ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 4/8 ಪು. 25-27
  • ದೇವರ ಸಮತೆಯ ಕೊಡುಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸಮತೆಯ ಕೊಡುಗೆ
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದೇನು? ಅದು ಹೇಗೆ ಕೆಲಸನಡೆಸುತ್ತದೆ?
  • ವೆಸ್ಟಿಬ್ಯುಲರ್‌ ವ್ಯವಸ್ಥೆಯ ಕ್ರಿಯಾಲೋಪಗಳು
  • ಕಾರಣಗಳು ಮತ್ತು ಚಿಕಿತ್ಸೆಗಳು
  • ನಿಮ್ಮ ಕಿವಿ ಮಹಾ ನಿವೇದಕ
    ಎಚ್ಚರ!—1991
  • ನಿಮ್ಮ ಶ್ರವಣ ಶಕ್ತಿ ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ
    ಎಚ್ಚರ!—1997
ಎಚ್ಚರ!—1996
g96 4/8 ಪು. 25-27

ದೇವರ ಸಮತೆಯ ಕೊಡುಗೆ

“ಅದು ಸಮುದ್ರ ಕಾಲುಗಳು ಅಷ್ಟೆ, ಮತ್ತು ಹಲವಾರು ದಿನಗಳ ತನಕ ಅವು ಹಾಗಿರಬಲ್ಲದು,” ಎಂದರು ನನ್ನ ಮಿತ್ರರು. ಅಕ್ಟೋಬರ್‌ 1990ರಲ್ಲಿ ಕ್ಯಾರಿಬಿಯನ್‌ನಲ್ಲಿ ಏಳು ದಿನಗಳ ಪಯಣಾನಂತರ, ವಿಹಾರಯಾನದ ಹಡಗಿನಿಂದ ನಾನು ಆಗ ತಾನೆ ಒಣನೆಲದ ಮೇಲೆ ಕಾಲಿಟ್ಟಿದ್ದೆ. ಆದರೆ ಕೆಲವೇ ದಿನಗಳ ಅನುಭವವೆಂದು ನಾನು ನೆನಸಿದ್ದದ್ದು ಅನೇಕ ತಿಂಗಳುಗಳ ವರೆಗೆ ಉಳಿದಿದೆ. ನಾನು ಆ ಹಡಗಿನಿಂದ ಕೆಳಗೆ ಇಳಿಯಲೇ ಇಲ್ಲ ಎಂಬಂತೆ ಅದಿತ್ತು. ನನ್ನ ವೆಸ್ಟಿಬ್ಯುಲರ್‌ ವ್ಯವಸ್ಥೆಯಲ್ಲಿ, ಯಾವುದರ ಕೇಂದ್ರೀಯ ಜೋಡಣೆಗಳು ಮಿದುಳಿನಲ್ಲಿವೆಯೊ ಆ ಒಳಕಿವಿಯ ಜಟಿಲವಾದ ಸಮತೆಯ ವ್ಯವಸ್ಥೆಯಲ್ಲಿ ಏನೋ ಕೆಟ್ಟುಹೋಗಿತ್ತು.

ಅದೇನು? ಅದು ಹೇಗೆ ಕೆಲಸನಡೆಸುತ್ತದೆ?

ನಿಮ್ಮ ಸಮತೂಕವನ್ನು ಸಂಘಟಿಸುವ ಕೇಂದ್ರವು ಮಿದುಳು ಕಾಂಡವೆಂದು ಕರೆಯಲ್ಪಡುವ ಮಿದುಳಿನ ಬುಡದಲ್ಲಿ ಕಂಡುಬರುತ್ತದೆ. ನೀವು ಆರೋಗ್ಯವಂತರಾಗಿರುವಾಗ, ನಿಮ್ಮ ಕಣ್ಣುಗಳಿಂದ, ನಿಮ್ಮ ಸ್ನಾಯುಗಳಿಂದ ಮತ್ತು ನಿಮ್ಮ ವೆಸ್ಟಿಬ್ಯುಲರ್‌ ವ್ಯವಸ್ಥೆಯಿಂದ ಅಸಂಖ್ಯಾತ ಆವೇಗಗಳನ್ನು ಪಡೆಯುವುದರಿಂದ ನೀವು ನಿಮ್ಮ ಸಮತೂಕವನ್ನು ಕಾಪಾಡಿಕೊಳ್ಳುತ್ತೀರಿ.

ನಿಮ್ಮ ಕಣ್ಣುಗಳು ಮಿದುಳು ಕಾಂಡಕ್ಕೆ ನಿಮ್ಮ ಬಾಹ್ಯ ಸುತ್ತುಗಟ್ಟುಗಳ ಕುರಿತು ಎಡೆಬಿಡದ ಸಂವೇದನಾ ಗ್ರಾಸವನ್ನು ಒದಗಿಸುತ್ತವೆ. ನಿಮ್ಮ ಸ್ನಾಯುಗಳಲ್ಲಿರುವ ಪ್ರೋಪ್ರೀಓಸೆಪ್ಟರ್‌ಗಳೆಂಬ ಸಂವೇದನ ಗ್ರಾಹಕಗಳು ನೀವು ನಡೆಯುವ ಅಥವಾ ಸ್ಪರ್ಶಿಸುವ ಮೇಲ್ಮೈ ಯಾವ ತೆರದ್ದು ಎಂಬ ಮಾಹಿತಿಯನ್ನು ನಿಮ್ಮ ಮಿದುಳಿಗೆ ಸಾಗಿಸುತ್ತವೆ. ಆದರೆ ಆಂತರಿಕ ಮಾರ್ಗದರ್ಶನ ವ್ಯವಸ್ಥೆಯಾಗಿ ವರ್ತಿಸಿ, ಭೂಮಿಗೆ ಮತ್ತು ಅದರ ಗುರುತ್ವಾಕರ್ಷಣ ಶಕ್ತಿಗೆ ಸಂಬಂಧದಲ್ಲಿ ನಿಮ್ಮ ದೇಹವು ಅಂತರಿಕ್ಷದಲ್ಲಿ ಎಲ್ಲಿದೆಯೆಂದು ನಿಮ್ಮ ಮಿದುಳಿಗೆ ಹೇಳುವುದು ನಿಮ್ಮ ವೆಸ್ಟಿಬ್ಯುಲರ್‌ ವ್ಯವಸ್ಥೆಯಾಗಿದೆ.

ವೆಸ್ಟಿಬ್ಯುಲರ್‌ ವ್ಯವಸ್ಥೆಯು ಸಮತೂಕದೊಂದಿಗೆ ವ್ಯವಹರಿಸುವ ಐದು ಭಾಗಗಳಿಂದ ರಚಿಸಲ್ಪಟ್ಟಿದೆ: ಮೂರು ಅರ್ಧವೃತ್ತಾಕೃತಿಯ ನಾಳಗಳು ಮತ್ತು ಎರಡು ಕೋಶಗಳು. ಅರ್ಧವೃತ್ತಾಕೃತಿಯ ನಾಳಗಳನ್ನು, ಸುಪೀರಿಯರ್‌ ಕನ್ಯಾಲ್‌, ಸಮತಲದ (ಪಾಶ್ವಸ್ಥ) ನಾಳ, ಇನ್‌ಫೀರಿಯರ್‌ (ಹಿಂಭಾಗದ) ಕನ್ಯಾಲ್‌ ಎಂದು ಹೆಸರಿಸಲಾಗಿದೆ. ಆ ಎರಡು ಕೋಶಗಳನ್ನು ಯೂಟ್ರಿಕಲ್‌ ಎಂದೂ ಸ್ಯಾಕ್ಯೂಲ್‌ ಎಂದೂ ಕರೆಯಲಾಗುತ್ತದೆ.

ಅರ್ಧವೃತ್ತಾಕೃತಿಯ ನಾಳಗಳು ಸಮತಲಗಳಲ್ಲಿ ಪರಸ್ಪರ ಸಮಕೋನಗಳಲ್ಲಿ, ಒಂದು ಕೋಣೆಯ ಮೂಲೆಯಲ್ಲಿ ಗೋಡೆಗಳೂ ನೆಲವೂ ಮುಟ್ಟುವ ಹಾಗಿವೆ. ಈ ನಾಳಗಳು, ಟೆಂಪೊರಲ್‌ ಬೋನ್‌ ಎಂದು ಕರೆಯಲ್ಪಡುವ ತಲೆಬುರುಡೆಯ ಗಟ್ಟಿ ಎಲುಬಿನಲ್ಲಿ ಅಡಗಿರುವ ಹಾದಿಜಾಲವನ್ನುಂಟುಮಾಡುವ ಸಾಗಣೆಯ ಮಾರ್ಗಗಳಾಗಿವೆ. ಈ ಮೂಳೆಯ ಜಾಲದಲ್ಲಿ ಮೆಂಬ್ರೇನಸ್‌ ಲ್ಯಾಬರಿಂತ್‌ (ಪೊರೆಸಂಬಂಧಿತ ಜಾಲ) ಎಂದು ಕರೆಯಲ್ಪಡುವ ಇನ್ನೊಂದು ಹಾದಿಜಾಲವಿದೆ. ಪ್ರತಿಯೊಂದು ಪೊರೆಸಂಬಂಧಿತ ಅರ್ಧವೃತ್ತಾಕೃತಿಯ ನಾಳದ ಕೊನೆಯಲ್ಲಿ ಉಬ್ಬಿನಂತೆ ಕಂಡುಬರುವ ಆ್ಯಂಪ್ಯೂಲ ಎಂದು ಕರೆಯಲ್ಪಡುವ ವಸ್ತುವೊಂದಿದೆ. ಈ ಪೊರೆಸಂಬಂಧಿತ ಜಾಲದೊಳಗೆ ಎಂಡೊಲಿಂಫ್‌ ಎಂಬ ಒಂದು ವಿಶೇಷ ದ್ರವವಿದೆ. ಮತ್ತು ಆ ಪೊರೆಯ ಹೊರಭಾಗದಲ್ಲಿ ಇನ್ನೂ ಭಿನ್ನವಾದ ರಾಸಾಯನಿಕ ಸಂಯೋಜನೆಯಿರುವ ಪೆರಿಲಿಂಫ್‌ ಎಂದು ಕರೆಯಲ್ಪಡುವ ಇನ್ನೊಂದು ದ್ರವವಿದೆ.

ಆ್ಯಂಪ್ಯೂಲ ಎಂದು ಕರೆಯಲ್ಪಡುವ ಆ ನಾಳದ ಉಬ್ಬಿದ ಭಾಗವು ಯಾವುದು ಕ್ಯೂಪ್ಯೂಲ ಎಂಬ ಜೆಲಟಿನ್‌ ಮುದ್ದೆಯೊಳಗೆ ಕಟ್ಟುಗಳ ರೂಪದಲ್ಲಿ ನಾಟಿಸಲ್ಪಟ್ಟಿವೆಯೊ, ಆ ವಿಶೇಷ ಕೂದಲ ಜೀವಕಣಗಳನ್ನೊಳಗೊಂಡಿದೆ. ನೀವು ನಿಮ್ಮ ತಲೆಯನ್ನು ಯಾವುದೇ ದಿಕ್ಕಿಗೆ ತಿರುಗಿಸಿದಾಗಲೂ ಆ ಎಂಡೊಲಿಂಫ್ಯಾಟಿಕ್‌ ದ್ರವವು ನಾಳಗಳ ಚಲನೆಗಿಂತ ತುಸು ಹಿಂದಿರುತ್ತದೆ; ಆದಕಾರಣ ದ್ರವವು ಕ್ಯೂಪ್ಯೂಲವನ್ನು ಮತ್ತು ಅದರಲ್ಲಿರುವ ಕೂದಲ ಕಟ್ಟುಗಳನ್ನು ಬಗ್ಗಿಸುತ್ತದೆ. ಕೂದಲ ಕಟ್ಟುಗಳ ಚಲನೆಯು ಕೂದಲ ಜೀವಕಣಗಳ ವಿದ್ಯುತ್ಸಂಬಂಧಿತ ವರ್ಗ ಗುಣಗಳಲ್ಲಿ ಬದಲಾವಣೆಯನ್ನುಂಟುಮಾಡುತ್ತದೆ, ಮತ್ತು ಇದು ಸರದಿಯಾಗಿ, ನರಕಣಗಳ ಮಾರ್ಗವಾಗಿ ನಿಮ್ಮ ಮಿದುಳಿಗೆ ಸಮಾಚಾರಗಳನ್ನು ರವಾನಿಸುತ್ತದೆ. ಸಮಾಚಾರಗಳು, ಮಿದುಳಿಗೆ ಆ ಒಂದೊಂದು ಕೂದಲ ಕಣಗಳಿಂದ ಅಂತರ್ವಾಹಿ ನರಗಳಿಗಿಳಿದು ಪಯಣಿಸುವುದು ಮಾತ್ರವಲ್ಲ, ಅಗತ್ಯ ಬೀಳುವಲ್ಲಿ ಸಮಕಾರಕ ಮಾಹಿತಿಯನ್ನು ಕೂದಲ ಕಣಗಳಿಗೆ ಕೊಡಲು ಮಿದುಳಿನಿಂದ ಪ್ರತಿಯೊಂದು ಕೂದಲ ಕಣಗಳಿಗೂ ಮರುಪ್ರಯಾಣಿಸುತ್ತದೆ.

ಆ ಅರ್ಧವೃತ್ತಾಕೃತಿಯ ನಾಳಗಳು ನಿಮ್ಮ ತಲೆಯು ಯಾವುದೇ ದಿಕ್ಕಿಗೆ—ಮುಂದಕ್ಕೆ ಅಥವಾ ಹಿಂದಕ್ಕೆ ಬಗ್ಗಿಸುವುದು, ಒಂದು ಪಕ್ಕದಲ್ಲಿ ಅಥವಾ ಇನ್ನೊಂದು ಪಕ್ಕದಲ್ಲಿ ಅದನ್ನಿಡುವುದು ಅಥವಾ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸುವುದು—ಕೋನಯುತವಾಗಿ ಅಥವಾ ಆವರ್ತನೀಯವಾಗಿ ಚಲಿಸಲಿ, ಅದನ್ನು ಪತ್ತೆಹಚ್ಚುತ್ತವೆ.

ಆದರೆ ಇನ್ನೊಂದು ಕಡೆಯಲ್ಲಿ, ಯೂಟ್ರಿಕಲ್‌ ಮತ್ತು ಸ್ಯಾಕ್ಯೂಲ್‌ಗಳು ರೇಖಾತ್ಮಕ ಗತಿವೃದ್ಧಿಯನ್ನು ಪತ್ತೆಹಚ್ಚುತ್ತವೆ; ಆದಕಾರಣ ಅವುಗಳನ್ನು ಗುರುತ್ವಾಕರ್ಷಣ ಸಂವೇದನ ವಾಹಕಗಳೆಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೂಡ ಮ್ಯಾಕ್ಯುಲ ಎಂದು ಕರೆಯಲ್ಪಡುವುದರಲ್ಲಿ ಕೂದಲ ಜೀವಕಣಗಳಿವೆ. ಉದಾಹರಣೆಗೆ, ನೀವು ಎಲಿವೇಟರ್‌ನಲ್ಲಿ ಮೇಲೆತ್ತಲ್ಪಡುವಾಗ, ಆ ಸ್ಯಾಕ್ಯೂಲ್‌ ನಿಮ್ಮ ಮಿದುಳಿಗೆ ಮಾಹಿತಿಯನ್ನು ಕಳುಹಿಸಲಾಗಿ, ಅದು ನಿಮಗೆ ಮೇಲೆತ್ತಲ್ಪಡುವ ಗತಿವೃದ್ಧಿ ಪ್ರಜ್ಞೆಯನ್ನು ಕೊಡುತ್ತದೆ. ನೀವು ಕಾರ್‌ನಲ್ಲಿ ಪ್ರಯಾಣಿಸುತ್ತ ಥಟ್ಟನೆ ಗತಿವೃದ್ಧಿಯನ್ನು ಮಾಡುವುದಾದರೆ ಅದಕ್ಕೆ ಪ್ರತಿವರ್ತನೆ ತೋರಿಸುವ ಮುಖ್ಯ ಪತ್ತೇದಾರವು ಆ ಯೂಟ್ರಿಕಲ್‌ ಆಗಿದೆ. ಅದು ನಿಮ್ಮ ಮಿದುಳಿಗೆ, ನಿಮ್ಮನ್ನು ಮುಂದಕ್ಕೆ ಅಥವಾ ಹಿಂದಕ್ಕೆ ದೂಡುವ ಪ್ರಜ್ಞೆಯನ್ನು ಕೊಡುವ ಮಾಹಿತಿಯನ್ನು ಕಳುಹಿಸುತ್ತದೆ. ಆಗ ನಿಮ್ಮ ಮಿದುಳು ಈ ಮಾಹಿತಿಯನ್ನು, ನಿರ್ಣಯಗಳನ್ನು—ನಿಮ್ಮ ಪ್ರತ್ಯಕ್ಷ ಚಲನೆಗೆ ಪ್ರತಿವರ್ತನೆ ತೋರಿಸಲು ನೀವು ಹೇಗೆ ನಿಮ್ಮ ಕಣ್ಣುಗಳನ್ನೂ ಕಾಲುಗಳನ್ನೂ ಚಲಿಸಬೇಕೆಂಬಂತಹ—ಮಾಡುವ ಸಲುವಾಗಿ ಇತರ ಆವೇಗಗಳೊಂದಿಗೆ ಸಂಯೋಜಿಸುತ್ತದೆ. ನಿಮ್ಮ ಸ್ಥಾನ ನಿರ್ದೇಶವನ್ನು ಕಾಪಾಡುವಂತೆ ಅದು ಸಹಾಯಮಾಡುತ್ತದೆ.

ಇದು ಅದರ ವಿನ್ಯಾಸಕನಾದ ಯೆಹೋವ ದೇವರನ್ನು ಗೌರವಿಸುವ ಅದ್ಭುತಕರವಾದ ಒಂದು ವ್ಯವಸ್ಥೆಯಾಗಿದೆ. ಅದರ ವಿನ್ಯಾಸದಿಂದಾಗಿ ಸಂಶೋಧಕ ವಿಜ್ಞಾನಿಗಳು ಸಹ ಪ್ರಭಾವಿತರಾಗದೆ ಇರುವುದಿಲ್ಲ. ಜೀವಶಾಸ್ತ್ರ ಮತ್ತು ಶರೀರ ವಿಜ್ಞಾನದ ಪ್ರೊಫೆಸರರಾದ ಎ. ಜೆ. ಹಡ್ಸ್‌ಪೆತ್‌ ಸೈಎಂಟಿಫಿಕ್‌ ಅಮೆರಿಕನ್‌ ಪತ್ರಿಕೆಯಲ್ಲಿ ಬರೆದುದು: “ಆದರೂ ಹೆಚ್ಚಿನ ಕೆಲಸವು ಈ ಜೀವಶಾಸ್ತ್ರೀಯ ಉಪಕರಣದ ಸೂಕ್ಷ್ಮಾಂಶದ ಸಂವೇದನಶೀಲತೆ ಮತ್ತು ಜಟಿಲತೆಗೆ ಬೆರಗಿನ ಪ್ರಜ್ಞೆಯನ್ನು ಕೇವಲ ವರ್ಧಿಸಬಲ್ಲದು.”

ವೆಸ್ಟಿಬ್ಯುಲರ್‌ ವ್ಯವಸ್ಥೆಯ ಕ್ರಿಯಾಲೋಪಗಳು

ನನ್ನ ವಿಷಯದಲ್ಲಾದರೊ, ನನ್ನ ಒಳಕಿವಿ ಸಮಸ್ಯೆಯನ್ನು ಓಟೋಸ್ಪಾಂಜಿಯೋಸಿಸ್‌ ಅಥವಾ ಓಟೋಸ್ಕ್ಲರೋಸಿಸ್‌ ಎಂದು ರೋಗನಿರ್ಣಯ ಮಾಡಲಾಯಿತು. ವೆಸ್ಟಿಬ್ಯುಲರ್‌ ವ್ಯವಸ್ಥೆಯು ಯಾವುದರಲ್ಲಿರುತ್ತದೊ ಆ ಎಲುಬು, ಮೃದು ಅಥವಾ ಸ್ಪಂಜಿನಂತಾಗುವ ಸ್ಥಿತಿಯೇ ಇದು. ಸಾಮಾನ್ಯವಾಗಿ ಈ ಎಲುಬು ಅತಿ ಗಟ್ಟಿ, ನಿಮ್ಮ ಶರೀರದಲ್ಲಿರುವ ಬೇರೆ ಎಲುಬಿನ ಮೂಲವಸ್ತುವಿಗಿಂತಲೂ ಅತಿ ಗಟ್ಟಿಯಾಗಿರುತ್ತದೆ. ಮೃದುವಾಗುವ ಕಾರ್ಯವಿಧಾನದಲ್ಲಿ, ಯಾವುದು ಒಳಕಿವಿಯ ದ್ರವದೊಳಗೆ ಸ್ರವಿಸಿ ಅದನ್ನು ರಾಸಾಯನಿಕವಾಗಿ ಅಸ್ಯವ್ಯಸ್ತವಾಗಿಸುತ್ತದೊ ಅಥವಾ ಕಾರ್ಯತಃ ದ್ರವವನ್ನು ವಿಷಪೂರಿತವಾಗಿಸುತ್ತದೊ ಅಂತಹ ರಾಸಾಯನಿಕ ಕಿಣ್ವವೊಂದು ಉತ್ಪಾದಿಸಲ್ಪಡುತ್ತದೆ ಎಂದು ಯೋಚಿಸಲಾಗುತ್ತದೆ. ನೀವು ನಿಂತಿರುವುದಾದರೂ, ಚಲಿಸದೆ ಮಲಗಿರುವುದಾದರೂ, ಇದು ಸತತ ಚಲನೆಯ ವಿಲಕ್ಷಣವಾದ ಸಂವೇದನೆಯನ್ನುಂಟುಮಾಡಬಲ್ಲದು.

ನನಗಾದರೊ, ನನ್ನ ಪಾದಗಳ ಕೆಳಗಿದ್ದ ಹಾದಿಯು, ಕೆಲವು ವೇಳೆ ಒಂದು ಮೀಟರಿನ ಮೂರನೆಯ ಒಂದಂಶದಷ್ಟು ಎತ್ತರವಾದ ತರಂಗ ಚಲನೆಯ ಕಿರುತೆರೆಯಲ್ಲಿದೆಯೊ ಎಂಬಂತೆ ಭಾಸವಾಗುವಂತೆ ಮಾಡಿತು. ಮಲಗಿರುವಾಗ, ಒಂದು ಮೀಟರ್‌ ಎತ್ತರದ ಸಾಗರದ ಅಲೆಗಳ ಮಧ್ಯೆ ನಾನು ಒಂದು ಹುಟ್ಟುದೋಣಿಯ ಬುಡದಲ್ಲಿ ಮಲಗಿದ್ದೇನೊ ಎಂಬಂತೆ ನನಗನಿಸಿತು. ಈ ಸಂವೇದನೆಯು ಕೆಲವು ತಲೆಸುತ್ತಿನ ಪಟ್ಟುಗಳಂತೆ ಬಂದು ಹೋಗದೆ, ಅನೇಕ ತಿಂಗಳುಗಳ ಕಾಲ ಒಂದು ದಿನಕ್ಕೆ 24 ತಾಸುಗಳೂ ನನ್ನೊಂದಿಗಿತ್ತು. ಏಕಮಾತ್ರ ಉಪಶಮನವು ನಾನು ನಿದ್ರೆ ಮಾಡುತ್ತ ಪ್ರಜ್ಞಾರಹಿತ ಸ್ಥಿತಿಯಲ್ಲಿದ್ದಾಗ ಮಾತ್ರ ಆಗಿತ್ತು.

ಕಾರಣಗಳು ಮತ್ತು ಚಿಕಿತ್ಸೆಗಳು

ಓಟೋಸ್ಪಾಂಜಿಯೋಸಿಸ್‌/ಓಟೋಸ್ಕ್ಲರೋಸಿಸ್‌ ರೋಗಕಾರಣವು ಆನುವಂಶಿಕ ಸಂಗತಿಯೊಂದಿಗೆ ತುಸು ಸಂಬಂಧವಿರಬಹುದಾದರೂ, ಅದು ಇನ್ನೂ ಅಜ್ಞಾತವಾಗಿದೆ. ವೈದ್ಯಕೀಯ ವಿಜ್ಞಾನಕ್ಕೆ ಇದರ ಅಧ್ಯಯನ ಮಾಡುವುದು ಕಷ್ಟಕರವಾಗಿದೆ, ಏಕೆಂದರೆ ಈ ರೋಗಸ್ಥಿತಿಯು ಮಾನವರಲ್ಲಿ ಮಾತ್ರ ಅಸದೃಶವಾಗಿರುವಂತೆ ತೋರಿಬರುತ್ತದೆ. ಪ್ರಾಣಿಗಳಲ್ಲಿ ಅದು ಕಂಡುಬರುವುದು ಅತಿ ವಿರಳ. ಓಟೋಸ್ಪಾಂಜಿಯೋಸಿಸ್‌ ಕಿವಿಮೊರೆತ (ಕಿವಿಯಲ್ಲಿ ಘಣಘಣಿಸುವಿಕೆ)ವನ್ನು, ತಲೆ ತುಂಬಿರುವ ಅನಿಸಿಕೆ, ಬುದ್ಧಿಭ್ರಮಣೆ, ಸಮತೋಲ ತಪ್ಪಿದ ಅನಿಸಿಕೆ, ಅಥವಾ ಶಿರೋಭ್ರಮಣೆ (ತಲೆಸುತ್ತುವಿಕೆ)ಯ ವಿವಿಧ ರೂಪಗಳನ್ನು ಉಂಟುಮಾಡಬಲ್ಲದು. ಅದೇ ರೋಗಸ್ಥಿತಿಯು ಮಧ್ಯಕಿವಿಯಲ್ಲಿರುವ ಸ್ಟೇಪೀಸ್‌ನ ಸ್ಥಿರೀಕರಣವನ್ನು ಉಂಟುಮಾಡಿ ವಾಹಕ ಶ್ರವಣ ನಷ್ಟವನ್ನು ಆಗಿಸಬಲ್ಲದು. ಓಟೋಸ್ಪಾಂಜಿಯೋಸಿಸ್‌ ಕರ್ಣಶಂಖವನ್ನು ತಲಪುವುದಾದರೆ, ಅದು ನರದ ಕೆಲಸ ಮಾಡುವಿಕೆಯನ್ನು ನಾಶಮಾಡಿ ಸಂವೇದನ ವಾಹಕ ನರದ ಶ್ರವಣನಷ್ಟವನ್ನು ಆಗಿಸಬಲ್ಲದು.

ಈ ರೋಗಸ್ಥಿತಿಗೆ ಚಿಕಿತ್ಸೆಗಳಿವೆ. ಕೆಲವು ಶಸ್ತ್ರಚಿಕಿತ್ಸೆಯನ್ನೊಳಗೊಳ್ಳುತ್ತವೆ (ಅವೇಕ್‌! ಜುಲೈ 8, 1988, ಪುಟ 19ನ್ನು ನೋಡಿ); ಇತರರು ಕ್ಯಾಲ್ಸಿಯಮ್‌ ಮತ್ತು ಫ್ಲುಅರೈಡ್‌ ಅನುಬಂಧಗಳ ಮೂಲಕ ಎಲುಬಿನ ಕ್ಷೀಣಿಸುವಿಕೆಯನ್ನು ತಡೆದಿಡಲು ಪ್ರಯತ್ನಿಸುತ್ತಾರೆ. ಸಕ್ಕರೆ ಮುಕ್ತ ಆಹಾರಪಥ್ಯಗಳನ್ನು ತೆಗೆದುಕೊಳ್ಳಬೇಕೆಂದು ಕೆಲವು ಬಾರಿ ಸೂಚಿಸಲಾಗುತ್ತದೆ, ಏಕೆಂದರೆ ಒಳಕಿವಿಯು ರಕ್ತ ಸಕ್ಕರೆಗಾಗಿ ವಿಪರೀತವಾಗಿ ಹಸಿದಿರುತ್ತದೆ. ವಾಸ್ತವವಾಗಿ, ಒಳಕಿವಿಯನ್ನು ಶಕ್ತಿಯುತವನ್ನಾಗಿ ಮಾಡಲು, ಸಮಾನ ಗಾತ್ರದ ಮಿದುಳನ್ನು ಶಕ್ತಿಯುತವನ್ನಾಗಿ ಮಾಡುವುದಕ್ಕಿಂತ ಮೂರು ಪಾಲಿನಷ್ಟು ಹೆಚ್ಚು ಸಕ್ಕರೆ ಬೇಕಾಗುತ್ತದೆ. ಒಂದು ಆರೋಗ್ಯವಂತ ಕಿವಿಯು ರಕ್ತ ಸಕ್ಕರೆಯಲ್ಲಿರುವ ಸಾಮಾನ್ಯ ಏಳುಬೀಳುಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ; ಆದರೆ ಒಮ್ಮೆ ಕಿವಿಗೆ ಪೆಟ್ಟಾದಾಗ ಈ ಏಳುಬೀಳುಗಳು ನೀವು ಸುತ್ತು ತಿರುಗುವಂತೆ ಮಾಡಬಲ್ಲವು. ನಿಮ್ಮ ಒಳಕಿವಿ ಯೋಗ್ಯವಾಗಿ ಕೆಲಸಮಾಡದಿರುವಾಗ ಕ್ಯಾಫೀನ್‌ ಮತ್ತು ಮದ್ಯ ಸಹ ಹಾನಿಕಾರಕವೆಂದು ತೋರಿಬರುತ್ತದೆ. ಈ ಲೇಖನದಾರಂಭದಲ್ಲಿ ಹೇಳಲಾದ ವಿಹಾರಯಾನ ಹಡಗಿನ ಪಯಣವು ಈ ಸಮಸ್ಯೆಯನ್ನು ನಿಜವಾಗಿಯೂ ಆಗಿಸದಿದ್ದರೂ, ತಾಪಮಾನ, ತೇವ, ಮತ್ತು ಊಟದ ಅಭ್ಯಾಸಗಳು ಆ ಅಸಮತೂಕ ಸ್ಥಿತಿಯನ್ನು ವಿಯೋಜಿಸಿರುವುದು ಸಂಭವನೀಯ.

ನಿಮ್ಮ ಒಳಕಿವಿಯು ನಿಮಗಾಗಿ ಆಲಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ಬೆರಗುಗೊಳಿಸುವ ಮತ್ತು ಅದ್ಭುತಕರವಾದ ಒಂದು ರೀತಿಯಲ್ಲಿ, ನೀವು ಸಮತೂಕವನ್ನಿಟ್ಟುಕೊಳ್ಳುವಂತೆ ಅದು ಸಹಾಯಮಾಡುತ್ತದೆ. ಅದರ ವಿನ್ಯಾಸವು ನಮ್ಮ ನಿರ್ಮಾಣಿಕನ ಕೈಕೆಲಸವನ್ನು ನೋಡಿ ನಾವು ಬೆರಗಾಗುವಂತೆ ಮಾಡಬೇಕು, ಮತ್ತು ಆತನ ಸೃಷ್ಟಿಕರ್ತತ್ವಕ್ಕೆ ನಮ್ಮ ಗಣ್ಯತೆಯನ್ನು ಗಾಢಗೊಳಿಸಬೇಕು.—ದತ್ತ ಲೇಖನ.

[Diagrams/Picture on page 26]

(For fully formatted text, see publication)

ನಿಮ್ಮ ವಿಸ್ಮಯಕರವಾದ ವೆಸ್ಟಿಬ್ಯುಲರ್‌ ವ್ಯವಸ್ಥೆ

ಬಾಹ್ಯ ನೋಟ

ಸುಪೀರಿಯರ್‌ ಕನ್ಯಾಲ್‌

ಓವಲ್‌ ವಿಂಡೊ

ಕರ್ಣಶಂಖ

ಟೆಂಪೊರಲ್‌ ಬೋನ್‌

ಮೆಂಬ್ರೇನಸ್‌ ಲ್ಯಾಬರಿಂತ್‌

ಆ್ಯಂಪ್ಯೂಲ

ಒಳಗಿನ ನೋಟ

ಸ್ಯಾಕ್ಯೂಲ್‌

ಕ್ರಿಸ್ಟ

ಸಮತಲದ ನಾಳ

ಇನ್‌ಫೀರಿಯರ್‌ ಕನ್ಯಾಲ್‌

ರೌಂಡ್‌ ವಿಂಡೊ

ಸಮತಲ ಚಲನಾ ಶೋಧಕ

ಕರ್ಣಶಂಖ

ಮ್ಯಾಕ್ಯುಲ

ಯೂಟ್ರಿಕಲ್‌

ಕ್ರಿಸ್ಟ

ಕೇಳಿಸಿಕೊಳ್ಳುವ ಅಂಗ

ಕೋನಯುತ ಚಲನೆಯನ್ನು ಅಳೆಯುತ್ತದೆ

ಲಂಬ ಚಲನಾ ಶೋಧಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ