯೆಯು ಉದ್ರೇಕಿಸಲ್ಪಟ್ಟ ಪ್ರಮಾಣಕ್ಕನುಸಾರವಾಗಿ ಅದರ ತೀವ್ರತೆಯಿರುತ್ತದೆ.

ಈ ವಿವರಣೆಯು ಸರಳವಾದ ಧ್ವನಿ ಏರಿಳಿತಕ್ಕೆ ಉತ್ತಮವಾಗಿದೆ. ಆದರೆ ನಿಸರ್ಗದಲ್ಲಿ ಸಂಭವಿಸುವ ಧ್ವನಿಗಳು ಸರಳವಾಗಿರುವುದು ವಿರಳವೇ. ಒಂದೇ ತರಂಗಾಂತರದಲ್ಲಿ ಇರಬಹುದಾದರೂ, ಕಪ್ಪೆಯೊಂದರ ವಟಗುಟ್ಟುವಿಕೆಯ ಧ್ವನಿಯು ಒಂದು ಮದ್ದಲೆ ಬಡಿತಕ್ಕಿಂತ ಭಿನ್ನವಾಗಿರುತ್ತದೆ, ಇದು ಯಾಕಂದರೆ ಪ್ರತಿಯೊಂದು ಧ್ವನಿಯು ಒಂದು ಮೂಲಸ್ವರದಿಂದ ಮತ್ತು ಅನೇಕ ಅನುಸ್ವರಗಳಿಂದ ಮಾಡಲ್ಪಟ್ಟಿದೆ. ಅನುಸ್ವರಗಳ ಸಂಖ್ಯೆಯು ಮತ್ತು ಅವುಗಳ ಸಂಬಂಧಿ ಬಲವು ಪ್ರತಿಯೊಂದು ಧ್ವನಿಗೆ ಒಂದು ವಿಶಿಷ್ಟ ಗೌಣಸ್ವರವನ್ನು ಯಾ ಲಕ್ಷಣವನ್ನು ನೀಡುತ್ತದೆ. ಈ ರೀತಿಯಲ್ಲಿ ನಾವು ಕೇಳುವ ಧ್ವನಿಗಳನ್ನು ತಿಳಿದುಕೊಳ್ಳುತ್ತೇವೆ.

ಮೂಲತಃ ಸೂಕ್ಷ್ಮಚರ್ಮವು ಧ್ವನಿಯೊಂದರ ಎಲ್ಲಾ ಅನುಸ್ವರಗಳಿಗೆ ಒಂದೇ ಸಮಯದಲ್ಲಿ ಪ್ರತಿವರ್ತಿಸಬಹುದು ಮತ್ತು ಎಷ್ಟು ಮತ್ತು ಯಾವ ಅನುಸ್ವರಗಳಿವೆ ಎಂದು ಪತ್ತೆ ಹಚ್ಚಬಹುದು, ಹೀಗೆ ಧ್ವನಿಗಳನ್ನು ಗುರುತಿಸ ಬಹುದು. ಗಣಿತಜ್ಞರು ಈ ಕ್ರಮವಿಧಾನವನ್ನು ಫೊರಿಯರ್‌ ಸಮೀಕ್ಷೆ ಎಂದುಕರೆಯುತ್ತಾರೆ, ಅದನ್ನು 19ನೆಯ ಶತಕದ ತೀಕ್ಷ್ಣ ಬುದ್ಧಿಯ ಫ್ರೆಂಚ್‌ ಗಣಿತಜ್ಞ, ಜೀನ್‌-ಬ್ಯಾಪ್ಟಿಸ್ಟ್‌-ಜೊಸೇಫ್‌ ಫೊರಿಯರ್‌ ಎಂಬವನ ಹೆಸರಿನಿಂದ ಕರೆಯಲಾಗಿದೆ. ಆದರೂ, ಕಿವಿಯು ಗಣಿತದ ಮುಂದುವರಿದ ಈ ತಂತ್ರವನ್ನು ಉಪಯೋಗಿಸುತ್ತಾ ಬಂದಿದೆ, ಕೇಳಿದ ಧ್ವನಿಗಳನ್ನು ವಿಮರ್ಶಿಸಿ, ಮಿದುಳಿಗೆ ಸಮಾಚಾರವನ್ನು ದಾಟಿಸುತ್ತಾ ಇದೆ.

ಈಗಲೂ ಕೂಡಾ, ವಿಜ್ಞಾನಿಗಳು ಒಳ ಕಿವಿಯು ಯಾವ ವಿಧದ ಸಂಕೇತಗಳನ್ನು ಮಿದುಳಿಗೆ ಕಳುಹಿಸುತ್ತದೆ ಎಂದು ವಿಜ್ಞಾನಿಗಳು ಖಚಿತವಾಗಿ ತಿಳಿದಿರುವುದಿಲ್ಲ. ಸಂಶೋಧನೆಯು ತೋರಿಸುವುದೇನಂದರೆ ಕೂದಲಿನ ಎಲ್ಲಾ ಕಣಗಳಿಂದ ಕಳುಹಿಸಲ್ಪಡುವ ಸಂಕೇತಗಳು ಸಮಾನ ಉದ್ದದವುಗಳೂ ಮತ್ತು ಶಕ್ತಿಯವುಗಳೂ ಆಗಿವೆ. ಆದುದರಿಂದ, ಸಂಕೇತಗಳಲ್ಲಿ ಏನು ಒಳಗೂಡಿದೆ ಎನ್ನುವುದಕ್ಕಿಂತ, ಸ್ವತಹ ಸರಳ ಸಂಕೇತಗಳು ಮಿದುಳಿಗೆ ಸಂದೇಶವೊಂದನ್ನು ಕಳುಹಿಸುತ್ತವೆ ಎಂದು ವಿಜ್ಞಾನಿಗಳು ನಂಬುತ್ತಾರೆ.

ಇದರ ವೈಶಿಷ್ಟತೆಯನ್ನು ಗಣ್ಯಮಾಡಬೇಕಾದರೆ, ಮಕ್ಕಳ ಆಟವೊಂದರಲ್ಲಿ ಸಾಲಿನಲ್ಲಿ ನಿಂತಿರುವವರಿಗೆ ಒಬ್ಬನಿಂದ ಇನ್ನೊಬ್ಬನಿಗೆ ಕಥೆಯೊಂದನ್ನು ದಾಟಿಸಲು ಹೇಳಲಾಗುತ್ತದೆ. ಮೂಲದಲ್ಲಿ ಏನು ಹೇಳಲ್ಪಟ್ಟಿತ್ತೋ ಅದಕ್ಕೆ ಯಾವುದೇ ಹೋಲಿಕೆಯಿರದ ಒಂದನ್ನು ಸಾಲಿನ ಕೊನೆಯಲ್ಲಿ ಹೇಳಲ್ಪಡ ಬಹುದು. ಆದರೆ ಒಂದು ಸಂಕ್ಲಿಷ್ಟತೆಯ ಕಥೆಯ ಬದಲು, ಸಂಖ್ಯೆಯಂತಹ ಒಂದು ಸಂಕೇತವನ್ನು ಕೊಟ್ಟರೆ ಅದು ವಕ್ರವಾಗಿ ಹೋಗುವ ಸಂಭಾವ್ಯವು ಕೊಂಚ. ಮತ್ತು ಪ್ರಾಯಶಃ ಅದನ್ನು ತಾನೇ ಒಳಕಿವಿಯು ಮಾಡುತ್ತಿರಬಹುದು.

ಆಸಕ್ತಕರವಾಗಿಯೇ ಇಂದಿನ ಪ್ರಗತಿಕರ ಸಂಪರ್ಕ ವ್ಯವಸ್ಥೆಯಲ್ಲಿ ನಾಡಿಮಿಡಿತ ಸಂಕೇತದ ಅಳವಡಿಸುವಿಕೆಯ ತಂತ್ರಜ್ಞಾನವನ್ನು ಬಳಸಲಾಗಿದೆ. ಅದೂ ಅದೇ ಸೂತ್ರದ ಮೇಲೆ ಕಾರ್ಯವೆಸಗುತ್ತದೆ. ಒಂದು ಘಟನೆಯ ಒಂದು ವಿವರಣಾತ್ಮಕ ವರದಿಯೊಂದನ್ನು ಕಳುಹಿಸುವ ಬದಲು ಆ ಘಟನೆಯನ್ನು ವಿವರಿಸುವ ಸಂಕೇತವೊಂದನ್ನು ಕಳುಹಿಸಲಾಗುತ್ತದೆ. ಮಂಗಳಗ್ರಹದ ಚಿತ್ರಗಳನ್ನು ಕಳುಹಿಸಿದ ನಮೂನೆಯು ಇದೇ ಆಗಿರುತ್ತದೆ, ಯುಗಳ ತುಣುಕುಗಳಲ್ಲಿ (ಬೈನರಿ ಬಿಟ್ಸ್‌) ಇಲ್ಲವೇ ಧ್ವನಿಯನ್ನು ದಾಖಲಿಸಲು ಮತ್ತು ಪುನಃ ನುಡಿಸಲು ಧ್ವನಿಗಳನ್ನು ತುಣುಕುಗಳಾಗಿ ಪರಿವರ್ತಿಸುವುದಾಗಿದೆ. ಆದರೆ, ಇಲ್ಲಿಯೂ ಕಿವಿಯು ಮೊತ್ತ ಮೊದಲಾಗಿದೆ!

ಸೃಷ್ಟಿಯ ಒಂದು ನಾಯಕ ಕೃತಿ

ನಮ್ಮ ಕಿವಿಗಳು ಅತಿ ಚುರುಕೂ, ಇಲ್ಲವೇ ಅತ್ಯಂತ ಸಂವೇದಕವೂ ಆಗಿಲ್ಲದಿರಬಹುದು, ಅದರೂ ನಮ್ಮ ಮಹಾ ಆವಶ್ಯಕತೆಗಳನ್ನು ಪೂರೈಸಲು ಅವು ಯೋಗ್ಯವಾಗಿ ಅಳವಡಿಸಲ್ಪಟ್ಟಿವೆ—ನಿವೇದಿಸುವ ಆವಶ್ಯಕತೆ. ಮಾನವ ಮಾತುಕತೆಯ ಧ್ವನಿಗಳ ಲಕ್ಷಣಗಳನ್ನು ಉತ್ತಮವಾಗಿ ಪ್ರತಿವರ್ತಿಸಲು ಅವುಗಳನ್ನು ರೂಪಿಸಲಾಗಿದೆ. ಹಸುಕೂಸುಗಳು ಯೋಗ್ಯವಾಗಿ ಬೆಳೆಯಬೇಕಾದರೆ ಅವರ ತಾಯಂದಿರ ಸ್ವರದ ಧ್ವನಿಯನ್ನು ಆಲಿಸುವ ಜರೂರಿಯಿದೆ. ಮತ್ತು ಅವರು ಬೆಳೆದಷ್ಟಕ್ಕೆ, ಮಾತುಕತೆಯ ತಮ್ಮ ಕೌಶಲ್ಯತೆಯನ್ನು ಅವರು ಬೆಳೆಸಿಕೊಳ್ಳ ಬೇಕಾದರೆ, ಅವರು ಬೇರೆ ಮಾನವರ ಧ್ವನಿಗಳನ್ನು ಆಲಿಸ ಬೇಕಾಗುತ್ತದೆ. ಪ್ರತಿಯೊಂದು ಭಾಷೆಯ ನವಿರಾದ ಧ್ವನಿಯ ಏರಿಳಿತಗಳನ್ನು ಅವರು ವಿವೇಚಿಸಲು ಅವರ ಕಿವಿಗಳು ಅನುಮತಿಸುತ್ತವೆ, ಆ ಮೂಲಕ ಒಬ್ಬ ಸ್ಥಳೀಕನು ಮಾತಾಡುವಷ್ಟೇ ಸ್ಪಷ್ಟವಾಗಿ ಅವರು ಮಾತಾಡುವಂತಹ ರೀತಿಯಲ್ಲಿ ಬೆಳೆಯುತ್ತಾರೆ.

ಇದೆಲ್ಲಾವು ಕುರುಡಾದ ವಿಕಾಸವಾದದಿಂದಾದ ಫಲಿತಾಂಶವಲ್ಲ. ಬದಲಾಗಿ, ನಮ್ಮ ಆಲಿಸುವ ಅದ್ಭುತಕರ ಉಪಕರಣಕ್ಕಾಗಿ, ನಮ್ಮ ಪ್ರೀತಿಯ ನಿರ್ಮಾಣಿಕನಾದ ಯೆಹೋವನಿಗೆ ನಾವು ಅಭಾರಿಗಳಾಗಿದ್ದೇವೆ. (ಜ್ಞಾನೋಕ್ತಿ 20:12) ನಮ್ಮ ಕಿವಿಗಳು ಖಂಡಿತವಾಗಿಯೂ ಸೃಷ್ಟಿಯ ನಾಯಕ ಕೃತಿಗಳಾಗಿವೆ ಮತ್ತು ನಮ್ಮ ರಚಕನ ವಿವೇಕ ಮತ್ತು ಪ್ರೀತಿಯ ವ್ಯಕ್ತಪಡಿಸುವಿಕೆಗಳಾಗಿವೆ. ಅವುಗಳ ಮೂಲಕ ನಾವು ನಮ್ಮ ಸಹ ಮಾನವರೊಂದಿಗೆ ನಿವೇದಿಸಲು ಶಕ್ತರಾಗಿದ್ದೇವೆ. ಆದರೆ ಎಲ್ಲಾದಕ್ಕಿಂತ ಹೆಚ್ಚಾಗಿ, ದೇವರ ವಾಕ್ಯದ ವಿವೇಕವನ್ನು ಆಲಿಸಲು ನಾವದನ್ನು ಉಪಯೋಗಿಸೋಣ, ಆ ಮೂಲಕ ನಾವು ನಮ್ಮ ಸ್ವರ್ಗೀಯ ತಂದೆಯಿಂದ ಕಲಿಯ ಬಲ್ಲೆವು. (g90 1/22)

[ಅಧ್ಯಯನ ಪ್ರಶ್ನೆಗಳು]

a ಮಾನವ ಮಾತುಕತೆಯ ಧ್ವನಿಯ ವಿಶಿಷ್ಟಕರ ಲಕ್ಷಣಗಳಲ್ಲಿ ಅಧಿಕಾಂಶ 2,000ದಿಂದ 5,000HZ (ಸೆಕುಂಡಿಗೆ ಆವರ್ತನಗಳು)ದ ಶ್ರೇಣಿಯೊಳಗೆ ಬರುತ್ತವೆ ಮತ್ತು ಇವುಗಳು ಹೆಚ್ಚು ಕಡಿಮೆ ಕಿವಿಯ ನಾಲೆ ಮತ್ತು ಹೊರ ಕಿವಿಯ ಕೇಂದ್ರೀಯ ಪೊಳ್ಳು ಭಾಗದ ತರಂಗಾಂತರಕ್ಕೆ ಪ್ರತಿಸ್ಪಂದಿಸುತ್ತವೆ.

[ಪುಟ 19ರಲ್ಲಿರುವಚಿತ್ರ]

(For fully formatted text, see publication)

ಒಳ ಕಿವಿ

ಅರ್ಧವರ್ತುಲಾಕಾರದ ನಾಲೆಗಳು

ಸುತ್ತಿಗೆ

ಹೊರ ಕಿವಿ

ಸ್ಥೂಣ

ಅಂಡಾಕಾರದ ಕಿಟಕಿ

ಕರ್ಣಶಂಖ

ಕಿವಿಯ ನಾಲೆ

ರಿಕಾಪಿನಾಕಾರದ ಮೂಳೆ

ಕಿವಿಯ ಹರೆ

ಯೂಸ್ಟೇಯಸ್ಸಿನ ನಾಳ

ಕಿವಿ

ನಡು ಕಿವಿ

[ಪುಟ 20ರಲ್ಲಿರುವಚಿತ್ರ]

(For fully formatted text, see publication)

ಬಿಟ್ಟಿದ ಮೂರು ನಾಳಗಳ ಸಮಾನ ನಿರೂಪಣವು

ಕರ್ಣಶಂಖ

ಸಂಬಂಧಕ ಕಿವಿಯ ನಾಲೆ

ಕರ್ಣಶಂಖ ನಾಳ

ನಡುಕಿವಿಯ ನಾಳ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ